ರಾಜ್ಯ

ಮೈಸೂರು: ನಾಳೆ ವಿಶ್ವವಿಖ್ಯಾತ ಜಂಬೂ ಸವಾರಿ| ಅರಮನೆ ನಗರಿಯಲ್ಲಿ ಭರದ ಸಿದ್ದತೆ

ಸಮಗ್ರ ನ್ಯೂಸ್: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಆಕರ್ಷಣೆಯಾಗಿರುವ ಜಂಬೂ ಸವಾರಿಯು ವಿಜಯದಶಮಿಯ ದಿನವಾದ ನಾಳೆ ನಡೆಯಲಿದ್ದು, ಸಿದ್ಧತೆಗಳು ಭರದಿಂದ ಸಾಗಿದೆ. ಇಂದು ನಾಡಿನಲ್ಲೆಡೆ ಆಯುಧ ಪೂಜೆ ನಡೆಯುತ್ತಿದ್ದು, ವಿಜಯದಶಮಿ ಅಂಗವಾಗಿ ನಾಳೆ ಮೈಸೂರಿನಲ್ಲಿ ವೈಭವದ ಜಂಬೂ ಸವಾರಿ ಆರಂಭವಾಗಲಿದೆ. ಬುಧವಾರ ಮಧ್ಯಾಹ್ನ 2: 36 ರಿಂದ 2:50 ರವರೆಗೆ ಸಲ್ಲುವ ಶುಭ ಮಕರ ಲಗ್ನದಲ್ಲಿ ಅರಮನೆಯ ಬಲರಾಮ ದ್ವಾರದ ಬಳಿ ನಂದಿದ್ವಜ ಪೂಜೆ ನಡೆಯಲಿದ್ದು, ಬಳಿಕ ವಿಜಯದಶಮಿ ಮೆರವಣಿಗೆ ಆರಂಭವಾಗಲಿದೆ. ದೇವಿ ಚಾಮುಂಡೇಶ್ವರಿಯನ್ನು ಅಂಬಾರಿಯಲ್ಲಿ ಪ್ರತಿಷ್ಠಾಪನೆ […]

ಮೈಸೂರು: ನಾಳೆ ವಿಶ್ವವಿಖ್ಯಾತ ಜಂಬೂ ಸವಾರಿ| ಅರಮನೆ ನಗರಿಯಲ್ಲಿ ಭರದ ಸಿದ್ದತೆ Read More »

ಆಯುಧ ಪೂಜೆ, ಮಹಾನವಮಿಗೆ ಕಳೆಗಟ್ಟಿದ ಮೈಸೂರು| ಸಾಂಸ್ಕೃತಿಕ ನಗರಿಯಲ್ಲಿ ಪೂಜಾ ವಿಧಿವಿಧಾನಗಳಿಗೆ ಚಾಲನೆ

ಸಮಗ್ರ ನ್ಯೂಸ್: ಸಾಂಸ್ಕೃತಿಕ ನಗರಿ ಮೈಸೂರಿನ ಹೆಗ್ಗುರುತಾದ ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ ಮನೆ ಮಾಡಿದೆ. ಅರಮನೆಯಲ್ಲಿ ಮುಂಜಾನೆ 5.30 ರಿಂದಲೇ ಆಯುಧಪೂಜೆ ಕೈಂಕರ್ಯಗಳು ಆರಂಭವಾಗಿದ್ದು, ಮಧ್ಯಾಹ್ನ1.30 ರವರೆಗೆ ಪೂಜೆಗಳು ನಡೆಯಲಿವೆ. ಮೈಸೂರಿನ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಪೂಜಾ ವಿಧಾನಗಳನ್ನು ನಡೆಸುತ್ತಿದ್ದಾರೆ. ಬೆಳಗ್ಗೆ 6 ಗಂಟೆಗೆ ಚಂಡಿ ಹೋಮ, ಪೂಜಾ ವಿಧಿ ವಿಧಾನ ಆರಂಭವಾಗಿದೆ. 07.45ಕ್ಕೆ ಆನೆ ಬಾಗಿಲಿಗೆ ಪಟ್ಟದ ಆನೆ, ಪಟ್ಟದ ಹಸು ಹಾಗೂ ಪಟ್ಟದ ಕುದುರೆ ಆಗಮನವಾಗಲಿದೆ. 8.10ಕ್ಕೆ ರಾಜರ

ಆಯುಧ ಪೂಜೆ, ಮಹಾನವಮಿಗೆ ಕಳೆಗಟ್ಟಿದ ಮೈಸೂರು| ಸಾಂಸ್ಕೃತಿಕ ನಗರಿಯಲ್ಲಿ ಪೂಜಾ ವಿಧಿವಿಧಾನಗಳಿಗೆ ಚಾಲನೆ Read More »

ಅನುಕಂಪದ ಆಧಾರದ ಸರ್ಕಾರಿ ನೌಕರಿ ಹಕ್ಕಲ್ಲ| ಸುಪ್ರೀಂಕೋರ್ಟ್ ನಿಂದ ಮಹತ್ವದ ತೀರ್ಪು

ಸಮಗ್ರ ನ್ಯೂಸ್: ಅನುಕಂಪದ ಸರ್ಕಾರಿ ನೌಕರಿ ಕುರಿತಂತೆ ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಅನುಕಂಪದ ಆಧಾರದಲ್ಲಿ ನೀಡುವ ಸರ್ಕಾರಿ ನೌಕರಿಯು ಹಕ್ಕಲ್ಲ ಎಂದು ಅಭಿಪ್ರಾಯಪಟ್ಟಿದೆ. ಅನುಕಂಪದ ನೌಕರಿ ಒಂದು ರೀತಿಯ ವಿನಾಯಿತಿಯೇ ಹೊರತು ಅದು ಹಕ್ಕು ಅಲ್ಲ. ಕುಟುಂಬದ ಸದಸ್ಯ ಹಠಾತ್ ನಿಧನರಾದಾಗ ಆದ ಹಾನಿಯಿಂದ ಚೇತರಿಸಿಕೊಳ್ಳಲು ಕುಟುಂಬಕ್ಕೆ ಅವಕಾಶ ನೀಡುವ ಉದ್ದೇಶದಿಂದ ಮಾತ್ರ ಅನುಕಂಪದ ಉದ್ಯೋಗ ನೀಡಲಾಗುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿದೆ. ಮಹಿಳೆಯೊಬ್ಬರು ಅನುಕಂಪದ ಆಧಾರದಲ್ಲಿ ನೇಮಿಸಿಕೊಳ್ಳಬೇಕು ಎಂದು ಸರ್ಕಾರಿ ಸ್ವಾಮ್ಯದ ರಸಗೊಬ್ಬರ ಹಾಗೂ ರಾಸಾಯನಿಕ

ಅನುಕಂಪದ ಆಧಾರದ ಸರ್ಕಾರಿ ನೌಕರಿ ಹಕ್ಕಲ್ಲ| ಸುಪ್ರೀಂಕೋರ್ಟ್ ನಿಂದ ಮಹತ್ವದ ತೀರ್ಪು Read More »

ಸುರಿವ ಜಡಿಮಳೆಯಲ್ಲೂ ಬತ್ತದ ಉತ್ಸಾಹ| ಮಳೆ ನಡುವೆ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಭಾಷಣ

ಸಮಗ್ರ ನ್ಯೂಸ್: ಭಾರತ ಜೋಡೊ ಯಾತ್ರೆ ತಮಿಳುನಾಡು ಮತ್ತು ಕೇರಳವನ್ನು ಮುಗಿಸಿ ಕರ್ನಾಟಕಕ್ಕೆ ಬಂದು ತಲುಪಿದೆ. ಕಳೆದೆರಡು ದಿನಗಳಿಂದ ರಾಹುಲ್‌ ಗಾಂಧಿ ಕರ್ನಾಟಕದಲ್ಲಿ ಪಾದಯಾತ್ರೆ ಮಾಡುತ್ತಿದ್ದಾರೆ. ಭಾನುವಾರ ಮೈಸೂರು ಜಿಲ್ಲೆಯ ಬಂಡಿಪಾಳ್ಯ ಸಮೀಪ ರಾಹುಲ್‌ ಗಾಂಧಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದರು. ವೇದಿಕೆಯ ಮೇಲೆ ರಾಹುಲ್‌ ಗಾಂಧಿ ಮಾತನಾಡುವ ವೇಳೆ ಜೋರು ಮಳೆ ಆರಂಭವಾಗಿದೆ. ಆದರೆ ಇದಕ್ಕೆ ತಲೆ ಕೆಡಿಸಿಕೊಳ್ಳದ ರಾಹುಲ್‌ ಗಾಂಧಿ ಮಳೆಯಲ್ಲೇ ಮಾತು ಮುಂದುವರೆಸಿದ್ದಾರೆ. ಭಾರತ ಜೋಡೊ ಯಾತ್ರೆ ಮಳೆ – ಗಾಳಿ ಅಥವಾ ಸುನಾಮಿ ಬಂದರೂ

ಸುರಿವ ಜಡಿಮಳೆಯಲ್ಲೂ ಬತ್ತದ ಉತ್ಸಾಹ| ಮಳೆ ನಡುವೆ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಭಾಷಣ Read More »

ಪರೇಶ್ ಮೇಸ್ತಾ ಸಾವು ಆಕಸ್ಮಿಕ| ಸಿಬಿಐ ನಿಂದ ಕೋರ್ಟ್ ಗೆ ವರದಿ ಸಲ್ಲಿಕೆ

ಸಮಗ್ರ ನ್ಯೂಸ್: ಹಿಂದೂ ಕಾರ್ಯಕರ್ತ ಎಂದು ಬಿಂಬಿತವಾಗಿ ರಾಜ್ಯಾದ್ಯಂತ ಸಂಚಲನಕ್ಕೆ ಕಾರಣವಾಗಿದ್ದ ಹೊನ್ನಾವರದ ಪರೇಶ್ ಮೇಸ್ತಾ ಸಾವು ಪ್ರಕರಣವನ್ನು ಸಿಬಿಐ ಆಕಸ್ಮಿಕ ಎಂದು ಹೇಳಿ ವರದಿ ಸಲ್ಲಿಸಿದೆ. ಇಂದು(ಅ. ೩) ಹೊನ್ನಾವರದ ಕೋರ್ಟ್ ಗೆ ವರದಿ ಸಲ್ಲಿಸಿರುವ ಸಿಬಿಐ ಪರೇಶ್ ಮೇಸ್ತಾ ಸಾವು ಆಕಸ್ಮಿಕವಾಗಿದ್ದು, ಇದು ಕೋಮುಹತ್ಯೆ ಅಲ್ಲ ಎಂದು ಹೇಳಿದೆ. ಏನಿದು ಪ್ರಕರಣ?ಕಳೆದ 2017ರ ಡಿಸೆಂಬರ್ ತಿಂಗಳಲ್ಲಿ ಉತ್ತರಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ನಡೆದ ಪರೇಶ್ ಮೇಸ್ತಾ ಎಂಬ ಯುವಕನ ಸಾವಿನ ಪ್ರಕರಣ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿತ್ತು.

ಪರೇಶ್ ಮೇಸ್ತಾ ಸಾವು ಆಕಸ್ಮಿಕ| ಸಿಬಿಐ ನಿಂದ ಕೋರ್ಟ್ ಗೆ ವರದಿ ಸಲ್ಲಿಕೆ Read More »

ಭಾರೀ ಮಳೆಯಿಂದ ಮನೆ ಗೋಡೆ ಕುಸಿದು ಮೂವರು ಸಾವು

ಸಮಗ್ರ ನ್ಯೂಸ್ : ಭಾರೀ ಮಳೆಯಿಂದಾಗಿ ರಾಯಚೂರು ಜಿಲ್ಲೆಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಮನೆ ಗೋಡೆ ಕುಸಿದು ಮೂವರು ಸಾವನ್ನಪ್ಪಿರುವ ಘಟನೆ ನಡೆದಿದೆ. ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕುರ್ಡಿ ಗ್ರಾಮದಲ್ಲಿ ಇಂದು ಬೆಳಗಿನ ಜಾವ ಭಾರೀ ಮಳೆಯಿಂದಾಗಿ ಮನೆ ಗೋಡೆ ಕುಸಿದು ಮೂವರು ಸಾವನ್ನಪ್ಪಿದ್ದಾರೆ. ಪರಮೇಶ್ (45), ಜಯಮ್ಮ (39) ಹಾಗೂ ಪುತ್ರ ಭರತ್ (5) ಸಾವನ್ನಪ್ಪಿದ ದುರ್ದೈವಿಗಳು. ಮಾನ್ವಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಭಾರೀ ಮಳೆಯಿಂದ ಮನೆ ಗೋಡೆ ಕುಸಿದು ಮೂವರು ಸಾವು Read More »

ಸಿಬ್ಬಂದಿಗೆ ಗುಡ್ ನ್ಯೂಸ್ ಕೊಟ್ಟ KSRTC| 65 ವರ್ಷದ ನೀತಿಗೆ ಗುಡ್ ಬೈ ಹೇಳಿದ ನಿಗಮ

ಸಮಗ್ರ ನ್ಯೂಸ್: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ 65 ವರ್ಷಗಳ ಇತಿಹಾಸದಲ್ಲೇ ಈ ದಿನ ಬಹಳ ವಿಶೇಷವಾದದ್ದು. ಅದರಲ್ಲೂ ಕೆಎಸ್​ಆರ್​​ಟಿಸಿ ಸಿಬ್ಬಂದಿ ಬಹಳ ನೆನಪಿನಲ್ಲಿ ಇಟ್ಟುಕೊಳ್ಳುವ ದಿನ. ಯಾಕಂದ್ರೆ 65 ವರ್ಷದ ಇತಿಹಾಸದಲ್ಲೇ ತಿಂಗಳ ಮೊದಲ ದಿನವೇ ನೌಕರರಿಗೆ ಸಂಬಳವನ್ನ ನೀಡಿರಲಿಲ್ಲ. ಆದರೆ ಈ ಬಾರಿ ಹಾಗಾಗಲಿಲ್ಲ. 7ನೇ ತಾರೀಕಿನಂದು ನೌಕರರ ಬ್ಯಾಂಕ್ ಖಾತೆಗೆ ಸಂಬಳ ಸೇರುತಿತ್ತು. ಆದರೆ ಇದೇ ಮೊದಲ ಬಾರಿಗೆ 1ನೇ ತಾರೀಖಿನಂದು ನೌಕರರಿಗೆ ಸಂಬಳ ಕೈ ಸೇರಿದೆ. ಇದಕ್ಕೆ ಕಾರಣ KSRTCಯ

ಸಿಬ್ಬಂದಿಗೆ ಗುಡ್ ನ್ಯೂಸ್ ಕೊಟ್ಟ KSRTC| 65 ವರ್ಷದ ನೀತಿಗೆ ಗುಡ್ ಬೈ ಹೇಳಿದ ನಿಗಮ Read More »

ನಾಳೆ(ಅ.3) ಮೈಸೂರಿಗೆ ಸೋನಿಯಾ ಗಾಂಧಿ

ಸಮಗ್ರ ನ್ಯೂಸ್: ಕಾಂಗ್ರೆಸ್​ನ ಅಧಿನಾಯಕಿ ಸೋನಿಯಾ ಗಾಂಧಿ ನಾಳೆ(ಅ.3) ಮೈಸೂರಿಗೆ ಆಗಮಿಸಲಿದ್ದಾರೆ. ಬೆಳಗ್ಗೆ 8 ಗಂಟೆಗೆ ವಿಶೇಷ ವಿಮಾನದ ಮೂಲಕ ಮೈಸೂರು ವಿಮಾನ‌ ನಿಲ್ದಾಣಕ್ಕೆ ಆಗಮಿಸುವ ಸೋನಿಯಾ ಗಾಂಧಿ, ಸುಮಾರು 2 ಗಂಟೆ ಕಾಲ ಭಾರತ್​ ಜೋಡೋ ಯಾತ್ರೆಯಲ್ಲಿ ರಾಹುಲ್​ ಗಾಂಧಿ ಜತೆ ಹೆಜ್ಜೆ ಹಾಕಲಿದ್ದಾರೆ. ನಂತರ ಎರಡು ದಿನಗಳ ಕಾಲ ಕೊಡಗಿನ ಖಾಸಗಿ ರೆಸಾರ್ಟ್​ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಹಳೇ ಮೈಸೂರು ಭಾಗಕ್ಕೆ ಕಾಂಗ್ರೆಸ್​ ಹೆಚ್ಚು ಒತ್ತು ಕೊಡುತ್ತಿದ್ದು, ಅ.6ರಂದು ಪ್ರಿಯಾಂಕಾ ಗಾಂಧಿ ಕೂಡ ರಾಜ್ಯಕ್ಕೆ ಆಗಮಿಸುತ್ತಿದ್ದಾರೆ.

ನಾಳೆ(ಅ.3) ಮೈಸೂರಿಗೆ ಸೋನಿಯಾ ಗಾಂಧಿ Read More »

ರಾಜ್ಯದಲ್ಲಿ ಅಂತ್ಯಗೊಂಡ ನೈಋತ್ಯ ಮುಂಗಾರು| ಈ ಬಾರಿ ವಾಡಿಕೆಗಿಂತ ಶೇ.20ರಷ್ಟು ಹೆಚ್ಚು ಸುರಿದ ಮಳೆ| ಅ.15ರವರೆಗೂ ಮಳೆ ಮುಂದುವರಿಯುವ ಸಾಧ್ಯತೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ನೈಋತ್ಯ ಮುಂಗಾರು ಅಂತ್ಯಗೊಂಡಿದ್ದರೂ ಅ.15ರವರೆಗೆ ಮಳೆ ಮುಂದುವರೆಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಅ.10ರ ಬಳಿಕ ಮಳೆಯ ಪ್ರಮಾಣ ಕೊಂಚ ತಗ್ಗಲಿದೆ. ಜೂನ್ 1ರಿಂದ ಸೆ.30ರವರೆಗೆ ಇದ್ದ ನೈಋತ್ಯ ಮುಂಗಾರಿನಲ್ಲಿ ರಾಜ್ಯದಲ್ಲಿ ಈ ಬಾರಿ ವಾಡಿಕೆಗಿಂತ ಶೇ.20ಕ್ಕಿಂತ ಅಧಿಕ ಮಳೆಯಾಗಿದೆ. ರಾಜ್ಯದ ವಾಡಿಕೆ ಪ್ರಮಾಣ 85.2 ಸೆ.ಮೀ, ಈ ಬಾರಿ 100.19 ಸೆ.ಮಿ ಮಳೆಯಾಗಿದೆ. ದಕ್ಷಿಣ ಒಳನಾಡಿನ ವಾಡಿಕೆ 67.84ಸೆ.ಮೀ ಈ ಬಾರಿ 101.2 ಸೆ.ಮೀ. ಮಳೆಯಾಗಿದ್ದು ಶೇ.49

ರಾಜ್ಯದಲ್ಲಿ ಅಂತ್ಯಗೊಂಡ ನೈಋತ್ಯ ಮುಂಗಾರು| ಈ ಬಾರಿ ವಾಡಿಕೆಗಿಂತ ಶೇ.20ರಷ್ಟು ಹೆಚ್ಚು ಸುರಿದ ಮಳೆ| ಅ.15ರವರೆಗೂ ಮಳೆ ಮುಂದುವರಿಯುವ ಸಾಧ್ಯತೆ Read More »

ಮತ್ತೆ ಕಂಪಿಸಿದ ಭೂಮಿ; 2.5 ತೀವ್ರತೆ ದಾಖಲು

ಸಮಗ್ರ ನ್ಯೂಸ್: ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಭೂಕಂಪನ ಉಂಟಾಗಿದ್ದು, ಭಯಗೊಂಡ ಜನರು ಮನೆಗಳಿಂದ ಹೊರಗೋಡಿ ಬಂದಿದ್ದಾರೆ. ಜಿಲ್ಲೆಯಲ್ಲಿ ಪದೇ ಪದೇ ಭೂಕಂಪದ ಅನುಭವವಾಗುತ್ತಿದ್ದು, ಜನರು ಆತಂಕದಲ್ಲೇ ಕಾಲ ಕಳೆಯುವಂತಾಗಿದೆ. ಭಾರಿ ಸ್ಫೋಟದ ಸದ್ದಿನೊಂದಿಗೆ ಕೆಲ ಕಾಲ ಭೂಮಿ ನಡುಗಿದ್ದು, ಭಯಭೀತರಾದ ಜನರು ಮನೆಗಳಿಂದ ಹೊರಗೋಡಿ ಬಂದಿದ್ದಾರೆ. ನೈಸರ್ಗಿಕ ವಿಕೋಪ ಕೇಂದ್ರ ಜಿಲ್ಲೆಯಲ್ಲಿ ಭೂಕಂಪವಾಗಿರುವುದನ್ನು ಖಚಿತಪಡಿಸಿದೆ. ವಿಜಯಪುರ ಹೊರವಲಯದಲ್ಲಿನ ಆಲಿಯಾಬಾದ್ ನಲ್ಲಿ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ. 2.5ರಷ್ಟು ತೀವ್ರತೆ ದಾಖಲಾಗಿದೆ. ಭೂಮಿಯ 8 ಕಿ.ಮೀ ಆಳದಲ್ಲಿ ಈ

ಮತ್ತೆ ಕಂಪಿಸಿದ ಭೂಮಿ; 2.5 ತೀವ್ರತೆ ದಾಖಲು Read More »