ರಾಜ್ಯ

ಕರ್ನಾಟಕದಲ್ಲಿ ಮತ್ತೊಂದು ಹೊಸ ಜಿಲ್ಲೆಯ ಉದಯ| ಶೀಘ್ರದಲ್ಲೇ ಜಿಲ್ಲಾಕೇಂದ್ರವಾಗಿ ದೇವನಹಳ್ಳಿ

ಸಮಗ್ರ ನ್ಯೂಸ್: ಇನ್ನೊಂದು ತಿಂಗಳೊಳಗೆ ದೇವನಹಳ್ಳಿಯನ್ನು ಜಿಲ್ಲಾ ಕೇಂದ್ರವಾಗಿ ಮಾಡಿ ಆದೇಶ ಹೊರಡಿಸಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ. ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಜಿಲ್ಲೆಯ ದೇವನಹಳ್ಳಿಯು ನಾಡಪ್ರಭು ಕೆಂಪೇಗೌಡರು ಆಡಳಿತ ನಡೆಸಿದ ಪ್ರದೇಶವಾಗಿದೆ. ಕೇಂಪೇಗೌಡರ ಆಡಳಿತದ ನಾಡಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯುತ್ತಿರುವುದು ಹೆಮ್ಮೆ ತಂದಿದ್ದು, ಇಂತಹ ದೇವನಹಳ್ಳಿ ಪ್ರದೇಶವನ್ನು ಜಿಲ್ಲಾ ಕೇಂದ್ರವಾಗಿಸಲು ಒಂದು ತಿಂಗಳೊಳಗೆ ಆದೇಶ ಹೊರಡಿಸಲಾಗುವುದು ಎಂದು ಅವರು ಹೇಳಿದರು. ಸ್ವಾತಂತ್ರ್ಯದ […]

ಕರ್ನಾಟಕದಲ್ಲಿ ಮತ್ತೊಂದು ಹೊಸ ಜಿಲ್ಲೆಯ ಉದಯ| ಶೀಘ್ರದಲ್ಲೇ ಜಿಲ್ಲಾಕೇಂದ್ರವಾಗಿ ದೇವನಹಳ್ಳಿ Read More »

ಹೊತ್ತಿಕೊಂಡ ಪ್ಲೆಕ್ಸ್ ತೆರವು ವಿವಾದದ ಕಿಚ್ಚು| ಶಿವಮೊಗ್ಗ ಭದ್ರಾವತಿ ನಗರ ವ್ಯಾಪ್ತಿಯ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ

ಸಮಗ್ರ ನ್ಯೂಸ್: ಸಾವರ್ಕರ್ ಫ್ಲೆಕ್ಸ್ ತೆರವು ವಿಚಾರಕ್ಕೆ ಘರ್ಷಣೆ ಉಂಟಾದ ಹಿನ್ನಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಶಿವಮೊಗ್ಗ, ಭದ್ರಾವತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. 144 ಸೆಕ್ಷನ್ ಜಾರಿಗೊಳಿಸಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರ ಹಾಗೂ ಭದ್ರಾವತಿ ನಗರ ವ್ಯಾಪ್ತಿಯ ಎಲ್ಲಾ ಶಾಲಾ, ಕಾಲೇಜುಗಳಿಗೆ ಆ.16ರಂದು ಜಿಲ್ಲಾಧಿಕಾರಿ ಡಾ. ಸೆಲ್ವಮಣಿ ರಜೆ ಘೋಷಿಸಿದ್ದಾರೆ ಶಿವಮೊಗ್ಗದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿರುವ ಜೊತೆಗೆ ಶಿವಮೊಗ್ಗ ‌ಮತ್ತು ಭದ್ರಾವತಿ ನಗರಗಳ ಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿದ್ದಾರೆ.

ಹೊತ್ತಿಕೊಂಡ ಪ್ಲೆಕ್ಸ್ ತೆರವು ವಿವಾದದ ಕಿಚ್ಚು| ಶಿವಮೊಗ್ಗ ಭದ್ರಾವತಿ ನಗರ ವ್ಯಾಪ್ತಿಯ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ Read More »

ಅಮೃತ ಮಹೋತ್ಸವದ ಸಂದರ್ಭದಲ್ಲಿ 9 ಕೇಂದ್ರ ಕಾರಾಗೃಹ ದಿಂದ 81 ಕೈದಿಗಳ ಬಿಡುಗಡೆ

ಬೆಂಗಳೂರು: ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಹಿನ್ನೆಲೆ ರಾಜ್ಯದ 9 ಕೇಂದ್ರ ಕಾರಾಗೃಹಗಳಲ್ಲಿ ಅಲ್ಪಾವಧಿ ಶಿಕ್ಷಾ ಬಂಧಿಗಳಿಗಾಗಿರುವ ಮೂವರು ಮಹಿಳೆಯರು ಸೇರಿ 81 ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. ಸೋಮವಾರ ಜೈಲುಗಳಲ್ಲಿ ನಡೆಯುವ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಬಳಿಕ ಕೈದಿಗಳಿಗೆ ಬಿಡುಗಡೆ ಪ್ರಮಾಣ ಪತ್ರ ನೀಡಿ ಕಳುಹಿಸಲಾಗುತ್ತದೆ ಎಂದು ಕಾರಾಗೃಹ ಇಲಾಖೆ ಮಾಹಿತಿ ನೀಡಿದೆ. ಬೆಂಗಳೂರು 14, ಬೆಳಗಾವಿ 3, ಬಳ್ಳಾರಿ 8, ವಿಜಯಪುರ ಇಬ್ಬರು ಮಹಿಳೆಯರು ಸೇರಿ 10, ಧಾರವಾಡ 6, ಕಲಬುರಗಿ 10, ಮೈಸೂರು 20, ಶಿವಮೊಗ್ಗ

ಅಮೃತ ಮಹೋತ್ಸವದ ಸಂದರ್ಭದಲ್ಲಿ 9 ಕೇಂದ್ರ ಕಾರಾಗೃಹ ದಿಂದ 81 ಕೈದಿಗಳ ಬಿಡುಗಡೆ Read More »

ಲಾರಿ ಮತ್ತು ಬೈಕ್ ಅಪಘಾತ; ಬೈಕ್ ಸವಾರ ಸಾವು

ಹುಬ್ಬಳ್ಳಿ: ರಸ್ತೆಬದಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ ಪುತ್ರ ಸಾವನ್ನಪ್ಪಿದ ಘಟನೆಯೊಂದು ಹುಬ್ಬಳ್ಳಿಯ ತಾರಿಹಾಳ ಬೈಪಾಸ್ ಮೈಕ್ರೋಫಿನಿಶ್ ಫ್ಯಾಕ್ಟರಿ ಬಳಿ ತಡರಾತ್ರಿ ನಡೆದಿದೆ. ಹುಡಾ ಮಾಜಿ ಅಧ್ಯಕ್ಷ ನಾಗೇಶ ಕಲಬುರ್ಗಿ ಅವರ ಪುತ್ರ ತಿಲಕ ಕಲಬುರ್ಗಿ (22) ಮೃತ ದುರ್ದೈವಿ. ನುಗ್ಗಿಕೇರಿ ಹನುಮಾನ್ ದೇವಸ್ಥಾನಕ್ಕೆ ಹೋಗಿ ವಾಪಸ್ ಬರುವ ವೇಳೆ ಈ ಅವಘಡ ಸಂಭವಿಸಿದೆ. ತಿಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಆತನ ಸ್ನೇಹಿತನಿಗೆ ಗಂಭೀರ ಗಾಯಗಳಾಗಿವೆ. ಸ್ಥಳಕ್ಕೆ ಹುಬ್ಬಳ್ಳಿ

ಲಾರಿ ಮತ್ತು ಬೈಕ್ ಅಪಘಾತ; ಬೈಕ್ ಸವಾರ ಸಾವು Read More »

ಬಟ್ಟೆ ಒಣಗಿಸುವ ತಂತಿಗೆ ವಿದ್ಯುತ್ ಪ್ರವಹಿಸಿ ದಂಪತಿ ಸಾವು

ದಾವಣಗೆರೆ: ಬಟ್ಟೆ ಒಣಗಿಸುವ ತಂತಿಗೆ ವಿದ್ಯುತ್ ತಗುಲಿ ಶಾರ್ಟ್ ವಿದ್ಯುತ್ ಪ್ರವಹಿಸಿ ದಂಪತಿ ಸ್ಥಳದಲ್ಲೇ ಮೃತಪಟ್ಟ ಘಟನೆಯೊಂದು ದಾವಣಗೆರೆ ತಾಲ್ಲೂಕಿನ ಬಾವಿಹಾಳು ಗ್ರಾಮದಲ್ಲಿ ನಡೆದಿದೆ. ಬಿ.ಆರ್.ರವಿಶಂಕರ್ (35 ವ) ಮತ್ತು ನಾಗವೇಣಿ (32 ವ) ಮೃತ ದಂಪತಿ. ನಾಗವೇಣಿ ಅವರು ಮನೆ ಪಕ್ಕದಲ್ಲಿ ವಿದ್ಯುತ್ ಕಂಬಕ್ಕೆ ಕಟ್ಟಿದ್ದ ತಂತಿಗೆ ಬಟ್ಟೆ ಒಣ ಹಾಕುತ್ತಿದ್ದರು. ಈ ವೇಳೆ ವಿದ್ಯುತ್ ತಗುಲಿದಾಗ ಕೂಗಿಕೊಂಡಿದ್ದಾರೆ. ಓಡಿ ಬಂದು ರವಿಶಂಕರ್ ಪತ್ನಿ ನಾಗವೇಣಿಯನ್ನು ಎಳೆದುಕೊಳ್ಳಲು ಮುಂದಾಗಿದ್ದಂತೆ ಅವರಿಗೂ ವಿದ್ಯುತ್ ಪ್ರವಹಿಸಿದೆ. ನೋಡುತ್ತಿದ್ದಂತೆ ದಂಪತಿ

ಬಟ್ಟೆ ಒಣಗಿಸುವ ತಂತಿಗೆ ವಿದ್ಯುತ್ ಪ್ರವಹಿಸಿ ದಂಪತಿ ಸಾವು Read More »

ಸಚಿವ ಬಿ.ಎ.ಬಸವರಾಜ ಅವರ ತಂದೆ ನಿಧನ

ಬೆಂಗಳೂರು: ನಗರಾಭಿವೃದ್ಧಿ ಸಚಿವ ಬಿ.ಎ ಬಸವರಾಜ್ ಅವರ ತಂದೆ ಆಂಜಿನಪ್ಪ (85) ಅವರು ಇಂದು ನಿಧನರಾಗಿದ್ದಾರೆ. ಹೀಗಾಗಿ ನಗರಾಭಿವೃದ್ಧಿ ಸಚಿವರಾದ ಶ್ರೀ ಬಿ.ಎ.ಬಸವರಾಜ (ಬೈರತಿ) ಅವರಿಗೆ ಪಿತೃ ವಿಯೋಗ ಉಂಟಾಗಿದೆ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ ಅವರ ತಂದೆ ಆಂಜಿನಪ್ಪ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಇಂದು ಅವರು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಮೃತ ಆಂಜಿನಪ್ಪ ಅವರಿಗೆ ಸಚಿವ ಬಿಎ ಬಸವರಾಜ ಸೇರಿದಂತೆ 5

ಸಚಿವ ಬಿ.ಎ.ಬಸವರಾಜ ಅವರ ತಂದೆ ನಿಧನ Read More »

ಕಾರು ಮತ್ತು ಟೆಂಪೋ ಅಪಘಾತ; 6 ಮಂದಿ ಸಾವು

ಬೀಡ್: ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ರವಿವಾರ ಬೆಳಿಗ್ಗೆ ಕಾರು ಹಾಗೂ ಟೆಂಪೋ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಆರು ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಜರಸುಂಬ-ಪಟೋಡ ಹೆದ್ದಾರಿಯಲ್ಲಿ ಮುಂಜಾನೆ 5.30ರ ಸುಮಾರಿಗೆ ಅಪಘಾತ ಸಂಭವಿಸಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಕೇಜ್ ತಹಸಿಲ್‌ನ ಜಿವಾಚಿವಾಡಿ ಗ್ರಾಮದ ಕುಟುಂಬವೊಂದು ಮದುವೆ ಸಮಾರಂಭದಲ್ಲಿ ಭಾಗವಹಿಸಲು ಪುಣೆಗೆ ಕಾರಿನಲ್ಲಿ ಹೋಗುತ್ತಿದ್ದಾಗ ಅವರ ವಾಹನ ಹಾಗೂ ಟೆಂಪೋ ಪರಸ್ಪರ ಡಿಕ್ಕಿ ಹೊಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕುಟುಂಬದ ಐವರು ಹಾಗೂ ಇನ್ನೊಬ್ಬ ವ್ಯಕ್ತಿ

ಕಾರು ಮತ್ತು ಟೆಂಪೋ ಅಪಘಾತ; 6 ಮಂದಿ ಸಾವು Read More »

20 ಕೋಟಿಗೂ ರೂ. ಅಧಿಕ ಕಲೆಕ್ಷನ್ ಪಡೆದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗಾಳಿಪಟ – 2 ಸಿನಿಮಾ

ಬೆಂಗಳೂರು : ನಟ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ, ಯೋಗರಾಜ್ ಭಟ್ ನಿರ್ದೇಶನದ ‘ಗಾಳಿಪಟ 2’ ಮೊದಲ ದಿನವೇ ನಿರೀಕ್ಷೆಗೂ ಮೀರಿದ ಯಶಸ್ಸು ಕಂಡಿದ್ದು ಸುಮಾರು 20 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ. ಗಣೇಶ್ ಹಾಗೂ ಯೋಗರಾಜ್ ಭಟ್ ಕಾಂಬಿನೇಷನ್ ಮತ್ತೊಮ್ಮೆ ಗೆದ್ದಿದೆ. ಈ ಹಿಂದೆ ಇವರಿಬ್ಬರ ಕಾಂಬಿನೇಷನ್ ನಲ್ಲಿ ಮೂಡಿ ಬಂದಿದ್ದ ‘ಮುಂಗಾರು ಮಳೆ’, ‘ಗಾಳಿಪಟ 2’ ಸೂಪರ್ ಹಿಟ್ ಆಗಿದ್ದವು. ಈಗ ‘ಗಾಳಿಪಟ 2’ ಬಿಡುಗಡೆಯಾದಗಲೇ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಮೊದಲ ದಿನವೇ ‘ಗಾಳಿಪಟ

20 ಕೋಟಿಗೂ ರೂ. ಅಧಿಕ ಕಲೆಕ್ಷನ್ ಪಡೆದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಗಾಳಿಪಟ – 2 ಸಿನಿಮಾ Read More »

ಲಾರಿಯೊಂದು ಮರಕ್ಕೆ ಡಿಕ್ಕಿಯಾದ ಪರಿಣಾಮ ಲಾರಿಯಲ್ಲಿದ್ದ 24 ಟನ್ ಹತ್ತಿ ಹೊತ್ತಿ ಉರಿದು ಭಸ್ಮ

ವಿಜಯಪುರ: ಲಾರಿಯೊಂದು ಮರಕ್ಕೆ ಡಿಕ್ಕಿಯಾದ ಪರಿಣಾಮ ಲಾರಿಯಲ್ಲಿ ಬೆಂಕಿ ಕಾಣಿಸಿಕೊಂಡು ಹತ್ತಿ ತುಂಬಿದ ಲಾರಿ ಹೊತ್ತಿ ಉರಿದ ಘಟನೆಯೊಂದು ಜಿಲ್ಲೆಯ ಚಡಚಣ ತಾಲೂಕಿನ ಚಡಚಣ- ಬರಡೋಲ ರಸ್ತೆಯಲ್ಲಿ ನಡೆದಿದೆ. ಹತ್ತಿ ತುಂಬಿಕೊಂಡ ಲಾರಿ, ಮೈಸೂರಿಗೆ ಹೊರಟಿದ್ದ ಸಂದರ್ಭ ಈ ಅವಘಡ ಸಂಭವಿಸಿದ್ದು, ಲಕ್ಷಾಂತರ ಮೌಲ್ಯದ 24 ಟನ್ ಹತ್ತಿ ಭಸ್ಮವಾಗಿದೆ. ಅಲ್ಲದೇ, ಲಾರಿಯಲ್ಲಿದ್ದ ಚಾಲಕ ಹಾಗೂ ಕ್ಲಿನರ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿಗಳು ಆಗಮಿಸಿ ಬೆಂಕಿ ನಂದಿಸಿದ್ದಾರೆ. ಚಡಚಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ

ಲಾರಿಯೊಂದು ಮರಕ್ಕೆ ಡಿಕ್ಕಿಯಾದ ಪರಿಣಾಮ ಲಾರಿಯಲ್ಲಿದ್ದ 24 ಟನ್ ಹತ್ತಿ ಹೊತ್ತಿ ಉರಿದು ಭಸ್ಮ Read More »

ಅಂಗಾಗ ದಾನದ ದಿನ ಮಹತ್ವದ ಕಾರ್ಯ ಮಾಡಿದ ಸಿಎಂ ! ಜನತೆ ಹೇಳಿದ ಸಂಗತಿಯೇನು

ವಿಶ್ವ ಅಂಗಾಂಗ ದಾನ ದಿನಾಚರಣೆ ಪ್ರಯುಕ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಂಗಾಂಗ ದಾನಕ್ಕೆ ಹೆಸರು ನೋಂದಣಿ ಮಾಡಿಕೊಂಡಿದ್ದಾರೆ. ಅಂಗಾಂಗ ದಾನ ದಿನಾಚರಣೆ ಕಾರ್ಯಕ್ರಮದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರು ದಿವಂಗತ ನಟ ಪುನೀತ್ ರಾಜ್​ಕುಮಾರ್ ಮತ್ತು ಮತ್ತೋರ್ವ ದಿವಂಗತ ನಟ ಸಂಚಾರಿ ವಿಜಯ್ ಅವರನ್ನು ನೆನೆದರು. ಅಲ್ಲದೆ ಪುನೀತ್ ರಾಜಕುಮಾರ್ ಹಾಗೂ ನಟ ಸಂಚಾರಿ ವಿಜಯ್ ಕಣ್ಣು ದಾನ ಮಾಡಿ ಇತರರಿಗೆ ಬೆಳಕಾಗಿದ್ದಾರೆ ಎಂದು ಸ್ಮರಿಸಿದರು. ಅಂಗಾಂಗ ದಾನದ ಮೂಲಕ ಸತ್ತನಂತರವೂ ಬದುಕಬಹುದು. ಮುಂದಿನ ದಿನಗಳಲ್ಲಿ

ಅಂಗಾಗ ದಾನದ ದಿನ ಮಹತ್ವದ ಕಾರ್ಯ ಮಾಡಿದ ಸಿಎಂ ! ಜನತೆ ಹೇಳಿದ ಸಂಗತಿಯೇನು Read More »