ರಾಜ್ಯ

ಸುಳ್ಯ: ಮಧ್ಯರಾತ್ರಿ ನಡೆಯಿತು ಮತ್ತೊಂದು ಜಲಸ್ಪೋಟ| ಕಲ್ಮಕಾರು, ಕೊಲ್ಲಮೊಗ್ರು ತತ್ತರ| ಮುಳುಗಿದ ಕೊಯನಾಡು, ಸಂಪಾಜೆ

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನಲ್ಲಿ ಮತ್ತೊಂದು ಜಲಸ್ಪೋಟ ಸಂಭವಿಸಿದ್ದು, ಕಲ್ಮಕಾರು, ಕೊಲ್ಲಮೊಗ್ರು ಗ್ರಾಮಗಳಲ್ಲಿ ಜಲಪ್ರವಾಹ ಉಂಟಾಗಿದೆ. ಇತ್ತ ಮಡಿಕೇರಿ ತಾಲೂಕಿನ ಸಂಪಾಜೆ, ಕೊಯನಾಡು ಭಾಗದಲ್ಲೂ ಭಾರೀ ಪ್ರವಾಹ ತಲೆದೋರಿದ್ದು, ರಾತ್ರೋರಾತ್ರಿ ಗ್ರಾಮಸ್ಥರು ಜಾಗ ತೊರೆದಿದ್ದಾರೆ. ಮಾಹಿತಿಗಳ ಪ್ರಕಾರ ಕಲ್ಮಕಾರು ಪರಿಸರದ ಗುಳಿಕ್ಕಾನ, ಹಾಗೂ ಕಡಮಕಲ್ ಎಸ್ಟೇಟ್ ಭಾಗದಲ್ಲಿ ಜಲಸ್ಪೋಟ ಸಂಭವಿಸಿದೆ. ಇದರಿಂದಾಗಿ ಭಾರೀ ಪ್ರಮಾಣದ ಮರಗಳು ನೀರ ಅಬ್ಬರಕ್ಕೆ ಕೊಚ್ಚಿ ಬಂದಿವೆ. ಕೊಯನಾಡು ಭಾಗದಲ್ಲಿ ಪಯಸ್ವಿನಿ ನದಿ ಉಕ್ಕಿ ಹರಿದ ಪರಿಣಾಮ ಕಿಂಡಿ ರಾತ್ರಿ ವೇಳೆ ಐದಾರು […]

ಸುಳ್ಯ: ಮಧ್ಯರಾತ್ರಿ ನಡೆಯಿತು ಮತ್ತೊಂದು ಜಲಸ್ಪೋಟ| ಕಲ್ಮಕಾರು, ಕೊಲ್ಲಮೊಗ್ರು ತತ್ತರ| ಮುಳುಗಿದ ಕೊಯನಾಡು, ಸಂಪಾಜೆ Read More »

ರಾಜ್ಯಪಾಲ ಗೆಹ್ಲೋಟ್ ಅವರ ಎಡಿಸಿ ಆಗಿ ಸ್ಕ್ವಾಡ್ರನ್ ಲೀಡರ್ ಸಂದೀಪ್ ಶರ್ಮಾ ಅಧಿಕಾರ ಸ್ವೀಕಾರ

ಬೆಂಗಳೂರು: ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರ ಎಡಿಸಿ(ಮಿಲಿಟರಿ) ಆಗಿ ಭಾರತೀಯ ವಾಯುಪಡೆಯ ಸ್ಕ್ವಾಡ್ರನ್ ಲೀಡರ್ ಸಂದೀಪ್ ಶರ್ಮಾ ಅಧಿಕಾರ ವಹಿಸಿಕೊಂಡಿದ್ದಾರೆ. ಆಗಸ್ಟ್ 18 ರಂದು ಸಂದೀಪ್ ಶರ್ಮಾ‌ ಎಡಿಸಿ ಆಗಿ ಅಧಿಕಾರ ವಹಿಸಿಕೊಂಡಿದ್ದಾರೆ. ರಾಜಭವನದಲ್ಲಿ ಸ್ಕ್ವಾಡ್ರನ್ ಲೀಡರ್ ಸಂದೀಪ್ ಶರ್ಮಾ ಅವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಐಗುಲೆಟ್ ಅನ್ನು ತೊಡಿಸಿ ಶುಭ ಹಾರೈಸಿದರು. ರಾಜ್ಯಪಾಲರ ಭದ್ರತೆ, ಎಲ್ಲ ಚಲನವಲನ ಮತ್ತು ಕಾರ್ಯಕ್ರಮಗಳನ್ನು ರೂಪಿಸುವ ಹೊಣೆಗಾರಿಕೆ ಸಂದೀಪ್‌ ಅವರದ್ದಾಗಿದೆ. ಸಂದೀಪ್‌ ಅವರು ರಾಜ್ಯಪಾಲರ ಎಡಿಸಿ(ಮಿಲಿಟರಿ) ಯಾಗಿ ಕಾರ್ಯಭಾರ

ರಾಜ್ಯಪಾಲ ಗೆಹ್ಲೋಟ್ ಅವರ ಎಡಿಸಿ ಆಗಿ ಸ್ಕ್ವಾಡ್ರನ್ ಲೀಡರ್ ಸಂದೀಪ್ ಶರ್ಮಾ ಅಧಿಕಾರ ಸ್ವೀಕಾರ Read More »

ಕಾರು ಹೊಂದಿದ ಕುಟುಂಬದ ಬಿಪಿಎಲ್ ಕಾರ್ಡ್ ರದ್ದು ಮಾಡುವುದಿಲ್ಲ – ಗೃಹಸಚಿವ ಆರಗ ಜ್ಞಾನೇಂದ್ರ

ಸಮಗ್ರ ನ್ಯೂಸ್ : ಇನ್ನೂ ಮುಂದೆ ಕಾರು ಹೊಂದಿದವರ ಬಿಪಿಎಲ್ ಕಾರ್ಡ್ ರದ್ದು ಮಾಡುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು. ಆನಂದಪುರಂನ ಮುರುಘಾ ಮಠದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಈಗ 50 ಸಾವಿರ ಹಾಗೂ 1 ಲಕ್ಷಕ್ಕೂ ಹಳೆ ಕಾರುಗಳು ಸಿಗುತ್ತಿವೆ. ಗಾರೆ ಮಾಡುವವರು, ಮೀನು ಹಿಡಿಯುವವರೂ ಕಾರು ತೆಗೆದುಕೊಂಡು ಹೋಗುತ್ತಾರೆ. ಅಂತವರ ಕಾರ್ಡ್ ಸಹಿತ ರದ್ದಾಗಿರುವುದು ಸರಿಯಲ್ಲ ಎಂದರು. ಈ ವಿಷಯದ ಕುರಿತು ಶಾಸಕ ಎಚ್‌.ಹಾಲಪ್ಪ ಹರತಾಳು ಹಾಗೂ ನಾನು ಮುಖ್ಯಮಂತ್ರಿ ಬಳಿ

ಕಾರು ಹೊಂದಿದ ಕುಟುಂಬದ ಬಿಪಿಎಲ್ ಕಾರ್ಡ್ ರದ್ದು ಮಾಡುವುದಿಲ್ಲ – ಗೃಹಸಚಿವ ಆರಗ ಜ್ಞಾನೇಂದ್ರ Read More »

ಹಬ್ಬಕ್ಕೆ ಊರಿಗೆ ತೆರಳುವವರಿಗೆ ಬಿಗ್ ಶಾಕ್ ; ಖಾಸಗಿ ಬಸ್ ದರ ಹೆಚ್ಚಳ

ಬೆಂಗಳೂರು : ಗೌರಿ ಗಣೇಶ ಹಬ್ಬಕ್ಕೆ ಊರಿಗೆ ಹೋಗುವವರಿಗೆ ಬಿಗ್ ಶಾಕ್, ಬೆಂಗಳೂರಿನಿಂದ ಹೋಗುವ ಖಾಸಗಿ ಬಸ್ ಗಳ ಟಿಕೆಟ್ ದರ ಹೆಚ್ಚಳವಾಗಿದೆ. ಹಬ್ಬಕ್ಕಾಗಿ ಬೆಂಗಳೂರಿನಿಂದ ತಮ್ಮ ಊರುಗಳಿಗೆ ಹೊರಟವರಿಗೆ ಖಾಸಗಿ ಬಸ್ ಗಳ ಟಿಕೆಟ್ ದರ ಮೂರು ಪಟ್ಟು ಹೆಚ್ಚಾಗಿದೆ. ಬೆಂಗಳೂರಿನಿಂದ ರಾಜ್ಯದ ವಿವಿಧ ಪ್ರಮುಖ ಸ್ಥಳಗಳಿಗೆ ವಿಶೇಷ ಬಸ್ ಸೌಲಭ್ಯ ಒದಗಿಸುತ್ತಿದ್ದ ಕೆಎಸ್‌ಆರ್ಟಿಸಿ ಈ ಬಾರಿ ವಿಶೇಷ ಬಸ್ ಗಳ ಸಂಖ್ಯೆಯನ್ನು ಕಡಿಮೆ ಮಾಡಿದೆ. ಈ ಹಿನ್ನೆಲೆ ಆಗಸ್ಟ್ 26 ರಿಂದಲೇ ಖಾಸಗಿ ಬಸ್‌ಗಳ

ಹಬ್ಬಕ್ಕೆ ಊರಿಗೆ ತೆರಳುವವರಿಗೆ ಬಿಗ್ ಶಾಕ್ ; ಖಾಸಗಿ ಬಸ್ ದರ ಹೆಚ್ಚಳ Read More »

ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣ; ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದಿದ್ದ ಅಭ್ಯರ್ಥಿ ರಚನಾ ಪೋಲಿಸರ ವಶ

ಸಮಗ್ರ ನ್ಯೂಸ್ : ಪಿಎಸ್​ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿ ಸಿಐಡಿ ಅಧಿಕಾರಿಗಳು ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದಿದ್ದ ಅಭ್ಯರ್ಥಿ ರಚನಾ ಹನುಮಂತ ಅವರನ್ನು ಬಂಧಿಸಿದ್ದಾರೆ. 545 ಪಿಎಸ್​ಐ ಹುದ್ದೆಗಳಿಗೆ ನಡೆದಿದ್ದ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ 17ನೇ ಆರೋಪಿಯಾಗಿರುವ ರಚನಾ ಹನುಮಂತಳನ್ನು ಸಿಐಡಿ (CID) ವಿಶೇಷ ತನಿಖಾ ತಂಡ ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ವಶಕ್ಕೆ ಪಡೆದಿದೆ. ನೇಮಕಾತಿಯ ಮಹಿಳಾ ವಿಭಾಗದಲ್ಲಿ ರಾಜ್ಯಕ್ಕೆ ರಚನಾ ಹನುಮಂತ ಮೊದಲ ರ‍್ಯಾಂಕ್ ಪಡೆದಿದ್ದರು. ಅಕ್ರಮ ಪ್ರಕರಣ ತಿಳಿಯುತ್ತಿದ್ದಂತೆ ರಚನಾ ಮೂರು ತಿಂಗಳಿನಿಂದ

ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣ; ರಾಜ್ಯಕ್ಕೆ ಮೊದಲ ರ‍್ಯಾಂಕ್ ಪಡೆದಿದ್ದ ಅಭ್ಯರ್ಥಿ ರಚನಾ ಪೋಲಿಸರ ವಶ Read More »

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ| ಎನ್ಐಎ ಜೊತೆ ಸಹಕರಿಸಲು ದ.ಕ ಜಿಲ್ಲೆಯ 9 ಮಂದಿ ಪೊಲೀಸರು ನೇಮಕ

ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಬೆಳ್ಳಾರೆಯ ಯುವ ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಕೊಲೆ ಆರೋಪಿಗಳನ್ನು ಬಂಧಿಸುವಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದು, ಇದೀಗ ಏನ್ಐಎ ಜೊತೆಗೆ ತನಿಖೆಗೆ ಸಹಕರಿಸಲು ಜಿಲ್ಲೆಯ 9 ಮಂದಿ ಪೊಲೀಸರನ್ನು ನೇಮಕ ಮಾಡಿ ಎಡಿಜಿಪಿ ಆದೇಶ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ದಳ (ಎನ್ಐಎ) ಕೈಗೆತ್ತಿಕೊಂಡಿದೆ.ಎನ್ಐಎ ತನಿಖೆಗೆ ಸಹಕರಿಸಲು ಒಂದು ತಿಂಗಳವರೆಗೆ ಒಒಡಿ ಮೂಲಕ ಬೆಂಗಳೂರು ಎನ್ಐಎ ವಿಭಾಗದ ಅಧಿಕಾರಿಗಳ‌

ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ| ಎನ್ಐಎ ಜೊತೆ ಸಹಕರಿಸಲು ದ.ಕ ಜಿಲ್ಲೆಯ 9 ಮಂದಿ ಪೊಲೀಸರು ನೇಮಕ Read More »

ಇಂಜಿನಿಯರ್ ಯುವತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ

ಸಮಗ್ರ ನ್ಯೂಸ್ : ಇಂಜಿನಿಯರ್ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆಯೊಂದು ಭುವನೇಶ್ವರದಲ್ಲಿ ನಡೆದಿದೆ. ಸ್ಥಳದಲ್ಲಿ ಡೆತ್ ನೋಟು ಸಿಕ್ಕಿದ್ದು, ಪ್ರೇಮ ವೈಫಲ್ಯದ ಬಗ್ಗೆ ಬರೆಯಲಾಗಿದೆ‌. ಶ್ವೇತಾ ಆತ್ಮಹತ್ಯೆ ಮಾಡಿಕೊಂಡ ಯುವತಿ. ಈಕೆ ಸ್ವತಃ ಉಸಿರು ಕಟ್ಟಿಸಿಕೊಂಡು‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ‌. ಘಟನೆ ಬಗ್ಗೆ ಈಕೆಯ ಪ್ರಿಯಕರ‌ ಸೌಮ್ಯಜಿತ್ ಮೇಲೆ‌ ಕುಟುಂಬಸ್ಥರು ದೂರು‌ ದಾಖಲಿಸಿದ್ದಾರೆ. ಶ್ವೇತಾ ಭುವನೇಶ್ವರದ ಪ್ರತಿಷ್ಠಿತ ಕಂಪೆನಿಯಲ್ಲಿ ಕೆಲಸ‌ ಮಾಡುತ್ತಿದ್ದರು. ಸೌಮ್ಯಜಿತ್ ನನ್ನು ಪ್ರೀತಿಸುತ್ತಿದ್ದು, ಆತ ಇದನ್ನೇ‌ ಬಂಡವಾಳವಾಗಿ ಬಳಸಿ ಆಕೆಯ ಖಾಸಗಿ ಚಿತ್ರ ತೆಗೆದು ಹಣಕ್ಕಾಗಿ

ಇಂಜಿನಿಯರ್ ಯುವತಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ Read More »

ರೈತರಿಗೆ ಇನ್ನಷ್ಟು ಸೌಲಭ್ಯ ಕಲ್ಪಿಸಲು ಮುಂದಿನ ತಿಂಗಳಲ್ಲಿ ಹೊಸ ರೈತ ಶಕ್ತಿ ಯೋಜನೆ ಗೆ ಚಾಲನೆ- ಬಿ.ಸಿ.ಪಾಟೀಲ್

ಬೆಂಗಳೂರು: ರೈತರಿಗೆ ಇನ್ನೂ ಹೆಚ್ಚಿನ ಸೌಲಭ್ಯ ಕಲ್ಪಿಸಲು ಕೃಷಿ ಇಲಾಖೆ ಮುಂದಾಗಿದ್ದು, ಮುಂದಿನ ತಿಂಗಳು ರೈತ ಶಕ್ತಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಹೇಳಿದ್ದಾರೆ. ರೈತರ ಮೇಲಿನ ಆರ್ಥಿಕ ಹೊರೆಯನ್ನು ಆದಷ್ಟು ಕಡಿತಗೊಳಿಸುವ ನಿಟ್ಟಿನಲ್ಲಿ 2022-23ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಈ ಯೋಜನೆ ಜಾರಿಗೊಳಿಸಲಾಗುವುದು ಎಂದು ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ. ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವಲ್ಲಿ, ಯಂತ್ರೋಪಕರಣಗಳನ್ನು ಪ್ರೋತ್ಸಾಹಿಸಲು ಹಾಗೂ ಇಂಧನದ ವೆಚ್ಚದ ಹೊರೆಯನ್ನು ಕಡಿಮೆ ಮಾಡಲು ರಾಜ್ಯದಲ್ಲಿ ಮೊದಲ ಬಾರಿಗೆ ರೈತ ಶಕ್ತಿ

ರೈತರಿಗೆ ಇನ್ನಷ್ಟು ಸೌಲಭ್ಯ ಕಲ್ಪಿಸಲು ಮುಂದಿನ ತಿಂಗಳಲ್ಲಿ ಹೊಸ ರೈತ ಶಕ್ತಿ ಯೋಜನೆ ಗೆ ಚಾಲನೆ- ಬಿ.ಸಿ.ಪಾಟೀಲ್ Read More »

ಮಳೆಯಿಂದ ಸೇತುವೆ ಕುಸಿದು, ಸ್ವಲ್ಪದರಲ್ಲೇ ಪಾರಾದ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್

ಸಮಗ್ರ ನ್ಯೂಸ್: ಗೊರವನಹಳ್ಳಿಯಿಂದ ತೀತಾಗೆ ಸಂಪರ್ಕ ಕಲ್ಪಿಸುವ ಸೇತುವೆ ಮಳೆಯಿಂದ ಕುಸಿದು ಬಿದ್ದಿದ್ದು, ಮಾಜಿ ಡಿಸಿಎಂ ಡಾ.ಜಿ ಪರಮೇಶ್ವರ್ ಸ್ವಲ್ಪದರಲ್ಲೇ ಪಾರಾಗಿದ್ದಾರೆ. ಪರಮೇಶ್ವರ್ ಭೇಟಿ ಬಳಿಕ ಕೇವಲ 5 ನಿಮಿಷಕ್ಕೆ ತೀತಾ ಸೇತುವೆ ಕುಸಿತವಾಗಿದೆ. ಕೊರಟಗೆರೆ ತಾಲೂಕಿನ ತೀತಾ ಸೇತುವೆ ರಾತ್ರಿಯ ಮಳೆಗೆ ಮುಂಜಾನೆ ಅರ್ಧ ಕುಸಿದಿತ್ತು. ಕುಸಿತದ ಹಿನ್ನೆಲೆ ಸ್ಥಳ ವೀಕ್ಷಿಸಲು ಪರಮೆಶ್ವರ್ ಸಂಜೆ ಆಗಮಿಸಿದ್ದರು. ಪರಮೇಶ್ವರ್ ಅವರು ಸೇತುವೆ ಮೇಲೆಯೇ ನಿಂತು ಕುಸಿತವಾಗಿದ್ದ ಭಾಗವನ್ನು ವೀಕ್ಷಿಸಿದ್ದರು. ಸ್ಥಳ ವೀಕ್ಷಣೆ ಬಳಿಕ ಪರಮೇಶ್ವರ್ ಅಲ್ಲಿಂದ ಮುಂದೆ ಹೋಗಿದ್ದರು.

ಮಳೆಯಿಂದ ಸೇತುವೆ ಕುಸಿದು, ಸ್ವಲ್ಪದರಲ್ಲೇ ಪಾರಾದ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ್ Read More »

ರೈಲು ಹಳಿ ದಾಟುವಾಗ ರೈಲು ಡಿಕ್ಕಿ ಹೊಡೆದು ವಿದ್ಯಾರ್ಥಿ ಸಾವು

ಸಮಗ್ರ ನ್ಯೂಸ್: ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಬಳಿ ರೈಲು ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿ ಸಾವನ್ನಪ್ಪಿದ್ದಾರೆ. ಸಂಪತ್ ಪೂಜಾರಿ (17) ರೈಲು ಡಿಕ್ಕಿ ಹೊಡೆದು ಮೃತಪಟ್ಟ ವಿದ್ಯಾರ್ಥಿ. ಬೈಂದೂರು ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಸ್ಥಳೀಯ ವಿದ್ಯಾರ್ಥಿ ಸಂಪತ್ ರೈಲು ಹಳಿ ದಾಟುವಾಗ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ರೈಲು ಅಧಿಕಾರಿಗಳು, ಬೈಂದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ರೈಲು ಹಳಿ ದಾಟುವಾಗ ರೈಲು ಡಿಕ್ಕಿ ಹೊಡೆದು ವಿದ್ಯಾರ್ಥಿ ಸಾವು Read More »