ರಾಜ್ಯ

ಸಕಲೇಶಪುರ: ಖೆಡ್ಡಾಗೆ ಬಿದ್ದ ಮರಿಯಾನೆ| ಕಾರ್ಯಾಚರಣೆಗೆ ಬಂದ ಅರಣ್ಯಾಧಿಕಾರಿಗಳಿಗೆ ಗ್ರಾಮಸ್ಥರಿಂದ ತರಾಟೆ

ಸಮಗ್ರ ನ್ಯೂಸ್: ನಿರಂತರವಾಗಿ ಜನರಿಗೆ ಕಾಟ ನೀಡುತ್ತಿದ್ದ ಮರಿ ಕಾಡಾನೆ ಜನರೇ ತೋಡಿದ್ದ ಕಂದಕಕ್ಕೆ ಬಿದ್ದ ಘಟನೆ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೊಸಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಕಾಡಾನೆಗಳ ಉಪಟಳದಿಂದ ರೋಸಿ ಹೋಗಿದ್ದ ಮಲೆನಾಡು ಭಾಗದ ಜನರು ಶಾಶ್ವತ ಪರಿಹಾರಕ್ಕೆ ಒತ್ತಾಯಿಸುತ್ತಲೇ ಬಂದಿದ್ದರು. ಆದರೆ ಸರ್ಕಾರ ಮಾತ್ರ ಶಾಶ್ವತ ಪರಿಹಾರ ಕಂಡುಹಿಡಿಯದ ಹಿನ್ನಲೆ ಗ್ರಾಮಸ್ಥರು ಒಟ್ಟು ಸೇರಿ ಆನೆ ಸೆರೆಗೆ ದೊಡ್ಡ ಕಂದಕ ತೋಡಿದ್ದಾರೆ. ಸದ್ಯ ಗ್ರಾಮಸ್ಥರು ತೋಡಿದ್ದ ಖೆಡ್ಡಾಕ್ಕೆ ಮರಿಯಾನೆಯೊಂದು ಬಿದ್ದಿದೆ. ಹೊಸಕೊಪ್ಪಲು ಗ್ರಾಮಸ್ಥರು ಕಾಡಾನೆಗಳ ಭೀತಿಯಿಂದಲೇ […]

ಸಕಲೇಶಪುರ: ಖೆಡ್ಡಾಗೆ ಬಿದ್ದ ಮರಿಯಾನೆ| ಕಾರ್ಯಾಚರಣೆಗೆ ಬಂದ ಅರಣ್ಯಾಧಿಕಾರಿಗಳಿಗೆ ಗ್ರಾಮಸ್ಥರಿಂದ ತರಾಟೆ Read More »

ಮಾಜಿ ಸಚಿವ ಅರವಿಂದ ಲಿಂಬಾವಳಿಗೆ ಬಿಗ್ ಶಾಕ್| ಹಣ ವಂಚನೆ ಆರೋಪಿಸಿ ವ್ಯಕ್ತಿ ಹೆಸರು ಬರೆದಿಟ್ಟು ಆತ್ಮಹತ್ಯೆ

ಸಮಗ್ರ ನ್ಯೂಸ್: ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಸೇರಿದಂತೆ 6 ಜನರ ಹೆಸರು ಬರೆದಿಟ್ಟು ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ದಕ್ಷಿಣ ತಾಲೂಕಿನ ನೆಟ್ಟಿಗೆರೆ ಗ್ರಾಮದ ಬಳಿ ನಡೆದಿದೆ. HSR ಲೇಔಟ್ ನಿವಾಸಿ 47 ವರ್ಷದ ಪ್ರದೀಪ್ ತನ್ನ ಕಾರಿನಲ್ಲೇ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಡೆತ್ ​ನೋಟ್​ನಲ್ಲಿ ಮಹದೇವಪುರ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಸೇರಿದಂತೆ ಒಟ್ಟು 6 ಪ್ರಭಾವಿ ರಾಜಕಾರಣಿಗಳ ಹೆಸರನ್ನು ಉಲ್ಲೇಖಿಸಲಾಗಿದೆ. ಮಾಜಿ ಸಚಿವ ಅರವಿಂದ ಲಿಂಬಾವಳಿ, ಜಿ.ರಮೇಶ್

ಮಾಜಿ ಸಚಿವ ಅರವಿಂದ ಲಿಂಬಾವಳಿಗೆ ಬಿಗ್ ಶಾಕ್| ಹಣ ವಂಚನೆ ಆರೋಪಿಸಿ ವ್ಯಕ್ತಿ ಹೆಸರು ಬರೆದಿಟ್ಟು ಆತ್ಮಹತ್ಯೆ Read More »

ಎಸ್ ಸಿಡಿಸಿಸಿ ಬ್ಯಾಂಕ್ ಸಿದ್ಧಾಪುರ ಶಾಖೆಯ ನೂತನ ಕಟ್ಟಡ “ಉತ್ಕೃಷ್ಟ” ಲೋಕಾರ್ಪಣೆ

ಸಮಗ್ರ ನ್ಯೂಸ್: ಎಸ್ ಸಿಡಿಸಿಸಿ ಬ್ಯಾಂಕ್ ಸಿದ್ಧಾಪುರ ಶಾಖೆಯ ನೂತನ ಕಟ್ಟಡ “ಉತ್ಕೃಷ್ಟ” ಇದರ ಉದ್ಘಾಟನೆಯನ್ನು ರವಿವಾರ ಬೈಂದೂರು ಶಾಸಕರು ಬಿ.ಎಂ. ಸುಕುಮಾರ್ ಶೆಟ್ಟಿ ದೀಪ ಬೆಳಗಿಸುವ ಮೂಲಕ ನೆರವೇರಿಸಿದರು. ಎಸ್ ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರು ಬ್ಯಾಂಕ್ ಗಣಕ ಕೊಠಡಿ ಉದ್ಘಾಟಿಸಿದರು. ಬಳಿಕ ಮಾತಾಡಿದ ಬೈಂದೂರು ಶಾಸಕ ಬಿ.ಎಂ. ಸುಕುಮಾರ್ ಶೆಟ್ಟಿ ಅವರು, “ಮೊಳಹಳ್ಳಿ ಶಿವರಾಯರ ಬಳಿಕ ನಾಡು ಕಂಡ ಅದ್ಭುತ ಸಹಕಾರ ಕ್ಷೇತ್ರದ ಧುರೀಣ ಎಂದರೆ ರಾಜೇಂದ್ರ ಕುಮಾರ್

ಎಸ್ ಸಿಡಿಸಿಸಿ ಬ್ಯಾಂಕ್ ಸಿದ್ಧಾಪುರ ಶಾಖೆಯ ನೂತನ ಕಟ್ಟಡ “ಉತ್ಕೃಷ್ಟ” ಲೋಕಾರ್ಪಣೆ Read More »

ಜ.4-8: ಪೂರ್ಣಪ್ರಜ್ಞ ಕಾಲೇಜಿನಲ್ಲಿ ಅಂತರ್ ವಿಶ್ವವಿದ್ಯಾನಿಲಯ ಮಟ್ಟದ ಪುರುಷರ ವಾಲಿಬಾಲ್ ಪಂದ್ಯಾಟ

ಸಮಗ್ರ ನ್ಯೂಸ್: “ಮಂಗಳೂರು ವಿಶ್ವವಿದ್ಯಾಲಯ ಮತ್ತು ಪೂರ್ಣಪ್ರಜ್ಞ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರ ಉಡುಪಿ ಇದರ ಜಂಟಿ ಆಶ್ರಯದಲ್ಲಿ 2022-23ನೇ ಸಾಲಿನ ಅಖಿಲ ಭಾರತ ಅಂತರ್‌ ವಿಶ್ವವಿದ್ಯಾಲಯ ಮಟ್ಟದ ಪುರುಷರ ವಾಲಿಬಾಲ್ ಪಂದ್ಯಾಕೂಟವುಪೂರ್ಣಪ್ರಜ್ಞ ಕಾಲೇಜಿನಲ್ಲಿ ಜನವರಿ 4ರಿಂದ 8ರವರೆಗೆ ನಡೆಯಲಿದೆ. ಐದು ದಿನಗಳ ಕಾಲ ನಡೆಯಲಿರುವ ಈ ಕ್ರೀಡಾಕೂಟದಲ್ಲಿ ಸುಮಾರು ನಾಲ್ಕು ವಲಯಗಳಿಂದ ಹದಿನಾರು ತಂಡಗಳು, ಹದಿನಾರು ತಂಡಗಳಿಂದ ಸುಮಾರು ಇನ್ನೂರ ಐವತ್ತು ಕ್ರೀಡಾಪಟುಗಳು, ನಲವತ್ತು ಜನ ಕ್ರೀಡಾತರಬೇತುದಾರರು, ತಂಡದ ಐವತ್ತು ವ್ಯವಸ್ಥಾಪಕರು ಹಾಗೂ ತೀರ್ಪುಗಾರರು ಭಾಗವಹಿಸಲಿದ್ದಾರೆ”

ಜ.4-8: ಪೂರ್ಣಪ್ರಜ್ಞ ಕಾಲೇಜಿನಲ್ಲಿ ಅಂತರ್ ವಿಶ್ವವಿದ್ಯಾನಿಲಯ ಮಟ್ಟದ ಪುರುಷರ ವಾಲಿಬಾಲ್ ಪಂದ್ಯಾಟ Read More »

ಬಿಗ್ ಬಾಸ್ ಸೀಸನ್ 9 | ತುಳುನಾಡ ಕುವರ ರೂಪೇಶ್ ಶೆಟ್ಟಿ ವಿನ್ನರ್

ಸಮಗ್ರ ನ್ಯೂಸ್: ಖ್ಯಾತ ಕಿರುತೆರೆ ಕಾರ್ಯಕ್ರಮ ಬಿಗ್‌ಬಾಸ್‌ 9 ನೇ ಸೀಸನ್‌ ಗೆ ಅಧಿಕೃತ ತೆರೆ ಬಿದ್ದಿದ್ದು, ಕರಾವಳಿ ಮೂಲದ ನಟ ರೂಪೇಶ್‌ ಶೆಟ್ಟಿ ಅವರು ವಿಜಯಿಯಾಗಿದ್ದಾರೆ. ಹಲವು ತುಳು ಚಲನಚಿತ್ರಗಳಲ್ಲಿ ನಟಿಸಿರುವ ರೂಪೇಶ್‌ ಶೆಟ್ಟಿ, ಕನ್ನಡದ ಇನ್ನೋರ್ವ ನಟ ರಾಕೇಶ್‌ ಅಡಿಗ ಅವರನ್ನು ಹಿಂದೆ ತಳ್ಳಿ ಬಿಗ್‌ ಬಾಸ್‌ ವಿನ್ನರ್‌ ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಬಿಗ್ ಬಾಸ್ ಸೀಸನ್ 9 | ತುಳುನಾಡ ಕುವರ ರೂಪೇಶ್ ಶೆಟ್ಟಿ ವಿನ್ನರ್ Read More »

”ತೆಂಗಿನಮರವನ್ನೂ ಹತ್ತುವೆ, ಸಮುದ್ರವನ್ನೂ ಈಜುವೆ” | ಟೀಕಾಕಾರರ ಕಿವಿಹಿಂಡಿದ ಸಚಿವ ಎಸ್.ಅಂಗಾರ

ಸಮಗ್ರ ನ್ಯೂಸ್: ‘ನನ್ನ ಬಗ್ಗೆ ಯಾರೂ ಕೇವಲವಾಗಿ ಮಾತನಾಡಬೇಕಿಲ್ಲ. ನಾನು ರಾಜಕೀಯ ಹೊರತಾಗಿಯೂ ಜನಸಾಮಾನ್ಯನಂತೆ ಕೆಲಸದಲ್ಲಿ ತೊಡಗಿಕೊಳ್ಳಲು ಹೇಸುವವನಲ್ಲ, ನಾನು ಈಗಲೂ ತೆಂಗಿನಮರ ಏರಬಲ್ಲೆ, ಸಮುದ್ರಕ್ಕೆ ತಳ್ಳಿದರೂ ಈಜಿ ದಡ ಸೇರುವೆ’ ಎಂದು ಬಂದರು, ಹಾಗೂ‌ ಮೀನುಗಾರಿಕೆ ಸಚಿವ ಎಸ್.ಅಂಗಾರ ಹೇಳಿದರು. ಅವರು ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಗುತ್ತಿಗಾರು ಸರ್ಕಾರಿ ಪ್ರೌಢಶಾಲೆಯ ಸುವರ್ಣ ಮಹೋತ್ಸವದಲ್ಲಿ ಮಾತನಾಡುತ್ತಾ, ‘ಸಚಿವನಾಗಿ ನಾನು ಕಾರ್ಯಕ್ಷೇತ್ರದಲ್ಲಿ ಬಹಳಷ್ಟು ಕೆಲಸಗಳನ್ನು ಮಾಡಿದ್ದೇನೆ, ಮುಂದೆಯೂ ಮಾಡಬಲ್ಲೆ, ನನ್ನನ್ನು ಯಾರೂ ಕೇವಲವೆಂದು ಭಾವಿಸಬಾರದು, ರಾಜಕೀಯ ಹೊರತಾಗಿಯೂ

”ತೆಂಗಿನಮರವನ್ನೂ ಹತ್ತುವೆ, ಸಮುದ್ರವನ್ನೂ ಈಜುವೆ” | ಟೀಕಾಕಾರರ ಕಿವಿಹಿಂಡಿದ ಸಚಿವ ಎಸ್.ಅಂಗಾರ Read More »

ರಾಮ ಮತ್ತು ಹನುಮಂತ ಬಿಜೆಪಿಯ ಕಾಪಿರೈಟ್ ಅಲ್ಲ| ಕೇಸರಿ ಪಾಳಯದ ಕಾಲೆಳೆದ‌ ಉಮಾಭಾರತಿ

ಸಮಗ್ರ ನ್ಯೂಸ್: ಭಗವಾನ್ ರಾಮ ಮತ್ತು ಹನುಮಂತನ ಭಕ್ತಿ ಬಿಜೆಪಿಯ ಏಕಸ್ವಾಮ್ಯವಲ್ಲ. ಇತರರು ಶ್ರೀರಾಮ ಅಥವಾ ಹನುಮಂತನ ಭಕ್ತರಾಗಿರಲು ಸಾಧ್ಯವಿಲ್ಲ ಎಂದು ಬಿಜೆಪಿಯವರು ತಪ್ಪು ಕಲ್ಪನೆ ಹೊಂದಿರಬಾರದು ಎಂದು ಬಿಜೆಪಿ ನಾಯಕಿ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾಭಾರತಿ ಹೇಳಿದ್ದಾರೆ. ಉಮಾಭಾರತಿ ಅವರ ಈ ಹೇಳಿಕೆಯಿಂದಾಗಿ ಪಕ್ಷಕ್ಕೆ ತೀವ್ರ ಮುಜುಗರವನ್ನುಂಟು ಮಾಡಿದೆ. ದೇವರುಗಳು ಯಾವುದೋ ಒಂದು ಜಾತಿ ಮತ್ತು ಧರ್ಮಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ರಾಮ ಮತ್ತು ಹನುಮಂತ ಬಿಜೆಪಿ ಕಾರ್ಯಕರ್ತರಿಗೆ ಸೇರಿದವರಲ್ಲ. ಭೂಮಿ ಮೇಲೆ ಮನುಷ್ಯರು ಹುಟ್ಟುವುದಕ್ಕೂ

ರಾಮ ಮತ್ತು ಹನುಮಂತ ಬಿಜೆಪಿಯ ಕಾಪಿರೈಟ್ ಅಲ್ಲ| ಕೇಸರಿ ಪಾಳಯದ ಕಾಲೆಳೆದ‌ ಉಮಾಭಾರತಿ Read More »

ಬಾಂಗ್ಲಾ ಗಡಿಯಲ್ಲಿ ಮರಿ ಹಾಕಿದ ಬಿಎಸ್ಎಫ್ ಸ್ನೀಪರ್ ನಾಯಿ| ತನಿಖೆಗೆ ಆದೇಶಿಸಿದ ಕೋರ್ಟ್

ಸಮಗ್ರ ನ್ಯೂಸ್: ಬಾಂಗ್ಲಾದೇಶದ ಗಡಿಭಾಗದಲ್ಲಿ ನಿಯೋಜಿಸಲಾಗಿದ್ದ ಸ್ನಿಫರ್​ ನಾಯಿ ಮೂರು ಮರಿಗಳಿಗೆ ಜನ್ಮ ನೀಡಿದೆ. ಆದರೆ ನಿಯಮಗಳ ಪ್ರಕಾರ ಇಂತಹ ಘಟನೆ ನಡೆಯಬಾರದು. ಇದೀಗ ತನಿಖೆಗಾಗಿ ಕೋರ್ಟ್​ ಕಮಿಟಿ ಕೂಡ ರಚಿಸಲಾಗಿದೆ. ಮೇಘಾಲಯದ ಶಿಲ್ಲಾಂಗ್ ಪ್ರದೇಶದ ಬಾಂಗ್ಲಾದೇಶ ಗಡಿಯಲ್ಲಿರುವ ಬಾರ್ಡರ್ ಔಟ್‌ಪೋಸ್ಟ್‌ನಲ್ಲಿ ನಿಯೋಜಿಸಲಾಗಿದ್ದ ಬಿಎಸ್‌ಎಫ್ ಸ್ನಿಫರ್ ನಾಯಿ ಮೂರು ಮರಿಗಳಿಗೆ ಹೇಗೆ ಜನ್ಮ ನೀಡಿತು ಎಂಬುದರ ಕುರಿತು ನ್ಯಾಯಾಲಯಕ್ಕೆ ವಿಚಾರಣೆಗೆ ಆದೇಶಿಸಿದೆ. ನಿಯಮಗಳ ಪ್ರಕಾರ, ಬಿಎಸ್​ಎಫ್​ ನಾಯಿ ಹೈ-ಸೆಕ್ಯುರಿಟಿ ವಲಯದಲ್ಲಿ ಅದರ ನಿರ್ವಾಹಕರ ನಿರಂತರ ಜಾಗರೂಕತೆ ಮತ್ತು

ಬಾಂಗ್ಲಾ ಗಡಿಯಲ್ಲಿ ಮರಿ ಹಾಕಿದ ಬಿಎಸ್ಎಫ್ ಸ್ನೀಪರ್ ನಾಯಿ| ತನಿಖೆಗೆ ಆದೇಶಿಸಿದ ಕೋರ್ಟ್ Read More »

ನನಗೆ ದಾರಿ ತೋರಿಸುತ್ತಿರುವ ಬಿಜೆಪಿಯನ್ನು ನನ್ನ ಗುರು ಎಂದು ಪರಿಗಣಿಸುತ್ತೇನೆ:ರಾಹುಲ್ ಗಾಂಧಿ

ನವದೆಹಲಿ: ನನಗೆ ದಾರಿ ತೋರಿಸುತ್ತಿರುವ ಬಿಜೆಪಿಯನ್ನು ನನ್ನ ಗುರು ಎಂದು ಪರಿಗಣಿಸುತ್ತೇನೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ನಮ್ಮ ಮೇಲೆ ಆಕ್ರಮಣಕಾರಿಯಾಗಿ ದಾಳಿ ಮಾಡಬೇಕೆಂದು ನಾನು ಬಯಸುತ್ತೇನೆ, ಇದು ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಭಾರತ್ ಜೋಡೋ ಯಾತ್ರೆಯ ಬಾಗಿಲು ಎಲ್ಲರಿಗೂ ತೆರೆದಿದೆ, ನಮ್ಮೊಂದಿಗೆ ಸೇರುವುದನ್ನು ನಾವು ತಡೆಯುವುದಿಲ್ಲ ಎಂದರು. ಇನ್ನು ಪ್ರತಿಪಕ್ಷಗಳು ದೂರದೃಷ್ಟಿಯೊಂದಿಗೆ ಸಮರ್ಥವಾಗಿ ನಿಂತರೆ ಚುನಾವಣೆಯಲ್ಲಿ ಗೆಲ್ಲುವುದು ಬಿಜೆಪಿಗೆ ತುಂಬಾ

ನನಗೆ ದಾರಿ ತೋರಿಸುತ್ತಿರುವ ಬಿಜೆಪಿಯನ್ನು ನನ್ನ ಗುರು ಎಂದು ಪರಿಗಣಿಸುತ್ತೇನೆ:ರಾಹುಲ್ ಗಾಂಧಿ Read More »

ಒಂದು ಕೈ ಸ್ವಾದಿನ ಇಲ್ಲದಿದ್ದರೂ ದುಡಿಯುವ ಉತ್ಸಾಹ ಬತ್ತಿಲ್ಲ|ಬಣಕಲ್ ನಲ್ಲೊಬ್ಬರು ಛಲದಂಕಮಲ್ಲ

ಕೊಟ್ಟಿಗೆಹಾರ : ಅಂಗವಿಕಲತೆ ಇದ್ದರೂ ಯಾವುದನ್ನು ಸಾಧಿಸಬಹುದು ಎಂಬುದಕ್ಕೆ ಜೀವಂತ ಉದಾಹರಣೆ ಸ್ವಾಮಿ ನಮ್ಮಲ್ಲಿರುವ ಕೊರತೆಗಳನ್ನು ಮರೆತು ಸಮಸ್ಯೆಗಳೊಂದಿಗೆ ಬದುಕಿ ಸಾದಿಸಿ ತೋರಿಸುವುದು ಜೀವನದ ಸಾರ್ಥಕತೆ. ಛಲವೊಂದಿದ್ದರೆ ಯಾವ ಸಾಧನೆಯನ್ನು ಮಾಡಬಹುದು ಎನ್ನುವುದಕ್ಕೆ ಎಡಗೈ ಅಂಗವಿಕಲತೆ ಹೊಂದಿರುವ ವ್ಯಕ್ತಿಯೊಬ್ಬರ ಸಾಹಸಗಾಥೆಯೇ ಉದಾಹರಣೆ. ಒಂದು ಕೈ ಸ್ವಾದಿನ ಕಳೆದುಕೊಂಡಿದ್ದರೂ ಕೂಡ ಅದನ್ನು ಪರಿಗಣಿಸದೆ ಸ್ವಾವಲಂಬಿ ಬದುಕು ನಡೆಸುತ್ತಿರುವ ಇಂತಹ ಒಬ್ಬ ಛಲಗಾರ ವಿಶೇಷಚೇತನರನ್ನು ಕಾಣಬೇಕಾದರೆ ಬಣಕಲ್ ಗ್ರಾಮಕ್ಕೆ ತೆರಳಬೇಕು ಅಲ್ಲಿ ಕಾಣ ಸಿಗುವ ವ್ಯಕ್ತಿಯೇ ಸ್ವಾಮಿ. ಹಾಸನ ಜಿಲ್ಲೆ

ಒಂದು ಕೈ ಸ್ವಾದಿನ ಇಲ್ಲದಿದ್ದರೂ ದುಡಿಯುವ ಉತ್ಸಾಹ ಬತ್ತಿಲ್ಲ|ಬಣಕಲ್ ನಲ್ಲೊಬ್ಬರು ಛಲದಂಕಮಲ್ಲ Read More »