ರಾಜ್ಯ

ಡೀಪ್ ಫೇಕ್/ ಬೆಂಗಳೂರು ನಗರ ಪೋಲೀಸರಿಂದ ಸಹಾಯವಾಣಿ

ಸಮಗ್ರ ನ್ಯೂಸ್: ರಾಷ್ಟ್ರಾದ್ಯಂತ ಸುದ್ದಿ ಮಾಡುತ್ತಿರುವ ಡೀಪ್‌ಫೇಕ್ ವಿರುದ್ಧ ಬೆಂಗಳೂರು ಪೊಲೀಸರು ಒಂದು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದಾರೆ. ಇಂತಹ ವಿಡಿಯೋಗಳಿಂದ ಸಂಕಷ್ಟಕ್ಕೆ ಒಳಗಾದವರಿಗೆ ಸಹಾಯವಾಣಿಯೊಂದನ್ನು ತೆರೆದು, ಅದಕ್ಕೆ ಕರೆ ಮಾಡುವಂತೆ ಮನವಿ ಮಾಡಿದ್ದಾರೆ. ಬೆಂಗಳೂರು ನಗರ ಪೋಲೀಸರು ಈ ಕುರಿತು ಟ್ವೀಟ್ ಮಾಡಿದ್ದು, ನೀವು ಅಥವಾ ನಿಮಗೆ ತಿಳಿದಿರುವ ಯಾರಾದರೂ ಡೀಪ್ ಫೇಕ್ ಗೆ ಒಳಗಾಗಿದ್ದಲ್ಲಿ, 1930 ಗೆ ಕರೆಮಾಡಿ ಬೆಂಗಳೂರು ನಗರ ಪೊಲೀಸರನ್ನು ಸಂಪರ್ಕಿಸಿ, ಡಿಜಿಟಲ್ ವಂಚನೆಯಿಂದ ನಿಮ್ಮನ್ನು ರಕ್ಷಿಸಲು ನಾವು ನಿಮ್ಮೊಂದಿಗಿದ್ದೇವೆ ಎಂದು ತಿಳಿಸಿದ್ದಾರೆ.

ಡೀಪ್ ಫೇಕ್/ ಬೆಂಗಳೂರು ನಗರ ಪೋಲೀಸರಿಂದ ಸಹಾಯವಾಣಿ Read More »

ಸಂಪಾಜೆ: ವಲಯ ಅರಣ್ಯಾಧಿಕಾರಿ ಮಧುಸೂದನ್ ಎಂ.ಕೆ ಅವರಿಗೆ ಬೀಳ್ಕೊಡುಗೆ

ಸಮಗ್ರ ನ್ಯೂಸ್: ಸಂಪಾಜೆ ಪ್ರಾದೇಶಿಕ ವಲಯದ ವಲಯ ಅರಣ್ಯಾಧಿಕಾರಿ ಮಧುಸೂದನ್ ಎಂ.ಕೆ ಅವರನ್ನು ನ. 17ರಂದು ಸಂಪಾಜೆ ವಲಯದ ವತಿಯಿಂದ ಬೀಳ್ಕೊಡಲಾಯಿತು. 2019ರ ನವಂಬರ್ ತಿಂಗಳಿನಲ್ಲಿ ಸಂಪಾಜೆ ವಲಯಕ್ಕೆ ವಲಯ ಅರಣ್ಯಾಧಿಕಾರಿಯಾಗಿ ವರ್ಗಾವಣೆಗೊಂಡು ಬಂದು ದಕ್ಷ ಅಧಿಕಾರಿಯಾಗಿ, ಸಮಾಜಮುಖಿಯಾಗಿ, ಮಾನವೀಯ ಮೌಲ್ಯಗಳ ಗಣಿಯಾಗಿ, ಸದಾಕಾಲ ಸಿಬ್ಬಂದಿಗಳ ಸ್ಪೂರ್ತಿಯ ಚಿಲುಮೆಯಾಗಿ, ಅಭಿವೃದ್ಧಿ ಕಾರ್ಯಗಳ ಜೊತೆಗೆ ಸಮಾಜಮುಖಿ ಕಾರ್ಯಗಳಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡು ಸಿಬ್ಬಂದಿಗಳ ಹಾಗೂ ಗ್ರಾಮಸ್ಥರ ಮನಸ್ಸಿನಲ್ಲಿ ಶಾಶ್ವತವಾಗಿ ಸ್ಥಾನ ಪಡೆದಿರುವ ಮಧುಸೂದನ್ ಎಂ.ಕೆ. ಇವರು ಸುದೀರ್ಘ ನಾಲ್ಕು

ಸಂಪಾಜೆ: ವಲಯ ಅರಣ್ಯಾಧಿಕಾರಿ ಮಧುಸೂದನ್ ಎಂ.ಕೆ ಅವರಿಗೆ ಬೀಳ್ಕೊಡುಗೆ Read More »

ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ| 71 ಅಧಿಕಾರಿಗಳ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ

ಸಮಗ್ರ ನ್ಯೂಸ್: ರಾಜ್ಯ ಸರ್ಕಾರದಿಂದ ಆಡಳಿತ ಯಂತ್ರಕ್ಕೆ ಮೇಜರ್ ಸರ್ಜರಿ ನಡೆದಿದ್ದು, 71 ಪೊಲೀಸ್ ಇನ್ಸ್ ಪೆಕ್ಟರ್ ಗಳ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಬಗ್ಗೆ ಐಪಿಎಸ್ ಅಧಿಕಾರಿ ಸೌಮೇಂದು ಮುಖರ್ಜಿ ಆದೇಶ ಹೊರಡಿಸಿದ್ದು ಪೊಲೀಸ್ ಸಿಬ್ಬಂದಿ ಮಂಡಳಿಯ ಸಭೆಯ ನಿರ್ಣಯದಂತೆ ಈ ಕೆಳಕಂಡ ಪೊಲೀಸ್ ಇನ್ಸ್ಪೆಕ್ಟರ್ (ಸಿವಿಲ್) ರವರುಗಳನ್ನು ಆಡಳಿತಾತ್ಮಕ ಕಾರಣಗಳಿಗಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಅವರುಗಳ ಹೆಸರಿನ ಮುಂದೆ ಸೂಚಿಸಿರುವ ಸ್ಥಳಕ್ಕೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ ಎಂದು ಸುತ್ತೋಲೆ ಹೊರಡಿಸಿದ್ದಾರೆ. ಯಾವುದೇ

ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ| 71 ಅಧಿಕಾರಿಗಳ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಆದೇಶ Read More »

ಲವ್, ಸೆಕ್ಸ್ ಮತ್ತು‌ ದೋಖಾ| ಬಿಜೆಪಿ ಸಂಸದ ದೇವೇಂದ್ರಪ್ಪ ಪುತ್ರನ ಮೇಲೆ ಬಿತ್ತು‌ ಎಫ್ಐಆರ್

ಸಮಗ್ರ ನ್ಯೂಸ್: ಬಿಜೆಪಿ ಸಂಸದ ದೇವೇಂದ್ರಪ್ಪ ಅವರ ಪುತ್ರ ರಂಗನಾಥ್ ವಿರುದ್ಧ ಈಗ ಯುವತಿಯೊಬ್ಬರು ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದಾರೆ. ಅಲ್ಲದೇ ಯುವತಿ ಪೊಲೀಸರಿಗೆ ನೀಡಿದಂತ ದೂರು ಆಧರಿಸಿ, ಎಫ್ ಐಆರ್ ಕೂಡ ದಾಖಲಾಗಿದೆ. ಮೈಸೂರಿನಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ರಂಗನಾಥ್ ಗೆ ಪಾರ್ಟಿಯೊಂದರಲ್ಲಿ ಸಂತ್ರಸ್ತ ಯುವತಿ ಪರಿಚಯವಾಗಿದ್ದರು. ಪರಿಚಯ ಸ್ನೇಹ, ಆನಂತರ ಪ್ರೀತಿಗೆ ತಿರುಗಿತ್ತು. ಬಳಿಕ ಇಬ್ಬರ ನಡುವೆ ಲವ್ವಿಡವ್ವಿಯಾಗಿದೆ. ಯುವತಿಯನ್ನು ಕಳೆದ ಜನವರಿಯಲ್ಲಿ ಹೋಟೆಲ್ ಗೆ ಕರೆದುಕೊಂಡು ಹೋಗಿದ್ದ ಸಂಸದ ದೇವೇಂದ್ರಪ್ಪ ಅವರ ಪುತ್ರ ರಂಗನಾಥ್,

ಲವ್, ಸೆಕ್ಸ್ ಮತ್ತು‌ ದೋಖಾ| ಬಿಜೆಪಿ ಸಂಸದ ದೇವೇಂದ್ರಪ್ಪ ಪುತ್ರನ ಮೇಲೆ ಬಿತ್ತು‌ ಎಫ್ಐಆರ್ Read More »

ಹವಾಮಾನ ವರದಿ| ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ

ಸಮಗ್ರ ನ್ಯೂಸ್: ರಾಜ್ಯದ ದಕ್ಷಿಣ ಒಳನಾಡು, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗಲಿದೆ. ಉತ್ತರ ಒಳನಾಡು ಜಿಲ್ಲೆಗಳಲ್ಲಿ ಒಣ ಹವೆಯಿರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಕನ್ನಡ, ಚಾಮರಾಜ ನಗರ ಜಿಲ್ಲೆಗಳಲ್ಲಿ ಇಂದು (ನ.18) ಮಳೆಯಾಗಲಿದೆ. ಕರ್ನಾಟಕದ ದಕ್ಷಿಣ ಒಳನಾಡು, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಅಲ್ಲಲ್ಲಿ ಚದುರಿದಂತೆ ಸಾಧಾರಣ ಮಳೆ ಮತ್ತು ಉತ್ತರ ಒಳನಾಡು ಜಿಲ್ಲೆಗಳಲ್ಲಿ ಒಣ ಹವೆಯಿರುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯಲ್ಲಿ ತಿಳಿಸಿದೆ. ವಾರಾಂತ್ಯದಲ್ಲಿ ದಕ್ಷಿಣ

ಹವಾಮಾನ ವರದಿ| ಕರ್ನಾಟಕದ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಸಾಧ್ಯತೆ Read More »

ನನ್ನನ್ನು ವಿರೋಧಿಸಿದರೆ, ಮೋದಿ ಅವರನ್ನು ವಿರೋಧಿಸಿದಂತೆ: ಬಿ. ವೈ. ವಿಜಯೇಂದ್ರ

ಸಮಗ್ರ ನ್ಯೂಸ್: ನನ್ನನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದು ನರೇಂದ್ರ ಮೋದಿಯವರು. ಹಾಗಾಗಿ ನನ್ನನ್ನು ವಿರೋಧಿಸಿದರೆ, ಪ್ರಧಾನಿ ಮೋದಿ ಅವರನ್ನು ವಿರೋಧಿಸಿದಂತೆ ಎಂದು ಹೇಳುವ ಮೂಲಕ ವಿರೋಧಿಗಳಿಗೆ ಬಿಜೆಪಿಯ ನೂತನ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಟಾಂಗ್ ಕೊಟ್ಟಿದ್ದಾರೆ. ನನ್ನನ್ನು ಪಕ್ಷದ ರಾಜ್ಯಾಧ್ಯಕ್ಷರನ್ನಾಗಿ ಮಾಡಿದವರು ಯಾರು? ಯಡಿಯೂರಪ್ಪನಾ? ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ನನ್ನನ್ನು ಪಕ್ಷದ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದಾರೆ. ಸಚಿವ ಪ್ರಹ್ಲಾದ್ ಜೋಷಿ, ಬಿ. ಎಲ್.

ನನ್ನನ್ನು ವಿರೋಧಿಸಿದರೆ, ಮೋದಿ ಅವರನ್ನು ವಿರೋಧಿಸಿದಂತೆ: ಬಿ. ವೈ. ವಿಜಯೇಂದ್ರ Read More »

ಸಿದ್ದರಾಮಯ್ಯ ವಿರುದ್ಧ ಹೇಳಿಕೆ/ ಸೂಲಿಬೆಲೆ ವಿರುದ್ಧದ ಎಫ್‍ಐಆರ್ ಗೆ ತಡೆಯಾಜ್ಞೆ ನೀಡಿದ ಹೈಕೋರ್ಟ್

ಸಮಗ್ರ ನ್ಯೂಸ್: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಹೇಳಿಕೆ ಹಿನ್ನಲೆಯಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ವಿರುದ್ಧ ದಾಖಲಾಗಿದ್ದ ಎಫ್‍ಐಆರ್ ಗೆ ಕರ್ನಾಟಕ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಸಿಎಂ ಸಿದ್ದರಾಮಯ್ಯ ವಿರುದ್ಧ ಚಿಂತಕ ಚಕ್ರವರ್ತಿ ಸೂಲಿಬೆಲೆ ನೀಡಿದ ಹೇಳಿಕೆ ವಿರುದ್ಧ ಕಾರವಾರ ಗ್ರಾಮಾಂತರ ಪೋಲೀಸರು ಎಫ್‍ಐಆರ್ ದಾಖಲಿಸಿದ್ದರು. ಈ ಹಿನ್ನಲೆಯಲ್ಲಿ ಚಕ್ರವರ್ತಿ ಸೂಲಿಬೆಲೆ ಹೈಕೋರ್ಟ್‍ಗೆ ಅಪೀಲ್ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಎಫ್‍ಐಆರ್ ಗೆ ತಡೆ ನೀಡಿ, ವಿಚಾರಣೆಯನ್ನು ಮುಂದೂಡಿದ್ದಾರೆ.

ಸಿದ್ದರಾಮಯ್ಯ ವಿರುದ್ಧ ಹೇಳಿಕೆ/ ಸೂಲಿಬೆಲೆ ವಿರುದ್ಧದ ಎಫ್‍ಐಆರ್ ಗೆ ತಡೆಯಾಜ್ಞೆ ನೀಡಿದ ಹೈಕೋರ್ಟ್ Read More »

ಅಕ್ರಮ ವಿದ್ಯುತ್ ಸಂಪರ್ಕ/ ಕುಮಾರಸ್ವಾಮಿಗೆ 68 ಸಾವಿರ ದಂಡ ವಿಧಿಸಿದ ಬೆಸ್ಕಾಂ

ಸಮಗ್ರ ನ್ಯೂಸ್: ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ದೀಪಾವಳಿ ಹಬ್ಬದಂದು ಜೆ ಪಿ ನಗರದ ತಮ್ಮ ನಿವಾಸಕ್ಕೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಸ್ಕಾಂ ಅಧಿಕಾರಿಗಳು 68 ಸಾವಿರ ರೂಪಾಯಿ ದಂಡ ವಿಧಿಸಿದ್ದಾರೆ. ರಾಜ್ಯಾದ್ಯಂತ ಚರ್ಚೆಗೆ ಗುರಿಯಾಗಿದ್ದ ಅಕ್ರಮ ವಿದ್ಯುತ್ ಸಂಪರ್ಕ ಪ್ರಕರಣ ದಂಡ ವಿಧಿಸಿರುವ ಬೆಸ್ಕಾಂ, ದಂಡದ ಮೊತ್ತವನ್ನು ಏಳು ದಿನಗಳ ಒಳಗಾಗಿ ಪಾವತಿ ಮಾಡುವಂತೆ ಸೂಚಿಸಿದೆ. ವಿದ್ಯುತ್ ಕಳ್ಳತನ ಎಂದು ಎಚ್ ಡಿ ಕುಮಾರಸ್ವಾಮಿ ವಿರುದ್ಧ ಎಫ್‍ಐಆರ್ ದಾಖಲಾಗಿ, ಬೆಸ್ಕಾಂ

ಅಕ್ರಮ ವಿದ್ಯುತ್ ಸಂಪರ್ಕ/ ಕುಮಾರಸ್ವಾಮಿಗೆ 68 ಸಾವಿರ ದಂಡ ವಿಧಿಸಿದ ಬೆಸ್ಕಾಂ Read More »

ಮಕ್ಕಳಿಗಾಗಿ ರಾಗಿ ಮಾಲ್ಟ್ ಭಾಗ್ಯ ಯೋಜನೆ/ ಮುಂದಿನ ತಿಂಗಳಿನಿಂದ ಜಾರಿ

ಸಮಗ್ರ ನ್ಯೂಸ್: ರಾಜ್ಯಾದ್ಯಂತ ಶಾಲಾ ಮಕ್ಕಳಿಗೆ ಪೋಷಕಾಂಶ ನೀಡುವ ನಿಟ್ಟಿನಲ್ಲಿ, ಮುಂದಿನ ತಿಂಗಳಿನಿಂದ ಶಾಲಾ ಮಕ್ಕಳಿಗಾಗಿ ರಾಗಿ ಮಾಲ್ಟ್ ಭಾಗ್ಯ ಯೋಜನೆಗೆ ಚಾಲನೆ ನೀಡುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ. ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದ ಜೊತೆಗೆ ರಾಗಿ ಮಾಲ್ಟ್ ನೀಡುವ ಕುರಿತು ನಿರ್ಧಾರ ಮಾಡಲಾಗಿದೆ ಎಂದು ಅವರು ಪತ್ರಕರ್ತರ ಜೊತೆ ತಿಳಿಸಿದರು.

ಮಕ್ಕಳಿಗಾಗಿ ರಾಗಿ ಮಾಲ್ಟ್ ಭಾಗ್ಯ ಯೋಜನೆ/ ಮುಂದಿನ ತಿಂಗಳಿನಿಂದ ಜಾರಿ Read More »

ಮನೆಗೆ ನುಗ್ಗಿದ ರಾಕೇಟ್ ಪಟಾಕಿ|ಬಟ್ಟೆ, ಸಾಮಾಗ್ರಿ ದಹಿಸಿದ ಬೆಂಕಿ

ಸಮಗ್ರ ನ್ಯೂಸ್: ದೀಪಾವಳಿ ಹಬ್ಬಕ್ಕೆ ಹಚ್ಚಿದ ರಾಕೇಟ್ ಪಟಾಕಿ ಮನೆಯೊಳಗೆ ನುಸುಳಿದ ಪರಿಣಾಮ ಬಟ್ಟೆ ಹಾಗೂ ಇತರೆ ಸಾಮಾಗ್ರಿಗಳು ಸುಟ್ಟು ನಷ್ಟ ಉಂಟಾಗಿರುವ ಘಟನೆ ವರದಿಯಾಗಿದೆ. ಮಡಿಕೇರಿಯ ಮಹದೇವಪೇಟೆ ರಸ್ತೆಯಲ್ಲಿರುವ ಕನಿಕಾ ಪರಮೇಶ್ವರಿ ದೇವಾಲಯ ಮುಂಭಾಗದಲ್ಲಿ ಬಶೀರ್ ಎಂಬುವವರಿಗೆ ಸೇರಿದ ಕಟ್ಟಡವಿದ್ದು ಈ ಮನೆಯಲ್ಲಿ ನಯಾಜ್ ಎಂಬುವರು ಬಾಡಿಗೆಗೆ ವಾಸವಾಗಿದ್ದಾರೆ. ರಾತ್ರಿ ಯಾರೋ ಬೆಂಕಿ ಹೊತ್ತಿಸಿ ಹಾರಿ ಬಿಟ್ಟ ರಾಕೇಟ್ ಪಟಾಕಿ ಮನೆಯ ಕಿಟಕಿ ಮೂಲಕ ಹಾದು ಬಂದು ಸಿಡಿದಿದೆ. ಇದರಿಂದ ಬಟ್ಟೆ ಹಾಗೂ ಇತರೆ ವಸ್ತುಗಳು

ಮನೆಗೆ ನುಗ್ಗಿದ ರಾಕೇಟ್ ಪಟಾಕಿ|ಬಟ್ಟೆ, ಸಾಮಾಗ್ರಿ ದಹಿಸಿದ ಬೆಂಕಿ Read More »