ಕಾಂಗ್ರೆಸ್ ಎಂದಿಗೂ ಬಿಜೆಪಿಗೆ ಸಮಾನವಲ್ಲ; ಉಚಿತಗಳಿಗೆ ಮನಸೋಲದೇ ಇದು ಕರುನಾಡ ಜನತೆ ನೀಡಿದ ಭಿಕ್ಷೆಯಿದು ನೆನಪಿರಲಿ
ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ಬಿಜೆಪಿ ಆಡಳಿತವನ್ನು ಕೊನೆಗಾಣಿಸಿ ಕಾಂಗ್ರೆಸ್ ಗೆ 136 ಸ್ಥಾನವನ್ನು ಕೊಟ್ಟು ಜನತೆ ಗೆಲ್ಲಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಹವ್ಯಾಸಿ ಪತ್ರಕರ್ತ ಎಲ್.ಕೆ ಮಂಜುನಾಥ್ ಬರೆದುಕೊಂಡ ಪೇಸ್ ಬುಕ್ ಬರಹವನ್ನು ಯಥಾವತ್ ಪ್ರಕಟಿಸಲಾಗಿದೆ. ಸದ್ಯದ ಕಾಲಘಟ್ಟದಲ್ಲಿ ಇದು ಅರ್ಥಪೂರ್ಣವಾಗಿದೆ – ಸಂ ಕಾಂಗ್ರೆಸ್ ಪಕ್ಷದ ನಾಯಕರು ಹಣಬಲದಿಂದ, ಕಾರ್ಯಕರ್ತರ ಶ್ರಮದಿಂದ, ನೇಮಿಸಿಕೊಂಡ ಏಜೆನ್ಸಿಗಳಿಂದ, ಐದು ಗ್ಯಾರಂಟಿಗಳುಳ್ಳ ಪ್ರಣಾಳಿಕೆಯಿಂದ ಚುನಾವಣೆ ಗೆದ್ದಿದ್ದೇವೆ ಎಂದು ಭಾವಿಸಿಕೊಂಡರೆ, ಮೆರೆದಾಡಿದರೆ ಮುಠ್ಠಾಳತನವಾಗುತ್ತದೆ. ಈ ಯಾವ ಬಲಾಬಲಗಳಲ್ಲೂ ಬಿಜೆಪಿ ಪಕ್ಷಕ್ಕೆ ಕಾಂಗ್ರೆಸ್ ಸರಿಸಮವಾಗಲಾರದು.









