ದೇಶ-ವಿದೇಶ

ಎಂಎಲ್ಎ ಟಿಕೆಟ್ ಆಮಿಷವೊಡ್ಡಿ ಬಹುಕೋಟಿ ವಂಚನೆ| ಚೈತ್ರಾ ಕುಂದಾಪುರ ಸೇರಿ‌ ನಾಲ್ವರು ಅರೆಸ್ಟ್

ಸಮಗ್ರ ನ್ಯೂಸ್: ಮುಂಬಯಿಯ ಉದ್ಯಮಿಯೊಬ್ಬರಿಗೆ ಎಂಎಲ್‌ಎ ಟಿಕೆಟ್‌ ಕೊಡಿಸುವುದಾಗಿ ನಂಬಿಸಿ ಬಹುಕೋಟಿ ರೂಪಾಯಿ ವಂಚನೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಪ್ರಕರಣದ ಪ್ರಮುಖ ಆರೋಪಿ ಚೈತ್ರಾ ಕುಂದಾಪುರಳನ್ನು ಪೊಲೀಸರು ಬಂಧಿಸಿದ್ದಾರೆ. ಕಳೆದ ಕೆಲ ಸಮಯದಿಂದ ತಲೆಮರೆಸಿಕೊಂಡಿದ್ದ ಚೈತ್ರ ಕುಂದಾಪುರ ಕೊನೆಗೂ ಪೋಲಿಸರ ಕೈಗೆ ಸಿಕ್ಕಿಬಿದ್ದಿದ್ದಾರೆ . ಉಡುಪಿ ಕೃಷ್ಣ ಮಠದ ಪಾರ್ಕಿಂಗ್ ಏರಿಯಾದಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿದ ಬೆಂಗಳೂರು ಸಿಸಿಬಿ ಪೊಲೀಸರು ಸಿನಿಮಿಯ ಶೈಲಿಯಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಉಡುಪಿ ಜಿಲ್ಲೆ ಬೈಂದೂರಿನ ಉದ್ಯಮಿ ಗೋವಿಂದ ಬಾಬು […]

ಎಂಎಲ್ಎ ಟಿಕೆಟ್ ಆಮಿಷವೊಡ್ಡಿ ಬಹುಕೋಟಿ ವಂಚನೆ| ಚೈತ್ರಾ ಕುಂದಾಪುರ ಸೇರಿ‌ ನಾಲ್ವರು ಅರೆಸ್ಟ್ Read More »

ಡೇನಿಯಲ್ ಚಂಡಮಾರುತ ಅಬ್ಬರ| ಲಿಬಿಯಾದಲ್ಲಿ 2000 ಕ್ಕೂ ಹೆಚ್ಚು ಮಂದಿ ಸಾವು; ಹಲವರು ಕಣ್ಮರೆ

ಸಮಗ್ರ ನ್ಯೂಸ್: ಉತ್ತರ ಆಫ್ರಿಕಾ ರಾಷ್ಟ್ರ ಲಿಬಿಯಾದ ಪೂರ್ವ ಭಾಗದಲ್ಲಿ ವಾರಾಂತ್ಯದಲ್ಲಿ ಅಬ್ಬರಿಸಿದ ಡೇನಿಯಲ್‌ ಚಂಡಮಾರುತದಿಂದ ಉಂಟಾದ ಪ್ರವಾಹದಲ್ಲಿ 2 ಸಾವಿರಕ್ಕೂ ಹೆಚ್ಚು ಜನರು ಸಾವಿಗೀಡಾಗಿದ್ದು, ಸಾವಿರಾರು ಮಂದಿ ಕಣ್ಮರೆಯಾಗಿದ್ದಾರೆ ಎಂದು ಪೂರ್ವ ಲಿಬಿಯಾ ಸರ್ಕಾರದ ಪ್ರಧಾನಿ ಒಸಾಮಾ ಹಮದ್‌ ಸೋಮವಾರ ಹೇಳಿದ್ದಾರೆ. ‘ಅಲ್‌ ಮಸರ್‌ ಟೆಲಿವಿಷನ್‌’ಗೆ ನೀಡಿದ ದೂರವಾಣಿ ಸಂದರ್ಶನದಲ್ಲಿ ಒಸಾಮಾ ಹಮದ್‌ ಅವರು, ಮೆಡಿಟರೇನಿಯನ್‌ನಿಂದ ಡೇನಿಯಲ್‌ ಚಂಡಮಾರುತ ದೇಶಕ್ಕೆ ಅಪ್ಪಳಿಸಿದ ನಂತರ ವಿಪತ್ತು ವಲಯವೆಂದು ಘೋಷಿಸಲಾದ ಡರ್ನಾದಲ್ಲಿ ಪ್ರವಾಹವು ನೆರೆಹೊರೆಯ ಪ್ರದೇಶಗಳನ್ನು ಸಂಪೂರ್ಣ ನಾಶಪಡಿಸಿದೆ.

ಡೇನಿಯಲ್ ಚಂಡಮಾರುತ ಅಬ್ಬರ| ಲಿಬಿಯಾದಲ್ಲಿ 2000 ಕ್ಕೂ ಹೆಚ್ಚು ಮಂದಿ ಸಾವು; ಹಲವರು ಕಣ್ಮರೆ Read More »

ಸ್ಮಶಾನ ಸದೃಶವಾದ ಮೊರಾಕ್ಕೋ| ಶತಮಾನದ ಅತಿದೊಡ್ಡ ಭೂಕಂಪಕ್ಕೆ 2800 ಮಂದಿ ಬಲಿ

ಸಮಗ್ರ ನ್ಯೂಸ್: ಶತಮಾನದಲ್ಲೇ ದೇಶದ ಅತಿದೊಡ್ಡ ಭೂಕಂಪದಿಂದ ಸಾವಿನ ಸಂಖ್ಯೆ 2,800 ಕ್ಕೆ ಏರಿಕೆಯಾಗಿದ್ದು, ಹಲವರು ಗಂಭೀರ ಗಾಯಗಳಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶುಕ್ರವಾರ (ಸೆಪ್ಟೆಂಬರ್ 8) ತಡರಾತ್ರಿ ಹೈ ಅಟ್ಲಾಸ್ ಪರ್ವತಗಳಲ್ಲಿ ಸಂಭವಿಸಿದ 6.8 ತೀವ್ರತೆಯ ಭೂಕಂಪದಿಂದ ಬದುಕುಳಿದವರನ್ನು ಹುಡುಕುವ ಮೊರೊಕನ್ ಪ್ರಯತ್ನಗಳಿಗೆ ಸ್ಪೇನ್, ಯುಕೆ ಮತ್ತು ಕತಾರ್ನ ಶೋಧ ತಂಡಗಳು ಸೇರಿಕೊಂಡವು. ಸಾವಿನ ಸಂಖ್ಯೆ 2,862 ಕ್ಕೆ ಏರಿದೆ ಮತ್ತು 2,562 ಜನರು ಗಾಯಗೊಂಡಿದ್ದಾರೆ ಎಂದು ಸೋಮವಾರ ತಡರಾತ್ರಿ ವರದಿಯಾಗಿದೆ. ಭೂಕಂಪನ ವಲಯದ ಹೆಚ್ಚಿನ ಭಾಗವು

ಸ್ಮಶಾನ ಸದೃಶವಾದ ಮೊರಾಕ್ಕೋ| ಶತಮಾನದ ಅತಿದೊಡ್ಡ ಭೂಕಂಪಕ್ಕೆ 2800 ಮಂದಿ ಬಲಿ Read More »

ಬಿಸ್ಕೆಟ್ ಪ್ಯಾಕ್‌ನಲ್ಲಿ ಒಂದು ಬಿಸ್ಕೆಟ್ ಕಡಿಮೆ| ಗ್ರಾಹಕನಿಗೆ 1 ಲಕ್ಷ ರೂ. ಪರಿಹಾರ

ಸಮಗ್ರ ನ್ಯೂಸ್: ಬಿಸ್ಕೆಟ್ ಪ್ಯಾಕ್‌ನಲ್ಲಿ ಜಾಹೀರಾತಿನಲ್ಲಿ ತೋರಿಸಿದ್ದಕ್ಕಿಂತ ಒಂದೇ ಒಂದು ಬಿಸ್ಕೆಟ್ ಕಡಿಮೆ ಇದ್ದದ್ದಕ್ಕೆ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದು, ಗ್ರಾಹಕನಿಗೆ ಒಂದು ಲಕ್ಷ ಪರಿಹಾರ ನೀಡುವಂತೆ ಕೋರ್ಟ್ ಆದೇಶಿಸಿದೆ. ಚೆನ್ನೈ ಮೂಲದ ಪಿ ದಿಲ್ಲಿಬಾಬು ಎಂಬುವವರು ಸನ್‌ಫೀಸ್ಟ್ ಮಾರಿ ಲೈಟ್ ಬಿಸ್ಕೆಟ್‌ ಪ್ಯಾಕೆಟೊಂದನ್ನು ಖರೀದಿಸಿದ್ದರು. ಬಿಸ್ಕೆಟ್ ಪ್ಯಾಕ್ ನ ಜಾಹೀರಾತಿನ ಮೇಲೆ 16 ಬಿಸ್ಕೆಟ್ ಎಂದು ನಮೂದಿಸಲಾಗಿತ್ತು. ಆದರೆ ಅದರಲ್ಲಿ 15 ಬಿಸ್ಕೆಟ್‌ ಮಾತ್ರ ಇತ್ತು. ಆದ್ದರಿಂದಬಿಸ್ಕೆಟ್ ಸಂಸ್ಥೆಯ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು.ಈ ಬಗ್ಗೆ ಸ್ಪಷ್ಟನೆ

ಬಿಸ್ಕೆಟ್ ಪ್ಯಾಕ್‌ನಲ್ಲಿ ಒಂದು ಬಿಸ್ಕೆಟ್ ಕಡಿಮೆ| ಗ್ರಾಹಕನಿಗೆ 1 ಲಕ್ಷ ರೂ. ಪರಿಹಾರ Read More »

ಕೇರಳದಲ್ಲಿ ಮತ್ತೆ ನಿಫಾ ಭೀತಿ| ಆರೋಗ್ಯ ಇಲಾಖೆಯಿಂದ ಎಚ್ಚರಿಕೆ

ಸಮಗ್ರ ನ್ಯೂಸ್: ಕೇರಳದ ಕೋಝಿಕ್ಕೋಡ್ ಜಿಲ್ಲೆಯ ಖಾಸಗಿ ಆಸ್ಪತ್ರೆಗಳಲ್ಲಿ ಎರಡು ಅಸಹಜ ಸಾವು ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆರೋಗ್ಯ ಸಚಿವಾಲಯ ನಿಫಾ ಸೋಂಕು ಭೀತಿಯ ಬಗ್ಗೆ ಎಚ್ಚರಿಕೆ ನೀಡಿದೆ. ಈ ಎರಡು ಸಾವುಗಳು ನಿಫಾ ವೈರಸ್ ನಿಂದ ಸಂಭವಿಸಿವೆ ಎಂದು ಶಂಕಿಸಲಾಗಿದ್ದು, ಮೃತರ ಪೈಕಿ ಒಬ್ಬರ ಸಂಬಂಧಿಕರು ಕೂಡಾ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿಕೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಘಟನೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಉನ್ನತ ಮಟ್ಟದ ಸಭೆ

ಕೇರಳದಲ್ಲಿ ಮತ್ತೆ ನಿಫಾ ಭೀತಿ| ಆರೋಗ್ಯ ಇಲಾಖೆಯಿಂದ ಎಚ್ಚರಿಕೆ Read More »

ಕೆಸೆಟ್ ಪರೀಕ್ಷೆಗೆ ಅರ್ಜಿ ಆಹ್ವಾನ| ಸೆ. 30 ಕೊನೆಯ ದಿನಾಂಕ

ಸಮಗ್ರ ನ್ಯೂಸ್: ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2023ನ್ನು ನ. 26ರಂದು ನಡೆಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಸೂಚನೆ ಪ್ರಕಟನೆ ಹೊರಡಿಸಿದೆ. ಅರ್ಹ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗೆ ಆಹ್ವಾನಿಸಲಾಗಿದೆ. ಮೊದಲ ಪತ್ರಿಕೆ-I: ಸಾಮಾನ್ಯ ಪತ್ರಿಕೆಯು ಬೋಧನೆ ಮತ್ತು ಬುದ್ಧಿ ಸಾಮರ್ಥ್ಯ. ಈ ಪತ್ರಿಕೆಯು ಅಭ್ಯರ್ಥಿಗಳ ಸಾಮಾನ್ಯ ಪತ್ರಿಕೆಯಾಗಿದ್ದು, ಸಾಮಾನ್ಯ ಜ್ಞಾನ ಬೋಧನೆ ಹಾಗೂ ಸಂಶೋಧನೆಯ ಅಭಿರುಚಿಗೆ ಸಂಬಂಧಿಸಿರುತ್ತದೆ. ಅಭ್ಯರ್ಥಿಗಳ ಸಾಮಾನ್ಯ ತಿಳಿವಳಿಕೆಗಳನ್ನು ಗ್ರಹಿಸುವ ಹಾಗೂ ಯೋಚನಾ ಸಾಮರ್ಥ್ಯವನ್ನು ಆಳೆಯುವಂತಹದ್ದಾಗಿರುತ್ತದೆ. ಈ ಪತ್ರಿಕೆಯು 50

ಕೆಸೆಟ್ ಪರೀಕ್ಷೆಗೆ ಅರ್ಜಿ ಆಹ್ವಾನ| ಸೆ. 30 ಕೊನೆಯ ದಿನಾಂಕ Read More »

ರಾಜ್ಯ, ರಾಷ್ಟ್ರ ರಾಜಕಾರಣದ ಸ್ಪೋಟಕ ಭವಿಷ್ಯ ನುಡಿದ ಕೋಡಿಮಠ ಶ್ರೀ| ಯುಗಾದಿ ಬಳಿಕ ಭಾರೀ ಬದಲಾವಣೆ

ಸಮಗ್ರ ನ್ಯೂಸ್: ರಾಜ್ಯ ಹಾಗೂರಾಷ್ಟ್ರ ರಾಜಕಾರಣದ ಬಗ್ಗೆ ಇಂದು ಕೋಡಿಮಠದ ಶಿವಾನದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಸ್ಪೋಟಕ ಭವಿಷ್ಯವನ್ನು ನುಡಿದಿದ್ದಾರೆ. ಇಂದು ಹುಬ್ಬಳ್ಳಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ರಾಜ್ಯ ಹಾಗೂ ರಾಷ್ಟ್ರ ರಾಜಕೀಯದಲ್ಲಿ ಮಹತ್ವದ ಅಸ್ಥಿರತೆ ಉಂಟಾಗಲಿದೆ ಎಂಬುದಾಗಿ ಸ್ಪೋಟಕ ಭವಿಷ್ಯ ನುಡಿದಿದ್ದಾರೆ. ರಾಜ್ಯ ರಾಜಕಾರಣ, ರಾಷ್ಟ್ರ ರಾಜಕಾರಣದಲ್ಲಿ ಅಸ್ಥಿರತೆ ಉಂಟಾಗಲಿದೆ. ಯುಗಾದಿಯ ನಂತ್ರ ಏನಾಗುತ್ತೆ ಅಂತ ಕಾದು ನೋಡಿ ಎಂಬುದಾಗಿ ತಿಳಿಸಿದ್ದಾರೆ. ಈ ಮೂಲಕ ಅಚ್ಚರಿಯನ್ನು ಎದುರು ನೋಡುವಂತೆ ಹೇಳಿದ್ದಾರೆ.

ರಾಜ್ಯ, ರಾಷ್ಟ್ರ ರಾಜಕಾರಣದ ಸ್ಪೋಟಕ ಭವಿಷ್ಯ ನುಡಿದ ಕೋಡಿಮಠ ಶ್ರೀ| ಯುಗಾದಿ ಬಳಿಕ ಭಾರೀ ಬದಲಾವಣೆ Read More »

ತಾಂತ್ರಿಕ ಅಡಚಣೆ; ಕೇಂದ್ರ ಸರ್ಕಾರದ ‘ಮಾತೃವಂದನಾ’ ಯೋಜನೆ ಸ್ಥಗಿತ

ಸಮಗ್ರ ನ್ಯೂಸ್: ಗರ್ಭಿಣಿ ಹಾಗೂ ಬಾಣಂತಿಯರ ಆರೈಕೆಗಾಗಿ ನೀಡಲಾಗುತ್ತಿದ್ದ ಕೇಂದ್ರ ಸರ್ಕಾರದ ಮಾತೃವಂದನಾ ಯೋಜನೆ ತಾಂತ್ರಿಕ ಕಾರಣದಿಂದ ಕಳೆದ ಒಂದೂವರೆ ವರ್ಷದಿಂದ ಸ್ಥಗಿತಗೊಂಡಿದೆ. ಮಾತೃವಂದನಾ ಯೋಜನೆ ಸಾಫ್ಟ್ ವೇರ್ ಅನ್ನು ಮಿಷನ್ ಶಕ್ತಿ 2.O ಸಾಫ್ಟ್ ವೇರ್ ಜೊತೆಗೆ ಜೋಡಿಸಲಾಗಿದ್ದು, ನೂತನ ತಂತ್ರಾಂಶದಲ್ಲಿ ಹಳೆಯ ಡೇಟಾಗಳು ಲಭ್ಯವಾಗುತ್ತಿಲ್ಲ. ಈ ತಾಂತ್ರಿಕ ಸಮಸ್ಯೆಯಿಂದ ಯೋಜನೆ ಹಣ ಫಲಾನುಭವಿಗಳಿಗೆ ಲಭ್ಯವಾಗುತ್ತಿಲ್ಲ ಎಂದು ತಿಳದುಬಂದಿದೆ. ಈ ಯೋಜನೆಯಡಿ, ಗರ್ಭಿಣಿ, ಬಾಣಂತಿ ಮಹಿಳೆಯರಿಗೆ ಕೇಂದ್ರ ಸರ್ಕಾರ ಆರ್ಥಿಕ ನೆರವು ನೀಡುತ್ತದೆ. ನವಜಾತ ಶಿಶುಗಳ

ತಾಂತ್ರಿಕ ಅಡಚಣೆ; ಕೇಂದ್ರ ಸರ್ಕಾರದ ‘ಮಾತೃವಂದನಾ’ ಯೋಜನೆ ಸ್ಥಗಿತ Read More »

ಸಾವು ಎಲ್ಲದಕ್ಕೂ ಪರಿಹಾರವಲ್ಲ|ಆತ್ಮಹತ್ಯಾ ತಡೆದಿನ ಸೆಪ್ಟಂಬರ್–10

ಸಮಗ್ರ ನ್ಯೂಸ್: ಪ್ರತಿ ವರ್ಷ ಸೆಪ್ಟಂಬರ್ 10ರಂದು ವಿಶ್ವ ಆತ್ಮಹತ್ಯಾ ತಡೆದಿನ ಎಂದು ಆಚರಿಸಿ, ಯುವಜನರಲ್ಲಿ ಆತ್ಮಹತ್ಯೆಯನ್ನು ಮಾಡದಿರುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ವಿಶ್ವದಲ್ಲಿ ಪ್ರತಿ 60 ಸೆಂಕೆಂಡ್‍ಗೆ ಒಬ್ಬರಂತೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಮತ್ತು ವರ್ಷವೊಂದರಲ್ಲಿ ಏನಿಲ್ಲವೆಂದರೂ 10ರಿಂದ 12 ಲಕ್ಷ ಮಂದಿ ಆತ್ಮಹತ್ಯೆ ಮಾಡುತ್ತಿದ್ದಾರೆ. ಜೀವನದಲ್ಲಿ ಜಿಗುಪ್ಸೆ, ಬದುಕಿನಲ್ಲಿ ನಿರಾಸಕ್ತಿ, ಉದ್ಯೋಗದಲ್ಲಿ ನಷ್ಟ, ವಿದ್ಯಾಭ್ಯಾಸದಲ್ಲಿ ಅನುತೀರ್ಣ, ಕೆಲಸದಲ್ಲಿ ಒತ್ತಡ ಹೀಗೆ ಹತ್ತು ಹಲವು ಕಾರಣಗಳಿಂದ ಆತ್ಮಹತ್ಯೆ ಮಾಡಿಕೊಳುತ್ತಾರೆ. 15-20 ವರ್ಷದೊಳಗಿನವರಲ್ಲಿ ಸಾವಿಗೆ ಎರಡನೇ ಅತೀ ದೊಡ್ಡ ಕಾರಣ

ಸಾವು ಎಲ್ಲದಕ್ಕೂ ಪರಿಹಾರವಲ್ಲ|ಆತ್ಮಹತ್ಯಾ ತಡೆದಿನ ಸೆಪ್ಟಂಬರ್–10 Read More »

ಮೊರಾಕೋ ಭೂಕಂಪ: ಏರುತ್ತಲೇ ಇದೆ ಸಾವಿನ ಸಂಖ್ಯೆ

ಸಮಗ್ರ ನ್ಯೂಸ್: ಮೊರಾಕೊದಲ್ಲಿ ಸಂಭವಿಸಿದ ಭೂಕಂಪದ ಸಾವಿನ ಸಂಖ್ಯೆ 632 ಕ್ಕೆ ಏರಿದೆ, 329 ಜನರು ಗಾಯಗೊಂಡಿದ್ದಾರೆ ಎಂದು ಆಂತರಿಕ ಸಚಿವಾಲಯವನ್ನು ಉಲ್ಲೇಖಿಸಿ ಸರ್ಕಾರಿ ಟಿವಿ ಸ್ಟೇಷನ್ ತಿಳಿಸಿದೆ. ಮೊರೊಕ್ಕೊದಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದಿಂದಾಗಿ ಸುಮಾರು 600 ಕ್ಕೂ ಹೆಚ್ಚು ಜನ ಸಾವನ್ನಪ್ಪಿದ ಕಾರಣದಿಂದ ಕಳೆದುಹೋದ ಜೀವಗಳಿಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ತೀವ್ರ ದುಃಖ ವ್ಯಕ್ತಪಡಿಸಿದ್ದಾರೆ. ಅವರು ಸಂತ್ರಸ್ತ ಕುಟುಂಬಗಳಿಗೆ ತಮ್ಮ ಸಂತಾಪವನ್ನು ತಿಳಿಸಿದರು ಮತ್ತು ಈ ದುರಂತ ಸಮಯದಲ್ಲಿ ಉತ್ತರ ಆಫ್ರಿಕಾದ ದೇಶದ ಜನರಿಗೆ

ಮೊರಾಕೋ ಭೂಕಂಪ: ಏರುತ್ತಲೇ ಇದೆ ಸಾವಿನ ಸಂಖ್ಯೆ Read More »