ರಾಜ್ಯ

ಮೈಸೂರು: ರೈಲಿಗೆ ಸಿಲುಕಿ ಯುವಕ ಆತ್ಮಹತ್ಯೆ

ಸಮಗ್ರ ನ್ಯೂಸ್: ರೈಲಿಗೆ ಸಿಲುಕಿ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ತಾಲೂಕಿನ ಬಸವನಪುರ ಗ್ರಾಮದ ಬಳಿ ನಡೆದಿದೆ. ಕರ್ಣ (19) ಆತ್ಮಹತ್ಯೆ ಮಾಡಿಕೊಂಡ ಯುವಕನಾಗಿದ್ದಾನೆ. ಪತ್ರಿಕಾ ವಿತರಕನಾಗಿ ಕರ್ಣ ಕೆಲಸ ಮಾಡುತ್ತಿದ್ದನು. ಸೂಕ್ತ ಕೆಲಸವಿಲ್ಲದೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ತಿಳಿದು ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ರೈಲ್ವೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ರೈಲ್ವೆ ಪೊಲೀಸರು ಪ್ರಕರಣವನ್ನು ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.

ಮೈಸೂರು: ರೈಲಿಗೆ ಸಿಲುಕಿ ಯುವಕ ಆತ್ಮಹತ್ಯೆ Read More »

ಸಂಪಾದಕೀಯ; ನೇಹಾ, ಮೀನಾ ಇಬ್ಬರೂ ನಮ್ಮನೆ ಮಕ್ಳೇ…

ಸಮಗ್ರ ನ್ಯೂಸ್: ಅತ್ತ ಕೊಡಗಿನಿಂದ ಬರ್ಬರ ಕೃತ್ಯವೊಂದು ನಾಡನ್ನು ಬೆಚ್ಚಿ ಬೇಳಿಸಿತು. ಎಸೆಸೆಲ್ಸಿಯಲ್ಲಿ ಅತ್ಯುತ್ತಮ ಅಂಕಗಳೊಂದಿಗೆ ಉತ್ತೀರ್ಣಳಾದ ಸಂಭ್ರಮದಲ್ಲಿದ್ದ ವಿದ್ಯಾರ್ಥಿನಿಯೊಬ್ಬಳನ್ನು ದುಷ್ಕರ್ಮಿಯೊಬ್ಬ ಅತ್ಯಂತ ಭೀಕರವಾಗಿ ಕೊಲೆ ಮಾಡಿದ್ದ. ಕೊಡಗಿನ ಸೋಮವಾರಪೇಟೆ ತಾಲೂಕಿನ ಸೂರ್ಲಬ್ಬಿಯ ಕುಂಬಾರ ಗಡಿಗೆ ಎಂಬಲ್ಲಿ ಈ ಕೃತ್ಯ ನಡೆದಿತ್ತು. ಕೊಲೆಯ ಭೀಕರತೆಯೇ, ಆರೋಪಿ ಸೈಕೋಪಾತ್ ಎನ್ನುವುದನ್ನು ಹೇಳುತ್ತಿತ್ತು. ಬಂಧಿತ ಆರೋಪಿ ಪ್ರಕಾಶ್, ವಿದ್ಯಾರ್ಥಿನಿಯ ತಲೆ ಕತ್ತರಿಸಿ ಕೊಲೆ ಮಾಡಿದ್ದಾನೆ. ಸಂತ್ರಸ್ತೆಯ ರುಂಡವನ್ನು ಆಕೆಯ ನಿವಾಸದಿಂದ ಸುಮಾರು 100 ಮೀಟರ್ ದೂರದ ಕಾಡಿನ ನಡುವೆ ಪತ್ತೆ

ಸಂಪಾದಕೀಯ; ನೇಹಾ, ಮೀನಾ ಇಬ್ಬರೂ ನಮ್ಮನೆ ಮಕ್ಳೇ… Read More »

‘ಸೀತಾರಾಮ’ ಧಾರಾವಾಹಿ ನಟಿ ವೈಷ್ಣವಿಗೆ ದಂಡ ವಿಧಿಸಿದ ಪೊಲೀಸರು|

ಸಮಗ್ರ ನ್ಯೂಸ್: ಜೀ ಕನ್ನಡದ ‘ಸೀತಾರಾಮ’ ಧಾರಾವಾಹಿ ಶೂಟಿಂಗ್ ವೇಳೆ ನಟಿ ವೈಷ್ಣವಿ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ದೃಶ್ಯ ವೀಕ್ಷಿಸಿದ ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸ್ ಇಲಾಖೆ, ಆ ಧಾರಾವಾಹಿಯ ನಿರ್ದೇಶಕರಿಗೆ ಹಾಗೂ ವೈಷ್ಣವಿ ಅವರಿಗೆ ದಂಡ ವಿಧಿಸಿದೆ. ‘ಸೀತಾರಾಮ’ ಎಂಬ ಧಾರಾವಾಹಿಯ 14ನೇ ಎಪಿಸೋಡ್‌ನಲ್ಲಿ ದ್ವಿಚಕ್ರ ವಾಹನದ ಹಿಂಬದಿ ಸವಾರೆ ಹೆಲ್ಮೆಟ್‌ ಇಲ್ಲದೆ ಪ್ರಯಾಣಿಸುತ್ತಿದ್ದ ದೃಶ್ಯ ಪ್ರಸಾರವಾಗಿದೆ ಎಂದು ಮಂಗಳೂರಿನ ಸಾಮಾಜಿಕ ಕಾರ್ಯಕರ್ತ ಜಯಪ್ರಕಾಶ್‌ ಎಕ್ಕೂರು ಅವರು 2023 ಆಗಸ್ಟ್

‘ಸೀತಾರಾಮ’ ಧಾರಾವಾಹಿ ನಟಿ ವೈಷ್ಣವಿಗೆ ದಂಡ ವಿಧಿಸಿದ ಪೊಲೀಸರು| Read More »

ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗೆ ಹುಸಿ ಬಾಂಬ್ ಕರೆ

ಸಮಗ್ರ ನ್ಯೂಸ್: ದೆಹಲಿಯ ವಿಮಾನ ನಿಲ್ದಾಣ ಹಾಗೂ ಹಲವು ಆಸ್ಪತ್ರೆಗಳಿಗೆ ಹುಸಿ ಬಾಂಬ್‌ ಬೆದರಿಕೆ ಇ-ಮೇಲ್‌ ಬಂದ ಬೆನ್ನಲ್ಲೇ ಬೆಂಗಳೂರಿನ ಪ್ರಮುಖ‌ ಆಸ್ಪತ್ರೆಗೆ ಹುಸಿ ಬಾಂಬ್ ಬೆದರಿಕೆ‌ ಸಂದೇಶ ಬಂದಿದ್ದರಿಂದ ಆತಂಕದ ವಾತಾವರಣ ಸೃಷ್ಟಿಯಾದ ಘಟನೆ ಭಾನುವಾರ ನಡೆದಿದೆ. ನಾಗವಾರದ ಸೇಂಟ್ ಫಿಲೋಮಿನಾ ಆಸ್ಪತ್ರೆ‌ಯಲ್ಲಿ ಬಾಂಬ್ ಇಡಲಾಗಿದೆ ಎಂದು ಪೊಲೀಸ್ ಇಲಾಖೆಯ ಸಿಟಿ ಎಸ್.ಬಿ.ಗೆ ಇ-ಮೇಲ್ ಬಂದಿದೆ. ಹೀಗಾಗಿ ತಕ್ಷಣ ಆಸ್ಪತ್ರೆಗೆ ತೆರಳಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಗೋವಿಂದ ಪುರ ಪೊಲೀಸ್ ಠಾಣಾ ವ್ಯಾಪ್ತಿಯ ಸೇಂಟ್ ಫಿಲೋಮಿನಾ

ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗೆ ಹುಸಿ ಬಾಂಬ್ ಕರೆ Read More »

ಹವಾಮಾನ ವರದಿ|ವಾಯುಭಾರ ಕುಸಿತ ಹಿನ್ನಲೆ| ಕರಾವಳಿ, ಮಲೆನಾಡಿಗೆ ಭಾರೀ ಮಳೆ ಮುನ್ಸೂಚನೆ

ಸಮಗ್ರ ನ್ಯೂಸ್: ಮರಾಠಾವಾಡದಿಂದ ಕೊಮೊರಿನ್ ಪ್ರದೇಶದವರೆಗೆ ವಾಯುಭಾರ ಕುಸಿತ ಉಂಟಾಗಿದೆ. ಇದು ಕೇರಳ ಕರಾವಳಿಯ ಆಗ್ನೇಯ ಅರೇಬಿಯನ್ ಸಮುದ್ರದಲ್ಲಿ ಚಂಡಮಾರುತದ ಪ್ರಭಾವದಿಂದಾಗಿ ಕರ್ನಾಟಕದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಕೆಲವು ಸ್ಥಳಗಳಲ್ಲಿ ಗಾಳಿ ವೇಗವು 40-50 ಕಿ.ಮೀನಲ್ಲಿ ಇರಲಿದ್ದು, ಇದರೊಂದಿಗೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ. ಮುಖ್ಯವಾಗಿ ಹಾವೇರಿ, ಧಾರವಾಡ, ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ರಾಮನಗರ, ಮಂಡ್ಯ, ದಾವಣಗೆರೆಯಲ್ಲಿ ಗಾಳಿಯೊಂದಿಗೆ ಭಾರಿ ಮಳೆಯಾಗಲಿದೆ. ಇನ್ನೂ ದಕ್ಷಿಣ

ಹವಾಮಾನ ವರದಿ|ವಾಯುಭಾರ ಕುಸಿತ ಹಿನ್ನಲೆ| ಕರಾವಳಿ, ಮಲೆನಾಡಿಗೆ ಭಾರೀ ಮಳೆ ಮುನ್ಸೂಚನೆ Read More »

ನನ್ನ ಜನ್ಮದಿನದಂದು ಯಾರು ನನ್ನ ಭೇಟಿಗೆ ಬರಬೇಡಿ: ಡಿಸಿಎಂ ಡಿ.ಕೆ ಶಿವಕುಮಾರ್

ಸಮಗ್ರ ನ್ಯೂಸ್: ಮೇ 15ರಂದು ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಜನ್ಮದಿನ. ಆದರೆ ಅವರು ಜನ್ಮದಿನದಂದು ನಾನು ಅಲಭ್ಯ, ಇದ್ದ ಕಡೆಯಿಂದಲೇ ಹರಸಿ. ನನ್ನ ಭೇಟಿಗೆ ಬರಬೇಡಿ ಎಂದು ಡಿ.ಕೆ ಶಿವಕುಮಾರ್​ ಮನವಿ ಮಾಡಿದ್ದಾರೆ. ಈ ಕುರಿತಾಗಿ ಮಾಧ್ಯಮ ಪ್ರಕಟಣೆ ಹೊರಡಿಸಿರುವ ಅವರು, ತಮ್ಮ ಜನ್ಮದಿನವಾದ ಮೇ 15ರಂದು ಖಾಸಗಿ ಕಾರ್ಯಕ್ರಮ ನಿಮಿತ್ತ ಉತ್ತರ ಭಾರತ ಪ್ರವಾಸ ಕೈಗೊಳ್ಳುತ್ತಿದ್ದೇನೆ. ನಾನು ಯಾರಿಗೂ ಕೂಡ ಸಿಗುವುದಿಲ್ಲ. ಪಕ್ಷದ ನಾಯಕರು, ಕಾರ್ಯಕರ್ತರು, ಅಭಿಮಾನಿಗಳು, ಬಂಧುಗಳು ನನ್ನ ಭೇಟಿಗೆ ಪ್ರಯತ್ನಿಸುವುದು ಬೇಡ.

ನನ್ನ ಜನ್ಮದಿನದಂದು ಯಾರು ನನ್ನ ಭೇಟಿಗೆ ಬರಬೇಡಿ: ಡಿಸಿಎಂ ಡಿ.ಕೆ ಶಿವಕುಮಾರ್ Read More »

ಕಿಡ್ನ್ಯಾಪ್‌ ಸಂತ್ರಸ್ತೆಯ‌ ಹೇಳಿಕೆ ವೈರಲ್…ನನ್ನನ್ನು ಯಾರು ಅಪಹರಣ ಮಾಡಿಲ್ಲ, ಮಗ ತಪ್ಪು ದೂರು ಕೊಟ್ಟಿದ್ದಾನೆ ಎಂದ ಸಂತ್ರಸ್ತೆ

ಸಮಗ್ರ ನ್ಯೂಸ್: ಪ್ರಜ್ವಲ್‌ ರೇವಣ್ಣ ವಿಚಾರದ ಕಿಡ್ನ್ಯಾಪ್‌ ಪ್ರಕರಣಕ್ಕೆ ಸಂಬಂಧಪಟ್ಟಂತೆ ದಿನಕ್ಕೊಂದು ಟ್ವಿಸ್ಟ್‌ ಪಡೆದುಕೊಳ್ಳುತ್ತಲೇ ಇದೆ. ಈ ಕೇಸ್‌ನಲ್ಲಿ ಸಂತ್ರಸ್ತೆ ಎನ್ನಲಾದ ಮೈಸೂರಿನ ಕೆ.ಆರ್.‌ ನಗರದ ಮಹಿಳೆಯೊಬ್ಬರನ್ನು ಕಿಡ್ನ್ಯಾಪ್‌ ಮಾಡಿದ್ದಾರೆಂಬ ದೂರಿನ ಮೇಲೆ ಮಾಜಿ ಸಚಿವ, ಹಾಲಿ ಶಾಸಕ ಎಚ್.ಡಿ. ರೇವಣ್ಣ ಬಂಧಿತರಾಗಿದ್ದಾರೆ. ಅವರು ಜಾಮೀನು ಸಿಗದೆ ಪರದಾಟ ನಡೆಸುತ್ತಿರುವ ಈ ಹೊತ್ತಿನಲ್ಲಿ ಅಪಹರಣ ನಡೆದಿದೆ ಎನ್ನಲಾದ ಸಂತ್ರಸ್ತ ಮಹಿಳೆಯ ವಿಡಿಯೊ ವೈರಲ್‌ ಆಗಿದೆ. ಹೌದು ಆಕೆ, ನನ್ನನ್ನು ಯಾರು ಅಪಹರಣ ಮಾಡಿಲ್ಲ. ನನ್ನ ಮಗ ತಪ್ಪು

ಕಿಡ್ನ್ಯಾಪ್‌ ಸಂತ್ರಸ್ತೆಯ‌ ಹೇಳಿಕೆ ವೈರಲ್…ನನ್ನನ್ನು ಯಾರು ಅಪಹರಣ ಮಾಡಿಲ್ಲ, ಮಗ ತಪ್ಪು ದೂರು ಕೊಟ್ಟಿದ್ದಾನೆ ಎಂದ ಸಂತ್ರಸ್ತೆ Read More »

ಬೆಂಗಳೂರಿನ 6 ಆಸ್ಪತ್ರೆಗಳಿಗೆ ಹುಸಿಬಾಂಬ್ ಬೆದರಿಕೆ ಮೇಲ್: ಪೊಲೀಸರಿಂದ ತಪಾಸಣೆ

ಸಮಗ್ರ ನ್ಯೂಸ್: ಬೆಂಗಳೂರಿನಲ್ಲಿ ಆಗಾಗೆ ಹುಸಿಬಾಂಬ್ ಬೆದರಿಕೆ ಕರೆಗಳು ಬರುವುದು ಸಾಮಾನ್ಯ. ಅದರಂತೆ ಇಂದು ನಗರದ ಪ್ರತಿಷ್ಠಿತ ಆರು ಆಸ್ಪತ್ರೆಗಳಿಗೆ ಹುಸಿ ಬಾಂಬ್ ಬೆದರಿಕೆ ಇ-ಮೇಲ್​ ಬಂದಿದೆ. ಗೋವಿಂದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ನಾಗವಾರದ ಸೇಂಟ್ ಫಿಲೋಮಿನಾ ಸೇರಿದಂತೆ ನಾರಾಯಣ ಹೆಲ್ತ್ , ಸಾಗರ್ ಆಸ್ಪತ್ರೆ, ಸಮರ್ಥ, ಜೆಎಂಜೆ ಹಾಗೂ ವಿಮಲಾಲಯ್ಯ ಆಸ್ಪತ್ರೆಗಳಿಗೂ ಬಾಂಬ್ ಬೆದರಿಕೆ ಬಗ್ಗೆ ಇ ಮೇಲ್​ನಲ್ಲಿ ಉಲ್ಲೇಖಿಸಲಾಗಿದೆ. ಇನ್ನೂ ಈ ಬಾರಿ ನೇರವಾಗಿ ಬೆಂಗಳೂರು ಪೊಲೀಸರ ಇ-ಮೇಲ್ ಅಕೌಂಟ್​​ಗೆ ಬಾಂಬ್ ಬೆದರಿಕೆ ಬಂದಿದೆ.

ಬೆಂಗಳೂರಿನ 6 ಆಸ್ಪತ್ರೆಗಳಿಗೆ ಹುಸಿಬಾಂಬ್ ಬೆದರಿಕೆ ಮೇಲ್: ಪೊಲೀಸರಿಂದ ತಪಾಸಣೆ Read More »

ಪೆನ್ ಡ್ರೈವ್ ಪ್ರಕರಣ: ಪ್ರೀತಂಗೌಡ ಆಪ್ತರು ಎಸ್​ಐಟಿ ವಶಕ್ಕೆ

ಸಮಗ್ರ ನ್ಯೂಸ್: ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಈ ಪ್ರಕರಣಕ್ಕೆ ಮೇಜರ್​ ಟ್ವಿಸ್ಟ್​ ಸಿಕ್ಕಿದೆ. ವಿಶೇಷ ತನಿಖಾ ಅಧಿಕಾರಿಗಳು (SIT) ಅಶ್ಲೀಲ ವಿಡಿಯೋ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಿದ್ದು, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ, ಮಾಜಿ ಶಾಸಕ ಪ್ರೀತಂಗೌಡ ಆಪ್ತ ಲಿಖಿತ್​ ಮತ್ತು ಕಚೇರಿಯ ಸಿಬ್ಬಂದಿ ಚೇತನ್​​ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣ ಸಂಬಂಧ ನವೀನ್ ಗೌಡ ಮತ್ತು ಪುಟ್ಟರಾಜು ಎಂಬುವರಿಗಾಗಿ ಅಧಿಕಾರಿಗಳು ಹುಡುಕಾಟ ನಡೆಸಿದ್ದಾರೆ. ಇದೇ ವಿಚಾರವಾಗಿ ಎಸ್​ಐಟಿ ತಂಡ

ಪೆನ್ ಡ್ರೈವ್ ಪ್ರಕರಣ: ಪ್ರೀತಂಗೌಡ ಆಪ್ತರು ಎಸ್​ಐಟಿ ವಶಕ್ಕೆ Read More »

ಅಮರಾವತಿ: ಪಲ್ಟಿಯಾದ ಲಾರಿಯಿಂದ 7 ಕೋಟಿ ರೂ. ವಶಕ್ಕೆ ಪಡೆದ ಪೊಲೀಸರು

ಸಮಗ್ರ ನ್ಯೂಸ್ : ಪಲ್ಟಿಯಾದ ಲಾರಿಯಲ್ಲಿ ಬರೋಬ್ಬರಿ 7 ಕೋಟಿ ಹಣವನ್ನು ವಶಕ್ಕೆ ಪಡೆದ ಘಟನೆ ಆಂಧ್ರಪ್ರದೇಶದಲ್ಲಿ ನಡೆದಿದೆ. ಈ ಮೂಲಕ ಲೋಕಸಭಾ ಚುನಾವಣೆಗೂ ಮುನ್ನ ರಾಜ್ಯದಲ್ಲಿ ಎರಡನೇ ಬಾರಿ ದೊಡ್ಡ ಮೊತ್ತದ ಹಣವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ವಾಹನ ವಿಜಯವಾಡದಿಂದ ವಿಶಾಖಪಟ್ಟಣಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಪೂರ್ವ ಗೋದಾವರಿ ಪೊಲೀಸರು ವಾಹನದಿಂದ 7 ಬಾಕ್ಸ್ಗಳಲ್ಲಿ ತುಂಬಿದ್ದ 7 ಕೋಟಿ ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ. ನಲ್ಲಜರ್ಲ ಮಂಡಲದ ಅನಂತಪಲ್ಲಿ ಎಂಬಲ್ಲಿ ಲಾರಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿತ್ತು. ವಾಹನ

ಅಮರಾವತಿ: ಪಲ್ಟಿಯಾದ ಲಾರಿಯಿಂದ 7 ಕೋಟಿ ರೂ. ವಶಕ್ಕೆ ಪಡೆದ ಪೊಲೀಸರು Read More »