ರಾಜ್ಯ

ವಿಧಾನ ಮಂಡಲ ಅಧಿವೇಶನ ನೇರಪ್ರಸಾರ

ಸಮಗ್ರ ನ್ಯೂಸ್: ಕರ್ನಾಟಕ ವಿಧಾನಸಭೆಯ ಮಳೆಗಾಲದ ಅಧಿವೇಶನ ನಡೆಯುತ್ತಿದ್ದು ೫ನೇ ದಿನದ ಅಧಿವೇಶನ ನೇರಪ್ರಸಾರ ವೀಕ್ಷಿಸಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ; ವಿಡಿಯೋ ಕೃಪೆ: ಡಿಡಿ ಚಂದನ

ವಿಧಾನ ಮಂಡಲ ಅಧಿವೇಶನ ನೇರಪ್ರಸಾರ Read More »

ನನ್ನ ಮಗ ಸತ್ತಿಲ್ಲ, ಆರೋಗ್ಯ ಸ್ಥಿತಿ ಗಂಭೀರ, ರವಿ ತಂದೆ ಸ್ಪಷ್ಟನೆ

ಬೆಂಗಳೂರು: ನನ್ನ ಮಗ ಸತ್ತಿಲ್ಲ. ಅವನ ಸ್ಥಿತಿ ತುಂಬಾನೇ ಗಂಭೀರವಾಗಿದೆ’ ಎಂದು ಮಂಡ್ಯ ರವಿ ತಂದೆ ಮುದ್ದೇಗೌಡ ಅವರು ಸ್ಪಷ್ಟನೆ ನೀಡಿದ್ದಾರೆ. ಮಂಡ್ಯ ರವಿ ಜಾಂಡೀಸ್​​ನಿಂದ ಬಳಲುತ್ತಿದ್ದಾರೆ. ಜೊತೆಗೆ ಕಿಡ್ನಿ ಸಮಸ್ಯೆ ಕಾಡುತ್ತಿದೆ. ರವಿ ಅವರ ಸ್ಥಿತಿ ಗಂಭೀರ ಆಗಿರುವ ಕಾರಣ ಬೆಂಗಳೂರಿನಿಂದ ಮಂಡ್ಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿದೆ.

ನನ್ನ ಮಗ ಸತ್ತಿಲ್ಲ, ಆರೋಗ್ಯ ಸ್ಥಿತಿ ಗಂಭೀರ, ರವಿ ತಂದೆ ಸ್ಪಷ್ಟನೆ Read More »

ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ರಾಗಿ ಮಾಜಿ ಶಾಸಕ ಮಧು ಬಂಗಾರಪ್ಪ ನೇಮಕ

ಬೆಂಗಳೂರು: ಕಾಂಗ್ರೆಸ್ ಹಿಂದುಳಿದ ವರ್ಗಗಳ ಘಟಕ ( ಓಬಿಸಿ) ದ ಅಧ್ಯಕ್ಷರನ್ನಾಗಿ ಮಾಜಿ ಶಾಸಕ ಮಧು ಬಂಗಾರಪ್ಪ ಅವರನ್ನು ನೇಮಕ ಮಾಡಲಾಗಿದೆ. ಈ ಬಗ್ಗೆ ಬುಧವಾರ ಕಾಂಗ್ರೆಸ್ ಹೈಕಮಾಂಡ್ ಅಧಿಕೃತ ಆದೇಶ ಹೊರಡಿಸಿದ್ದು, ತಕ್ಷಣದಿಂದಲೇ ಹಿಂದುಳಿದ ವರ್ಗಗಳ ಸಂಘಟನೆ ಬಲಪಡಿಸಲು ಮುಂದಾಗುವಂತೆ ಎಐಸಿಸಿ ಆದೇಶದಲ್ಲಿ ಸೂಚಿಸಲಾಗಿದೆ. ಇಷ್ಟು ವರ್ಷಗಳ ಕಾಲ ಜೆಡಿಎಸ್ ನಲ್ಲಿ ಇದ್ದ ಮಧು ಬಂಗಾರಪ್ಪ ಕಳೆದ ಲೋಕಸಭಾ ಚುನಾವಣೆ ಬಳಿಕ ಕುಮಾರಸ್ವಾಮಿಯವರಿಂದ‌ ಅಂತರ ಕಾಯ್ದುಕೊಂಡಿದ್ದರು‌. ಆ ಬಳಿಕ ಡಿ.ಕೆ.ಶಿವಕುಮಾರ್ ಅವರನ್ನು ಕಾಂಗ್ರೆಸ್ ಗೆ ಕರೆ ತಂದಿದ್ದರು.

ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ರಾಗಿ ಮಾಜಿ ಶಾಸಕ ಮಧು ಬಂಗಾರಪ್ಪ ನೇಮಕ Read More »

ಕನ್ನಡದಲ್ಲೇ ಇಂಜಿನಿಯರಿಂಗ್ ಪರೀಕ್ಷೆ ಬರೆಯಲು ಅವಕಾಶ

ಬೆಂಗಳೂರು: ಹಿಂದಿ ದಿವಸ್ ಆಚರಣೆಗೆ ಜೆಡಿಎಸ್ ಹಾಗೂ ಕಾಂಗ್ರೆಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ವಿಧಾನಸಭೆಯಲ್ಲಿಯೂ ಈ ವಿಚಾರ ಪ್ರತಿಧ್ವನಿಸಿದೆ. ವಿಧಾನಸಭೆಯಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ಜೆಡಿಎಸ್ ಸದಸ್ಯರು ರಾಜ್ಯದಲ್ಲಿ ಹಿಂದಿ ದಿವಸ್ ಆಚರಣೆ ಸರಿಯಲ್ಲ, ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಕನ್ನಡ ಭಾಷೆ ಕಡ್ಡಾಯಕ್ಕೆ ಸರ್ಕಾರ ಮುಂದಾಗಬೇಕು ಎಂದು ಆಗ್ರಹಿಸಿದರು. ಈ ವೇಳೆ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಕನ್ನಡ ರಕ್ಷಣೆಗೆ ಸರ್ಕಾರ ಬದ್ಧ. ನೆಲ, ಜಲ ಭಾಷೆ ವಿಚಾರದಲ್ಲಿ ರಾಜಕೀಯ ಮೀರಿ ನಡೆದುಕೊಂಡಿದ್ದೇವೆ. ಕನ್ನಡ ಕಡ್ಡಾಯಗೊಳಿಸಲು ಇದೇ ಅಧಿವೇಶನದಲ್ಲಿ

ಕನ್ನಡದಲ್ಲೇ ಇಂಜಿನಿಯರಿಂಗ್ ಪರೀಕ್ಷೆ ಬರೆಯಲು ಅವಕಾಶ Read More »

ಮುಖ್ಯಮಂತ್ರಿಗಳ ವಿಶೇಷ ಅನುದಾನ ಬಿಡುಗಡೆ

ಬೆಂಗಳೂರು: ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ 23 ಶಾಸಕರುಗಳ ವಿಧಾನಸಭಾ ಕ್ಷೇತ್ರಗಳಿಗೆ ಅನುದಾನ ಬಿಡುಗಡೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಈ ಬಗ್ಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿಗಳು ನಡವಳಿ ಹೊರಡಿಸಿದ್ದು, ಹಿಂದುಳಿದ ಕಲ್ಯಾಣ ಇಲಾಖೆಯಿಂದ ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ 23 ಶಾಸಕರುಗಳ ವಿಧಾನಸಭಾ ಕ್ಷೇತ್ರಗಳಿಗೆ ರೂ.93.24 ಕೋಟಿಗಳ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ಈ ಅನುದಾನವನ್ನು ವಿವಿಧ ಅಭಿವೃದ್ಧಿ ಕಾರ್ಯಕ್ರಮ ಮತ್ತು ಕಟ್ಟಡ ಕಾಮಗಾರಿಗಳನ್ನು ಕೈಗೆತ್ತಿಕಳ್ಳಲು ಸೂಚಿಸಿದ್ದಾರೆ.

ಮುಖ್ಯಮಂತ್ರಿಗಳ ವಿಶೇಷ ಅನುದಾನ ಬಿಡುಗಡೆ Read More »

ಸ್ಯಾಂಡಲ್ ವುಡ್ ಗೆ ಮಹಾಘಾತ| ಮಗಳು ಜಾನಕಿ ಖ್ಯಾತಿಯ ರವಿ ಮಂಡ್ಯ ವಿಧಿವಶ

ಸಮಗ್ರ ನ್ಯೂಸ್: ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ಹೆಸರುವಾಸಿಯಾಗಿದ್ದ ಖ್ಯಾತ ನಟ ಮಗಳು ಜಾನಕಿ ಖ್ಯಾತಿಯ ರವಿ ಪ್ರಸಾದ್ ಮಂಡ್ಯ ನಿಧನರಾಗಿದ್ದಾರೆ. ಬಹುಅಂಗಾಂಗ ವೈಫಲ್ಯದಿಂದ ರವಿ ಮಂಡ್ಯ ಇಹಲೋಕ ತ್ಯಜಿಸಿದ್ದಾರೆ. ಮಗಳು ಜಾನಕಿ ಧಾರಾವಾಹಿಯಲ್ಲಿ , ರಾಜಕಾರಣಿ ಪಾತ್ರ ನಿರ್ವಹಿಸುತ್ತಿದ್ದು, ಹಲವಾರು ಸೀರಿಯಲ್ ಹಾಗು ಸಿನಿಮಾ ಮೂಲಕ ಮನೆ ಮಾತಾಗಿದ್ದ ರವಿ ಕಣ್ಮರೆಯಾಗಿದ್ದಾರೆ. ರವಿ ಅಗಲಿಕೆಗೆ ಕಲಾವಿದರು ಕಂಬನಿ ಮಿಡಿದಿದ್ದಾರೆ.

ಸ್ಯಾಂಡಲ್ ವುಡ್ ಗೆ ಮಹಾಘಾತ| ಮಗಳು ಜಾನಕಿ ಖ್ಯಾತಿಯ ರವಿ ಮಂಡ್ಯ ವಿಧಿವಶ Read More »

ಚಾರ್ಜ್ ಗೆ ಇಟ್ಟಿದ್ದ ಮೊಬೈಲ್ ಫೋನ್ ಬ್ಯಾಟರಿ ಸ್ಫೋಟ, 8 ತಿಂಗಳ ಮಗು ಸಾವು

ಸಮಗ್ರ ನ್ಯೂಸ್ : ಮೊಬೈಲ್‌ ಪೋನ್‌ ಬ್ಯಾಟರಿ ಸ್ಫೋಟ ಗೊಂಡು 8 ತಿಂಗಳ ಮಗು ಸಾವನ್ನಪ್ಪಿದ ಘಟನೆಯೊಂದು ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ. ಆರು ದಿನಗಳ ಹಿಂದೆಯಷ್ಟೇ ಮೊಬೈಲ್‌ ಪೋನ್‌ ಖರೀದಿ ಮಾಡಲಾಗಿತ್ತು. ಮೊಬೈಲ್‌ ಪೋನ್‌ನ ಬ್ಯಾಟರಿ ಊದಿಕೊಂಡಿತ್ತು. ಮಗು ಇರುವ ರೂಂನಲ್ಲಿ ಮೊಬೈಲ್‌ ಚಾರ್ಜ್‌ಗೆ ಹಾಕಿ ತಾಯಿ ಕುಸುಮಾ ಕಶ್ಯಪ್ ಹೊರಗೆ ಹೋಗಿದ್ದಳು. ಈ ವೇಳೆಗೆ ಕೋಣೆಯಲ್ಲಿ ದೊಡ್ಡ ಮಟ್ಟದ ಸದ್ದು ಕೇಳಿಬಂದಿತ್ತು. ತಾಯಿ ಓಡಿ ಹೋಗಿ ನೋಡುವಾಗ ಸ್ಫೋಟದ ತೀವ್ರತೆಗೆ ಮಗು ನಂದಿನಿ ಗಂಭೀರವಾಗಿ

ಚಾರ್ಜ್ ಗೆ ಇಟ್ಟಿದ್ದ ಮೊಬೈಲ್ ಫೋನ್ ಬ್ಯಾಟರಿ ಸ್ಫೋಟ, 8 ತಿಂಗಳ ಮಗು ಸಾವು Read More »

ಉದ್ಯೋಗ ದಲ್ಲಿದ್ದ ಯುವಕ ಹಣವಿದ್ದ ಬ್ಯಾಗ್ ನೊಂದಿಗೆ ನಾಪತ್ತೆ

ಸಮಗ್ರ ನ್ಯೂಸ್: ಹಣವಿದ್ದ ಬ್ಯಾಗ್‌ನೊಂದಿಗೆ ಹೋದ ಯುವಕ ಮನೆಗೂ ಬಾರದೆ, ಕೆಲಸಕ್ಕೂ ಹಾಜರಾಗದೇ ನಾಪತ್ತೆಯಾದ ಘಟನೆಯೊಂದು ವರದಿಯಾಗಿದೆ. ನಾಪತ್ತೆಯಾದ ಯುವಕನನ್ನು ನಗರದ ಮಾಯಾ ಟ್ರೇಡರ್ಸ್‌ನಲ್ಲಿ ಉದ್ಯೋಗಿಯಾಗಿರುವ ಕೃಷ್ಣ ಶೆಣೈ (23) ಎಂದು ಗುರುತಿಸಲಾಗಿದೆ. ಈತ ಮೂರು ತಿಂಗಳಿಂದ ಮಾಯಾ ಟ್ರೇಡರ್ಸ್‌ನಲ್ಲಿ ಕೆಲಸ ಮಾಡುತ್ತಿದ್ದು, ಕೆಲವರಿಂದ ಸಾಲ ಪಡೆದಿದ್ದು, ಇದನ್ನು ತೀರಿಸುವ ಸಲುವಾಗಿ ಭುವನೇಂದ್ರ ಬ್ಯಾಂಕ್‌ನಿಂದ ಎರಡು ಲಕ್ಷ ರೂಪಾಯಿ ಸಾಲವನ್ನೂ ಕೂಡಾ ಪಡೆದಿದ್ದು, ಆದರೆ ಆತ ಅಂದಿನಿಂದ ನಾಪತ್ತೆಯಾಗಿದ್ದಾನೆ. ಕೃಷ್ಣ 5 ಅಡಿ 11 ಇಂಚು ಎತ್ತರ,

ಉದ್ಯೋಗ ದಲ್ಲಿದ್ದ ಯುವಕ ಹಣವಿದ್ದ ಬ್ಯಾಗ್ ನೊಂದಿಗೆ ನಾಪತ್ತೆ Read More »

ಚಲಿಸುತ್ತಿದ್ದ ರೈಲಿಗೆ ಹತ್ತಲು ಯತ್ನಿಸಿ, ಪ್ಲಾಟ್ ಫಾರಂ ನಿಂದ ಕೆಳಗೆ ಬಿದ್ದು, ತಂದೆ ಮಗ ಮೃತ್ಯು

ಸಮಗ್ರ ನ್ಯೂಸ್: ಚಲಿಸುತ್ತಿದ್ದ ರೈಲು ಹತ್ತಲು ಯತ್ನಿಸಿ ಪ್ಲಾಟ್ ಫಾರಂನಿಂದ ಕೆಳಗೆ ಬಿದ್ದು ತಂದೆ, ಮಗ ಮೃತಪಟ್ಟ ಘಟನೆಯೊಂದು ಭದ್ರಾವತಿ ರೈಲ್ವೆ ನಿಲ್ದಾಣದ ಪ್ಲಾಟ್ ಫಾರಂ 1ರಲ್ಲಿ ಘಟನೆ ನಡೆದಿದೆ. ತಾಳಗುಪ್ಪ – ಬೆಂಗಳೂರು – ಮೈಸೂರು ಎಕ್ಸ್ ಪ್ರೆಸ್ ರೈಲಿಗೆ ಸಿಲುಕಿದ ಇಬ್ಬರು ಸಾವನ್ನಪ್ಪಿದರು. ರವಿವಾರ ರಾತ್ರಿ ರೈಲು ಹತ್ತುವಾಗ ಕಾಲು ಜಾರಿ ಬಿದ್ದು ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಮೋಹನ್ ಪ್ರಸಾದ್ (70 ವ) ಮತ್ತು ಅಮರನಾಥ್ (30 ವ) ಮೃತರು ಎಂದು

ಚಲಿಸುತ್ತಿದ್ದ ರೈಲಿಗೆ ಹತ್ತಲು ಯತ್ನಿಸಿ, ಪ್ಲಾಟ್ ಫಾರಂ ನಿಂದ ಕೆಳಗೆ ಬಿದ್ದು, ತಂದೆ ಮಗ ಮೃತ್ಯು Read More »

ಯುಡಿಐಡಿ ಸ್ಮಾರ್ಟ್ ಕಾರ್ಡ್ ಪಡೆಯಲು ವಿಕಲಚೇತನರಿಂದ ಆನ್ಲೈನ್ ಅರ್ಜಿ ಆಹ್ವಾನ

ಸಮಗ್ರ ನ್ಯೂಸ್ : ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯು ಈಗಾಗಲೇ ಗುರುತಿನ ಚೀಟಿ (ಯುಡಿಐಡಿ ಸ್ಮಾರ್ಟ್ ಕಾರ್ಡ್) ಪಡೆದಿರುವ ಹಾಗೂ ಹೊಸದಾಗಿ ಗುರುತಿನ ಚೀಟಿ ಪಡೆಯಲು ಎಲ್ಲಾ ವಿಕಲಚೇತನರಿಂದ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ವಿಶಿಷ್ಟ ಅಂಗವಿಕಲ ಗುರುತಿನ ಚೀಟಿಯನ್ನು (ಯುಡಿಐಡಿ ಸ್ಮಾರ್ಟ್‍ಕಾರ್ಡ್) ಹೊಂದದೇ ಇರುವ ಅಂಗವಿಕಲರು ಕೇಂದ್ರ, ರಾಜ್ಯ ಸರ್ಕಾರದಿಂದ ಪಡೆಯಲಾಗುತ್ತಿರುವ ಯೋಜನೆಗಳನ್ನು ಶೀಘ್ರದಲ್ಲಿ ಸ್ಥಗಿತಗೊಳಿಸಲಾಗುತ್ತದೆ. ಆದ್ದರಿಂದ ಜಿಲ್ಲೆಯ ಎಲ್ಲ ವಿಕಲಚೇತನರು www.swavalambacard.gov.in ವೆಬ್‍ಸೈಟ್ ಮೂಲಕ ನೋಂದಾಯಿಸಿಕೊಂಡು ವೈದ್ಯಕೀಯ ಪ್ರಾಧಿಕಾರಗಳಿಂದ ತಪಾಸಣೆಯನ್ನು

ಯುಡಿಐಡಿ ಸ್ಮಾರ್ಟ್ ಕಾರ್ಡ್ ಪಡೆಯಲು ವಿಕಲಚೇತನರಿಂದ ಆನ್ಲೈನ್ ಅರ್ಜಿ ಆಹ್ವಾನ Read More »