ಮಡಿಕೇರಿ: ಕುಸಿಯುವ ಭೀತಿಯಲ್ಲಿ ಬಹುಕೋಟಿ ವೆಚ್ಚದ ತಡೆಗೋಡೆ| ಮಡಿಕೇರಿ – ಮಂಗಳೂರು ಸಂಚಾರಕ್ಕೆ ಬದಲಿ ಮಾರ್ಗ!
ಸಮಗ್ರ ನ್ಯೂಸ್: ಬಹುಕೋಟಿ ವೆಚ್ಚದಲ್ಲಿ ವಿನೂತನ ರೀತಿ ನಿರ್ಮಿಸಿದ ಕೊಡಗು ಜಿಲ್ಲಾಧಿಕಾರಿ ಕಚೇರಿಯ ಬೃಹತ್ ತಡೆಗೋಡೆಯಲ್ಲಿ ಬಿರುಕು ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಮಡಿಕೇರಿ- ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ತಡೆಹಿಡಿಯಲಾಗಿದೆ. ಮಂಗಳೂರು ಸಂಚರಿಸುವ ಆ ರಸ್ತೆ ಬಂದ್ ಮಾಡಲಾಗಿದ್ದು, ಪರ್ಯಾಯ ಮಾರ್ಗದಲ್ಲಿ ಸಂಚರಿಸುವಂತೆ ಸೂಚಿಸಿದ್ದಾರೆ. ಮಡಿಕೇರಿ ಪೇಟೆಯ ತಿಮ್ಮಯ್ಯ ವೃತ್ತದಲ್ಲಿ ಬ್ಯಾರಿಕೇಡ್ ಅಳವಡಿಸಿ ಮುನ್ನೆಚ್ಚರಿಕೆ ಕ್ರಮವಾಗಿ ಮಂಗಳೂರು ರಸ್ತೆ ಬಂದ್ ಮಾಡಿದ್ದಾರೆ. ಮಡಿಕೇರಿಯಿಂದ ಮಂಗಳೂರಿಗೆ ತೆರಳುವವರು ಮತ್ತು ಮಡಿಕೇರಿಗೆ ಮಂಗಳೂರಿನಿಂದ ಬರುವವರು ಮೇಕೆರಿ ತಾಳತ್ತಮನೆ ಅಪ್ಪಂಗಳ ಮಾರ್ಗವಾಗಿ […]









