ದೇಶ-ವಿದೇಶ

ಮಾರ್ಯದಾ ಪುರುಷೋತ್ತಮ ಶ್ರೀರಾಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಡಿ.15ಕ್ಕೆ ಸಿದ್ದ

ಸಮಗ್ರ ನ್ಯೂಸ್: ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಗೆ ಒಂದು ತಿಂಗಳ ಮುಂಚೆಯೇ ಮೊದಲ ಹಂತದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಡಿ. 15ರೊಳಗೆ ಸಿದ್ಧಗೊಳಿಸಲಾಗುವುದು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತಿಳಿಸಿದ್ದಾರೆ. ವಿಮಾನ ನಿಲ್ದಾಣವನ್ನು ‘ಮರ್ಯಾದಾ ಪುರುಷೋತ್ತಮ ಶ್ರೀರಾಮ್ ಅಂತಾರಾಷ್ಟ್ರೀಯ ಏರ್‌ಪೋರ್ಟ್‌’ ಎಂದು ಕರೆಯಲಾಗುವುದು. ಬೋಯಿಂಗ್ 737, ಏರ್‌ಬಸ್ 319 ಮತ್ತು ಏರ್‌ಬಸ್ 320 ವಿಮಾನಗಳಿಗೆ ಅವಕಾಶ ಕಲ್ಪಿಸಲು ಸಾಧ್ಯವಾಗುತ್ತದೆ. ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ನಾಗರಿಕ ವಿಮಾನಯಾನ ರಾಜ್ಯ ಸಚಿವ ವಿ.ಕೆ.ಸಿಂಗ್ ಅವರೊಂದಿಗೆ […]

ಮಾರ್ಯದಾ ಪುರುಷೋತ್ತಮ ಶ್ರೀರಾಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಡಿ.15ಕ್ಕೆ ಸಿದ್ದ Read More »

ಡಿ.4ರಿಂದ ಸಂಸತ್ ನ ಚಳಿಗಾಲದ ಅಧಿವೇಶನ| ಇಂದು ಪ್ರಧಾನಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ

ಸಮಗ್ರ ನ್ಯೂಸ್: ಡಿಸೆಂಬರ್ 4ರಂದು ಸಂಸತ್ತಿನ ಚಳಿಗಾಲ ಅಧಿವೇಶನ ಆರಂಭವಾಗುತ್ತಿದ್ದು, ಈ ಹಿನ್ನಲೆಯಲ್ಲಿ ಇಂದು(ಡಿ.2) ಪ್ರಧಾನಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ ಕರೆಯಲಾಗಿದೆ. ಚಳಿಗಾಲ ಅಧಿವೇಶನ ಡಿಸೆಂಬರ್ 22ಕ್ಕೆ ಮುಕ್ತಾಯವಾಗಲಿದೆ. ನಾಳೆ(ಡಿ.3) ಪಂಚರಾಜ್ಯಗಳ ಚುನಾವಣೆ ಫಲಿತಾಂಶ ಪ್ರಕಟವಾಗಲಿದ್ದು ಹೀಗಾಗಿ ಇಂದು ಸರ್ವಪಕ್ಷ ಸಭೆ ನಡೆಯುತ್ತಿದೆ. ಕೇಂದ್ರ ಸರ್ಕಾರದ ಪರವಾಗಿ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಸರ್ವಪಕ್ಷ ಸಭೆ ಕರೆದಿದ್ದಾರೆ. ಒಟ್ಟು ೧೫ ದಿನಗಳ ಕಲಾಪ ನಡೆಯಲಿದ್ದು, ಡಿಸೆಂಬರ್ ೨೨ರಂದು ಅಧಿವೇಶನ ಮುಕ್ತಾಯಗೊಳ್ಳಲಿದೆ. ಸಂಸತ್ತಿನಲ್ಲಿ ರಚನಾತ್ಮಕ ಚರ್ಚೆ ನಡೆಸಲು

ಡಿ.4ರಿಂದ ಸಂಸತ್ ನ ಚಳಿಗಾಲದ ಅಧಿವೇಶನ| ಇಂದು ಪ್ರಧಾನಿ ನೇತೃತ್ವದಲ್ಲಿ ಸರ್ವಪಕ್ಷ ಸಭೆ Read More »

ಮಿಜೋರಾಂ ವಿಧಾನಸಭಾ ಚುನಾವಣೆ/ ಡಿಸೆಂಬರ್ 4ಕ್ಕೆ ಮುಂದೂಡಿದ ಮತ ಎಣಿಕೆ

ಸಮಗ್ರ ನ್ಯೂಸ್: ಪಂಚರಾಜ್ಯಗಳ ಪೈಕಿ ಮಿಜೋರಾಂ ವಿಧಾನಸಭಾ ಚುನಾವಣೆಯ ಮತ ಎಣಿಕೆಯ ದಿನಾಂಕವನ್ನು ಡಿಸೆಂಬರ್ 3ರಿಂದ ಡಿಸೆಂಬರ್ 4ಕ್ಕೆ ಮುಂದೂಡಲಾಗಿದೆ ಎಂದು ಚುನಾವಣಾ ಆಯೋಗ ಶುಕ್ರವಾರ ತಿಳಿಸಿದೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‍ಗಡ ಮತ್ತು ತೆಲಂಗಾಣ ವಿಧಾನಸಭಾ ಚುನಾವಣಾ ಫಲಿತಾಂಶ ಭಾನುವಾರವೇ ಹೊರಬೀಳಲಿದೆ. ಮಿಜೋರಾಂ ರಾಜ್ಯದಲ್ಲಿ ಕ್ರೈಸ್ತ ಸಮುದಾಯವರು ಹೆಚ್ಚಿನ ಸಂಖ್ಯೆಯಲ್ಲಿದ್ದು ಭಾನುವಾರ ವಿಶೇಷ ಪ್ರಾಮುಖ್ಯತೆಯನ್ನು ಹೊಂದಿದ್ದು, ಆ ದಿನ ವಿಶೇಷ ಪ್ರಾರ್ಥನೆ ನಡೆಯಲಿದೆ. ಹೀಗಾಗಿ ವಿವಿಧ ವಲಯಗಳಿಂದ ಬಂದ ಮನವಿಯನ್ನು ಪರಿಗಣಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು

ಮಿಜೋರಾಂ ವಿಧಾನಸಭಾ ಚುನಾವಣೆ/ ಡಿಸೆಂಬರ್ 4ಕ್ಕೆ ಮುಂದೂಡಿದ ಮತ ಎಣಿಕೆ Read More »

2024ರ ಜಂಟಿ ಪ್ರವೇಶ ಪರೀಕ್ಷೆ (ಜೆಇಇ)ಯ ಮುಖ್ಯ ಪರೀಕ್ಷೆ/ ಅರ್ಜಿ ಸಲ್ಲಿಕೆಯ ಅವಧಿ ವಿಸ್ತರಣೆ

ಸಮಗ್ರ ನ್ಯೂಸ್: 2024ರ ಜಂಟಿ ಪ್ರವೇಶ ಪರೀಕ್ಷೆ (ಜೆಇಇ)ಯ ಮುಖ್ಯ ಪರೀಕ್ಷೆಗೆ ಆನ್‍ಲೈನ್ ಮೂಲಕ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಇದೀಗ ಅರ್ಜಿ ಸಲ್ಲಿಕೆಯ ಅವಧಿಯನ್ನು ಡಿಸೆಂಬರ್ 4ರವರೆಗೆ ವಿಸ್ತರಿಸಲಾಗಿದೆ. 2024ರ ಜನವರಿ 24 ರಿಂದ ಫೆಬ್ರವರಿ 01ರ ನಡುವೆ 2024ರ ಜೆಇಇ ಮೇನ್ಸ್ ಪರೀಕ್ಷೆಯನ್ನು ನಡೆಸಲಾಗುತ್ತಿದ್ದು, ನವೆಂಬರ್ 30ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆದರೆ ಇದೀಗ ಅರ್ಜಿ ಸಲ್ಲಿಕೆ ಅವಧಿಯನ್ನು ವಿಸ್ತರಿಸಲಾಗಿದ್ದು, ಡಿಸೆಂಬರ್ 4ರೊಳಗೆ ಅರ್ಜಿ ಸಲ್ಲಿಸಬಹುದು. ಬಿಇ, ಬಿ.ಟೆಕ್, ಬಿ.ಆರ್ಚ್, ಬಿ ಪ್ಲಾನಿಂಗ್ ಕೋರ್ಸ್‍ಗಳ

2024ರ ಜಂಟಿ ಪ್ರವೇಶ ಪರೀಕ್ಷೆ (ಜೆಇಇ)ಯ ಮುಖ್ಯ ಪರೀಕ್ಷೆ/ ಅರ್ಜಿ ಸಲ್ಲಿಕೆಯ ಅವಧಿ ವಿಸ್ತರಣೆ Read More »

ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ/ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

ಸಮಗ್ರ ನ್ಯೂಸ್: ವಿದ್ಯಾರ್ಥಿಗಳಿಗೆ ಅಭ್ಯಾಸಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳ ತಾತ್ಕಾಲಿಕ ವೇಳಾಪಟ್ಟಿಯನ್ನು ಪ್ರಕಟ ಮಾಡಲಾಗಿದೆ. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ 2024ರ ಮಾರ್ಚ್ 02ರಿಂದ ಮಾರ್ಚ್ 22ರ ವರೆಗೆ ಮತ್ತು ಎಸ್‍ಎಸ್‍ಎಲ್‍ಸಿ ವಾರ್ಷಿಕ ಪರೀಕ್ಷೆ 2024ರ ಮಾರ್ಚ್ 25 ರಿಂದ ಏಪ್ರಿಲ್ 06ರ ವರೆಗೆ ನಡೆಯಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಘೋಷಿಸಿದೆ. ಈ ವೇಳಾಪಟ್ಟಿ ಕುರಿತಾಗಿ ಆಕ್ಷೇಪಣೆ ಸಲ್ಲಿಸಲು ಡಿಸೆಂಬರ್ 15ರ ವರೆಗೆ

ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ/ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ Read More »

ವಿಶ್ವ ಹವಾಮಾನ ಕ್ರಿಯಾ ಶೃಂಗಸಭೆ/ ದುಬೈನಲ್ಲಿ ಮೋದಿ

ಸಮಗ್ರ ನ್ಯೂಸ್: ವಿಶ್ವಸಂಸ್ಥೆಯ ಕಾನ್ಸರೆನ್ಸ್ ಆಫ್ ಪಾರ್ಟೀಸ್ (ಸಿಒಪಿ-28) ಜತೆಗೆ ನಡೆಯಲಿರುವ ವಿಶ್ವ ಹವಾಮಾನ ಕ್ರಿಯಾ ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ದುಬೈ ಪ್ರವಾಸ ಕೈಗೊಂಡಿದ್ದಾರೆ. ‘ಸಿಒಪಿ-28 ಶೃಂಗಸಭೆಯಲ್ಲಿ ಭಾಗವಹಿಸಲು ದುಬೈಗೆ ಬಂದಿಳಿದಿದ್ದೇನೆ. ಸಭೆಯ ಕಾರ್ಯಕಲಾಪಗಳನ್ನು ಎದುರು ನೋಡುತ್ತಿದ್ದೇನೆ’ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. ಯುಎಇ ಉಪ ಪ್ರಧಾನಿ ಶೇಖ್ ಸೈಫ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಪ್ರಧಾನಿ ಅವರನ್ನು ದುಬೈ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ದುಬೈನಲ್ಲಿರುವ ಭಾರತೀಯ ಸಮುದಾಯದವರು ಪ್ರಧಾನಿ

ವಿಶ್ವ ಹವಾಮಾನ ಕ್ರಿಯಾ ಶೃಂಗಸಭೆ/ ದುಬೈನಲ್ಲಿ ಮೋದಿ Read More »

ವಿದೇಶಿ ಆತಿಥ್ಯ ಸ್ವೀಕಾರ/ ಸಂಸದರಿಗೆ ಕೇಂದ್ರ ಸರ್ಕಾರದ ಅನುಮತಿ ಕಡ್ಡಾಯ

ಸಮಗ್ರ ನ್ಯೂಸ್: ಭಾರತದ ಸಂಸತ್ತಿನ ಸದಸ್ಯರು ಖಾಸಗಿಯಾಗಿ ವಿದೇಶಗಳಿಗೆ ತೆರಳಿದ ಸಂದರ್ಭಗಳಲ್ಲಿ, ಅಲ್ಲಿನ ಆತಿಥ್ಯ ಸ್ವೀಕರಿಸುವ ಮುನ್ನ ಕೇಂದ್ರ ಸರ್ಕಾರದ ಪೂರ್ವಾನುಮತಿ ಪಡೆಯಬೇಕು. ಹಾಗೇಯೇ ಸರ್ಕಾರದ ಕಠಿಣ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ರಾಜ್ಯಸಭಾ ಸಚಿವಾಲಯ ಆದೇಶ ಹೊರಡಿಸಿದೆ. ವಿದೇಶಗಳಿಂದ ಬರುವ ಆಹ್ವಾನವನ್ನು ಕಡ್ಡಾಯವಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಗಮನಕ್ಕೆ ತರಬೇಕು ಸಂಸದರಾಗಿ ತಾವು ನಿರ್ವಹಿಸಬೇಕಿರುವ ಕರ್ತವ್ಯಗಳನ್ನು ನಿಷ್ಪಕ್ಷಪಾತವಾಗಿ ನಿರ್ವಹಿಸಲು ಅಡ್ಡಿ ಉಂಟುಮಾಡಬಹುದಾದ ಉಡುಗೊರೆಗಳನ್ನು ಪಡೆಯಬಾರದು. ಸಂಸದರು ನೀತಿಸಂಹಿತೆ ಪಾಲಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.

ವಿದೇಶಿ ಆತಿಥ್ಯ ಸ್ವೀಕಾರ/ ಸಂಸದರಿಗೆ ಕೇಂದ್ರ ಸರ್ಕಾರದ ಅನುಮತಿ ಕಡ್ಡಾಯ Read More »

ಜ್ಞಾನವಾಪಿ ಮಸೀದಿ/ ವರದಿ ಸಲ್ಲಿಸಲು 10 ದಿನಗಳ ಅವಕಾಶ ನೀಡಿದ ಕೋರ್ಟ್

ಸಮಗ್ರ ನ್ಯೂಸ್: ನ್ಯಾಯಾಲಯವು ವಾರಣಾಸಿಯ ಜ್ಞಾನವಾಪಿ ಮಸೀದಿಯ ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ಇನ್ನೂ 10 ದಿನಗಳ ಕಾಲಾವಕಾಶ ನೀಡಿದೆ. ವೈಜ್ಞಾನಿಕ ಸಮೀಕ್ಷೆಯ ವರದಿಯು ಒಂದು ತಿಂಗಳ ಹಿಂದೆ ಪೂರ್ಣಗೊಂಡಿದ್ದು, ಅದನ್ನು ಕೋರ್ಟ್ ಗೆ ಸಲ್ಲಿಸಲು ಪುರಾತತ್ವ ಸಂಸ್ಥೆಗೆ ಇನ್ನೂ 10 ದಿನಗಳ ಕಾಲಾವಕಾಶ ನೀಡಲಾಗಿದೆ. ಇದು ನಾಲ್ಕನೇ ಬಾರಿಗೆ ವಿಸ್ತರಣೆಯಾಗಿದೆ. ಪುರಾತತ್ವ ಸರ್ವೇಕ್ಷಣಾ ಇಲಾಖೆ 21 ದಿನಗಳ ಕಾಲಾವಕಾಶ ಕೋರಿದ್ದು, ಇದನ್ನು ಮಸೀದಿ ಸಮಿತಿ ವಿರೋಧಿಸಿತ್ತು. ಸಧ್ಯ ನ್ಯಾಯಾಲಯ ಇನ್ನೂ

ಜ್ಞಾನವಾಪಿ ಮಸೀದಿ/ ವರದಿ ಸಲ್ಲಿಸಲು 10 ದಿನಗಳ ಅವಕಾಶ ನೀಡಿದ ಕೋರ್ಟ್ Read More »

ಚೀನಾದ ಮಕ್ಕಳಿಗೆ ಹೊಸ ನ್ಯುಮೋನಿಯಾ ತಳಿ ಪತ್ತೆ ಹಿನ್ನೆಲೆ|ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ

ಸಮಗ್ರ ನ್ಯೂಸ್: ರಾಜ್ಯದಲ್ಲಿ ಅಲರ್ಟ್ ಆಗಿರುವಂತೆ ಮಾರ್ಗಸೂಚಿ ಪ್ರಕಟ. ಬೆಡ್, ಮೆಡಿಸಿನ್ ಮತ್ತು ಆರೋಗ್ಯ ಸೇವೆ ಸಿದ್ದಪಡಿಸಿಕೊಳ್ಳುವಂತೆ ಸೂಚನೆ. 2.ಶಂಕಿತ ಪ್ರಕಣಗಳ ಸ್ಯಾಂಪಲ್ ತೆಗೆದು ಟೆಸ್ಟ್ ಗೆ ಒಳಪಡಿಸಬೇಕು. 4.ಆಸ್ಫತ್ರೆ ಒಳಗಡೆ ಹೆಲ್ತ್ ವರ್ಕರ್ಸ್ ಫೇಸ್ ಮಾಸ್ಕ್ ಮತ್ತು ರಕ್ಷಣಾ ಕವಚ ಹಾಕಬೇಕು. 6.ಐಎಲ್ ಐ, ಸ್ಯಾರಿ ಕೇಸ್ ಗಳು ಹೆಚ್ಚಾದ್ರೆ ಸ್ಯಾಂಪಲ್ ಅನ್ನು ಲ್ಯಾಬ್ ಗೆ ರವಾನೆ ಮಾಡಬೇಕು. 7.ಆಸ್ಫತ್ರೆಗಳಲ್ಲಿ ಬೆಡ್ ಮೀಸಲಿಡಬೇಕು, ಅಕ್ಸಿಜನ್, ವೆಂಟಿಲೇಟರ್ ಇದೆಯಾ ನೋಡಿಕೊಳ್ಳಬೇಕು. ಸರ್ಕಾರಿ ಮತ್ತು ಖಾಸಗಿ ಆಸ್ಫತ್ರೆಗಳಲ್ಲಿ ಕೊವಿಡ್

ಚೀನಾದ ಮಕ್ಕಳಿಗೆ ಹೊಸ ನ್ಯುಮೋನಿಯಾ ತಳಿ ಪತ್ತೆ ಹಿನ್ನೆಲೆ|ಆರೋಗ್ಯ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ Read More »

ಹೊಸ ಸೊಂಕು ಪತ್ತೆ… ಮತ್ತೆ ಶುರುವಾಯ್ತು ಮಾಸ್ಕ್

ಸಮಗ್ರ ನ್ಯೂಸ್: ಕೊರೊನದಿಂದ ಜನ ಬೇಸತ್ತು ಇನ್ನೂ ಹೊರಬಂದಿಲ್ಲ, ಅದ್ರೆ ಇದೀಗ ಚೀನಾದ ಹೊಸ ಸೊಂಕಿನ ಆತಂಕ ಶುರುವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯ ಆರೋಗ್ಯ ಇಲಾಖೆ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇದೀಗ ಮತ್ತೆ ಮಾಸ್ಕ್ ಧರಿಸಲು ಆದೇಶಿಸಿದೆ.ಕೆಮ್ಮುವಾಗ ಸಮವಸ್ತ್ರದಿಂದ ಬಾಯಿ ಮೂಗು ಮುಚ್ಚಿಕೊಳ್ಳುವುದು. ಕೈಯನ್ನು ಆಗಾಗಾ ಸ್ವಚ್ಛವಾಗಿ ತೊಳೆಯುವುದು, ಅನಗತ್ಯವಾಗಿ ಕಣ್ಣು, ಮೂಗು ಮುಟ್ಟಬೇಡಿ ಎಂದು ಆದೇಶಿಸಿದೆ.ಜನಸಂದಣಿ ಜಾಗದಲ್ಲಿ ಮಾಸ್ಕ್ ಬಳಸಬೇಕು, ನೀರು ಚೆನ್ನಾಗಿ ಕುಡಿಯಬೇಕು, ಪೌಷ್ಟಿಕ ಆಹಾರ ಸೇವಿಸುವಂತೆ ಹೇಳಿದ್ದಾರೆ. ರೋಗದ ಲಕ್ಷಣ ಕಂಡು ಬಂದಲ್ಲಿ

ಹೊಸ ಸೊಂಕು ಪತ್ತೆ… ಮತ್ತೆ ಶುರುವಾಯ್ತು ಮಾಸ್ಕ್ Read More »