ರಾಜ್ಯ

ದ್ವಿತೀಯ ಪಿಯುಸಿ ಪರೀಕ್ಷೆ -2 ವೇಳಾಪಟ್ಟಿ ಪ್ರಕಟ

ಸಮಗ್ರ ನ್ಯೂಸ್: ರಾಜ್ಯದಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ-1 ಫಲಿತಾಂಶ ಪ್ರಕಟವಾಗಿದೆ. ಮೊದಲ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಪರೀಕ್ಷೆ-2 ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಎಪ್ರಿಲ್‌ 24 ರಿಂದ ಮೇ 8 ರವರೆಗೆ ಪರೀಕ್ಷೆಗಳು ನಡೆಯಲಿದೆ. ದ್ವಿತೀಯ ಪಿಯು ಪರೀಕ್ಷೆ-2 ವೇಳಾಪಟ್ಟಿ ಈ ರೀತಿ ಇದೆ;24-4-2025: ಕನ್ನಡ, ಅರೇಬಿಕ್25-4-2025: ರಾಜ್ಯಶಾಸ್ತ್ರ, ಸಂಖ್ಯಾಶಾಸ್ತ್ರ, ಜೀವಶಾಸ್ತ್ರ26-4-2025: ಇತಿಹಾಸ, ಭೌತಶಾಸ್ತ್ರ27-4-2025: ಭಾನುವಾರ (ರಜಾ ದಿನ)28-4-2025: ಭೂಗೋಳಶಾಸ್ತ್ರ, ಮನಶಾಸ್ತ್ರ, ರಸಾಯನಶಾಸ್ತ್ರ, ಮೂಲ ಗಣಿತ29-4-2025: ಇಂಗ್ಲೀಷ್30-4-2025: ಬಸವ ಜಯಂತಿ (ರಜಾ ದಿನ)01-05-2025: ಕಾರ್ಮಿಕ ದಿನಾಚರಣೆ (ರಜಾ ದಿನ)02-05-2025: […]

ದ್ವಿತೀಯ ಪಿಯುಸಿ ಪರೀಕ್ಷೆ -2 ವೇಳಾಪಟ್ಟಿ ಪ್ರಕಟ Read More »

ಬೆಳ್ತಂಗಡಿ: ಕಾಡಿನಲ್ಲಿ ಪತ್ತೆಯಾದ ಮಗುವಿನ ತಂದೆ – ತಾಯಿಗೆ ವಿವಾಹ| ಕಾನೂನಾತ್ಮಕವಾಗಿ ಮಗುವನ್ನು ವಾಪಾಸು ಪಡೆಯಲು ನಿರ್ಧಾರ

ಸಮಗ್ರ ನ್ಯೂಸ್: ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳಾಲು ಗ್ರಾಮದ ಕೊಡೋಳುಕೆರೆ ಎಂಬಲ್ಲಿ ಮಾರ್ಚ್ 22ರಂದು ಕಾಡಿನಲ್ಲಿ ಪತ್ತೆಯಾಗಿದ್ದ ಶಿಶುವಿನ ತಂದೆ-ತಾಯಿ ವಿವಾಹವಾಗಿದ್ದಾರೆ. ಕಾಡಿನಲ್ಲಿ ಪತ್ತೆಯಾದ ಶಿಶುವು ಬೆಳಾಲು ಗ್ರಾಮದ ಮಾಯ ಪ್ರದೇಶದ ನಿವಾಸಿ ರಂಜಿತ್ ಗೌಡ (27) ಹಾಗೂ ಧರ್ಮಸ್ಥಳ ಬಳಿಯ ಪಾಂಗಾಳ ನಿವಾಸಿ ಸುಶ್ಮಿತಾ ಅವರಿಗೆ ಸೇರಿದ್ದು ಎಂಬುದನ್ನು ಪೊಲೀಸರು ಪತ್ತೆಹಚ್ಚಿದ್ದರು. ಎರಡೂ ಕುಟುಂಬಗಳ ಪ್ರಮುಖರ ಸಮ್ಮುಖದಲ್ಲಿ ನಡ ಗ್ರಾಮದ ಕುತ್ರೊಟ್ಟು ಸತ್ಯನಾರಾಯಣ ದೇವಸ್ಥಾನದಲ್ಲಿ ಅವರ ವಿವಾಹ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಮಕ್ಕಳ

ಬೆಳ್ತಂಗಡಿ: ಕಾಡಿನಲ್ಲಿ ಪತ್ತೆಯಾದ ಮಗುವಿನ ತಂದೆ – ತಾಯಿಗೆ ವಿವಾಹ| ಕಾನೂನಾತ್ಮಕವಾಗಿ ಮಗುವನ್ನು ವಾಪಾಸು ಪಡೆಯಲು ನಿರ್ಧಾರ Read More »

ಮಲೆನಾಡಿನಲ್ಲಿ ಆಲಿಕಲ್ಲು ಸಹಿತ ಧಾರಾಕಾರ ಮಳೆ| ಅಲ್ಲಲ್ಲಿ ಹಲವು ಅವಘಡ

ಸಮಗ್ರ ನ್ಯೂಸ್:ಕಾಫಿನಾಡು ಚಿಕ್ಕಮಗಳೂರು ಸೇರಿದಂತೆ ಮಲೆನಾಡು ಭಾಗದಲ್ಲಿ ಮಂಗಳವಾರವೂ ಧಾರಾಕಾರ ಮಳೆಯಾಗಿದೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಮಧ್ಯಾಹ್ನದಿಂದ ಸಂಜೆವರೆಗೆ ಎಡಬಿಡದೇ ಮಳೆಯಾಗಿದ್ದು, ಅಲ್ಲಲ್ಲಿ ಮರಗಳು ಧರಾಶಾಹಿಯಾದ ಪರಿಣಾಮ ಜನ, ವಾಹನ ಸಂಚಾರಕ್ಕೆ ತೊಂದರೆಯಾಗಿತ್ತು. ಕಳಸ ತಾಲೂಕು ವ್ಯಾಪ್ತಿಯಲ್ಲಿ ಮರಗಳು ಮನೆಯ ಮೇಲೆ ಉರುಳಿ ಬಿದ್ದ ಪರಿಣಾಮ ಕೆಲ ಮನೆಗಳಿಗೆ ಹಾನಿ ಸಂಭವಿಸಿದೆ. ಮೂಡಿಗೆರೆ ತಾಲೂಕಿನಾದ್ಯಂತ ಆಲಿಕಲ್ಲು ಸಹಿತ ಧಾರಾಕಾರ ಮಳೆ ಸುರಿದಿದ್ದು, ಭಾರೀ ಮಳೆಯಿಂದಾಗಿ ಕೆಲ ಹೊತ್ತು ಮಲೆನಾಡು ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ

ಮಲೆನಾಡಿನಲ್ಲಿ ಆಲಿಕಲ್ಲು ಸಹಿತ ಧಾರಾಕಾರ ಮಳೆ| ಅಲ್ಲಲ್ಲಿ ಹಲವು ಅವಘಡ Read More »

ಪುತ್ತೂರು: ಭಾರೀ ಗಾಳಿ ಮಳೆಗೆ ರಸ್ತೆಗೆ ಉರುಳಿದ ತೆಂಗಿನಮರ| ಸ್ಕೂಟರ್ ಸವಾರ ಕೂದಲೆಳೆ ಅಂತರದಲ್ಲಿ ಪಾರು

ಸಮಗ್ರ ನ್ಯೂಸ್: ದಕ್ಷಿಣಕನ್ನಡ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಏ.8ರ ಸಂಜೆ ವೇಳೆ ಮಳೆ ಸುರಿದಿದೆ. ಗುಡುಗು ಸಿಡಿಲು ಸಹಿತ ಭಾರೀ ಗಾಳಿ ಮಳೆಯಾಗಿದೆ. ಗಾಳಿಗೆ ತೆಂಗಿನ ಮರವೊಂದು ರಸ್ತೆಗೆ ಬಿದ್ದು ಸ್ಕೂಟರ್ ಸವಾರ ಕೂದಲೆಳೆ ಅಂತರದಲ್ಲಿ ಬಚಾವ್ ಆಗಿದ್ದಾನೆ. ಮಾಣಿ- ಪುತ್ತೂರು ರಸ್ತೆಯ ನೇರಳಕಟ್ಟೆಯಲ್ಲಿ ತೆಂಗಿನಮರವೊಂದು ರಸ್ತೆಗೆ ಬಿದ್ದು ಸ್ಕೂಟರ್ ಸವಾರನೋರ್ವ ಕೂದಲೆಳೆಯ ಅಂತರದಲ್ಲಿ ಪಾರಾದ ಘಟನೆ ನಡೆದಿದೆ. ಘಟನೆಯಿಂದ ಹಲವು ವಿದ್ಯುತ್ ಕಂಬಗಳು ದರೆಗುರುಳಿವೆ. ಪುತ್ತೂರಿನಲ್ಲಿ ಗುಡುಗು ಸಿಡಿಲು ಸಹಿತ ಭಾರೀ ಮಳೆ ಸುರಿದಿದ್ದು, ಗಾಳಿ

ಪುತ್ತೂರು: ಭಾರೀ ಗಾಳಿ ಮಳೆಗೆ ರಸ್ತೆಗೆ ಉರುಳಿದ ತೆಂಗಿನಮರ| ಸ್ಕೂಟರ್ ಸವಾರ ಕೂದಲೆಳೆ ಅಂತರದಲ್ಲಿ ಪಾರು Read More »

ಪೌರಕಾರ್ಮಿಕರು ಸೇರಿದಂತೆ ಗುತ್ತಿಗೆ ಆಧಾರದಡಿ ಕೆಲಸ ಮಾಡುತ್ತಿರುವ ಕಾರ್ಮಿಕರ ಖಾಯಂ – ಸಿಎಂ ಸಿದ್ದರಾಮಯ್ಯ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಗುತ್ತಿಗೆ ಆಧಾರದಡಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರ ಜತೆಗೆ ಲೋಡರ್‌ಗಳು, ಕ್ಲೀನರ್‌ಗಳು, ಕಸ ವಿಲೇವಾರಿ ವಾಹನ ಚಾಲಕರು ಹಾಗೂ ಒಳಚರಂಡಿ ಇಲಾಖೆಯಲ್ಲಿ ಗುತ್ತಿಗೆಯಡಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರ ಸೇವೆಯನ್ನು ಮೇ 1ರ ಕಾರ್ಮಿಕರ ದಿನಾಚರಣೆಯಂದು ಖಾಯಂಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ನಗರದ ಅರಮನೆ ಮೈದಾನದಲ್ಲಿ ಕರ್ನಾಟಕ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆ, ಪೌರಕಾರ್ಮಿಕರ ಮಹಾಸಂಘದ 25ನೇ ವಾರ್ಷಿಕೋತ್ಸವ ನಿಮಿತ್ತ ಸೋಮವಾರ ಆಯೋಜಿಸಿದ್ದ ಪೌರ ಕಾರ್ಮಿಕರ ರಾಜ್ಯಮಟ್ಟದ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿ, ಇದರಿಂದ

ಪೌರಕಾರ್ಮಿಕರು ಸೇರಿದಂತೆ ಗುತ್ತಿಗೆ ಆಧಾರದಡಿ ಕೆಲಸ ಮಾಡುತ್ತಿರುವ ಕಾರ್ಮಿಕರ ಖಾಯಂ – ಸಿಎಂ ಸಿದ್ದರಾಮಯ್ಯ Read More »

ಹವಾಮಾನ ವರದಿ| ಏ.12ರವರೆಗೆ ರಾಜ್ಯದ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಮಳೆ ಸುರಿಮಳೆ ಮುಂದುವರಿದಿದ್ದು, ಮುಂದಿನ ಒಂದು ವಾರವೂ ರಾಜ್ಯದ ಹಲವೆಡೆ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮುನ್ಸೂಚನೆ ನೀಡಿದೆ. ಕರಾವಳಿ, ಮಲೆನಾಡು ಹಾಗೂ ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಏಪ್ರಿಲ್ 12ರವರೆಗೆ ಗುಡುಗು ಸಹಿತ ಮಳೆ ಸುರಿಯಲಿದೆ. ರಾಜ್ಯದ ಉಡುಪಿ, ದಕ್ಷಿಣ ಕನ್ನಡ, ಬೆಳಗಾವಿ, ಧಾರವಾಡ, ಗದಗ, ಬಾಗಲಕೋಟೆ, ವಿಜಯಪುರ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ,

ಹವಾಮಾನ ವರದಿ| ಏ.12ರವರೆಗೆ ರಾಜ್ಯದ ಈ ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ Read More »

ಬೆಂಗಳೂರಿನಲ್ಲಿ ಡೆಂಗ್ಯೂ ಹಾಗೂ ಚಿಕನ್ ಗುನ್ಯಾ ಭೀತಿ..!

ಸಮಗ್ರ ನ್ಯೂಸ್: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ  ಡೆಂಗ್ಯೂ ಹಾಗೂ ಚಿಕನ್ ಗುನ್ಯಾ ಭೀತಿ ಇದೀಗ ಶುರುವಾಗಿದೆ‌‌. ಬೇಸಿಗೆಯಲ್ಲಿ ಮಳೆ ಆರ್ಭಟ ಇರುವುದರಿಂದ ರೋಗಗಳು ಹರಡುವ ಸಾಧ್ಯತೆ ಇದೆ. ಕಳೆದ ಮೂರು ತಿಂಗಳಲ್ಲಿ ನಗರದಲ್ಲಿ 910ಕ್ಕೂ ಹೆಚ್ಚು ಡೆಂಘಿ ಪ್ರಕರಣಗಳು ದಾಖಲಾದರೆ, ಮಳೆ ಬಂದ ಬೆನ್ನಲ್ಲೇ ಒಂದೇ ವಾರದಲ್ಲಿ 75ಕ್ಕೂ ಹೆಚ್ಚು ಡೆಂಘಿ ಪ್ರಕರಣಗಳು ಪತ್ತೆಯಾಗಿವೆ. ಡೆಂಘಿ ಜೊತೆ ಚಿಕುನ್ ಗುನ್ಯಾ ಕೂಡಾ ಪತ್ತೆಯಾಗುತ್ತಿದ್ದು, ಕಳೆದ ಒಂದೇ ವಾರದಲ್ಲಿ 24 ಪ್ರಕರಣಗಳು ಪತ್ತೆಯಾಗಿವೆ. ಜನವರಿಯಂದ ಇಲ್ಲಿಯವರೆಗೆ 260 ಚಿಕುನ್ ಗುನ್ಯಾ

ಬೆಂಗಳೂರಿನಲ್ಲಿ ಡೆಂಗ್ಯೂ ಹಾಗೂ ಚಿಕನ್ ಗುನ್ಯಾ ಭೀತಿ..! Read More »

ಜಗತ್ತಿನೆಲ್ಲೆಡೆ ನಿನಗೆ ದುಷ್ಮನ್ ಗಳಿದ್ದಾರೆ ..ರಿಷಬ್ ಶೆಟ್ಟಿಗೆ ಪಂಜುರ್ಲಿ ದೈವದ ಎಚ್ಚರಿಕೆ

ಸಮಗ್ರ ನ್ಯೂಸ್: ಮಂಗಳೂರಿನ ಕದ್ರಿ ಬಾರೆಬೈಲ್ ವಾರಾಹಿ ಪಂಜುರ್ಲಿ, ಜಾರಂದಾಯ ದೈವದ ಉತ್ಸವದಲ್ಲಿ ರಿಷಬ್ ಶೆಟ್ಟಿ ದಂಪತಿ ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ವಾರಾಹಿ ಪಂಜುರ್ಲಿ ದೈವದ ಬಳಿ ನಟ ಕಷ್ಟ ಹೇಳಿಕೊಂಡಿದ್ದಾರೆ. ರಿಷಬ್ ದಂಪತಿಗೆ ವಾರಾಹಿ ಪಂಜುರ್ಲಿ ದೈವದ ಅಭಯ ಸಿಕ್ಕಿದೆ. ‘ನಿನಗೆ ದುಶ್ಮನ್ಗಳಿದ್ದಾರೆ, ಸಂಸಾರ ಹಾಳು ಮಾಡಲು ಯತ್ನಿಸುತ್ತಿದ್ದಾರೆ. ನಿನ್ನ ಕಾರ್ಯ ಫಲ ನೀಡದಂತೆ ಹಾಳು ಮಾಡಲು ಸಂಚು ನಡೆದಿದೆ. ಗಂಡಾಂತರ ಬಂದಿದೆಯೆಂದು ಬಂದಿದ್ದೀಯಾ, ನಂಬಿದ ದೈವ ಕೈಬಿಡಲ್ಲ. ಯಾರು ನಿನಗೆ ಕೇಡು ಬಗೆದಿದ್ದಾರೆಂದು ದೈವ

ಜಗತ್ತಿನೆಲ್ಲೆಡೆ ನಿನಗೆ ದುಷ್ಮನ್ ಗಳಿದ್ದಾರೆ ..ರಿಷಬ್ ಶೆಟ್ಟಿಗೆ ಪಂಜುರ್ಲಿ ದೈವದ ಎಚ್ಚರಿಕೆ Read More »

ರಾಜ್ಯ ಸರ್ಕಾರದ ಬಳಿಕ ಕೇಂದ್ರದಿಂದ ದರ ಏರಿಕೆ ಬರೆ| ಗೃಹಬಳಕೆ‌ ಗ್ಯಾಸ್ ಸಿಲಿಂಡರ್ ಬೆಲೆ ₹50 ಹೆಚ್ಚಳ

ಸಮಗ್ರ ನ್ಯೂಸ್: ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಕೇಂದ್ರ ಸರ್ಕಾರ ಮತ್ತೊಂದು ಬರೆ ಹಾಕಿದ್ದು, ಪ್ರಧಾನಮಂತ್ರಿ ಉಜ್ವಲಾ ಸೇರಿದಂತೆ ಗೃಹಬಳಕೆಯ ಸಿಲಿಂಡರ್‌ ದರದಲ್ಲಿ 50 ರೂಪಾಯಿ ಏರಿಕೆ ಮಾಡಿದೆ. ಈ ಕುರಿತಾಗಿ ಪೆಟ್ರೋಲಿಯಂ ಖಾತೆ ಸಚಿವ ಹರ್ದೀಪ್‌ ಸಿಂಗ್‌ ಪೂರಿ ತಿಳಿಸಿದ್ದಾರೆ. ಮಧ್ಯರಾತ್ರಿಯಿಂದಲೇ ಈ ಬೆಲೆ ಏರಿಕೆ ಜಾರಿಯಾಗಲಿದೆ. “14.2 ಕೆಜಿ ತೂಕದ ಎಲ್‌ಪಿಜಿ ಸಿಲಿಂಡರ್‌ನ ಬೆಲೆ ಪ್ರತಿ ಸಿಲಿಂಡರ್‌ಗೆ 50 ರೂ.ಗಳಷ್ಟು ಹೆಚ್ಚಾಗಲಿದೆ. 500 ರಿಂದ 550 ರೂ.ಗಳಿಗೆ (ಉಜ್ವಲಾ ಫಲಾನುಭವಿಗಳಿಗೆ) ಮತ್ತು ಇತರರಿಗೆ ಇದು

ರಾಜ್ಯ ಸರ್ಕಾರದ ಬಳಿಕ ಕೇಂದ್ರದಿಂದ ದರ ಏರಿಕೆ ಬರೆ| ಗೃಹಬಳಕೆ‌ ಗ್ಯಾಸ್ ಸಿಲಿಂಡರ್ ಬೆಲೆ ₹50 ಹೆಚ್ಚಳ Read More »

ಬೆಳ್ತಂಗಡಿ: ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗೆ ಕೋರ್ಟ್ ಆವರಣದಲ್ಲೇ ಮುತ್ತಿನ ಸುರಿಮಳೆ!!

ಸಮಗ್ರ ನ್ಯೂಸ್: ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಆರೋಪಿಗೆ ಬೆಳ್ತಂಗಡಿ ಕೋರ್ಟ್ ಆವರಣದಲ್ಲಿಯೇ ಯುವಕನೋರ್ವನು ಮುತ್ತಿಟ್ಟ ಪ್ರಸಂಗವೊಂದು ಸಂಭವಿಸಿದೆ. ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದಲ್ಲಿ ಎನ್ಐಎ‌ಯಿಂದ ಬಂಧಿತನಾಗಿ ನ್ಯಾಯಾಂಗ ಬಂಧನದಲ್ಲಿರುವ ಎಸ್‌ಡಿಪಿಐ ಮುಖಂಡ ಶಾಫಿ ಬೆಳ್ಳಾರೆಗೆ ಸೋಮವಾರ ಬೆಳ್ತಂಗಡಿ ಕೋರ್ಟ್‌ನಲ್ಲಿ ವಿಚಾರಣೆಯಿತ್ತು. ಆದ್ದರಿಂದ ಪರಪ್ಪನ ಅಗ್ರಹಾರ ಜೈಲಿನಿಂದ ಪೊಲೀಸ್ ಭದ್ರತೆಯಲ್ಲಿ ಬೆಳ್ತಂಗಡಿ ನ್ಯಾಯಾಲಯಕ್ಕೆ ಆತನನ್ನು ಹಾಜರು ಪಡಿಸಲಾಗಿತ್ತು. ಈ ವೇಳೆ ಯುವಕನೋರ್ವನು ಶಾಫಿ ಬೆಳ್ಳಾರೆ ಹಣೆಗೆ ಏಕಾಏಕಿ ಮುತ್ತಿಟ್ಟಿದ್ದಾನೆ. ಇದರ ವೀಡಿಯೋ

ಬೆಳ್ತಂಗಡಿ: ಪ್ರವೀಣ್ ನೆಟ್ಟಾರು ಹತ್ಯೆ ಆರೋಪಿಗೆ ಕೋರ್ಟ್ ಆವರಣದಲ್ಲೇ ಮುತ್ತಿನ ಸುರಿಮಳೆ!! Read More »