ದೇಶ-ವಿದೇಶ

ಎಸ್ಎಸ್ಎಲ್ ಸಿ‌ ಫಲಿತಾಂಶ| 625/625; ಈಕೆ ರಾಜ್ಯಕ್ಕೆ ಟಾಪರ್| ಯಾರಿವಳು ಬಾಲೆ!?

ಸಮಗ್ರ ನ್ಯೂಸ್: ಎಸ್‍ಎಸ್‍ಎಲ್‍ಸಿ ಫಲಿತಾಂಶ ಪ್ರಕಟಗೊಂಡಿದ್ದು, ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮೊರಾರ್ಜಿ ದೇಸಾಯಿ ಶಾಲೆ ವಿದ್ಯಾರ್ಥಿನಿ ಅಂಕಿತಾ ಬಸಪ್ಪ ಕೊಣ್ಣೂರು 625ಕ್ಕೆ 625 ಅಂಕಗಳನ್ನು ಪಡೆದು ಇಡೀ ರಾಜ್ಯಕ್ಕೆ ಮೊದಲ ಸ್ಥಾನ ಪಡೆದಿದ್ದಾರೆ. ಬೆಂಗಳೂರಿನ ಬನಶಂಕರಿಯ ಹೋಲಿ ಚೈಲ್ಡ್ ಇಂಗ್ಲೀಷ್ ಪ್ರೌಢಶಾಲೆಯ ಮೇಧಾ ಶೆಟ್ಟಿ 624 ಅಂಕ ಪಡೆದು ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದ್ದಾರೆ. ಇವರೊಂದಿಗೆ ತುಮಕೂರಿನ ಶಿರಾದ ಶ್ರೀವಾಸವಿ ಇಂಗ್ಲೀಷ್ ಪ್ರೌಢಶಾಲೆಯ ಹರ್ಷಿತಾ ಡಿಎಂ, ಚಿನ್ಮಯ್ (ದಕ್ಷಿಣ ಕನ್ನಡ) ಸಿದ್ದಾಂತ್ (ಚಿಕ್ಕೊಡಿ ), ದರ್ಶನ್ […]

ಎಸ್ಎಸ್ಎಲ್ ಸಿ‌ ಫಲಿತಾಂಶ| 625/625; ಈಕೆ ರಾಜ್ಯಕ್ಕೆ ಟಾಪರ್| ಯಾರಿವಳು ಬಾಲೆ!? Read More »

ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟ| ಉಡುಪಿ ಪ್ರಥಮ, ದ.ಕ ದ್ವಿತೀಯ

ಸಮಗ್ರ ನ್ಯೂಸ್: 2023-24 ನೇ ಸಾಲಿನ ಎಸೆಸೆಲ್ಸಿ ಫಲಿತಾಂಶ ಗುರುವಾರ ಪ್ರಕಟವಾಗಿದೆ. ಕರ್ನಾಟಕದ ಒಟ್ಟು 2,750 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಈ ಸಲದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದರು. ಈ ಬಾರಿ ಉಡುಪಿ ಜಿಲ್ಲೆ ಫಲಿತಾಂಶದಲ್ಲಿ ಪ್ರಥಮ ಸ್ಥಾನವನ್ನು ಶೇಕಡ 94 ರೊಂದಿಗೆ ಪಡೆದುಕೊಂಡಿದೆ. ದ. ಕನ್ನಡ ಜಿಲ್ಲೆಗೆ ದ್ವೀತಿಯ ಸ್ಥಾನವನ್ನು ಪಡೆದುಕೊಂಡಿದೆ. ಅದು ಶೇ 92.12 ಪಡೆದುಕೊಂಡಿದೆ. ಯಾದಗಿರಿ ಜಿಲ್ಲೆಗೆ ಕೊನೆ ಸ್ಥಾನ ಪಡೆದುಕೊಂಡಿದೆ. ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದ್ದಾರೆ. ಓರ್ವ ವಿದ್ಯಾರ್ಥಿನಿ

ಎಸ್.ಎಸ್.ಎಲ್.ಸಿ ಫಲಿತಾಂಶ ಪ್ರಕಟ| ಉಡುಪಿ ಪ್ರಥಮ, ದ.ಕ ದ್ವಿತೀಯ Read More »

ಕರ್ನಾಟಕದಲ್ಲಿ ಪದವಿ ತರಗತಿ ಮೂರು ವರ್ಷಕ್ಕಷ್ಟೇ ಸೀಮಿತ| ಎನ್ಇಪಿ ಶಿಫಾರಸು ಕೋರ್ಸ್ ರದ್ದುಪಡಿಸಿದ‌ ರಾಜ್ಯ ಸರ್ಕಾರ

ಸಮಗ್ರ ನ್ಯೂಸ್: ಸಾರ್ವಜನಿಕ ವಿಶ್ವವಿದ್ಯಾಲಯಗಳು ಮತ್ತು ಸಂಯೋಜಿತ ಕಾಲೇಜುಗಳಲ್ಲಿ ನಾಲ್ಕು ವರ್ಷಗಳ ಪದವಿ ಕಾರ್ಯಕ್ರಮವನ್ನು ಶಿಫಾರಸು ಮಾಡಿದ ಎನ್‌ಇಪಿ – 2020 ಅನ್ನು ಕರ್ನಾಟಕ ಸರ್ಕಾರ ಬುಧವಾರ ರದ್ದುಗೊಳಿಸಿದೆ. 2024-25ರ ಶೈಕ್ಷಣಿಕ ವರ್ಷಕ್ಕೆ ಮೂರು ವರ್ಷಗಳ ಪದವಿ ಕಾರ್ಯಕ್ರಮವನ್ನು ಮತ್ತೆ ಪರಿಚಯಿಸಲಾಗಿದೆ. ಎನ್‌ಇಪಿ ಪ್ರಕಾರ ನಾಲ್ಕು ವರ್ಷಗಳ ಪದವಿ ಕಾರ್ಯಕ್ರಮವನ್ನು ಮುಂದುವರಿಸುವಲ್ಲಿ ಸ್ಪಷ್ಟತೆಯ ಕೊರತೆಯ ಬಗ್ಗೆ ವಿದ್ಯಾರ್ಥಿಗಳು ಮತ್ತು ಕಾಲೇಜುಗಳು ಕಳವಳ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಹೊಸ ಬದಲಾವಣೆ ಮಾಡಲಾಗಿದೆ. ಪ್ರೊಫೆಸರ್ ಸುಖದೇವ್ ಥೋರಟ್ ನೇತೃತ್ವದ ರಾಜ್ಯ ಶಿಕ್ಷಣ

ಕರ್ನಾಟಕದಲ್ಲಿ ಪದವಿ ತರಗತಿ ಮೂರು ವರ್ಷಕ್ಕಷ್ಟೇ ಸೀಮಿತ| ಎನ್ಇಪಿ ಶಿಫಾರಸು ಕೋರ್ಸ್ ರದ್ದುಪಡಿಸಿದ‌ ರಾಜ್ಯ ಸರ್ಕಾರ Read More »

‘ಕೋವಿಶೀಲ್ಡ್ ಲಸಿಕೆ ಪಡೆದವರು ಡ್ಯಾನ್ಸ್ ಮಾಡುವಂತಿಲ್ಲʼ ಎಚ್ಚರಿಕೆ ನೀಡಿದ ಆಮಂತ್ರಣ ಪತ್ರಿಕೆ

ಸಮಗ್ರ ನ್ಯೂಸ್ : ಕೊರೊನಾ ಲಸಿಕೆ ಕೋವಿಶೀಲ್ಡ್ ಅಭಿವೃದ್ಧಿ ಪಡಿಸಿದ್ದ ದೈತ್ಯ ಫಾರ್ಮಾ ಕಂಪನಿ ಅಸ್ಟ್ರಝೆನೆಕಾ, ಕೋರ್ಟ್ ಮುಂದೆ ಸತ್ಯವೊಂದನ್ನು ಒಪ್ಪಿಕೊಂಡಿದೆ. ಅದು ಏನೆಂದರೆ ತಾನು ತಯಾರಿಸಿ ಪ್ರಪಂಚಕ್ಕೆ ನೀಡಿದ್ದ ಕೋವಿಶೀಲ್ಡ್ ವ್ಯಾಕ್ಸಿನ್ನಿಂದ ತುಂಬಾ ಅಪರೂಪದ ಪ್ರಕರಣಗಳಲ್ಲಿ ಮಾರಣಾಂತಿಕ ಅಡ್ಡ ಪರಿಣಾಮ ಉಂಟು ಮಾಡುತ್ತಿದೆ ಎಂದು ಲಂಡನ್ ಕೋರ್ಟ್ಗೆ ಹೇಳಿದೆ. ಟಿಟಿಎಸ್ನಂಥ ಡೇಂಜರಸ್ ಕಾಯಿಲೆಯನ್ನು ಕೊರೊನಾ ವ್ಯಾಕ್ಸಿನ್ ಉಂಟು ಮಾಡುತ್ತಿದೆ ಎಂಬ ಸುದ್ದಿ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆ, ವ್ಯಾಪಾರದಲ್ಲಿ ಭಾರೀ ನಷ್ಟ ಅನುಭವಿಸಿದೆ. ಪರಿಣಾಮ ಆರ್ಥಿಕ ನೆಪವೊಡ್ಡಿ ಫಾರ್ಮಾ

‘ಕೋವಿಶೀಲ್ಡ್ ಲಸಿಕೆ ಪಡೆದವರು ಡ್ಯಾನ್ಸ್ ಮಾಡುವಂತಿಲ್ಲʼ ಎಚ್ಚರಿಕೆ ನೀಡಿದ ಆಮಂತ್ರಣ ಪತ್ರಿಕೆ Read More »

ಇಂದು ವಿಶ್ವ ರೆಡ್ ಕ್ರಾಸ್ ದಿನಾಚರಣೆ

ಸಮಗ್ರ ನ್ಯೂಸ್ : ವಿಶ್ವ ರೆಡ್ ಕ್ರಾಸ್ ದಿನವನ್ನು ವಿಶ್ವದಾದ್ಯಂತ ಮೇ 8ರಂದು ಆಚರಿಸಲಾಗುತ್ತದೆ. ಸ್ವಿಸ್ ಉದ್ಯಮಿ ಮತ್ತು ವಿಶ್ವದ ಅತಿದೊಡ್ಡ ಮಾನವೀಯ ನೆರವು ಸಂಸ್ಥೆಯಾದ ರೆಡ್ ಕ್ರಾಸ್ ನ ಸಂಸ್ಥಾಪಕ ಹೆನ್ರಿ ಡ್ಯುನಾಂಟ್ ಅವರ ಜನ್ಮ ದಿನದ ಅಂಗವಾಗಿ ಆಚರಿಸಲಾಗುತ್ತದೆ. 1901ರಲ್ಲಿ ಮೊದಲ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಪಡೆದ ಅವರು, ರೆಡ್ಕ್ರಾಸ್ನ ಅಂತಾರಾಷ್ಟ್ರೀಯ ಸಮಿತಿಯ ಸ್ಥಾಪಕರಾಗಿದ್ದಾರೆ. ತುರ್ತು ಮತ್ತು ಸಂಘರ್ಷದ ಸಮಯದಲ್ಲಿ ಅಗತ್ಯವಿರುವವರಿಗೆ ಬೆಂಬಲ ನೀಡುವ ಸಲುವಾಗಿ ರೆಡ್ ಕ್ರಾಸ್ ಅನ್ನು ಸ್ಥಾಪಿಸಲಾಗಿದೆ. ಇಟಲಿಯಲ್ಲಿನ ಸೋಲ್ಫೆರಿನೊ

ಇಂದು ವಿಶ್ವ ರೆಡ್ ಕ್ರಾಸ್ ದಿನಾಚರಣೆ Read More »

ಅರವಿಂದ ಕೇಜ್ರಿವಾಲ್ ಒಬ್ಬ ಸಿಎಂ, ಅವರ ಪ್ರಚಾರ ನಡೆಸಬೇಕಿದೆ| ಜಾರಿ ನಿರ್ದೇಶನಾಲಯಕ್ಕೆ ಸುಪ್ರೀಂ ಪ್ರಶ್ನೆ

ಸಮಗ್ರ ನ್ಯೂಸ್: ಅಬಕಾರಿ ನೀತಿ ಪ್ರಕರಣದಲ್ಲಿ ಬಂಧನವನ್ನು ಪ್ರಶ್ನಿಸಿ ದಿಲ್ಲಿ ಸಲ್ಲಿಸಿತು ಅರವಿಂದ್‌ ಕೇಜ್ರಿವಾಲ್‌ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿರುವ ಸುಪ್ರೀಂ ಕೋರ್ಟ್‌ ಇಂದು ಜಾರಿ ನಿರ್ದೇಶನಾಲಯಕ್ಕೆ ಕೆಲ ಮಹತ್ವದ ಪ್ರಶ್ನೆಗಳನ್ನು ಕೇಳಿದೆ. “ತಪ್ಪು ಮಾಡಿದ್ದಾರೆಂಬುದಕ್ಕೆ ಸಾಕ್ಷ್ಯಗಳಿವೇ ಮತ್ತು ನಿರಪಾಧಿ ಎಂದು ತೋರಿಸಿಕೊಡುವ ಅಂಶಗಳಿವೆಯೇ?” ಎಂದು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ. “ಇದು ಆಡಳಿತಾತ್ಮಕ ಕೆಲಸವೇ? ನೀವು ಎರಡರ ನಡುವೆ ಸಮತೋಲನ ಸಾಧಿಸಬೇಕಿದೆ. ಒಂದು ಅಂಶವನ್ನು ಹೊರತುಪಡಿಸುವ ಹಾಗಿಲ್ಲ. ನೀವು ಒಬ್ಬ ವ್ಯಕ್ತಿಯ ಜೀವನದ ಮೇಲಿನ ಹಕ್ಕನ್ನು

ಅರವಿಂದ ಕೇಜ್ರಿವಾಲ್ ಒಬ್ಬ ಸಿಎಂ, ಅವರ ಪ್ರಚಾರ ನಡೆಸಬೇಕಿದೆ| ಜಾರಿ ನಿರ್ದೇಶನಾಲಯಕ್ಕೆ ಸುಪ್ರೀಂ ಪ್ರಶ್ನೆ Read More »

ಮಾಲ್ಡೀವ್ಸ್‌ನಿಂದ ಸೇನಾ ಸಿಬ್ಬಂದಿಗಳನ್ನು ವಾಪಾಸು ಕರೆಸಿದ ಭಾರತ

ಸಮಗ್ರ ನ್ಯೂಸ್: ಮಾಲ್ಡೀವ್ಸ್‌ನಲ್ಲಿದ್ದ 51 ಸೇನಾ ಸಿಬ್ಬಂದಿಗಳನ್ನು ಭಾರತ ವಾಪಸು ಕರೆಯಿಸಿಕೊಂಡಿದೆ. ಮೇ 10ರೊಳಗೆ ವಾಪಸು ಕರೆಯಿಸಿಕೊಳ್ಳಬೇಕು ಎಂದು ಅಧ್ಯಕ್ಷ ಮೊಹಮ್ಮದ್ ಮುಯಿಝು ನಿಗದಿಪಡಿಸಿದ ಗಡುವಿನಂತೆ ಭಾರತ ಸರ್ಕಾರವು ಎರಡು ತಂಡಗಳಲ್ಲಿ ಭಾರತೀಯ ಮಿಲಿಟರಿ ಸಿಬ್ಬಂದಿಯನ್ನು ಹಿಂದಕ್ಕೆ ಕರೆಯಿಸಿಕೊಂಡಿದೆ ಎಂದು ಮಾಲ್ಡೀವ್ಸ್ ಸರ್ಕಾರ ತಿಳಿಸಿತ್ತು. ಆದಾಗ್ಯೂ, ನಿಖರವಾದ ಅಂಕಿ-ಅಂಶವನ್ನ ಈ ಹಿಂದೆ ಬಹಿರಂಗಪಡಿಸಲಾಗಿಲ್ಲ. ಈ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸಿದ ರಾಷ್ಟ್ರಪತಿ ಕಚೇರಿಯ ಮುಖ್ಯ ವಕ್ತಾರೆ ಹೀನಾ ವಲೀದ್, ಈವರೆಗೆ ಒಟ್ಟು 51 ಭಾರತೀಯ ಸೈನಿಕರನ್ನ ಸ್ವದೇಶಕ್ಕೆ

ಮಾಲ್ಡೀವ್ಸ್‌ನಿಂದ ಸೇನಾ ಸಿಬ್ಬಂದಿಗಳನ್ನು ವಾಪಾಸು ಕರೆಸಿದ ಭಾರತ Read More »

ಬಂಗಾಳದ 25 ಸಾವಿರ ಶಿಕ್ಷಕರ ವಜಾ/ ತಡೆಯಾಜ್ಞೆ ನೀಡಿದ ಸುಪ್ರೀಂ ಕೋರ್ಟ್

ಸಮಗ್ರ ನ್ಯೂಸ್: ಪಶ್ಚಿಮ ಬಂಗಾಳದ ಶಾಲೆಗಳಿಗೆ ನೇಮಕಗೊಂಡ 25 ಸಾವಿರ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ಕೆಲಸದಿಂದ ವಜಾಗೊಳಿಸಬೇಕು ಎಂದು ಕಲ್ಕತ್ತಾ ಹೈಕೋರ್ಟ್ ನೀಡಿದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದೆ. ಇದೇ ವೇಳೆ ನೇಮಕಾತಿಯಲ್ಲಿ ಅಕ್ರಮ ನಡೆದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಬಂಗಾಳದಲ್ಲಿ ನೇಮಕಗೊಂಡ ಸರ್ಕಾರಿ ಶಾಲೆ ಹಾಗೂ ಅನುದಾನಿತ ಶಾಲೆಗಳಿಗೆ 25,753 ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಯನ್ನು ವಜಾಗೊಳಿಸಿ ಏಪ್ರಿಲ್ 22ರಂದು ಕಲ್ಕತ್ತಾ ಹೈಕೋರ್ಟ್

ಬಂಗಾಳದ 25 ಸಾವಿರ ಶಿಕ್ಷಕರ ವಜಾ/ ತಡೆಯಾಜ್ಞೆ ನೀಡಿದ ಸುಪ್ರೀಂ ಕೋರ್ಟ್ Read More »

ರಾಮ ಮಂದಿರ ನಿಷ್ಟ್ರಯೋಜಕ/ ವಿವಾದ ಸೃಷ್ಟಿಸಿದ ರಾಮ್ ಗೋಪಾಲ್ ಯಾದವ್

ಸಮಗ್ರ ನ್ಯೂಸ್: ಅಯೋಧ್ಯೆಯಲ್ಲಿರುವ ರಾಮ ಮಂದಿರ ನಿಷ್ಟ್ರಯೋಜಕ ಆಗಿದೆ ಎಂದು ಸಮಾಜವಾದಿ ಪಕ್ಷದ ನಾಯಕ ರಾಮ್ ಗೋಪಾಲ್ ಯಾದವ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಮ್ಮ ದೇಶದಲ್ಲಿ ದೇವಸ್ಥಾನಗಳನ್ನು ಈ ರೀತಿ ನಿರ್ಮಿಸಿಲ್ಲ. ರಾಮ ಮಂದಿರವನ್ನು ವಾಸ್ತು ಪ್ರಕಾರ ನಿರ್ಮಿಸಿಲ್ಲ. ನಾನು ಪ್ರತಿದಿನ ರಾಮನನ್ನು ಆರಾಧಿಸುತ್ತೇನೆ. ಕೆಲವರು ರಾಮನವಮಿಯಂದು ಪೇಟೆಂಟ್ ಮಾಡಿದ್ದಾರೆ. ಆದರೆ ಅಯೋಧ್ಯೆಯಲ್ಲಿರುವ ಆ ದೇವಾಲಯವು ನಿಷ್ಟ್ರಯೋಜಕ ಆಗಿದೆ ಎಂದು ಹೇಳಿದ್ದಾರೆ. ಈ ಹೇಳಿಕೆಗೆ ತೀಕ್ಷ್ಮವಾಗಿ ಪ್ರತಿಕ್ರಿಯಿಸಿರುವ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಮತ ಬ್ಯಾಂಕ್ ರಾಜಕೀಯಕ್ಕಾಗಿ

ರಾಮ ಮಂದಿರ ನಿಷ್ಟ್ರಯೋಜಕ/ ವಿವಾದ ಸೃಷ್ಟಿಸಿದ ರಾಮ್ ಗೋಪಾಲ್ ಯಾದವ್ Read More »

ಹರ್ಯಾಣದಲ್ಲಿ ಬಿಜೆಪಿಗೆ ಮುಖಭಂಗ| ಸೈನಿ ಸರ್ಕಾರಕ್ಕೆ ನೀಡಿದ್ದ ಬೆಂಬಲ‌ ವಾಪಸ್ ಪಡೆದ ಪಕ್ಷೇತರ ಶಾಸಕರು| ತೂಗುಯ್ಯಾಲೆಯಲ್ಲಿ ಹರ್ಯಾಣ ಸರ್ಕಾರ

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆಯ ಕಾವಿನ ನಡುವೆ ಹರಿಯಾಣದಲ್ಲಿ ಆಡಳಿತಾರೂಢ ಬಿಜೆಪಿಗೆ ತೀವ್ರ ಮುಖಭಂಗವಾಗಿದೆ. ರಾಜ್ಯದಲ್ಲಿ ನಯಾಬ್ ಸಿಂಗ್ ಸೈನಿ ನೇತೃತ್ವದ ಬಿಜೆಪಿ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂಪಡೆದಿರುವುದಾಗಿ ಮೂವರು ಪಕ್ಷೇತರ ಶಾಸಕರು ಮಂಗಳವಾರ ಘೋಷಿಸಿದ್ದಾರೆ. ಮೂವರು ಶಾಸಕರಾದ ಸೋಂಬಿರ್ ಸಾಂಗ್ವಾನ್, ರಣಧೀರ್ ಗೊಲ್ಲೆನ್ ಮತ್ತು ಧರಂಪಾಲ್ ಗೊಂಡರ್ ಅವರು ಚುನಾವಣೆಯ ಸಮಯದಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಲು ನಿರ್ಧರಿಸಿದ್ದೇವೆ ಎಂದು ಹೇಳಿದರು. ಇದರಿಂದ ಸೈನಿ ಸರ್ಕಾರವು ಬಹುಮತ ಕಳೆದುಕೊಂಡಿದ್ದು, ಆಡಳಿತಾರೂಢ ಬಿಜೆಪಿಗೆ ಹಿನ್ನಡೆಯಾಗಿದೆ. ಸರ್ಕಾರ ಪತನದ ಸನಿಹದಲ್ಲಿದ್ದು,

ಹರ್ಯಾಣದಲ್ಲಿ ಬಿಜೆಪಿಗೆ ಮುಖಭಂಗ| ಸೈನಿ ಸರ್ಕಾರಕ್ಕೆ ನೀಡಿದ್ದ ಬೆಂಬಲ‌ ವಾಪಸ್ ಪಡೆದ ಪಕ್ಷೇತರ ಶಾಸಕರು| ತೂಗುಯ್ಯಾಲೆಯಲ್ಲಿ ಹರ್ಯಾಣ ಸರ್ಕಾರ Read More »