ರಾಜ್ಯ

ಕಾರು – ಮಿನಿ ಬಸ್ ನಡುವೆ ಢಿಕ್ಕಿ | ಪ್ರೇಮಿಗಳು ಸಾವು

ಸಮಗ್ರ ನ್ಯೂಸ್: ಮಿನಿ ಬಸ್‌ಗೆ ಕಾರು ಡಿಕ್ಕಿಯಾಗಿ ಪ್ರೇಮಿಗಳು ಸಾವನ್ನಪ್ಪಿರುವ ಘಟನೆ ರಾಮನಗರದ ಕನಕಪುರ ತಾಲೂಕಿನ ಕೆಬ್ಬಹಳ್ಳಿ ಗ್ರಾಮದ ಬಳಿ ನಡೆದಿದೆ. ಮೃತರನ್ನು ಕೆಬ್ಬಹಳ್ಳಿ ಗ್ರಾಮದ ದೀಪಕ್ (25) ಮತ್ತು ಶೈಲಾ (22) ಎಂದು ಗುರುತಿಸಲಾಗಿದೆ. ಕನಕಪುರದಿಂದ ದೀಪಕ್ ಸ್ವಗ್ರಾಮ ಕೆಬ್ಬಹಳ್ಳಿಗೆ ಅತಿವೇಗವಾಗಿ ಕಾರು ಚಲಾಯಿಸುತ್ತಿದ್ದ. ದೀಪಕ್ ಮುಂದಿದ್ದ ವಾಹನವನ್ನು ಓವರ್ ಟೇಕ್ ಮಾಡಲು ಹೋಗಿ ಮಿನಿ ಬಸ್‌ಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದಾಗಿ ಕಾರು ಸಂಪೂರ್ಣ ಜಖಂಗೊಂಡಿದೆ. ಕಾರಿನಲ್ಲಿದ್ದ ಶೈಲಾ ಸ್ಥಳದಲ್ಲೇ ಸಾವನ್ನಪ್ಪಿದರೆ, ಗಂಭೀರವಾಗಿ ಗಾಯಗೊಂಡಿದ್ದ ದೀಪಕ್‌ನನ್ನು

ಕಾರು – ಮಿನಿ ಬಸ್ ನಡುವೆ ಢಿಕ್ಕಿ | ಪ್ರೇಮಿಗಳು ಸಾವು Read More »

ಬಹುಜನ ಸಮಾಜ ಪಕ್ಷಕ್ಕೆ ಉತ್ತರಾಧಿಕಾರಿ ಆಯ್ಕೆ/ ಮಾಯಾವತಿ ಸೋದರಳಿಯ ಆಕಾಶ್ ಆನಂದ್ ನೂತನ ಉತ್ತರಾಧಿಕಾರಿ

ಸಮಗ್ರ ನ್ಯೂಸ್: ಬಹುಜನ ಸಮಾಜ ಪಕ್ಷದ (ಬಿಎಸ್‍ಪಿ) ಉತ್ತರಾಧಿಕಾರಿಯಾಗಿ ತನ್ನ ಸೋದರಳಿಯ ಆಕಾಶ್ ಆನಂದ್ ಅವರನ್ನು ಮುಖ್ಯಸ್ಥೆ ಮಾಯಾವತಿ ಅವರು ನೇಮಕ ಮಾಡಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಆಕಾಶ್ ಆನಂದ್ ರಾಜಕೀಯ ಪ್ರವೇಶಿಸಿದ್ದು, ಸದ್ಯ ಮಾಯಾವತಿಯ ರಾಜಕೀಯ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದರು. ಉತ್ತರ ಪ್ರದೇಶ ಮತ್ತು ಉತ್ತರಾಖಂಡದ ಮೇಲ್ವಿಚಾರಣೆಯನ್ನು ಮಾಯಾವತಿ ಅವರೇ ಮುಂದುವರಿಸಲಿದ್ದಾರೆ ಎಂದು ಪಕ್ಷದ ಮುಖಂಡ ಉದಯ್‍ವೀರ್ ಸಿಂಗ್ ತಿಳಿಸಿದ್ದಾರೆ.

ಬಹುಜನ ಸಮಾಜ ಪಕ್ಷಕ್ಕೆ ಉತ್ತರಾಧಿಕಾರಿ ಆಯ್ಕೆ/ ಮಾಯಾವತಿ ಸೋದರಳಿಯ ಆಕಾಶ್ ಆನಂದ್ ನೂತನ ಉತ್ತರಾಧಿಕಾರಿ Read More »

ಕಾರ್ಕಳ: ಖಾಸಗಿ ಬಸ್ ಹಾಗೂ ಜೀಪ್ ಡಿಕ್ಕಿ| ಓರ್ವ ಮೃತ್ಯು| ಹಲವರಿಗೆ ಗಾಯ

ಸಮಗ್ರ ನ್ಯೂಸ್:ಖಾಸಗಿ ಬಸ್ ಹಾಗೂ ಜೀಪ್ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಮೃತಪಟ್ಟು ಹಲವರು ಗಂಭೀರ ಗಾಯಗೊಂಡ ಘಟನೆ ಕಾರ್ಕಳ ಪಡುಬಿದ್ರಿ ರಾಜ್ಯ ಹೆದ್ದಾರಿಯ ಮಂಜಲ್ಪಾಕೆ ಎಂಬಲ್ಲಿ ನಡೆದಿದೆ. ಮೂಡುಬಿದಿರೆಯಿಂದ ಕಾರ್ಕಳವಾಗಿ ಪಡುಬಿದ್ರಿ ಮಾರ್ಗವಾಗಿ ಮುಂಬಯಿಗೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಬೆಳ್ಮಣ್ ಕಡೆಯಿಂದ ಕಾರ್ಕಳ ಕಡೆಗೆ ಬರುತ್ತಿದ್ದ ಮಹೇಂದ್ರ ಜೀಪು ಡಿಕ್ಕಿ ಹೊಡೆದಿದೆ. ಓವರ್ ಟೇಕ್ ಮಾಡುವ ಸಂದರ್ಭ ಈ ಅಪಘಾತ ಸಂಭವಿಸಿದೆ. ಜೀಪಿನಲ್ಲಿದ್ದ ಹಲವರಿಗೆ ಗಾಯಗಳಾಗಿವೆ. ಗಂಭೀರ ಗಾಯಗೊಂಡಿದ್ದ ಓರ್ವ ಗಾಯಾಳು

ಕಾರ್ಕಳ: ಖಾಸಗಿ ಬಸ್ ಹಾಗೂ ಜೀಪ್ ಡಿಕ್ಕಿ| ಓರ್ವ ಮೃತ್ಯು| ಹಲವರಿಗೆ ಗಾಯ Read More »

ಮಡಿಕೇರಿಯಲ್ಲಿ ಯೋಧನ ಆತ್ಮಹತ್ಯೆ ಪ್ರಕರಣ|ಆರೋಪಿ ಸತ್ಯ ವಿದೇಶಕ್ಕೆ ಪರಾರಿ ಶಂಕೆ| ಸ್ವದೇಶಕ್ಕೆ ಮರಳಿದಾಕ್ಷಾಣ ಬಂಧನ ಎಸ್ ಪಿ ರಾಮರಾಜನ್ ಸ್ಪಷ್ಟನೆ

ಸಮಗ್ರ ನ್ಯೂಸ್: ಮಡಿಕೇರಿಯಲ್ಲಿ ಇತ್ತೀಚಿಗೆ ಪಂಪ್ ಕೆರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಯೋಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಯೋಧ ಬರೆದಿಟ್ಟ ಡೆತ್ ನೋಟಿನಲ್ಲಿದ್ದ ವ್ಯಕ್ತಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಇನ್ನುಳಿದಂತೆ ಆರೋಪಿಗಳಾದ ಸತ್ಯ ಹಾಗೂ ಸತೀಶ ಎಂಬುವವರನ್ನು ಬಂಧಿಸಬೇಕಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಮಾಹಿತಿ ನೀಡಿದ್ದಾರೆ. ಈಗಾಗಲೇ ವಿಶೇಷ ತಂಡ ರಚಿಸಲಾಗಿದ್ದು, ಇವರ ಬಗ್ಗೆ ಮಾಹಿತಿಯನ್ನು ಕಲೆ ಹಾಕಲಾಗುತ್ತಿದೆ. ಸತ್ಯ ಎಂಬುವವರು ವಿದೇಶಕ್ಕೆ ತೆರಳಿದ್ದಾರೆ ಎಂಬ ಮಾಹಿತಿ ಇದ್ದು ಅವರು ಭಾರತಕ್ಕೆ ಬಂದ ತಕ್ಷಣ

ಮಡಿಕೇರಿಯಲ್ಲಿ ಯೋಧನ ಆತ್ಮಹತ್ಯೆ ಪ್ರಕರಣ|ಆರೋಪಿ ಸತ್ಯ ವಿದೇಶಕ್ಕೆ ಪರಾರಿ ಶಂಕೆ| ಸ್ವದೇಶಕ್ಕೆ ಮರಳಿದಾಕ್ಷಾಣ ಬಂಧನ ಎಸ್ ಪಿ ರಾಮರಾಜನ್ ಸ್ಪಷ್ಟನೆ Read More »

ಚಿಕ್ಕಮಗಳೂರು: ಧರ್ಮಸ್ಥಳಕ್ಕೆ ಬಸ್ಸಿಲ್ಲವೆಂದು ಮಧ್ಯರಾತ್ರಿ ಪ್ರಯಾಣಿಕರಿಂದ ಪ್ರತಿಭಟನೆ

ಸಮಗ್ರ ನ್ಯೂಸ್: ಧರ್ಮಸ್ಥಳಕ್ಕೆ ಬಸ್ಸಿಲ್ಲ ಎಂದು ನೂರಾರು ಪ್ರಯಾಣಿಕರು ಶನಿವಾರ ಮಧ್ಯರಾತ್ರಿ ದಿಢೀರ್‌ ಪ್ರತಿಭಟನೆ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲಾ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ. ಡಿ. 12ರಂದು ಮಂಜುನಾಥ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ ನಡೆಯಲಿದೆ. ಈ ವಿಶೇಷ ಸಂದರ್ಭದಲ್ಲಿ ಶ್ರೀ ಕ್ಷೇತ್ರಕ್ಕೆ ತೆರಳಲು ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಪ್ರಯಾಣಿಕರು ನಿತ್ಯ ಸಂಚರಿಸುತ್ತಿದ್ದಾರೆ. ಕಳೆದ ರಾತ್ರಿ ಚಿಕ್ಕಮಗಳೂರು ಬಸ್ ನಿಲ್ದಾಣಕ್ಕೆ ಬಂದಿದ್ದ ನೂರಾರು ಪ್ರಯಾಣಿಕರು ಬಸ್ಸು ಇಲ್ಲದ್ದರಿಂದ ನಿಲ್ದಾಣದ ಒಳಗಡೆಯೇ ಪ್ರತಿಭಟನೆಗೆ ಮುಂದಾಗಿದ್ದಾರೆ. ಸಂಜೆ 7

ಚಿಕ್ಕಮಗಳೂರು: ಧರ್ಮಸ್ಥಳಕ್ಕೆ ಬಸ್ಸಿಲ್ಲವೆಂದು ಮಧ್ಯರಾತ್ರಿ ಪ್ರಯಾಣಿಕರಿಂದ ಪ್ರತಿಭಟನೆ Read More »

ತಿತಿಮಿತಿ ಭದ್ರಗೊಳ ಬಳಿ ಕಾರು ಸಹಿತ 50 ಲಕ್ಷ ರೂಪಾಯಿ ದರೋಡೆ ಪ್ರಕರಣ| ಆರೋಪಿಗಳು ಅಪರಿಸಿದ ಕಾರು ಕೊಳ್ತೋಡ್ ಬೈಗೋಡಿನಲ್ಲಿ ಪತ್ತೆ

ಸಮಗ್ರ ನ್ಯೂಸ್: ಕೇರಳದ ಮಲಪುರಂ ಜಿಲ್ಲೆಯ ಗುತ್ತಿಗೆದಾರ ಕೆ.ಶಂಜಾದ್ ಹಾಗೂ ಆತನ ಸ್ನೇಹಿತ ಐನು ಎಂಬುವರು ತಮ್ಮ ಬಳಿ ಇದ್ದ 750 ಗ್ರಾಂ ಚಿನ್ನಾಭರಣಗಳನ್ನು ಹಣದ ಅವಶ್ಯಕತೆ ಇರುವುದರಿಂದ, ಹಾಗೆ ಮೈಸೂರಿನಲ್ಲಿ ಹೆಚ್ಚಿನ ದರ ಸಿಗುವ ಅವಕಾಶ ಇರುವುದರಿಂದ ಡಿ. 8ರಂದು ಮಧ್ಯಾಹ್ನ ಮೈಸೂರಿನಲ್ಲಿ ಅಶೋಕ ರಸ್ತೆಯ ಚಿನ್ನದ ಅಂಗಡಿಯಲ್ಲಿ ಕರಗಿಸಿ ಅದನ್ನು ಅಲ್ಲೇ ಮಾರಾಟ ಮಾಡಿ 50 ಲಕ್ಷ ರೂಪಾಯಿ ಹಣವನ್ನು ಪಡೆದುಕೊಂಡು ಮಧ್ಯರಾತ್ರಿ ಎರಡು ಗಂಟೆ ಸಮಯದಲ್ಲಿ ದೇವರಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭದ್ರಗೊಳ

ತಿತಿಮಿತಿ ಭದ್ರಗೊಳ ಬಳಿ ಕಾರು ಸಹಿತ 50 ಲಕ್ಷ ರೂಪಾಯಿ ದರೋಡೆ ಪ್ರಕರಣ| ಆರೋಪಿಗಳು ಅಪರಿಸಿದ ಕಾರು ಕೊಳ್ತೋಡ್ ಬೈಗೋಡಿನಲ್ಲಿ ಪತ್ತೆ Read More »

ಖಾಸಗಿ ಬಸ್ ಪಲ್ಟಿ ಇಬ್ಬರು ಸಾವು| 20ಕ್ಕೂ ಹೆಚ್ಚು ಜನರಿಗೆ ಗಾಯ

ಸಮಗ್ರ ನ್ಯೂಸ್: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿಯಾಗಿ ಇಬ್ಬರು ಸಾವನ್ನಪ್ಪಿರುವ ಘಟನೆ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ಉಗಣೆಕಟ್ಟೆ-ಆವಿಹಟ್ಟಿ ನಡುವೆ ನಡೆದಿದೆ. ಮದುವೆಗೆ ಎಂದು ಹೊಸದುರ್ಗದಿಂದ ದಾವಣಗೆರೆಗೆ ತೆರಳುತ್ತಿದ್ದ ಖಾಸಗಿ ಬಸ್ ನಿಯಂತ್ರಣ ತಪ್ಪಿ ರಸ್ತೆ ಬದಿಯ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಈ ದುರ್ಘಟನೆಯಲ್ಲಿ ಬಸ್ ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಸುಮಾರು 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಹಲವರ ಸ್ಥಿತಿ ಗಂಭೀರವಾಗಿದೆ. ವಿಧಿಯಾಟ ಎಂತ ವಿಪರ್ಯಾಸ ಅಲ್ವಾ..ಈ ಭೀಕರ ದುರಂತ

ಖಾಸಗಿ ಬಸ್ ಪಲ್ಟಿ ಇಬ್ಬರು ಸಾವು| 20ಕ್ಕೂ ಹೆಚ್ಚು ಜನರಿಗೆ ಗಾಯ Read More »

ಡಿ. 12ರಿಂದ ಗ್ರಾಮೀಣ ಅಂಚೆ ಸೇವಕರ ಮುಷ್ಕರ/ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಸಮಗ್ರ ನ್ಯೂಸ್: ಅಖಿಲ ಭಾರತ ಗ್ರಾಮೀಣ ಅಂಚೆ ಸೇವಕರ ಒಕ್ಕೂಟ (ಎಐಜಿಡಿಎಸ್‍ಯು) ಹಾಗೂ ಗ್ರಾಮೀಣ ಅಂಚೆ ಸೇವಕರ ರಾಷ್ಟ್ರೀಯ ಒಕ್ಕೂಟ (ಎನ್‍ಯುಜಿಡಿಎಸ್) ಸಹಯೋಗದಲ್ಲಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಡಿ. 12ರಿಂದ ಮುಷ್ಕರ ಕೈಗೊಳ್ಳಲಾಗುತ್ತಿದೆ. ಮುಷ್ಕರ ಹಿನ್ನೆಲೆಯಲ್ಲಿ ಸೇವೆಯನ್ನು ಸ್ಥಗಿತಗೊಳಿಸಿ, ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುತ್ತದೆ. ಇದರಿಂದ ಗ್ರಾಮೀಣ ಭಾಗದಲ್ಲಿ ಅಂಚೆ ಸೇವೆಗಳು ವ್ಯತ್ಯಯವಾಗುವ ಸಾಧ್ಯತೆಯಿದೆ ಎಂದು ಎಐಜಿಡಿಎಸ್‍ಯು ಪ್ರಧಾನ ಕಾರ್ಯದರ್ಶಿ ಎಸ್.ಎಸ್. ಮಹದೇವಯ್ಯ ಹೇಳಿದರು. ರಾಜ್ಯದಲ್ಲಿ 16.5 ಸಾವಿರ ಗ್ರಾಮೀಣ ಅಂಚೆ ಸೇವಕರು ಕಾರ್ಯನಿರ್ವಹಿಸುತ್ತಿದ್ದು, ಅಂಚೆ

ಡಿ. 12ರಿಂದ ಗ್ರಾಮೀಣ ಅಂಚೆ ಸೇವಕರ ಮುಷ್ಕರ/ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ Read More »

ಯುವ ಜನತೆಗೆ ಗುಡ್ ನ್ಯೂಸ್ ನೀಡಿದ ಸಿಎಂ| ಯುವನಿಧಿ ಜಾರಿಗೆ ಮುಹೂರ್ತ ಫಿಕ್ಸ್

ಸಮಗ್ರ ನ್ಯೂಸ್: ರಾಜ್ಯ ಸರ್ಕಾರದ ಐದನೇ ಗ್ಯಾರಂಟಿ ಯೋಜನೆಯಾದ ಯುವನಿಧಿ ಯೋಜನೆ ಜಾರಿಗೆ ಮುಹೂರ್ತ ಫಿಕ್ಸ್‌ ಆಗಿದ್ದು, ಡಿಪ್ಲೋಮಾ, ಪದವೀಧರರಿಗೆ ಜನವರಿಯಲ್ಲಿ ‘ಯುವನಿಧಿ’ ಜಾರಿಗೊಳಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ನಮ್ಮ ಸರ್ಕಾರವು ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಘೋಷಣೆ ಮಾಡಿದ 143 ಕಾರ್ಯಕ್ರಮಗಳಲ್ಲಿ 83ಕ್ಕೆ ಆದೇಶ ಹೊರಡಿಸಿ, ಜಾರಿಗೊಳಿಸಲಾಗುತ್ತಿದೆ.4 ಗ್ಯಾರಂಟಿ ಯೋಜನೆಗಳು ಈಗಾಗಲೇ ಜಾರಿಯಾಗಿವೆ, ಯುವನಿಧಿ ಜನವರಿಯಲ್ಲಿ ಜಾರಿಗೆ ಬರಲಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು. ರಾಜ್ಯ ಸರ್ಕಾರವು ಈಗಾಗಲೇ ಶಕ್ತಿ ಯೋಜನೆ, ಗೃಹಜ್ಯೋತಿ,

ಯುವ ಜನತೆಗೆ ಗುಡ್ ನ್ಯೂಸ್ ನೀಡಿದ ಸಿಎಂ| ಯುವನಿಧಿ ಜಾರಿಗೆ ಮುಹೂರ್ತ ಫಿಕ್ಸ್ Read More »

ಪಕ್ಷ ವಿರೋಧಿ ಚಟುವಟಿಕೆ/ ಜೆಡಿಎಸ್‍ನಿಂದ ಸಿ.ಎಂ.ಇಬ್ರಾಹಿಂ ಅಧಿಕೃತ ಉಚ್ಚಾಟನೆ

ಸಮಗ್ರ ನ್ಯೂಸ್: ಪಕ್ಷ ವಿರೋಧಿ ಚಟುವಟಿಕೆ ಹಿನ್ನಲೆಯಲ್ಲಿ ಜೆಡಿಎಸ್‍ನಿಂದ ಸಿ.ಎಂ.ಇಬ್ರಾಹಿಂ ಅವರನ್ನು ಅಧಿಕೃತವಾಗಿ ಉಚ್ಚಾಟನೆ ಮಾಡಲಾಗಿದೆ. ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ ದೇವೇಗೌಡ ನೇತೃತ್ವದಲ್ಲಿ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ಉಚ್ಚಾಟನೆ ಪ್ರಸ್ತಾಪಕ್ಕೆ ಒಮ್ಮತದಿಂದ ಅನುಮೋದನೆ ನೀಡಲಾಗಿದೆ. ಇವರೊಂದಿಗೆ ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷ ಸಿ.ಕೆ.ನಾಣು ಅವರನ್ನು ಕೂಡ ಉಚ್ಚಾಟನೆ ಮಾಡಲಾಗಿದೆ. ಲೋಕಸಭಾ ಚುನಾವಣೆಗೆ ಬಿಜೆಪಿ- ಜೆಡಿಎಸ್ ಮೈತ್ರಿ ಘೋಷಣೆಯಾದಾಗಿನಿಂದಲೂ ಇಬ್ರಾಹಿಂ ಅವರು ಪಕ್ಷದ ವಿರುದ್ಧ, ಪಕ್ಷದ ನಾಯಕರಾದ ದೇವೇಗೌಡ, ಕುಮಾರಸ್ವಾಮಿ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಕೇರಳ ಸೇರಿದಂತೆ ವಿವಿಧ ಸಂಘಟನೆಗಳ

ಪಕ್ಷ ವಿರೋಧಿ ಚಟುವಟಿಕೆ/ ಜೆಡಿಎಸ್‍ನಿಂದ ಸಿ.ಎಂ.ಇಬ್ರಾಹಿಂ ಅಧಿಕೃತ ಉಚ್ಚಾಟನೆ Read More »