ರಾಜ್ಯ

ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ/ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ

ಸಮಗ್ರ ನ್ಯೂಸ್‌: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜನರಿಗೆ ಕೊಟ್ಟ ಭರವಸೆಯಂತೆ 5 ಪ್ರಮುಖ ಗ್ಯಾರಂಟಿಗಳನ್ನು ಜಾರಿಗೆ ಮಾಡಿದ್ದೇವೆ. ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ನಮ್ಮ ಸರ್ಕಾರ ಜನರಿಗೆ ಮಾತು ನೀಡಿದ್ದಂತೆ ಎಲ್ಲಾ ಕಾರ್ಯಕ್ರಮಗಳನ್ನು ಜಾರಿ ಮಾಡಿದೆ. ಅಧಿಕಾರಕ್ಕೆ ಬಂದು ಒಂದು ವರ್ಷ ಮೂರು ತಿಂಗಳಲ್ಲಿ ನಮ್ಮ ಐದು ಕಾರ್ಯಕ್ರಮಗಳನ್ನು ಜಾರಿ ಮಾಡಲಾಗಿದೆ. ಎಲ್ಲಾ ಧರ್ಮ, ಜಾತಿಯ ಬಡವರಿಗೆ ಈ ಕಾರ್ಯಕ್ರಮಗಳನ್ನು ತಲುಪಿಸುವ ಪ್ರಯತ್ನ ಮಾಡುತ್ತಿದ್ದೇವೆ. ವಿರೋಧ ಪಕ್ಷದವರು […]

ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲಲ್ಲ/ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ Read More »

ಹೊರಗಡೆಯಿಂದ ಸೆರೆಮನೆ; ಒಳಗಡೆ ಅರಮನೆ| ದರ್ಶನ್ ಗೆ ಜೈಲೊಳಗೆ ರಾಜಮಾರ್ಯಾದೆ| ಜೈಲಿನಲ್ಲಿ ವಿಡಿಯೋ ಕಾಲ್ ಗೂ ಅನುಮತಿ ಇದ್ಯಾ?

ಸಮಗ್ರ ನ್ಯೂಸ್: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ನಟ ದರ್ಶನ್ ಜೈಲಲ್ಲಿ ಐಷಾರಾಮಿ ಜೀವನ ಮಾಡುತ್ತಿರುವ ವಿಚಾರ ತಿಳಿದು ಬಂದಿದೆ. ನಟ ದರ್ಶನ್ ಬೆಂಗಳೂರಿನ ಸೆಂಟ್ರಲ್ ಜೈಲಿನಲ್ಲಿದ್ದರೂ ಐಷಾರಾಮಿ ಜೀವನ ಮಾಡುತ್ತಿದ್ದು, ಮೊಬೈಲ್‌ನ ವಿಡಿಯೋ ಕಾಲ್‌ನಲ್ಲಿ ಮಾತನಾಡುತ್ತಿರುವ ವಿಡಿಯೋ ಲಭ್ಯವಾಗಿವೆ. ಈಗಾಗಲೇ ನಟ ದರ್ಶನ್ ಜೈಲಿನಲ್ಲಿ ನಟೋರಿಯಸ್ ರೌಡಿ ವಿಲ್ಸನ್ ಗಾರ್ಡನ್ ನಾಗನೊಂದಿಗೆ ಕುಳಿತು ಕಾಫಿ ಹೀರುತ್ತಾ, ಕೈಯಲ್ಲಿ ಸಿಗರೇಟ್ ಹಿಡಿದು ಸೇದುತ್ತಿರುವ ಫೋಟೋ ವೈರಲ್ ಆಗಿತ್ತು. ಬಳಿಕ ಜೈಲಿನಲ್ಲಿ ಮೊಬೈಲ್, ಫೋನ್

ಹೊರಗಡೆಯಿಂದ ಸೆರೆಮನೆ; ಒಳಗಡೆ ಅರಮನೆ| ದರ್ಶನ್ ಗೆ ಜೈಲೊಳಗೆ ರಾಜಮಾರ್ಯಾದೆ| ಜೈಲಿನಲ್ಲಿ ವಿಡಿಯೋ ಕಾಲ್ ಗೂ ಅನುಮತಿ ಇದ್ಯಾ? Read More »

ಸಿಗರೇಟು ಸೇದುತ್ತಾ, ಕಾಫಿ ಕುಡಿಯುತ್ತಿರುವ ದರ್ಶನ್.. ಜೈಲಿನಲ್ಲಿ ದಾಸನಿಗೆ ರಾಜಾತ್ಯಿಥ್ಯ…?

ಸಮಗ್ರ ನ್ಯೂಸ್: ರೇಣುಕಾ ಸ್ವಾಮಿ ಕೊಲೆ ಆರೋಪದಲ್ಲಿ ನಟ ದರ್ಶನ್ ಜೈಲು ಸೇರಿದ್ದು, ಆದರೆ ದರ್ಶನ್ ಗೆ ಜೈಲಿನಲ್ಲಿ ರಾಜಾತಿಥ್ಯ ಸಿಗುತ್ತಿದೆಯಾ ಎಂಬ ಅನುಮಾನ ಇದೀಗ ಮೂಡಿದೆ. ಹೌದು ದರ್ಶನ್ ಅವರ ಒಂದು ಫೋಟೋ ವೈರಲ್ ಆಗಿದೆ. ಅದರಲ್ಲಿ ಅವರು ಸಿಗರೇಟು ಸೇದುತ್ತಾ, ಕಾಫಿ ಕುಡಿಯುತ್ತಿರುವ ದೃಶ್ಯ ಸೆರೆಯಾಗಿದೆ. ವೈರಲ್ ಆಗಿರುವ ಫೋಟೋದಿಂದ ಅನೇಕ ಅನುಮಾನಗಳು ಮೂಡಿವೆ. ದರ್ಶನ್ ಅವರು ಸ್ಪೆಷಲ್ ಬ್ಯಾಂಕ್ನಲ್ಲಿ ಇದ್ದು, ಇದೀಗ ಅಲ್ಲಿಂದ ಹೊರಬಂದು, ಮೂವರ ಜೊತೆ ಕುಳಿತು ಹರಟೆ ಹೊಡೆಯುತ್ತಿದ್ದಾರೆ. ಕಾಫಿ

ಸಿಗರೇಟು ಸೇದುತ್ತಾ, ಕಾಫಿ ಕುಡಿಯುತ್ತಿರುವ ದರ್ಶನ್.. ಜೈಲಿನಲ್ಲಿ ದಾಸನಿಗೆ ರಾಜಾತ್ಯಿಥ್ಯ…? Read More »

ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ ಪ್ರಕರಣ| ಶಾಸಕ ಹರೀಶ್ ಪೂಂಜಾಗೆ ಮತ್ತೆ ರಿಲೀಫ್

ಸಮಗ್ರ ನ್ಯೂಸ್: ಪರವಾನಗಿ ಪಡೆಯದೆ ಅಕ್ರಮವಾಗಿ ಗಣಿಗಾರಿಕೆ ನಡೆಸಿದ ಹಾಗೂ ಸ್ಫೋಟಕ ವಸ್ತುಗಳನ್ನು ದಾಸ್ತಾನು ಮಾಡಿದ್ದ ವ್ಯಕ್ತಿಯೋರ್ವನ ಬಂಧನ ಖಂಡಿಸಿ ಪೊಲೀಸ್‌ ಠಾಣೆ ಮುಂದೆ ಪ್ರತಿಭಟಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ ಬೆಳ್ತಂಗಡಿ ಶಾಸಕ ಹರೀಶ್‌ ಪೂಂಜ ವಿರುದ್ಧ ದಾಖಲಿಸಲಾದ ಪ್ರಕರಣ ಸಂಬಂಧ ನೀಡಿದ ಮಧ್ಯಂತರ ತಡೆಯನ್ನು ಹೈಕೋರ್ಟ್‌ ಪುನಃ ವಿಸ್ತರಿಸಿದೆ. ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿ ಶಾಸಕ ಹರೀಶ್‌ ಪೂಂಜ ಸಲ್ಲಿಸಿದ್ದ ಅರ್ಜಿಯ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ

ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಆರೋಪ ಪ್ರಕರಣ| ಶಾಸಕ ಹರೀಶ್ ಪೂಂಜಾಗೆ ಮತ್ತೆ ರಿಲೀಫ್ Read More »

ಡಾ.ಬ್ರೋ ತಿಂಗಳ ಆದಾಯ ಎಷ್ಟು? ಗಗನ್ ನೀಡಿದ ಉತ್ತರ ಇಲ್ಲಿದೆ…

ಸಮಗ್ರ ನ್ಯೂಸ್: ಡಾ. ಬ್ರೋ ಅಲಿಯಾಸ್ ಗಗನ್ ಶ್ರೀನಿವಾಸ್ ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವವರೆಗೂ ಪರಿಚಿತ. ಡಾಕ್ಟರ್ ಬ್ರೋ ಹಳ್ಳಿಯ ಗಲ್ಲಿ-ಗಲ್ಲಿಯಿಂದ ಹಿಡಿದು ಬೇರೆ ಬೇರೆ ದೇಶಗಳೆಲ್ಲಾ ಸುತ್ತಿ ಬಂದಿದ್ದಾರೆ. ಪಾಕಿಸ್ತಾನ, ಆಫ್ಘಾನಿಸ್ತಾನ, ಚೀನಾ, ತಾಂಜಾನಿಯಾ, ನೇಪಾಳ, ಉಗಾಂಡ, ಥೈಲ್ಯಾಂಡ್, ರಷ್ಯಾ, ದುಬೈನಂತಾ ದೇಶಗಳಲ್ಲಿ ಸುತ್ತಾಡಿ ಅಲ್ಲಿನ ಜನಜೀವನ, ಸಂಸ್ಕೃತಿ ಪರಿಚಯ ಮಾಡಿದ್ದಾರೆ. ಡಾಕ್ಟರ್ ಬ್ರೋ ಯೂಟ್ಯೂಬ್ ಚಾನೆಲ್ ಶುರುವಾಗಿದ್ದು ಬರೀ 6 ವರ್ಷದ ಹಿಂದೆ.. 2018ರಲ್ಲಿ ಗಗನ್ ಶ್ರೀನಿವಾಸ್ ಡಾಕ್ಟರ್ ಬ್ರೋ ಅಂತ ಯೂಟ್ಯೂಬ್ ಚಾನೆಲ್ ಶುರುಮಾಡಿದ್ರು.

ಡಾ.ಬ್ರೋ ತಿಂಗಳ ಆದಾಯ ಎಷ್ಟು? ಗಗನ್ ನೀಡಿದ ಉತ್ತರ ಇಲ್ಲಿದೆ… Read More »

ದ್ವಾದಶ ರಾಶಿಗಳ ವಾರಭವಿಷ್ಯ| ನಿಮ್ಮ ರಾಶಿಗಳ ಗೋಚಾರಫಲ

ಸಮಗ್ರ ನ್ಯೂಸ್: ಇದು ಆಗಸ್ಟ್‌ ತಿಂಗಳ ಕೊನೆಯ ವಾರ. 25 ರಿಂದ 31 ರವರೆಗೆ ಇರಲಿದೆ. ಸೂರ್ಯನು ಸಿಂಹದಲ್ಲಿ ಇರುವನು. ಕುಜನೂ ನೀಚಗಾಮಿಯಾಗಿ ಶತ್ರುಸ್ಥಾನಕ್ಕೆ ಬಂದಿದ್ದಾನೆ. ಶುಕ್ರನು ನೀಚನಾಗಿ ತನ್ನ ಎಲ್ಲ ಶುಭಪ್ರದವಾದ ಕೊಡುಗೆಯನ್ನು ಕೊಡಲು ಅಸಮರ್ಥನಾಗಿದ್ದಾನೆ. ಬುಧನು ಸ್ವಕ್ಷೇತ್ರಕ್ಕೂ ಉಚ್ಚ ಕ್ಷೇತ್ರಕ್ಕೂ ಪ್ರವೇಶಿಸುವ ಹುನ್ನಾರದಲ್ಲಿದ್ದಾನೆ.‌ ಎರಡು ಗ್ರಹಗಳು ಶುಭವನ್ನು ಉಳಿದವು ಅಶುಭವನ್ನೂ ನೀಡಲಿವೆ. ಇಷ್ಟದೇವರಲ್ಲಿ ಎಲ್ಲರೂ ಶುಭಫಲವನ್ನೇ ಕೊಡುವಂತೆ ಆಗಲಿ‌ ಎಂದು ಪ್ರಾರ್ಥಿಸಿ ಮುನ್ನಡೆಯಿರಿ. ಮೇಷ ರಾಶಿ :ಈ ವಾರದಲ್ಲಿ ನಿಮಗೆ ಶುಭಪ್ರದವಾದ ಸುದ್ದಿಗಳು ಹೆಚ್ಚು

ದ್ವಾದಶ ರಾಶಿಗಳ ವಾರಭವಿಷ್ಯ| ನಿಮ್ಮ ರಾಶಿಗಳ ಗೋಚಾರಫಲ Read More »

ಮಡಿಕೇರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕಾರು‌ ನಡುವೆ ಅಪಘಾತ

ಸಮಗ್ರ ನ್ಯೂಸ್: ಮಡಿಕೇರಿ ಸಮೀಪ ರಾಷ್ಟ್ರೀಯ ಹೆದ್ದಾರಿ 275ರ ಬೋಯಿಕೇರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕಾರು‌ ನಡುವೆ ಅಪಘಾತವಾಗಿದ್ದು ಕಾರಿನಲ್ಲಿ ಗಾಯಗೊಂಡ ತಾಯಿ ಮಗುವನ್ನು ಮಡಿಕೇರಿ ಜಿಲ್ಲಾ ಆಸ್ಪತ್ರೆಗೆ ರವಾನಿಸಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್‌ ಮೈಸೂರಿನಿಂದ ಮಡಿಕೇರಿಗೆ ಬರುತ್ತಿತ್ತು. ಇತ್ತ ಕಾರಿನಲ್ಲಿ ಒಟ್ಟು ಆರು ಮಂದಿ ಕೇರಳದಿಂದ ಊಟಿಗೆ ತೆರಳುತ್ತಿದ್ದರು. ಮಳೆಯಿಂದಾಗಿ ಚಾಲಕರ ನಿಯಂತ್ರಣ ತಪ್ಪಿದ್ದು, ಕಾರು ಹಾಗೂ ಬಸ್‌ ನಡುವೆ ಅಪಘಾತ ಸಂಭವಿಸಿದೆ ಎನ್ನಲಾಗಿದೆ. ಬಸ್‌ಗೆ ಕಾರು ಗುದ್ದಿದ ರಭಸಕ್ಕೆ ಮುಂಭಾಗ ಸಂಪೂರ್ಣ ಜಖಂಗೊಂಡಿತ್ತು. ಇನ್ನೂ ಈ

ಮಡಿಕೇರಿಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಹಾಗೂ ಕಾರು‌ ನಡುವೆ ಅಪಘಾತ Read More »

ಸಮಗ್ರ ಸಮಾಚಾರ ಲಕ್ಕಿ ಕೃಷ್ಣ ಫೋಟೋ ಸ್ಪರ್ಧೆ-2024 | ಆ.31 ಫೋಟೋ ಕಳುಹಿಸಲು ಕೊನೆಯ ದಿನ

ಸಮಗ್ರ ನ್ಯೂಸ್: ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಸಮಗ್ರ ಸಮಾಚಾರ ಅರ್ಪಿಸುವ ಲಕ್ಕಿ ಕೃಷ್ಣ ಫೋಟೋ ಸ್ಪರ್ಧೆಗೆ ಫೋಟೋ ಕಳುಹಿಸಲು ಆ. 31 ಕೊನೆಯ ದಿನವಾಗಿರುತ್ತದೆ. ಸ್ಪರ್ಧಿಸಲು ಇನ್ನಷ್ಟೇ ದಿನಗಳು ಬಾಕಿ ಇದ್ದು, ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ. ಮೂರು ವರ್ಷದ ಒಳಗಿನ ಮಾತ್ರ ಅವಕಾಶವಿದ್ದು, 50/- ರೂಪಾಯಿ ಪ್ರವೇಶ ಶುಲ್ಕವಿರುತ್ತದೆ. ಮಗುವಿನ ಫೋಟೋ, ವಿಳಾಸ ಮತ್ತು ಜನನ ಪ್ರಮಾಣ ಪತ್ರವನ್ನು 9108131193ಗೆ ವ್ಯಾಟ್ಸ್ಯಾಪ್ ಮಾಡಿ. ನೀವು ಕಳುಹಿಸಿದ ಮುದ್ದು ಕೃಷ್ಣನ ಫೋಟೋವನ್ನು samagrasamachara.com ಫೇಸ್ ಬುಕ್ ಪೇಜ್ ನಲ್ಲಿ ಪ್ರಕಟಿಸಲಾಗುತ್ತದೆ.

ಸಮಗ್ರ ಸಮಾಚಾರ ಲಕ್ಕಿ ಕೃಷ್ಣ ಫೋಟೋ ಸ್ಪರ್ಧೆ-2024 | ಆ.31 ಫೋಟೋ ಕಳುಹಿಸಲು ಕೊನೆಯ ದಿನ Read More »

ಉಡುಪಿ: ಬಸ್ ನಲ್ಲಿ ಪ್ರಯಾಣಿಸುತ್ತಿರುವ ವೇಳೆ ಯುವತಿ ಅಸ್ವಸ್ಥ| ಬಸ್ ಅನ್ನು ಆಸ್ಪತ್ರೆ ಕಡೆ ತಿರುಗಿಸಿ ಪ್ರಾಣ ಉಳಿಸಿದ ಸಿಬ್ಬಂದಿ

ಸಮಗ್ರ ನ್ಯೂಸ್: ವಿದ್ಯಾರ್ಥಿನಿಯೋರ್ವಳು ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ದಿಢೀರ್ ಅಸ್ವಸ್ಥಗೊಂಡ ಪರಿಣಾಮ ಖಾಸಗಿ ಬಸ್ (AKMS) ಚಾಲಕ ಸಮಯ ಪ್ರಜ್ಞೆ ಮೆರೆದು ಬಸ್ಸನ್ನೇ ಆಸ್ಪತ್ರೆಗೆ ಕೊಂಡೊಯ್ದು ಜೀವ ಉಳಿಸಿದ ಮಾನವೀಯ ಘಟನೆ ಕೃಷ್ಣ ನಗರಿ ಉಡುಪಿಯಲ್ಲಿ ಗುರುವಾರ ನಡೆದಿದೆ. ಬೆಳಗ್ಗೆ ಮಂಗಳೂರಿನಿಂದ ಮಣಿಪಾಲಕ್ಕೆ ಹೊರಟಿದ್ದ AKMS ಖಾಸಾಗಿ ಬಸ್ಸಿಗೆ ಮೂಲ್ಕಿಯಲ್ಲಿ ವಿದ್ಯಾರ್ಥಿನಿ ಯೊಬ್ಬಳು ಹತ್ತಿದ್ದಾಳೆ. ಆದರೆ ಕಟಪಾಡಿ ದಾಟಿ ಉದ್ಯಾವರ ಸಮೀಪಿಸುತ್ತಿದ್ದಂತೆ ಬಸ್ಸಿನಲ್ಲಿದ್ದ ಈ ವಿದ್ಯಾರ್ಥಿನಿ ಏಕಾಏಕಿ ಅಸ್ವಸ್ಥಗೊಂಡಿದ್ದಳು. ಇದನ್ನು ಗಮನಿಸಿದ ಬಸ್ಸಿನ ಚಾಲಕ ನಸೀಫ್ ಹಾಗೂ ನಿರ್ವಾಹಕ

ಉಡುಪಿ: ಬಸ್ ನಲ್ಲಿ ಪ್ರಯಾಣಿಸುತ್ತಿರುವ ವೇಳೆ ಯುವತಿ ಅಸ್ವಸ್ಥ| ಬಸ್ ಅನ್ನು ಆಸ್ಪತ್ರೆ ಕಡೆ ತಿರುಗಿಸಿ ಪ್ರಾಣ ಉಳಿಸಿದ ಸಿಬ್ಬಂದಿ Read More »

ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ| ಪೊಲೀಸರ ಚಾರ್ಜ್ ಶೀಟ್ ನಲ್ಲಿ ಎಚ್.ಡಿ ರೇವಣ್ಣ ಹಾಗೂ ಪ್ರಜ್ವಲ್ ಕಾಮಪುರಾಣ ಬಯಲು

ಸಮಗ್ರ ನ್ಯೂಸ್: ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಎಚ್ ಡಿ ರೇವಣ್ಣ ಮತ್ತು ಮಗ ಪ್ರಜ್ವಲ್ ರೇವಣ್ಣ ರಾಸಲೀಲೆಗಳು ಈಗ ಪೊಲೀಸರು ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆ. ಪ್ರಜ್ವಲ್ ಬಸವನಗುಡಿಯ ಮನೆಯಲ್ಲಿ ದೂರುದಾರ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿರುವುದು ನಿಜ ಎಂದು ಚಾರ್ಜ್ ಶೀಟ್ ನಲ್ಲಿ ಹೇಳಲಾಗಿದೆ. ಇನ್ನು ಎಚ್ ಡಿ ರೇವಣ್ಣ ಹಣ್ಣು ಕೊಡುವ ನೆಪದಲ್ಲಿ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದರು ಎಂದು ಚಾರ್ಜ್ ಶೀಟ್ ನಲ್ಲಿ ಉಲ್ಲೇಖವಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ

ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ| ಪೊಲೀಸರ ಚಾರ್ಜ್ ಶೀಟ್ ನಲ್ಲಿ ಎಚ್.ಡಿ ರೇವಣ್ಣ ಹಾಗೂ ಪ್ರಜ್ವಲ್ ಕಾಮಪುರಾಣ ಬಯಲು Read More »