ನವದೆಹಲಿ: ಸೂಕ್ತ ದಾಖಲೆ ಒದಗಿಸಿ, ಇಲ್ಲದಿದ್ದರೆ ಕಾನೂನು ಕ್ರಮಕ್ಕೆ ಸಿದ್ಧರಾಗಿ ಎಂದು ಬಿಜೆಪಿ ಪಕ್ಷ ದೆಹಲಿ ಸಚಿವೆ ಆತಿಶಿಗೆ ಸವಾಲು
ಸಮಗ್ರ ನ್ಯೂಸ್ : ಬಿಜೆಪಿ ಪಕ್ಷಕ್ಕೆ ಸೇರುವಂತೆ ಆಪ್ತ ಸಹಾಯಕರೊಬ್ಬರ ಮೂಲಕ ನನ್ನನ್ನು ಸಂಪರ್ಕಿಸಲಾಗಿದೆ ಎಂಬ ದೆಹಲಿ ಸಚಿವೆ ಆತಿಶಿ ಹೇಳಿಕೆಗೆ ಬಿಜೆಪಿ ಪ್ರತಿಕ್ರಿಯೆ ನೀಡಿದ್ದು, ಸೂಕ್ತ ದಾಖಲೆ ಒದಗಿಸಿ, ಇಲ್ಲದಿದ್ದರೆ ಕಾನೂನು ಕ್ರಮಕ್ಕೆ ಸಿದ್ಧರಾಗಿ ಎಂದು ಹೇಳಿದೆ. ಬಿಜೆಪಿ ಮುಖಂಡ ವೀರೇಂದ್ರ ಸಚ್‌ದೇವ ಪ್ರತಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಗೆ ಸೇರಲು ಆತಿಶಿಯನ್ನು ಸಂಪರ್ಕಿಸಲಾಗಿದೆ ಎಂಬ ಹೇಳಿಕೆಗೆ ಇಂದು ಸಂಜೆಯೊಳಗೆ ದಾಖಲೆಗಳನ್ನು ಒದಗಿಸಲು ವಿಫಲರಾದರೆ ಕಾನೂನು ಕ್ರಮಕ್ಕೆ ಸಿದ್ಧರಾಗಿ ಎಂದು ಸವಾಲು ಹಾಕಿದ್ದಾರೆ. ಆಧಾರರಹಿತ ಆರೋಪಗಳು ಮಾಡಿ, ಆದರಿಂದ […]










