ರಾಜ್ಯ

ಮಡಿಕೇರಿ: ನಗರಸಭಾ ಸದಸ್ಯನಿಂದ ನಗರಸಭೆ ಕಾರ್ಮಿಕನ ಮೇಲೆ ಹಲ್ಲೆ ಆರೋಪ| ಪ್ರಕರಣ ದಾಖಲು

ಸಮಗ್ರ ನ್ಯೂಸ್: ಮಡಿಕೇರಿ ನಗರಸಭೆಯಲ್ಲಿ ನೀರು ಗಂಟಿ ಕೆಲಸ ನಿರ್ವಹಿಸುತ್ತಿರುವ ಅನಿಲ್ ಕುಮಾರ್ ರವರ ಮೇಲೆ ಮಡಿಕೇರಿ ನಗರಸಭಾ ಸದಸ್ಯ ಸುಬ್ರಮಣಿ ಜಿ.ಆರ್ ಎಂಬುವರು ಹಲ್ಲೆ ಎಸಗಿರುವ ಘಟನೆ ಡಿಸೆಂಬರ್ 3 ರಂದು ಸಂಜೆ ನಡೆದಿದೆ. ಹಲ್ಲೆಗೊಳಗಾದ ಅನಿಲ್ ಕುಮಾರ್ ಇದೀಗ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಡಿಕೇರಿ: ನಗರಸಭಾ ಸದಸ್ಯನಿಂದ ನಗರಸಭೆ ಕಾರ್ಮಿಕನ ಮೇಲೆ ಹಲ್ಲೆ ಆರೋಪ| ಪ್ರಕರಣ ದಾಖಲು Read More »

ಜಾತ್ರೆಯಲ್ಲಿ ಮರಣ ಬಾವಿ ಪ್ರದರ್ಶನ ವೇಳೆ ಪಲ್ಟಿಯಾದ ಕಾರುಗಳು| ತಪ್ಪಿದ ಅನಾಹುತ

ಸಮಗ್ರ ನ್ಯೂಸ್: ಜಾತ್ರಾ ಮೈದಾನದಲ್ಲಿ ಮರಣಬಾವಿ ಪ್ರದರ್ಶನ ವೇಳೆ ಎರಡು ಮಾರುತಿ 800 ಕಾರುಗಳು ಪಲ್ಟಿಯಾದ ಘಟನೆ ಕುಶಾಲನಗರ ನಡೆದಿದೆ. ಮರಣ ಬಾವಿಯಲ್ಲಿ ಕಾರು ಹಾಗೂ ಬೈಕುಗಳು ಪ್ರದರ್ಶನ ನೀಡುತ್ತಿದ್ದ ವೇಳೆ ಕೆಳಗಿಳಿಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಅದೃಷ್ಟವಶಾತ್ ಚಾಲಕರು ಸಣ್ಣಪುಟ್ಟ ಗಾಯಗಳೊಂದಿಗೆ‌ ಅಪಾಯದಿಂದ ಪಾರಾಗಿದ್ದಾರೆ.

ಜಾತ್ರೆಯಲ್ಲಿ ಮರಣ ಬಾವಿ ಪ್ರದರ್ಶನ ವೇಳೆ ಪಲ್ಟಿಯಾದ ಕಾರುಗಳು| ತಪ್ಪಿದ ಅನಾಹುತ Read More »

ಸಿಪಿವೈ ಬಾವ ನಾಪತ್ತೆ ಕೇಸ್… ಮಹದೇವಯ್ಯ ಕಾರು ಚಾಮರಾಜನಗರದಲ್ಲಿ ಪತ್ತೆ

ಸಮಗ್ರ ನ್ಯೂಸ್: ಮಾಜಿ ಸಚಿವ ಸಿ.ಪಿ ಯೋಗೇಶ್ವರ್ ಅವರ ಭಾವ ಮಹದೇವಯ್ಯ ಕಾಣೆಯಾಗಿದ್ದು, ಎರಡು-ಮೂರು ದಿನ ಕಳೆದರು ಇದುವರೆಗೂ ಅವರ ಎಲ್ಲಿದ್ದಾರೆ ಎನ್ನುವುದು ಪತ್ತೆಯಾಗಿಲ್ಲ. ಇದೀಗ ಅವರ ಕಾರು ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ರಾಮಾಪುರ ಗ್ರಾಮ ಬಳಿ ಪತ್ತೆಯಾಗಿದೆ. ಆದ್ರೆ, ಕಾರಿನ ಟೈ ಲ್ಯಾಂಪ್ ಬಳಿ ರಕ್ತದ ಕಲೆ ಇದ್ದು, ಸ್ಥಳಕ್ಕೆ ಫಾರೆನ್ಸಿಕ್ ಹಾಗೂ ರಾಮನಗರ ಪೊಲೀಸ್ ತನಿಖಾ ತಂಡ ದೌಡಾಯಿಸಿ ಪರಿಶೀಲನೆ ನಡೆಸಿದೆ. ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಚೆಕ್ಕೆರೆ ಗ್ರಾಮದ ತೋಟದ ಮನೆಯಿಂದ

ಸಿಪಿವೈ ಬಾವ ನಾಪತ್ತೆ ಕೇಸ್… ಮಹದೇವಯ್ಯ ಕಾರು ಚಾಮರಾಜನಗರದಲ್ಲಿ ಪತ್ತೆ Read More »

ಸಾಯೋದಕ್ಕೆ ನನ್ನ ಕಾರೇ ಬೇಕಿತ್ತಾ? ಬಸ್ ಗೆ ಗುದ್ದಿ ಸಾಯೋಕಾಗಲ್ವಾ? ಬಡ ಬೈಕ್ ಸವಾರನಿಗೆ ಭವಾನಿ ರೇವಣ್ಣ ಅವಾಚ್ಯವಾಗಿ ನಿಂದನೆ

ಸಮಗ್ರ ನ್ಯೂಸ್: ಸಂಚರಿಸುತ್ತಿದ್ದ ಕಾರಿಗೆ ಬೈಕ್​ ಸವಾರನೊಬ್ಬ ಡಿಕ್ಕಿ ಹೊಡೆದಿದ್ದಕ್ಕೆ ಆಕ್ರೋಶಗೊಂಡ ಶಾಸಕ ಎಚ್​.ಡಿ. ರೇವಣ್ಣರ ಪತ್ನಿ ಮತ್ತು ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡರ ಸೊಸೆ ಭವಾನಿ ರೇವಣ್ಣ, ಮಾನವೀಯತೆ ಮರೆತು ಬೈಕ್​ ಸವಾರನನ್ನು ಹಿಗ್ಗಾಮುಗ್ಗಾ ನಿಂದಿಸಿದ್ದಕ್ಕೆ ವ್ಯಾಪಕ ಟೀಕೆಗೆ ಗುರಿಯಾಗಿದ್ದಾರೆ. ಡಿ.03ರಂದು ಭವಾನಿ ರೇವಣ್ಣ ಅವರು ಸಾಲಿಗ್ರಾಮದಿಂದ ಹೊಳೆನರಸೀಪುರಕ್ಕೆ ಪ್ರಯಾಣಿಸುತ್ತಿದ್ದಾಗ ರಾಂಪುರ ಗ್ರಾಮದ ಗೇಟ್‌ನಲ್ಲಿ ಈ ಘಟನೆ ನಡೆದಿದೆ. ಭವಾನಿ ರೇವಣ್ಣ ಸಂಚರಿಸುತ್ತಿದ್ದ ಕಾರಿಗೆ ತಪ್ಪಾದ ಮಾರ್ಗದಲ್ಲಿ ಬಂದ ಬೈಕ್ ಸವಾರನೋರ್ವ ಡಿಕ್ಕಿ ಹೊಡೆದಿದ್ದಾನೆ. ಇದರ

ಸಾಯೋದಕ್ಕೆ ನನ್ನ ಕಾರೇ ಬೇಕಿತ್ತಾ? ಬಸ್ ಗೆ ಗುದ್ದಿ ಸಾಯೋಕಾಗಲ್ವಾ? ಬಡ ಬೈಕ್ ಸವಾರನಿಗೆ ಭವಾನಿ ರೇವಣ್ಣ ಅವಾಚ್ಯವಾಗಿ ನಿಂದನೆ Read More »

ಪೊನ್ನಂಪೇಟೆ: ತಾಯಿ, ಇಬ್ಬರು ಹೆಣ್ಣು ಮಕ್ಕಳ ಶವ ಪತ್ತೆ

ಸಮಗ್ರ ನ್ಯೂಸ್: ಪೊನ್ನಂಪೇಟೆ ತಾಲೂಕು ಹುದಿಕೇರಿ ಹುಬ್ಬಳ್ಳಿಯ ಹೈಸೂಡಳುರು ಗ್ರಾಮದ ಐಗುಂದ ಬಳಿ ಕೂಟಿಯಾಲ ಹೊಳೆಯಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳ ಶವ ಪತ್ತೆಯಾಗಿದೆ. ಹುದಿಕೇರಿಯಲ್ಲಿ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ ಸೇವಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದ ಅಶ್ವಿನಿ (48) ಮತ್ತು ಅವರ ಇಬ್ಬರು ಹೆಣ್ಣು ಮಕ್ಕಳಾದ ನಿಕಿತಾ(21) ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಅಂತಿಮ ವರ್ಷದ ಪದವಿ ವಿದ್ಯಾರ್ಥಿನಿ, ಅಕೆಯ ತಂಗಿ ನವ್ಯ(18) ಕಂಪ್ಯೂಟರ್ ತರಬೇತಿ ಪಡೆಯುತ್ತಿದ್ದಳು. ಮೂವರ ಶವ ಇಂದು ಕೂಟಿಯಲ ಹೊಳೆಯಲ್ಲಿ ಪತ್ತೆಯಾಗಿದೆ. ಮೂಲತಹ

ಪೊನ್ನಂಪೇಟೆ: ತಾಯಿ, ಇಬ್ಬರು ಹೆಣ್ಣು ಮಕ್ಕಳ ಶವ ಪತ್ತೆ Read More »

ಪೂರ್ವ ಕರಾವಳಿಗೆ ”ಮೈಚಾಂಗ್” ಚಂಡಮಾರುತ ಭೀತಿ| ಹಲವು ಜಿಲ್ಲೆಗಳಿಗೆ ಅಲರ್ಟ್ ಘೋಷಣೆ

ಸಮಗ್ರ ನ್ಯೂಸ್: ಮಳೆಗಾಲ ಅಂತ್ಯವಾಗುವ ಸಮಯದಲ್ಲೇ ವರುಣ ದೇವ ಶಾಕ್ ಕೊಡುತ್ತಿದ್ದಾನೆ. ಕರ್ನಾಟಕದ ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಯಲ್ಲಿ ಭಾರಿ ಮಳೆ ಬೀಳಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ತಮಿಳುನಾಡಿನ ಉತ್ತರ ಕರಾವಳಿ ಹಾಗೂ ಆಂಧ್ರ ಪ್ರದೇಶದ ದಕ್ಷಿಣ ಕರಾವಳಿಯಲ್ಲಿ ಮುಂದಿನ 12 ಗಂಟೆಗಳಲ್ಲಿ ಸೈಕ್ಲೋನ್‌ ಅಪ್ಪಳಿಸೋ ನಿರೀಕ್ಷೆಯಿದೆ ಅಂತ ಹವಾಮಾನ ಇಲಾಖೆ ಹೇಳಿದೆ. ಬಂಗಾಳಕೊಲ್ಲಿಯಲ್ಲಿ ಎದ್ದಿರುವ ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆಯಿಂದಾಗಿ ಇದು ಮುಂದಿನ 12 ಗಂಟೆಗಳಲ್ಲಿ ತಮಿಳುನಾಡು ‌‍ಮತ್ತು ಆಂಧ್ರದ

ಪೂರ್ವ ಕರಾವಳಿಗೆ ”ಮೈಚಾಂಗ್” ಚಂಡಮಾರುತ ಭೀತಿ| ಹಲವು ಜಿಲ್ಲೆಗಳಿಗೆ ಅಲರ್ಟ್ ಘೋಷಣೆ Read More »

ಶಬರಿಮಲೆ ಯಾತ್ರೆ/ ಕೆ ಎಸ್‍ ಆರ್ ಟಿ ಸಿ ವಿಶೇಷ ಬಸ್ ಸಂಚಾರ

ಸಮಗ್ರ ನ್ಯೂಸ್: ಶಬರಿಮಲೆ ಯಾತ್ರಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೆ ಎಸ್‍ ಆರ್ ಟಿ ಸಿ ಬೆಂಗಳೂರಿನಿಂದ ವಿಶೇಷ ಬಸ್ ಸಂಚಾರ ಆರಂಭಿಸಿದೆ. 2024ರ ಜನವರಿ 15ರವರೆಗೆ ವಿಶೇಷ ಬಸ್‍ಗಳು ಸಂಚಾರ ನಡೆಸಲಿವೆ. ಪ್ರತಿದಿನ ಮಧ್ಯಾಹ್ನ 1.50ಕ್ಕೆ ಶಾಂತಿನಗರ ಬಸ್ ನಿಲ್ದಾಣದಿಂದ ವೊಲ್ವೋ ಬಸ್ ಹೊರಡಲಿದ್ದು, ಮರುದಿನ ಬೆಳಿಗ್ಗೆ 6.45ಕ್ಕೆ ನೀಲಕ್ಕಲ್‍ಗೆ (ಪಂಪಾ-ಶಬರಿಮಲೈ) ತಲುಪಲಿದೆ. ಸಂಜೆ 6ಕ್ಕೆ ನೀಲಕ್ಕಲ್‍ನಿಂದ ಹೊರಟು ಮರುದಿನ ಬೆಳಿಗ್ಗೆ 10ಕ್ಕೆ ಶಾಂತಿನಗರ ಬಸ್‍ನಿಲ್ದಾಣ ತಲುಪಲಿದೆ. ಬಸ್ ಪ್ರಯಾಣ ದರ ರೂ. 1,600 ಆಗಿದೆ

ಶಬರಿಮಲೆ ಯಾತ್ರೆ/ ಕೆ ಎಸ್‍ ಆರ್ ಟಿ ಸಿ ವಿಶೇಷ ಬಸ್ ಸಂಚಾರ Read More »

ಭ್ರೂಣ ಹತ್ಯೆ ಪ್ರಕರಣದ ಮತ್ತೊಂದು ಆರೋಪಿ ಅಂದರ್

ಸಮಗ್ರ ನ್ಯೂಸ್: ಬಗೆದಷ್ಟು ಬಯಲಾಗುತ್ತಿದೆ ಭ್ರೂಣ ಹತ್ಯೆ ಪ್ರಕರಣ. ಸದ್ಯ ಮತ್ತೊಬ್ಬ ಆರೋಪಿಯನ್ನು ಬೈಯಪ್ಪನಹಳ್ಳಿ ಪೊಲೀಸರು ಬಂಧಿಸಿದ್ದು, ಡಾ.ಚಂದನ್ ಬಲ್ಲಾಳ್ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ಮಂಜುಳಾ ಅವರನ್ನು ಬಂಧಿಸಲಾಗಿದೆ. ಪ್ರಕರಣ ಸಂಬಂಧ ಈವರೆಗೂ 10 ಜನರು ಪೊಲೀಸರಿಂದ ಬಂಧಿಸಲ್ಪಟ್ಟಿದ್ದಾರೆ. ಈ ಪ್ರಕರಣವನ್ನು ಅಧಿಕೃತವಾಗಿ ಸಿಐಡಿಗೆ ವರ್ಗಾವಣೆ ಮಾಡಲು ತಯಾರಿ ನಡೆಸಿರುವಾಗಲೇ ಕೆಲ ಅಂಶ ಹೊರಬಂದಿದೆ. ಭ್ರೂಣಲಿಂಗ ಪತ್ತೆ ಹಾಗೂ ಹತ್ಯೆ ಪ್ರಕರಣ ಬೆಳಕಿಗೆ ಬಂದ ಬಳಿಕ ನರ್ಸ್ ಮಂಜುಳಾ ಕೆಲಸ ಬಿಟ್ಟಿದ್ದಳು. ಬಳಿಕ ಮೈಸೂರಿನ ಮತ್ತೊಂದು ಖಾಸಗಿ

ಭ್ರೂಣ ಹತ್ಯೆ ಪ್ರಕರಣದ ಮತ್ತೊಂದು ಆರೋಪಿ ಅಂದರ್ Read More »

ಕುರ್ಚಿಗೋಸ್ಕರ ವಾಮಾಚಾರ ಮೊರೆ ಹೋದ ವಿಶ್ವವಿದ್ಯಾಲಯ ಉಪನ್ಯಾಸಕರು

ಸಮಗ್ರ ನ್ಯೂಸ್: ಧಾರವಾಡ ಶಿಕ್ಷಣ ಕೇಂದ್ರ ಒಂದಲ್ಲ ಒಂದು ರೀತಿಯಲ್ಲಿ ಪ್ರಚಾರದಲ್ಲಿ ಮುಂದಿದೆ. ಇದೀಗ ಹೊಸದಾಗಿ ವಾಮಾಚಾರ ಕೂಗು ಕೇಳಿಬಂದಿದೆ. ಶಾಲೆ, ಕಾಲೇಜುಗಳಲ್ಲಿ ಮಕ್ಕಳಿಗೆ ಮೂಢನಂಬಿಕೆ ಬಗ್ಗೆ ಉಪನ್ಯಾಸಕರು ಪಾಠ ಮಾಡಬೇಕಿದೆ. ಆದರೆ ಅದೇ ಉಪನ್ಯಾಸಕರು ಮೂಢ ನಂಬಿಕೆಯ ಮೊರೆ ಹೋದ್ರಾ ಎಂಬ ಪ್ರಶ್ನೆ ಮೂಡುತ್ತಿದೆ.ಹೌದು ಧಾರವಾಡದ ಪ್ರತಿಷ್ಠಿತ ಕರ್ನಾಟಕ ವಿಶ್ವವಿದ್ಯಾಲಯಯಲ್ಲಿ ಡಾ. ರಮಾ ಗುಂಡೂರಾವ್ ಪ್ರಾಚೀನ ಭಾರತೀಯ ಇತಿಹಾಸ ಮತ್ತು ಶಾಸನಶಾಸ್ತ್ರ ವಿಭಾಗದ ಬೋಧನಾ ಸಹಾಯಕ ಪ್ರಾಧ್ಯಾಪಕಿಯಾಗಿ ನಿಯುಕ್ತಿಗೊಂಡಿದ್ದಾರೆ. ಅವರಿಗಾಗಿ ವಿಭಾಗದಲ್ಲಿ ಒಂದು ಚೇಂಬರ್ ಸಹ

ಕುರ್ಚಿಗೋಸ್ಕರ ವಾಮಾಚಾರ ಮೊರೆ ಹೋದ ವಿಶ್ವವಿದ್ಯಾಲಯ ಉಪನ್ಯಾಸಕರು Read More »

ಗ್ರಾಹಕರೇ… ನೀವು ಕುಡಿಯೋದು ಹಾಲಲ್ಲ, ಹಾಲಾಹಲ!! ಬ್ರಾಂಡೆಡ್ ಹಾಲಿನಲ್ಲಿ ವಿಷಕಾರಿ ರಾಸಾಯನಿಕ ಪತ್ತೆ

ಸಮಗ್ರ ನ್ಯೂಸ್: ಲು ಕುಡಿಯುವ ಮುನ್ನ ಸ್ವಲ್ಪ ಎಚ್ಚೆತ್ತುಕೊಳ್ಳಿ. ರಾಜ್ಯದ ಮಾರುಕಟ್ಟೆಗೆ ಪೂರೈಕೆಯಾಗುವ ಬಹುತೇಕ ಖಾಸಗಿ ಬ್ರ್ಯಾಂಡ್‌ಗಳ ಹಾಲಿನಲ್ಲಿ ವಿಷಕಾರಿ ರಾಸಾಯನಿಕಗಳಿವೆ ಮತ್ತು ಹಾಲು ಕಲಬೆರಕೆಯಾಗಿದೆ ಅನ್ನೊ ಆಘಾತಕಾರಿ ವಿಷಯ ಬೆಳಕಿಗೆ ಬಂದಿದೆ. ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI)ನ ಪರೀಕ್ಷೆಯಿಂದ ಈ ವಿಷಯ ತಿಳಿದು ಬಂದಿದೆ. ಹಾಲಿನ ಗುಣಮಟ್ಟದ ಬಗ್ಗೆ ಆರೋಪಗಳು ಕೇಳಿ ಬಂದಿದ್ದು, ಈ ಹಿನ್ನೆಲೆ 31 ಜಿಲ್ಲೆಗಳ ವಿವಿಧ ಸ್ಥಳಗಳಲ್ಲಿ 44 ಬ್ರ್ಯಾಂಡ್‌ಗಳ 259 ಹಾಲಿನ ಮಾದರಿಗಳನ್ನು ಸಂಗ್ರಹಿಸಿ ಗುಣಮಟ್ಟ

ಗ್ರಾಹಕರೇ… ನೀವು ಕುಡಿಯೋದು ಹಾಲಲ್ಲ, ಹಾಲಾಹಲ!! ಬ್ರಾಂಡೆಡ್ ಹಾಲಿನಲ್ಲಿ ವಿಷಕಾರಿ ರಾಸಾಯನಿಕ ಪತ್ತೆ Read More »