ರಾಜ್ಯ

ಕಲುಷಿತ ನೀರು ಸೇವನೆಯಿಂದ ಬಾಲಕಿ ಸಾವು; 20 ಮಂದಿ ಆಸ್ಪತ್ರೆ ದಾಖಲು

ಬಳ್ಳಾರಿ: ಜಿಲ್ಲೆಯ ಕಂಪ್ಲಿ ತಾಲೂಕಿನ ಗೊನಾಳ್ ಗ್ರಾಮದಲ್ಲಿ ಕಲುಷಿತ ನೀರು ಕುಡಿದು 11 ವರ್ಷದ ಬಾಲಕಿ ಮೃತಪಟ್ಟಿದ್ದು, 20 ಮಂದಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕುಲಷಿತ ನೀರು ಕುಡಿದ ನಂತರ ಕೆಲವು ಜನರು ಬೇಧಿ, ವಾಂತಿ ಮತ್ತಿತರ ಲಕ್ಷಣಗಳ ಬಗ್ಗೆ ದೂರು ನೀಡಿದ ಬಳಿಕ ಎರಡು ದಿನಗಳ ನಂತರ ತಡವಾಗಿ ಈ ಘಟನೆ ಬೆಳಕಿಗೆ ಬಂದಿದೆ. ಕಂಪ್ಲಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದ ಸುಕನ್ಯಾ ಭಾನುವಾರ ರಾತ್ರಿ ಸಾವನ್ನಪ್ಪಿದ್ದಾಳೆ. ಆರೋಗ್ಯಾಧಿಕಾರಿಗಳು ನೀರಿನ ಮಾದರಿಯನ್ನು ಸಂಗ್ರಹಿಸಿದ್ದು, ಪರೀಕ್ಷೆಗಾಗಿ ವಿವಿಧ ಪ್ರಯೋಗಾಲಯಗಳಿಗೆ ಕಳುಹಿಸಿದ್ದಾರೆ. ನರಿಹಾಲ ಹೊಳೆ […]

ಕಲುಷಿತ ನೀರು ಸೇವನೆಯಿಂದ ಬಾಲಕಿ ಸಾವು; 20 ಮಂದಿ ಆಸ್ಪತ್ರೆ ದಾಖಲು Read More »

ಟ್ರಕ್ ಮತ್ತು ಪೋಲಿಸ್ ವಾಹನ ಡಿಕ್ಕಿ; ಎರಡು ಪೋಲಿಸ್ ಕಾನ್ಸ್ ಟೇಬಲ್ ಸಾವು

ಉತ್ತರಪ್ರದೇಶ: ಟ್ರಕ್‌ ಮತ್ತು ಪೊಲೀಸ್‌ ವಾಹನ ಡಿಕ್ಕಿ ಹೊಡೆದು, ಇಬ್ಬರು ಪೊಲೀಸ್‌ ಕಾನ್ಸ್‌ಟೇಬಲ್‌ ಸಾವನ್ನಪ್ಪಿದ ಘಟನೆಯೊಂದು ಉತ್ತರಪ್ರದೇಶದ ಸುಲ್ತಾನ್‌ಪುರ ನಗರದ ಬಳಿ ನಡೆದಿದೆ. ಮೃತರನ್ನು ಪೊಲೀಸ್‌ ಕಾನ್ಸ್ ಟೇಬಲ್‌ಗಳಾದ ಮೊಯಿನ್‌ ಖಾನ್‌, ಅರುಣ್‌ ಸಿಂಗ್‌ ಎಂದು ಗುರುತಿಸಲಾಗಿದೆ. ಅಪಘಾತಕ್ಕೆ ವೇಗವಾಗಿ ವಾಹನ ಚಾಲನೆ ಕಾರಣವಾಗಿರುವ ಶಂಕೆ ವ್ಯಕ್ತವಾಗಿದೆ.

ಟ್ರಕ್ ಮತ್ತು ಪೋಲಿಸ್ ವಾಹನ ಡಿಕ್ಕಿ; ಎರಡು ಪೋಲಿಸ್ ಕಾನ್ಸ್ ಟೇಬಲ್ ಸಾವು Read More »

ಗ್ರಾಮ ಪಂಚಾಯತಿ ಸದಸ್ಯ ರೆಸಾರ್ಟ್ ನಲ್ಲಿ ಅನುಮಾನಾಸ್ಪದ ಸಾವು

ಮೈಸೂರು: ಗ್ರಾಮ ಪಂಚಾಯತಿ ಸದಸ್ಯ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ ಘಟನೆಯೊಂದು ಮೈಸೂರಿನ ಆರ್‌.ಟಿ.ನಗರದ ಸುಭಿಕ್ಷ ಗಾರ್ಡನ್ಸ್​ನಲ್ಲಿ ನಡೆದಿದೆ. ಸತೀಶ್ (34) ಮೃತ ಗ್ರಾಮ ಪಂಚಾಯತಿ ಸದಸ್ಯ. ಕೆ.ಆರ್.ನಗರ ತಾಲೂಕಿನ ಹಳಿಯೂರು ಗ್ರಾಮ ಪಂಚಾಯತಿ ಅಧ್ಯಕ್ಷರ ಚುನಾವಣೆ ಹಿನ್ನೆಲೆ 11ಕ್ಕೂ ಹೆಚ್ಚು ಸದಸ್ಯರು ರೆಸಾರ್ಟ್‌ಗೆ ಬಂದಿದ್ದರು. ಜವರೇಗೌಡ ಕೊಪ್ಪಲಿನ ನಿವಾಸಿಯಾಗಿರುವ ಸತೀಶ್​ ಕೂಡ ರೆಸಾರ್ಟ್​ಗೆ ಬಂದಿದ್ದರು. ಸತೀಶ್ ಕಾಂಗ್ರೆಸ್ ಪಕ್ಷ ಬೆಂಬಲದಿಂದ ಗೆದ್ದಿದ್ದರು. ಜೆಡಿಎಸ್‌ನಿಂದ ಗೆದ್ದಿದ್ದ ದಿನೇಶ್ ಅಧ್ಯಕ್ಷರಾಗಲು 11 ಸದಸ್ಯರನ್ನು ಪ್ರವಾಸ ಕಳುಹಿಸಿದ್ದರು. ಈ ಸದಸ್ಯರು ಕಳೆದ 20

ಗ್ರಾಮ ಪಂಚಾಯತಿ ಸದಸ್ಯ ರೆಸಾರ್ಟ್ ನಲ್ಲಿ ಅನುಮಾನಾಸ್ಪದ ಸಾವು Read More »

ಗಂಡ ಹೆಂಡತಿ ಜಗಳ ; ಗಂಡನ ಸಾವಿನಲ್ಲಿ ಅಂತ್ಯ

ನೆಲಮಂಗಲ: ರಸ್ತೆಯಲ್ಲಿ ಕೆಟ್ಟುನಿಂತ ಕ್ಯಾಂಟರ್ ವಾಹನಕ್ಕೆ ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ವೀವರ್ಸ್ ಕಾಲೋನಿಯ ಗೋಪಿ ವೆಂಕಟೇಶ್ವರ ರಸ್ತೆಯಲ್ಲಿ ನಡೆದಿದೆ. ತಡರಾತ್ರಿ ಪತಿ ಪತ್ನಿ ಜಗಳ ನಡುವೆ ಪತಿಯ ಸಾವಿನಲ್ಲಿ ಅಂತ್ಯಗೊಂಡಿದೆ. ರಾಯಚೂರು ಮೂಲದ 42 ವರ್ಷ ಸಿದ್ಧಯ್ಯ ಮೃತ ದುರ್ದೈವಿ. ಈತ ನೆಲಮಂಗಲದ ಕುವೆಂಪು ನಗರದಲ್ಲಿ ವಾಸ, ಚಾಲಕನಾಗಿ ಕೆಲಸ ನಿರ್ವಹಣೆ ಮಾಡಿಕೊಂಡಿದ್ದನು. ತಡರಾತ್ರಿ ಮದ್ಯಸೇವಿಸಿ ಪತ್ನಿಯೊಂದಿಗೆ ಜಗಳ ಮಾಡಿಕೊಂಡಿದ್ದ ಎಂದು ಹೇಳಲಾಗಿದೆ. ಇದರಿಂದ ಬೆಳಗಿನ ಜಾವ 4 ಗಂಟೆಗೆ ಆತ್ಮಹತ್ಯೆ ಮಾಡಿಕೊಂಡಿರುವುದು

ಗಂಡ ಹೆಂಡತಿ ಜಗಳ ; ಗಂಡನ ಸಾವಿನಲ್ಲಿ ಅಂತ್ಯ Read More »

ಜು.27ರಿಂದ ಮತ್ತೆ ರಾಜ್ಯಾದ್ಯಂತ ಮಳೆ‌ ಅಬ್ಬರ| ಹವಾಮಾನ ಇಲಾಖೆಯಿಂದ ಮುನ್ಸೂಚನೆ

ಸಮಗ್ರ ನ್ಯೂಸ್: ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯಾದ್ಯಂತ ನಾಳೆಯಿಂದ ಮತ್ತೆ ಮಳೆಯ ಅಬ್ಬರ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕದ ಕರಾವಳಿ, ಮಲೆನಾಡು, ಬೆಂಗಳುರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಹಾಸನ, ಕೋಲಾರ, ಮಂಡ್ಯ, ಮೈಸೂರು ಹಾಗೂ ರಾಮನಗರ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಭಾರೀ ಮಳೆಯಾಗಲಿದ್ದು, ನಾಳೆಯಿಂದ ರಾಜ್ಯಾದ್ಯಂತ ಮಳೆಯ ಅಬ್ಬರ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಕೆ ಮಾಹಿತಿ ನೀಡಿದೆ. ಕರಾವಳಿಯ ಎಲ್ಲ ಜಿಲ್ಲೆಗಳು, ಉತ್ತರ ಒಳನಾಡಿನ ಕಲಬುರ್ಗಿ, ಬೀದರ್,

ಜು.27ರಿಂದ ಮತ್ತೆ ರಾಜ್ಯಾದ್ಯಂತ ಮಳೆ‌ ಅಬ್ಬರ| ಹವಾಮಾನ ಇಲಾಖೆಯಿಂದ ಮುನ್ಸೂಚನೆ Read More »

ಕಸ್ತೂರಿ ರಂಗನ್ ವರದಿ ವಿರೋಧಿಸಿದ್ದ ಶಾಸಕರ ನಿಯೋಗಕ್ಕೆ ಯಶಸ್ಸು| ಹೊಸ ಕಮಿಟಿ ರಚನೆಗೆ ಸಮ್ಮತಿಸಿದ ಕೇಂದ್ರ

ಸಮಗ್ರ ನ್ಯೂಸ್: ಕಸ್ತೂರಿರಂಗನ್ ವರದಿ ವಿರೋಧಿಸಿ ಮಲೆನಾಡಿನ ಶಾಸಕರ ನಿಯೋಗಕ್ಕೆ ಕೊನೆಗೂ ಯಶಸ್ವಿಯಾಗಿದ್ದಾರೆ. ಮುಖ್ಯಮಂತ್ರಿ ನೇತೃತ್ವದ ಮಲೆನಾಡಿನ ಶಾಸಕರ ನಿಯೋಗವು ಕಸ್ತೂರಿರಂಗನ್ ವರದಿ ಮಾಡಿದ ಪ್ರಕ್ರಿಯೆಯಲ್ಲಿ ಲೋಪ ಇದೆ ಎಂದು ದೂರು ಸಲ್ಲಿಸಿತ್ತು. ಹೀಗಾಗಿ ಕ್ಯಾಬಿನೆಟ್ ಸಬ್ ಕಮಿಟಿ ರಚಿಸಲು ಮನವಿ ಸಲ್ಲಿಸಿತ್ತು. ಈಗ ಇದಕ್ಕೆ ಕೇಂದ್ರ ಅರಣ್ಯ ಸಚಿವ ಭೂಪೇಂದ್ರ ಯಾದವ್ ಒಪ್ಪಿಗೆ ನೀಡಿದ್ದಾರೆ. ಪಶ್ಚಿಮ ಘಟ್ಟದ ಪ್ರತಿ ಹಳ್ಳಿಗಳಿಗೂ ಭೇಟಿ ನೀಡಿ ಹೊಸ ವರದಿ ತಯಾರಿಸಲು ಹೊಸ ಕಮಿಟಿ ರಚನೆಗೆ ಸಮ್ಮತಿ ನೀಡಿದ್ದಾರೆ. ಈಗಾಗಲೇ

ಕಸ್ತೂರಿ ರಂಗನ್ ವರದಿ ವಿರೋಧಿಸಿದ್ದ ಶಾಸಕರ ನಿಯೋಗಕ್ಕೆ ಯಶಸ್ಸು| ಹೊಸ ಕಮಿಟಿ ರಚನೆಗೆ ಸಮ್ಮತಿಸಿದ ಕೇಂದ್ರ Read More »

20 ನಿಗಮ ಮಂಡಳಿಗಳಿಗೆ ರಾಜ್ಯ ಸರ್ಕಾರದಿಂದ ಅಧ್ಯಕ್ಷರ ನೇಮಕ

ಸಮಗ್ರ ನ್ಯೂಸ್: ಕಳೆದ ಎರಡು ವಾರಗಳ ಹಿಂದೆ, 47 ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿಯನ್ನು ರಾಜ್ಯ ಸರ್ಕಾರ ವಾಪಸ್ ಮಾಡಿತ್ತು, ಆ ವೇಳೆಯಲ್ಲಿ, ಶಾಸಕರು, ಮಾಜಿ ಶಾಸಕರು ಅಧ್ಯಕ್ಷರಿರುವ ನಿಗಮ ಮಂಡಳಿ ಬಿಟ್ಟು ಉಳಿದ 22 ನಿಗಮ ಮಂಡಳಿಗಳ ಅಧ್ಯಕ್ಷರ ನೇಮಕಾತಿಯನ್ನು ವಾಪಸ್ ಮಾಡಲಾಗಿತ್ತು. ಇದೀಗ 20 ವಿವಿಧ ನಿಗಮ ಮಂಡಳಿಗಳಿಗೆ ಅಧ್ಯಕ್ಷರ ನೇಮಕಾತಿ ಮಾಡಿ ಆದೇಶವನ್ನು ಹೊರಡಿಸಿದೆ. ಯಾರಿಗೆ ಯಾವ ನಿಗಮದ ಅಧ್ಯಕ್ಷರ ನೇಮಕಾತಿಯನ್ನು ನೀಡಲಾಗಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ. *ಗುತ್ತಿಗನೂರು ವಿ, ಗೌಡ-ಕರ್ನಾಟಕ

20 ನಿಗಮ ಮಂಡಳಿಗಳಿಗೆ ರಾಜ್ಯ ಸರ್ಕಾರದಿಂದ ಅಧ್ಯಕ್ಷರ ನೇಮಕ Read More »

ಪ್ರಶ್ನೆ ಪತ್ರಿಕೆ ಸ್ವರೂಪ ಬದಲಿಸಿದ ಎಸ್ಎಸ್ಎಲ್ಸಿ ಬೋರ್ಡ್| ಕಠಿಣವಾಗಲಿದೆ ಎಸ್ಎಸ್ಎಲ್ ಸಿ ಪರೀಕ್ಷೆ

ಸಮಗ್ರ‌ ನ್ಯೂಸ್: 2022-23ನೇ ಸಾಲಿನ ಶೈಕ್ಷಣಿಕ ವರ್ಷದ ಎಸ್ ಎಸ್ ಎಲ್ ಸಿ ಪರೀಕ್ಷಾ ಪ್ರಶ್ನೆ ಪತ್ರಿಕೆ ಸ್ವರೂಪವನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದ್ದು, ಕೊರೋನಾ ವೇಳೆ ಇದ್ದ ಸರಳತೆಯ ಪ್ರಮಾಣ ಕೈಬಿಟ್ಟು, ಕಠಿಣ ಪ್ರಮಾಣದ ಪ್ರಶ್ನೆಗಳನ್ನು ಹೆಚ್ಚಿಸಿದೆ. ಈ ಹಿನ್ನಲೆಯಲ್ಲಿ ಈ ಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆ ಕಠಿಣವಾಗಿರಲಿದೆ. ಈ ಸಂಬಂಧ ಪ್ರಶ್ನೆ ಪತ್ರಿಕೆ ಸ್ವರೂಪ ಬದಲಿಸಿದ ಮಾಹಿತಿ ಬಿಡುಗಡೆ ಮಾಡಿದೆ. ಅದರಂತೆ ಈ ಬಾರಿ ಸುಲಭ ಪ್ರಶ್ನೆ ಶೇ.30,

ಪ್ರಶ್ನೆ ಪತ್ರಿಕೆ ಸ್ವರೂಪ ಬದಲಿಸಿದ ಎಸ್ಎಸ್ಎಲ್ಸಿ ಬೋರ್ಡ್| ಕಠಿಣವಾಗಲಿದೆ ಎಸ್ಎಸ್ಎಲ್ ಸಿ ಪರೀಕ್ಷೆ Read More »

ಜು.30ಕ್ಕೆ ಸಿಇಟಿ ಫಲಿತಾಂಶ ಪ್ರಕಟ

ಸಮಗ್ರ ನ್ಯೂಸ್: ಜೂನ್ ಮಧ್ಯಭಾಗದಲ್ಲಿ ನಡೆಸಲಾಗಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶವನ್ನು ಇದೇ 30ರಂದು ಪ್ರಕಟಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥ ನಾರಾಯಣ ಹೇಳಿದ್ದಾರೆ. ಸಿಇಟಿ ಪರೀಕ್ಷೆ ನಡೆಸುವಾಗ ಸಿಬಿಎಸ್ ಸಿ ಮತ್ತು ಐಸಿಎಸ್‌ಇ ಪಠ್ಯಕ್ರಮದಲ್ಲಿ 12ನೇ ತರಗತಿಯಲ್ಲಿ ಓದುತ್ತಿದ್ದ ವಿದ್ಯಾರ್ಥಿಗಳಿಗೂ ಅವಕಾಶ ಕೊಡಲಾಗಿತ್ತು. ಈಗ ಅವರ ಫಲಿತಾಂಶ ಬಂದಿದ್ದು, ಸಿಇಟಿ ಬರೆದಿದ್ದ ಈ ವಿದ್ಯಾರ್ಥಿಗಳು, ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ವೆಬ್ ಸೈಟ್ ನಲ್ಲಿ ತಮ್ಮ ಅಂಕಗಳನ್ನು ನಾಳೆ (ಜು.26) ಸಂಜೆಯೊಳಗೆ ಅಪ್ಲೋಡ್

ಜು.30ಕ್ಕೆ ಸಿಇಟಿ ಫಲಿತಾಂಶ ಪ್ರಕಟ Read More »

ಬೆಂಗಳೂರು: ನಡುರಸ್ತೆಯಲ್ಲೇ ಹೊತ್ತಿ‌ಉರಿದ ಹೊಯ್ಸಳ ವಾಹನ

ಸಮಗ್ರ ನ್ಯೂಸ್: ನಡುರಸ್ತೆಯಲ್ಲೇ ಪೊಲೀಸರ ಹೊಯ್ಸಳ ವಾಹನ ಬೆಂಕಿ ಹೊತ್ತಿಕೊಂಡು ಧಗಧಗಿಸಿ ಉರಿದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಸಿಟಿ ಮಾರುಕಟ್ಟೆಯ ಬಳಿಯಲ್ಲಿನ ವೃತ್ತದಲ್ಲಿ ಇಂದು ಸಿಟಿ ಮಾರುಕಟ್ಟೆ ಪೊಲೀಸ್ ಠಾಣೆಯ ಹೊಯ್ಸಳ-79 ವಾಹನದಲ್ಲಿ ಹೊಗೆ ಕಾಣಿಸಿಕೊಂಡಿದೆ. ಈ ವೇಳೆ ಕೂಡಲೇ ಅದರಲ್ಲಿದ್ದ ಪೊಲೀಸರು ಕೆಳಗೆ ಇಳಿಯುತ್ತಿದ್ದಂತೇ ವಾಹನ ಹೊತ್ತಿ ಉರಿದಿದೆ. ಈ ಘಟನೆಯನ್ನು ಕಂಡಂತ ಸ್ಥಳೀಯರು, ಕೂಡಲೇ ಹೊಯ್ಸಳ ವಾಹನಕ್ಕೆ ಹತ್ತಿಕೊಂಡಿದ್ದ ಬೆಂಕಿಯನ್ನು ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಬೆಂಕಿ ಹೊತ್ತಿಕೊಂಡ ಪರಿಣಾಮ, ಹೊಯ್ಸಳ-79 ವಾಹನ ಸುಟ್ಟು

ಬೆಂಗಳೂರು: ನಡುರಸ್ತೆಯಲ್ಲೇ ಹೊತ್ತಿ‌ಉರಿದ ಹೊಯ್ಸಳ ವಾಹನ Read More »