ರಾಜ್ಯ

ದಕ್ಷಿಣ ಕನ್ನಡ: ಹವಾಮಾನ ವರದಿ ಹಾಗೂ ಮುನ್ಸೂಚನೆ

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹವಾಮಾನ ಇಲಾಖೆಯು ಈ ಹಿಂದೆ ಘೋಷಿಸಿದ್ದ ಯೆಲ್ಲೋ ಅಲರ್ಟ್ ಶುಕ್ರವಾರ ಆರೆಂಜ್‌ಗೆ ಬದಲಾಗಿದೆ. ಕರಾವಳಿ, ಮಲೆನಾಡು ಸೇರಿದಂತೆ ರಾಜ್ಯಾದ್ಯಂತ ಇನ್ನೂ ಎರಡು ದಿನ ಮಳೆಯ ಅಬ್ಬರ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸಮುದ್ರದಲ್ಲಿ ಗಾಳಿ ಬಲವಾಗಿ ಇರುವುದರಿಂದ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ನೀಡಲಾಗಿರುವ ಎಚ್ಚರಿಕೆಯನ್ನು ಮುಂದುವರಿಸಲಾಗಿದೆ. ಗುರುವಾರ ಮಳೆ ಕಡಿಮೆಯಾಗಿದ್ದರೂ ಬಲವಾಗಿ ಬೀಸುವ ಗಾಳಿಯಿಂದಾಗಿ ಸಮುದ್ರದ ಪ್ರಕ್ಷುಬ್ಧತೆ ಮುಂದುವರಿಸಿದೆ.  ದ.ಕ.ಜಿಲ್ಲೆಯಲ್ಲಿ ಗುರುವಾರ ಸಾಧಾರಣ ಮಳೆಯೊಂದಿಗೆ ಬಿಸಿಲ ವಾತಾವರಣವಿತ್ತು. […]

ದಕ್ಷಿಣ ಕನ್ನಡ: ಹವಾಮಾನ ವರದಿ ಹಾಗೂ ಮುನ್ಸೂಚನೆ Read More »

ದಂಪತಿಗಳ ಜಗಳ ಬಿಡಿಸಲು ಮಧ್ಯೆ ಹೋದ ವ್ಯಕ್ತಿಯ ಭೀಕರ ಹತ್ಯೆ

ವಿಜಯಪುರ: ಗಂಡ ಹೆಂಡತಿಯ ಜಗಳ ಬಿಡಿಸಲು ಮಧ್ಯ ಬಂದವನೇ ಭೀಕರವಾಗಿ ಕೊಲೆಯಾದ ಘಟನೆಯೊಂದು ಜಿಲ್ಲೆಯ ಗುರುಪಾದೇಶ್ವರ ನಗರದಲ್ಲಿ ನಡೆದಿದೆ. ಪರುಶರಾಮ ಅಬಟೇರಿ (30) ಮೃತಪಟ್ಟ ದುರ್ದೈವಿ. ಮೂಲತಃ ಬಾಗಲಕೋಟೆ ಜಿಲ್ಲೆಯ ಅಚನೂರು ಗ್ರಾಮದ ನಿವಾಸಿಯಾಗಿದ್ದ ಪರಶುರಾಮ ವಿಜಯಪುರದ ಖಾಸಗಿ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದರು. ಕಳೆದ 15 ದಿನಗಳ ಹಿಂದೆ ಗುರುಪಾದೇಶ್ವರ ನಗರದ ಕೆಇಬಿ ನಿವೃತ್ತ ನೌಕರ ಈಜೇರಿ ಎಂಬವರ ಮನೆಯಲ್ಲಿ ಪತ್ನಿಯೊಂದಿಗೆ ಬಾಡಿಗೆಗೆ ವಾಸವಾಗಿದ್ದ, ಹಬ್ಬಕ್ಕಾಗಿ ಪತ್ನಿ ತವರಿಗೆ ಹೋಗಿದ್ದರು. ನಿನ್ನೆ ಸಂಜೆ 4:30ರ ವೇಳೆಗೆ ಮನೆಯ ಮಾಲೀಕನ

ದಂಪತಿಗಳ ಜಗಳ ಬಿಡಿಸಲು ಮಧ್ಯೆ ಹೋದ ವ್ಯಕ್ತಿಯ ಭೀಕರ ಹತ್ಯೆ Read More »

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಆರಂಭ

ಬೆಂಗಳೂರು: 2022ನೇ ಸಾಲಿನ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯು ಆ.12ರಿಂದ 25ರ ವರೆಗೆ ರಾಜ್ಯಾದ್ಯಂತ 307 ಕೇಂದ್ರಗಳಲ್ಲಿ ನಡೆಯಲಿದೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ. ಪ್ರಸಕ್ತ ಸಾಲಿನ ಏಪ್ರಿಲ್‌/ಮೇ ತಿಂಗಳಿನಲ್ಲಿ ನಡೆದ ಮುಖ್ಯ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುವ ಮತ್ತು ಪುನರಾವರ್ತಿತ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಯಲಿದೆ. ಈಗಾಗಲೇ 1,85,449 ಅಭ್ಯರ್ಥಿಗಳು ಪರೀಕ್ಷೆ ನೋಂದಣಿ ಮಾಡಿಕೊಂಡಿದ್ದು, ಪ್ರವೇಶ ಪತ್ರಗಳನ್ನು ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ. ಶುಕ್ರವಾರ ಮೊದಲ ದಿನ ಪ್ರಥಮ ಭಾಷೆ ಕನ್ನಡ ಮತ್ತು ಅರೇಬಿಕ್‌ ಪರೀಕ್ಷೆ ನಡೆಯಲಿವೆ ಎಂದು ಪಿಯು ಇಲಾಖೆ

ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಆರಂಭ Read More »

ಬಿಜೆಪಿ ನಂಬಿದ ಪರೇಶ್ ಮೇಸ್ತಾ ಕುಟುಂಬಕ್ಕೆ ಶಾಕ್| ಕೊಲೆ ಪ್ರಮುಖ ಆರೋಪಿಗೆ ಸಿಕ್ತು ವಕ್ಫ್ ಬೋರ್ಡ್ ಉಪಾಧ್ಯಕ್ಷ ಸ್ಥಾನ!

ಸಮಗ್ರ ನ್ಯೂಸ್: ಉತ್ತರ ಕನ್ನಡ ಜಿಲ್ಲೆ ಕರಾವಳಿ ಭಾಗದಲ್ಲಿ ಪರೇಶ್ ಮೇಸ್ತಾ ಕೊಲೆ ಪ್ರಕರಣ ಸಾಕಷ್ಟು ಸದ್ದು ಮಾಡಿತ್ತು. ಕೊಲೆ ಹಿಂದೆ ಅನ್ಯ ಕೋಮಿನ ಕೈವಾಡವಿದೆ ಅಂತಾ ಅನುಮಾನಿಸಲಾಗಿತ್ತು. ಹೀಗಾಗಿ ಯುವಕನ ಸಾವಿಗೆ ನ್ಯಾಯ ಸಿಗಬೇಕು ಮತ್ತು ಕೊಲೆ ಮಾಡಿದವರಿಗೆ ಸೂಕ್ತ ರೀತಿಯಲ್ಲಿ ಕ್ರಮ ಆಗಬೇಕು ಅಂತಾ ಅಂದಿನ ಸರ್ಕಾರದ ವಿರುದ್ದ ಜಿಲ್ಲೆಯಲ್ಲಿ ಬೆಂಕಿ ಜ್ವಾಲೆಯೇ ಹತ್ತಿತ್ತು. ಆಗಿನ ಸಿದ್ದರಾಮಯ್ಯ ಸರ್ಕಾರ ಈ ಪ್ರಕರಣದ ತನಿಖೆಯನ್ನ ಸಿಬಿಐ ಗೆ ಒಪ್ಪಿಸಿತ್ತು. ಆದರೆ ಅಂದು ಒಂದನೇ ಆರೋಪಿಯಾಗಿದ್ದ ಆಜಾದಿ

ಬಿಜೆಪಿ ನಂಬಿದ ಪರೇಶ್ ಮೇಸ್ತಾ ಕುಟುಂಬಕ್ಕೆ ಶಾಕ್| ಕೊಲೆ ಪ್ರಮುಖ ಆರೋಪಿಗೆ ಸಿಕ್ತು ವಕ್ಫ್ ಬೋರ್ಡ್ ಉಪಾಧ್ಯಕ್ಷ ಸ್ಥಾನ! Read More »

ಹುಡುಗಿಯರು ಲೈಂಗಿಕ ಸಂಪರ್ಕ ಬಯಸಿದರೆ ಎಚ್ಚರದಿಂದಿರಿ| ನಟ ಮುಖೇಶ್ ಹೇಳಿಕೆಗೆ ತೀವ್ರ ಪ್ರತಿಕ್ರಿಯೆ

ಸಮಗ್ರ ನ್ಯೂಸ್: ಇದು ಸೋಷಿಯಲ್ ಮೀಡಿಯಾ ಯುಗ. ಇಲ್ಲಿ ಯಾರು ಯಾವಾಗ ಬೇಕಾದ್ರು ಖ್ಯಾತಿ ಘಳಿಸಬಹುದು, ಯಾವಾಗ ಬೇಕಾದ್ರು ಅಪಖ್ಯಾತಿ ಘಳಿಸ ಬಹುದು. ಸಾಮಾಜಿಕ ಜಾಲಾ ತಾಣದ ಮೂಲಕ ಹುಡುಗಿಯರ ವಿಚಾರದಲ್ಲಿ ಹುಡುಗರು ಎಚ್ಚರಿಕೆಯಿಂದ ಇರಬೇಕು ಎಂದು ಶಕ್ತಿಮಾನ್ ಖ್ಯಾತಿ ಮುಖೇಶ್ ಎಚ್ಚರಿಕೆ ನೀಡಿದ್ದಾರೆ. ಇನ್​ಸ್ಟಾಗ್ರಾಂ, ಫೇಸ್​ಬುಕ್​ನಲ್ಲಿ ಹಲವು ಖಾತೆಗಳು ಹುಟ್ಟಿಕೊಂಡಿವೆ. ಈ ಖಾತೆಗಳಲ್ಲಿ ಹುಡುಗಿಯರ ಫೋಟೋಗಳನ್ನು ಹಾಕಲಾಗಿರುತ್ತದೆ. ಅವರ ಬೆತ್ತಲೆ ದೇಹ ನೋಡಬೇಕು ಎಂದರೆ ಹಣ ಕಳುಹಿಸುವಂತೆ ಬರೆಯಲಾಗಿರುತ್ತದೆ. ಅಂತಹ ಜನರನ್ನು ನಂಬಲೇಬಾರದು ಎಂಬುದು ಮುಕೇಶ್

ಹುಡುಗಿಯರು ಲೈಂಗಿಕ ಸಂಪರ್ಕ ಬಯಸಿದರೆ ಎಚ್ಚರದಿಂದಿರಿ| ನಟ ಮುಖೇಶ್ ಹೇಳಿಕೆಗೆ ತೀವ್ರ ಪ್ರತಿಕ್ರಿಯೆ Read More »

ಮಡಿಕೇರಿ-ಮಂಗಳೂರು ಹೆದ್ದಾರಿ ರಾತ್ರಿ ಸಂಚಾರ ನಿರ್ಬಂಧ ತೆರವು

ಸಮಗ್ರ ನ್ಯೂಸ್: ಮಂಗಳೂರು- ಮಡಿಕೇರಿ ರಸ್ತೆಯಲ್ಲಿ ಮದೆನಾಡು ಸಮೀಪ ಬಿರುಕು ಬಿಟ್ಟಿದ್ದ ಗುಡ್ಡದಿಂದಾಗಿ ರಾತ್ರಿ ಸಂಚಾರ ನಿಷೇಧಿಸಿದ್ದ ಆದೇಶವನ್ನು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ವಾಪಸ್ ಪಡೆದಿದ್ದಾರೆ. ಸದ್ಯ, ಬಿರುಕು ಬಿಟ್ಟಿದ್ದ ಗುಡ್ಡದಿಂದ ಕುಸಿದಿದ್ದ ಮಣ್ಣನ್ನು ತೆರವುಗೊಳಿಸುವ ಕಾರ್ಯ ಶೇ 75ರಷ್ಟು ಪೂರ್ಣಗೊಂಡಿದೆ. ಉಳಿಕೆ ಮಣ್ಣಿನ ತೆರವು ಕಾರ್ಯವು ಬಿರುಸಿನಿಂದ ನಡೆಯುತ್ತಿದೆ. ಹಾಗಾಗಿ, ಸಂಚಾರಕ್ಕೆ ಅವಕಾಶ ನೀಡಲಾಗಿದೆ ಎಂದು ಅವರು ಆದೇಶದಲ್ಲಿ ತಿಳಿಸಿದ್ದಾರೆ.

ಮಡಿಕೇರಿ-ಮಂಗಳೂರು ಹೆದ್ದಾರಿ ರಾತ್ರಿ ಸಂಚಾರ ನಿರ್ಬಂಧ ತೆರವು Read More »

ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ಇನ್ನಿಲ್ಲ

ಸಮಗ್ರ ನ್ಯೂಸ್: ಕನ್ನಡದ ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣನವರು ಹೃದಯಾಘಾತದಿಂದಾಗಿ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಗುರುವಾರ ರಾತ್ರಿ ನಿಧನ ಹೊಂದಿದ್ದಾರೆ. ಸುಬ್ಬಣ್ಣ ಅವರು ಶಿವಮೊಗ್ಗ ಜಿಲ್ಲೆಯ ನಗರ ಎಂಬ ಸಣ್ಣ ಊರಿನಲ್ಲಿ 1938ರ ಡಿ.14ರಂದು ಜನಿಸಿದರು.ಅವರಿಗೆ ಈಗ 83 ವಯಸ್ಸಾಗಿದ್ದು, ಹೃದಯಾಘಾತದಿಂದ ಮೃತಪಟ್ಟಿದ್ದಾರೆ. 1979ರಲ್ಲಿ ಕಾಡುಕುದುರೆ ಚಲನ ಚಿತ್ರದಲ್ಲಿ ಅವರು ಹಾಡಿದ ಕಾಡು ಕುದುರೆ ಓಡಿ ಬಂದಿತ್ತಾ ಹಾಡಿಗೆ ಅತ್ಯುತ್ತಮ ಹಿನ್ನೆಲೆ ಗಾಯನಕ್ಕಾಗಿ ‘ರಜತ ಕಮಲ ರಾಷ್ಟ್ರ ಪ್ರಶಸ್ತಿ’ ಪಡೆದಿದ್ದರು. 1985ರಲ್ಲಿ ರಾಜ್ಯೋತ್ಸವ ಪುರಸ್ಕಾರ,

ಖ್ಯಾತ ಸುಗಮ ಸಂಗೀತ ಗಾಯಕ ಶಿವಮೊಗ್ಗ ಸುಬ್ಬಣ್ಣ ಇನ್ನಿಲ್ಲ Read More »

ಷೇರುಪೇಟೆಯಲ್ಲಿ ಗುಮ್ಮಿದ ಗೂಳಿ| 59 ಸಾವಿರಕ್ಕೆ ಏರಿದ ಸೆನ್ಸೆಕ್ಸ್

ಸಮಗ್ರ ನ್ಯೂಸ್: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೆನ್ಸೆಕ್ಸ್‌ ಗುರುವಾರ 515 ಅಂಶ ಏರಿಕೆ ಕಂಡು ಮತ್ತೆ 59 ಸಾವಿರದ ಮಟ್ಟವನ್ನು ದಾಟಿತು. ವಿದೇಶಿ ಬಂಡವಾಳ ಒಳಹರಿವು ಮುಂದುವರಿದಿದೆ. ಇದರ ಜೊತೆಗೆ ಹೂಡಿಕೆದಾರರು ಐ.ಟಿ, ಬ್ಯಾಂಕಿಂಗ್‌ ಮತ್ತು ಹಣಕಾಸು ವಲಯದ ಷೇರುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿರುವುದು ಸೂಚ್ಯಂಕದ ಏರಿಕೆಗೆ ಕಾರಣವಾಯಿತು. ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ ನಿಫ್ಟಿ 124 ಅಂಶ ಹೆಚ್ಚಾಗಿ 17,659 ಅಂಶಗಳಿಗೆ ತಲುಪಿತು. ಸೆನ್ಸೆಕ್ಸ್‌ನಲ್ಲಿ ಎಕ್ಸಿಸ್‌ ಬ್ಯಾಂಕ್‌ ಷೇರು ಶೇ 2.75ರಷ್ಟು ಗರಿಷ್ಠ ಏರಿಕೆ ಕಂಡಿತು.

ಷೇರುಪೇಟೆಯಲ್ಲಿ ಗುಮ್ಮಿದ ಗೂಳಿ| 59 ಸಾವಿರಕ್ಕೆ ಏರಿದ ಸೆನ್ಸೆಕ್ಸ್ Read More »

ಬಿಗ್ ಭಾಸ್ ಒಟಿಟಿ| ಆರ್ಯವರ್ಧನ್ ಗುರೂಜಿಗೆ ಪ್ರಪೋಸ್ ಮಾಡಿದ ಪುಟ್ಟಗೌರಿ ಸಾನ್ಯಾ

ಸಮಗ್ರ ನ್ಯೂಸ್: ತಮ್ಮ ಹೊಟ್ಟೆ ವಿಚಾರವಾಗಿ ಟೀಕೆಗೆ ಒಳಗಾದ ಆರ್ಯವರ್ಧನ್ ಗುರೂಜಿಗೆ ಬಿಗ್​ಬಾಸ್ ಮನೆಯಲ್ಲಿ ಲವ್ ಪ್ರಪೋಸಲ್ ಬಂದಿದೆ. ಯಾರಿಂದ ಗೊತ್ತಾ? 22 ವರ್ಷದ ಸಾನ್ಯಾ ಅಯ್ಯರ್​ನಿಂದ. ಹೌದು. ಕಿರುತೆರೆ ನಟಿ ಚೆಲುವೆ ಸಾನ್ಯಾ ಗುರೂಜಿಗೆ ಪ್ರೇಮ ನಿವೇದನೆ ಮಾಡಿದ್ದಾರೆ. ಸಂಖ್ಯಾಶಾಸ್ತ್ರದಲ್ಲಿ ಪರಿಣಿತಿ ಹೊಂದಿರುವ ಆರ್ಯವರ್ಧನ್ ಗುರೂಜಿ ಈ ಬಾರಿ ಓಟಿಟಿ ಬಿಗ್​ಬಾಸ್​ ಮನೆಯನ್ನು ಪ್ರವೇಶಿಸಿದ್ದು, ಇಲ್ಲಿ ಇವರ ನಂಬರ್ ಗೇಮ್​ ವರ್ಕ್ ಆಗುತ್ತಾ ನೋಡಬೇಕಿದೆ. ಪುಟ್ಟಗೌರಿ ಮದುವೆ ಧಾರಾವಾಹಿ ಖ್ಯಾತಿಯ ನಟಿ ಸಾನ್ಯಾ ಅಯ್ಯರ್​ ಸಹ

ಬಿಗ್ ಭಾಸ್ ಒಟಿಟಿ| ಆರ್ಯವರ್ಧನ್ ಗುರೂಜಿಗೆ ಪ್ರಪೋಸ್ ಮಾಡಿದ ಪುಟ್ಟಗೌರಿ ಸಾನ್ಯಾ Read More »

ಎಸಿಬಿ ಇನ್ಮುಂದೆ ಲೋಕಾಯುಕ್ತ ವ್ಯಾಪ್ತಿಗೆ| ಹೈಕೋರ್ಟ್ ನಿಂದ ಮಹತ್ವದ ಆದೇಶ

ಸಮಗ್ರ ನ್ಯೂಸ್: ಎಸಿಬಿ ರಚನೆ ಸರ್ಕಾರದ ಆದೇಶ ರದ್ದುಪಡಿಸಿರುವ ಹೈಕೋರ್ಟ್, ಎಸಿಬಿಯನ್ನು ಲೋಕಾಯುಕ್ತ ವ್ಯಾಪ್ತಿಗೆ ನೀಡಿ ಮಹತ್ವದ ಆದೇಶ ಹೊರಡಿಸಿದೆ. ಎಸಿಬಿ ರಚನೆ ಆದೇಶಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿದ ಹೈಕೋರ್ಟ್ ನ ನ್ಯಾ.ಬಿ.ವೀರಪ್ಪ, ನ್ಯಾ.ಕೆ.ಎಸ್. ಹೇಮಲೇಖಾ ಅವರಿದ್ದ ಪೀಠ, ಎಸಿಬಿಗೆ ಪೊಲೀಸ್ ಠಾಣೆ ಸ್ಥಾನಮಾನವನ್ನು ರದ್ದುಪಡಿಸಿ ಎಲ್ಲಾ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಇದೇ ವೇಳೆ ಕರ್ನಾಟಕ ಲೋಕಾಯುಕ್ತ ಕಾಯ್ದೆ ತಿದ್ದುಪಡಿ ಅಗತ್ಯವಿದೆ. ಮೂರು ವರ್ಷಗಳ ಅವಧಿಗೆ ಅಧಿಕಾರಿಗಳ ನೇಮಕ ಮಾಡಬೇಕು. ಲೋಕಾಯುಕ್ತರ ನೇಮಕದ

ಎಸಿಬಿ ಇನ್ಮುಂದೆ ಲೋಕಾಯುಕ್ತ ವ್ಯಾಪ್ತಿಗೆ| ಹೈಕೋರ್ಟ್ ನಿಂದ ಮಹತ್ವದ ಆದೇಶ Read More »