ರಾಜ್ಯ

ಶಿವಮೊಗ್ಗದಲ್ಲಿ ರೋಹಿತ್ ಚಕ್ರತೀರ್ಥಗೆ ‘ಗೋ ಬ್ಯಾಕ್’ ಬಿಸಿ!!

ಸಮಗ್ರ ನ್ಯೂಸ್: ರಾಷ್ಟ್ರಕವಿ ಕುವೆಂಪು ಅವರಿಗೆ ಅಪಮಾನ ಮಾಡಿದ, ರೋಹಿತ್ ಚಕ್ರತೀರ್ಥ ತೀರ್ಥಹಳ್ಳಿಗೆ ಕಾಲಿಡುವುಡು ಬೇಡ ಎಂದು ಶಿವಮೊಗದಲ್ಲಿ ವಿವಿಧ ಸಂಘಟನೆಗಳಿಂದ ಎಚ್ಚರಿಕೆ ನೀಡಿದ್ದಾರೆ. ಜಿಲ್ಲೆಯಲ್ಲಿ ಕುವೆಂಪು ಸಾಹಿತ್ಯ ಮತ್ತು ರಾಷ್ಟ್ರೀಯತೆ ವಿಷಯ ಕುರಿತು ಮುಖ್ಯ ಭಾಷಣ ಮಾಡಲು ರೋಹಿತ್ ಚಕ್ರತೀರ್ಥ ತೀರ್ಥಹಳ್ಳಿಗೆ ಭೇಟಿ ಆಗಮಿಸುವ ಮುನ್ನವೇ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ. ತೀರ್ಥಹಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಪ್ರಗತಿಪರ ಸಂಘಟನೆಗಳ ಒಕ್ಕೂಟ, ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷರಾಗಿದ್ದ ರೋಹಿತ್ ಚಕ್ರತೀರ್ಥ ರಾಷ್ಟ್ರ, […]

ಶಿವಮೊಗ್ಗದಲ್ಲಿ ರೋಹಿತ್ ಚಕ್ರತೀರ್ಥಗೆ ‘ಗೋ ಬ್ಯಾಕ್’ ಬಿಸಿ!! Read More »

ಜನಾರ್ಧನ ರೆಡ್ಡಿ ಬಳಿಕ ಬಳ್ಳಾರಿಯಲ್ಲಿ ರಾಜೀನಾಮೆ ಪರ್ವ ಶುರು| ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ಶೇಖರ್ ದಮ್ಮೂರು ರಿಸೈನ್

ಸಮಗ್ರ ನ್ಯೂಸ್: ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಹಾಗೂ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ, ಜನಾರ್ದನ ರೆಡ್ಡಿ ಬೆಂಬಲಿಗರಾದ ದಮ್ಮೂರು ಶೇಖರ್ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ. ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಹಲವು ವರ್ಷಗಳಿಂದ ಭಾರತೀಯ ಜನತಾ ಪಾರ್ಟಿಯಲ್ಲಿ ಸಕ್ರಿಯ ಕಾರ್ಯಕರ್ತನಾಗಿ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ್ದೇನೆ. ಪಕ್ಷ ಕಟ್ಟುವಲ್ಲಿ ನನ್ನ ಅಳಿಲು ಸೇವೆ ಸಲ್ಲಿಸಿದ್ದೇನೆ. ಇಷ್ಟು ವರ್ಷ ಬಿಜೆಪಿಯಲ್ಲಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿದ್ದಕ್ಕೆ ಧನ್ಯವಾದ ಎಂದು ಹೇಳಿದ್ದಾರೆ. ಇತ್ತೀಚೆಗೆ ಜನಾರ್ದನ ರೆಡ್ಡಿ ಅವರು

ಜನಾರ್ಧನ ರೆಡ್ಡಿ ಬಳಿಕ ಬಳ್ಳಾರಿಯಲ್ಲಿ ರಾಜೀನಾಮೆ ಪರ್ವ ಶುರು| ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಸ್ಥಾನಕ್ಕೆ ಶೇಖರ್ ದಮ್ಮೂರು ರಿಸೈನ್ Read More »

ಗುಡ್ ನ್ಯೂಸ್: ಮಂಗಳೂರು- ವಿಜಯಪುರ ರೈಲು ಸೇವೆ ವಿಸ್ತರಣೆ|

ಮಂಗಳೂರು ಜಂಕ್ಷನ್ ಮತ್ತು ವಿಜಯಪುರ ನಡುವೆ ಸಂಪರ್ಕ ನಡೆಸುವ ರೈಲು ಸೇವೆಯನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ. ಪ್ರತಿದಿನ ವಿಜಯಪುರ- ಮಂಗಳೂರು ಜಂಕ್ಷನ್ ನಡುವೆ ರೈಲು ಸಂಚಾರ ನಡೆಸುತ್ತದೆ. ಕರ್ನಾಟಕದ ಕರಾವಳಿ ಮತ್ತು ಉತ್ತರ ಕರ್ನಾಟಕವನ್ನು ಸಂಪರ್ಕಿಸುವ ಏಕೈಕ ರೈಲು ಇದಾಗಿದೆ. ಈ ರೈಲಿಗೆ ಜನರಿಂದ ಸಹ ಉತ್ತಮ ಸ್ಪಂದನೆ ಸಿಕ್ಕಿದೆ. ಹಿಂದಿನ ಆದೇಶದಂತೆ ವಿಜಯಪುರದಿಂದ ಹೊರಡುವ ರೈಲು ನಂಬರ್ 07377 ವಿಜಯಪುರ- ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ರೈಲು ಸೇವೆಯು 31/1/2023ಕ್ಕೆ ಅಂತ್ಯವಾಗಬೇಕಿತ್ತು. ಹೊಸ ಆದೇಶದಂತೆ ರೈಲು

ಗುಡ್ ನ್ಯೂಸ್: ಮಂಗಳೂರು- ವಿಜಯಪುರ ರೈಲು ಸೇವೆ ವಿಸ್ತರಣೆ| Read More »

ಕುಕ್ಕೆ ಸುಬ್ರಹ್ಮಣ್ಯನ ದರ್ಶನ ಪಡೆದ ಕೇಂದ್ರ ಸಚಿವ ಸ್ಮೃತಿ ಇರಾನಿ

ಸಮಗ್ರ ನ್ಯೂಸ್: ಕೇಂದ್ರ ಸರಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಸ್ಮೃತಿ ಇರಾನಿ ಡಿ.27 ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದರು. ಬೆಳಗ್ಗೆ ಕ್ಷೇತ್ರಕ್ಕೆ ಆಗಮಿಸಿದ ಅವರು ಶ್ರೀ ದೇವರ ದರುಶನ ಪಡೆದರು. ಬಳಿಕ ವಿಶೇಷ ಪೂಜೆ ಹಾಗೂ ಮಹಾಭಿಷೇಕ ಸೇವೆ ಮಾಡಿಸಿದರು. ಸಚಿವರು ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರೊಂದಿಗೆ ಕಿರುಷಷ್ಠಿ ಸಭಾಭವನದಲ್ಲಿ ಸಂವಾದ ನಡೆಸಿದರು. ಆ ನಂತರ ಮಧ್ಯಾಹ್ನ ಮಹಾಪೂಜೆಯಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಮ್

ಕುಕ್ಕೆ ಸುಬ್ರಹ್ಮಣ್ಯನ ದರ್ಶನ ಪಡೆದ ಕೇಂದ್ರ ಸಚಿವ ಸ್ಮೃತಿ ಇರಾನಿ Read More »

ಹಾಸನ: ಕೊರಿಯರ್ ಅಂಗಡಿಯಲ್ಲಿ ಮಿಕ್ಸಿ ಬ್ಲಾಸ್ಟ್; ಮಾಲಿಕ ಗಂಭೀರ

ಸಮಗ್ರ ನ್ಯೂಸ್: ಕೊರಿಯರ್ ಅಂಗಡಿಯೊಂದರಲ್ಲಿ ಅನುಮಾನಾಸ್ಪದವಾಗಿ ಮಿಕ್ಸಿ ಬ್ಲಾಸ್ಟ್ ಆದ ಘಟನೆ ಹಾಸನ ನಗರದ ಕುವೆಂಪುನಗರ ಬಡಾವಣೆಯಲ್ಲಿ ನಡೆದಿದೆ. ಘಟನೆಯಲ್ಲಿ ಅಂಗಡಿಯಲ್ಲಿದ್ದ ಶಶಿ ಎಂಬುವವರ ಕೈಗೆ ಮತ್ತು ಹೊಟ್ಟೆ ಭಾಗಕ್ಕೆ ಗಂಭೀರ ಗಾಯಗಳಾಗಿವೆ. ಹಾಸನದ ಕುವೆಂಪುನಗರದ 16ನೇ ಕ್ರಾಸ್‍ನಲ್ಲಿರುವ ಡಿಟಿಡಿಸಿ ಕೊರಿಯರ್ ಅಂಗಡಿಯಲ್ಲಿ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಡಿಟಿಡಿಸಿ ಅಂಗಡಿಗೆ ಮಿಕ್ಸಿ ಪಾರ್ಸಲ್ ಬಂದಿತ್ತು. ಈ ಪಾರ್ಸಲ್ ತೆಗೆದುಕೊಂಡು ಹೋಗಿದ್ದ ವ್ಯಕ್ತಿಯು, ಮಿಕ್ಸಿ, ಜಾರ್ ನಮಗೆ ಬೇಡ ಎಂದು ಅಂಗಡಿ ಮಾಲಕನಿಗೆ ವಾಪಸ್

ಹಾಸನ: ಕೊರಿಯರ್ ಅಂಗಡಿಯಲ್ಲಿ ಮಿಕ್ಸಿ ಬ್ಲಾಸ್ಟ್; ಮಾಲಿಕ ಗಂಭೀರ Read More »

ಮೀನುಗಾರರಿಗೆ ಸಬ್ಸಿಡಿ ಸೀಮೆಎಣ್ಣೆ ಕೊಡದೆ ನಿದ್ದೆ ಮಾಡ್ತಿದೀರಾ? ಸಚಿವ ಎಸ್.ಅಂಗಾರಗೆ ಸಿದ್ದರಾಮಯ್ಯ ಫುಲ್ ಕ್ಲಾಸ್

ಸಮಗ್ರ ನ್ಯೂಸ್: ನಾಡದೋಣಿ ಮೀನುಗಾರರು ಸಂಕಷ್ಟದಲ್ಲಿದ್ದು, ಪರವಾನಗಿ ಇರುವವರಿಗೆ ತಕ್ಷಣವೇ ಸೀಮೆ ಎಣ್ಣೆ ಬಿಡುಗಡೆ ಮಾಡಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಆಗ್ರಹಿಸಿದರು. ಪ್ರಶ್ನೋತ್ತರ ವೇಳೆ ಬಿಜೆಪಿ ಶಾಸಕ ಸುಕುಮಾರ ಶೆಟ್ಟಿ ಅವರ ಪರವಾಗಿ ಸಂಜೀವ್ ಮಠಂದೂರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಬಂದರು ಮತ್ತು ಮೀನುಗಾರಿಕೆ ಸಚಿವ ಎಸ್. ಅಂಗಾರ ಅವರು, ಕೇಂದ್ರ ಸರ್ಕಾರ ನಮಗೆ ಸಬ್ಸಿಡಿ ರೂಪದಲ್ಲಿ ಸೀಮೆ ಎಣ್ಣೆ ನೀಡುವಲ್ಲಿ ವಿಳಂಬವಾಗಿದೆ. ಶೀಘ್ರವಾಗಿ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು. ಆಗ ಇದಕ್ಕೆ

ಮೀನುಗಾರರಿಗೆ ಸಬ್ಸಿಡಿ ಸೀಮೆಎಣ್ಣೆ ಕೊಡದೆ ನಿದ್ದೆ ಮಾಡ್ತಿದೀರಾ? ಸಚಿವ ಎಸ್.ಅಂಗಾರಗೆ ಸಿದ್ದರಾಮಯ್ಯ ಫುಲ್ ಕ್ಲಾಸ್ Read More »

ರಾಜ್ಯ ಸರ್ಕಾರದಿಂದ ಕೊರೊನಾ ಹೊಸ ಗೈಡ್ ಲೈನ್ಸ್ ಬಿಡುಗಡೆ| ಹೊಸ ವರ್ಷಾಚರಣೆಗೆ ಬಿತ್ತು ಟಫ್ ರೂಲ್ಸ್

ಸಮಗ್ರ ನ್ಯೂಸ್: ರಾಜ್ಯ ಸರ್ಕಾರದಿಂದ ಬೆಂಗಳೂರಿಗೆ ಹೊಸ ಗೈಡ್‌ ಲೈನ್ಸ್‌ ರಿಲೀಸ್‌ ಮಾಡಿದೆ. ಇಂದು ಕೋವಿಡ್‌ ಬಗ್ಗೆ ಕುರಿತು ಸಭೆ ನಡೆಸಲಾಗಿತ್ತು ಈ ಸಭೆಯಲ್ಲಿ ಮಾರ್ಗಸೂಚಿ ಬಿಡುಗಡೆಗೊಳಿಸಿದೆ. ಕೊರೊನಾ ನಿಯಂತ್ರಣಕ್ಕೆ ಹಲವು ಕ್ರಮಗಳನ್ನ ಕೈಗೊಳ್ಳಲಾಗಿದೆ. ಎಲ್ಲಾ ಥಿಯೇಟರ್‌ ಗಳಲ್ಲೂ ಮಾಸ್ಕ್‌ ಕಡ್ಡಾಯಗೊಳಿಸಲಾಗಿದೆ. ಶಾಲಾ- ಕಾಲೇಜುಗಳಲ್ಲಿ ಮಾಸ್ಕ್‌ ಕಡ್ಡಾಯವಾಗಿದೆ. ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಕೋವಿಡ್‌ ಸಭೆ ಬಳಿಕ ಸಚಿವ ಆರ್‌ ಅಶೋಕ್‌ ಹೇಳಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಕೋವಿಡ್‌ ನಿಯಮ ಪಾಲನೆ ಮಾಡಬೇಕು. ಕೊರೊನಾ ನಿಯಂತ್ರಣಕ್ಕೆ ಬಿಗಿ

ರಾಜ್ಯ ಸರ್ಕಾರದಿಂದ ಕೊರೊನಾ ಹೊಸ ಗೈಡ್ ಲೈನ್ಸ್ ಬಿಡುಗಡೆ| ಹೊಸ ವರ್ಷಾಚರಣೆಗೆ ಬಿತ್ತು ಟಫ್ ರೂಲ್ಸ್ Read More »

ಒಂದೇ ದಿನದಲ್ಲಿ ದೇಶಾದ್ಯಂತ 196 ಹೊಸ ಕೊರೊನಾ ವೈರಸ್ ಪತ್ತೆ

ಸಮಗ್ರ ನ್ಯೂಸ್: ಕಳೆದ ಇಪ್ಪತ್ನಾಲ್ಕು ಗಂಟೆಗಳಲ್ಲಿ ದೇಶಾದ್ಯಂತ 196 ಹೊಸ ಕೊರೊನಾ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ. ಒಟ್ಟಾರೆ ದೇಶದಲ್ಲಿ ಕೊರೊನಾ ಸೋಂಕಿತರ​ ಸಂಖ್ಯೆ 4.46 ಕೋಟಿಗೆ ಏರಿಕೆಯಾಗಿದೆ. ಪ್ರಸ್ತುತ ಭಾರತದಲ್ಲಿ 3,428 ಸಕ್ರಿಯ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ಮಾಹಿತಿ ನೀಡಿದೆ. ಸದ್ಯಕ್ಕೆ ಕೋವಿಡ್​ ಸೋಂಕಿನ ದೈನಂದಿನ ದರವು 0.56 ಪ್ರತಿಶತದಷ್ಟಿದ್ದು, ವಾರದ ಪಾಸಿಟಿವಿಟಿ ದರ 0.16 ಇದೆ. ಕಳೆದ 24 ಗಂಟೆಗಳಲ್ಲಿ 35,173 ಮಾದರಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಚೇತರಿಕೆ ಪ್ರಮಾಣ

ಒಂದೇ ದಿನದಲ್ಲಿ ದೇಶಾದ್ಯಂತ 196 ಹೊಸ ಕೊರೊನಾ ವೈರಸ್ ಪತ್ತೆ Read More »

ಮಡಿಕೇರಿ: 6000 ಕೊಡವ ಮಂದಿಯಿಂದ ಗಿನ್ನಿಸ್ ದಾಖಲೆ

ಸಮಗ್ರ ನ್ಯೂಸ್: ಗಿನ್ನಿಸ್ ದಾಖಲೆ ನಿರ್ಮಿಸುವ ಉದ್ದೇಶದಿಂದ ವಿರಾಜಪೇಟೆಯ ಬಿಟ್ಟಂಗಾಲದಲ್ಲಿ ಕೊಡವ ಸಮುದಾಯದ 6000ಕ್ಕೂ ಅಧಿಕ ಮಂದಿ ಒಟ್ಟಿಗೆ ಸೇರಿದ್ದರು. ಒಂದೇ ಸೂರಿನಡಿ ಅತಿ ದೊಡ್ಡ ಕುಟುಂಬ ಕೂಟದ ವಿಶ್ವ ದಾಖಲೆಯನ್ನು ಮುರಿಯಲು ಅವರು ಒಟ್ಟುಗೂಡಿದರು. ಕೊಡವ ಕ್ಲಾನ್ ಪೋರ್ಟಲ್ ಈ ಕಾರ್ಯಕ್ರಮ ಆಯೋಜಿಸಿದ್ದು ಇದಕ್ಕೆ ಒಕೂಟ ಎಂದು ಕರೆಯಲಾಯಿತು. ನಾವೆಲ್ಲರೂ ಒಂದೇ ಕುಟುಂಬದವರು ಎಂದು ಸಾಬೀತುಪಡಿಸಲು ಸುಮಾರು 6500 ಜನರು ಒಂದೇ ಸೂರಿನಡಿ ಜಮಾಯಿಸಿದರು ಎಂದು ಕೊಡವ ಕ್ಲಾನ್ ಪೋರ್ಟಲ್ ಸಂಸ್ಥಾಪಕ ಜಿ ಕಿಶೂ ಉತ್ತಪ್ಪ

ಮಡಿಕೇರಿ: 6000 ಕೊಡವ ಮಂದಿಯಿಂದ ಗಿನ್ನಿಸ್ ದಾಖಲೆ Read More »

ಸುರತ್ಕಲ್ ಹತ್ಯೆ ಪ್ರಕರಣ| ಸಿಎಂ ಬೊಮ್ಮಾಯಿ ಜೊತೆ ಚರ್ಚಿಸಿದ ಬಾವಾ!

ಸಮಗ್ರ ನ್ಯೂಸ್: ಮಂಗಳೂರಿನ ಕೃಷ್ಣಾಪುರದಲ್ಲಿ ನಡೆದಿರುವ ಅಬ್ದುಲ್ ಜಲೀಲ್ ಹತ್ಯೆಗೆ ಸಂಬಂಧಿಸಿ ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ ಮೊಯಿದೀನ್ ಬಾವಾ ಅವರು ರಾಜ್ಯ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜೊತೆ ಚರ್ಚಿಸಿದರು. ಈ ವೇಳೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪದೇ ಪದೇ ಶಾಂತಿ ಹದಗೆಡುತ್ತಿದ್ದು ಅಮಾಯಕ ಯುವಕರು ಬಲಿಯಾಗುತ್ತಿರುವುದನ್ನು ಸಿಎಂ ಗಮನಕ್ಕೆ ತಂದರು. ಮುಖ್ಯಮಂತ್ರಿ ಅವರು ಈ ಬಗ್ಗೆ ಕಠಿಣ ಕ್ರಮ ಕೈಗೊಂಡು ಆರೋಪಿಗಳನ್ನು ತಕ್ಷಣವೇ ಬಂಧಿಸುವ ಮೂಲಕ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವವರ ವಿರುದ್ಧ ಕಠಿಣ

ಸುರತ್ಕಲ್ ಹತ್ಯೆ ಪ್ರಕರಣ| ಸಿಎಂ ಬೊಮ್ಮಾಯಿ ಜೊತೆ ಚರ್ಚಿಸಿದ ಬಾವಾ! Read More »