ರಾಜ್ಯ

ಐಶ್ವರ್ಯ ಆತ್ಮಹತ್ಯೆ ಪ್ರಕರಣ| 10 ಆರೋಪಿಗಳ ಪೈಕಿ ಐವರು ಅರೆಸ್ಟ್

ಸಮಗ್ರ ನ್ಯೂಸ್: ಡೈರಿ ರಿಚ್ ಐಸ್​ ಕ್ರೀಂ ಕಂಪನಿ ಮಾಲೀಕನ ಸೊಸೆ ಸೂಸೈಡ್​ ಪ್ರಕರಣ ಸಂಬಂಧ ಪೊಲೀಸರು 10 ಆರೋಪಿಗಳ ಪೈಕಿ ಐವರನ್ನು ಬಂಧಿಸಿದ್ದಾರೆ. ಗೋವಿಂದರಾಜನಗರ ಪೊಲೀಸರು ಅತ್ತೆ-ಮಾವ, ಗಂಡ, ಮೈದುನ ಸೇರಿ ಐವರನ್ನು ಬಂಧಿಸಿದ್ದಾರೆ. ಐಶ್ವರ್ಯಾ ಚಿಕ್ಕಪ್ಪ ಓಂಪ್ರಕಾಶ್, ಚಿಕ್ಕಮ್ಮ ಶಾಲಿನಿ ವಿದೇಶಲ್ಲಿದ್ದಾರೆ. ಸೋದರತ್ತೆ ಗೀತಾ, ಸೋದರ ಮಾವ ರವೀಂದ್ರಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಪೊಲೀಸರು ಪ್ಲಾನ್​ ಮಾಡಿ ಐವರನ್ನು ಅರೆಸ್ಟ್ ಮಾಡಿದ್ದಾರೆ. ಐಶ್ವರ್ಯಾ ಆತ್ಮಹತ್ಯೆ ಸುದ್ದಿ ತಿಳಿದ ತಕ್ಷಣ ಗಂಡನ ಫ್ಯಾಮಿಲಿ ಎಸ್ಕೇಪ್​ ಆಗಿದ್ದರು.

ಐಶ್ವರ್ಯ ಆತ್ಮಹತ್ಯೆ ಪ್ರಕರಣ| 10 ಆರೋಪಿಗಳ ಪೈಕಿ ಐವರು ಅರೆಸ್ಟ್ Read More »

ಹವಾಮಾನ ವರದಿ| ರಾಜ್ಯಾದ್ಯಂತ ನ.7ರವರೆಗೆ ಭಾರಿ ಮಳೆ ಸಾಧ್ಯತೆ| ಮಲೆನಾಡಿನ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್

ಸಮಗ್ರ ನ್ಯೂಸ್: ರಾಜ್ಯಾದ್ಯಂತ ಮುಂದಿನ ನಾಲ್ಕು ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಹಲವು ಜಿಲ್ಲೆಗಳಲ್ಲಿ ಎಲ್ಲೊ ಅಲರ್ಟ್ ಘೋಷಿಸಲಾಗಿದೆ. ನ.4ರಂದು ಕೊಡಗು ಜಿಲ್ಲೆಗೆ ಅಲರ್ಟ್ ಘೋಷಿಸಲಾಗಿದೆ. ನ. 5 ರಂದು ಕೊಡಗು, ಚಾಮರಾಜನಗರ, ಮೈಸೂರು, ಮಂಡ್ಯ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ನ. 6 ರಂದು ಚಾಮರಾಜನಗರ, ರಾಮನಗರ, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ನ. 7 ರಂದು ಶಿವಮೊಗ್ಗ, ತುಮಕೂರು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದ್ದು,

ಹವಾಮಾನ ವರದಿ| ರಾಜ್ಯಾದ್ಯಂತ ನ.7ರವರೆಗೆ ಭಾರಿ ಮಳೆ ಸಾಧ್ಯತೆ| ಮಲೆನಾಡಿನ ಜಿಲ್ಲೆಗಳಲ್ಲಿ ಎಲ್ಲೋ ಅಲರ್ಟ್ Read More »

ಈ ದೀಪಾವಳಿಯಲ್ಲಿ ಬೇಕಾಬಿಟ್ಟಿ‌ ಪಟಾಕಿ ಹಚ್ಚೋಹಾಗಿಲ್ಲ| ದುರಂತಗಳ ಬಳಿಕ ಸರ್ಕಾರದಿಂದ ಕಟ್ಟುನಿಟ್ಟಿನ ರೂಲ್ಸ್| ಪಟಾಕಿ ಮಾರೋರು, ಕೊಳ್ಳೋರು ತಿಳ್ಕೋಬೇಕಾದ ಮಾಹಿತಿ…

ಸಮಗ್ರ ನ್ಯೂಸ್: ರಾಜ್ಯದ ವಿವಿಧೆಡೆ‌ ಸಂಭವಿಸಿದ ಪಟಾಕಿ ದುರಂತಗಳ ಬಳಿಕ ರಾಜ್ಯ ಸರ್ಕಾರ ಪಟಾಕಿ ಮಾರಾಟ ಮತ್ತು ಬಳಕೆಗೆ ಕಠಿಣ ನಿಯಮ ಜಾರಿಗೊಳಿಸಿದೆ. ಈ ಬಾರಿಯ ದೀಪಾವಳಿಯಲ್ಲಿ ಪಟಾಕಿ ಅಬ್ಬರಕ್ಕೆ ಅಂಕುಶ ಹಾಕಲು ರಾಜ್ಯ ಸರ್ಕಾರ‌ ನಿರ್ಧರಿಸಿದೆ. ಹಾವೇರಿಯ ಆಲದಟ್ಟಿ ಪಟಾಕಿ ದುರಂತದಲ್ಲಿ ನಾಲ್ವರು ಮತ್ತು ಅತ್ತಿಬೆಲೆಯಲ್ಲಿನ ಪಟಾಕಿ ದುರುಂತದಲ್ಲಿ 17 ಜನ ಸಾವನ್ನಪ್ಪಿದ ಬಳಿಕ, ರಾಜ್ಯ ಸರ್ಕಾರ ಈ ಬಾರಿಯ ದೀಪಾವಳಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಅಧಿಕೃತ ಪರ್ಮನೆಂಟ್ ಲೈಸೆನ್ಸ್ ಹೊಂದಿದವರು ಮಾತ್ರ ಪಟಾಕಿ ಮಾರುವುದಕ್ಕೆ

ಈ ದೀಪಾವಳಿಯಲ್ಲಿ ಬೇಕಾಬಿಟ್ಟಿ‌ ಪಟಾಕಿ ಹಚ್ಚೋಹಾಗಿಲ್ಲ| ದುರಂತಗಳ ಬಳಿಕ ಸರ್ಕಾರದಿಂದ ಕಟ್ಟುನಿಟ್ಟಿನ ರೂಲ್ಸ್| ಪಟಾಕಿ ಮಾರೋರು, ಕೊಳ್ಳೋರು ತಿಳ್ಕೋಬೇಕಾದ ಮಾಹಿತಿ… Read More »

ಕರಾವಳಿಯ ಕಂಬಳ ಬೆಂಗಳೂರಿನಲ್ಲಿ/ ರಾಜಧಾನಿಯ ಕಂಬಳಕ್ಕೆ ರಾಜ್ಯಪಾಲರಿಗೆ ಆಹ್ವಾನ

ಸಮಗ್ರ ನ್ಯೂಸ್: ಕರಾವಳಿಯ ವೈವಿಧ್ಯಗಳಲ್ಲಿ ಒಂದಾಗಿರುವ ಕಂಬಳ ಇದೀಗ ರಾಜಧಾನಿ ಬೆಂಗಳೂರಿಗೆ ಕಾಲಿಟ್ಟಿದೆ. ಪುತ್ತೂರಿನ ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದಲ್ಲಿ ನವೆಂಬರ್ 24, 25 ಮತ್ತು 26 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಕಂಬಳ ನಡೆಯಲಿದೆ. ಈ ಬೆಂಗಳೂರಿನ ಕಂಬಳ ಕಾರ್ಯಕ್ರಮಕ್ಕೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ಆಮಂತ್ರಣ ನೀಡಲಾಯಿತು. ಕಂಬಳ ಸಮಿತಿ ಅಧ್ಯಕ್ಷ ಮತ್ತು ಶಾಸಕ ಅಶೋಕ್ ಕುಮಾರ್ ರೈ ನೇತೃತ್ವದ ನಿಯೋಗ ಕಂಬಳದ ಕುರಿತು ಪೂರ್ಣ ವಿವರಣೆ ನೀಡಿ ಕಾರ್ಯಕ್ರಮಕ್ಕೆ ಆಹ್ವಾನ

ಕರಾವಳಿಯ ಕಂಬಳ ಬೆಂಗಳೂರಿನಲ್ಲಿ/ ರಾಜಧಾನಿಯ ಕಂಬಳಕ್ಕೆ ರಾಜ್ಯಪಾಲರಿಗೆ ಆಹ್ವಾನ Read More »

ಕಾವೇರಿಸುತ್ತಿರುವ ಕಾವೇರಿ/ ಇಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮಹತ್ವದ ಸಭೆ

ಸಮಗ್ರ ನ್ಯೂಸ್: ಕಾವೇರಿ ನೀರು ಹಂಚಿಕೆ ವಿವಾದ ಕರ್ನಾಟಕಕ್ಕೆ ತೀವ್ರ ಸಂಕಷ್ಟವನ್ನು ಸೃಷ್ಟಿಸುತ್ತಿದ್ದು, ಈ ಕುರಿತು ಇಂದು ಮಧ್ಯಾಹ್ನ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮಹತ್ವದ ಸಭೆ ನಡೆಯಲಿದೆ. ನವೆಂಬರ್ ಆರಂಭದಿಂದ 15 ದಿನಗಳ ಕಾಲ ತಮಿಳುನಾಡಿಗೆ 2600 ಕ್ಯೂಸೆಕ್ ನೀರು ಹರಿಸುವಂತೆ ಪ್ರಾಧಿಕಾರ ಕರ್ನಾಟಕಕ್ಕೆ ಸೂಚನೆ ನೀಡಿತ್ತು. ಈ ಆದೇಶವನ್ನು ಮರುಪರಿಶೀಲಿಸುವಂತೆ ಪ್ರಾಧಿಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಈ ಕುರಿತು ಇಂದು ಮಹತ್ವದ ಸಭೆ ನಡೆಯಲಿದೆ.

ಕಾವೇರಿಸುತ್ತಿರುವ ಕಾವೇರಿ/ ಇಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮಹತ್ವದ ಸಭೆ Read More »

ಹವಾಮಾನ ವರದಿ| ನ.04ರಿಂದ ಉತ್ತಮ ಮಳೆ ಮುನ್ಸೂಚನೆ

ಸಮಗ್ರ ನ್ಯೂಸ್: ಭಾರತೀಯ ಹವಾಮಾನ ಇಲಾಖೆ ( IMD ) ಪ್ರಕಾರ, ಈಶಾನ್ಯ ಮಾನ್ಸೂನ್ ಅನ್ನು ನಿರೂಪಿಸುವ ಬಂಗಾಳಕೊಲ್ಲಿಯಿಂದ ಮತ್ತು ದಕ್ಷಿಣ ಪೆನಿನ್ಸುಲರ್ ಭಾರತದ ಕಡೆಗೆ ಬೀಸುತ್ತಿರುವ ಪೂರ್ವ-ಈಶಾನ್ಯ ಮಾರುತಗಳು ಮುಂದಿನ ದಿನಗಳಲ್ಲಿ ಬಲಗೊಳ್ಳುವ ನಿರೀಕ್ಷೆಯಿದೆ. ನವೆಂಬರ್‌ 4ರಿಂದ 8ರವರೆಗೂ ಭಾರೀ ಮಳೆ ಮುನ್ಸೂಚನೆ ಲಭಿಸಿದ್ದು ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಒಳನಾಡಿನ ಶಿವಮೊಗ್ಗ, ಮಂಡ್ಯ, ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಚಾಮರಾಜನಗರ, ಕೋಲಾರ, ಮೈಸೂರು, ತುಮಕೂರು, ದಕ್ಷಿಣ ಕನ್ನಡ, ಉಡುಪಿ, ಉತ್ತರ

ಹವಾಮಾನ ವರದಿ| ನ.04ರಿಂದ ಉತ್ತಮ ಮಳೆ ಮುನ್ಸೂಚನೆ Read More »

ಲುಲು ಮಾಲ್ ನಲ್ಲಿ ವಿಕೃತಿ ಮೆರೆದ‌ ಅಸಾಮಿಗೆ ಯಾವ ಶಿಕ್ಷೆಯೂ ಇಲ್ಲ| ವಕೀಲರ ಜೊತೆ ಕೋರ್ಟ್ ಗೆ ಬಂದ, ಜಾಮೀನು ಪಡೆದ, ಹೋದ..!

ಸಮಗ್ರ ನ್ಯೂಸ್: ಬೆಂಗಳೂರಿನ ಲುಲು ಮಾಲ್‌ನಲ್ಲಿ ಅ.29ರ ಭಾನುವಾರ ಸಂಜೆ ಯುವತಿಯ ಹಿಂಭಾಗವನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡಿದ ಕಾಮುಕ ಅಶ್ವಥ‌ ನಾರಾಯಣ್ ಯಾವ ಶಿಕ್ಷೆಯೂ ಇಲ್ಲದೆ, ಪೊಲೀಸ್ ಬಂಧನದಿಂದ ರಕ್ಷಣೆ ಪಡೆದು ಮನೆಯಲ್ಲಿದ್ದಾನೆ. ಪೊಲೀಸರ ಕೈಗೆ ಸಿಗದೇ ಕೋರ್ಟ್‌ ಮುಂದೆ ಹಾಜರಾದ‌ ಕಾಮುಕ ಅಲ್ಲಿ ಸಲೀಸಾಗಿ ಜಾಮೀನು ಪಡೆದು ಮನೆಯಲ್ಲಿ ಇದ್ದಾನೆ. ಅಕ್ಟೋಬರ್‌ 29ರ ಭಾನುವಾರ ಸಂಜೆ ವೇಳೆ 62 ವರ್ಷದ ಅಶ್ವತ್ಥನಾರಾಯಣ್ ಎನ್ನುವ ನಿವೃತ್ತ ಶಿಕ್ಷಕ ಬೇಕಂತಲೇ ಯುವತಿಯನ್ನು ಹಿಡಿದುಕೊಂಡು ಆಕೆಯ ಹಿಂಭಾಗವನ್ನು ಹಿಡಿದುಕೊಂಡು

ಲುಲು ಮಾಲ್ ನಲ್ಲಿ ವಿಕೃತಿ ಮೆರೆದ‌ ಅಸಾಮಿಗೆ ಯಾವ ಶಿಕ್ಷೆಯೂ ಇಲ್ಲ| ವಕೀಲರ ಜೊತೆ ಕೋರ್ಟ್ ಗೆ ಬಂದ, ಜಾಮೀನು ಪಡೆದ, ಹೋದ..! Read More »

ತುಳುವಿಗೆ ಅಧಿಕೃತ ಭಾಷೆಯ ಸ್ಥಾನಮಾನ ನೀಡಿ, ಇಲ್ಲದಿದ್ದರೆ ಪ್ರತ್ಯೇಕ ತುಳುನಾಡು ರಾಜ್ಯಕ್ಕೆ ಹೋರಾಟಕ್ಕೆ ರೆಡಿಯಾಗಿ| ರಾಜ್ಯೋತ್ಸವದಂದೇ ಮತ್ತೆ ಕೇಳಿಬಂದ ಒಕ್ಕೊರಲ ಕೂಗು!!

ಸಮಗ್ರ ನ್ಯೂಸ್: ರಾಜ್ಯದಲ್ಲಿ ಕನ್ನಡದಂತೆ ತುಳುವಿಗೂ ಅಧಿಕೃತ ಭಾಷೆಯ ಸ್ಥಾನಮಾನ ನೀಡಬೇಕು, ತುಳುವನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಬೇಕು ಎಂಬ ಒತ್ತಾಯ ಕನ್ನಡ ರಾಜ್ಯೋತ್ಸವದ ದಿನವೇ ಕೇಳಿಬಂದಿದೆ. ಸಾಮಾಜಿಕ ಮಾಧ್ಯಮ ಎಕ್ಸ್‌ ಮೂಲಕ ಅನೇಕರು #TuluOfficialInKA_KL ಹಾಗೂ #TuluTo8thSchedule ಹ್ಯಾಷ್ ಟ್ಯಾಗ್‌ ಬಳಸಿ ಈ ಬಗ್ಗೆ ಬುಧವಾರ ಅಭಿಪ್ರಾಯ ಹಂಚಿಕೊಂಡಿದ್ದಾರೆ. ‘ಕನ್ನಡ ಸತ್ಯ. ಆದರೆ, ನಮಗೆ ತುಳುವೇ ನಿತ್ಯ. ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು. ಈ ರಾಜ್ಯದಲ್ಲಿ ತುಳು ಭಾಷೆಗೂ ಕನ್ನಡದಂತೆ ಮಾನ್ಯತೆ, ಮರ್ಯಾದೆ ಸಿಗಲಿ. ತುಳುವರೂ ಇದು

ತುಳುವಿಗೆ ಅಧಿಕೃತ ಭಾಷೆಯ ಸ್ಥಾನಮಾನ ನೀಡಿ, ಇಲ್ಲದಿದ್ದರೆ ಪ್ರತ್ಯೇಕ ತುಳುನಾಡು ರಾಜ್ಯಕ್ಕೆ ಹೋರಾಟಕ್ಕೆ ರೆಡಿಯಾಗಿ| ರಾಜ್ಯೋತ್ಸವದಂದೇ ಮತ್ತೆ ಕೇಳಿಬಂದ ಒಕ್ಕೊರಲ ಕೂಗು!! Read More »

ಶಿಷ್ಟಾಚಾರ ಉಲ್ಲಂಘನೆ| ಮಡಿಕೇರಿ ನಗರ ಸಭೆ ಅಧ್ಯಕ್ಷರು, ಸಂಭಂದ ಪಟ್ಟ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕ್ಕೆ ಕಾಂಗ್ರೆಸ್ ನಿಂದ ದೂರು

ಸಮಗ್ರ ನ್ಯೂಸ್: ಸರ್ಕಾರದ ಸಹಭಾಗಿತ್ವದ ಕಾರ್ಯಕ್ರಮದಲ್ಲಿ ಶಿಷ್ಟಾಚಾರ ಉಲ್ಲಂಘನೆ ಪ್ರಕರಣಕ್ಕೆ ಸಂಭಂದಿಸಿದಂತೆ ಕೊಡಗು ಕಾಂಗ್ರೆಸ್ ಕಾಂಗ್ರೆಸ್ ಮುಖಂಡ ತೆನ್ನಿರ ಮೈನಾ ಕೊಡಗು ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಅಪರ ಜಿಲ್ಲಾಧಿಕಾರಿ ಬಿ.ಎನ್.ವೀಣಾ ರವರ ಮುಖೇನ ಜಿಲ್ಲಾಧಿಕಾರಿಗಳಿಗೆ ಮಡಿಕೇರಿ ನಗರ ಸಭೆಯ ಅಧ್ಯಕ್ಷೆ ಅನಿತಾ ಪೂವಯ್ಯ ಹಾಗೂ ಸಂಭಂದ ಪಟ್ಟ ಅಧಿಕಾರಿಗಳ ವಿರುದ್ದ ಕ್ರಮ ಜರುಗಿಸಲು ಒತ್ತಾಯಿಸಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕೊಡಗು ಜಿಲ್ಲಾಡಳಿತ ಹಾಗೂ ಮಡಿಕೇರಿ ನಗರ ಸಭೆಯ ಸಹಯೋಗದಲ್ಲಿ ಮಡಿಕೇರಿ

ಶಿಷ್ಟಾಚಾರ ಉಲ್ಲಂಘನೆ| ಮಡಿಕೇರಿ ನಗರ ಸಭೆ ಅಧ್ಯಕ್ಷರು, ಸಂಭಂದ ಪಟ್ಟ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕ್ಕೆ ಕಾಂಗ್ರೆಸ್ ನಿಂದ ದೂರು Read More »

ಸಂಬಂಧಿಯ ಅಂತ್ಯಸಂಸ್ಕಾರಕ್ಕೆ ಬರುತ್ತಿದ್ದಾತ ವಾಹನ ಅಪಘಾತಕ್ಕೆ ಬಲಿ

ಸಮಗ್ರ ನ್ಯೂಸ್:ಮೃತಪಟ್ಟ ಸಂಬಂಧಿಯ ಅಂತಿಮ ದರ್ಶನಕ್ಕೆಂದು ಬರುತ್ತಿದ್ದ ಕಾರು ಅಪಘಾತಕ್ಕಿಡಾಗಿ ಓರ್ವ ಸಾವನಪ್ಪಿ, ನಾಲ್ವರು ಗಾಯಗೊಂಡಿರುವ ದಾರುಣ ಬೆಂಗಳೂರು ಬಳಿಯ ಬಿಡದಿಯಲ್ಲಿ ನಡೆದಿದೆ. ಕಳೆದ ಭಾನುವಾರ ಕಾಣೆಯಾಗಿದ್ದಸುಂಟಿಕೊಪ್ಪ ಸಮೀಪದ ಸೆವೆಂತ್ಮೇಲ್ ನಿವಾಸಿ ಪೌಲ್ ಡಿಸೋಜ ಅವರ ಮೃತ ದೇಹ ನ. 2ರಂದು ಬೆಳಗ್ಗೆ ಕೆರೆಯಲ್ಲಿ ಪತ್ತೆಯಾಗಿತ್ತು. ಮರಣೋತ್ತರ ಪರೀಕ್ಷೆ ನಡೆದು ಅಂತ್ಯ ಸಂಸ್ಕಾರದ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗುತ್ತಿತ್ತು. ಈ ನಡುವೆ ಬೆಂಗಳೂರಿನಲ್ಲಿ ನೆಲೆಸಿರುವ ಇವರ ಅಣ್ಣನ ಮಕ್ಕಳು ಸಾವಿನ ಸುದ್ದಿ ಅರಿತು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ಕಾರಿನಲ್ಲಿ ಬರುತ್ತಿದ್ದರು.

ಸಂಬಂಧಿಯ ಅಂತ್ಯಸಂಸ್ಕಾರಕ್ಕೆ ಬರುತ್ತಿದ್ದಾತ ವಾಹನ ಅಪಘಾತಕ್ಕೆ ಬಲಿ Read More »