ರಾಜ್ಯ

ರೈತರ ಹೊಲಗಳ ಬಳಿಕ ಇದೀಗ ಹಿಂದೂ ‘ಮಠ’ಗಳ ಭೂಮಿ ಕೂಡ ‘ವಕ್ಫ್’ ಆಸ್ತಿ!

ಸಮಗ್ರ ನ್ಯೂಸ್: ಜಿಲ್ಲೆಯ ಸಾವಿರಾರು ಎಕರೆ ಭೂಮಿ ವಕ್ಫ್ ಭೂಮಿಗೆ ಸೇರಿದ್ದು ಎಂದು ಸರ್ಕಾರದಿಂದ ರೈತರಿಗೆ ನೋಟಿಸ್‌ ನೀಡಿದ ವಿಚಾರವಾಗಿ, ನಿನ್ನೆ ಸಚಿವರು ಜಂಟಿ ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದರು.ಇದೀಗ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ವಿರಕ್ತ ಮಠದ ಆಸ್ತಿ ಕೂಡ ವಕ್ಸ್ ಗೆ ಆಸ್ತಿಗೆ ಸೇರಿದೆ ಎಂದು ಹೇಳಲಾಗುತ್ತಿದೆ. ಸರ್ವೆ ನಂ 1020 ರ ಅಸ್ತಿಯಲ್ಲಿ ಕಬರಸ್ಥಾನ ವಕ್ಸ್ ಬೋರ್ಡ್ ಎಂದು ನೋಂದಣಿಯಾಗಿದೆ.ಸಿದ್ದಲಿಂಗ ಸ್ವಾಮಿಜಿಗಳು ಈ ಮಠದ ಪೀಠಾಧಿಪತಿಗಳಾಗಿದ್ದಾಗ ಪಹಣಿಯ ಕಾಲಂ ನಂ 11 ಖಾಲಿ […]

ರೈತರ ಹೊಲಗಳ ಬಳಿಕ ಇದೀಗ ಹಿಂದೂ ‘ಮಠ’ಗಳ ಭೂಮಿ ಕೂಡ ‘ವಕ್ಫ್’ ಆಸ್ತಿ! Read More »

ಕಾರ್ಕಳ: ಅರ್ಚಕರಿಗೆ ದೇವಳಕ್ಕೆ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶ ವಜಾಗೊಳಿಸಿದ ಹೈಕೋರ್ಟ್

ಸಮಗ್ರ ನ್ಯೂಸ್: ಉಡುಪಿ ಜಿಲ್ಲೆ ಕಾರ್ಕಳ ಶ್ರೀ ಮಾರಿಯಮ್ಮ ದೇವಾಲಯಕ್ಕೆ ಅರ್ಚಕರಿಗೆ ಪ್ರವೇಶ‌ ನಿರ್ಬಂಧಿಸಿ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶವನ್ನು ಹೈಕೋರ್ಟ್ ವಜಾಗೊಳಿಸಿದೆ. ದೇವಳದ ಪ್ರಧಾನ ಅರ್ಚಕರಾದ ರಘುರಾಮ್ ಆಚಾರ್ ಅವರ ಮಗ ಲಕ್ಷ್ಮೀಶ ಆಚಾರ್ ರವರು ದೇವಾಲಯದಲ್ಲಿ ಪೂಜಾ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದರು. ಇವರು ದೇವಾಲಯಕ್ಕೆ ಬರುವ ಹೆಣ್ಣು ಮಕ್ಕಳೊಂದಿಗೆ ಅಸಭ್ಯವಾಗಿ ವರ್ತಿಸಿ, ಕಿರುಕುಳ ನೀಡುತ್ತಿದ್ದಾರೆ ಎಂದು ಪಾಂಡುರಂಗ ರಾವ್ ಎಂಬುವವರು ದೇವಳದ ಆಡಳಿತ ಮೊಕ್ತೇಸರರಿಗೆ, ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತರಿಗೆ, ಹಾಗೂ ಜಿಲ್ಲಾಧಿಕಾರಿಗಳಿಗೆ ಇನ್ನೂ ಮುಂದೆ

ಕಾರ್ಕಳ: ಅರ್ಚಕರಿಗೆ ದೇವಳಕ್ಕೆ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ಹೊರಡಿಸಿದ್ದ ಆದೇಶ ವಜಾಗೊಳಿಸಿದ ಹೈಕೋರ್ಟ್ Read More »

ಹಾಸನಾಂಬೆ ಸನ್ನಿಧಿಯಲ್ಲಿ ನಡೆಯಿತು ಪವಾಡ| ಸುರಿವ ಮಳೆ ನಡುವೆಯೂ ಆರದ ನಂದಾದೀಪ

ಸಮಗ್ರ ನ್ಯೂಸ್: ವರ್ಷಕ್ಕೊಮ್ಮೆ ದರ್ಶನ ನೀಡುವ ಹಾಸನಾಂಬ ದೇವಾಲಯದಲ್ಲಿ ಪವಾಡವೇ ನಡೆದಿದೆ. ಸುರಿಯುವ ಮಳೆಯಲ್ಲಿಯೂ ದೀಪ ಪ್ರಜ್ವಲಿಸಿದೆ. ಮಳೆ ಸುರಿಯುತ್ತಿದ್ದರೂ ದೇವಾಲಯದಲ್ಲಿ ದೀಪ ಉರಿಯುತ್ತಿದೆ. ಹಾಸನಾಂಬೆ ದೇವಾಲಯದ ಮುಂದೆ ಹಚ್ಚಿಟ್ಟಿರುವ ದೀಪ ಜೋರಾಗಿ ಮಳೆ ಬರುತ್ತಿದ್ದರೂ ಆರದೆ ಪ್ರಜ್ವಲಿಸುತ್ತಿದೆ. ಅ. 24ರಂದು ಹಾಸನಾಂಬ ದೇವಾಲಯ ಬಾಗಿಲು ತೆರೆಯಲಾಗಿದ್ದು, ಅ. 25ರಿಂದ ಸಾರ್ವಜನಿಕರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಈ ಬಾರಿ 11 ದಿನಗಳ ಕಾಲ ದೇವಾಲಯದ ಬಾಗಿಲು ತೆರೆದರೂ ಮೊದಲ ದಿನ ಮತ್ತು ಅಂತಿಮ ದಿನವಾದ ನವೆಂಬರ್ 3ರಂದು

ಹಾಸನಾಂಬೆ ಸನ್ನಿಧಿಯಲ್ಲಿ ನಡೆಯಿತು ಪವಾಡ| ಸುರಿವ ಮಳೆ ನಡುವೆಯೂ ಆರದ ನಂದಾದೀಪ Read More »

ಬೆಂಗಳೂರಿನಲ್ಲಿ ಖ್ಯಾತ ಮಲಯಾಳಂ ನಿರ್ದೇಶಕ ರಂಜಿತ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ

ಸಮಗ್ರ ನ್ಯೂಸ್: ಮಲಯಾಳಂ ನಿರ್ದೇಶಕ ರಂಜಿತ್‌ ಬಾಲಕೃಷ್ಣನ್ ವಿರುದ್ಧ 31 ವರ್ಷದ ವ್ಯಕ್ತಿಯೊಬ್ಬ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬೆಂಗಳೂರು ಈಶಾನ್ಯ ವಿಭಾಗದ ಬಿಐಎಎಲ್ ಪೊಲೀಸ್ ಠಾಣೆಯಲ್ಲಿ ಅ.26 ರಂದು ಎಫ್‌ಐಆ‌ರ್ ದಾಖಲಿಸಿದ್ದಾರೆ. ಕೋಯಿಕ್ಕೋಡ್ ಮೂಲದ ಕಲಾವಿದ ಎಂದು ಗುರುತಿಸಲ್ಪಟ್ಟಿರುವ ದೂರುದಾರ, 2012 ರಲ್ಲಿ ಬಾವುಟ್ಟಿಯುಡೆ ನಮಥಿಲ್ ಚಿತ್ರದ ಚಿತ್ರೀಕರಣದ ಸಮಯದಲ್ಲಿ ಜನಪ್ರಿಯ ಮಲಯಾಳಂ ನಟ ಮಮ್ಮುಟ್ಟಿ ಅವರನ್ನು ಭೇಟಿಯಾಗಲು ಕೇರಳದ ಈಸ್ಟಸ್ಟ್ ಹಿಲ್ಲೆ ಹೋದಾಗ ರಂಜಿತ್ ಅವರನ್ನು ಭೇಟಿಯಾದರು ಎಂದು ಆರೋಪಿಸಿದ್ದಾರೆ. ರಂಜಿತ್ ತನ್ನ

ಬೆಂಗಳೂರಿನಲ್ಲಿ ಖ್ಯಾತ ಮಲಯಾಳಂ ನಿರ್ದೇಶಕ ರಂಜಿತ್ ವಿರುದ್ಧ ಲೈಂಗಿಕ ಕಿರುಕುಳ ಪ್ರಕರಣ Read More »

ಕಾಸರಗೋಡು: ನೀಲೇಶ್ವರಂ ಜಾತ್ರೆಯಲ್ಲಿ ಪಟಾಕಿ ಸ್ಪೋಟ| 8 ಮಂದಿ ಗಂಭೀರ; ಹಲವರಿಗೆ ಗಾಯ

ಸಮಗ್ರ ನ್ಯೂಸ್: ಕೇರಳದ ಕಾಸರಗೋಡಿನ ನೀಲೇಶ್ವರಂ ಬಳಿ ಸೋಮವಾರ ತಡರಾತ್ರಿ ದೇವಸ್ಥಾನದ ಉತ್ಸವದ ವೇಳೆ ಪಟಾಕಿ ದುರಂತದಲ್ಲಿ ಎಂಟು ಮಂದಿ ಗಂಭೀರವಾಗಿ ಸೇರಿದಂತೆ 150 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ನೀಲೇಶ್ವರಂನ ಅಂಜೂಟ್ಟಂಬಳಂ ವೀರರ್ ಕಾವು ತೆಯ್ಯಂ ಕಟ್ಟೆ ಮಹೋತ್ಸವದ ವೇಳೆ ಪಟಾಕಿ ಸಂಗ್ರಹ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡು 150 ಮಂದಿಗೆ ಗಾಯವಾಗಿದ್ದು, 8 ಮಂದಿ ಗಂಭೀರವಾಗಿದ್ದಾರೆ ಎಂಬುದಾಗಿ ತಿಳಿದುಬಂದಿದೆ. ಮೂವಳಂಕುಳಿ ಚಾಮುಂಡಿ ತೆಯ್ಯಂನ ಕುಳಿಚು ತೊಟ್ಟಂ ಆಚರಣೆಯ ವೇಳೆ ಮಧ್ಯರಾತ್ರಿ 12 ಗಂಟೆ

ಕಾಸರಗೋಡು: ನೀಲೇಶ್ವರಂ ಜಾತ್ರೆಯಲ್ಲಿ ಪಟಾಕಿ ಸ್ಪೋಟ| 8 ಮಂದಿ ಗಂಭೀರ; ಹಲವರಿಗೆ ಗಾಯ Read More »

ಕರ್ನಾಟಕದಲ್ಲಿ ‘ಒಳ ಮೀಸಲಾತಿ ಜಾರಿ’ಗೆ

ಸಮಗ್ರ ನ್ಯೂಸ್: ಕರ್ನಾಟಕದಲ್ಲಿ ಒಳ ಮೀಸಲಾತಿ ಜಾರಿಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಮಹತ್ವದ ರಾಜ್ಯ ಸಚಿವ ಸಂಪುಟ ಸಭೆ ನಡೆಯಿತು.ಈ ಸಭೆಯ ಬಳಿಕ ಸಂಪುಟದ ನಿರ್ಣಯಗಳನ್ನು ಕಾನೂನು ಸಚಿವ ಹೆಚ್.ಕೆ ಪಾಟೀಲ್ ಮಾಧ್ಯಮ ಗೋಷ್ಠಿಯಲ್ಲಿ ಹಂಚಿಕೊಂಡರು. ದಲಿತ ಒಳ ಮೀಸಲಾತಿ ಜಾರಿ ವಿಚಾರವಾಗಿ ಇಂದಿನ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಯಿತು. ಒಳಮೀಸಲಾತಿ ಕಲ್ಪಿಸಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದ ಕಮಿಟಿ ರಚನೆಗೆ ತೀರ್ಮಾನಿಸಲಾಗಿದೆ ಎಂದರು.

ಕರ್ನಾಟಕದಲ್ಲಿ ‘ಒಳ ಮೀಸಲಾತಿ ಜಾರಿ’ಗೆ Read More »

ದೇಶದಲ್ಲಿ ನಡೆಯಲಿದೆ ಜನಗಣತಿ; ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ

ಸಮಗ್ರ ನ್ಯೂಸ್: ಕೇಂದ್ರ ಸರ್ಕಾರ ನಡೆಸುವ ಜನಗಣತಿಗೆ ಸಂಬಂಧಿಸಿದಂತೆ ಇದೀಗ ಪ್ರಮುಖ ಮಾಹಿತಿಯೊಂದು ಬೆಳಕಿಗೆ ಬಂದಿದೆ. ಮುಂದಿನ ವರ್ಷದಿಂದ ದೇಶದಲ್ಲಿ ಜನಗಣತಿ ಆರಂಭವಾಗಬಹುದು ಎಂದು ಮೂಲಗಳು ತಿಳಿಸಿದ್ದು, ಜನಗಣತಿಯು ಮುಂದಿನ ವರ್ಷ 2025 ರಿಂದ 2026 ರವರೆಗೆ ನಡೆಯಲಿದೆ ಎನ್ನಲಾಗಿದೆ. ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ 2021ರಲ್ಲಿ ನಡೆಯಬೇಕಿದ್ದ ಜನಗಣತಿಯನ್ನು ಅನಿವಾರ್ಯವಾಗಿ ಮುಂದೂಡಬೇಕಾಯಿತು. ಇಲ್ಲಿಯವರೆಗೆ ಪ್ರತಿ ಹತ್ತು ವರ್ಷಗಳಿಗೊಮ್ಮೆ ದಶಕದ ಆರಂಭದಲ್ಲಿ ಜನಗಣತಿ ನಡೆಸಲಾಗುತ್ತಿತ್ತು.ಇನ್ನು ಮುಂದೆ 2025ರ ನಂತರ ಮುಂದಿನ ಜನಗಣತಿ 2035, 2045, 2055ರಲ್ಲಿ ಈ ರೀತಿ

ದೇಶದಲ್ಲಿ ನಡೆಯಲಿದೆ ಜನಗಣತಿ; ಕೇಂದ್ರ ಸರ್ಕಾರದಿಂದ ಮಹತ್ವದ ನಿರ್ಧಾರ Read More »

ಮಾವನ ಆಸ್ತಿಯಲ್ಲಿ ಅಳಿಯನೂ ಪಾಲು ಕೇಳಬಹುದು| ಕೇರಳ ಹೈಕೋರ್ಟ್ ಮಹತ್ವದ ತೀರ್ಪು

ಸಮಗ್ರ ನ್ಯೂಸ್: ಮಾವ ಸಂಪಾದಿಸಿದ ಆಸ್ತಿಯನ್ನು ಅಳಿಯನ ಹೆಸರಿಗೆ ಬರೆದಿದ್ದರೆ ಮಾತ್ರ ಅಳಿಯ ಕೂಡ ಮಾವನ ಆಸ್ತಿಗೆ ಹಕ್ಕು ಸಾಧಿಸಬಹುದು ಎಂದು ಕೇರಳ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕೇರಳ ಹೈಕೋರ್ಟಿನ ಪ್ರಕಾರ, ಯಾವುದೇ ಅಳಿಯ ತನ್ನ ಮಾವನ ಆಸ್ತಿಯನ್ನು ಪಡೆದುಕೊಳ್ಳಬಹುದು. ಆದರೆ, ಇದರ ಹಿಂದೆ ವಿಶೇಷ ಕಾರಣವಿರಬೇಕು. ಮಾವ ತಾನು ಸಂಪಾದಿಸಿದ ಆಸ್ತಿಯಲ್ಲಿ ಒಂದಿಷ್ಟು ಅಥವಾ ಎಲ್ಲವನ್ನು ಅಳಿಯನ ಹೆಸರಿಗೆ ಬರೆದಿದ್ದರೆ ಮಾತ್ರ ಅಳಿಯ ಆಸ್ತಿಗೆ ಹಕ್ಕು ಸಾಧಿಸಬಹುದು. ಅಳಿಯನು ಮಾವನ ಆಸ್ತಿಯ ಮೇಲೆ ಹಕ್ಕು

ಮಾವನ ಆಸ್ತಿಯಲ್ಲಿ ಅಳಿಯನೂ ಪಾಲು ಕೇಳಬಹುದು| ಕೇರಳ ಹೈಕೋರ್ಟ್ ಮಹತ್ವದ ತೀರ್ಪು Read More »

ಕರ್ನಾಟಕಕ್ಕೆ ಪ್ರತ್ಯೇಕ ನಾಡ ಧ್ವಜಕ್ಕೆ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಸಮಗ್ರ ನ್ಯೂಸ್: ರಾಜ್ಯಕ್ಕೆ ಪ್ರತ್ಯೇಕ ಧ್ವಜ ಹೊಂದುವ ಕುರಿತು ಪ್ರಾಧಿಕಾರಗಳಿಗೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು (PIL) ಕರ್ನಾಟಕ ಹೈಕೋರ್ಟ್‌ ಇಂದು ವಜಾ ಮಾಡಿದೆ. ಬೆಳಗಾವಿಯ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ್ ಎಂಬುವವರು ಸಲ್ಲಿಸಿದ್ದ ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾ.ಎನ್.ವಿ. ಅಂಜಾರಿಯಾ ಮತ್ತು ನ್ಯಾ.ಕೆ ವಿ ಅರವಿಂದ್‌ ಅವರ ವಿಭಾಗೀಯ ಪೀಠ ಪಿಐಎಲ್ ವಜಾಗೊಳಿಸಿ ಆದೇಶಿಸಿದೆ. ಮಾ.8ರಂದು (2018) ಸಿಎಂ ಸಿದ್ದರಾಮಯ್ಯ ಅವರು ಹಳದಿ, ಬಿಳಿ ಮತ್ತು ಕೆಂಪು ವರ್ಣಗಳ

ಕರ್ನಾಟಕಕ್ಕೆ ಪ್ರತ್ಯೇಕ ನಾಡ ಧ್ವಜಕ್ಕೆ ಅರ್ಜಿ ವಜಾಗೊಳಿಸಿದ ಹೈಕೋರ್ಟ್ Read More »

ಒಡಿಶಾ ಕರಾವಳಿಗೆ ಅಪ್ಪಳಿಸಿದ ಡಾನಾ| ಭಾರೀ ಮಳೆಗೆ ತತ್ತರಿಸಿದ ಪೂರ್ವ ಕರಾವಳಿ

ಸಮಗ್ರ ನ್ಯೂಸ್: ಡಾನಾ ಚಂಡಮಾರುತವು ಒಡಿಶಾ ಕರಾವಳಿಗೆ ಅಪ್ಪಳಿಸಿದ್ದು, ಹಲವು ಪ್ರದೇಶಗಳಲ್ಲಿ ಭಾರಿ ಮಳೆ ಮತ್ತು ಬಿರುಗಾಳಿಗೆ ಕಾರಣವಾಗಿದೆ. ಕೇಂದ್ರಪಾರ ಜಿಲ್ಲೆಯ ಭಿಟಾರ್ ಕನಿಕ ಹಾಗೂ ಭದ್ರಕ್ ಜಿಲ್ಲೆಯ ಧಮ್ರ ನಡುವೆ ಈ ಚಂಡಮಾರುತ ಅಪ್ಪಳಿಸಿದ್ದು, ಗಂಟೆಗೆ ಸುಮಾರು 110 ಕಿಮೀ ವೇಗದಲ್ಲಿ ಬಿರುಗಾಳಿ ಬೀಸುತ್ತಿದೆ. ಒಡಿಶಾದ ಕರಾವಳಿ ಜಿಲ್ಲೆಗಳಾದ ಭದ್ರಕ್, ಕೇಂದ್ರಪಾರ, ಬಾಲಸೋರ್ ಹಾಗೂ ಜಗತ್ ಸಿಂಗ್ ಪುರ್ ಗೆ ಮಧ್ಯರಾತ್ರಿ ಗಂಟೆಗೆ ಸುಮಾರು 110 ಕಿಮೀ ವೇಗದ ಬಿರುಗಾಳಿಯೊಂದಿಗೆ ಡಾನಾ ಚಂಡಮಾರುತ ಅಪ್ಪಳಿಸಿದ್ದು, ಈ

ಒಡಿಶಾ ಕರಾವಳಿಗೆ ಅಪ್ಪಳಿಸಿದ ಡಾನಾ| ಭಾರೀ ಮಳೆಗೆ ತತ್ತರಿಸಿದ ಪೂರ್ವ ಕರಾವಳಿ Read More »