ದೇಶ-ವಿದೇಶ

ಹೊಸ ಟ್ರೇಡ್ ಮಾರ್ಕ್ ಗಳ ಮೊರೆಹೋದ ಬಜಾಜ್| ಈ ಹೆಸರುಗಳು‌ ಮಾರ್ಕೆಟ್ ಕ್ಯಾಚ್ ಮಾಡೋದು ಗ್ಯಾರಂಟಿ!!

ಸಮಗ್ರ ನ್ಯೂಸ್: ಭಾರತದ ಅತಿದೊಡ್ಡ ದ್ವಿಚಕ್ರ ವಾಹನ ಕಂಪನಿಗಳಲ್ಲಿ ಒಂದಾಗಿರುವ ಬಜಾಜ್ ಆಟೋ ಇದೀಗ ತನ್ನ ಮುಂಬರುವ ಉತ್ಪನ್ನಗಳಿಗೆ ಬೆರಳೆಣಿಕೆಯ ಹೆಸರುಗಳನ್ನು ಟ್ರೇಡ್‌ಮಾರ್ಕ್ ಮಾಡಿದೆ. ಜಿಂಗರ್, ಎಲಿಕ್ಸಿರ್, ಔರಾ, ಬಾಂಬರ್ ಇವು ಸದ್ಯ ಬಜಾಜ್ ತನ್ನ ಭವಿಷ್ಯದ ಉತ್ಪನ್ನಗಳ ಟ್ರೇಡ್‌ಮಾರ್ಕ್‌ಗಳು. ಈ ಹೊಸ ಹೆಸರುಗಳು ಯಾವ ಮಾದರಿಗಳಿಗೆ ನೀಡಬಹುದು ಎಂದು ತಿಳಿಯುವ ಮೊದಲು ಬಜಾಜ್ ಈ ಹಿಂದೆಯೂ ಕೆಲ ಟ್ರೇಡ್‌ಮಾರ್ಕ್ ಸಲ್ಲಿಸಿದ್ದ ಒಂದಷ್ಟು ಹೆಸರುಗಳನ್ನು ನೋಡೋಣ. ರೇಸರ್, ಹ್ಯಾಮರ್, ಸ್ವಿಂಗ್, ಜಿನೀ, ಫ್ರೀರೈಡರ್, ಕ್ಯಾಲಿಬರ್, ನ್ಯೂರಾನ್, ಟ್ವಿನ್ನರ್, […]

ಹೊಸ ಟ್ರೇಡ್ ಮಾರ್ಕ್ ಗಳ ಮೊರೆಹೋದ ಬಜಾಜ್| ಈ ಹೆಸರುಗಳು‌ ಮಾರ್ಕೆಟ್ ಕ್ಯಾಚ್ ಮಾಡೋದು ಗ್ಯಾರಂಟಿ!! Read More »

ಮದುವೆ ಮಂಟಪದಲ್ಲಿ ಭೀಕರ ಅಗ್ನಿ ದುರಂತ| ಕನಿಷ್ಠ 100 ಮಂದಿ ಸಾವು

ಸಮಗ್ರ ನ್ಯೂಸ್: ಮದುವೆ ಮಂಟಪವೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 100 ಮಂದಿ ಮೃತಪಟ್ಟು, 150 ಮಂದಿ ಗಾಯಗೊಂಡ ಘಟನೆ ಉತ್ತರ ಇರಾನ್ ನ ಬಾಗ್ದಾದ್ ನಲ್ಲಿ ಸಂಭವಿಸಿದೆ. ರಾಜಧಾನಿ ಬಾಗ್ದಾದ್ನ ವಾಯುವ್ಯಕ್ಕೆ ಸುಮಾರು 335 ಕಿಲೋಮೀಟರ್ ದೂರದಲ್ಲಿರುವ ಉತ್ತರ ನಗರ ಮೊಸುಲ್ನ ಹೊರಗೆ ನಡೆದಿರುವ ಘಟನೆಯಾಗಿದೆ. ಬೆಂಕಿಯ ಕಾರಣದ ಬಗ್ಗೆ ತಕ್ಷಣದ ಮಾಹಿತಿ ತಿಳಿದು ಬಂದಿಲ್ಲ. ಟೆಲಿವಿಷನ್ ದೃಶ್ಯಾವಳಿಗಳು ಮದುವೆ ಮಂಟಪದ ಒಳಗೆ ಸುಟ್ಟುಹೋದ ಅವಶೇಷಗಳನ್ನು ತೋರಿಸಿದ್ದು, ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿ ನಂದಿಸೋ ಕಾರ್ಯದಲ್ಲಿ ನಿರತರಾಗಿದ್ದಾರೆ.

ಮದುವೆ ಮಂಟಪದಲ್ಲಿ ಭೀಕರ ಅಗ್ನಿ ದುರಂತ| ಕನಿಷ್ಠ 100 ಮಂದಿ ಸಾವು Read More »

ರಾಷ್ಟ್ರಧ್ವಜ ತಯಾರಿಕೆಯ ಗರಗ ಕ್ಷೇತ್ರೀಯ ಸೇವಾ ಸಂಘಕ್ಕೆ 2023 ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪ್ರಕಟ

ಸಮಗ್ರ ನ್ಯೂಸ್: ರಾಷ್ಟ್ರಧ್ವಜಕ್ಕೆ ಬೇಕಾಗುವ ಬಟ್ಟೆ ಉತ್ಪಾದನೆಯಲ್ಲಿ ತೊಡಗಿಸಿಕೊಂಡಿರುವ ದೇಶದ ಮೊದಲ ಖಾದಿ ಗ್ರಾಮೋದ್ಯೋಗ ಸಂಸ್ಥೆ ಎಂಬ ಹಿರಿಮೆ ಹೊಂದಿರುವ ಧಾರವಾಡ ಜಿಲ್ಲೆಯ ಗರಗ ಕ್ಷೇತ್ರೀಯ ಸೇವಾ ಸಂಘವು 2023ರ “ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ”ಗೆ ಭಾಜನವಾಗಿದೆ. ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿ ಬಿ.ವೀರಪ್ಪ ಅವರ ಅಧ್ಯಕ್ಷತೆಯಲ್ಲಿ ರಚಿಸಲಾಗಿದ್ದ ಆಯ್ಕೆ ಸಮಿತಿಯ ತೀರ್ಮಾನವನ್ನು ಅಂಗೀಕರಿಸಿ ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಆದೇಶ ಹೊರಡಿಸಿದೆ. ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಜನ್ಮದಿನವಾದ ಅ. 2ರಂದು ಸಂಜೆ 4.30

ರಾಷ್ಟ್ರಧ್ವಜ ತಯಾರಿಕೆಯ ಗರಗ ಕ್ಷೇತ್ರೀಯ ಸೇವಾ ಸಂಘಕ್ಕೆ 2023 ಮಹಾತ್ಮ ಗಾಂಧಿ ಸೇವಾ ಪ್ರಶಸ್ತಿ ಪ್ರಕಟ Read More »

ಅಯೋಧ್ಯಾ ರಾಮ‌ ಮಂದಿರ/ ಜನವರಿ 22ರಂದು ಮೂರ್ತಿ ಪ್ರತಿಷ್ಠಾಪನೆ ಸಾಧ್ಯತೆ

ಸಮಗ್ರ ನ್ಯೂಸ್: ಅಯೋಧ್ಯೆಯಲ್ಲಿ ರಾಮ ಮಂದಿರದ ನಿರ್ಮಾಣ ಕಾರ್ಯ ಮುಕ್ತಾಯದ ಹಂತದಲ್ಲಿ ಇದ್ದು, ಮುಂದಿನ ವರ್ಷದ ಜನವರಿ 22ರಂದು ಮೂರ್ತಿ ಪ್ರತಿಷ್ಠಾಪನೆ ಮಾಡುವ ಸಾಧ್ಯತೆ ಇದೆ ಎಂದು ದೇವಾಲಯ ನಿರ್ಮಾಣ ಸಮಿತಿ ಮುಖ್ಯಸ್ಥ ನೃಪೇಂದ್ರ ಮಿಶ್ರಾ ತಿಳಿಸಿದ್ದಾರೆ. ಜನವರಿ 20ರಿಂದ 24ರವರೆಗೆ ನಡೆಯುವ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾಗಲಿದ್ದು, ಮೂರ್ತಿ ಪ್ರತಿಷ್ಠಾಪನೆಯ ದಿನಾಂಕವನ್ನು ನಿರ್ಧರಿಸಿ, ಪ್ರಧಾನಿಯವರಿಗೆ ತಿಳಿಸಬೇಕಿದೆ ಎಂದು ಮಿಶ್ರಾ ಹೇಳಿದ್ದಾರೆ. ಈ ವರ್ಷದ ಅಂತ್ಯಕ್ಕೆ ನೆಲಮಹಡಿಯ ಕಾಮಗಾರಿ ಅಂತ್ಯಗೊಳ್ಳಲಿದ್ದು, ಜನವರಿ ತಿಂಗಳ

ಅಯೋಧ್ಯಾ ರಾಮ‌ ಮಂದಿರ/ ಜನವರಿ 22ರಂದು ಮೂರ್ತಿ ಪ್ರತಿಷ್ಠಾಪನೆ ಸಾಧ್ಯತೆ Read More »

ಜಲವಿವಾದಗಳ ಪರಿಹಾರಕ್ಕಾಗಿ 122.76 ಕೋಟಿ ವಕೀಲರ ಶುಲ್ಕ/ ಮಾಹಿತಿ ಹಕ್ಕಿನಲ್ಲಿ ಬಹಿರಂಗ

ಸಮಗ್ರ ನ್ಯೂಸ್: ಕರ್ನಾಟಕದ ಕೃಷ್ಣಾ, ಕಾವೇರಿ ಮತ್ತು ಮಹದಾಯಿ ನದಿಗಳ ವಿಚಾರದಲ್ಲಿ ಹೊರ ರಾಜ್ಯಗಳೊಂದಿಗೆ ಇರುವ ವಿವಾದವನ್ನು ಬಗೆಹರಿಸಲು ವಕೀಲರ ಶುಲ್ಕವಾಗಿ 122.76 ಕೋಟಿ ಹಣವನ್ನು ಖರ್ಚು ಮಾಡಿದೆ ಎಂದು ಮಾಹಿತಿ ಹಕ್ಕಿನಲ್ಲಿ ತಿಳಿದುಬಂದಿದೆ. ಕಾವೇರಿ, ಕೃಷ್ಣಾ ಮತ್ತು ಮಹದಾಯಿ ಜಲವಿವಾದ ನ್ಯಾಯಮಂಡಳಿಗಳಲ್ಲಿ ರಾಜ್ಯದ ಪರವಾಗಿ ವಾದ ಮಂಡಿಸಲು ಇಷ್ಟು ಮೊತ್ತವನ್ನು ವಕೀಲರ ಶುಲ್ಕವಾಗಿ ಪಾವತಿ ಮಾಡಲಾಗಿದೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ಭೀಮಪ್ಪ ಗಡಾದ ಬೆಳಗಾವಿಯಲ್ಲಿ ಹೇಳಿದರು. ಕಾವೇರಿ ಜಲವಿವಾದಕ್ಕಾಗಿ ಅತ್ಯಧಿಕ 54.13 ಕೋಟಿ ವ್ಯಯಿಸಲಾಗಿದ್ದು,

ಜಲವಿವಾದಗಳ ಪರಿಹಾರಕ್ಕಾಗಿ 122.76 ಕೋಟಿ ವಕೀಲರ ಶುಲ್ಕ/ ಮಾಹಿತಿ ಹಕ್ಕಿನಲ್ಲಿ ಬಹಿರಂಗ Read More »

ಮನುಕುಲದ ಮೇಲೆ ಮತ್ತೊಂದು ಮಹಾನ್ ವೈರಾಣು ದಾಳಿ ಸಾಧ್ಯತೆ| ಕೊರೊನಾಕ್ಕಿಂತಲೂ ಅಪಾಯಕಾರಿ ಈ ವೈರಸ್

ಸಮಗ್ರ ನ್ಯೂಸ್: ಕೊರೊನಾ ವೈರಸ್ ಪ್ರಪಂಚದಾದ್ಯಂತ ವಿನಾಶವನ್ನು ಉಂಟು ಮಾಡಿತು. ಅನೇಕ ದೇಶಗಳಲ್ಲಿನ ಜನರು ನಿರಂತರವಾಗಿ ಈ ಸಾಂಕ್ರಾಮಿಕ ರೋಗಕ್ಕೆ ಬಲಿಯಾಗುತ್ತಿದ್ದಾರೆ. ತಜ್ಞರು ಹೊಸ ಸಾಂಕ್ರಾಮಿಕದ ಆಗಮನದ ಬಗ್ಗೆ ಭಯಪಡುತ್ತಿದ್ದಾರೆ. ಇದು ಕೋವಿಡ್-19 ಗಿಂತ 7 ಪಟ್ಟು ಹೆಚ್ಚು ಅಪಾಯಕಾರಿ ಮತ್ತು ಈ ಕಾರಣದಿಂದಾಗಿ ಕನಿಷ್ಠ 5 ಕೋಟಿ ಜನರು ತಮ್ಮ ಪ್ರಾಣವನ್ನು ಕಳೆದುಕೊಳ್ಳಬಹುದು ಎಂದು W.H.O ಹೇಳಿದ್ದು, ಇದಕ್ಕೆ Disease X ಎಂದು ಹೆಸರಿಸಿದೆ. 2019 ರಲ್ಲಿ ಹೊರಹೊಮ್ಮಿದ ಕೋವಿಡ್ -19 ಈಗಾಗಲೇ ಜಾಗತಿಕವಾಗಿ ಸುಮಾರು

ಮನುಕುಲದ ಮೇಲೆ ಮತ್ತೊಂದು ಮಹಾನ್ ವೈರಾಣು ದಾಳಿ ಸಾಧ್ಯತೆ| ಕೊರೊನಾಕ್ಕಿಂತಲೂ ಅಪಾಯಕಾರಿ ಈ ವೈರಸ್ Read More »

ಪಾಕಿಸ್ತಾನದಲ್ಲಿ ಭೀಕರ ರೈಲು ದುರಂತ

ಸಮಗ್ರ ನ್ಯೂಸ್: ಪಾಕಿಸ್ತಾನದಲ್ಲಿ ರೈಲು ದುರಂತ ಸಂಭವಿಸುವುದು ಇದೆ ಮೊದಲಲ್ಲ. ಇಲ್ಲಿನ ಇಲಾಖೆಗೆ ಸೂಕ್ತ ತಂತ್ರಜ್ಞಾನ ಸೌಲಭ್ಯ ಇಲ್ಲದೆ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿವೆ. ಹೀಗೆ ಇದೀಗ ಮತ್ತೊಂದು ಅಪಘಾತ ಉಂಟಾಗಿದೆ. ಈ ದುರ್ಘಟನೆ ನಡೆದಿದ್ದು ಪಾಕಿಸ್ತಾನ ಪಂಜಾಬ್‌ ಪ್ರಾಂತ್ಯದ ಶೇಖಾ‍ಪುರ ಜಿಲ್ಲೆಯ ಕಿಲಾ ಸತ್ತಾರ್ ಶಾ ರೈಲ್ವೆ ನಿಲ್ದಾಣದಲ್ಲಿ. ಈ ಭೀಕರ ದುರಂತದಲ್ಲಿ ಒಟ್ಟು 31 ಪ್ರಯಾಣಿಕರು ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಅಪಘಾತ ಸಂಭವಿಸಿರುವ ರೈಲು ಮಿಯಾನ್ವಾಲಿ ಪ್ರದೇಶದಿಂದ ಲಾಹೋರ್‌ ಕಡೆಗೆ ತೆರಳುತ್ತಿತ್ತು. ಆದರೆ

ಪಾಕಿಸ್ತಾನದಲ್ಲಿ ಭೀಕರ ರೈಲು ದುರಂತ Read More »

ಕಾವೇರಿ ವಿವಾದ| ಜೆಡಿಎಸ್ ಬಿಜೆಪಿ ಒಟ್ಟಾಗಿ ಇರ್ತೇವೆ: ಬಿಎಸ್ ವೈ

ಸಮಗ್ರ ನ್ಯೂಸ್: ಕಾವೇರಿ ವಿವಾದ ನಾಡಿನಾದ್ಯಂತ ಉಗ್ರ ಹೋರಾಟಕ್ಕೆ ರೂಪತಾಳಿದ್ದು, ಎಲ್ಲೆಡೆ ಬಂದ್ ನದ್ದೆ ಸುದ್ದಿಯಾಗಿದೆ, ನಾಳೆ ಬೆಂಗಳೂರು ಹಾಗೂ ಸೆ.29 ಕರ್ನಾಟಕ ಬಂದ್ ಗೆ ಕರೆ ನೀಡಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಬಿಜೆಪಿ ಸಭೆಯಲ್ಲಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ ಇನ್ನು ಒಂದೇ ಒಂದು ಹನಿ ಸರ್ಕಾರ ನೀರು ಬಿಟ್ಟರೂ ಹೋರಾಟ ತೀವ್ರ ಆಗಲಿದೆ. ಇನ್ಮುಂದೆ ನೀರು ಬಿಟ್ರೆ ಮುಂದಿನ ಆಗುಹೋಗುಗಳಿಗೆ ಸರ್ಕಾರವೇ ಕಾರಣ ಆಗಲಿದೆ. ನಮ್ಮ ಹೋರಾಟಕ್ಕೆ ಜೆಡಿಎಸ್ ನಾಯಕರೂ ಕೈಜೋಡಿಸುವಂತೆ ಮನವಿ ಮಾಡ್ತೇನೆ,

ಕಾವೇರಿ ವಿವಾದ| ಜೆಡಿಎಸ್ ಬಿಜೆಪಿ ಒಟ್ಟಾಗಿ ಇರ್ತೇವೆ: ಬಿಎಸ್ ವೈ Read More »

ಏಷ್ಯನ್ ಗೇಮ್ಸ್| ಮೊದಲ ಚಿನ್ನದ ಪದಕ ಗೆದ್ದ ಭಾರತ

ಸಮಗ್ರ ನ್ಯೂಸ್: ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಏರ್ ರೈಫಲ್ ಶೂಟಿಂಗ್ ತಂಡಕ್ಕೆ ಚಿನ್ನದ ಪದ ಬಂದಿದೆ. 10 ಮೀಟರ್ ಏರ್ ರೈಫಲ್ ಶೂಟಿಂಗ್ ನಲ್ಲಿ ಚಿನ್ನದ ಪದಕ ಬಂದಿದೆ. ಪುರುಷರ 10 ಮೀಟರ್ ಏರ್ ರೈಫಲ್ ಟೀಮ್ ಈವೆಂಟ್‌ನಲ್ಲಿ ರುದ್ರಾಂಕ್ಷ್ ಪಾಟೀಲ್, ಐಶ್ವರಿ ತೋಮರ್ ಮತ್ತು ದಿವ್ಯಾಂಶ್ ಪನ್ವಾರ್ ತಂಡವು ಭಾರತಕ್ಕೆ ಚಿನ್ನದ ಪದಕ ತಂದಿದೆ. 10 ಮೀಟರ್ ಏರ್ ರೈಫಲ್ ತಂಡವು ಫೈನಲ್‌ನಲ್ಲಿ ವಿಶ್ವ ದಾಖಲೆಯ ಸ್ಕೋರ್ ಗಳಿಸಿದೆ.

ಏಷ್ಯನ್ ಗೇಮ್ಸ್| ಮೊದಲ ಚಿನ್ನದ ಪದಕ ಗೆದ್ದ ಭಾರತ Read More »

ರಾಷ್ಟ್ರೀಯ ಸೇವಾ ಯೋಜನಾ ದಿನ – ಸೆಪ್ಟಂಬರ್ 24

ರಾಷ್ಟ್ರಾದ್ಯಂತ ಸೆಪ್ಟಂಬರ್ 24ನ್ನು ರಾಷ್ಟ್ರೀಯ ಸೇವಾ ಯೋಜನಾ ದಿನ ಎಂದು ಆಚರಿಸಲಾಗುತ್ತದೆ. ಸ್ವಾತಂತ್ರ್ಯದ ನಂತರದ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಸಾಮಾಜಿಕ ಸೇವಾ ಬದ್ಧತೆಯನ್ನು ಮೂಡಿಸಲು ಮತ್ತು ಪರಿಪೂರ್ಣ ವ್ಯಕ್ತಿತ್ವ ವಿಕಸನದ ಮೂಲ ಉದ್ದೇಶದೊಂದಿಗೆ, ರಾಷ್ಟ್ರೀಯ ಸೇವಾ ಯೋಜನೆಯನ್ನು ಪ್ರಾರಂಭಿಸಬಹುದೆಂದು ಡಾ| ರಾಧಾಕೃಷ್ಣನ್ ನೇತೃತ್ವದ ‘ವಿಶ್ವವಿದ್ಯಾನಿಲಯ ಅನುಧಾನ ಸಮಿತಿ’ ಭಾರತ ಸರ್ಕಾರಕ್ಕೆ ಅನುಮೋದನೆ ನೀಡಿತು. ಕಲಿಕೆ ಎನ್ನುವುದು ಕೇವಲ ವಿದ್ಯಾರ್ಥಿ ಮತ್ತು ಶಿಕ್ಷಕರ ನಡುವಿನ ಕೊಂಡಿಯಾಗಿರದೆ, ವಿದ್ಯಾರ್ಥಿ ಮತ್ತು ಸಮುದಾಯದ ನಡುವೆ ಸುಖಕರವಾದ ಮತ್ತು ರಚನಾತ್ಮಕವಾದ ಸಂಬಂಧ ಬೆಳೆಯಬೇಕು ಎಂಬ

ರಾಷ್ಟ್ರೀಯ ಸೇವಾ ಯೋಜನಾ ದಿನ – ಸೆಪ್ಟಂಬರ್ 24 Read More »