ರಾಜ್ಯ

“ದೇಶ,‌ ರಾಜ್ಯ ಇಬ್ಭಾಗವಾಗುತ್ತೆ, ಶಿವನಾಣೆ ಇದು ಸತ್ಯ”| ಹಾಸನದಲ್ಲಿ ಮತ್ತೊಮ್ಮೆ ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ

ಸಮಗ್ರ ನ್ಯೂಸ್: ಮೂರು ಮುಖ್ಯಮಂತ್ರಿ, ಮೂವರು ವಿಶೇಷವಾಗಿ ರಾಜ್ಯಪಾಲರಾಗುತ್ತಾರೆ, ಶಿವನ ಆಣೆ ಮೇಲೆ ಸತ್ಯ. ಹಾಸನಾಂಬೆ ಸನ್ನಿಧಿಯಲ್ಲಿ ಹೇಳುತ್ತೇನೆ. ಭಾರತ ದೇಶ ಎರಡು ಆಗುತ್ತೆ, ಎರಡು ರಾಷ್ಟ್ರಪತಿ ಆಗೋದು ಸತ್ಯ. 31 ವರ್ಷದಲ್ಲಿ ಹೀಗೆ ಆಗಬೇಕು ಅಂತ ನಾನು ಹೇಳಿದ್ದಲ್ಲ. ವೀರ ಬ್ರಮ್ಮಯ್ಯ, ಕೈವಾರ ತಾತಯ್ಯ, ಮಂಟೆ ಸ್ವಾಮಿಗಳು ಶಾಸನ ಬರೆದು ಇಟ್ಟಿದ್ಧಾರೆ. ಇದು ನಡೆಯೋದು ನಿಜ, ಸತ್ಯ ಎಂದು ಬ್ರಹ್ಮಾಂಡ ಗುರೂಜಿ ಹೇಳಿದ್ದಾರೆ. ರಾಜ್ಯದಲ್ಲಿ ಸಣ್ಣ ವಯಸ್ಸಿನವರು ಸಿಎಂ ಆಗ್ತಾರೆ ಎಂಬ ಕಾರ್ಣಿಕ ಭವಿಷ್ಯದ ಬಗ್ಗೆ […]

“ದೇಶ,‌ ರಾಜ್ಯ ಇಬ್ಭಾಗವಾಗುತ್ತೆ, ಶಿವನಾಣೆ ಇದು ಸತ್ಯ”| ಹಾಸನದಲ್ಲಿ ಮತ್ತೊಮ್ಮೆ ಭವಿಷ್ಯ ನುಡಿದ ಬ್ರಹ್ಮಾಂಡ ಗುರೂಜಿ Read More »

ರಾಜ್ಯದಲ್ಲಿ ವರುಣಾರ್ಭಟಕ್ಕೆ 13 ಮಂದಿ ಬಲಿ| ಅಪಾರ ಹಾನಿ, ಆಸ್ತಿಪಾಸ್ತಿ ನಷ್ಟ| ಅ 15ರ ವರೆಗೆ ಭಾರೀ ಮಳೆ ಸಂಭವ

ಸಮಗ್ರ ನ್ಯೂಸ್ : ಈ ವರ್ಷ ಕರ್ನಾಟಕದಲ್ಲಿ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಿದ್ದು, ಈ ತಿಂಗಳ ಆರಂಭದಿಂದ ಕರ್ನಾಟಕದ ವಿವಿಧ ಭಾಗಗಳಲ್ಲಿ ಮಳೆಯಿಂದ 13 ಜನರು ಸಾವನ್ನಪ್ಪಿದ್ದಾರೆ. ಭಾರೀ ಮಳೆಯಿಂದ ಜಾನುವಾರುಗಳು ಮತ್ತು ಆಸ್ತಿಗಳಿಗೆ ದೊಡ್ಡ ಪ್ರಮಾಣದ ಹಾನಿ ಸಂಭವಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಿನ್ನೆ ಜಿಲ್ಲಾಧಿಕಾರಿಗಳಿಗೆ ಮಳೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವಂತೆ ಸೂಚಿಸಿದ್ದಾರೆ. ಅಕ್ಟೋಬರ್ 1ರಿಂದ ಮಳೆಯಿಂದಾಗಿ ಕರ್ನಾಟಕದಲ್ಲಿ 28 ಜಾನುವಾರುಗಳು ಸಾವನ್ನಪ್ಪಿವೆ, 3,309 ಮನೆಗಳಿಗೆ ಹಾನಿಯಾಗಿದೆ, ಸುಮಾರು 6,279 ಹೆಕ್ಟೇರ್‌ನಲ್ಲಿ ಬೆಳೆ ಹಾನಿಯಾಗಿದೆ.

ರಾಜ್ಯದಲ್ಲಿ ವರುಣಾರ್ಭಟಕ್ಕೆ 13 ಮಂದಿ ಬಲಿ| ಅಪಾರ ಹಾನಿ, ಆಸ್ತಿಪಾಸ್ತಿ ನಷ್ಟ| ಅ 15ರ ವರೆಗೆ ಭಾರೀ ಮಳೆ ಸಂಭವ Read More »

ಮತ್ತಿಬ್ಬರು ಬಾಲಕಿಯರಿಗೆ ಲೈಂಗಿಕ ಕಿರುಕುಳ ಆರೋಪ| ಮುರುಘಾ ಶರಣರ ವಿರುದ್ದ ಮತ್ತೊಂದು ಎಫ್ಐಆರ್ ದಾಖಲು

ಸಮಗ್ರ ನ್ಯೂಸ್: ಲೈಂಗಿಕ ಕಿರುಕುಳ ಆರೋಪದ ಮೇಲೆ ಜೈಲಿನಲ್ಲಿ ವಿಚಾರಣೆ ಎದುರಿಸುತ್ತಿರುವ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಇದೀಗ ಮತ್ತಿಬ್ಬರು ಅಪ್ರಾಪ್ತ ಬಾಲಕಿಯರಿಗೆ ಅಂತಹದ್ದೇ ಕಿರುಕುಳ ನೀಡಿದ ಆರೋಪ ಕೇಳಿಬಂದಿದೆ. ಮಠದಲ್ಲಿ‌ ಕೆಲಸ ಮಾಡುತ್ತಿದ್ದ ನೌಕರರ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಶ್ರೀಗಳ ವಿರುದ್ಧ ನಿನ್ನೆ ತಡ ರಾತ್ರಿ ಮೈಸೂರಿನ ನಜರಬಾದ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ಅದರಂತೆ ಪೊಲೀಸರು ಎಫ್​ಐಆರ್ ದಾಖಲಿಸಿಕೊಂಡಿದ್ದು, ಬಳಿಕ ಪ್ರಕರಣವನ್ನು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಯಿತು. ಸದ್ಯ

ಮತ್ತಿಬ್ಬರು ಬಾಲಕಿಯರಿಗೆ ಲೈಂಗಿಕ ಕಿರುಕುಳ ಆರೋಪ| ಮುರುಘಾ ಶರಣರ ವಿರುದ್ದ ಮತ್ತೊಂದು ಎಫ್ಐಆರ್ ದಾಖಲು Read More »

ಮುಂದಿನ ವರ್ಷ ನಿಮ್ಮ ಮಗುವನ್ನು ಶಾಲೆಗೆ ಸೇರಿಸುವ ಪ್ಲ್ಯಾನ್ ಇದೆಯಾ? ಹಾಗಾದ್ರೆ ಈ ಮಾಹಿತಿ ತಿಳಿದುಕೊಳ್ಳಿ…

ಸಮಗ್ರ ನ್ಯೂಸ್: ಮುಂದಿನ ಶೈಕ್ಷಣಿಕ ವರ್ಷದಿಂದ ಮಕ್ಕಳನ್ನು ಶಾಲೆಗೆ ಸೇರುವ ಪೋಷಕರಿಗೆ ಮುಖ್ಯವಾದ ಮಾಹಿತಿ ಇಲ್ಲಿದೆ. ಒಂದನೇ ತರಗತಿಗೆ ಮಗು ಸೇರಿಸಲು ಆರು ವರ್ಷ ಪೂರ್ಣಗೊಂಡಿರಬೇಕು. ಈ ನಿಯಮವನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೊಳಿಸಲಾಗುವುದು ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ. ಈ ಬಗ್ಗೆ ಅವರು ಮಾಹಿತಿ ನೀಡಿ, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ ಒಂದನೇ ತರಗತಿ ಅಥವಾ ಶಾಲಾ ಶಿಕ್ಷಣಕ್ಕೆ ಪ್ರವೇಶ ಪಡೆಯಲು 6 ವರ್ಷ ಪೂರ್ಣಗೊಳಿಸುವುದು ಕಡ್ಡಾಯವಾಗಿದೆ. ಶಿಕ್ಷಣ ತಜ್ಞರ ಸಲಹೆ

ಮುಂದಿನ ವರ್ಷ ನಿಮ್ಮ ಮಗುವನ್ನು ಶಾಲೆಗೆ ಸೇರಿಸುವ ಪ್ಲ್ಯಾನ್ ಇದೆಯಾ? ಹಾಗಾದ್ರೆ ಈ ಮಾಹಿತಿ ತಿಳಿದುಕೊಳ್ಳಿ… Read More »

ರಾಜ್ಯಾದ್ಯಂತ ಮೂರು ದಿನ‌ ಗುಡುಗು‌ ಸಹಿತ‌ ಮಳೆ ಸಂಭವ| ಹವಾಮಾನ ಇಲಾಖೆಯಿಂದ ಮಾಹಿತಿ

ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ಮಳೆಯ ಅಬ್ಬರ ಹೆಚ್ಚಾಗಿದೆ. ಬೆಂಗಳೂರಿನಲ್ಲಿ 2 ದಿನಗಳಿಂದ ಮಳೆಯಾಗುತ್ತಿದೆ. ಇಂದಿನಿಂದ 3 ದಿನ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಇಂದು ಕರ್ನಾಟಕದ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳಭಾಗಕ್ಕೆ ಹವಾಮಾನ ಇಲಾಖೆ ಹಳದಿ ಅಲರ್ಟ್ ಘೋಷಿಸಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು ಸೇರಿದಂತೆ ಬೆಂಗಳೂರು, ಚಿತ್ರದುರ್ಗ, ಹಾಸನ ಹವಮಾನ ಇಲಾಖೆ ಹಳದಿ ಅಲರ್ಟ್ ಘೋಷಿಸಿದೆ. ಮುಂದಿನ 3 ದಿನಗಳ ಕಾಲ ಕರ್ನಾಟಕದ ಬಹುತೇಕ ಭಾಗಗಳಲ್ಲಿ ಭಾರೀ ಮಳೆಯಾಗಲಿದೆ ಎಂದು

ರಾಜ್ಯಾದ್ಯಂತ ಮೂರು ದಿನ‌ ಗುಡುಗು‌ ಸಹಿತ‌ ಮಳೆ ಸಂಭವ| ಹವಾಮಾನ ಇಲಾಖೆಯಿಂದ ಮಾಹಿತಿ Read More »

ಸಕಲೇಶಪುರ : ನಗರದೊಳಗೆ ಗಜರಾಜನ ಪಟ್ಟಣ ಸವಾರಿ; ಆತಂಕದಲ್ಲಿ ಜನತೆ

ಸಮಗ್ರ ನ್ಯೂಸ್: ಹಾಸನ ಜಿಲ್ಲೆಯ ಸಕಲೇಶಪುರ ಪಟ್ಟಣದ ಸದಾಶಿವ ನಗರದಲ್ಲಿ ಕಾಡಾನೆಯೊಂದು ಓಡಾಟ ನಡೆಸಿರುವ ಘಟನೆ ಇಂದು ನಡೆದಿದೆ. ಅ. ೧೨ರ ರಾತ್ರಿ 8:45 ರಲ್ಲಿ ಕಾಡಾನೆಯು ರಾಜಾರೋಷವಾಗಿ ರಸ್ತೆಯಲ್ಲಿ ತಿರುಗಾಡಿದ ಹಿನ್ನೆಲೆಯಲ್ಲಿ ಸಾರ್ವಜನಿಕರು ಓಡಾಡಲು ಆತಂಕಪಡುತ್ತಿದ್ದಾರೆ. ಸಕಲೇಶಪುರ ಪಟ್ಟಣದಲ್ಲಿ ಇತ್ತೀಚಿಗೆ ಗೌಡಳ್ಳಿ ಮಳಲಿ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಕಾಡಾನೆ ಹಾವಳಿ ಹೆಚ್ಚಾಗಿದ್ದು ಬೆಳೆ ಹಾನಿ ಜೊತೆಗೆ ಸಾರ್ವಜನಿಕರು ನಿರ್ಭೀತಿಯಿಂದ ತಿರುಗಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಕೂಡಲೇ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಬೇಕೆಂದು ಸಾರ್ವಜನಿಕ ಒತ್ತಾಯಿಸಿದ್ದಾರೆ.

ಸಕಲೇಶಪುರ : ನಗರದೊಳಗೆ ಗಜರಾಜನ ಪಟ್ಟಣ ಸವಾರಿ; ಆತಂಕದಲ್ಲಿ ಜನತೆ Read More »

ಮಂಗಳೂರು: ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾದ ಪ್ರವೀಣ್ ನೆಟ್ಟಾರು ಪತ್ನಿ ನೂತನ

ಸಮಗ್ರ ನ್ಯೂಸ್: ಬಿಜೆಪಿ ಕಾರ್ಯಕರ್ತ ದಿ. ಪುವೀಣ್ ನೆಟ್ಟಾರು ಅವರ ಪತ್ನಿ ನೂತನಕುಮಾರಿ ಮಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಅವರು ಇಂದು (ಗುರುವಾರ) ಬೆಳಗ್ಗೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರಿಂದ ನೇಮಕಾತಿ ಆದೇಶಪತ್ರವನ್ನು ಸ್ವೀಕರಿಸಿದ್ದಾರೆ. ದಿ. ಪ್ರವೀಣ್ ನೆಟ್ಟಾರು ಪತ್ನಿ ನೂತನಕುಮಾರಿ ಅವರು ಜಿಲ್ಲಾಧಿಕಾರಿ ಕಚೇರಿಯ ಮುಖ್ಯಮಂತ್ರಿಗಳ ಪರಿಹಾರ ನಿಧಿ ವಿಭಾಗದಲ್ಲಿ ಸಹಾಯಕಿಯಾಗಿ ಕೆಲಸ ಮಾಡಲಿದ್ದಾರೆ. ನೂತನಕುಮಾರಿ ಅವರಿಗೆ ಬೆಂಗಳೂರಿನ ಮುಖ್ಯಮಂತ್ರಿ ಕಚೇರಿಯಲ್ಲಿ ಗ್ರೂಪ್ ‘ಸಿ’ ಹುದ್ದೆಗೆ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲಾಗಿತ್ತು. ಆದರೆ,

ಮಂಗಳೂರು: ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯಕ್ಕೆ ಹಾಜರಾದ ಪ್ರವೀಣ್ ನೆಟ್ಟಾರು ಪತ್ನಿ ನೂತನ Read More »

ಮಂಗಳೂರು: ನಿಷೇದಿತ ಪಿಎಫ್ಐ‌ ಮುಖಂಡರ ಮನೆ ಮೇಲೆ ಪೊಲೀಸರ ದಾಳಿ| ಐವರನ್ನು ವಶಕ್ಕೆ ಪಡೆದ ಖಾಕಿ ಪಡೆ

ಮಂಗಳೂರು: ಮಂಗಳೂರಿನಲ್ಲಿ ಇಂದು ಬೆಳ್ಳಂಬೆಳಗ್ಗೆ ನಿಷೇಧಿತ ಪ್ಯಾಪುಲರ್ ಫ್ರಂಟ್ ಆಫ್ ಇಂಡಿಯಾ (PFI) ಹಾಗೂ ಎಸ್ ಡಿಪಿಐ ಮುಖಂಡರ ಮನೆಗಳ ಮೇಲೆ ಪೊಲೀಸರು ಮತ್ತೆ ದಾಳಿ ನಡೆಸಿದ್ದಾರೆ. ಇಂದು(ಅ.13) ಬೆಳಗ್ಗೆ ಪೊಲೀಸರು ಪಿಎಫ್ ಐ ಹಾಗೂ ಎಸ್ ಡಿಪಿಐ ಮುಖಂಡರ ಮೇಲೆ ಕಮಿಷನರ್ ಎನ್ ಶಶಿಕುಮಾರ್ ನೇತೃತ್ವದಲ್ಲಿ ಪೊಲೀಸರು ದಾಳಿ ಮಾಡಿದ್ದು, ಐವರು ಪಿಎಫ್ ಐ ಮುಖಂಡರನ್ನು ವಶಕ್ಕೆ ಪಡೆದಿದ್ದಾರೆ. ಕಮಿಷನರ್ ಎನ್.ಶಶಿಕುಮಾರ್ ನೇತೃತ್ವದಲ್ಲಿ ಪಣಂಬೂರು, ಸುರತ್ಕಲ್ ಹಾಗೂ ಮಂಗಳೂರು ಗ್ರಾಮಾಂತರ ಉಳ್ಳಾಲ ಸೇರಿ ಏಳೆಂಟು ಕಡೆ

ಮಂಗಳೂರು: ನಿಷೇದಿತ ಪಿಎಫ್ಐ‌ ಮುಖಂಡರ ಮನೆ ಮೇಲೆ ಪೊಲೀಸರ ದಾಳಿ| ಐವರನ್ನು ವಶಕ್ಕೆ ಪಡೆದ ಖಾಕಿ ಪಡೆ Read More »

ಬೈಕ್ ಸ್ಕಿಡ್ ಆಗಿ ಸವಾರ ದುರ್ಮರಣ

ಸಮಗ್ರ ನ್ಯೂಸ್: ಬೈಕ್ ಸವಾರ ನಿಯಂತ್ರಣ ತಪ್ಪಿ ಬೈಕ್ ಸ್ಕಿಡ್‌ಯಾಗಿರುವ ಪರಿಣಾಮ ಬೈಕ್ ಸವಾರ ಅಸುನೀಗಿರುವ ಘಟನೆ ವಿಜಯಪುರ ತಾಲ್ಲೂಕಿನ ಮದಬಾಬಿ ಕ್ರಾಸ್ ಬಳಿ ಬುಧವಾರ ನಡೆದಿದೆ. ವಿಜಯಪುರ ಜಿಲ್ಲೆಯ ತಾಳಿಕೋಟೆ ನಿವಾಸಿಯಾದ ಕಾಶಿನಾಥ ಮೃತಪಟ್ಟಿರುವ ದುರ್ದೈವಿ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರದಿ: ಶಂಕರ್, ಸಮಗ್ರ ನ್ಯೂಸ್, ವಿಜಯಪುರ

ಬೈಕ್ ಸ್ಕಿಡ್ ಆಗಿ ಸವಾರ ದುರ್ಮರಣ Read More »

ಒಂದೇ ಬಾತ್ ರೂಮನಲ್ಲಿ ಎರಡು ಕಮೋಡ್| ಉದ್ಘಾಟನೆಯಾದ್ರೂ ಉಪಯೋಗಿಸುವವರಿಲ್ಲ!!

ಸಮಗ್ರ ನ್ಯೂಸ್: ಬಾತ್‌ರೂಂನಲ್ಲಿ ಕಮೋಡ್ ಇರುವುದನ್ನು ಎಲ್ಲರೂ ನೋಡಿದ್ದೇವೆ ಆದರೆ ಒಂದೇ ಶೌಚಾಲಯದಲ್ಲಿ ಎರಡೆರಡು ಶೌಚಾಲಯ ಇರುವುದನ್ನು ಎಲ್ಲಾದರೂ ಕಂಡಿದ್ದೀರಾ. ತಮಿಳುನಾಡಿನ ರಾಜ್ಯ ಕೈಗಾರಿಕೆಗಳ ಉತ್ತೇಜನ ನಿಗಮಕ್ಕೆ ಶ್ರೀಪೆರಂಬಂದೂರಿನಲ್ಲಿ ಹೊಸತಾಗಿ ನಿರ್ಮಿಸಲಾದ ಕಟ್ಟಡಲ್ಲಿ ಒಂದೇ ಬಾತ್‌ರೂಂನಲ್ಲಿ ಎರೆಡೆರಡು ಶೌಚಾಲಯ ಇದೆ. ಇತ್ತೀಚೆಗಷ್ಟೇ ಕಟ್ಟಡದ ಉದ್ಘಾಟನೆ ನೆರವೇರಿದ್ದು, ಎರಡು ಕಮೋಡ್‌ಗಳನ್ನು ಸ್ಥಾಪಿಸಿರುವುದು ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದಕ್ಕೆ ಕಟ್ಟಡದ ಯೋಜನಾಧಿಕಾರಿ ಸ್ಪಷ್ಟನೆ ನೀಡಿದ್ದು, ಇನ್ನೂ ಕಟ್ಟಡದ ಕಾಮಗಾರಿ ಪೂರ್ಣಗೊಂಡಿಲ್ಲ. ಎರಡೂ ಶೌಚದ ಮಧ್ಯೆ ಗೋಡೆ ಕಟ್ಟಬೇಕಿದೆ ಎಂದಿದ್ದಾರೆ. ಈ

ಒಂದೇ ಬಾತ್ ರೂಮನಲ್ಲಿ ಎರಡು ಕಮೋಡ್| ಉದ್ಘಾಟನೆಯಾದ್ರೂ ಉಪಯೋಗಿಸುವವರಿಲ್ಲ!! Read More »