ಕರುನಾಡಿನ ಬೀಗ ತೆರೆಯುವ ಕಾರ್ಯ ಸದ್ಯಕ್ಕಿಲ್ಲ | ಅಗತ್ಯ ಸಂಚಾರಕ್ಕೆ ಸಿಗಲಿದೆ ಅನುಮತಿ | ಹೋಮ್ ಐಸೋಲೇಶನ್ ಬದಲು ಟ್ರಯಾಸ್ ಸೆಂಟರ್
ಬೆಂಗಳೂರು: ಬಹುತೇಕ ನಿಯಂತ್ರಣದ ಹೊರತಾಗಿ, ಹೇರಲಾದ ಲಾಕ್ಡೌನ್ ತೆರವುಗೊಳಿಸಿದರೆ, ಮತ್ತೆ ಸಂಕಷ್ಟ ಎದುರಾದರೆ ಲಾಕ್ಡೌನ್ ಹೇರುವುದು ಕಠಿಣವಾಗಲಿದೆ ಎಂಬ ತಜ್ಞರ ಅಭಿಪ್ರಾಯದ ಮೇರೆಗೆ ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯದಲ್ಲಿ ಪ್ರಸ್ತುತ ಹೇರಲಾಗಿರುವ ಲಾಕ್ಡೌನ್ ತೆರವುಗೊಳಿಸುವ ಕಾರ್ಯ ಸದ್ಯಕ್ಕಿಲ್ಲ ಎಂಬುದು ಬಹುತೇಕ ಖಚಿತವಾಗಿದೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿವಾಸದಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆದಿದ್ದು, ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 2,000 ಹಾಗೂ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 500ಕ್ಕೆ ಇಳಿಯುವವರೆಗೂ ಪೂರ್ಣ ಪ್ರಮಾಣದಲ್ಲಿ ಅನ್‌ಲಾಕ್ ಮಾಡದಿರುವ ತೀರ್ಮಾನಿಸಲಾಗಿದ್ದು, ಇನ್ನಷ್ಟು […]