ರಾಜ್ಯ

‘ಅನ್ನಭಾಗ್ಯ’ಕ್ಕೆ ಅಕ್ಕಿ ನೀಡಲು ಕೇಂದ್ರ ಒಪ್ಪಿಗೆ

ಸಮಗ್ರ ನ್ಯೂಸ್: ಕೇಂದ್ರ ಸರ್ಕಾರ ಅನ್ನಭಾಗ್ಯ ಯೋಜನೆಗೆ ಬೇಕಿರುವಂತ ಅಕ್ಕಿ ಕೊಡುತ್ತಿಲ್ಲ ಎನ್ನುವ ಕಾರಣಕ್ಕಾಗಿ ಪಡಿತರ ಚೀಟಿದಾರರಿಗೆ ಅಕ್ಕಿ ಬದಲಾಗಿ ಹಣವನ್ನೇ ನೀಡಲಾಗುತ್ತಿತ್ತು. ಆದರೇ ಈಗ ಕೇಂದ್ರ ಸರ್ಕಾರ ಅನ್ನಭಾಗ್ಯ ಯೋಜನೆಗೆ ಅಗತ್ಯವಿರುವಂತ ಅಕ್ಕಿ ನೀಡಲು ಮುಂದಾಗಿದೆ ಎಂಬುದಾಗಿ ತಿಳಿದು ಬಂದಿದೆ. ಸುಮಾರು ಒಂದು ವರ್ಷದ ನಂತರ ರಾಜ್ಯ ಸರ್ಕಾರ ಮತ್ತು ಕೇಂದ್ರದ ನಡುವಿನ ಬಿಕ್ಕಟ್ಟು ಬಗೆಹರಿದಿದ್ದು, ಕಾಂಗ್ರೆಸ್ ನೇತೃತ್ವದ ಸರ್ಕಾರದ ಅನ್ನ ಭಾಗ್ಯ ಯೋಜನೆಯನ್ನು ಕರ್ನಾಟಕದಲ್ಲಿ ಜಾರಿಗೆ ತರಲು ಅಗತ್ಯವಾದ ಅಕ್ಕಿಯನ್ನು ಪೂರೈಸಲು ಕೇಂದ್ರ ಸರ್ಕಾರ […]

‘ಅನ್ನಭಾಗ್ಯ’ಕ್ಕೆ ಅಕ್ಕಿ ನೀಡಲು ಕೇಂದ್ರ ಒಪ್ಪಿಗೆ Read More »

ಮುಡಾ ಭೂ ಹಗರಣ| ಸಿಎಂ ಸಿದ್ದರಾಮಯ್ಯಗೆ ಕೊಂಚ ರಿಲೀಫ್ ನೀಡಿದ ಹೈಕೋರ್ಟ್

ಸಮಗ್ರ ನ್ಯೂಸ್: ಮುಡಾ ಭೂ ಹಗರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಶನ್‌ಗೆ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ತಕ್ಷಣ ಯಾವುದೇ ಕ್ರಮಕೈಗೊಳ್ಳದಂತೆ ವಿಚಾರಣಾ ನ್ಯಾಯಾಲಯಕ್ಕೆ ಕರ್ನಾಟಕ ಹೈಕೋರ್ಟ್‌ ಇಂದು ಆದೇಶಿಸಿದೆ. ಮುಂದಿನ ವಿಚಾರಣೆ ನಡೆಯುವ ಆಗಸ್ಟ್‌ 29ರ ತನಕ ಈ ಮಧ್ಯಂತರ ತೀರ್ಪು ಜಾರಿಯಲ್ಲಿರಲಿದೆ. ರಾಜ್ಯಪಾಲರ ಕ್ರಮ ಕಾನೂನುಬಾಹಿರ ಹಾಗೂ ತಮ್ಮ ವಿರುದ್ಧ ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿರುವುದು ತಮ್ಮ ಗೌರವಕ್ಕೆ ಚ್ಯುತಿ ತರುವ ಪ್ರಯತ್ನ. ಅಲ್ಲದೇ

ಮುಡಾ ಭೂ ಹಗರಣ| ಸಿಎಂ ಸಿದ್ದರಾಮಯ್ಯಗೆ ಕೊಂಚ ರಿಲೀಫ್ ನೀಡಿದ ಹೈಕೋರ್ಟ್ Read More »

ಯೂತ್ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಹೆಸರಲ್ಲಿ ವಿದ್ಯಾರ್ಥಿಯ ಕಿಡ್ನಾಪ್

ಸಮಗ್ರ ನ್ಯೂಸ್: ಯೂತ್ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಹೆಸರು ಹೇಳಿಕೊಂಡು ದುಷ್ಕರ್ಮಿಗಳು ವಿದ್ಯಾರ್ಥಿಯೊಬ್ಬನನ್ನು ಅಪಹರಣ ಮಾಡಿರುವ ಘಟನೆ ನಡೆದಿದೆ. ಬೆಂಗಳೂರಿನಲ್ಲಿ ಈ ಘಟನೆ ನಡೆದಿದ್ದು, ನಾವು ಯೂತ್ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಕಡೆಯ ಹುಡುಗರು ಎಂದು ಹೇಳಿಕೊಂಡು ವಿದ್ಯಾರ್ಥಿಯೊಬ್ಬನನ್ನು ಕಿಡ್ನಾಪ್ ಮಾಡಿ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಅಪಹರಣವಾದ ವಿದ್ಯಾರ್ಥಿ ಜೀವನ್ ಜೈನ್ ಅಪಹರಣ ಮಾಡಿದ ನಾಲ್ವರ ವಿರುದ್ಧ ಗಂಭೀರ ಆರೋಪ ಮಾಡಿದ್ದಾನೆ. ಖಾಸಗಿ ಕಾಲೇಜಿನಲ್ಲಿ ಬಿಬಿಎ ಓದುತ್ತಿರುವ ಜೀವನ್, ಕಳೆದ ವರ್ಷ ಆಯುಷ್ಶ್ರೀನಿವಾಸ್ ಎಂಬಾತನಿಂದ ಮೂರು

ಯೂತ್ ಕಾಂಗ್ರೆಸ್ ಅಧ್ಯಕ್ಷ ನಲಪಾಡ್ ಹೆಸರಲ್ಲಿ ವಿದ್ಯಾರ್ಥಿಯ ಕಿಡ್ನಾಪ್ Read More »

ಸಕಲೇಶಪುರ: ರೈಲು ಹಳಿಗಳ ಮೇಲೆ‌ ಕುಸಿದ ಮಣ್ಣು ತೆರವು| ಇಂದಿನಿಂದ (ಆ.20) ರೈಲು ಸಂಚಾರ ಪುನರಾರಂಭ

ಸಮಗ್ರ ನ್ಯೂಸ್: ಸಕಲೇಶಪುರ ಹಾಗೂ ಬಾಳ್ಳುಪೇಟೆ ನಡುವೆ ರೈಲು ಹಳಿಗಳ ಮೇಲೆಯೇ ಮಳೆಯಿಂದಾಗಿ ಭೂಕುಸಿತಗೊಂಡು ಕುಸಿದಿದ್ದ ಮಣ್ಣನ್ನು ಸಂಪೂರ್ಣವಾಗಿ ತೆರವುಗೊಳಿಸಲಾಗಿದ್ದು, ಇಂದಿನಿಂದ (ಆ.20) ಈ ಮಾರ್ಗದಲ್ಲಿ ಕೆಲ ರೈಲುಗಳ ಸಂಚಾರ ಪುನರಾರಂಭವಾಗಲಿದೆ‌. ರೈಲು ಸಂಚಾರದ ಬಗ್ಗೆ ನೈರುತ್ಯ ರೈಲ್ವೆಯಿಂದ ಮಾಹಿತಿ ನೀಡಲಾಗಿದ್ದು, ಮೈಸೂರು ವಿಭಾಗದ ಸಕಲೇಶಪುರ ಮತ್ತು ಬಾಳ್ಳುಪೇಟೆ ನಿಲ್ದಾಣಗಳ ನಡುವೆ ಭೂಕುಸಿತಕ್ಕೆ ಸಂಬಂಧಿಸಿದಂತೆ, ಪುನಃಸ್ಥಾಪನೆ ಕಾರ್ಯ ಪೂರ್ಣಗೊಂಡಿದೆ. ಸದ್ಯ ಹಳಿಯಲ್ಲಿನ ಎಲ್ಲಾ ಅಡೆತಡೆಗಳನ್ನು ತೆರವುಗೊಳಿಸಲಾಗಿದೆ ಮತ್ತು ಸಂಜೆ 4:45 ರವರೆಗೆ ಹಳಿಯ ಎಲ್ಲಾ ರೈಲು ಕಾರ್ಯಾಚರಣೆಗಳನ್ನು

ಸಕಲೇಶಪುರ: ರೈಲು ಹಳಿಗಳ ಮೇಲೆ‌ ಕುಸಿದ ಮಣ್ಣು ತೆರವು| ಇಂದಿನಿಂದ (ಆ.20) ರೈಲು ಸಂಚಾರ ಪುನರಾರಂಭ Read More »

ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ/ ರಾಜ್ಯಾದ್ಯಂತ ಹೈ ಆಲರ್ಟ್‌

ಸಮಗ್ರ ನ್ಯೂಸ್‌: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್’ಗೆ ರಾಜ್ಯಪಾಲರು ಅನುಮತಿ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಸಜ್ಜಾಗಿದ್ದು ಈ ಹಿನ್ನೆಲೆಯಲ್ಲಿ ಎಲ್ಲೆಡೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಕಾಂಗ್ರೆಸ್ ಕಾರ್ಯಕರ್ತರು, ಸಂಘಟನೆಗಳು, ಸಿದ್ದರಾಮಯ್ಯ ಅಭಿಮಾನಿಗಳ ಸಂಘಗಳು ಇಂದು ಪ್ರತಿಭಟನೆ ನಡೆಸಲು ಮುಂದಾಗಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಎಲ್ಲಾ ಜಿಲ್ಲಾಕೇಂದ್ರಗಳಲ್ಲೂ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಪ್ರತಿಭಟನೆ ನಡೆಸಿ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಿದ್ದಾರೆ. ಶಾಂತಿಯುತವಾಗಿ ಪ್ರತಿಭಟನೆ ನಡೆಸಬೇಕು. ಕೆಲ ಕಿಡಿಗೇಡಿಗಳು ಪ್ರತಿಭಟನೆಯಲ್ಲಿ ನುಸಳಿಕೊಂಡು ಕಲ್ಲು ಹೊಡೆದು,

ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ವಿರುದ್ಧ ಕಾಂಗ್ರೆಸ್‌ ಪ್ರತಿಭಟನೆ/ ರಾಜ್ಯಾದ್ಯಂತ ಹೈ ಆಲರ್ಟ್‌ Read More »

ರಾಜ್ಯಪಾಲರ ವಿರುದ್ದ ನಾಲಿಗೆ ಹರಿ ಬಿಟ್ಟ ಕಾಂಗ್ರೆಸ್ ಶಾಸಕ ಪಿಎಂ ನರೇಂದ್ರಸ್ವಾಮಿ

ಸಮಗ್ರ ನ್ಯೂಸ್: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್ಗೆ ರಾಜ್ಯಪಾಲರು ಅನುಮತಿ ನೀಡಿದ ವಿಚಾರವಾಗಿ ಕಾಂಗ್ರೆಸ್ ನಾಯಕರು ಆಕ್ರೋಶಗೊಂಡಿದ್ದಾರೆ. ಇದೀಗ ಕೈ ಪಾಳಯದಲ್ಲಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಮಳವಳ್ಳಿಯಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದು, ಈ ವೇಳೆ ರಾಜ್ಯಪಾಲರ ವಿರುದ್ದ ಕಾಂಗ್ರೆಸ್ ಶಾಸಕ ಪಿಎಂ ನರೇಂದ್ರಸ್ವಾಮಿ ನಾಲಿಗೆ ಹರಿಬಿಟ್ಟಿದ್ದಾರೆ. ವಾಗ್ದಾಳಿ ಬರದಲ್ಲಿ ಅಸಬಂದ್ದ ಪದ ಬಳಸಿದ್ದು, ‘ಸುಪ್ರೀಂ ಕೋರ್ಟ್ನಿಂದ ಛೀಮಾರಿ ಹಾಕಿಸಿಕೊಂಡ ಅಯೋಗ್ಯ, ಮುಟ್ಟಾಳನ ಅರ್ಜಿ ಕೊಡ್ತಾನೆ. ಅವನ ಅರ್ಜಿ ಇಟ್ಕೊಂಡು ನೋಟೀಸ್ ಕೊಡ್ತೀರಲ್ಲಪ್ಪ. ರಾಜ್ಯಪಾಲ ಆಗೋಕೆ

ರಾಜ್ಯಪಾಲರ ವಿರುದ್ದ ನಾಲಿಗೆ ಹರಿ ಬಿಟ್ಟ ಕಾಂಗ್ರೆಸ್ ಶಾಸಕ ಪಿಎಂ ನರೇಂದ್ರಸ್ವಾಮಿ Read More »

ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ನಿವೃತ್ತ ಪ್ರೊಫೆಸರ್ ಮಹೇಶ್ ಚಂದ್ರ ಗುರು ಇನ್ನಿಲ್ಲ

ಸಮಗ್ರ ನ್ಯೂಸ್: ಮಾನಸ ಗಂಗೋತ್ರಿಯ ಪತ್ರಿಕೋದ್ಯಮ ವಿಭಾಗದ ನಿವೃತ್ತ ಪ್ರೊಫೆಸರ್ ಮಹೇಶ್ ಚಂದ್ರ ಗುರು ಇಂದು ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಳೆದ ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಮಹೇಶ್ ಚಂದ್ರ ಗುರು ಅವರನ್ನು ಆ. 17ರಂದು ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಹೃದಯಾಘಾತದಿಂದ ಅವರು ವಿಧಿವಶರಾಗಿದ್ದಾರೆ ಎಂದು ತಿಳಿದು ಬಂದಿದೆ. ವಿಚಾರವಾದಿಗಳು ಹಾಗೂ ಖ್ಯಾತ ವಾಗ್ಮಿಯೂ ಆಗಿದ್ದ ಮಹೇಶ್ ಚಂದ್ರ ಗುರು ಅವರು 80ರ ದಶಕದಲ್ಲಿ ಹೈದರಾಬಾದ್ ನಲ್ಲಿ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ವೃತ್ತಿ ಜೀವನ ಆರಂಭಿಸಿದ್ದರು.

ಮೈಸೂರು ವಿವಿ ಪತ್ರಿಕೋದ್ಯಮ ವಿಭಾಗದ ನಿವೃತ್ತ ಪ್ರೊಫೆಸರ್ ಮಹೇಶ್ ಚಂದ್ರ ಗುರು ಇನ್ನಿಲ್ಲ Read More »

ವೀಲಿಂಗ್ ಮಾಡ್ತಿದ್ದ ಪುಂಡನ ಸ್ಕೂಟರ್ ಅನ್ನು ಫ್ಲೈಓವರ್ ಮೇಲಿಂದ ಬಿಸಾಡಿದ ಸಾರ್ವಜನಿಕರು

ಸಮಗ್ರ ನ್ಯೂಸ್: ನ್ಯಾಷನಲ್ ಹೈವೆಯಲ್ಲಿ ವೀಲಿಂಗ್ ಮಾಡ್ತಿದ್ದ ಪುಂಡನ ಸ್ಕೂಟರ್ ಅನ್ನು ಫ್ಲೈಓವರ್ ಮೇಲಿಂದ ಸಾರ್ವಜನಿಕರು ಎತ್ತಿ ಬೀಸಾಡಿದ್ದಾರೆ. ತುಮಕೂರು ರಸ್ತೆಯ ಅಡಕಮಾರನಹಳ್ಳಿ ಬಳಿಯ ಫ್ಲೈಓವರ್ ಮೇಲಿಂದ ಸರ್ವಿಸ್ ರಸ್ತೆಗೆ ಡಿಯೋ ಸ್ಕೂಟರ್ ಳನ್ನ ಎಸೆಯಲಾಗಿದೆ. ಎರಡು ಸ್ಕೂಟರ್ಗಳನ್ನು ಎಸೆಯಲಾಗಿದೆ. ಹೆದ್ದಾರಿಯಲ್ಲಿ ವಾಹನ ಸವಾರರಿಗೆ ಭಯ ಹುಟ್ಟಿಸೋ ರೀತಿ ವೀಲಿಂಗ್ ಮಾಡಿದಲ್ಲದೆ ಒಂದು ವಾಹನಕ್ಕೆ ಡಿಕ್ಕಿ ಕೂಡ ಹೊಡೆದಿದ್ದಾರೆ. ಈ ವೇಳೆ ಬೈಕ್ ತಡೆದು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡು ಬೈಕ್ಗೆ ಒಂದು ಗತೀ ಕಾಣಿಸಿದ್ದಾರೆ. ಇನ್ನು ವ್ಹೀಲಿಂಗ್

ವೀಲಿಂಗ್ ಮಾಡ್ತಿದ್ದ ಪುಂಡನ ಸ್ಕೂಟರ್ ಅನ್ನು ಫ್ಲೈಓವರ್ ಮೇಲಿಂದ ಬಿಸಾಡಿದ ಸಾರ್ವಜನಿಕರು Read More »

ರಾಜ್ಯಪಾಲರ ನಡೆ ಖಂಡಿಸಿ ರಾಜ್ಯದಾದ್ಯಂತ ಸೋಮವಾರ ‘ಕೈ’ ಪ್ರತಿಭಟನೆ

ಸಮಗ್ರ ನ್ಯೂಸ್: ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಶನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ವಿರುದ್ಧ ಕಾಂಗ್ರೆಸ್‌ ಸಿಡಿದೆದ್ದಿದೆ. ಇದೀಗ ಗವರ್ನರ್‌ ಕ್ರಮವನ್ನು ಖಂಡಿಸಿ ಸೋಮವಾರ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲು ಕೈ ಪಡೆ ಮುಂದಾಗಿದೆ. ರಾಜ್ಯದ ಎಲ್ಲಾ ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಕಾಂಗ್ರೆಸ್‌ ಪ್ರತಿಭಟನೆ ಹಮ್ಮಿಕೊಂಡಿದ್ದು, ಜಿಲ್ಲಾಧಿಕಾರಿಗಳಿಗೆ ಪ್ರತಿಭಟನಾ ಪತ್ರ ನೀಡಲು ತೀರ್ಮಾನಿಸಿದೆ. ರಾಷ್ಟ್ರಪತಿಗಳಿಗೆ ಡಿಸಿಗಳ ಮೂಲಕ ಪ್ರತಿಭಟನಾ ಪತ್ರ ನೀಡಲಾಗುತ್ತದೆ. ಈಗಾಗಲೇ ಎಲ್ಲಾ ಶಾಸಕರಿಗೂ ಈ ಬಗ್ಗೆ ಸೂಚನೆ ನೀಡಲಾಗಿದ್ದು, ಕನಿಷ್ಠ ಅರ್ಧ ಕಿಲೋಮೀಟರ್ ನಡೆದು

ರಾಜ್ಯಪಾಲರ ನಡೆ ಖಂಡಿಸಿ ರಾಜ್ಯದಾದ್ಯಂತ ಸೋಮವಾರ ‘ಕೈ’ ಪ್ರತಿಭಟನೆ Read More »

ಅಚ್ಚರಿಗೆ ಕಾರಣವಾದ ಆ.15ರ ಆ ಘಟನೆ| ಕಂಬದಲ್ಲಿ ಸಿಲುಕಿದ ರಾಷ್ಟ್ರಧ್ವಜವನ್ನು ಬಿಡಿಸಿದ ಹಕ್ಕಿ!! ಇಲ್ಲಿದೆ ವೈರಲ್ ವಿಡಿಯೋ

ಸಮಗ್ರ ನ್ಯೂಸ್: ಆಗಸ್ಟ್‌ 15ರಂದು ದೇಶದೆಲ್ಲಡೆ ಅದ್ಧೂರಿಯಾಗಿ ಆಚಸರಿಸಲಾಯಿತು. ಈ ವೇಳೆ ಹಲವೆಡೆ ಅಪರೂಪದ ಘಟನೆಗಳು ಸಂಭವಿಸಿವೆ, ಅದೆರೀತಿ ಇಲ್ಲೋಂದು ಅಪರೂಪದ ಘಟನೆಯೊಂದರ ಭಾರಿ ವೈರಲ್‌ ಅಗಿದ್ದು ಆಶ್ಚರ್ಯವನ್ನು ತರೆಸಿದೆ. ಈ ವೈರಲ್ ವಿಡಿಯೊದಲ್ಲಿ ಶಾಲೆಯ ಮಕ್ಕಳು ಝಂಡಾ ಊಂಚಾ ರಹೆ ಹಮಾರಾ ಎಂಬ ಹಿಂದಿ ಭಾಷೆಯ ದೇಶ ಭಕ್ತಿಗೀತೆ ಹಾಡುತ್ತಿರುವುದು ಕೇಳುತ್ತಿದೆ. ಆ ವೇಳೆ ರಾಷ್ಟ್ರಧ್ವಜವನ್ನು ಹಗ್ಗಕ್ಕೆ ಕಟ್ಟಿ ಮೇಲಕ್ಕೆ ಎಳೆಯುತ್ತಿದ್ದಾರೆ. ಆದರೆ ಧ್ವಜ ಮೇಲೆ ಹೋಗಿ ಎಷ್ಟೇ ಎಳೆದರೂ ಅದು ಬಿಡಿಸಿಕೊಂಡು ಹಾರಲಿಲ್ಲ. ಆಗ

ಅಚ್ಚರಿಗೆ ಕಾರಣವಾದ ಆ.15ರ ಆ ಘಟನೆ| ಕಂಬದಲ್ಲಿ ಸಿಲುಕಿದ ರಾಷ್ಟ್ರಧ್ವಜವನ್ನು ಬಿಡಿಸಿದ ಹಕ್ಕಿ!! ಇಲ್ಲಿದೆ ವೈರಲ್ ವಿಡಿಯೋ Read More »