ರಾಜ್ಯ

ಉಡುಪಿ: ʻಮೆಸ್ಕಾಂನವರೇ ಕ್ಷಮಿಸಿ ನಮಗೆ ಕರೆಂಟ್‌ ಬಿಲ್‌ ಕೊಡ್ಬೇಡಿ ನಾವು ಕಟ್ಟಲ್ಲʼ ಮೀಟರ್ ಬೋರ್ಡಿನಲ್ಲಿ ಫಲಕ ಅಳವಡಿಕೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ 200 ಯೂನಿಟ್ ಉಚಿತ ವಿದ್ಯುತ್ ನೀಡಲಾಗುತ್ತದೆ ಎಂದು ಚುನಾವಣೆ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ಘೋಷಣೆ ಮಾಡಿತ್ತು. ಸದ್ಯ ಕಾಂಗ್ರೆಸ್ ಪಕ್ಷ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದ್ದು, ನಾವು ಕರೆಂಟ್ ಬಿಲ್ ಕಟ್ಟಲ್ಲವೆಂದು ಜನ ಪಟ್ಟು ಹಿಡಿದಿದ್ದಾರೆ. ಇದೇ ರೀತಿ ʻಮೆಸ್ಕಾಂನವರೇ ಕ್ಷಮೀಸಿ ನಮಗೆ ಕರೆಂಟ್‌ ಬಿಲ್‌ ಕೊಡ್ಬೇಡಿ ನಾವು ಕಟ್ಟಲ್ಲʼ ಎಂದು ಉಡುಪಿಯ ಪೆರಂಪಳ್ಳಿ ನಿವಾಸಿ ವಾಸುದೇವ ಭಟ್ ಎಂಬುವವರು ಮನೆಯಲ್ಲಿ ಬೋರ್ಡ್ ಅಳವಡಿಸಿದ್ದಾರೆ.

ಉಡುಪಿ: ʻಮೆಸ್ಕಾಂನವರೇ ಕ್ಷಮಿಸಿ ನಮಗೆ ಕರೆಂಟ್‌ ಬಿಲ್‌ ಕೊಡ್ಬೇಡಿ ನಾವು ಕಟ್ಟಲ್ಲʼ ಮೀಟರ್ ಬೋರ್ಡಿನಲ್ಲಿ ಫಲಕ ಅಳವಡಿಕೆ Read More »

ಮಂಗಳೂರು: ಗೃಹರಕ್ಷಕರ ಭರ್ತಿಗೆ ಅರ್ಜಿ ಆಹ್ವಾನಸಮಗ್ರ ನ್ಯೂಸ್:ಜಿಲ್ಲಾ ಗೃಹರಕ್ಷಕ ದಳದಿಂದ ಗೃಹರಕ್ಷಕರ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ವಾಹನ ಚಾಲನಾ ಪರವಾನಗಿ ಪಡೆದಿರುವ ಪುರುಷ ಅಭ್ಯರ್ಥಿಗಳಿಗೆ ಆದ್ಯತೆ, ಎಸ್‌ಎಸ್‌ಎಲ್‌ಸಿ ಉತ್ತೀರ್ಣರಾಗಿರುವ ಹಾಗೂ 19 ವರ್ಷದಿಂದ 50 ವರ್ಷದೊಳಗಿನ ಅಭ್ಯರ್ಥಿಗಳು ಸಮಾದೇಷ್ಟರು, ಜಿಲ್ಲಾ ಗೃಹರಕ್ಷಕದಳ, ಮೇರಿಹಿಲ್, ಮಂಗಳೂರು ಇಲ್ಲಿ ಅರ್ಜಿ ಪಡೆದು ಜೂನ್ 15ರೊಳಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 0824&2220562ಗೆ ಕರೆ ಮಾಡುವಂತೆ ಸಮಾದೇಷ್ಟರಾದ ಡಾ.ಮುರುಲೀಮೋಹನ್ ಚೂಂತಾರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಂಗಳೂರು: ಗೃಹರಕ್ಷಕರ ಭರ್ತಿಗೆ ಅರ್ಜಿ ಆಹ್ವಾನಸಮಗ್ರ ನ್ಯೂಸ್:ಜಿಲ್ಲಾ ಗೃಹರಕ್ಷಕ ದಳದಿಂದ ಗೃಹರಕ್ಷಕರ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. Read More »

ಇಂದಿನಿಂದ ರಾಜ್ಯದಲ್ಲಿ ಆನೆಗಣತಿ ಆರಂಭ

ಸಮಗ್ರ ನ್ಯೂಸ್:‌ ದಕ್ಷಿಣದ ರಾಜ್ಯದಲ್ಲಿ ಆನೆಗಣತಿ ಪ್ರಾರಂಭವಾಗಲಿದ್ದು ಇಂದಿನಿಂದ(ಮೇ.17) ಮೂರು ದಿನಗಳವರೆಗೆ ನಡೆಯಲಿದೆ.ಅಖಿಲ ಭಾರತ ಗಣತಿಯನ್ನು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯ (MoEFCC) ಇನ್ನೂ ಘೋಷಿಸದ ಕಾರಣ ಕರ್ನಾಟಕ ಅರಣ್ಯ ಇಲಾಖೆಯು ಈ ಪ್ರಕ್ರಿಯೆಯನ್ನು ಪ್ರಾರಂಭಿಸುವಲ್ಲಿ ಮುಂದಾಳತ್ವ ವಹಿಸಿದೆ. ಗಣತಿಯು ನೇರ ಮತ್ತು ಪರೋಕ್ಷ ಮೌಲ್ಯಮಾಪನ ವಿಧಾನಗಳನ್ನು ಒಳಗೊಂಡಿದ್ದು, ನೀರಿನ ಹೊಂಡಗಳಲ್ಲಿ ಎಣಿಕೆ, ಸಗಣಿ ವಿಶ್ಲೇಷಣೆ, ಸಸ್ಯವರ್ಗ ಮತ್ತು MoEFCC ಪಟ್ಟಿ ಮಾಡಿರುವ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಲಾಗುವುದು ಎಂದು ವನ್ಯಜೀವಿ ಪ್ರಧಾನ ಮುಖ್ಯ ಅರಣ್ಯ

ಇಂದಿನಿಂದ ರಾಜ್ಯದಲ್ಲಿ ಆನೆಗಣತಿ ಆರಂಭ Read More »

ಹವಾಮಾನ ವರದಿ| ಈ ಬಾರಿ ಮುಂಗಾರು ಕೊಂಚ ವಿಳಂಬ| ಜೂ.4ರಂದು ಕೇರಳ ಪ್ರವೇಶ

ಸಮಗ್ರ ನ್ಯೂಸ್: ಕಳೆದ ವರ್ಷ ಮೇ 29ಕ್ಕೆ ಮುಂಗಾರು ರಾಜ್ಯಕ್ಕೆ ಪ್ರವೇಶಿಸಿತ್ತು. 2021 ರಲ್ಲಿ ಜೂನ್ 3, 2020ರಲ್ಲಿ ಜೂನ್ 1, 20019ರಲ್ಲಿ ಜೂನ್ 8 ಹಾಗೂ 2018 ರಲ್ಲಿ ಮೇ 29ಕ್ಕೆ ಕೇರಳಕ್ಕೆ ಮುಂಗಾರು ಆಗಮನವಾಗಿತ್ತು. ಆದರೆ ಈ ಬಾರಿ ಜೂನ್ 4ರ ವೇಳೆಗೆ ಕೇರಳಕ್ಕೆ ಮುಂಗಾರು ಆಗಮನವಾಗಲಿದ್ದು, ನಂತರ ಕರ್ನಾಟಕ ಪ್ರವೇಶಿಸಲಿದೆ. ಈ ವರ್ಷ ವಾಡಿಕೆಯಂತೆ ಮಳೆಯಾಗಲಿದೆ ಎಂದು ಹೇಳಲಾಗಿದೆ. ಸಾಮಾನ್ಯವಾಗಿ ಜೂನ್ 1 ರಂದು ನೈಋತ್ಯ ಮಾನ್ಸೂನ್ ಕೇರಳ ಪ್ರವೇಶಿಸುತ್ತದೆ. ಇದೀಗ ಈ

ಹವಾಮಾನ ವರದಿ| ಈ ಬಾರಿ ಮುಂಗಾರು ಕೊಂಚ ವಿಳಂಬ| ಜೂ.4ರಂದು ಕೇರಳ ಪ್ರವೇಶ Read More »

ರಮಾನಾಥ ರೈ ನಿವೃತ್ತಿಯಾಗಲು ಬಿಡುವುದಿಲ್ಲ – ಖಾದರ್

ಸಮಗ್ರ ನ್ಯೂಸ್: ರಮಾನಾಥ ರೈ ಅವರು ಚುನಾವಣೆ ರಾಜಕೀಯದಿಂದ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಮಾಜಿ‌ ಸಚಿವ ಯು ಟಿ‌ ಖಾದರ್ ಸುದ್ದಿಗೋಷ್ಠಿ ನಡೆಸಿ ರಮಾನಾಥ ರೈ ಅವರನ್ನು ರಾಜಕೀಯದಿಂದ ನಿವೃತ್ತಿಯಾಗಲು ನಾವು ಬಿಡುವುದಿಲ್ಲ ಎಂದು ತಿಳಿಸಿದ್ದಾರೆ. ರಮಾನಾಥ ರೈ ಅವರು ಅತ್ಯಂತ ಹಿರಿಯ ನಾಯಕರು. ಜಿಲ್ಲೆಯ ಅಭಿವೃದ್ಧಿ ಗೆ ಅಪಾರವಾದ ಕೊಡುಗೆಯನ್ನು ಕೊಟ್ಟವರು. ಅತ್ಯಂತ ಪ್ರಾಮಾಣಿಕ ರಾಜಕೀಯ ಮಾಡಿ ಎಲ್ಲರಿಗೂ ಮಾದರಿಯಾಗಿದ್ದಾರೆ. ಅವರು ನಿವೃತ್ತಿ ಯಾಗಲು ಜನತೆ ಮತ್ತು ಪಕ್ಷ ಎಂದಿಗೂ ಬಿಡುವುದಿಲ್ಲ. ರಾಜಕೀಯ ದಲ್ಲಿ ಯಾವಾಗಲೂ

ರಮಾನಾಥ ರೈ ನಿವೃತ್ತಿಯಾಗಲು ಬಿಡುವುದಿಲ್ಲ – ಖಾದರ್ Read More »

ಸುಳ್ಯ ನ.ಪಂ.ನ ಪ್ರಥಮ ಅವಧಿಯ ಅಧಿಕಾರವಧಿ ಮುಕ್ತಾಯ

ಸಮಗ್ರ ನ್ಯೂಸ್: ಸುಳ್ಯ ನಗರ ಪಂಚಾಯತ್‌ನ ಪ್ರಥಮ ಎರಡೂವರೆ ವರ್ಷದ ಅಧ್ಯಕ್ಷ, ಉಪಾಧ್ಯಕ್ಷರ ಅಧಿಕಾರ ಅವಧಿ ಮುಕ್ತಾಯಗೊಂಡಿದ್ದು, ಮುಂದಿನ ಎರಡೂವರೆ ವರ್ಷದ ಅವಧಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಮೀಸಲಾತಿ ಪ್ರಕಟಗೊಳ್ಳಬೇಕಿದೆ. ಸುಳ್ಯ ನಗರ ಪಂಚಾಯತ್‌ನ ಪ್ರಥಮ ಅವಧಿಯ ಎರಡೂವರೆ ವರ್ಷದಲ್ಲಿ ವಿನಯಕುಮಾರ್ ಕಂದಡ್ಕ ಅಧ್ಯಕ್ಷರಾಗಿ ಹಾಗೂ ಉಪಾಧ್ಯಕ್ಷರಾಗಿ ಸರೋಜಿನಿ ಪೆಲತಡ್ಕ ಕಾರ್ಯನಿರ್ವಹಿಸಿದ್ದರು. ಮೇ ೫ಕ್ಕೆ ಅವರ ಅಧಿಕಾರವಧಿ ಮುಕ್ತಾಯಗೊಂಡಿದೆ. ಮುಂದಿನ ನ.ಪಂ.ನ ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಆಗುವಲ್ಲಿವರೆಗೆ ಆಡಳಿತ ನೋಡಿಕೊಳ್ಳಲು ಆಡಳಿತಾಧಿಕಾರಿ ನೇಮಕಗೊಳ್ಳಬೇಕಿದ್ದು, ಶೀಘ್ರ ನೇಮಕವಾಗುವ ನಿರೀಕ್ಷೆಯಿದೆ.

ಸುಳ್ಯ ನ.ಪಂ.ನ ಪ್ರಥಮ ಅವಧಿಯ ಅಧಿಕಾರವಧಿ ಮುಕ್ತಾಯ Read More »

ಸುಳ್ಯ: ಜೀವಬಲಿಗಾಗಿ ಕಾಯುತ್ತಿವೆ ಮೆಸ್ಕಾಂ ವಿದ್ಯುತ್ ಕಂಬಗಳು

ಸಮಗ್ರ ನ್ಯೂಸ್: ವಿದ್ಯುತ್ ಕಂಬಗಳು ತುಕ್ಕು ಹಿಡಿದು ಧರೆಗುರುಳುವ ಸ್ಥಿತಿಯಲ್ಲಿರುವುದು ಸುಳ್ಯ ನಗರದ ಕೆಲವು ಕಡೆಗಳಲ್ಲಿ ಕಂಡುಬಂದಿದೆ. ಸುಳ್ಯ ನಗರದ ವಿವೇಕಾನಂದ ಸರ್ಕಲ್ ಬಳಿ ಅಂಬೆಟಡ್ಕ ಭಾಗದಲ್ಲಿ ಹಾದು ಹೋಗುವ ವಿದ್ಯುತ್ ತಂತಿಗಳಿಗೆ ಅಳವಡಿಸಿರುವ ಕಂಬಗಳು ತುಕ್ಕು ಹಿಡಿದಿರುವುದು ಕಂಡುಬಂದಿದೆ. ಇಲ್ಲಿ ಹೈ ವೋಲ್ಟೇಜ್ ವಿದ್ಯುತ್ ಹಾದುಹೋಗುವುದರಿಂದ ಇದರಿಂದ ಸಮಸ್ಯೆಗಳು ಕಟ್ಟಿಟ್ಟ ಬುತ್ತಿಯಾಗಿದೆ. ಮುಂದಿನ ದಿನಗಳಲ್ಲಿ ಅತಿಯಾದ ಗಾಳಿ ಮಳೆ ಬರುವುದರಿಂದ ಈ ಕಂಬಗಳು ತುಂಡಾಗಿ ನೆಲಕ್ಕೆ ಉರುಳುವ ಸಂಭವ ಕೂಡ ಇದೆ. ಈ ರಸ್ತೆಯಲ್ಲಿ ದಿನದಲ್ಲಿ

ಸುಳ್ಯ: ಜೀವಬಲಿಗಾಗಿ ಕಾಯುತ್ತಿವೆ ಮೆಸ್ಕಾಂ ವಿದ್ಯುತ್ ಕಂಬಗಳು Read More »

ಸುಳ್ಯ: ಅಡ್ತಲೆ – ಮರ್ಕಂಜ ಡಾಂಬರೀಕರಣಗೊಂಡ ರಸ್ತೆಯ ಸ್ಥಿತಿ ದೇವರಿಗೇ ಪ್ರೀತಿ!!

ಸಮಗ್ರ ನ್ಯೂಸ್: ಸುಳ್ಯ ತಾಲೂಕಿನ ಅರಂತೋಡು ಗ್ರಾಮದ ಅಡ್ತಲೆ ರಸ್ತೆಯು ನೂತನವಾಗಿ ಡಾಮರೀಕರಣಗೊಂಡಿದೆ. ಈ ರಸ್ತೆ ಬದಿ ಅರ್ಧ ಅಡಿ ಸಹ ಜಾಗ ಇಲ್ಲ, ಮತ್ತು ವಿದ್ಯುತ್ ಕಂಬಗಳು ರಸ್ತೆಯಲ್ಲಿಯೇ ಇದ್ದು ಪ್ರಯಾಣಿಕರಿಗೆ ಅಪಾಯ ಮಾಡುವಂತಿದೆ. ರಸ್ತೆ ಬದಿಯೇ ಚರಂಡಿ ಮತ್ತು ವಿದ್ಯುತ್ ಕಂಬಗಳು ಇರುವುದರಿಂದ, ಮುಂದೆ ಅಪಾಯಕಾರಿ ಘಟನೆಗಳು ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಲೋಕೋಪಯೋಗಿ ಇಲಾಖೆ ಹಾಗೂ ಮೆಸ್ಕಾಂನಿಂದ ಈ ಬಗ್ಗೆ ಮಳೆಗಾಲ ಆರಂಭಕ್ಕೆ ಮೊದಲು ಕ್ರಮ ಕೈಗೊಳ್ಳಬೇಕು ಎಂಬುದು ಗ್ರಾಮಸ್ಥರ ಬೇಡಿಕೆ. ಈ ರಸ್ತೆಯ

ಸುಳ್ಯ: ಅಡ್ತಲೆ – ಮರ್ಕಂಜ ಡಾಂಬರೀಕರಣಗೊಂಡ ರಸ್ತೆಯ ಸ್ಥಿತಿ ದೇವರಿಗೇ ಪ್ರೀತಿ!! Read More »

ಕಾಂಗ್ರೆಸ್ ಹೈಕಮಾಂಡ್ ಗೆ ಬಿಸಿತುಪ್ಪವಾದ ಸಿಎಂ ಆಯ್ಕೆ| ಡಿ ಕೆ ಶಿವಕುಮಾರ್ ಮತ್ತು‌ ಸಿದ್ದರಾಮಯ್ಯ ‌ಮಧ್ಯೆ ಬಿಗ್ ಫೈಟ್

ಸಮಗ್ರ ನ್ಯೂಸ್: ಕರ್ನಾಟಕದ ಮುಖ್ಯಮಂತ್ರಿ ಸ್ಥಾನದ ತೀವ್ರ ಪೈಪೋಟಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಬೆಂಬಲವನ್ನು ಪಡೆದ ನಂತರ ಸಿದ್ದರಾಮಯ್ಯ ಅವರು ಡಿ.ಕೆ.ಶಿವಕುಮಾರ್‌ ಗಿಂತ ಸಿಎಂ ಸ್ಥಾನಕ್ಕೆ ಹತ್ತಿರವಾಗಿದ್ದಾರೆ. ಆದರೆ, ಮುಖ್ಯಮಂತ್ರಿ ವಿಚಾರದಲ್ಲಿ ಕಾಂಗ್ರೆಸ್ ಉನ್ನತ ನಾಯಕತ್ವ ಇನ್ನೂ ಭಿನ್ನಾಭಿಪ್ರಾಯ ಹೊಂದಿದೆ ಎನ್ನಲಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಅವರು ಸಿಎಂ ಸ್ಥಾನಕ್ಕಾಗಿ ಸಿದ್ದರಾಮಯ್ಯ ಅವರನ್ನು ಬೆಂಬಲಿಸುತ್ತಿದ್ದಾರೆ. ಬಹುತೇಕ ಶಾಸಕರು ಸಿದ್ದರಾಮಯ್ಯ ಅವರನ್ನು ಬೆಂಬಲಿಸುತ್ತಿದ್ದಾರೆ. ಕಾಂಗ್ರೆಸ್ ನಾಯಕಿ

ಕಾಂಗ್ರೆಸ್ ಹೈಕಮಾಂಡ್ ಗೆ ಬಿಸಿತುಪ್ಪವಾದ ಸಿಎಂ ಆಯ್ಕೆ| ಡಿ ಕೆ ಶಿವಕುಮಾರ್ ಮತ್ತು‌ ಸಿದ್ದರಾಮಯ್ಯ ‌ಮಧ್ಯೆ ಬಿಗ್ ಫೈಟ್ Read More »

ಕೋವಿ ಠೇವಣಾತಿ ಇರಿಸಿದ ರೈತರು ವಾಪಾಸ್ ಪಡಕೊಳ್ಳಲು ದ.ಕ ಜಿಲ್ಲಾಧಿಕಾರಿ ಸೂಚನೆ

ಸಮಗ್ರ ನ್ಯೂಸ್: ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಠೇವಣಿ ಇರಿಸಲಾದ ಆಯುಧಗಳನ್ನು ವಾಪಸ್ ಪಡೆಯಲು ದ.ಕ.ಜಿಲ್ಲಾಧಿಕಾರಿ ರವಿಕುಮಾರ್ ಸೂಚನೆ ನೀಡಿದ್ದಾರೆ. ಮೇ.16 ರಿಂದ ಪೊಲೀಸ್ ಆಯುಕ್ತರ ಕಾರ್ಯ ವ್ಯಾಪ್ತಿಯನ್ನು ಹೊರತುಪಡಿಸಿ ಉಳಿದಂತೆ ಜಿಲ್ಲೆಯ ಎಲ್ಲಾ ಆಯುಧ ಪರವಾನಿಗೆದಾರರ ಆಯುಧಗಳನ್ನು ಈಗಾಗಲೇ ಪೊಲೀಸ್ ಠಾಣೆ, ಅಧಿಕೃತ ಕೋವಿ ಹಾಗು ಮದ್ದುಗುಂಡು ವ್ಯಾಪಾರಸ್ಥರಿಂದ ಠೇವಣಿ ಇರಿಸಿರುವುದರಿಂದ ಆಯುಧ ಪರವಾನಿಗೆದಾರರಿಗೆ ಹಿಂಪಡೆಯುವಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಕೋವಿ ಠೇವಣಾತಿ ಇರಿಸಿದ ರೈತರು ವಾಪಾಸ್ ಪಡಕೊಳ್ಳಲು ದ.ಕ ಜಿಲ್ಲಾಧಿಕಾರಿ ಸೂಚನೆ Read More »