ರಾಜ್ಯ

ಮುಲ್ಕಿ: ಹಿಂದೂ – ಮುಸ್ಲಿಂ ಸೌಹಾರ್ದತೆಯ ಕೊಂಡಿ ಬಪ್ಪನಾಡು ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ| ಮನವಿ ಸಲ್ಲಿಸಿದರೂ ನಿರಾಕರಿಸಿದ ಆಡಳಿತ ಮಂಡಳಿ

800 ವರ್ಷಗಳ ಇತಿಹಾಸವಿರುವ ದಕ್ಷಿಣ ಭಾರತದ ಸೌಹಾರ್ದದ ಕೊಂಡಿ ಎಣಿಸಿಕೊಂಡಿರುವ ಮುಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಈ ಬಾರಿಯೂ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ನಡೆಸಲು ನಿರಾಕರಿಸಲಾಗಿದೆ. ಎ.5ರಂದು ಬಪ್ಪನಾಡು ಜಾತ್ರಾ ಮಹೋತ್ಸವಕ್ಕೆ ಧ್ವಜಾರೋಹಣ ನಡೆದು ಪೂಜಾ ಕೈಂಕರ್ಯಗಳು ಆರಂಭಗೊಂಡಿದೆ. ಈ ಮಧ್ಯೆ ಮಂಗಳವಾರ ಜಾತ್ರಾ ಮಹೋತ್ಸವದಲ್ಲಿ ವ್ಯಾಪಾರ ನಡೆಸುವ ಉದ್ದೇಶದಿಂದ ಮುಸ್ಲಿಂ ವ್ಯಾಪಾರಿಗಳು ದೇವಸ್ಥಾನಕ್ಕೆ ತೆರಳಿದ್ದಾರೆ. ಆದರೆ, ಇಲ್ಲಿ ವ್ಯಾಪಾರ ನಡೆಸಲು ಅವಕಾಶವಿಲ್ಲ ಎಂದು ನಿರಾಕರಿಸಿ ವ್ಯಾಪಾರಿಗಳನ್ನು ಹಿಂದೆ ಕಳುಹಿಸಲಾಗದೆ ಎಂದು ವ್ಯಾಪಾರಿಗಳು ದೂರಿದ್ದಾರೆ. ದೇವಸ್ಥಾನದಲ್ಲಿ

ಮುಲ್ಕಿ: ಹಿಂದೂ – ಮುಸ್ಲಿಂ ಸೌಹಾರ್ದತೆಯ ಕೊಂಡಿ ಬಪ್ಪನಾಡು ಜಾತ್ರೆಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ| ಮನವಿ ಸಲ್ಲಿಸಿದರೂ ನಿರಾಕರಿಸಿದ ಆಡಳಿತ ಮಂಡಳಿ Read More »

ನಂದಿನಿಗೆ ಸೆಡ್ಡು ಹೊಡೆದು ಅಮುಲ್ ನಿಂದ ಹಾಲು ಮತ್ತು ಉತ್ಪನ್ನಗಳ ಮಾರಾಟ| ಕನ್ನಡಿಗರಿಂದ ಆಕ್ರೋಶ

ಸಮಗ್ರ ನ್ಯೂಸ್: ನಂದಿನಿ ಬ್ರಾಂಡ್ ಮೂಲಕ ಹಾಲು ಮತ್ತು ಹಾಲಿನ ಉತ್ಪನ್ನಗಳ ಮಾರಾಟ ಮಾಡುತ್ತಿರುವ ಕೆಎಂಎಫ್ ಗೆ ಸೆಡ್ಡು ಹೊಡೆಯಲು ಗುಜರಾತ್ ಮೂಲದ ಅಮುಲ್ ಮುಂದಾಗಿದೆ.ಆನ್ಲೈನ್ ಮೂಲಕ ಹಾಲು, ಮೊಸರು ವಿತರಣೆಗೆ ಗುಜಾರಾತ್ ನ ಅಮೂಲ್ ಸಜ್ಜಾಗಿದೆ. ಇದರ ವಿರುದ್ಧ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸಿದ್ದು, ಸೇವ್ ನಂದಿನಿ ಅಭಿಯಾನ ಆರಂಭಿಸಿದ್ದಾರೆ. ಗೋ ಬ್ಯಾಕ್ ಅಮುಲ್ ಅಭಿಯಾನ ಆರಂಭಿಸಿರುವ ಕನ್ನಡಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬಾಯ್ಕಾಟ್ ಅಮುಲ್ ಸೇವ್ ನಂದಿನಿ ಹ್ಯಾಶ್ ಟ್ಯಾಗ್ ನೊಂದಿಗೆ ಅಭಿಯಾನ ಆರಂಭಿಸಲಾಗಿದೆ. ಅಮುಲ್

ನಂದಿನಿಗೆ ಸೆಡ್ಡು ಹೊಡೆದು ಅಮುಲ್ ನಿಂದ ಹಾಲು ಮತ್ತು ಉತ್ಪನ್ನಗಳ ಮಾರಾಟ| ಕನ್ನಡಿಗರಿಂದ ಆಕ್ರೋಶ Read More »

ಪುತ್ತೂರು: ಶಾಸಕ ಮಠಂದೂರು ವಿರುದ್ದ ಮಾನಹಾನಿಕರ ಲೇಖನ ಪ್ರಕಟಿಸದಂತೆ ತಡೆಯಾಜ್ಞೆ

ಸಮಗ್ರ ನ್ಯೂಸ್ : ಮುದ್ರಣ, ವಿದ್ಯುನ್ಮಾನ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ತನ್ನ ಕುರಿತು ಯಾವುದೇ ಮಾನಹಾನಿಕರ ಲೇಖನಗಳನ್ನು ಪ್ರಕಟಿಸದಂತೆ ಶಾಸಕ ಸಂಜೀವ ಮಠಂದೂರು ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದಾರೆ. ಮುದ್ರಣ, ವಿದ್ಯುನ್ಮಾನ ಮತ್ತು ಡಿಜಿಟಲ್ ಮಾಧ್ಯಮದಲ್ಲಿ ತನ್ನ ಕುರಿತು ಮಾನಹಾನಿಕರ ವರದಿ ಪ್ರಸಾರ ಮಾಡುವುದು, ವೆಬ್ ಹೋಸ್ಟಿಂಗ್ ಮತ್ತು ಹಂಚಿಕೊಳ್ಳುವುದನ್ನು ನಿಷೇಧಿಸಲು ಶಾಶ್ವತ ತಡೆಯಾಜ್ಞೆ ನೀಡುವಂತೆ ಶಾಸಕ ಸಂಜೀವ ಮಠಂದೂರು ಅವರು ಬೆಂಗಳೂರು ಸಿಟಿ ಸಿವಿಲ್ ಕೋರ್ಟಿನಲ್ಲಿ ಮೊಕದ್ದಮೆ ದಾಖಲಿಸಿದ್ದರು. ನಾನು ವಿಧಾನಸಭಾ ಸದಸ್ಯನಾಗಿದ್ದೇನೆ ಮತ್ತು ಚುನಾವಣೆ ಹತ್ತಿರದಲ್ಲಿದೆ.

ಪುತ್ತೂರು: ಶಾಸಕ ಮಠಂದೂರು ವಿರುದ್ದ ಮಾನಹಾನಿಕರ ಲೇಖನ ಪ್ರಕಟಿಸದಂತೆ ತಡೆಯಾಜ್ಞೆ Read More »

ಸುಳ್ಯ : ಎಎಪಿ ಅಭ್ಯರ್ಥಿ ಸುಮನಾ‌ ಅವರಿಂದ ಪ್ರಚಾರ ಆರಂಭ

ಸಮಗ್ರ ನ್ಯೂಸ್: ಸುಳ್ಯ ವಿಧಾನಸಭಾ ಕ್ಷೇತ್ರದ ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿ ಸುಮನಾ ಬೆಳ್ಳಾರ್ಕರ್‌ ಪ್ರಚಾರ ಕಾರ್ಯವನ್ನು ಆರಂಭಿಸಿದ್ದಾರೆ. ಸುಳ್ಯದ ವಿವಿಧ ಪ್ರಮುಖ‌ ಪ್ರದೇಶಗಳಿಗೆ ಒಂದು ಸುತ್ತಿನ ಪ್ರವಾಸ ನಡೆಸಿ, ಸುಳ್ಯದ ಮೂಲಭೂತ ಸಮಸ್ಯೆಗಳ ಕಡೆಗೆ ಗಮನಹರಿಸಿ ಸುಳ್ಯಕ್ಕೆ ಪ್ರತ್ಯೇಕವಾದ ಪ್ರಣಾಳಿಕೆಗೆ ಮಾಹಿತಿ ಸಂಗ್ರಹಿಸಿದರು. ಪ್ರಚಾರ ಕಾರ್ಯದಲ್ಲಿ ಆಮ್‌ ಆದ್ಮಿ ಪಕ್ಷದ ಜಿಲ್ಲಾದ್ಯಕ್ಷ ಅಶೋಕ್‌ ಎಡಮಲೆ, ಪಕ್ಷದ ಪ್ರಮುಖರಾದ ರಾಮಕೃಷ್ಣ ಬೀರಮಂಗಲ, ಖಲಂದರ್‌ ಎಲಿಮಲೆ, ರಶೀದ್‌ ಜಟ್ಟಿಪಳ್ಳ , ಗುರುಪ್ರಸಾದ್‌ ಮೇರ್ಕಜೆ, ಪ್ರಸನ್ನ ಎಣ್ಮೂರು, ಗಣೇಶ್ ಪ್ರಸಾದ್

ಸುಳ್ಯ : ಎಎಪಿ ಅಭ್ಯರ್ಥಿ ಸುಮನಾ‌ ಅವರಿಂದ ಪ್ರಚಾರ ಆರಂಭ Read More »

ಅವಕಾಶ ಇದ್ದಾಗ ಲಿಂಕ್ ಮಾಡ್ಕೋಬೇಕಿತ್ತು; ಈಗ ದಂಡಕ್ಕೆ ಅರಚಿಕೊಂಡ್ರೆ‌ ಏನು ಪ್ರಯೋಜನ? ಆಧಾರ್ – ಪ್ಯಾನ್ ಲಿಂಕ್ ದಂಡವನ್ನು ಸಮರ್ಥಿಸಿಕೊಂಡ ಸಚಿವೆ ನಿರ್ಮಲಾ ಸೀತಾರಾಮನ್

ಸಮಗ್ರ ನ್ಯೂಸ್: ಆಧಾರ್ ಹಾಗೂ ಪ್ಯಾನ್ ನಂಬರ್ ಲಿಂಕ್ ಮಾಡಲು ದಂಡ ವಿಧಿಸಿರುವ ಕ್ರಮವನ್ನು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​ ಅವರು ಸಮರ್ಥಿಸಿಕೊಂಡಿದ್ದಾರೆ. ಅವಕಾಶ ಇದ್ದಾಗ ಆಧಾರ್-ಪ್ಯಾನ್ ಲಿಂಕ್ ಮಾಡಬೇಕಿತ್ತು. ಗಡುವು ಮುಗಿದ ಮೇಲೆ ದಂಡ ಹಾಕಲಾಗಿದೆ. ಈಗ ದಂಡ ಕಟ್ಟಿ ಲಿಂಕ್ ಮಾಡಬೇಕಿದೆ. ಈ‌ ಗಡುವೂ‌ ಮುಗಿದರೆ ದಂಡದ ಪ್ರಮಾಣ ಹೆಚ್ಚಾಗಲಿದೆ. ಇದು ಅನಿವಾರ್ಯ. ಕಾನೂನಾತ್ಮಕವಾಗಿಯೇ ದಂಡ ವಿಧಿಸಲಾಗಿದೆ ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್​ನ ಉಚಿತ ಯೋಜನೆಗಳ ಘೋಷಣೆ ಕುರಿತು ಮಾತನಾಡಿದ ಅವರು

ಅವಕಾಶ ಇದ್ದಾಗ ಲಿಂಕ್ ಮಾಡ್ಕೋಬೇಕಿತ್ತು; ಈಗ ದಂಡಕ್ಕೆ ಅರಚಿಕೊಂಡ್ರೆ‌ ಏನು ಪ್ರಯೋಜನ? ಆಧಾರ್ – ಪ್ಯಾನ್ ಲಿಂಕ್ ದಂಡವನ್ನು ಸಮರ್ಥಿಸಿಕೊಂಡ ಸಚಿವೆ ನಿರ್ಮಲಾ ಸೀತಾರಾಮನ್ Read More »

ವಿಜಯಪುರ: ರಥದಿಂದ ಆಯತಪ್ಪಿ ಬಿದ್ದು ವ್ಯಕ್ತಿ ಸಾವು

ಸಮಗ್ರ ನ್ಯೂಸ್: ರಥೋತ್ಸವದ ವೇಳೆ ಆಯತಪ್ಪಿ ಮೇಲಿಂದ ಬಿದ್ದು ವ್ಯಕ್ತಿಯೋರ್ವ ಸಾವನ್ನಪ್ಪಿರುವ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಗೋಲಗೇರಿಯಲ್ಲಿ ನಡೆದಿದೆ. ಗೋಲಗೇರಿಯ ಗೊಲ್ಲಾಳೇಶ್ವರ ರಥೋತ್ಸವದಲ್ಲಿ ಅವಘಡ ಸಂಭವಿಸಿದೆ. ಗೋಲಗೇರಿ ನಿವಾಸಿ ಮುದುಕಣ್ಣ ಕಾಚಾಪುರ(50) ಮೃತ ದುರ್ದೈವಿ. ಈತ ಮೇಲಿನಿಂದ ಕೆಳಕ್ಕೆ ಬಿದ್ದ ಸಂದರ್ಭದಲ್ಲಿ ರಥದ ಬಳಿ ನಿಂತಿದ್ದ ಮತ್ತೋರ್ವನಿಗೆ ಗಾಯವಾಗಿದೆ. ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲು ಮಾಡಿ, ಚಿಕಿತ್ಸೆಗೆ ಒಳಪಡಿಸಲಾಗಿದೆ. ಮೃತ ಮುದುಕಣ್ಣ ಕಾಚಾಪುರ ಸುಮಾರು 70 ಅಡಿ ಎತ್ತರದ ರಥದ ಮೇಲೇರಿ ಕಳಶ ಕಟ್ಟುತ್ತಿದ್ದ.

ವಿಜಯಪುರ: ರಥದಿಂದ ಆಯತಪ್ಪಿ ಬಿದ್ದು ವ್ಯಕ್ತಿ ಸಾವು Read More »

ಸುಳ್ಯ: ರಾಜಕಾರಣಿಗಳಿಗೆ ಗೇಟಿನೊಳಗೆ ನೋ ಎಂಟ್ರಿ| ಬೋರ್ಡ್ ಹಾಕಿ ಕಿವಿ ಹಿಂಡಿದ ಗ್ರಾಮಸ್ಥ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಅಸೆಂಬ್ಲಿ‌ ಚುನಾವಣೆ ಗರಿಗೆದರಿದೆ. ರಾಜಕಾರಣಿಗಳು ಜನರನ್ನು ಯಾಮಾರಿಸಲು ಪ್ರಯತ್ನಪಟ್ಟರೆ, ಜನರು ಅವರಿಗೆ ಬುದ್ದಿ ಕಲಿಸಲು ಅಣಿಯಾಗ್ತಿದಾರೆ. ವಿವಿಧ ರಾಜಕೀಯ ಪಕ್ಷದ ನಾಯಕರು ಮತದಾರರ ಸೆಳೆಯುವ ಪ್ರಯತ್ನ ಮಾಡುತ್ತಿದ್ದರೆ ಮತ್ತೊಂದೆಡೆ ಜಾಣ ಮತದಾರ ಇದುವರೆಗೆ ತಿರುಗಿ ನೋಡದ ರಾಜಕಾರಣಿಗಳಿಗೆ ಪಾಠ ಕಲಿಸಲು ತುದಿಗಾಲಲ್ಲಿ ನಿಂತಿದ್ದಾರೆ. ಮತದಾನ ನಮ್ಮ ಹಕ್ಕು ಸೂಕ್ತವಾಗಿ ಸ್ಪಂದಿಸದ ಜನಪ್ರತಿನಿಧಿಗಳಿಗೆ ಓಟು ಕೊಡುವುದಿಲ್ಲ ಅನ್ನುವ ಕೂಗು ಸುಳ್ಯ ತಾಲೂಕಿನ ಹಲವು ಕಡೆ ಕೇಳಿ ಬಂದಿದೆ. ಇದೀಗ ಅಜ್ಜಾವರದ ಮುಂಡೋಳಿಮೂಲೆಯಲ್ಲೂ ಇಂಥಹುದ್ದೇ ಒಂದು

ಸುಳ್ಯ: ರಾಜಕಾರಣಿಗಳಿಗೆ ಗೇಟಿನೊಳಗೆ ನೋ ಎಂಟ್ರಿ| ಬೋರ್ಡ್ ಹಾಕಿ ಕಿವಿ ಹಿಂಡಿದ ಗ್ರಾಮಸ್ಥ Read More »

ಮಹಿಳೆ ಜೊತೆಗಿನ ಅಶ್ಲೀಲ ಫೋಟೋ ವೈರಲ್| ದೂರು ದಾಖಲಿಸಿದ ಪುತ್ತೂರು ಶಾಸಕ ಸಂಜೀವ ಮಠಂದೂರು

ಸಮಗ್ರ ನ್ಯೂಸ್: ಪುತ್ತೂರು ಶಾಸಕ ಸಂಜೀವ ಮಠಂದೂರು ಅವರು ನೆಕ್ಕಿಲಾಡಿ ಮೂಲದ ಮಹಿಳೆಯೊಬ್ಬರ ಜತೆ ಆತ್ಮೀಯವಾಗಿರುವ ಕೆಲ ಫೊಟೊಗಳು ಫೇಸ್‌ ಬುಕ್‌, ವಾಟ್ಸಾಪ್‌ ಸಹಿತ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದ್ದು ಈ ಕುರಿತು ಶಾಸಕ ಮಠಂದೂರು ಸೈಬರ್‌ ಕ್ರೈಮ್‌ ಪೊಲೀಸರಿಗೆ ದೂರು ನೀಡಿದ್ದಾರೆ.‌ ಬೆಂಗಳೂರಿನ ಗಾಂಧಿನಗರದಲ್ಲಿರುವ ಅಲಸೂರು ಗೇಟ್‌ ಸೈಬರ್‌ ಕ್ರೈಮ್‌ ಪೊಲೀಸ್‌ ಠಾಣೆಯಲ್ಲಿ ಮಠಂದೂರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ. ಚುನಾವಣಾ ಸಂದರ್ಭ, ಅದರಲ್ಲೂ ಟಿಕೆಟ್‌ ಘೋಷಣೆಗೆ ಪಕ್ಷ ಸಿದ್ದತೆ ನಡೆಸುತ್ತಿರುವ ವೇಳೆ ಮಾನ

ಮಹಿಳೆ ಜೊತೆಗಿನ ಅಶ್ಲೀಲ ಫೋಟೋ ವೈರಲ್| ದೂರು ದಾಖಲಿಸಿದ ಪುತ್ತೂರು ಶಾಸಕ ಸಂಜೀವ ಮಠಂದೂರು Read More »

ಪೋಟೋ ವೈರಲ್ ಬೆನ್ನಲ್ಲೇ ಶಾಸಕರ ಅಶ್ಲೀಲ ವಿಡಿಯೋ ಬಾಂಬ್?! “ಪಿಚ್ಚರ್ ಅಬೀ ಬಾಕಿ ಹೇ” ಎಂದು ಬರೆದುಕೊಂಡ ನೆಟ್ಟಿಗರು

ಸಮಗ್ರ ನ್ಯೂಸ್: ಪುತ್ತೂರು ಶಾಸಕರಾದ ಸಂಜೀವ ಮಠಂದೂರು ಮಹಿಳೆಯೊಬ್ಬರ ಜೊತೆಗಿದ್ದ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು ಇದೀಗ ವೀಡಿಯೊ ವೈರಲ್ ಬಗ್ಗೆ ಮತ್ತೊಂದು ಸುದ್ದಿ ಹರಿದಾಡುತ್ತಿದೆ. ವಿಧಾನ ಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಒಬ್ಬೊಬ್ಬರ ಒಂದೊಂದು ಮುಖವಾಡಗಳು ಹೊರಬೀಳುತ್ತಿದ್ದು ಇದೀಗ ಪುತ್ತೂರು ಶಾಸಕರ ರಾಸಲೀಲೆಯಲ್ಲಿ ತೊಡಗಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ಹರಿದಾಡುತ್ತಿವೆ. ಇದೀಗ ಹೊರಬಿದ್ದಿದ್ದು ಟ್ರೈಲರ್ ಇನ್ನು ಪಿಚ್ಚರ್ ಬಾಕಿ ಇದ್ದು ಅದರ ವೀಡಿಯೋ ಕೂಡ ಇಂದು- ನಾಳೆಯಲ್ಲಿ ಹೊರಬೀಳಲಿದೆಯೆಂದು ಸಾಮಾಜಿಕ ಜಾಲ

ಪೋಟೋ ವೈರಲ್ ಬೆನ್ನಲ್ಲೇ ಶಾಸಕರ ಅಶ್ಲೀಲ ವಿಡಿಯೋ ಬಾಂಬ್?! “ಪಿಚ್ಚರ್ ಅಬೀ ಬಾಕಿ ಹೇ” ಎಂದು ಬರೆದುಕೊಂಡ ನೆಟ್ಟಿಗರು Read More »

ಮಂಗಳೂರು: ದೆಹಲಿ ಮೂಲದ ಯುವತಿ ನಾಪತ್ತೆ…!!

Samagra news: ಹೊಸದಿಲ್ಲಿಯ ಯುವತಿಯೊಬ್ಬಳು ಮಂಗಳೂರಿನಲ್ಲಿ ನಾಪತ್ತೆಯಾಗಿರುವ ಕುರಿತಂತೆ ದೂರು ದಾಖಲಾಗಿದೆ. ನಾಪತ್ತೆಯಾದ ಯುವತಿ ದೀಕ್ಷಿತಾ ಅಲಿಯಾಸ್‌ ರಿಯಾ (20). ಈಕೆ ಅಶೋಕನಗರ ಗೋಕುಲ ಕಲ್ಯಾಣ ಮಂಟಪ ಬಳಿ ತನ್ನ ಬಂಧುಗಳ ಮನೆಯಲ್ಲಿ ಕಳೆದ 5 ವರ್ಷಗಳಿಂದ ನೆಲೆಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ವ್ಯಸ್ತವಾಗಿರುತ್ತಿದ್ದ ಹಿನ್ನೆಲೆಯಲ್ಲಿ ಮನೆಯವರು ಬುದ್ಧಿಮಾತು ಹೇಳಿದ್ದರು ಎನ್ನಲಾಗಿದ್ದು. ಎಪ್ರಿಲ್ 4ರಂದು ಸಂಜೆ 5 ಗಂಟೆಗೆ ಮನೆಯಿಂದ ತೆರಳಿದವರು ಮರಳಿಲ್ಲ. ಚಹರೆ: ಎತ್ತರ 5.1 ಅಡಿ ಎತ್ತರ, ದುಂಡು ಮುಖ ಗೋಧಿ ಮೈಬಣ್ಣ. ಮನೆಯಿಂದ ಹೋಗುವಾಗ

ಮಂಗಳೂರು: ದೆಹಲಿ ಮೂಲದ ಯುವತಿ ನಾಪತ್ತೆ…!! Read More »