ರಾಜ್ಯ

ಹವಾಮಾನ ವರದಿ: ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ

ಸಮಗ್ರ ನ್ಯೂಸ್: ರಾಜ್ಯದ ಉತ್ತರ ಒಳನಾಡು ಹಾಗೂ ಕರಾವಳಿಯ ಜಿಲ್ಲೆಯಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದ.ಕ ಜಿಲ್ಲೆಯ ಪಣಂಬೂರು ಕಡಲ ಕಿನಾರೆ ಸೇರಿದಂತೆ ಬೆಳ್ತಂಗಡಿ, ಸುಳ್ಯ, ಪುತ್ತೂರು ತಾಲೂಕಿನ ಬಹುತೇಕ ಕಡೆಗಳಲ್ಲಿ ಭಾರೀ ಮಳೆಯಾಗಿದ್ದು, ಮುಂದಿನ 24 ಗಂಟೆಯಲ್ಲಿ ಗುಡುಗು ಸಹಿತ ಮಳೆಯಾಗಲಿದೆ. ರಾಜ್ಯಾದ್ಯಂತ ಕೆಲವು ಕಡೆಗಳಲ್ಲಿ ತುಂತುರ ಮಳೆಯಾಗಲಿದ್ದು, ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಭಾಗಗಳಲ್ಲಿ ಗುಡುಗು ಸಹಿತ ವ್ಯಾಪಕ ಮಳೆಯಾಗಲಿದೆ. ದಕ್ಷಿಣ ಒಳನಾಡಿನ […]

ಹವಾಮಾನ ವರದಿ: ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ Read More »

ದಾವಣಗೆರೆ: ಚಂದ್ರು ಸಾವು ಮಾದರಿಯಲ್ಲೇ ಮತ್ತೊಂದು ದುರಂತ| ಬೆಳಗಾವಿ ಎಎಸ್ಐ ಪುತ್ರ ಹೊನ್ನಾಳಿಯಲ್ಲಿ ಸಾವು

ಸಮಗ್ರ ನ್ಯೂಸ್: ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನಲ್ಲಿ ಶಾಸಕ ರೇಣುಕಾಚಾರ್ಯ ತಮ್ಮನ ಮಗ ಸಾವನ್ನಪ್ಪಿದ್ದ ರೀತಿಯಲ್ಲೇ ಬೆಳಗಾವಿಯ ಎಎಸ್ ಐ ಪುತ್ರ ಸಾವನ್ನಪ್ಪಿರುವ ಘಟನೆ ನಡೆದಿದೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಮಾಸಡಿ ಗ್ರಾಮದ ಬಳಿ ಇರುವ ಮಹೇಶ್ವರಿ ಹಳ್ಳದಲ್ಲಿ ಕಾರು ಬಿದ್ದು ಬೆಳಗಾವಿ ಎಎಸ್ ಐ ಪುತ್ರ ಪ್ರಕಾಶ್ ಅರಳಿಕಟ್ಟೆ ಸಾವನ್ನಪ್ಪಿದ್ದಾರೆ. ಶಿವಮೊಗ್ಗಕ್ಕೆ ತನ್ನ ಸ್ನೇಹಿತರನ್ನು ಬಿಟ್ಟು ವಾಪಸ್ ಬರುವಾಗ ಮಧ್ಯರಾತ್ರಿ 1 ಗಂಟೆಗೆ ಕಾರು ನಿಯಂತ್ರಣ ತಪ್ಪಿ ಹಳ್ಳಕ್ಕೆ ಬಿದ್ದಿದೆ ಎನ್ನಲಾಗಿದೆ. ಇನ್ನು ಕೆಲ

ದಾವಣಗೆರೆ: ಚಂದ್ರು ಸಾವು ಮಾದರಿಯಲ್ಲೇ ಮತ್ತೊಂದು ದುರಂತ| ಬೆಳಗಾವಿ ಎಎಸ್ಐ ಪುತ್ರ ಹೊನ್ನಾಳಿಯಲ್ಲಿ ಸಾವು Read More »

ಬಣಕಲ್ ನಿಂದ ಶಬರಿಮಲೆಗೆ ಪಾದಯಾತ್ರೆ ಹೊರಟ ಅಯ್ಯಪ್ಪ ಭಕ್ತ

ಸಮಗ್ರ ನ್ಯೂಸ್: ಬಣಕಲ್ ನಿಂದ ಶಬರಿಮಲೆಗೆ ಸುಭಾಷ್ ನಗರದ ಗೋಪಾಲಕೃಷ್ಣ ನಾಯರ್ ಎಂಬವವರು ಶನಿವಾರದಂದು ತಮ್ಮ ಸ್ವಗೃಹದಿಂದ ಪೂಜೆ ಮುಗಿಸಿ ಇರ್ಮುಡಿ ಕಟ್ಟಿ ಶಬರಿಮಲೆಗೆ ಪಾದಯಾತ್ರೆ ಮೂಲಕ ನಡಿಗೆ ಪಯಣಕ್ಕೆ ಚಾಲನೆ ನೀಡಿದರು. ಸುಮಾರು 800ಕಿ.ಮೀ ವ್ಯಾಪ್ತಿಯ ಶಬರಿಮಲೆ ಕ್ಷೇತ್ರಕ್ಕೆ 32 ವರ್ಷಗಳ ಕಾಲ ವಾಹನದಲ್ಲಿ ಹೋಗಿ ಬರುತ್ತಿದ್ದರು. ಈ ವರ್ಷ ಇವರು 33 ನೇ ವರ್ಷಕ್ಕೆ ನಡೆದು ಬರುವುದಾಗಿ ಹರಕೆ ಹೊತ್ತು ಭಕ್ತಿಯಿಂದ ಅಯ್ಯಪ್ಪ ಸ್ವಾಮಿಯ ಭಕ್ತನಾಗಿ ಗುರು ಸ್ವಾಮಿಗಾಗಿ ಗೋಪಾಲಕೃಷ್ಣ ಅವರು ಒಬ್ಬಂಟಿಗನಾಗಿ ಪಾದಯಾತ್ರೆ

ಬಣಕಲ್ ನಿಂದ ಶಬರಿಮಲೆಗೆ ಪಾದಯಾತ್ರೆ ಹೊರಟ ಅಯ್ಯಪ್ಪ ಭಕ್ತ Read More »

ಮೈಸೂರು:ಬಸ್ ನಿಲ್ದಾಣ ವಿವಾದಕ್ಕೆ ಕೊನೆಗೂ ಮುಕ್ತಿ| ಶಾಸಕ- ಸಂಸದರ ನಡುವಿನ ಶೀತಲ ಸಮರಕ್ಕೆ ಇತಿಶ್ರೀ…

ಸಮಗ್ರ ನ್ಯೂಸ್: ಮೈಸೂರು ನಗರದ ಗುಂಬಜ್ ಮಾದರಿ ಬಸ್ ಶೆಲ್ಟರ್ ನಿರ್ಮಾಣ ವಿವಾದಕ್ಕೆ ಶಾಸಕ ಎಸ್.ಎ.ರಾಮ್‌ದಾಸ ಅಂತ್ಯ ಹಾಡಿದ್ದಾರೆ. ಬಸ್ ಶೆಲ್ಟರ್ ಮೇಲಿದ್ದ ಮೂರು ಗೋಪುರಗಳ ಪೈಕಿ ಒಂದು ಗೋಪುರ ಉಳಿಸಿಕೊಂಡು, ಮತ್ತೆರಡು ಗೋಪುರಗಳನ್ನ ತೆರವುಗೊಳಿಸಲಾಗಿದೆ. ರಾತ್ರೋರಾತ್ರಿ ಬಸ್ ಶೆಲ್ಟರ್ ಮೇಲಿದ್ದ ಎರಡು ಗೋಪುರಗಳನ್ನ ಅಧಿಕಾರಿಗಳು ತೆರವು ಮಾಡಿದ್ದಾರೆ. ಮೈಸೂರು ಅರಮನೆ ಪರಂಪರೆಗಾಗಿ ಬಸ್ ಶೆಲ್ಟರ್ ಮಾಡಲಾಗುತ್ತಿತ್ತು. ಶಾಸಕರ ಅನುಧಾನದಲ್ಲಿ 12 ಬಸ್ ಶೆಲ್ಟರ್ ನಿರ್ಮಿಸಲಾಗುತ್ತಿತ್ತು. ವಿನಾಕಾರಣ ಧರ್ಮದ ಹೆಸರಿನಲ್ಲಿ ವಿವಾದ ಸೃಷ್ಟಿಸಲಾಗಿತ್ತು. ಇದು ಮುಂದೆ ವಿವಾದಿತ

ಮೈಸೂರು:ಬಸ್ ನಿಲ್ದಾಣ ವಿವಾದಕ್ಕೆ ಕೊನೆಗೂ ಮುಕ್ತಿ| ಶಾಸಕ- ಸಂಸದರ ನಡುವಿನ ಶೀತಲ ಸಮರಕ್ಕೆ ಇತಿಶ್ರೀ… Read More »

ವಿವಾಹಿತ ಮಹಿಳೆಯ ಜೊತೆ ಸೆಕ್ಸ್ ಮಾಡಿದರೆ ಅದು ಅತ್ಯಾಚಾರವಲ್ಲ: ಹೈಕೋರ್ಟ್

ಸಮಗ್ರ ನ್ಯೂಸ್: ಅವಳು ವಿವಾಹಿತ ಮಹಿಳೆಯಾಗಿದ್ದು, ಅರ್ಜಿದಾರರೊಂದಿಗೆ ಕಾನೂನುಬದ್ಧ ವಿವಾಹ ಸಾಧ್ಯವಿಲ್ಲ ಎಂದು ಆಕೆಗೆ ತಿಳಿದು ಇನ್ನೊಬ್ಬನಿಂದ ಸಮ್ಮತಿ ಸರಸ ನಡೆಸಿದರೆ ಅದನ್ನು ಅನೈತಿಕ ಸಂಬಂಧ ಎಂದು ಹೇಳಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ. ಕೇರಳ ಹೈಕೋರ್ಟ್ ಇತ್ತೀಚೆಗೆ 25 ವರ್ಷದ ಯುವಕನ ವಿರುದ್ಧದ ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸುವಾಗ ಈಗಾಗಲೇ ವಿವಾಹಿತೆಯಾಗಿರುವ ಮಹಿಳೆಯನ್ನು ಮದುವೆಯಾಗುವುದಾಗಿ ಪುರುಷ ಭರವಸೆ ನೀಡಿ ಸಮ್ಮತಿಯ ಲೈಂಗಿಕ ಸಂಪರ್ಕ ನಡೆಸಿದ್ದರೆ ಅದು ಭಾರತೀಯ ದಂಡ ಸಂಹಿತೆಯ ( IPC ) ಸೆಕ್ಷನ್

ವಿವಾಹಿತ ಮಹಿಳೆಯ ಜೊತೆ ಸೆಕ್ಸ್ ಮಾಡಿದರೆ ಅದು ಅತ್ಯಾಚಾರವಲ್ಲ: ಹೈಕೋರ್ಟ್ Read More »

ಕಾಫಿನಾಡಲ್ಲಿ ಫಾರೆಸ್ಟ್‌ ಆಫೀಸ್ ಪುಡಿ…ಪುಡಿ

ಸಮಗ್ರ ನ್ಯೂಸ್: ಆನೆಯ ನಿರಂತರ ದಾಳಿಯಿಂದ ಕಂಗೆಟ್ಟಿರುವ ಮಲೆನಾಡಿಗರುಕಳ್ಳ ಬೇಟೆ ನಿಗ್ರಹ ಶಿಬಿರವನ್ನ ಧ್ವಂಸ ಮಾಡಿದ ಘಟನೆ ಮೂಡಿಗೆರೆ ತಾಲೂಕಿನ ಕುಂದೂರು ಗ್ರಾಮದಲ್ಲಿ ನಡೆದಿದೆ. ನಾಲ್ಕು ದಿನದ ಹಿಂದೆ ಆನೆ ದಾಳಿಗೆ 35 ವರ್ಷದ ಮಹಿಳೆ ಸಾವನ್ನಪ್ಪಿದ್ದಳು ಈ ಹಿನ್ನೆಲೆ ಆನೆ ದಾಳಿಯನ್ನ ನಿಯಂತ್ರಿಸಲಾಗದ ಅರಣ್ಯ ಇಲಾಖೆ ವಿರುದ್ಧ ರೋಷಾವೇಶ ಮೆರೆದಿದ್ದಾರೆ. ಈ ವೇಳೆ ಕಳ್ಳ ಬೇಟೆ ನಿಗ್ರಹ ಶಿಬಿರದಲ್ಲಿ ಕೈಗೆ ಸಿಕ್ಕ… ಸಿಕ್ಕ… ವಸ್ತುಗಳನ್ನೆಲ್ಲಾ ಪುಡಿ ಮಾಡಿದ ಆಕ್ರೋಶಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಅರಣ್ಯ

ಕಾಫಿನಾಡಲ್ಲಿ ಫಾರೆಸ್ಟ್‌ ಆಫೀಸ್ ಪುಡಿ…ಪುಡಿ Read More »

ಹವಾಮಾನ ವರದಿ: ಇನ್ನೆರಡು ದಿನವೂ ರಾಜ್ಯದಾದ್ಯಂತ ‌ಮಳೆ

ಸಮಗ್ರ ನ್ಯೂಸ್: ಕಳೆದ ಎರಡು ದಿನಗಳಿಂದ ಬೆಂಗಳೂರು ಸೇರಿದಂತೆ ವಾಯುಭಾರ ಕುಸಿತ ಹಿನ್ನೆಲೆ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಇಂದು ಕರಾವಳಿ, ದಕ್ಷಿಣ ಒಳನಾಡು, ಉತ್ತರ ಒಳನಾಡಿನಲ್ಲಿ ವರುಣ ಅಬ್ಬರಿಸಲಿದ್ದಾನೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಹಾಸನ, ಮೈಸೂರು, ತುಮಕೂರು ಜಿಲ್ಲೆಗಳಲ್ಲಿ ಮಳೆಯಾಗಲಿದೆ ಎಂದು ವರದಿ ತಿಳಿಸಿದೆ. ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ನಾಳೆಯೂ ಮಳೆ ಮುನ್ಸೂಚನೆ ಇದೆ. ಕರಾವಳಿ ಹಾಗೂ

ಹವಾಮಾನ ವರದಿ: ಇನ್ನೆರಡು ದಿನವೂ ರಾಜ್ಯದಾದ್ಯಂತ ‌ಮಳೆ Read More »

‘ಮುಸ್ಲಿಮರನ್ನೆಲ್ಲಾ ಕೊಂದು ಹಿಂದೂ ರಾಷ್ಟ್ರ ಮಾಡಿ’ | ವ್ಯಾಪಾರ ಬಹಿಷ್ಕಾರದ ಬೆನ್ನಲ್ಲೇ ಮುಸ್ಲಿಂ ಮುಖಂಡನಿಂದ ಆಕ್ರೋಶ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಮತ್ತೆ ಧರ್ಮ ದಂಗಲ್​ ಶುರುವಾಗಿದ್ದು, ಕುಕ್ಕೆ ಸುಬ್ರಹ್ಮಣ್ಯದ ಚಂಪಾಷಷ್ಟಿಯಲ್ಲಿ ಮುಸ್ಲಿಂ ವ್ಯಾಪಾರ ಬಹಿಷ್ಕರಿಸುವ ಕೂಗು ಕೇಳಿಬಂದಿದೆ. ಆದರೆ, ಈ ಬಹಿಷ್ಕಾರದ ವಿರುದ್ಧ ಮುಸ್ಲಿಂ ಮುಖಂಡ ಮೊಹಮ್ಮದ್ ಖಾಲಿದ್ ಅವರು ಆಕ್ರೋಶ ಹೊರಹಾಕಿದ್ದಾರೆ. ವಿಡಿಯೋ ತುಣುಕೊಂದನ್ನು ಹಂಚಿಕೊಂಡಿರುವ ಖಾಲಿದ್​, ಮುಸ್ಲಿಂ ವ್ಯಕ್ತಿ ತಪ್ಪು ಮಾಡಿದರೆ ಯಾವೊಬ್ಬ ಮುಸ್ಲಿಮರು ಕೂಡ ಅವರ ಪರವಾಗಿ ನಿಲ್ಲುವುದಿಲ್ಲ. ಆದರೆ, ಬೇರೆ ಧರ್ಮಗಳಲ್ಲಿ ತಪ್ಪು ಮಾಡಿದವರ ಪರವಾಗಿ ನಿಲ್ಲೋದನ್ನು ನಾವು ನೋಡಿದ್ದೇವೆ. ಮುಸ್ಲಿಂ ಮಹಿಳೆ ಮೇಲೆ ರೇಪ್ ಮಾಡಿದ 12

‘ಮುಸ್ಲಿಮರನ್ನೆಲ್ಲಾ ಕೊಂದು ಹಿಂದೂ ರಾಷ್ಟ್ರ ಮಾಡಿ’ | ವ್ಯಾಪಾರ ಬಹಿಷ್ಕಾರದ ಬೆನ್ನಲ್ಲೇ ಮುಸ್ಲಿಂ ಮುಖಂಡನಿಂದ ಆಕ್ರೋಶ Read More »

ಯುವಕನಿಗೆ ಮದ್ಯ ಕುಡಿಸಿ ಯುವತಿಯರಿಂದ ಅತ್ಯಾಚಾರ

ಸಮಗ್ರ ನ್ಯೂಸ್: ಯುವಕನೊಬ್ಬನಿಗೆ ಬಲವಂತವಾಗಿ ಮದ್ಯ ಕುಡಿಸಿ, ನಾಲ್ಕು ಮಂದಿ ಯುವತಿಯರು ಅತ್ಯಾಚಾರ ಮಾಡಿರುವ ಘಟನೆ ಪಂಜಾಬ್ ನ ಜಲಂಧರ್ ನಲ್ಲಿ ನಡೆದಿದೆ. ರಾತ್ರಿ ಪಾಳಿಯಲ್ಲಿ ಕೆಲಸಕ್ಕಾಗಿ ಯುವಕ ತಾನು ಕಾರ್ಖಾನೆಗೆ ಹೋಗುತ್ತಿದ್ದಾಗ ಮಾರ್ಗ ಮಧ್ಯೆ ಈ ಘಟನೆ ನಡೆದಿದೆ ಎಂದು ಹೇಳಿಕೊಂಡಿದ್ದಾನೆ . ಯುವಕ ಹೇಳುವಂತೆ, ನಾನು ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ತನ್ನ ಬಳಿ ಕಾರು ಬಂದು ನಿಂತಿತು. ಕಾರಿನೊಳಗಿದ್ದ ಯುವತಿಯೊಬ್ಬಳು ಸ್ಲಿಪ್ ತೋರಿಸಿ ಈ ವಿಳಾಸ ಎಲ್ಲಿದೆ ಎಂದು ವಿಚಾರಿದರು. ನಂತರ ಇದ್ದಕ್ಕಿದ್ದಂತೆ ಕಣ್ಣುಗಳಿಗೆ

ಯುವಕನಿಗೆ ಮದ್ಯ ಕುಡಿಸಿ ಯುವತಿಯರಿಂದ ಅತ್ಯಾಚಾರ Read More »

ದಸರಾ ಗಜಪಡೆಯ ಗೋಪಾಲಸ್ವಾಮಿ ಇನ್ನಿಲ್ಲ| ಕಾಡಾ‌ನೆಯ ಪುಂಡಾಟಕ್ಕೆ ನಾಡಾನೆ ಬಲಿ

ಸಮಗ್ರ ನ್ಯೂಸ್: ನಾಡಹಬ್ಬ ಮೈಸೂರು ದಸರಾದ ಜಂಬೂ ಸವಾರಿಯಲ್ಲಿ ಪಾಲ್ಗೊಂಡಿದ್ದ ಗಜಪಡೆಯ ಗೋಪಾಲಸ್ವಾಮಿ (40) ಆನೆ ಕಾಡಾನೆ ದಾಳಿಗೆ ಬಲಿಯಾಗಿದೆ. ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಹನಗೋಡು ಹೋಬಳಿ ಬಳಿ ಕಾಡಾನೆ ದಾಳಿಯಿಂದ ತೀವ್ರವಾಗಿ ಗಾಯಗೊಂಡು ಗೋಪಾಲಸ್ವಾಮಿ ಆನೆ ಬುಧವಾರ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದೆ. ಗೋಪಾಲಸ್ವಾಮಿ ಆನೆಯನ್ನು ಮೇಯಲು ಬಿಟ್ಟಿದ್ದ ವೇಳೆ ಕೊಡಗಿನ ಭಾಗದಲ್ಲಿ ಪುಂಡಾಟ ನಡೆಸುತ್ತಿದ್ದ ಕಾಡಾನೆ (ಅಯ್ಯಪ್ಪ) ನಡುವೆ ಗುದ್ದಾಟ ನಡೆದಿದೆ. ಅಯ್ಯಪ್ಪ ಆನೆಯ ದಾಳಿಗೆ ಸಿಲುಕಿದ ಗೋಪಾಲಸ್ವಾಮಿಗೆ ಕಾಲು ಮುರಿದಿದೆ. ಈ ವೇಳೆ

ದಸರಾ ಗಜಪಡೆಯ ಗೋಪಾಲಸ್ವಾಮಿ ಇನ್ನಿಲ್ಲ| ಕಾಡಾ‌ನೆಯ ಪುಂಡಾಟಕ್ಕೆ ನಾಡಾನೆ ಬಲಿ Read More »