ರಾಜ್ಯ

ಶಿಲ್ಪಾನಾಗ್ ರನ್ನು ಡಿಸಿ ಮಾಡಲು ಪ್ರಯತ್ನಿಸಿದ್ರಂತೆ ಬಿಜೆಪಿ ಸಂಸದ!?

ಬೆಂಗಳೂರು: ಬಿಜೆಪಿ ಸಂಸದ, ಶಾಸಕರು ಜಿಲ್ಲಾಧಿಕಾರಿ ಹುದ್ದೆಯಲ್ಲಿ ಶಿಲ್ಪಾ ನಾಗ್ ಕೂರಿಸುವ ಪ್ರಯತ್ನ ಮಾಡುತ್ತಿದ್ದರು. ಅದು ವಿಫಲವಾದಾಗ ಇಬ್ಬರೂ ಅಧಿಕಾರಿಗಳನ್ನು ಪರಸ್ಪರ ಎತ್ತಿ ಕಟ್ಟಿದರು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಪರೋಕ್ಷವಾಗಿ ಸಂಸದ ಪ್ರತಾಪ್ ಸಿಂಗ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿಯ ಸಂಸದ, ಶಾಸಕರು ಜಿಲ್ಲಾಧಿಕಾರಿ ಹುದ್ದೆಯಲ್ಲಿ ಶಿಲ್ಪಾ ನಾಗ್ ಕೂರಿಸುವ ಪ್ರಯತ್ನ ಮಾಡುತ್ತಿದ್ದರು. ಅದು ವಿಫಲವಾದಾಗ ಇಬ್ಬರೂ ಅಧಿಕಾರಿಗಳನ್ನು ಪರಸ್ಪರ ಎತ್ತಿ ಕಟ್ಟಿದರು. ಬಿಗಿಯಾದ ಸರ್ಕಾರ […]

ಶಿಲ್ಪಾನಾಗ್ ರನ್ನು ಡಿಸಿ ಮಾಡಲು ಪ್ರಯತ್ನಿಸಿದ್ರಂತೆ ಬಿಜೆಪಿ ಸಂಸದ!? Read More »

ಯಡಿಯೂರಪ್ಪ ಕಾಲಿಗೆ ಬಿದ್ದ ಶಾಸಕ “ಶರಣು” ಸಲಗರ

ಬೆಂಗಳೂರು:ಶಾಸಕರೋರ್ವರು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಘಟನೆ ಇಂದು ನಡೆದಿದೆ. ಇತ್ತೀಚಿಗೆ ನಡೆದ ಉಪ ಚುನಾವಣೆಯಲ್ಲಿ ಆಯ್ಕೆಯಾದ ಶಾಸಕರಿಗೆ ಇಂದು ಇಂದು ಬೆಂಗಳೂರಿನಲ್ಲಿ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಈ ಸಂದರ್ಭ ಬಸವಕಲ್ಯಾಣ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾದ ಶಾಸಕ ಶರಣು ಸಲಗರ ಪ್ರಮಾಣವಚನ ಸ್ವೀಕರಿಸುವ ಮೊದಲು, ಹಿರಿಯ ನಾಯಕ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದಾರೆ. ಇನ್ನೋರ್ವ ಶಾಸಕ ಕಾಂಗ್ರೆಸ್ನ ಬಸವನಗೌಡ ತುರವಿಹಾಳ ಕೂಡ ಇಂದು ಶಾಸಕರಾಗಿ

ಯಡಿಯೂರಪ್ಪ ಕಾಲಿಗೆ ಬಿದ್ದ ಶಾಸಕ “ಶರಣು” ಸಲಗರ Read More »

ಹೈಕೋರ್ಟ್ ಮೆಟ್ಟಿಲೇರಿದ ಕಳೆದ ಬಾರಿ ನಪಾಸಾದ ಪಿಯುಸಿ ವಿದ್ಯಾರ್ಥಿಗಳು

ಬೆಂಗಳೂರು: ನಮಗೆ ಮಾತ್ರ ಪರೀಕ್ಷೆ ಏಕೆ..? ಮಾಡುವುದಾದರೆ ಎಲ್ಲರಿಗೂ ಮಾಡಿ ಅಥವಾ ನಮ್ಮ ಎಕ್ಸಾಮ್ ರದ್ದು ಮಾಡಿ, ಎನ್ನುತ್ತಾ ಕಳೆದ ಬಾರಿ ಪಿಯುಸಿ ಫೇಲ್ ಆಗಿದ್ದ ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಕೋವಿಡ್ ಎರಡನೆಯ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಯನ್ನು ಶಿಕ್ಷಣ ಸಚಿವಾಲಯ ರದ್ದುಮಾಡಿ ಕಳೆದವಾರ ಆದೇಶ ಹೊರಡಿಸಿತ್ತು. ಈ ಬಾರಿಯ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳನ್ನು ಪ್ರಥಮ ಪಿಯುಸಿ ಅಂಕ ಹಾಗೂ ಎಸೆಸೆಲ್ಸಿ ಅಂಕಗಳ ಆಧಾರಿತವಾಗಿ ತೇರ್ಗಡೆ ಗೊಳಿಸುವ ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಕಳೆದ

ಹೈಕೋರ್ಟ್ ಮೆಟ್ಟಿಲೇರಿದ ಕಳೆದ ಬಾರಿ ನಪಾಸಾದ ಪಿಯುಸಿ ವಿದ್ಯಾರ್ಥಿಗಳು Read More »

ರೆಡಿಯಾಗ್ತಿದೆ ‘ರೋಹಿಣಿ‌ ಸಿಂಧೂರಿ‌’ ಜೀವನಾಧಾರಿತ ಸಿನಿಮಾ “ಭಾರತ ಸಿಂಧೂರಿ”

ಮಂಡ್ಯ: ಕಳೆದ ಕೆಲ ದಿನಗಳಿಂದ ಭಾರಿ ಸುದ್ದಿಯಲ್ಲಿರುವ ಮೈಸೂರು ಜಿಲ್ಲೆಯ ಮಾಜಿ ಜಿಲ್ಲಾಧಿಕಾರಿ, ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಹಾಲಿ ಆಯುಕ್ತರಾಗಿರುವ ರೋಹಿಣಿ ಸಿಂಧೂರಿ ಅವರ ಬಯೋಪಿಕ್‌ ಸಿನಿಮಾ ಆಗಲಿದೆ.ಈ ಕುರಿತು ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಟೈಟಲ್ ರಿಜಿಸ್ಟರ್ ಆಗಿದ್ದು, ರೋಹಿಣಿ ಸಿಂಧೂರಿ ಇಲ್ಲಿ ‘ಭಾರತ ಸಿಂಧೂರಿ’ಯಾಗಿದ್ದಾರೆ. ಈ ಟೈಟಲ್‌ ರೆಜಿಸ್ಟರ್‌ ಆಗಿದ್ದು ಕಳೆದ ವರ್ಷ ಅಂದರೆ 2020ರ ಜೂನ್ 15ರಂದೇ. ಮಂಡ್ಯದ ಪತ್ರಕರ್ತರಾಗಿರುವ ಕೃಷ್ಣ ಸ್ವರ್ಣಸಂದ್ರ ಎಂಬುವವರಿಂದ ಟೈಟಲ್ ನೋಂದಣಿಯಾಗಿದ್ದು, ಲಾಕ್‌ಡೌನ್‌ ನಂತರ ಸಿನಿಮಾ ನಂತರ

ರೆಡಿಯಾಗ್ತಿದೆ ‘ರೋಹಿಣಿ‌ ಸಿಂಧೂರಿ‌’ ಜೀವನಾಧಾರಿತ ಸಿನಿಮಾ “ಭಾರತ ಸಿಂಧೂರಿ” Read More »

ನಾಯಕತ್ವ ಬದಲಾವಣೆ: ರಾಜ್ಯ ನಾಯಕರಿಗೆ ಜೂ.14 ರ ಗಡುವು ನೀಡಿದ ಬಿಜೆಪಿ ಹೈಕಮಾಂಡ್

ಬೆಂಗಳೂರು: ರಾಜ್ಯದಲ್ಲಿ ನಾಯಕತ್ವ ಬದಲಾವಣೆ ವಿಚಾರ ಭಾರಿ ಚರ್ಚೆಗೆ ಕಾರಣವಾಗಿರುವ ಬೆನ್ನಲ್ಲೇ ಇದೀಗ ಬಿಜೆಪಿ ವರಿಷ್ಠರು ರಾಜ್ಯ ನಾಯಕರಿಗೆ ಖಡಕ್ ಸೂಚನೆ ನೀಡಿದ್ದು, ನಾಯಕತ್ವ ಬದಲಾವಣೆ ಕುರಿತು ಹೇಳಿಕೆ ನೀಡದಂತೆ ತಿಳಿಸಿದ್ದಾರೆ.ನಾಯಕತ್ವ ಬದಲಾವಣೆ ಮಾತುಗಳು ಕೇಳುತ್ತಿದ್ದ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ಹೈಕಮಾಂಡ್ ಸೂಚಿಸಿದರೆ ತಕ್ಷಣ ರಾಜೀನಾಮೆ ನೀಡುವುದಾಗಿ ಹೇಳಿ ಹೊಸ ಬಾಂಬ್ ಸಿಡಿಸಿದ್ದರು. ಈ ಎಲ್ಲಾ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿತ್ತು. ಇದೀಗ ನಾಯಕರ ಸಂಘರ್ಷಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಹೈಕಮಾಂಡ್, ನಾಯಕತ್ವ ಬದಲಾವಣೆ ಬಗ್ಗೆ

ನಾಯಕತ್ವ ಬದಲಾವಣೆ: ರಾಜ್ಯ ನಾಯಕರಿಗೆ ಜೂ.14 ರ ಗಡುವು ನೀಡಿದ ಬಿಜೆಪಿ ಹೈಕಮಾಂಡ್ Read More »

ರಾಸಲೀಲೆ ಸಿಡಿ ಪ್ರಕರಣದ ಆರೋಪಿಗಳಿಗೆ ಬಿಗ್ ರಿಲೀಪ್

ಬೆಂಗಳೂರು: ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಸಿಡಿ ಬಿಡುಗಡೆ ಪ್ರಕರಣದಲ್ಲಿ ಸಿಡಿ ಪ್ರಕರಣದ ರೂವಾರಿಗಳು ಎಂದು ಹೇಳಲಾದ ನರೇಶ್​ ಗೌಡ ಹಾಗೂ ಶ್ರವಣ್​ಗೆ ಬೆಂಗಳೂರಿನ 91ನೇ ಸಿಸಿಹೆಚ್​ ಕೋರ್ಟ್ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಕಳೆದ ಮಾರ್ಚ್ 2ರಿಂದ ತಲೆಮರೆಸಿಕೊಂಡಿರುವ ಈ ಇಬ್ಬರೂ ಮಾಜಿ ಸಚಿವ ರಮೇಶ್​ ಜಾರಕಿಹೊಳಿ ಸಿಡಿ ಬಿಡುಗಡೆ ಪ್ರಕರಣದ ಪ್ರಮುಖ ಆರೋಪಿಗಳಾಗಿದ್ದು ತನಿಖಾ ತಂಡ ಇಬ್ಬರನ್ನೂ ಪತ್ತೆಹಚ್ಚಲು ಶ್ರಮಿಸುತ್ತಿತ್ತು. ತಮ್ಮ ಮೇಲೆ ಕೇಳಿಬಂದ ಸಿಡಿ ಪ್ರಕರಣದ ನಂತರ ಈ ಇಬ್ಬರ ಮೇಲೆ ಮಾಜಿ

ರಾಸಲೀಲೆ ಸಿಡಿ ಪ್ರಕರಣದ ಆರೋಪಿಗಳಿಗೆ ಬಿಗ್ ರಿಲೀಪ್ Read More »

ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಸಿ.ಎಂ‌ ಉದಾಸಿ ಇನ್ನಿಲ್ಲ

ಬೆಂಗಳೂರು : ಅನಾರೋಗ್ಯದಿಂದ ಬಳಲುತ್ತಿದ್ದಂತ ಹಾನಗಲ್ ಕ್ಷೇತ್ರದ ಬಿಜೆಪಿ ಶಾಸಕ ಸಿಎಂ ಉದಾಸಿ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ. ಕಳೆದ ಕೆಲ ದಿನಗಳಿಂದ ಅನಾರೋಗ್ಯ ಪೀಡಿತರಾಗಿದ್ದ ಹಾವೇರಿ ಜಿಲ್ಲೆಯ ಹಾನಗಲ್ ಕ್ಷೇತ್ರದ ಬಿಜೆಪಿ ಶಾಸಕ ಸಿಎಂ ಉದಾಸಿ(77)ಯವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಇಂತಹ ಶಾಸಕ ಸಿಎಂ ಉದಾಸಿ, ಚಿಕಿತ್ಸೆ ಫಲಕಾರಿಯಾಗದೇ ಇಂದು ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿರುವ ಹಾವೇರಿ ಜಿಲ್ಲೆ, ಹಾನಗಲ್ ಕ್ಷೇತ್ರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಸಿ.ಎಂ.ಉದಾಸಿ ಅವರ ಪರಿಸ್ಥಿತಿ ಗಂಭೀರವಾಗಿದ್ದು, ವೆಂಟಿಲೇಟರ್ ಮೂಲಕ

ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಸಿ.ಎಂ‌ ಉದಾಸಿ ಇನ್ನಿಲ್ಲ Read More »

ಸಿ ಇ ಟಿ ಮುಹೂರ್ತ ಫಿಕ್ಸ್ | ಆ. 28 29 ರಂದು ಪರೀಕ್ಷೆ : ಡಿಸಿಎಂ ಡಾ. ಎಎನ್

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದ ವೃತ್ತಿಪರ ಕೋರ್ಸ್ ಗಳ ಪ್ರವೇಶ ಪರೀಕ್ಷೆ ಸಿಇಟಿ ನಡೆಸಲು ರಾಜ್ಯ ಶಿಕ್ಷಣ ಸಚಿವಾಲಯ ನಿರ್ಧರಿಸಿದೆ. ಇಂದು ನಡೆದ ಸಭೆಯಲ್ಲಿ ಆಗಸ್ಟ್ ತಿಂಗಳ 28 ಮತ್ತು 29ರಂದು ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಸಚಿವ ಡಾ ಅಶ್ವತ್ ನಾರಾಯಣ್ ತಿಳಿಸಿದ್ದಾರೆ. ಇಂದು ಉನ್ನತ ಮಟ್ಟದ ಶಿಕ್ಷಣ ತಜ್ಞರುಗಳು, ಇಲಾಖೆ ಅಧಿಕಾರಿಗಳು ಹಾಗೂ ಶಿಕ್ಷಣ ಸಚಿವ ಸುರೇಶ್ ಕುಮಾರ್ ಉಪಸ್ಥಿತಿಯಲ್ಲಿ ನಡೆದ ಸಭೆಯ ಬಳಿಕ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ

ಸಿ ಇ ಟಿ ಮುಹೂರ್ತ ಫಿಕ್ಸ್ | ಆ. 28 29 ರಂದು ಪರೀಕ್ಷೆ : ಡಿಸಿಎಂ ಡಾ. ಎಎನ್ Read More »

ಪ್ರಧಾನಿಗೆ ಆಗಾಗ ಸುದ್ದಿಯಲ್ಲಿರುವ ಶೋಕಿ: ಕರ್ನಾಟಕ ಕಾಂಗ್ರೆಸ್

ಬೆಂಗಳೂರು: ಮೋದಿ ಅವರಿಗೆ ಆಗಾಗ ಸುದ್ದಿಯಲ್ಲಿರುವುದು ಶೋಕಿ ಎಂದು ಟ್ವೀಟ್ ಮಾಡುವ ಮೂಲಕ ಕರ್ನಾಟಕ ಕಾಂಗ್ರೆಸ್ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಟೀಕಿಸಿದೆ. ಕೋವಿಡ್ ನಿಗ್ರಹಿಸುವಲ್ಲಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಪ್ರಧಾನಿ ನರೇಂದ್ರಮೋದಿ ಅವರಿಗೆ ಆಗಾಗ ಸುದ್ದಿಯಲ್ಲಿರುವ ಶೋಕಿ, ಖಾಲಿ ಡಬ್ಬದಂತೆ ಟೆಲಿಪ್ರಾಂಪ್ಟರ್ ಎದುರು ಕುಳಿತು ಸದ್ದು ಮಾಡುವುದೇ ಅವರ ಖಯಾಲಿ. ಲಸಿಕೆ ನೀಡುವಲ್ಲಿ ವಿಫಲವಾಗಿ, ಹುರುಳಿಲ್ಲದ ಮಾತುಗಳನ್ನು ಹೆಡ್ ಲೈನ್ ಗಳನ್ನಾಗಿ ಸುವುದೇ ಮೋದಿ ತಂತ್ರ. ಧೈರ್ಯವಿದ್ದರೆ ಪತ್ರಿಕಾಗೋಷ್ಠಿ ನಡೆಸಿ ದೇಶದ

ಪ್ರಧಾನಿಗೆ ಆಗಾಗ ಸುದ್ದಿಯಲ್ಲಿರುವ ಶೋಕಿ: ಕರ್ನಾಟಕ ಕಾಂಗ್ರೆಸ್ Read More »

ಕೋವಿಡ್ 3ನೇ ಅಲೆ ಎದುರಿಸಲು ರಾಜ್ಯವನ್ನು ಸನ್ನದ್ಧವಾಗಿಸುವ ಗುರಿ | ₹1500 ಕೋ. ರೂ. ವೆಚ್ಚದಲ್ಲಿ ಮೂಲಸೌಕರ್ಯ ಅಭಿವೃದ್ಧಿ: ಡಾ. ಅಶ್ವಥ್ ನಾರಾಯಣ್

ಬೆಂಗಳೂರು: ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಕೋವಿಡ್ ಎರಡನೇ ಅಲೆಯನ್ನು ಸಮರ್ಪಕ ರೀತಿಯಲ್ಲಿ ಎದುರಿಸುತ್ತಿದೆ. ಇನ್ನು ಮೂರನೇ ಅಲೆಯ ಮುನ್ಸೂಚನೆ ಇದ್ದು ಅದನ್ನು ಎದುರಿಸಲು ರಾಜ್ಯವನ್ನು ಎಲ್ಲಾ ರೀತಿಯಲ್ಲಿ ಸನ್ನದ್ಧವಾಗಿರಿಸುವ ಗುರಿ ಹೊಂದಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ. ಇಂದು ನಡೆದ ಕೋವಿಡ್ ಟಾಸ್ಕ್ ಫೋರ್ಸ್ ಸಭೆಯ ಬಳಿಕ ಮಾತನಾಡಿದ ಅಶ್ವತ್ ನಾರಾಯಣ್, ರಾಜ್ಯದಲ್ಲಿ ಕೊರೋನ ಮೂರನೇ ಎದುರಿಸುವ ದೃಷ್ಟಿಯಲ್ಲಿ ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಗೊಳಿಸಲು ₹1500 ಕೋಟಿ ವೆಚ್ಚ ಮಾಡಲು ಸಭೆಯಲ್ಲಿ ಅನುಮೋದನೆ ನೀಡಲಾಗಿದೆ.

ಕೋವಿಡ್ 3ನೇ ಅಲೆ ಎದುರಿಸಲು ರಾಜ್ಯವನ್ನು ಸನ್ನದ್ಧವಾಗಿಸುವ ಗುರಿ | ₹1500 ಕೋ. ರೂ. ವೆಚ್ಚದಲ್ಲಿ ಮೂಲಸೌಕರ್ಯ ಅಭಿವೃದ್ಧಿ: ಡಾ. ಅಶ್ವಥ್ ನಾರಾಯಣ್ Read More »