ರಾಜ್ಯ

ಬೆಂಗಳೂರು: ಮಾರುಕಟ್ಟೆಗೆ ಲಗ್ಗೆ ಇಟ್ಟ‌ ಸ್ವದೇಶಿ BMW X1| ಏನಿದರ ವಿಶೇಷತೆ ಗೊತ್ತಾ?

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಆಯೋಜಿಸಿದ್ದ ಅದ್ಧೂರಿ ಕಾರ್ಯಕ್ರಮದಲ್ಲಿ ನೂತನ ಕಾರು ಬಿಡುಗಡೆ ಮಾಡಲಾಗಿದೆ. ವಿಶೇಷ ಅಂದರೆ ಈ ಕಾರು ಸಂಪೂರ್ಣವಾಗಿ ಮೇಡ್ ಇನ್ ಇಂಡಿಯಾ ಕಾರಾಗಿದೆ. ಚೆನ್ನ ಘಟಕದಲ್ಲಿ BMW X1 ಕಾರು ಉತ್ಪಾದನೆ ಮಾಡಲಾಗಿದೆ. BMW ಭಾರತದ ಅಧ್ಯಕ್ಷ ವಿಕ್ರಮ್ ಪವಾಹ್ ನೂತನ ಕಾರನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದರು. BMW X1 sಡ್ರೈವ್ 18iX ಲೈನ್(ಪೆಟ್ರೋಲ್): 45,90,000 ರೂಪಾಯಿ BMW X1 sಡ್ರೈವ್ 18dM ಸ್ಪೋರ್ಟ್ಸ್ (ಡೀಸೆಲ್): 47,90,000 ರೂಪಾಯಿ ಎಂಬಂತೆ ಎಕ್ಸ್ ಶೋರೂಂ […]

ಬೆಂಗಳೂರು: ಮಾರುಕಟ್ಟೆಗೆ ಲಗ್ಗೆ ಇಟ್ಟ‌ ಸ್ವದೇಶಿ BMW X1| ಏನಿದರ ವಿಶೇಷತೆ ಗೊತ್ತಾ? Read More »

ಹಾವೇರಿ : ಮೈಸೂರಿನ‌ ಹುಲಿ ಇನ್ನಿಲ್ಲ

ಸಮಗ್ರ ನ್ಯೂಸ್: ದನ ಬೆದರಿಸುವ ಸ್ಪರ್ಧೆಯಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದ ಜಿಲ್ಲೆಯ ರಾಣೆಬೆನ್ನೂರಿನ ಮೈಸೂರು ಹುಲಿ ಎಂದೇ ಖ್ಯಾತಿ ಪಡೆದಿದ್ದ ಹೋರಿ ಸಾವನ್ನಪ್ಪಿದೆ. ಕಳೆದ ಹಲವು ದಿನಗಳಿಂದ ಆನಾರೋಗ್ಯದಿಂದ ಬಳಲುತ್ತಿದ್ದ ಮೈಸೂರು ಹುಲಿ ಎಂಬ ಹೆಸರಿನ ಎತ್ತು ಮೃತಪಟ್ಟಿದ್ದು, ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದೆ. ಮೈಸೂರು ಹುಲಿ ಸಾವಿಗೆ ಹೋರಿಯ ಮಾಲೀಕರು, ಅಭಿಮಾನಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಹೋರಿಯು ರಾಣೆಬೆನ್ನೂರು ನಗರದ ಪ್ರಸಿದ್ದ ಕುಸ್ತಿಪಟು ನಂಜಪ್ಪ ಗೂಳಣ್ಣನವರ್ ಅವರ ಮನೆತನಕ್ಕೆ ಸೇರಿತ್ತು. ಕುಸ್ತಿಪಟು ನಂಜಪ್ಪ ಅವರು

ಹಾವೇರಿ : ಮೈಸೂರಿನ‌ ಹುಲಿ ಇನ್ನಿಲ್ಲ Read More »

ಗೋವು ಭಾರತದಲ್ಲಿ ಮಾತ್ರ ಮಾತೆಯಲ್ಲ| ಈ ದೇಶದಲ್ಲಿ ಗೋಮೂತ್ರದಿಂದಲೇ ಸ್ನಾನ ಮಾಡ್ತಾರೆ ಗೊತ್ತಾ?

ಸಮಗ್ರ ನ್ಯೂಸ್: ಗೋವು ಭಾರತೀಯರ ಹೃದಯ ಬಡಿತವಾಗಿದೆ. ಭಾರತದ ಸಂಪೂರ್ಣ ಆಧ್ಯಾತ್ಮಿಕ ಚಿತ್ರಣವು ಹಸುವನ್ನ ಅದರ ಕೇಂದ್ರವಾಗಿ ಹೆಣೆದುಕೊಂಡಿರುವುದು ಕಂಡುಬರುತ್ತದೆ. ಗೋವನ್ನು ಭಾರತದಲ್ಲಿ ಮಾತೆ ಎಂದು ಪೂಜಿಸುತ್ತಾರೆ. ಇಲ್ಲಿ ಗೋವಂತೆ ಮೂರು ದೇವತೆಗಳನ್ನ ಒಂದೇ ಸ್ಥಳದಲ್ಲಿ ಪೂಜಿಸುವ ಒಂದು ರೂಪವಾಗಿದ್ದು, ಗೋವುಗಳಿಂದ ಹೊರಹೊಮ್ಮುವ ಪಂಚಗವ್ಯಗಳನ್ನು ಪಂಚಾಮೃತವೆಂದು ಪರಿಗಣಿಸುವ ಪುಣ್ಯಭೂಮಿ ಇದು. ವೇದಕಾಲದಿಂದಲೂ ಗೋವು ಮನುಕುಲದ ಅದಿದೇವತೆಯಾಗಿದೆ. ಆದರೆ ಭಾರತಕ್ಕಷ್ಟೇ ಗೋವು ಪೂಜನೀಯ ಎಂದು ಭಾವಿಸಿದರೆ ನಿಮ್ಮ ಭಾವನೆ ತಪ್ಪು. ಗೋವನ್ನು ಪೂಜನೀಯವಾಗಿ ಕಾಣುವ ಮತ್ತೊಂದು ದೇಶವಿದೆ. ದಕ್ಷಿಣ

ಗೋವು ಭಾರತದಲ್ಲಿ ಮಾತ್ರ ಮಾತೆಯಲ್ಲ| ಈ ದೇಶದಲ್ಲಿ ಗೋಮೂತ್ರದಿಂದಲೇ ಸ್ನಾನ ಮಾಡ್ತಾರೆ ಗೊತ್ತಾ? Read More »

ಫಾಝಿಲ್ ಹತ್ಯೆ ಪ್ರಕರಣ| ಶರಣ್ ಪಂಪ್ ವೆಲ್ ಹೇಳಿಕೆ ಕುರಿತು ‌ನ್ಯಾಯಾಂಗ ತನಿಖೆಗೆ ಆಗ್ರಹ

ಸಮಗ್ರ ನ್ಯೂಸ್: ತುಮಕೂರಿನಲ್ಲಿ ನಡೆದ ಶೌರ್ಯ ಯಾತ್ರೆ ಕಾರ್ಯಕ್ರಮದಲ್ಲಿ ಪ್ರವೀಣ್ ನೆಟ್ಟಾರ್ ಹತ್ಯೆಗೆ ಪ್ರತೀಕಾರವಾಗಿ ಹಿಂದುತ್ವ ಸಂಘಟನೆಯ ಕಾರ್ಯಕರ್ತರೇ ಫಾಝಿಲ್‌ನನ್ನು ಕೊಲೆ ಮಾಡಿರುವುದಾಗಿ ಬಹಿರಂಗ ಹೇಳಿಕೆ ನೀಡಿರುವ ವಿಹಿಂಪ ಮುಖಂಡ ಶರಣ್ ಪಂಪ್‌ವೆಲ್ ಹೇಳಿಕೆಯ ಬಗ್ಗೆ ನ್ಯಾಯಾಂಗ ತನಿಖೆ ನಡೆಸಬೇಕು ಎಂದು ಜೆಡಿಎಸ್ ದ.ಕ.ಜಿಲ್ಲಾ ಕಾರ್ಯಾಧ್ಯಕ್ಷ ನಝೀರ್ ಉಳ್ಳಾಲ್ ಒತ್ತಾಯಿಸಿದ್ದಾರೆ. ರಾಜ್ಯ ಬಿಜೆಪಿ ಸರಕಾರವು ಹಿಂದುತ್ವವಾದಿ ಸಂಘಟನೆಗೆ ಬೆಂಬಲ ನೀಡುತ್ತಿರುವುದರಿಂದ ಪೊಲೀಸ್ ಇಲಾಖೆಯ ತನಿಖೆಯಲ್ಲಿ ನಿಷ್ಪಕ್ಷಪಾತ ಕಾಣಿಸದು. ಸರಕಾರಿ ಅಧೀನದ ತನಿಖಾ ಸಂಸ್ಥೆಗಳಿಂದ ನ್ಯಾಯ ನಿರೀಕ್ಷಿಸಲು ಸಾಧ್ಯವಿಲ್ಲ.

ಫಾಝಿಲ್ ಹತ್ಯೆ ಪ್ರಕರಣ| ಶರಣ್ ಪಂಪ್ ವೆಲ್ ಹೇಳಿಕೆ ಕುರಿತು ‌ನ್ಯಾಯಾಂಗ ತನಿಖೆಗೆ ಆಗ್ರಹ Read More »

ಜೀವದ ಹಂಗು ತೊರೆದು ಇಬ್ಬರು ಹೆಣ್ಣು ಮಕ್ಕಳ ರಕ್ಷಿಸಿದ KSRTC ಚಾಲಕ|

ಸಮಗ್ರ ನ್ಯೂಸ್: KSRTC ಬಸ್​​ ಚಾಲಕನೋರ್ವ ಕೆರೆಯಲ್ಲಿ ಮುಳುಗುತ್ತಿದ್ದ ಇಬ್ಬರು ಹೆಣ್ಣು ಮಕ್ಕಳನ್ನು ರಕ್ಷಿಸಿ ಮಾನವೀಯತೆ ಮೆರೆದಿರುವ ಘಟನೆ ಶಿರಾ- ನಾಗಪ್ಪನಹಳ್ಳಿ ಗೇಟ್ ಬಳಿ ನಡೆದಿದೆ. ಕೆಎಸ್​​ಆರ್​​ಟಿಸಿ ಬಸ್​​ ಚಾಲಕ ಮಂಜುನಾಥ್​​ ಎಂಬುವವರು ಶಿರಾದಿಂದ ನಾಗಪ್ಪನಹಳ್ಳಿ ಗೇಟ್ ಮಾರ್ಗವಾಗಿ ಬರುತ್ತಿದ್ದಾಗ ಹಂದಿಕುಂಟೆ ಅಗ್ರಹಾರ ಕೆರೆಯಲ್ಲಿ ಇಬ್ಬರು ಹೆಣ್ಣು ಮಕ್ಕಳು ಮುಳುಗುತ್ತಿರುವುದನ್ನು ಗಮನಿಸಿದ್ದಾರೆ. ಕೂಡಲೇ ಎಚ್ಚೆತ್ತುಕೊಂಡ ಬಸ್​​ ಚಾಲಕ ತಮ್ಮ ಜೀವದ ಹಂಗನ್ನು ತೊರೆದು ಕೆರೆಗೆ ಧುಮುಕಿ ಇಬ್ಬರನ್ನು ರಕ್ಷಣೆ ಮಾಡಿದ್ದಾರೆ. ಇನ್ನು ಚಾಲಕನ ಮಾನವೀಯ ಸಮಯೋಚಿತ ಕಾರ್ಯದಿಂದ

ಜೀವದ ಹಂಗು ತೊರೆದು ಇಬ್ಬರು ಹೆಣ್ಣು ಮಕ್ಕಳ ರಕ್ಷಿಸಿದ KSRTC ಚಾಲಕ| Read More »

“ವೀರರ ಸ್ಮರಿಸುವ ಕಾರ್ಯ ನಿರಂತರ”
-ಶಾಸಕ ಭರತ್ ಶೆಟ್ಟಿ

ಸುರತ್ಕಲ್: ಕೋಡಿಕೆರೆಯಲ್ಲಿ ಶಿವಾಜಿ ಫ್ರೆಂಡ್ಸ್ ಸರ್ಕಲ್ ಮತ್ತು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಸಹಯೋಗದಲ್ಲಿ ನಿರ್ಮಿಸಿದ ಶಿವಾಜಿಯ ಪ್ರತಿಮೆ ಹಾಗೂ ಸರ್ಕಲ್ ಅನಾವರಣ ಕಾರ್ಯಕ್ರಮ ಶನಿವಾರ ಸಂಜೆ ನೆರವೇರಿತು. ಉದ್ಘಾಟನೆ ನೆರವೇರಿಸಿ ಮಾತಾಡಿದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಭರತ್ ಶೆಟ್ಟಿ ವೈ. ಅವರು, “ಶಿವಾಜಿ ಮಹಾರಾಜರ ಪ್ರತಿಮೆ ಈ ಭಾಗದಲ್ಲಿ ಸ್ಥಾಪನೆಯಾಗಿರುವುದು ಹೆಮ್ಮೆಯ ವಿಚಾರ. ನಮ್ಮ ದೇಶದ ಮಣ್ಣಿನಲ್ಲಿ ಇಂದು ಪರಿವರ್ತನೆಯ ಯುಗ ಆರಂಭವಾಗಿದೆ. ಪರಿವರ್ತನೆ ಯಾವುದೇ ಒಂದು ವರ್ಗದ ವಿರುದ್ಧವಲ್ಲ. ಶಿವಾಜಿಯ ಸ್ವರೂಪವನ್ನು ಯುವಕರು ತಮ್ಮ

“ವೀರರ ಸ್ಮರಿಸುವ ಕಾರ್ಯ ನಿರಂತರ”
-ಶಾಸಕ ಭರತ್ ಶೆಟ್ಟಿ
Read More »

ಕೊಟ್ಟಿಗೆಹಾರ: ರಾಷ್ಟ್ರರಕ್ಷಣೆಗೆ ಸೌಹಾರ್ದತೆಯ ಸಂಕಲ್ಪ ತೊಡೋಣ: ಇಮಾಮರಾದ ಯಾಸರ್ ಅಘಾತ್ ಕೌಸರಿ

ಸಮಗ್ರ ನ್ಯೂಸ್ :ಜಾತಿ, ಧರ್ಮ,ಭಾಷೆ, ವೇಷ ವಿಧಾನಗಳ ಭೇದವಿಲ್ಲದೇ ಎಲ್ಲರೂ ರಾಷ್ಟ್ರ ರಕ್ಷಣೆಗೆ ಸೌಹಾರ್ದತೆಯ ಸಂಕಲ್ಪ ತೊಡೋಣ ಎಂದು ಸುಳ್ಯ ಪಾಜಪಳ್ಳದ ಜುಮ್ಮಾ ಮಸೀದಿಯ ಇಮಾಮರಾದ ಯಾಸರ್ ಅಘಾತ್ ಕೌಸರಿ ಹೇಳಿದರು. ಚಿಕ್ಕಮಗಳೂರು ಜಿಲ್ಲಾ ಎಸ್‌ಕೆಎಸ್‌ಎಸ್‌ಎಫ್ ವತಿಯಿಂದ ಗುರುವಾರ ಸಂಜೆ ಚಕ್ಕಮಕ್ಕಿಯಲ್ಲಿ ನಡೆದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪ್ರಭಾಷಣ ನೀಡಿ ಮಾತನಾಡಿದರು. ವಿವಿಧ ಧರ್ಮಗಳ ವಿಶ್ವಾಸ, ಆಚಾರ, ಸಂಸ್ಕೃತಿ. ವಿಚಾರ, ಹಬ್ಬ ಎಲ್ಲವೂ ಬೇರೆ ಬೇರೆ ಆಗಿದ್ದರೂ ಕೂಡ ಮನುಷ್ಯತ್ವದಲ್ಲಿ ನಾವೆಲ್ಲರೂ ಸಮಾನರು. ಮನುಷ್ಯ ಶರೀರದಲ್ಲಿ ಹರಿದಾಡುವ

ಕೊಟ್ಟಿಗೆಹಾರ: ರಾಷ್ಟ್ರರಕ್ಷಣೆಗೆ ಸೌಹಾರ್ದತೆಯ ಸಂಕಲ್ಪ ತೊಡೋಣ: ಇಮಾಮರಾದ ಯಾಸರ್ ಅಘಾತ್ ಕೌಸರಿ Read More »

ಭವಾನಿ ರೇವಣ್ಣಗೆ ಬಿಜೆಪಿ ಟಿಕೆಟ್ ನೀಡಲು ಸಿದ್ಧ – ಸಿ.ಟಿ‌ ರವಿ

ಸಮಗ್ರ ನ್ಯೂಸ್: ಹಾಸನ ಜಿಲ್ಲೆಯ ಪ್ರಭಾವಿ ರಾಜಕಾರಿಣಿ, ಜೆಡಿಎಸ್ ನಾಯಕ ಎಚ್​.ಡಿ.ರೇವಣ್ಣ ಅವರ ಪತ್ನಿ ಭವಾನಿ ರೇವಣ್ಣ ಅವರು ಬಿಜೆಪಿಯಿಂದ ಸ್ಪರ್ಧಿಸಲು ಬಯಸಿದರೆ ಟಿಕೆಟ್ ಕೊಡಲು ಸಿದ್ಧ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿ.ಟಿ ರವಿ, ನಾನು ಸಹೋದರಿ ಭವಾನಿಯವರ ಹೇಳಿಕೆಯನ್ನು ಗಮನಿಸಿದ್ದೇನೆ. ಕುಮಾರಸ್ವಾಮಿ ಅವರ ಹೇಳಿಕೆಯನ್ನು ಗಮನಿಸಿದ್ದೇನೆ. ನಾನು ಮನೆಯಲ್ಲಿ ಗಲಾಟೆಯನ್ನು ಹಚ್ಚಿಸಲು ಬಯಸುವುದಿಲ್ಲ. ನನ್ನ ಮನಸ್ಸಿನಲ್ಲಿ ಭವಾನಿ ಅಕ್ಕ ನಮ್ಮ ಪಕ್ಷದಿಂದ ಅಭ್ಯರ್ಥಿಯಾಗಬೇಕು ಎನ್ನುವುದು ಎನ್ನುವ

ಭವಾನಿ ರೇವಣ್ಣಗೆ ಬಿಜೆಪಿ ಟಿಕೆಟ್ ನೀಡಲು ಸಿದ್ಧ – ಸಿ.ಟಿ‌ ರವಿ Read More »

ನಿಮ್ಮನ್ನು ನಂಬಿ ಇನ್ನೂ ಕೋರ್ಟ್ ಗೆ ಅಲೆಯುತ್ತಿದ್ದೇವೆ| ಪರೇಶ್ ಮೇಸ್ತಾ ಪ್ರಕರಣ ಸಂಬಂಧ ತಿರುಗಿ ಬಿದ್ದ ಹಿಂದೂ ಕಾರ್ಯಕರ್ತರು

ಸಮಗ್ರ ನ್ಯೂಸ್: ಹಿಂದೂ ಕಾರ್ಯಕರ್ತ ಪರೇಶ್‌ ಮೇಸ್ತಾ ಸಾವು ಪ್ರಕರಣಕ್ಕೆ ಸಿಬಿಐ ಬಿ ರಿಪೋರ್ಟ್‌ ಸಲ್ಲಿಸಿದ್ದರೂ ಅದರ ಕಾವು ಮಾತ್ರ ಇನ್ನೂ ಆರಿಲ್ಲ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕೆಲವು ಹಿಂದುಪರ ಸಂಘಟನೆಗಳ ಕಾರ್ಯಕರ್ತರು ಇನ್ನೂ ನ್ಯಾಯಾಲಯಕ್ಕೆ ಅಲೆದಾಡುತ್ತಿದ್ದು, ಈಗ ಕುಮಟಾ ಶಾಸಕ ದಿನಕರ ಶೆಟ್ಟಿ ವಿರುದ್ಧ ತಿರುಗಿಬಿದ್ದಿದ್ದಾರೆ. ಹೊನ್ನಾವರದ ಶರಾವತಿ ಸರ್ಕಲ್‌ನಲ್ಲಿ‌ ಸೇರಿದ ಹಿಂದು ಕಾರ್ಯಕರ್ತರು, ಬಿಜೆಪಿ ವಿರುದ್ಧ ತೀವ್ರ ಆಕ್ರೋಶವನ್ನು ಹೊರಹಾಕಿದ್ದಾರೆ. ಇಲ್ಲಿನ ಮೀನುಗಾರರು, ಹಿಂದು ಸಂಘಟನೆಗಳ ಕಾರ್ಯಕರ್ತರು ಸೇರಿದಂತೆ ವಿವಿಧ ಧರ್ಮದ, ಜಾತಿಗಳ ಯುವಕರು

ನಿಮ್ಮನ್ನು ನಂಬಿ ಇನ್ನೂ ಕೋರ್ಟ್ ಗೆ ಅಲೆಯುತ್ತಿದ್ದೇವೆ| ಪರೇಶ್ ಮೇಸ್ತಾ ಪ್ರಕರಣ ಸಂಬಂಧ ತಿರುಗಿ ಬಿದ್ದ ಹಿಂದೂ ಕಾರ್ಯಕರ್ತರು Read More »

ಗುಜರಾತ್ ಗಲಭೆಗೆ ಮುಖ್ಯಮಂತ್ರಿ ನರೇಂದ್ರ ಮೋದಿಯೇ ಹೊಣೆ – ದಿ ಕ್ಯಾರವಾನ್

ಸಮಗ್ರ ನ್ಯೂಸ್: ಗುಜರಾತ್ ನಲ್ಲಿ 2002ರಲ್ಲಿ ಸಂಭವಿಸಿದ್ದ ಗಲಭೆಗಳ ಕುರಿತು ಬ್ರಿಟಿಷ್ ಸರಕಾರವು ನಡೆಸಿದ್ದ ತನಿಖೆಯ ವರದಿಯ ಪ್ರತಿಯು ತನಗೆ ಲಭ್ಯವಾಗಿದ್ದು, ಸಂಪೂರ್ಣ ಹಿಂಸಾಚಾರವು ಪೂರ್ವಯೋಜಿತವಾಗಿತ್ತು ಎನ್ನುವುದನ್ನು ಅದು ಬೆಟ್ಟು ಮಾಡಿದೆ ಎಂದು ‘The Caravan’ ಬಹಿರಂಗಗೊಳಿಸಿದೆ. ಇತ್ತೀಚಿನ ಬಿಬಿಸಿಯ (BBC) ಸಾಕ್ಷ್ಯಚಿತ್ರ ‘ಇಂಡಿಯಾ: ದಿ ಮೋದಿ ಕ್ವೆಶ್ಚನ್’ನಲ್ಲಿ ಈ ವರದಿಯನ್ನು ಉಲ್ಲೇಖಿಸಲಾಗಿದೆ. ಹಿಂದು ರಾಷ್ಟ್ರವಾದಿ ಸಂಘಟನೆ ವಿಶ್ವ ಹಿಂದು ಪರಿಷತ್ (VHP) ಈ ಹಿಂಸಾಚಾರವನ್ನು ‘ಯೋಜಿಸಿತ್ತು, ಬಹುಶಃ ತಿಂಗಳುಗಳ ಮೊದಲೇ’ ಎಂದು ಹೇಳಿರುವ ವರದಿಯು, 2002,

ಗುಜರಾತ್ ಗಲಭೆಗೆ ಮುಖ್ಯಮಂತ್ರಿ ನರೇಂದ್ರ ಮೋದಿಯೇ ಹೊಣೆ – ದಿ ಕ್ಯಾರವಾನ್ Read More »