ಗೂನಡ್ಕ :ಕೆಎಸ್‌ಆರ್‌ಟಿಸಿ ಚಾಲಕರ ಬೇಜವಾಬ್ದಾರಿಯುತ ನಡೆ| ಎಸ್‌ಡಿಪಿಐ ಸಂಪಾಜೆ ವತಿಯಿಂದ ಡಿಪೋ ವ್ಯವಸ್ಥಾಪರಿಗೆ ದೂರು| ಸಮಸ್ಯೆ ಸರಿಪಡಿಸದಿದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆ
ಸಮಗ್ರ ನ್ಯೂಸ್: ಸುಳ್ಯ – ಕೊಯನಾಡು ಮಾರ್ಗದಲ್ಲಿ ಹೋಗುವ ಸರ್ಕಾರಿ ಸ್ವಾಮ್ಯದ ಕೆಎಸ್‌ಆರ್‌ಟಿಸಿ ಬಸ್ ಕೆಲವು ಕಡೆಗಳಲ್ಲಿ ಪ್ರಯಾಣಿಕರನ್ನು ಹತ್ತಿಸದೆ ಹಾಗೂ ಇಳಿಸುವಾಗ ಬಸ್ ತಂಗುದಾಣಕ್ಕಿAತ ದೂರ ಇಳಿಸಿ ಪ್ರಯಾಣಿಕರಿಗೆ ಮಾನಸಿಕ ಕಿರುಕುಳ ನೀಡಿ ಬೇಜವಾಬ್ದಾರಿಯುತವಾಗಿ ವರ್ತಿಸುತ್ತಿದ್ದಾರೆ, ಚಾಲಕರ ನಡೆಯಬಗ್ಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಇದರ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಎಸ್‌ಡಿಪಿಐ ಸಂಪಾಜೆ ಗ್ರಾಮ ಸಮಿತಿ ವತಿಯಿಂದ ಕೆ ಎಸ್ ಆರ್ ಟಿ ಸಿ ಸುಳ್ಯ ಡಿಪೋ ವ್ಯವಸ್ಥಾಪಕರಿಗೆ ಲಿಖಿತ ದೂರು ನೀಡಲಾಗಿದೆ.









