ರಾಜ್ಯ

ರೀಲ್ಸ್‌ ಪ್ರಿಯರಿಗೆ ಬಿಬಿಎಂಪಿ ಗುಡ್‌ ನ್ಯೂಸ್‌: ಡೆಂಗ್ಯೂ ಜಾಗೃತಿ ಕುರಿತು ರೀಲ್ಸ್‌ ಮಾಡಿ, ಬಹುಮಾನ ಗೆಲ್ಲಿ

ಸಮಗ್ರ ನ್ಯೂಸ್‌:ಬೆಂಗಳೂರಿನಲ್ಲಿ ಡೆಂಗ್ಯೂ ಜ್ವರ ಪ್ರಕರಣಗಳು ಹೆಚ್ಚಾಗುತ್ತಿದ್ದು, ಡೆಂಗ್ಯೂ ಜ್ವರ ತಡೆಗೆ ಮನೆ ಮನೆಗೆ ತೆರಳಿ ಸಮೀಕ್ಷೆ ನಡೆಸಬೇಕಿದ್ದ ಬಿಬಿಎಂಪಿ ಇದೀಗ ಜಾಗೃತಿ ಕಾರ್ಯಕ್ರಮ ನಡೆಸಲು ನಿರ್ಧರಿಸಿದೆ. ಡೆಂಗ್ಯೂ ಜ್ವರದ ಬಗ್ಗೆ ಜಾಗೃತಿ ಮತ್ತು ಜಾಗೃತಿ ಮೂಡಿಸುವ ರೀಲ್ಸ್‌ಗಳನ್ನು ಮಾಡುವವರಿಗೆ ಬಿಬಿಎಂಪಿ ಈಗ ಉತ್ತಮ ಬಹುಮಾನವನ್ನು ನೀಡುತ್ತಿದೆ. ಸಾಮಾಜಿಕ ಮಾಧ್ಯಮದಲ್ಲಿ ಡೆಂಗ್ಯೂ ವಿಷಯದ ಕುರಿತು ರೀಲ್ಸ್‌ಗಳನ್ನು ಆಹ್ವಾನಿಸಿರುವ ಪಾಲಿಕೆ ಮೊದಲ ಐದು ಅತ್ಯುತ್ತಮ ರೀಕ್ಷೆಗಳಿಗೆ ತಲಾ 25,000 ರೂ. ಬಹುಮಾನ, ದ್ವಿತೀಯ ಬಹುಮಾನವನ್ನು ತಲಾ 10,000 ರೂ […]

ರೀಲ್ಸ್‌ ಪ್ರಿಯರಿಗೆ ಬಿಬಿಎಂಪಿ ಗುಡ್‌ ನ್ಯೂಸ್‌: ಡೆಂಗ್ಯೂ ಜಾಗೃತಿ ಕುರಿತು ರೀಲ್ಸ್‌ ಮಾಡಿ, ಬಹುಮಾನ ಗೆಲ್ಲಿ Read More »

ಮದುವೆ ಮಾತುಕತೆಗೆ ಬಂದ ಯುವತಿಯ ತಾಯಿ ಜೊತೆ ಯುವಕನ ತಂದೆ ಎಸ್ಕೇಪ್!!

ಸಮಗ್ರ ನ್ಯೂಸ್: ಮದುವೆ ಮಾತುಕತೆಗೆ ಬಂದ ಯುವತಿಯ ತಾಯಿಯ ಜೊತೆ ಯುವಕನ ತಂದೆ ಪರಾರಿಯಾದ ಘಟನೆ ಉತ್ತರ ಪ್ರದೇಶದ ಕಾಸ್‌ಗಂಜ್ ಜಿಲ್ಲೆಯಲ್ಲಿ ನಡೆದಿದೆ. ಮನೆಯಲ್ಲಿ ಮಗನ ಮದುವೆ ಮಾತುಕತೆ ಆರಂಭಗೊಂಡಿತ್ತು. ತಂದೆ ಹಾಗೂ ತಾಯಿ ಮಗನಿಗೆ ಮದುವೆ ಮಾಡಿಸಲು ಹುಡುಗಿ ಹುಡುಕಾಟ ಶುರು ಮಾಡಿದ್ದರು. ಕೊನೆಗೆ ಒಂದು ಹುಡುಗಿಯ ಫೋಟೋ ಮಗನಿಗೆ ತೋರಿಸಿದಾಗ ಗ್ರೀನ್ ಸಿಗ್ನಲ್ ಸಿಕ್ಕಿದೆ. ಹುಡುಗ ಮತ್ತು ಹುಡುಗಿಗೆ ಒಪ್ಪಿಗೆಯಾದ ಕಾರಣ ಹುಡುಗಿ ನೋಡುವ ಶಾಸ್ತ್ರ ಫಿಕ್ಸ್ ಮಾಡಿದ್ದಾರೆ. ಅಂತೆಯೇ ಹುಡುಗ, ಆತನ ಪೋಷಕರು

ಮದುವೆ ಮಾತುಕತೆಗೆ ಬಂದ ಯುವತಿಯ ತಾಯಿ ಜೊತೆ ಯುವಕನ ತಂದೆ ಎಸ್ಕೇಪ್!! Read More »

ಭಾರೀ ಮಳೆ ಹಿನ್ನಲೆ| ಉತ್ತರಕನ್ನಡದ ಈ ತಾಲೂಕುಗಳ ಶಾಲೆ, ಪ‌.ಪೂ ಕಾಲೇಜುಗಳಿಗೆ ನಾಳೆ(ಜು.19) ಮತ್ತೆ ರಜೆ ಮುಂದುವರಿಕೆ

ಸಮಗ್ರ ನ್ಯೂಸ್: ಉತ್ತರಕನ್ನಡ ಜಿಲ್ಲೆಯಲ್ಲಿ ಮಳೆ‌‌ ಮುಂದುವರಿದಿದ್ದು, ನದಿಗಳು ಅಪಾಯದ‌‌ ಮಟ್ಟ ಮೀರಿ ಹರಿಯುತ್ತಿವೆ. ಹಲವೆಡೆ ಗುಡ್ಡ ಕುಸಿಯುತ್ತಿದೆ. ಹೀಗಾಗಿ ಮುನ್ನೆಚ್ಚರಿಕಾ‌ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ನಾಳೆ ಜುಲೈ 19 ರಂದು ಹೊನ್ನಾವರ, ಕುಮಟಾ, ಭಟ್ಕಳ, ಅಂಕೋಲಾ, ಕಾರವಾರ, ಶಿರಸಿ, ಸಿದ್ದಾಪುರ, ಹಳಿಯಾಳ, ದಾಂಡೇಲಿ, ಯಲ್ಲಾಪುರ , ಜೋಯಿಡಾ ತಾಲೂಕಿನ ಎಲ್ಲಾ ಶಾಲೆಗಳು ಮತ್ತು ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಈ ಕುರಿತು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮತ್ತೊಂದೆಡೆ ಅಂಕೋಲಾದ ರಾ.ಹೆದ್ದಾರಿಯಲ್ಲಿ ರಕ್ಷಣಾ ಕಾರ್ಯ ಮುಂದುವರೆದಿದೆ.‌

ಭಾರೀ ಮಳೆ ಹಿನ್ನಲೆ| ಉತ್ತರಕನ್ನಡದ ಈ ತಾಲೂಕುಗಳ ಶಾಲೆ, ಪ‌.ಪೂ ಕಾಲೇಜುಗಳಿಗೆ ನಾಳೆ(ಜು.19) ಮತ್ತೆ ರಜೆ ಮುಂದುವರಿಕೆ Read More »

ರೆಡ್ ಅಲರ್ಟ್ ಹಿನ್ನೆಲೆ| ಜು.19ರಂದು ಉಡುಪಿ ಜಿಲ್ಲೆಯ ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಸಮಗ್ರ ನ್ಯೂಸ್: ಉಡುಪಿ ಜಿಲ್ಲೆಯಾದ್ಯಂತ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದ್ದು, ಜು.18 ರಂದು ಹವಾಮಾನ ಇಲಾಖೆ ರೆಡ್‌ ಅಲರ್ಟ್‌ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಜು. 19ರಂದು ಜಿಲ್ಲೆಯ ಎಲ್ಲಾ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ ಹಾಗೂ ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ ಆದೇಶಿಸಿದ್ದಾರೆ. ಜಿಲ್ಲೆಯಲ್ಲಿ ಫಲ್ಗುಣಿ, ಶಾಂಭವಿ ನದಿಗಳು ಉಕ್ಕಿ ಹರಿಯುತ್ತಿದ್ದು, ಹಲವೆಡೆ ತಗ್ಗುಪ್ರದೇಶಗಳು ಜಲಾವೃತಗೊಂಡಿವೆ. ಅಲ್ಲಲ್ಲಿ ವಿಪತ್ತು ಸಂಭವಿಸಿದ್ದು ಜಿಲ್ಲಾಡಳಿತ ಸಕ್ರಿಯವಾಗಿ ಕಾರ್ಯಾಚರಣೆ ನಡೆಸುತ್ತಿದೆ.

ರೆಡ್ ಅಲರ್ಟ್ ಹಿನ್ನೆಲೆ| ಜು.19ರಂದು ಉಡುಪಿ ಜಿಲ್ಲೆಯ ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Read More »

ಪೊಲೀಸ್ ಸ್ಟೇಷನ್ ಒಳಗೆ ಪೊಲಿಸರೇ ಹೊಡೆದಾಡ್ಕೊಂಡ್ರಾ? ಎಎಸ್ಐ ಮೇಲೆ ಹೆಡ್ ಕಾನ್ಸ್ ಟೇಬಲ್ ಹಲ್ಲೆ!?

ಸಮಗ್ರ ನ್ಯೂಸ್: ಪೊಲೀಸ್ ಠಾಣೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಗಳು ಗಲಾಟೆ ಮಾಡಿಕೊಂಡು. ASI ಮೇಲೆ, HC ಹಲ್ಲೆಗೂ ಯತ್ನಿಸಿದ್ದಾರೆ ಎನ್ನಲಾದಂತ ಘಟನೆ ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ನಡೆದಿದೆ ಎನ್ನಲಾಗುತ್ತಿದೆ. ಬೆಂಗಳೂರಿನ ಪುಟ್ಟೇನಹಳ್ಳಿ ಠಾಣೆಯಲ್ಲಿ ಎಎಸ್‌ಐ ಮಂಜುನಾಥ್ ಹಾಗೂ ಹೆಚ್ ಕಾನ್ಸ್ ಸ್ಟೇಬಲ್ ಅಂಜನಾಮೂರ್ತಿ ನಡುವೆ ಗಲಾಟೆಯಾಗಿದೆ ಎಂದು ಹೇಳಲಾಗುತ್ತಿದೆ. ಜುಲೈ.16ರಂದು ಪ್ರಕರಣವೊಂದರ ಬಗ್ಗೆ ಎಎಸ್‌ಐ ಮಂಜುನಾಥ್ ಅವರು ಬೇರೆ ಸಿಬ್ಬಂದಿಗಳೊಂದಿಗೆ ಮಾತನಾಡುತ್ತಿದ್ದಂತ ಸಂದರ್ಭದಲ್ಲಿ ಹೆಚ್ ಸಿ ಅಂಜನಾಮೂರ್ತಿ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದಷ್ಟೇ ಅಲ್ಲದೇ ಎಎಸ್‌ಐ

ಪೊಲೀಸ್ ಸ್ಟೇಷನ್ ಒಳಗೆ ಪೊಲಿಸರೇ ಹೊಡೆದಾಡ್ಕೊಂಡ್ರಾ? ಎಎಸ್ಐ ಮೇಲೆ ಹೆಡ್ ಕಾನ್ಸ್ ಟೇಬಲ್ ಹಲ್ಲೆ!? Read More »

ಸೈದಾಪುರದಲ್ಲಿ ತ್ರಿಬಲ್ ಮರ್ಡರ್.. ಪತ್ನಿ, ಅತ್ತೆ ಮತ್ತು ಮಾವನನ್ನು ಬರ್ಬರವಾಗಿ ಹತ್ಯೆಗೈದ ಪಾಪಿ

ಸಮಗ್ರ ನ್ಯೂಸ್: ಯಾದಗಿರಿ ತಾಲೂಕಿನ ಸೈದಾಪುರದಲ್ಲಿ ಅತ್ತೆ-ಮಾವ ಹಾಗೂ ಪತ್ನಿಯನ್ನು ಪಾಪಿಯೊಬ್ಬ ಬರ್ಬರವಾಗಿ ಕೊಲೆ ಮಾಡಿದ ಘಟನೆ ನಡೆದಿದೆ. ಕೊಲೆಯಾದ ಮೂವರು ದಾವಣಗೆರೆ ಮೂಲದವರಾಗಿದ್ದಾರೆ. ಅನ್ನಪೂರ್ಣ (25), ಕವಿತಾ (45), ಬಸವರಾಜಪ್ಪ (52) ಕೊಲೆಯಾದವರು. ಯಾದಗಿರಿ ತಾಲೂಕಿನ ಮುನಗಲ್ ಗ್ರಾಮದ ನವೀನ್ (30) ಕೊಲೆ ಮಾಡಿದ ಆರೋಪಿಯಾಗಿದ್ದಾನೆ. ಕಳೆದ ಮೂರು ವರ್ಷಗಳ ಹಿಂದೆ ದಾವಣಗೆರೆ ಮೂಲದ ಅನ್ನಪೂರ್ಣಳನನ್ನು ನವೀನ್‌ ಮದುವೆಯಾಗಿದ್ದ. ಈ ದಂಪತಿಗೆ ಒಂದು ಹೆಣ್ಣು ಮಗು ಕೂಡ ಇತ್ತು. ಆದರೆ ಪತಿ ನವೀನ್‌ ಕಿರುಕುಳ ತಾಳಲಾರದೆ

ಸೈದಾಪುರದಲ್ಲಿ ತ್ರಿಬಲ್ ಮರ್ಡರ್.. ಪತ್ನಿ, ಅತ್ತೆ ಮತ್ತು ಮಾವನನ್ನು ಬರ್ಬರವಾಗಿ ಹತ್ಯೆಗೈದ ಪಾಪಿ Read More »

ಕೇರಳದಲ್ಲಿ ಭಾರೀ ಮಳೆ ಹಿನ್ನೆಲೆ| ಕಾಸರಗೋಡು ಜಿಲ್ಲೆಯ ಶಾಲೆ, ಮದರಸಾಗಳಿಗೆ ಜು.19ರಂದು ರಜೆ ಘೋಷಣೆ

ಸಮಗ್ರ ನ್ಯೂಸ್: ಕಾಸರಗೋಡು ಜಿಲ್ಲೆಯಲ್ಲಿ ಜು.19ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಜಿಲ್ಲೆಯಲ್ಲಿ ಭಾರೀ ಮಳೆಯ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ ಶಾಲೆ, ಮದ್ರಸಗಳಿಗೆ ಜು.19ರಂದು ರಜೆ ಘೋಷಿಸಿ ಜಿಲ್ಲಾಧಿಕಾರಿ ಕೆ. ಇಂಪಾ ಶೇಖರ್ ಆದೇಶ ನೀಡಿದ್ದಾರೆ. ರಾಜ್ಯ, ಸಿ ಬಿ ಎಸ್ ಇ, ಐ ಸಿ ಎಸ್ ಇ ಶಾಲೆಗಳು, ಕೇಂದ್ರೀಯ ವಿದ್ಯಾಲಯ, ಅಂಗನವಾಡಿ, ಮದ್ರಸಗಳಿಗೂ ರಜೆ ಅನ್ವಯವಾಗಲಿದೆ. ಕಾಲೇಜುಗಳಿಗೆ ರಜೆ ಇಲ್ಲ. ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಿಂದ ಭಾರೀ ಗಾಳಿ, ಮಳೆ ಸುರಿಯುತ್ತಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ.

ಕೇರಳದಲ್ಲಿ ಭಾರೀ ಮಳೆ ಹಿನ್ನೆಲೆ| ಕಾಸರಗೋಡು ಜಿಲ್ಲೆಯ ಶಾಲೆ, ಮದರಸಾಗಳಿಗೆ ಜು.19ರಂದು ರಜೆ ಘೋಷಣೆ Read More »

ಭಾರೀ ಮಳೆ ಹಿನ್ನೆಲೆ| ಹಾಸನ ಜಿಲ್ಲೆಯ 6 ತಾಲೂಕಿನ ಶಾಲೆಗಳಿಗೆ ರಜೆ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಮುಂಗಾರುಮಳೆ ಭರ್ಜರಿಯಾಗಿ ಸುರಿಯುತ್ತಿದ್ದು ಹಲವೆಡೆ ಅನಾಹುತಗಳು ಸೃಷ್ಟಿಯಾಗುತ್ತಿವೆ. ಘಟ್ಟಪ್ರದೇಶ ಹಾಗೂ ಕರಾವಳಿಯಲ್ಲಿ ಭಾರೀ ಮಳೆ ಮುಂದುವರೆದಿದೆ. ಮಳೆಯ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ 6 ತಾಲೂಕಿನ ಶಾಲೆಗಳಿಗೆ ರಜೆ ಘೋಷಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಹೆಚ್.ಕೆ‌.ಪಾಂಡು ಆದೇಶಿಸಿದ್ದಾರೆ. ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು, ಹಾಸನ, ಹೊಳೆನರಸೀಪುರ ಮತ್ತು ಅರಕಲಗೂಡು ತಾಲ್ಲೂಕಿನ ಅಂಗನವಾಡಿ, ಸರ್ಕಾರಿ, ಅನುದಾನಿತ, ಅನುದಾನ ರಹಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆ ಘೋಷಿಸಿ ಅವರು ಆದೇಶಿಸಿದ್ದಾರೆ.

ಭಾರೀ ಮಳೆ ಹಿನ್ನೆಲೆ| ಹಾಸನ ಜಿಲ್ಲೆಯ 6 ತಾಲೂಕಿನ ಶಾಲೆಗಳಿಗೆ ರಜೆ Read More »

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ| AIMS ನ ನಾಲ್ಕು ಮಂದಿ‌ ವಿದ್ಯಾರ್ಥಿಗಳು ಸಿಬಿಐ ವಶಕ್ಕೆ

ಸಮಗ್ರ ನ್ಯೂಸ್: ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ಮಹತ್ವದ ಬೆಳವಣಿಗೆಯಲ್ಲಿ, ಕೇಂದ್ರ ತನಿಖಾ ದಳ (ಸಿಬಿಐ) ಪಾಟ್ನಾ ಏಮ್ಸ್ ಒಟ್ಟು ನಾಲ್ಕು ವಿದ್ಯಾರ್ಥಿಗಳನ್ನು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದೆ. ಬಂಧಿತ ವಿದ್ಯಾರ್ಥಿಗಳು 2021ರ ಬ್ಯಾಚ್ಗೆ ಸೇರಿದವರಾಗಿದ್ದಾರೆ. ಅವರ ಬಂಧನದ ನಂತರ, ಸಿಬಿಐ ಅವರ ಕೊಠಡಿಗಳನ್ನು ಸೀಲ್ ಮಾಡಿತು ಮತ್ತು ಅವರ ಮೊಬೈಲ್ ಫೋನ್ಗಳು ಮತ್ತು ಲ್ಯಾಪ್ಟಾಪ್ಗಳನ್ನು ವಶಪಡಿಸಿಕೊಂಡಿತು. ಮೂಲಗಳ ಪ್ರಕಾರ, ಸೋರಿಕೆಯಾದ ಪರೀಕ್ಷಾ ಪ್ರಶ್ನೆಪತ್ರಿಕೆಗಳನ್ನು ಪರಿಹರಿಸಲು ಪರೀಕ್ಷಾ ಮಾಫಿಯಾ ಈ ವಿದ್ಯಾರ್ಥಿಗಳ ಸಹಾಯವನ್ನು ಪಡೆದುಕೊಂಡಿದೆ ಎಂದು ತನಿಖಾ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ| AIMS ನ ನಾಲ್ಕು ಮಂದಿ‌ ವಿದ್ಯಾರ್ಥಿಗಳು ಸಿಬಿಐ ವಶಕ್ಕೆ Read More »

ಅಂಕೋಲಾ: ಗುಡ್ಡ ಕುಸಿತದಲ್ಲಿ ಕಣ್ಮರೆಯಾಗಿದ್ದ ಬಾಲಕಿ ಶವ ಪತ್ತೆ

ಸಮಗ್ರ ನ್ಯೂಸ್: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಶಿರೂರಿನಲ್ಲಿ ನಡೆದ ಗುಡ್ಡ ಕುಸಿತದಲ್ಲಿ ಕಾಣೆಯಾಗಿದ್ದ ಬಾಲಕಿ ಅವಂತಿಕಾಳ (6) ಮೃತದೇಹ ಪತ್ತೆಯಾಗಿದೆ. ಜುಲೈ 16 ರಂದು ನಡೆದ ಗುಡ್ಡ ಕುಸಿತದಲ್ಲಿ ಒಂದೇ ಕುಟುಂಬದ ಐವರು ಸದಸ್ಯರು ಮಣ್ಣಿನಡಿ ಬಿದ್ದು ಕಣ್ಮರೆಯಾಗಿದ್ದರು. ಐವರ ಪೈಕಿ ಮೂವರ ಮೃತದೇಹ ಪತ್ತೆಯಾಗಿತ್ತು. ಲಕ್ಷ್ಮಣ ನಾಯ್ಕ, ಪತ್ನಿ ಶಾಂತಿ ನಾಯ್ಕ, ಮಗ ರೋಶನ್ ನಾಯ್ಕ ಮೃತದೇಹ ಪತ್ತೆಯಾಗಿತ್ತು. ಇದೀಗ ಮತ್ತೋರ್ವ ಬಾಲಕಿ ಅವಂತಿಕಾ ಮೃತದೇಹ ಪತ್ತೆಯಾಗಿದೆ. ಕುಮಟಾ ತಾಲೂಕಿನ ಗಂಗೆಕೊಳ್ಳದ ಸಮುದ್ರ

ಅಂಕೋಲಾ: ಗುಡ್ಡ ಕುಸಿತದಲ್ಲಿ ಕಣ್ಮರೆಯಾಗಿದ್ದ ಬಾಲಕಿ ಶವ ಪತ್ತೆ Read More »