ರಾಜ್ಯ

ಸುಳ್ಯ: ಬಿಜೆಪಿ ಚುನಾವಣಾ ಪ್ರಚಾರ| ರಾಷ್ಟ್ರೀಯ, ರಾಜ್ಯ ಮಹಿಳಾ ಮೊರ್ಚಾದ ಅಧ್ಯಕ್ಷೆ, ಜಿಲ್ಲಾ ಮೊರ್ಚಾದ ಪದಾಧಿಕಾರಿಗಳ ಭೇಟಿ

ಸಮಗ್ರ ನ್ಯೂಸ್: ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ದೇವಚಳ್ಳ ಗ್ರಾಮದ ವಿವಿಧ ಭಾಗಗಳಲ್ಲಿ ಚುನಾವಣಾ ಪ್ರಚಾರ ನಡೆಸಲಾಯಿತು. ಗೌರಿಗುಂಡಿ, ವಾಲ್ತಾಜೆ, ಕನ್ನಡಕಜೆ ಭಾಗದಲ್ಲಿ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಹಾಗೂ ರಾಜ್ಯ ಮಹಿಳಾ ಮೊರ್ಚಾದ ಅಧ್ಯಕ್ಷೆ ಗೀತಾ ವಿವೇಕಾನಂದ, ರಾಷ್ಟ್ರೀಯ ಮಹಿಳಾ ಮೊರ್ಚಾದ ಕಾರ್ಯಕಾರಣಿ ಸದಸ್ಯೆ ಆಶ್ವಿನಿ ಮಂಜೇಶ್ವರ, ಜಿಲ್ಲಾ ಅಧ್ಯಕ್ಷೆ ಧನಲಕ್ಷ್ಮಿ ಗಟ್ಟಿ, ಜಿಲ್ಲಾ ಮಹಿಳಾ ಮೊರ್ಚಾ ಕಾರ್ಯದರ್ಶಿ ಸೇವಂತಿ, ಚುನಾವಣಾ ಪ್ರಚಾರವನ್ನು ಮಾಡಿದರು. ಮನೆ ಮನೆ ಭೇಟಿ ಮಾಡಿ ಪ್ರಚಾರ

ಸುಳ್ಯ: ಬಿಜೆಪಿ ಚುನಾವಣಾ ಪ್ರಚಾರ| ರಾಷ್ಟ್ರೀಯ, ರಾಜ್ಯ ಮಹಿಳಾ ಮೊರ್ಚಾದ ಅಧ್ಯಕ್ಷೆ, ಜಿಲ್ಲಾ ಮೊರ್ಚಾದ ಪದಾಧಿಕಾರಿಗಳ ಭೇಟಿ Read More »

ಮತ್ತೊಂದು ಗಂಡಾಂತರದಿಂದ ಪಾರಾದ ಡಿಕೆಶಿ| ಹೆಲಿಪ್ಯಾಡ್ ನಲ್ಲಿ‌ ಕಾಣಿಸಿಕೊಂಡ ಬೆಂಕಿ

ಸಮಗ್ರ ನ್ಯೂಸ್: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಂಚರಿಸುತ್ತಿದ್ದ ಹೆಲಿಕಾಪ್ಟರ್​ಗೆ ಹದ್ದು ಡಿಕ್ಕಿಯಾದ ಘಟನೆ ಇನ್ನೂ ಹಸಿಯಾಗಿರುವಾಗಲೇ ಅವರು ಬಂದಿಳಿದ ಹೆಲಿಪ್ಯಾಡ್​​​ ಬಳಿ ಬೆಂಕಿ ಕಾಣಿಸಿಕೊಂಡಿದೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ರಾಮತೀರ್ಥ ಬಳಿಯ ಹೆಲಿಪ್ಯಾಡ್​ನಲ್ಲಿ ಗುರುವಾರ ಬೆಂಕಿ ಕಾಣಿಸಿಕೊಂಡಿದೆ. ಮೈಸೂರಿನಿಂದ ಹೊನ್ನಾವರಕ್ಕೆ ಹೆಲಿಕಾಪ್ಟರ್​​ನಲ್ಲಿ ತೆರಳಿದ್ದ ಶಿವಕುಮಾರ್ ಅವರು ರಾಮತೀರ್ಥದ ಹೆಲಿಪ್ಯಾಡ್​ಗೆ ಬಂದಿಳಿದರು. ಈ ವೇಳೆ, ಹೆಲಿಪ್ಯಾಡ್​ನ ಬಳಿಯ ಹುಲ್ಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಹೆಲಿಕಾಪ್ಟರ್​ಗೆ ಸಿಗ್ನಲ್​​ ಕೊಡುವ ಸ್ಮೋಕ್​ ಕ್ಯಾಂಡಲ್​ನಿಂದ ಬೆಂಕಿ ಆವರಿಸಿದೆ ಎಂದು ಹೇಳಲಾಗುತ್ತಿದೆ. ಹುಲ್ಲಿಗೆ

ಮತ್ತೊಂದು ಗಂಡಾಂತರದಿಂದ ಪಾರಾದ ಡಿಕೆಶಿ| ಹೆಲಿಪ್ಯಾಡ್ ನಲ್ಲಿ‌ ಕಾಣಿಸಿಕೊಂಡ ಬೆಂಕಿ Read More »

ಹುಣಸೂರು: ಬಲ ಕಳೆದುಕೊಳ್ಳುತ್ತಿದ್ದಾನೆ ಬಲರಾಮ| 14 ಬಾರಿ ಅಂಬಾರಿ ಹೊತ್ತ ಬಲರಾಮ ತೀವ್ರ ಅಸ್ವಸ್ಥ

ಸಮಗ್ರ ನ್ಯೂಸ್: ಮೈಸೂರು ದಸರಾದಲ್ಲಿ 14 ಬಾರಿ ಅಂಬಾರಿ ಹೊತ್ತಿರುವ ಬಲರಾಮ ತೀವ್ರ ಅಸ್ವಸ್ಥಗೊಂಡಿದ್ದು, ನಾಗರಹೊಳೆ ಉದ್ಯಾನದ ಹುಣಸೂರು ರೇಂಜ್‌ ವ್ಯಾಪ್ತಿಯ ಭೀಮನಕಟ್ಟೆ ಆನೆ ಶಿಬಿರದಲ್ಲಿ ಪಶು ವೈದ್ಯರ ತಂಡ ಚಿಕಿತ್ಸೆ ನೀಡುತ್ತಿದೆ. 67 ವರ್ಷದ ಬಲರಾಮನಿಗೆ ಹತ್ತು ದಿನಗಳಿಂದ ಬಾಯಿಯಲ್ಲಿ ಹುಣ್ಣಾಗಿ ನಿತ್ರಾಣಗೊಂಡಿದೆ. ಇದು ಟಿಬಿ ಇರಬಹುದೆಂದು ಶಂಕಿಸಲಾಗಿದೆ. ಆಹಾರ ಸೇವಿಸಲು, ನೀರು ಕುಡಿಯಲು ಆಗದಂತಹ ಸ್ಥಿತಿ ಉಂಟಾಗಿದ್ದರಿಂದ ನಾಗರಹೊಳೆ ಪಶುವೈದ್ಯ ಡಾ.ರಮೇಶ್‌ ಸ್ಥಳದಲ್ಲೇ ಠಿಕಾಣಿ ಹೂಡಿ ಚಿಕಿತ್ಸೆ ನೀಡುತ್ತಿದ್ದಾರೆ. ನಾಗರಹೊಳೆ ಮುಖ್ಯಸ್ಥ ಹರ್ಷಕುಮಾರ್‌ ಚಿಕ್ಕನರಗುಂದ

ಹುಣಸೂರು: ಬಲ ಕಳೆದುಕೊಳ್ಳುತ್ತಿದ್ದಾನೆ ಬಲರಾಮ| 14 ಬಾರಿ ಅಂಬಾರಿ ಹೊತ್ತ ಬಲರಾಮ ತೀವ್ರ ಅಸ್ವಸ್ಥ Read More »

ಮತ್ತೆ ಬಂದಿದೆ ಮುಳಿಯ ಚಿನ್ನೋತ್ಸವ| ಮೇ 5ರಿಂದ ಜೂನ್ 3 ರವರೆಗೆ|ವಿಶ್ವಾಸಾರ್ಹ, ಗುಣಮಟ್ಟದ ಚಿನ್ನಾಭರಣಗಳ ಖರೀದಿಗೆ ಸುವರ್ಣಾವಕಾಶ

ಸಮಗ್ರ ನ್ಯೂಸ್: ನಮ್ಮೂರಿನ ಚಿನ್ನದ ಹಬ್ಬ- ಮುಳಿಯ ಚಿನ್ನೋತ್ಸವ- ವೆರೈಟಿ ವಿನ್ಯಾಸದ ಚಿನ್ನಾಭರಣಗಳ ಹಬ್ಬ ಮತ್ತೆ ಬಂದಿದ್ದು, ನಾಡಿನ ಹೆಸರಾಂತ ಚಿನ್ನಾಭರಣಗಳ ಸಂಸ್ಥೆ ಮುಳಿಯ ಜ್ಯುವೆಲ್ಸ್‌ನ ಚಿನ್ನೋತ್ಸವ ಮೇ 5ರಿಂದ ಜೂನ್ 3ರ ವರೆಗೆ ನಡೆಯಲಿದೆ. ಗ್ರಾಹಕರಿಗೆ ತಮ್ಮ ಆಯ್ಕೆಯ ಚಿನ್ನಾಭರಣವನ್ನು ಖರೀದಿಸಿ ಸಂಭ್ರಮಿಸಲು ಇದೊಂದು ಸುವರ್ಣಾವಕಾಶ ಮುಳಿಯ ಚಿನ್ನೋತ್ಸವದಲ್ಲಿ ಇದೀಗ ಲಭ್ಯ. ಅಲ್ಲದೆ ಪ್ರತಿದಿನ ಚಿನ್ನದ ನಾಣ್ಯ ಗೆಲ್ಲುವ ಮತ್ತು ಪ್ರತಿ ಗಂಟೆಗೆ ಬೆಳ್ಳಿಯ ನಾಣ್ಯ ಗೆಲ್ಲುವ ಅವಕಾಶ ಈ ಚಿನ್ನೋತ್ಸವದಲ್ಲಿ ಲಭ್ಯವಿದೆ. ಮುಳಿಯ ಚಿನ್ನೋತ್ಸವದಲ್ಲಿ

ಮತ್ತೆ ಬಂದಿದೆ ಮುಳಿಯ ಚಿನ್ನೋತ್ಸವ| ಮೇ 5ರಿಂದ ಜೂನ್ 3 ರವರೆಗೆ|ವಿಶ್ವಾಸಾರ್ಹ, ಗುಣಮಟ್ಟದ ಚಿನ್ನಾಭರಣಗಳ ಖರೀದಿಗೆ ಸುವರ್ಣಾವಕಾಶ Read More »

Sullia : ಬಿಜೆಪಿ ಅಭ್ಯರ್ಥಿ, ಕಾರ್ಯಕರ್ತರಿಂದ ಗುತ್ತಿಗಾರು ಭಾಗದಲ್ಲಿ ಬಿರುಸಿನ ಪ್ರಚಾರ

ಸಮಗ್ರ ನ್ಯೂಸ್: ಸುಳ್ಯ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ವಿವಿಧ ಭಾಗಗಳಲ್ಲಿ ಚುನಾವಣಾ ಪ್ರಚಾರಕೈಗೊಳ್ಳುತ್ತಿದ್ದು ಇಂದು ಗುತ್ತಿಗಾರು ಭಾಗದಲ್ಲಿ ಪ್ರಚಾರ ಕಾರ್ಯ ನಡೆಸಿದರು. ಬಿಜೆಪಿ ಅಭ್ಯರ್ಥಿ ಭಾಗೀರಥಿ ಮುರುಳ್ಯ ಹಾಗು ಬಿಜೆಪಿ ಕಾರ್ಯಕರ್ತರುಗುತ್ತಿಗಾರು,ಬಳ್ಳಕ್ಕ, ಗಡಿಕಲ್ಲು,ಅಚಲ್ಲಿ ಭಾಗದಲ್ಲಿ ಮನೆ ಮನೆ ಭೇಟಿ ಮಾಡಿ ಪ್ರಚಾರ ನಡೆಸಲಾಯಿತು. ಹಾಗೂ ವಿವಿಧ ಕಡೆಗಳಲ್ಲಿ ಸಭೆ ನಡೆಯಿತು.

Sullia : ಬಿಜೆಪಿ ಅಭ್ಯರ್ಥಿ, ಕಾರ್ಯಕರ್ತರಿಂದ ಗುತ್ತಿಗಾರು ಭಾಗದಲ್ಲಿ ಬಿರುಸಿನ ಪ್ರಚಾರ Read More »

“ಕೊಲ್ಲುವುದಾದರೆ ಕೊಂದುಬಿಡಿ” ಎಂದು ಕಣ್ಣೀರಿಟ್ಟ ವಿನೇಶ್ ಪೋಗಟ್| ಪ್ರತಿಭಟನಾ ಕುಸ್ತಿಪಟುಗಳ ಮೇಲೆ‌ ಪೊಲೀಸರಿಂದ ದೌರ್ಜನ್ಯ ಆರೋಪ

ಸಮಗ್ರ ನ್ಯೂಸ್: ದೆಹಲಿಯ ಜಂತರ್ ಮಂತರ್‌ನಲ್ಲಿ ಕೆಲ ದಿನಗಳಿಂದ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದು, ಬುಧವಾರ ರಾತ್ರಿ ದೆಹಲಿ ಪೊಲೀಸ್ ಸಿಬ್ಬಂದಿ, ಅವರ ಮೇಲೆ ಹಲ್ಲೆ ನಡೆಸಿ ನಿಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಬುಧವಾರ ತಡರಾತ್ರಿ ಪಾನಮತ್ತ ಪೊಲೀಸರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕುಸ್ತಿಪಟುಗಳು ಆರೋಪಿಸಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಮಡಚುವ ಹಾಸಿಗೆಗಳನ್ನು ತರಲು ಬಯಸಿದಾಗ ಪೊಲೀಸರು ತಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಕುಸ್ತಿಪಟುಗಳು ಹೇಳಿದ್ದಾರೆ. ಹಲವು ಕುಸ್ತಿಪಟುಗಳ ತಲೆಗೆ ಪೆಟ್ಟಾಗಿದ್ದು ಇಬ್ಬರಿಗೆ ಗಾಯಗಳಾಗಿವೆ. ಒಬ್ಬ ವ್ಯಕ್ತಿ

“ಕೊಲ್ಲುವುದಾದರೆ ಕೊಂದುಬಿಡಿ” ಎಂದು ಕಣ್ಣೀರಿಟ್ಟ ವಿನೇಶ್ ಪೋಗಟ್| ಪ್ರತಿಭಟನಾ ಕುಸ್ತಿಪಟುಗಳ ಮೇಲೆ‌ ಪೊಲೀಸರಿಂದ ದೌರ್ಜನ್ಯ ಆರೋಪ Read More »

ರಾಜ್ಯದಲ್ಲಿ ನಾಲ್ಕು ದಿನ ಮದ್ಯ ಮಾರಾಟ ಬಂದ್

ಸಮಗ್ರ ನ್ಯೂಸ್: ವಿಧಾನಸಭಾ ಚುನಾವಣೆಗೆ ಮೇ 10 ರ ಬುಧವಾರದಂದು ಮತದಾನ ನಡೆಯಲಿದ್ದು, ಮೇ 13ರ ಶನಿವಾರ ಮತ ಎಣಿಕೆ ನಡೆಯಲಿದೆ. ಮತದಾನ ಹಾಗೂ ಮತ ಎಣಿಕೆ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ನಾಲ್ಕು ದಿನಗಳ ಕಾಲ ಮದ್ಯ ಮಾರಾಟ ಬಂದ್ ಆಗಲಿದೆ. ಮತದಾನ ಹಾಗೂ ಮತ ಎಣಿಕೆ ಹಿನ್ನೆಲೆಯಲ್ಲಿ ಮೇ 8, 9, 10 ಮತ್ತು 13ರಂದು ಮದ್ಯ ಮಾರಾಟ ಬಂದ್ ಆಗಲಿದ್ದು, ಮೇ 8ರ ಬೆಳಿಗ್ಗೆ 6 ಗಂಟೆಯಿಂದಲೇ ಮದ್ಯದಂಗಡಿಗಳು ಬಂದ್ ಆಗಲಿದ್ದು, ಮೇ 10ರ ಮಧ್ಯರಾತ್ರಿ

ರಾಜ್ಯದಲ್ಲಿ ನಾಲ್ಕು ದಿನ ಮದ್ಯ ಮಾರಾಟ ಬಂದ್ Read More »

Weather Report:ಚಂಡಮಾರುತ; ವಾಯುಭಾರ ಕುಸಿತ| ಮೇ.6ರಿಂದ ವ್ಯಾಪಕ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ಕಳೆದ ಒಂದೂವರೆ ತಿಂಗಳಿಂದ ಸೂರ್ಯನ ತಾಪಮಾನ ಹೆಚ್ಚಳದಿಂದ ರಾಜ್ಯದ ಜನತೆ ಸೆಕೆಯಲ್ಲಿ ಬೆಂದು ಬಸವಳಿದಿದ್ದಾರೆ. ಹೀಗಾಗಿ ಜನರು ವರುಣನ ಆಗಮನದಿಂದ ಸಂತಸಗೊಂಡಿದ್ದಾರೆ. ವಾತಾವಾರಣದಲ್ಲಿ ಗಾಳಿ ದಿಕ್ಕಿನ ಬದಲಾವಣೆಯಿಂದಾಗಿ ದಕ್ಷಿಣ ಒಳನಾಡಿನಲ್ಲಿ ಮುಂದಿನ 2 ದಿನ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿ ಮೇ 8 ರಿಂದ 11ರ ವೇಳೆಗೆ ಪೂರ್ವ ಕರಾವಳಿಗೆ ಮೋಚಾ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ. ಇನ್ನು ಈ ಸಮಯದಲ್ಲಿ

Weather Report:ಚಂಡಮಾರುತ; ವಾಯುಭಾರ ಕುಸಿತ| ಮೇ.6ರಿಂದ ವ್ಯಾಪಕ ಮಳೆ ಸಾಧ್ಯತೆ Read More »

ಮೇ.6‌ ಕ್ಕೆ ಸೋನಿಯಾ ಗಾಂಧಿ ಚುನಾವಣಾ ರಂಗಪ್ರವೇಶ| ಹುಬ್ಬಳ್ಳಿಯಲ್ಲಿ ಪ್ರಚಾರಕ್ಕೆ ಅಖಾಡ ಸಿದ್ದ

ಸಮಗ್ರ ನ್ಯೂಸ್: ರಾಜ್ಯ ವಿಧಾನಸಭಾ ಚುನಾವಣಾ ಅಖಾಡಕ್ಕೆ ಸೋನಿಯಾ ಗಾಂಧಿ ಎಂಟ್ರಿ ಕೊಡುತ್ತಿದ್ದು, ಮೇ 6 ರಂದು ಹುಬ್ಬಳ್ಳಿಗೆ ಆಗಮಿಸಲಿದ್ದಾರೆ ಎಂದು ಮೂಲಗಳು ತಿಳಿಸಿದೆ. ಈಗಾಗಲೇ ‌ರಾಹುಲ್, ಪ್ರಿಯಾಂಕಾ, ಖರ್ಗೆ ಸೇರಿದಂತೆ ಕಾಂಗ್ರೆಸ್ ನ ಹಿರಿಯ ನಾಯಕರು ಪ್ರಚಾರ ನಡೆಸುತ್ತಿದ್ದಾರೆ. ಈ ನಡುವೆ ಸೋನಿಯಾ ಗಾಂಧಿ ರಾಜ್ಯದಲ್ಲಿ ಕಾಂಗ್ರೆಸ್ ಚುನಾವಣಾ ರಣಕಹಳೆ ಮೊಳಗಿಸಲಿದ್ದಾರೆ. ಮೇ.6 ರಂದು ಹುಬ್ಬಳ್ಳಿಗೆ ಆಗಮಿಸಿ ಅಲ್ಲಿ ನಡೆಯುವ ಬೃಹತ್ ಸಾರ್ವಜನಿಕ ಸಮಾವೇಶದಲ್ಲಿ ಭಾಗಿಯಾಗಿ ಜನರನ್ನುದ್ದೇಶಿಸಿ ಮಾತನಾಡಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ

ಮೇ.6‌ ಕ್ಕೆ ಸೋನಿಯಾ ಗಾಂಧಿ ಚುನಾವಣಾ ರಂಗಪ್ರವೇಶ| ಹುಬ್ಬಳ್ಳಿಯಲ್ಲಿ ಪ್ರಚಾರಕ್ಕೆ ಅಖಾಡ ಸಿದ್ದ Read More »

ಬೆಳ್ಳಾರೆ: ಸಿಕ್ಕಿದ್ದು ದಕ್ಕದು ಎಂದು ‘ಕಾಮಧೇನು’ವಿನ ಮೇಲೆ ಮೋಸದ ಬಲೆ ಎಸೆದ ದಿವ್ಯಪ್ರಭಾ!? ಪುತ್ತೂರು ಜೆಡಿಎಸ್ ಅಭ್ಯರ್ಥಿ ಮೇಲೆ ಮೋಸ; ವಂಚನೆ ಪ್ರಕರಣ ದಾಖಲು

ಸಮಗ್ರ ನ್ಯೂಸ್: ಕೆಲ ದಿನಗಳ ಹಿಂದೆ ಬೀದಿಗೆ ಬಂದಿದ್ದ ಕಾಮಧೇನು ಮಾಧವ ಗೌಡರ ಮನೆಯ ಕಲಹವು ಇದೀಗ ಮತ್ತೊಂದು ರೀತಿಯಲ್ಲಿ ಬೀದಿಗೆ ಬಂದಿದದ್ದು ಸ್ವಂತ ಪತ್ನಿಯೇ ತನ್ನ ಗಂಡ ಸೇರಿದಂತೆ ಮೂವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪುತ್ತೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ದಿವ್ಯಪ್ರಭಾ ಚಿಲ್ತಡ್ಕ(45) ಮಾಧವ ಗೌಡ(65), ಸ್ಪಂದನ(23), ಪ್ರಕರಣದ ಆರೋಪಿಗಳು. ದೂರು ನೀಡಿರುವ ನವೀನ್ ಎಂಬವರ ಚಿಕ್ಕಮ್ಮ(ಮಾಧವ ಗೌಡರ ಎರಡನೇ ಪತ್ನಿ) ತಾರಾಕುಮಾರಿ, ತಾ.31-12-2020 ರಂದು ತಾರ ಕುಮಾರಿಯವರು ತನ್ನ ಒಡೆತನದಲ್ಲಿ ಕಾಮಧೇನು ಗೋಲ್ಡ್ ಪ್ಯಾಲೇಸ್‌ನ್ನು

ಬೆಳ್ಳಾರೆ: ಸಿಕ್ಕಿದ್ದು ದಕ್ಕದು ಎಂದು ‘ಕಾಮಧೇನು’ವಿನ ಮೇಲೆ ಮೋಸದ ಬಲೆ ಎಸೆದ ದಿವ್ಯಪ್ರಭಾ!? ಪುತ್ತೂರು ಜೆಡಿಎಸ್ ಅಭ್ಯರ್ಥಿ ಮೇಲೆ ಮೋಸ; ವಂಚನೆ ಪ್ರಕರಣ ದಾಖಲು Read More »