ರಾಷ್ಟ್ರೀಯ

ಶುಭಾಶಯಗಳ ಜೊತೆಗೆ ಉದ್ಯೋಗ ಕೇಳಿದ ದೇಶವಾಸಿಗಳು| ಟ್ವಿಟರ್ ನಲ್ಲಿ ನಿರುದ್ಯೋಗ ಹ್ಯಾಷ್ ಟ್ಯಾಗ್ ಟ್ರೆಂಡ್|

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರ 71ನೇ ಜನ್ಮದಿನಾಚರಣೆಯ ಹಿನ್ನೆಲೆ ಟ್ವಿಟರ್‌ನಲ್ಲಿ ಶುಭ ಕೋರಿದವರಿಗಿಂತ ಉದ್ಯೋಗ ಕೇಳಿದವರ ಸಂಖ್ಯೆ ಭಾರಿ ಹೆಚ್ಚಿದೆ. ರಾಷ್ಟ್ರೀಯ ಬೇರೋಜ್‌ಗಾರ್‌ ದಿವಸ, ನ್ಯಾಷನಲ್‌ ಅನ್‌ಎಂಪ್ಲಾಯ್ಮೆಟ್‌ ಡೇ, ಮೋದಿ ರೋಜ್‌ಗಾರ್‌ ದೋ ಎಂಬ ಹ್ಯಾಷ್‌ಟ್ಯಾಗ್‌ಗಳು ಸದ್ದು ಮಾಡಿವೆ. ಶುಕ್ರವಾರ, 17-09-2021, ಮಧ್ಯಾಹ್ನ 1 ಗಂಟೆ ವರೆಗಿನ ಟ್ವಿಟರ್‌ ಟ್ರೆಂಡಿಂಗ್‌ ಅಂಕಿಅಂಶ ಪ್ರಕಾರ #HappyBdayModiji ಎಂಬ ಹ್ಯಾಷ್‌ಟ್ಯಾಗ್‌ನಲ್ಲಿ ಸುಮಾರು 3.92 ಲಕ್ಷ ಮಂದಿ ಟ್ವೀಟ್‌ ಮಾಡಿದ್ದಾರೆ. #राष्ट्रीयबेरोजगारदिवस ಎಂಬ ಹಿಂದಿ ಹ್ಯಾಷ್‌ಟ್ಯಾಗ್‌ನಲ್ಲಿ ಸುಮಾರು 11.2 ಲಕ್ಷ […]

ಶುಭಾಶಯಗಳ ಜೊತೆಗೆ ಉದ್ಯೋಗ ಕೇಳಿದ ದೇಶವಾಸಿಗಳು| ಟ್ವಿಟರ್ ನಲ್ಲಿ ನಿರುದ್ಯೋಗ ಹ್ಯಾಷ್ ಟ್ಯಾಗ್ ಟ್ರೆಂಡ್| Read More »

‘ಅಪ್ಘಾನಿಸ್ತಾನದ ಪುನರ್ ಸ್ಥಾಪನೆಗೆ ಜಗತ್ತೇ ಒಂದಾಗಬೇಕಿದೆ’ 21ನೇ ಶೃಂಗಸಭೆಯಲ್ಲಿ ‌ಮೋದಿ‌ ಅಭಿಮತ

ನವದೆಹಲಿ: ಇಂದು ವಿಶ್ವದಲ್ಲಿ ದೊಡ್ಡ ಸವಾಲಾಗಿ ಪರಿಣಮಿಸಿರುವುದು ಶಾಂತಿ ಮತ್ತು ಸುರಕ್ಷೆ. ಇದಕ್ಕಾಗಿ ಎಲ್ಲರೂ ಒಗ್ಗಟ್ಟಾಗಿ ಹೋರಾಟ ಮಾಡಬೇಕಿದೆ. ಸದ್ಯ ನಮ್ಮ ಕಣ್ಣಮುಂದೆ ಅಫ್ಘಾನಿಸ್ತಾನದಲ್ಲಿ ಆಗುತ್ತಿರುವ ಬೆಳವಣಿಗೆ ಇದೆ. ಅಲ್ಲಿ ಶಾಂತಿ, ನೆಮ್ಮದಿಯನ್ನು ಪುನರ್‌ಸ್ಥಾಪಿಸಲು ಎಲ್ಲರೂ ಒಗ್ಗಟ್ಟಾಗಿ ಕೆಲಸ ನಿರ್ವಹಿಸಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಶಾಂಘೈ ಸಹಕಾರ ಸಂಘಟನೆಯ (SCO) 21ನೇ ಶೃಂಗಸಭೆ ತಜಕಿಸ್ತಾನದ ರಾಜಧಾನಿ ದುಶಾಂಬೆಯಲ್ಲಿ ನಡೆಯುತ್ತಿದ್ದು, ವಿಡಿಯೋ ಕಾನ್ಫರೆನ್ಸ್‌ ಮೂಲಕ ಭಾಗವಹಿಸಿದ ಪ್ರಧಾನಿ ಮಾತನಾಡಿದರು. ಈ ಬಾರಿ ಎಸ್‌ಇಒ ಸಂಘಟನೆಗೆ ಹೊಸದಾಗಿ

‘ಅಪ್ಘಾನಿಸ್ತಾನದ ಪುನರ್ ಸ್ಥಾಪನೆಗೆ ಜಗತ್ತೇ ಒಂದಾಗಬೇಕಿದೆ’ 21ನೇ ಶೃಂಗಸಭೆಯಲ್ಲಿ ‌ಮೋದಿ‌ ಅಭಿಮತ Read More »

‘ಮೋದಿ ಕೊಟ್ಟಿರೋ 5.5 ಲಕ್ಷ ಹಣವದು, ನಾನು ವಾಪಾಸ್ ಕೊಡಲ್ಲ’- ಹಠ ಹಿಡಿದು ಕುಳಿತುಕೊಂಡ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ಯಾಕೆ ಗೊತ್ತಾ?

ಪಾಟ್ನಾ: ಬಿಹಾರದ ಖಗರಿಯಾ ಜಿಲ್ಲೆಯ ವ್ಯಕ್ತಿಯೊಬ್ಬ ಬ್ಯಾಂಕ್ ದೋಷದಿಂದ ತನ್ನ ಖಾತೆಗೆ ಜಮೆಯಾದ ₹5.5 ಲಕ್ಷ ಹಣವನ್ನು ಹಿಂದಿರುಗಿಸದೆ ‘ಪ್ರಧಾನಿ ನರೇಂದ್ರ ಮೋದಿ ಕಳುಹಿಸಿದ್ದಾರೆ’ ಎಂದು ಪಟ್ಟು ಹಿಡಿದಿದ್ದಾನೆ. ಖಗರಿಯಾದ ಗ್ರಾಮೀಣ ಬ್ಯಾಂಕ್‌ನಿಂದ ಹಣವನ್ನು ಮಾನ್ಸಿ ಪೊಲೀಸ್ ಠಾಣೆ ವ್ಯಾಪ್ತಿಯ ಬಕ್ತಿಯಾರ್‌ಪುರ್ ಗ್ರಾಮದ ರಂಜಿತ್ ದಾಸ್‌ ಎಂಬವರಿಗೆ ತಪ್ಪಾಗಿ ವರ್ಗಾವಣೆ ಮಾಡಲಾಗಿದೆ. ಹಲವು ನೋಟಿಸ್‌ಗಳ ಹೊರತಾಗಿಯೂ ಹಣವನ್ನು ಹಿಂದಿರುಗಿಸದ ದಾಸ್, ಹಣವನ್ನು ಖರ್ಚು ಮಾಡಿದ್ದೇನೆ ಎಂದು ಹೇಳುತ್ತಿದ್ದಾನೆ. ‘ಈ ವರ್ಷದ ಮಾರ್ಚ್‌ನಲ್ಲಿ ನಾನು ಹಣವನ್ನು ಸ್ವೀಕರಿಸಿದಾಗ ನನಗೆ

‘ಮೋದಿ ಕೊಟ್ಟಿರೋ 5.5 ಲಕ್ಷ ಹಣವದು, ನಾನು ವಾಪಾಸ್ ಕೊಡಲ್ಲ’- ಹಠ ಹಿಡಿದು ಕುಳಿತುಕೊಂಡ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ಯಾಕೆ ಗೊತ್ತಾ? Read More »

ಬಸ್-ವ್ಯಾಗನರ್ ಮುಖಾಮುಖಿ ಢಿಕ್ಕಿ| ಹೊತ್ತಿ ಉರಿದ‌ ಕಾರು, ಐವರು‌ ದುರ್ಮರಣ

ಜಾರ್ಖಂಡ್: ಬಸ್​ಗೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಈ ಅವಘಡದಲ್ಲಿ ಐವರು ಸಾವನ್ನಪ್ಪಿದ ದಾರುಣ ಘಟನೆ ಜಾರ್ಖಂಡ್​ನ ರಾಮಗರ್ ಜಿಲ್ಲೆಯಲ್ಲಿ ಸಂಭವಿಸಿದೆ. ರಾಜರಪ್ಪ ಪೊಲೀಸ್​ ಠಾಣೆಯ ವ್ಯಾಪಿಯ ಮರಬಂದ ಎಂಬಲ್ಲಿ ಈ ದುರಂತ ವರದಿಯಾಗಿದೆ. ಅಪಘಾತದಲ್ಲಿ ಬಸ್​​ ಚಾಲಕ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.ರಾಮಘರ್​ – ಗೋಲಾ ಮುಖ್ಯ ರಸ್ತೆಯಲ್ಲಿ ಸಂಚರಿಸುತ್ತಿದ್ದ ಬಸ್​ ಹಾಗೂ ವಾಗನಾರ್​ ಕಾರು ಬೆಳಗ್ಗೆ 8 ಗಂಟೆ ಸುಮಾರಿಗೆ ಮುಖಾಮುಖಿ ಡಿಕ್ಕಿಯಾಗಿವೆ. ಡಿಕ್ಕಿ ಸಂಭವಿಸಿದ ಕೆಲವೇ ಕ್ಷಣಗಳಲ್ಲಿ

ಬಸ್-ವ್ಯಾಗನರ್ ಮುಖಾಮುಖಿ ಢಿಕ್ಕಿ| ಹೊತ್ತಿ ಉರಿದ‌ ಕಾರು, ಐವರು‌ ದುರ್ಮರಣ Read More »

ಪಟಾಕಿ ಸಿಡಿಸುವುದಕ್ಕೆ ನಿಷೇದ ಹೇರುತ್ತೇವೆ, ಮಾರಾಟಗಾರರು ನಷ್ಟ ಮಾಡ್ಕೋಬೇಡಿ – ಕೇಜ್ರಿವಾಲ್

ನವದೆಹಲಿ: ಈ ಬಾರಿ ದೀಪಾವಳಿಗೆ ಪಟಾಕಿ ಮಾರಾಟ ಮತ್ತು ಸಿಡಿಸುವುದನ್ನು ದೆಹಲಿಯಲ್ಲಿ ಸಂಪೂರ್ಣವಾಗಿ ನಿಷೇಧ ಮಾಡಲಾಗುವುದು. ಆದ್ದರಿಂದ ಈ ಬಾರಿ ಯಾರೂ ಸ್ಟಾಕ್ ತಂದು ನಷ್ಟ ಮಾಡಿಕೊಳ್ಳಬೇಡಿ ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ತಿಳಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಕಳೆದ ಮೂರು ವರ್ಷಗಳಿಂದ ರಾಷ್ಟ್ರ ರಾಜಧಾನಿಯಲ್ಲಿ ಮಾಲಿನ್ಯ ಪರಿಸ್ಥಿತಿ ನಿಯಂತ್ರಿಸುವ ದೃಷ್ಟಿಯಿಂದ ದೀಪಾವಳಿ ಸಂದರ್ಭದಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದ್ದು, ಈ ನಿರ್ಧಾರದಿಂದ ಜನರ ಜೀವ ಉಳಿಸಬಹುದು ಎಂದು ಕೇಜ್ರಿವಾಲ್ ಹೇಳಿದ್ದಾರೆ. ಕಳೆದ ವರ್ಷ ವ್ಯಾಪಾರಿಗಳು

ಪಟಾಕಿ ಸಿಡಿಸುವುದಕ್ಕೆ ನಿಷೇದ ಹೇರುತ್ತೇವೆ, ಮಾರಾಟಗಾರರು ನಷ್ಟ ಮಾಡ್ಕೋಬೇಡಿ – ಕೇಜ್ರಿವಾಲ್ Read More »

ಪೆಟ್ರೋಲ್, ಡೀಸೆಲ್ ಜಿಎಸ್‍ಟಿ ವ್ಯಾಪ್ತಿಗೆ? ಜಿಎಸ್ಟಿ ಮಂಡಳಿ ಜೊತೆ ‌ಚರ್ಚೆಗೆ‌ ನಿರ್ಧಾರ

ನವದೆಹಲಿ: ಪೆಟ್ರೋಲ್, ಡೀಸೆಲ್ ಇತರ ಪೆಟ್ರೋಲಿಯಂ ಉತ್ಪನ್ನಗಳನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‍ಟಿ) ವ್ಯಾಪ್ತಿಗೆ ತರುವ ಬಗ್ಗೆ ಜಿಎಸ್‍ಟಿ ಮಂಡಳಿ ಸೆ.17ರಂದು ನಡೆಯಲಿರುವ ಸಭೆಯಲ್ಲಿ ಮಹತ್ವದ ಚರ್ಚೆ ನಡೆಸಲಿದೆ. ಕಳೆದ ಜೂನ್ ತಿಂಗಳಿನಲ್ಲಿ ಕೇರಳ ಹೈಕೋರ್ಟ್ ರಾಜ್ಯಗಳು ಪೆಟ್ರೋಲ್, ಡೀಸೆಲ್ ಮೇಲೆ ಪ್ರತ್ಯೇಕ ದರವನ್ನು ವಿಧಿಸುತ್ತಿರುವ ಹಿನ್ನೆಲೆಯಲ್ಲಿ ಇವುಗಳನ್ನು ಜಿಎಸ್‍ಟಿ ವ್ಯಾಪ್ತಿಗೆ ತರುವ ಬಗ್ಗೆ ತೀರ್ಮಾನ ಕೈಗೊಳ್ಳುವಂತೆ ಜಿಎಸ್‍ಟಿ ಮಂಡಳಿಗೆ ಸೂಚಿಸಿತ್ತು. ಹೈಕೋರ್ಟ್ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಜಿಎಸ್‍ಟಿ ಮಂಡಳಿಯ ಸಭೆಯಲ್ಲಿ ಈ ವಿಚಾರವನ್ನು ಚರ್ಚೆಗೆ

ಪೆಟ್ರೋಲ್, ಡೀಸೆಲ್ ಜಿಎಸ್‍ಟಿ ವ್ಯಾಪ್ತಿಗೆ? ಜಿಎಸ್ಟಿ ಮಂಡಳಿ ಜೊತೆ ‌ಚರ್ಚೆಗೆ‌ ನಿರ್ಧಾರ Read More »

ಸರಣಿ ಸ್ಫೋಟಕ್ಕೆ ಸಂಚು ರೂಪಿಸಿದ 6 ಉಗ್ರರ ಬಂಧನ|ಇಬ್ಬರು ಪಾಕಿಸ್ತಾನದವರು

ನವದೆಹಲಿ: ರಾಜ್ಯದ ವಿವಿಧ ಕಡೆ ಸರಣಿ ಸ್ಪೋಟಕ್ಕೆ ಸಂಚು ರೂಪಿಸಿದ್ದ 6 ಉಗ್ರರನ್ನು ಬಂಧಿಸಲಾಗಿದ್ದು ಇದರಲ್ಲಿ 2 ಮಂದಿ ಪಾಕಿಸ್ತಾನ ಮೂಲದ ಐಎಸ್‍ಐನಿಂದ ತರಬೇತಿ ಪಡೆದ ಉಗ್ರರಾಗಿದ್ದಾರೆ.ಬಂಧಿತ ಉಗ್ರರನ್ನು ಜಾನ್ ಮೊಹಮ್ಮದ್ ಶೇಖ್ ಅಲಿಯಾಸ್ ಸಮೀರ್(47), ಮೂಲ್‍ಚಂದ್(47), ಮೊಹಮ್ಮದ್ ಅಬುಬಕರ್(23) ಹಾಗೂ ಮೊಹಮ್ಮದ್ ಅಮಿರ್ ಜಾವೇದ್(31) ಹಾಗೇ ಪಾಕಿಸ್ತಾನ ಮೂಲದ ಒಸಾಮಾ(22), ಝೀಶನ್ ಖಮರ್(28), ಎಂದು ಗುರುತಿಸಲಾಗಿದೆ. ಇವರುಗಳು ಗಣೇಶ ಚತುರ್ಥಿ, ನವರಾತ್ರಿ ಹಾಗೂ ರಾಮಲೀಲಾ ಹಬ್ಬಗಳ ಸಂದರ್ಭದಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದರು ಎಂದು ತಿಳಿದುಬಂದಿದೆ.

ಸರಣಿ ಸ್ಫೋಟಕ್ಕೆ ಸಂಚು ರೂಪಿಸಿದ 6 ಉಗ್ರರ ಬಂಧನ|ಇಬ್ಬರು ಪಾಕಿಸ್ತಾನದವರು Read More »

ಸಿಎ ಪರೀಕ್ಷೆ‌: ಹೊಸ ಕೋರ್ಸ್ ನಲ್ಲಿ ನಂದಿನಿ ದೇಶಕ್ಕೆ ಟಾಪರ್| ಅಣ್ಣನಿಗೂ 18ನೇ ಸ್ಥಾನ

ಭೋಪಾಲ್: ಇನ್ಸಿಟಿಟ್ಯೂಟ್‌ ಆಫ್‌ ಚಾರ್ಟರ್ಡ್‌ ಅಕೌಂಟ್ಸ್‌ ಆಫ್‌ ಇಂಡಿಯಾದ ಅಖಿಲ ಭಾರತ ಮಟ್ಟದ ಚಾರ್ಟರ್ಡ್‌ ಅಕೌಂಟ್ಸ್‌ (ಸಿಎ) ಪರೀಕ್ಷೆ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಮಂಗಳೂರಿನ ರುಥ್‌ ಕ್ಲೇರ್‌ ಡಿಸಿಲ್ವ ಅವರು ದೇಶಕ್ಕೇ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಬಾರಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಇನ್ನು ಹೊಸ ಕೋರ್ಸ್​​ನಲ್ಲಿ ಮಧ್ಯಪ್ರದೇಶದ ಮೊರಿನಾದ ನಂದಿನಿ ಅಗರ್​ವಾಲ್​ ದೇಶಕ್ಕೇ ಟಾಪರ್ ಆಗಿದ್ದಾರೆ​. 800ಕ್ಕೆ 614 ಅಂಕ ಗಳಿಸಿದ ನಂದಿನಿ ಮೊದಲ ಸ್ಥಾನ ಗಳಿಸಿದ್ದರೆ, ಆಕೆಯ 21 ವರ್ಷದ ಅಣ್ಣ ಸಚಿನ್ ಅಗರ್ವಾಲ್

ಸಿಎ ಪರೀಕ್ಷೆ‌: ಹೊಸ ಕೋರ್ಸ್ ನಲ್ಲಿ ನಂದಿನಿ ದೇಶಕ್ಕೆ ಟಾಪರ್| ಅಣ್ಣನಿಗೂ 18ನೇ ಸ್ಥಾನ Read More »

ದಾಖಲೆ ಸೃಷ್ಟಿಸಿದ ಲಸಿಕೆ ವಿತರಣೆ| ಕೊರೊನಾ ‌ಹೋರಾಟದಲ್ಲಿ ಮೈಲಿಗಲ್ಲು ‌ಸಾಧಿಸಿದ ಭಾರತ

ನವದೆಹಲಿ : ಕೊರೊನಾವೈರಸ್ ಕಾಯಿಲೆಯ ವಿರುದ್ಧ ಭಾರತದ ಕೋವಿಡ್ ವ್ಯಾಕ್ಸಿನೇಷನ್‌ ಸೋಮವಾರ 75 ಕೋಟಿ-ಗಡಿ ದಾಟಿದ್ದು , ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ಆಗ್ನೇಯ ಏಷ್ಯಾ ಪ್ರಾದೇಶಿಕ ನಿರ್ದೇಶಕಿ ಡಾ.ಪೂನಂ ಖೇತ್ರಪಾಲ್ ಸಿಂಗ್ ಅವರು ‘ಅಭೂತಪೂರ್ವ ವೇಗದಲ್ಲಿ’ ಸಾಧನೆ ಮಾಡಿದ ಭಾರತವನ್ನು ಅಭಿನಂದಿಸಿದ್ದಾರೆ. ‘ಮೊದಲ 100 ಮಿಲಿಯನ್ (10 ಕೋಟಿ) ಡೋಸ್ ಗಳನ್ನು ನಿರ್ವಹಿಸಲು 85 ದಿನಗಳನ್ನು ತೆಗೆದುಕೊಂಡರೆ, ಭಾರತ ಕೇವಲ 13 ದಿನಗಳಲ್ಲಿ 650 ಮಿಲಿಯನ್ (65 ಕೋಟಿ) ನಿಂದ 750 ಮಿಲಿಯನ್ (75 ಕೋಟಿ)

ದಾಖಲೆ ಸೃಷ್ಟಿಸಿದ ಲಸಿಕೆ ವಿತರಣೆ| ಕೊರೊನಾ ‌ಹೋರಾಟದಲ್ಲಿ ಮೈಲಿಗಲ್ಲು ‌ಸಾಧಿಸಿದ ಭಾರತ Read More »

ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ ಇನ್ನಿಲ್ಲ

ಬೆಂಗಳೂರು: ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಕೇಂದ್ರದ ಮಾಜಿ ಸಚಿವ ಆಸ್ಕರ್ ಫರ್ನಾಂಡಿಸ್(80) ಅವರು ಇಹಲೋಕ ತ್ಯಜಿಸಿದ್ದಾರೆ. ಯೋಗ ಮಾಡುವ ವೇಳೆ ಆಯತಪ್ಪಿ ಬಿದ್ದು, ತಲೆಗೆ ಪೆಟ್ಟು ಮಾಡಿಕೊಂಡಿದ್ದ ಆಸ್ಕರ್ ಫರ್ನಾಂಡಿಸ್ ಅವರ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ, ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು. ಬಳಿಕ ಮಂಗಳೂರಿನ ಯೆನಪೋಯ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದಿದ್ದಾರೆ. ಕಾಂಗ್ರೆಸ್ ನಾಯಕರಾದ ಎಂ.ಬಿ.ಪಾಟೀಲ್, ಎಚ್.ಕೆ.ಪಾಟೀಲ್, ಮಾಜಿ ಸಚಿವ ಜನಾರ್ದನ ಪೂಜಾರಿ ಅವರು ಆಸ್ಪತ್ರೆಗೆ

ಮಾಜಿ ಕೇಂದ್ರ ಸಚಿವ ಆಸ್ಕರ್ ಫರ್ನಾಂಡೀಸ್ ಇನ್ನಿಲ್ಲ Read More »