ರಾಜ್ಯ

ಹುಬ್ಬಳ್ಳಿ : ಹಿಂದೂ ಯುವತಿಯರ ಜೀವಕ್ಕೆ ಗ್ಯಾರಂಟಿ ಕೊಡಿಸಿ : ಪ್ರಲ್ಹಾದ್‌ ಜೋಶಿಯವರಲ್ಲಿ ನೇಹಾ ತಂದೆ ಮನವಿ

ಸಮಗ್ರ ನ್ಯೂಸ್‌ : ಮಗಳು ನೇಹಾ ಕಗ್ಗೊಲೆ ಪ್ರಕರಣದಲ್ಲಿ ನಮಗೆ ನ್ಯಾಯ ನೀಡಿ, ದಯವಿಟ್ಟು ಹಿಂದೂ ಯುವತಿಯರ ಜೀವಕ್ಕೆ ಗ್ಯಾರಂಟಿ ಕೊಡಿಸಿ, ಮಕ್ಕಳ ಅಮೂಲ್ಯ ಜೀವ ಉಳಿಸಿಕೊಡಿ, ಇದು ನಿಮ್ಮಿಂದ ಮಾತ್ರವೇ ಸಾಧ್ಯ ಸರ್, ಪ್ಲೀಸ್. ಹಂತಕನಿಗೆ ಕಠಿಣ ಶಿಕ್ಷೆ ಕೊಡಿಸಿ” ಎಂದು ಕೇಂದ್ರ ಸಂಸದೀಯ ಸಚಿವ ಪ್ರಲ್ಹಾದ್‌ ಜೋಶಿ ಬಳಿ ಕೊಲೆಯಾದ ನೇಹಾ ಹಿರೇಮಠ ಅವರ ತಂದೆ ನಿರಂಜನ್‌ ಹಿರೇಮಠ ಮನವಿ ಮಾಡಿಕೊಂಡಿರುವ ಘಟನೆ ನಡೆದಿದೆ. ಕಾಲೇಜು ಕ್ಯಾಂಪಸ್‌ನಲ್ಲೇ ಹೀಗೆ ಹತ್ಯೆ ನಡೆದರೆ ಹಿಂದೂ ಹೆಣ್ಣು

ಹುಬ್ಬಳ್ಳಿ : ಹಿಂದೂ ಯುವತಿಯರ ಜೀವಕ್ಕೆ ಗ್ಯಾರಂಟಿ ಕೊಡಿಸಿ : ಪ್ರಲ್ಹಾದ್‌ ಜೋಶಿಯವರಲ್ಲಿ ನೇಹಾ ತಂದೆ ಮನವಿ Read More »

ಮೈಸೂರು : ಮೋದಿ ಪರ ಹಾಡು ಬರೆದ ಯುವಕನ ಮೇಲೆ ಮುಸ್ಲಿಮರಿಂದ ಹಲ್ಲೆ

ಸಮಗ್ರ ನ್ಯೂಸ್‌ : ಮೋದಿ ಪರ ಹಾಡು ಬರೆದಿದ್ದಕ್ಕೆ ಯುವಕನ ಮೇಲೆ ಮುಸ್ಲಿಂ ಯುವಕರು ಹಲ್ಲೆ ನಡೆಸಿರುವ ಘಟನೆ ಮೈಸೂರಿನ ಸರ್ಕಾರಿ ಅತಿಥಿ ಗೃಹದ ಬಳಿ ನಡೆದಿದೆ. ರೋಹಿತ್ ಹಲ್ಲೆಗೆ ಒಳಗಾದ ಯುವಕ. ಈ ಸಂಬಂಧ ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ರೋಹಿತ್‌ ದೂರು ನೀಡಿದ್ದು, ಹಲ್ಲೆಗೊಳಗಾದ ಯುವಕನನ್ನು ಪೊಲೀಸರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ನಾನು ಕಳೆದ ವಾರ ಮೋದಿ ಕುರಿತಾಗಿ ಸಾಂಗ್‌ ಮಾಡಿದ್ದೆ. ನಾನು ಜನರ ಜೊತೆ ಈ ಸಾಗ್‌ ತೋರಿಸಿ ಚಾನೆಲ್‌ ಸಬ್‌ಸ್ಕ್ರೈಬ್‌ ಮಾಡುವಂತೆ

ಮೈಸೂರು : ಮೋದಿ ಪರ ಹಾಡು ಬರೆದ ಯುವಕನ ಮೇಲೆ ಮುಸ್ಲಿಮರಿಂದ ಹಲ್ಲೆ Read More »

ಮೈಸೂರು: ಸಾಲದ ಶೂಲಕ್ಕೆ ಬಲಿಯಾದ ಉಪನ್ಯಾಸಕ- ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸಾವಿಗೆ ಶರಣು

ಸಮಗ್ರ ನ್ಯೂಸ್‌ : ಸಾವಿರಾರು ವಿದ್ಯಾರ್ಥಿಗಳಿಗೆ ಪಾಠ ಪ್ರವಚನ ಮಾಡಿ ದಾರಿದೀಪವಾಗಬೇಕಿದ್ದ ಕಾಲೇಜು ಉಪನ್ಯಾಸಕ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಂಜನಗೂಡು ತಾಲ್ಲೂಕಿನ ಹೊಸಹಳ್ಳಿ ಗೇಟ್ ನಲ್ಲಿ ನಡೆದಿದೆ. ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಇಂಗಲವಾಡಿ ಗ್ರಾಮದ ಮಹದೇವಪ್ಪ ಎಂಬುವರರ ಪುತ್ರ ಮಾದಪ್ಪ 45 ವರ್ಷದ ಮೃತ ಉಪನ್ಯಾಸಕ ಎಂದು ತಿಳಿದು ಬಂದಿದೆ. ನಂಜನಗೂಡು ಪಟ್ಟಣದ ವಿ.ಎ ಲೇಔಟ್ ನಲ್ಲಿ ಸ್ವಂತ ಮನೆಯಲ್ಲಿ ವಾಸವಾಗಿದ್ದರು. ಕಳೆದ ಎರಡು ವರ್ಷಗಳ ಹಿಂದೆ ನೂತನ ಮನೆ

ಮೈಸೂರು: ಸಾಲದ ಶೂಲಕ್ಕೆ ಬಲಿಯಾದ ಉಪನ್ಯಾಸಕ- ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸಾವಿಗೆ ಶರಣು Read More »

ತುಮಕೂರು : ಇವಿಎಂ ಮೇಲೆ ಅನುಮಾನ ಇದೆ ಎಂದ ಗೃಹ ಸಚಿವ ಜಿ.ಪರಮೇಶ್ವರ

ಸಮಗ್ರ ನ್ಯೂಸ್‌ : ವಿದ್ಯುನ್ಮಾನ ಮತಯಂತ್ರಗಳ ದೋಷದ ಬಗ್ಗೆ ನಾವು ಪ್ರಾರಂಭದಿಂದ ಹೇಳುತ್ತಿದ್ದೇವೆ. ಈಗಲೂ ಇವಿಎಂ ಮೇಲೆ ನಮಗೆ ಅನುಮಾನ ಇದೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು. ಕೇರಳದಲ್ಲಿ ಯಾವುದೇ ಬಟನ್‌ ಒತ್ತಿದರೂ ಬಿಜೆಪಿಗೆ ಮತ ಬಿದ್ದಿದೆ. ಬಿಜೆಪಿಯವರು ಎಲ್ಲ ಕ್ಷೇತ್ರಗಳಲ್ಲಿ ಹೀಗೆ ಮಾಡುವುದಿಲ್ಲ. ತುಂಬಾ ಬುದ್ಧಿವಂತಿಕೆಯಿಂದ ಈ ಕೆಲಸ ಮಾಡುತ್ತಾರೆ. 150-200 ಕ್ಷೇತ್ರ ಬಿಟ್ಟು ಉಳಿದ ಕ್ಷೇತ್ರದಲ್ಲಿ ಹ್ಯಾಕ್‌ ಮಾಡುತ್ತಾರೆ ಎಂಬ ಅನುಮಾನ ಇದೆ ಗೊಂದಲ ವ್ಯಕ್ತಪಡಿಸಿದರು.

ತುಮಕೂರು : ಇವಿಎಂ ಮೇಲೆ ಅನುಮಾನ ಇದೆ ಎಂದ ಗೃಹ ಸಚಿವ ಜಿ.ಪರಮೇಶ್ವರ Read More »

ಕಲಬುರಗಿ : ಬಾತ್ರೂಂನಲ್ಲಿ ಕದ್ದು ಮಹಿಳೆಯ ವಿಡಿಯೋ ಚಿತ್ರೀಕರಿಸಿದ ಸೆಕ್ಯೂರಿಟಿ ಗಾರ್ಡ್: ಪೊಲೀಸರ ವಶಕ್ಕೆ

ಸಮಗ್ರ ನ್ಯೂಸ್‌ : ಸೆಕ್ಯೂರಿಟಿ ಗಾರ್ಡ್ವೊಬ್ಬ ಬಾತ್ ರೂಂನಲ್ಲಿ ಸ್ನಾನ ಮಾಡುತ್ತಿದ್ದ ಮಹಿಳೆಯ ವಿಡಿಯೋ ರೆಕಾರ್ಡ್ ಮಾಡಿ ಸಿಕ್ಕಿಬಿದ್ದಿರುವ ಘಟನೆ ಕಲಬುರಗಿ ನಗರದ ರಾಮ ಮಂದಿರ ವೃತ್ತದ ಬಳಿಯಿರುವ ಅಪಾರ್ಟ್ಮೆಂಟ್ ನಲ್ಲಿ ನಡೆದಿದೆ. ವಿಶ್ವನಾಥ್ ವಿಡಿಯೋ ರೇಕಾರ್ಡ್ ಮಾಡಿ ಸಿಕ್ಕಿಬಿದ್ದ ಸೆಕ್ಯೂರಿಟಿ ಗಾರ್ಡ್. ಮಹಿಳೆ ಅಪಾರ್ಟ್ಮೆಂಟ್ ನಲ್ಲಿ ಬಾಡಿಗೆಗೆ ಇದ್ದಳು. ಆಕೆ ಬಾತ್ ರೂಂನಲ್ಲಿ ಇದ್ದ ವೇಳೆ ಸೆಕ್ಯೂರಿಟಿ ಗಾರ್ಡ್ ವಿಶ್ವನಾಥ್ ತನ್ನ ಸ್ಮಾರ್ಟ್ಫೋನ್ನಲ್ಲಿ ವಿಡಿಯೋ ಚಿತ್ರೀಕರಿಸಿದ್ದಾನೆ. ಈ ವಿಚಾರ ಮಹಿಳೆ ತಿಳಿದಿದ್ದು, ತಕ್ಷಣ ಗಂಡನಿಗೆ ಕರೆ

ಕಲಬುರಗಿ : ಬಾತ್ರೂಂನಲ್ಲಿ ಕದ್ದು ಮಹಿಳೆಯ ವಿಡಿಯೋ ಚಿತ್ರೀಕರಿಸಿದ ಸೆಕ್ಯೂರಿಟಿ ಗಾರ್ಡ್: ಪೊಲೀಸರ ವಶಕ್ಕೆ Read More »

ಹುಬ್ಬಳ್ಳಿ : ಲವ್ ಜಿಹಾದ್ ಯಶಸ್ವಿಯಾಗಲಿಲ್ಲವೆಂದು ಕೊಲೆ ಎಂದ ಪ್ರಮೋದ್ ಮುತಾಲಿಕ್

ಸಮಗ್ರ ನ್ಯೂಸ್‌ : ಬಿವಿಬಿ ಕಾಲೇಜು ಕ್ಯಾಂಪಸ್‌ನಲ್ಲಿ ಯುವತಿಯೊಬ್ಬಳು ಪ್ರೀತಿಯನ್ನು ನಿರಾಕರಿಸಿದಲೆಂದು ಹತ್ಯೆ ಮಾಡಿರುವ ಪ್ರಕರಣವನ್ನು ಖಂಡಿಸಿ, ಕೊಲೆ ಎನ್ನುವುದು ಇಸ್ಲಾಮ್‌ನಲ್ಲಿ ಸಹಜ ಪ್ರಕ್ರಿಯೆ. ಆತ ಐಸಿಸ್ ಮಾದರಿಯಲ್ಲಿ ಕುತ್ತಿಗೆಗೆ ಚಾಕು ಹಾಕಿದ್ದಾನೆ. ಆರೋಪಿ ಫಯಾಜ್‌ ಲವ್ ಮಾಡಿ ಮತಾಂತರ ಮಾಡಲು ಮುಂದಾಗಿದ್ದ. ಲವ್ ಜಿಹಾದ್ ಯಶಸ್ವಿಯಾಗಲಿಲ್ಲವೆಂದು ಈಗ ಕೊಲೆ ಮಾಡಿದ್ದಾನೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗಂಭೀರ ಆರೋಪ ಮಾಡಿದ್ದಾರೆ. ಅವರು ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ ಆರೋಪಿ ಫಯಾಜ್‌ ಚಾಕು ಹಾಕಲು ಎಲ್ಲಿ ತರಬೇತಿ

ಹುಬ್ಬಳ್ಳಿ : ಲವ್ ಜಿಹಾದ್ ಯಶಸ್ವಿಯಾಗಲಿಲ್ಲವೆಂದು ಕೊಲೆ ಎಂದ ಪ್ರಮೋದ್ ಮುತಾಲಿಕ್ Read More »

ರಾಯಚೂರು : ಕಲ್ಲಿನಿಂದ ಜಜ್ಜಿ ಹೆಂಡತಿಯನ್ನು ಕೊಂದು ತಾನು ನೇಣಿಗೆ ಶರಣು

ಸಮಗ್ರ ನ್ಯೂಸ್ : ಕ್ಷುಲ್ಲಕ ಕಾರಣಕ್ಕೆ ಗಂಡ- ಹೆಂಡತಿ ನಡುವೆ ನಡೆದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ರಾಯಚೂರಿನ ಸಿಂಧನೂರು ತಾಲೂಕಿನ ದಿದ್ದಿಗಿ ಗ್ರಾಮದಲ್ಲಿ ನಡೆದಿದೆ. ಕವಿತಾ (26) ಕೊಲೆಯಾದವಳು. ಭೀಮಣ್ಣ (28) ಎಂಬಾತ ಪತ್ನಿಯನ್ನು ಕೊಂದು ನೇಣಿಗೆ ಶರಣಾದವನು. ಕವಿತಾ ಹಾಗೂ ಭೀಮಣ್ಣ ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಇಬ್ಬರಿಗೂ ಮದುವೆಯಾಗಿತ್ತು. ಇತ್ತೀಚೆಗೆ ಭೀಮಣ್ಣನಿಗೆ ಕವಿತಾಳನ್ನು ಅನುಮಾನ ದೃಷ್ಟಿಯಿಂದ ನೋಡುತ್ತಿದ್ದನು. ಆಕೆಯ ಶೀಲವನ್ನೂ ಕೂಡ ಶಂಕಿಸಿದ್ದು, ಇದೇ ವಿಚಾರಕ್ಕೆ ಪದೇಪದೆ ಪತ್ನಿ ಜತೆ ಜಗಳ ಮಾಡುತ್ತಿದ್ದರು.

ರಾಯಚೂರು : ಕಲ್ಲಿನಿಂದ ಜಜ್ಜಿ ಹೆಂಡತಿಯನ್ನು ಕೊಂದು ತಾನು ನೇಣಿಗೆ ಶರಣು Read More »

ಲೋಕಸಭಾ ಚುನಾವಣೆ/ ಯುವಮತದಾರರಿಗೆ ಮೋದಿ ಸಲಹೆ

ಸಮಗ್ರ ನ್ಯೂಸ್: ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಆರಂಭವಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ತಮ್ಮ ಟ್ವೀಟರ್‍ನಲ್ಲಿ ದೇಶದ ಪ್ರತಿ ಯುವ ಮತದಾರರಿಗೂ ವಿಶೇಷ ಸಲಹೆ ನೀಡಿದ್ದಾರೆ. 2024 ರ ಲೋಕಸಭೆ ಚುನಾವಣೆಯು ಇಂದಿನಿಂದ ಪ್ರಾರಂಭವಾಗುತ್ತದೆ. 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ 102 ಸ್ಥಾನಗಳಿಗೆ ಚುನಾವಣೆಗೆ ನಡೆಯುತ್ತಿರುವ ಕಾರಣ, ಈ ಸ್ಥಾನಗಳಲ್ಲಿ ಮತ ಚಲಾಯಿಸುವವರೆಲ್ಲರೂ ತಮ್ಮ ಹಕ್ಕುಗಳನ್ನು ದಾಖಲೆ ಸಂಖ್ಯೆಯಲ್ಲಿ ಚಲಾಯಿಸುವಂತೆ ನಾನು ಒತ್ತಾಯಿಸುತ್ತೇನೆ ಎಂದಿದ್ದಾರೆ. ವಿಶೇಷವಾಗಿ ಯುವ ಪೀಳಿಗೆ ಮತ್ತು ಮೊದಲ ಬಾರಿಗೆ ಮತದಾನ

ಲೋಕಸಭಾ ಚುನಾವಣೆ/ ಯುವಮತದಾರರಿಗೆ ಮೋದಿ ಸಲಹೆ Read More »

ಹುಬ್ಬಳ್ಳಿ: ಕಾಲೇಜ್‌ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿಗೆ ಚೂರಿಯಿಂದ ಇರಿದು ಕೊಲೆ -ಯುವಕ ಬಂಧನ

ಸಮಗ್ರ ನ್ಯೂಸ್‌ : ಯುವಕನೊಬ್ಬ ವಿದ್ಯಾರ್ಥಿನಿಯನ್ನು ಬಿವಿಬಿ ಕಾಲೇಜ್ ಕ್ಯಾಂಪಸ್‌ನಲ್ಲೇ ಕೊಲೆ ಮಾಡಿರುವ ಘಟನೆ ನಡೆದಿದೆ. ಪಾಲಿಕೆಯ ಕಾಂಗ್ರೆಸ್‌ ಸದಸ್ಯ ನಿರಂಜನ ಹಿರೇಮಠ ಅವರ ಪುತ್ರಿ ನೇಹಾ ಕೊಲೆಯಾದ ವಿದ್ಯಾರ್ಥಿನಿ. ಅದೇ ಕಾಲೇಜಿನ ವಿದ್ಯಾರ್ಥಿ ಫಯಾಜ್ 9 ಬಾರಿ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ. ಪ್ರಥಮ ವರ್ಷದ ಎಂಸಿಎ ವಿದ್ಯಾಭ್ಯಾಸ ಮಾಡುತ್ತಿದ್ದ ನೇಹಾಗೆ ಕ್ಯಾಂಪಸ್‌ನಲ್ಲೇ 9 ಬಾರಿ ಚಾಕು ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡ ನೇಹಾಳನ್ನು ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಆಕೆ ಮೃತಪಟ್ಟಿದ್ದಾಳೆ. ಬೆಳಗಾವಿ ಜಿಲ್ಲೆಯ ಸವದತ್ತಿ ನಿವಾಸಿಯಾಗಿದ್ದ ಫಯಾಜ್

ಹುಬ್ಬಳ್ಳಿ: ಕಾಲೇಜ್‌ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿಗೆ ಚೂರಿಯಿಂದ ಇರಿದು ಕೊಲೆ -ಯುವಕ ಬಂಧನ Read More »

ಬೆಂಗಳೂರಿನ 10ಕ್ಕೂ ಹೆಚ್ಚು ಕಡೆ ಬೆಳ್ಳಂಬೆಳಗೆ ಐಟಿ ಶಾಕ್

ಸಮಗ್ರ ನ್ಯೂಸ್: ಚುನಾವಣೆ ಹೊಸ್ತಿಲಲ್ಲಿರುವಾಗಲೆ ಇಂದು ಬೆಳ್ಳಂಬೆಳಗೆ ಅಧಿಕಾರಿಗಳಿಗೆ ಐಟಿ ಶಾಕ್ ಕೊಟ್ಟಿದೆ. ಬೆಂಗಳೂರಿನ ಹತ್ತಕ್ಕೂ ಹೆಚ್ಚು ಕಡೆ ಬೆಳಗ್ಗೆ ಐಟಿ ಅಧಿಕಾರಿಗಳು ಉದ್ಯಮಿಗಳ ಮನೆ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದಾರೆ. ಚುನಾವಣೆಗೆ ಹಣ ಸಾಗಾಟ ಆರೋಪ ಹಿನ್ನೆಲೆಯಲ್ಲಿ ದಾಳಿ ಮಾಡಿರುವ ಸಾಧ್ಯತೆ ಇದೆ. ಇನ್ನೂ ಕಾಂಗ್ರೆಸ್ ಪಕ್ಷದ ಜತೆ ಗರುತಿಸಿಕೊಂಡಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಮನೆ ಮೇಲೆ ಐಟಿ ಅಧಿಕಾರಿಗಳು ನೆಲಮಂಗಲದಲ್ಲಿ ಕೆಲವು ದಿನಗಳ ಹಿಂದೆ ದಾಳಿ ಮಾಡಿದ್ದರು. ಡಿ.ಕೆ ಶಿವಕುಮಾರ್ ಹಾಗೂ

ಬೆಂಗಳೂರಿನ 10ಕ್ಕೂ ಹೆಚ್ಚು ಕಡೆ ಬೆಳ್ಳಂಬೆಳಗೆ ಐಟಿ ಶಾಕ್ Read More »