ದೇಶ-ವಿದೇಶ

2024ರ ವಿಶ್ವ ಸುಂದರಿ ಪಟ್ಟ ಮುಡಿಗೇರಿಸಿಕೊಂಡಕ್ರಿಸ್ಟಿನಾ ಪಿಸ್ಕೋವಾ

ಸಮಗ್ರ ನ್ಯೂಸ್: ಮುಂಬೈನ ಜಿಯೋ ವರ್ಲ್ಡ್​ ಸೆಂಟರ್​ನಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಜೆಕ್ ಗಣರಾಜ್ಯದ ಕ್ರಿಸ್ಟಿನಾ ಪಿಸ್ಕೋವಾ ಮಿಸ್ ವರ್ಲ್ಡ್ 2024 ಕಿರೀಟವನ್ನು ಗೆದ್ದರು. ದೇಶದಾದ್ಯಂತ ಪ್ರತಿಭಾವಂತ ಮತ್ತು ಸುಂದರ ಮಹಿಳೆಯರು ಪ್ರತಿ ವರ್ಷ ಪ್ರತಿಷ್ಠಿತ ಸೌಂದರ್ಯ ಸ್ಪರ್ಧೆ ‘ಮಿಸ್ ವರ್ಲ್ಡ್’ನಲ್ಲಿ ಭಾಗವಹಿಸುತ್ತಾರೆ. ಈ ಬಾರಿ ಕರ್ನಾಟಕ ಮೂಲದ ಸಿನಿ ಶೆಟ್ಟಿ ‘ಮಿಸ್ ವರ್ಲ್ಡ್’ ಸ್ಪರ್ಧೆಯಲ್ಲಿ ಭಾಗಿ ಆಗಿದ್ದರು. ಆದರೆ ಅವರಿಗೆ ಪ್ರಶಸ್ತಿ ಸಿಕ್ಕಿಲ್ಲ. ಚೆಕ್ ರಿಪಬ್ಲಿಕ್​ನ ಕ್ರಿಸ್ಟಿನಾ ಅವರಿಗೆ ಮಿಸ್ ವರ್ಲ್ಡ್ ಕಿರೀಟ ಒಲಿದಿದೆ. ಮುಂಬೈನ […]

2024ರ ವಿಶ್ವ ಸುಂದರಿ ಪಟ್ಟ ಮುಡಿಗೇರಿಸಿಕೊಂಡಕ್ರಿಸ್ಟಿನಾ ಪಿಸ್ಕೋವಾ Read More »

ಲೋಕಸಭಾ ಚುನಾವಣೆ ಹೊತ್ತಲ್ಲೆ ದಿಢೀರ್ ರಾಜೀನಾಮೆ ಕೊಟ್ಟ ಕೇಂದ್ರ ಚುನಾವಣಾ ಆಯುಕ್ತ ಅರುಣ್ ಗೋಯಲ್

ಸಮಗ್ರ ನ್ಯೂಸ್: ಕೇಂದ್ರ ಚುನಾವಣಾ ಆಯುಕ್ತ ಅರುಣ್ ಗೋಯಲ್ ಶನಿವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇನ್ನು ಕೆಲವೇ ವಾರಗಳಲ್ಲಿ ಲೋಕಸಭೆ ಚುನಾವಣೆ ನಡೆಯಲಿರುವ ಇದೇ ಸಂದರ್ಭದಲ್ಲಿ ಚುನಾವಣಾ ಆಯುಕ್ತರು ರಾಜೀನಾಮೆ ನೀಡಿದ್ದಾರೆ ಅರುಣ್ ಗೋಯಲ್ ಅಧಿಕಾರಾವಧಿ 2027ರವರೆಗೆ ಇತ್ತು. ಸದ್ಯ ಗೋಯಲ್ ಅವರ ರಾಜೀನಾಮೆಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಂಗೀಕರಿಸಿದ್ದಾರೆ. ಹೀಗಾಗಿ ಗೋಯಲ್​ ಅವರ ರಾಜೀನಾಮೆಯಿಂದಾಗಿ ಇದೀಗ ಚುನಾವಣಾ ಸಮಿತಿಯಲ್ಲಿ ಎರಡು ಚುನಾವಣಾ ಆಯುಕ್ತ ಸ್ಥಾನಗಳು ಖಾಲಿಯಾಗಿವೆ. ಇದೀಗ ಚುನಾವಣಾ ವ್ಯವಸ್ಥೆಯ ಸಂಪೂರ್ಣ ಜವಾಬ್ದಾರಿ

ಲೋಕಸಭಾ ಚುನಾವಣೆ ಹೊತ್ತಲ್ಲೆ ದಿಢೀರ್ ರಾಜೀನಾಮೆ ಕೊಟ್ಟ ಕೇಂದ್ರ ಚುನಾವಣಾ ಆಯುಕ್ತ ಅರುಣ್ ಗೋಯಲ್ Read More »

ಕಾಜಿರಂಗ ಉದ್ಯಾನದಲ್ಲಿ ಪ್ರಧಾನಿ: ಸಫಾರಿ ಮತ್ತು ಜೀಪ್ ಸವಾರಿ ಮಾಡಿದ ನಮೋ

ಸಮಗ್ರ ನ್ಯೂಸ್: ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಸಂರಕ್ಷಿತ ಪ್ರದೇಶದಲ್ಲಿ ಇಂದು ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಸಫಾರಿ ಮತ್ತು ಜೀಪ್ ಸವಾರಿ ಮಾಡಿದ್ದಾರೆ. ಇದು ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾಗಿದ್ದು, ಸೆಂಟ್ರಲ್ ಖೇರಾ ವಲಯದ ಮಿಹಿಮುಖ್ ವಲಯದಲ್ಲಿ ಮೊದಲು ಆನೆ ಸಫಾರಿ ಮಾಡಿ ಇದೇ ವಲಯದಲ್ಲಿ ಪ್ರಧಾನಿ ಜೀಪ್ ಸವಾರಿಯನ್ನು ಮಾಡಿದ್ದರು. ಎರಡು ದಿನದ ಅಸ್ಸಾಂ ಪ್ರವಾಸದಲ್ಲಿ ಪ್ರಧಾನಿ ಮೋದಿ ಇದ್ದು, ಉದ್ಯಾನದಲ್ಲಿ ಪ್ರಧಾನಿಗೆ ಉದ್ಯಾನದ ನಿರ್ದೇಶಕಿ, ಅರಣ್ಯ ಅಧಿಕಾರಿಗಳು ಸಾತ್ ನೀಡಿದ್ದರು.

ಕಾಜಿರಂಗ ಉದ್ಯಾನದಲ್ಲಿ ಪ್ರಧಾನಿ: ಸಫಾರಿ ಮತ್ತು ಜೀಪ್ ಸವಾರಿ ಮಾಡಿದ ನಮೋ Read More »

ಮಧ್ಯಪ್ರದೇಶದ ರಾಜ್ಯ ಸಚಿವಾಲಯದಲ್ಲಿ ಭಾರೀ ಅಗ್ನಿ ಅವಘಡ

ಸಮಗ್ರ ನ್ಯೂಸ್: ಇಂದು ಮಧ್ಯ ಪ್ರದೇಶದ ಭೋಪಾಲ್​ನಲ್ಲಿರುವ ರಾಜ್ಯ ಸಚಿವಾಲಯದಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದೆ. ಸಚಿವಾಲಯ ಕಟ್ಟಡ ವಲ್ಲಭ ಭವನದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ನಂದಿಸಲು ಹಲವು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿವೆ. ಬೆಂಕಿ ವೇಗಕ್ಕೆ ದಟ್ಟವಾದ ಹೊಗೆ ಆವರಿಸಿದೆ. ಅದೃಷ್ಟವಶಾತ್ ಯಾವುದೇ ಸಾವು-ನೋವು ಸಂಭವಿಸಿದ ಎಂಬ ವರದಿಯಾಗಿದೆ. ಈ ಕಟ್ಟಡದಲ್ಲಿ ಮುಖ್ಯಮಂತ್ರಿ ಸೇರಿದಂತೆ ಹಲವು ಮಂದಿ ಸಚಿವರ ಕಚೇರಿಗಳೂ ಇಲ್ಲಿವೆ. ಕಟ್ಟಡದ ಐದನೇ ಮಹಡಿಯಲ್ಲಿ ಮುಖ್ಯಮಂತ್ರಿ ಕಚೇರಿ ಇದೆ. ಬೆಂಕಿ ಅವಘಡದ ಕಾರಣ ಹಲವು

ಮಧ್ಯಪ್ರದೇಶದ ರಾಜ್ಯ ಸಚಿವಾಲಯದಲ್ಲಿ ಭಾರೀ ಅಗ್ನಿ ಅವಘಡ Read More »

ಹೆದ್ದೆರೆಗಳ ಹೊಡೆತಕ್ಕೆ ಇಬ್ಬಾಗವಾದ ಐತಿಹಾಸಿಕ ವಲಿಯತುರಾ ಸಮುದ್ರ ಸೇತುವೆ

ಸಮಗ್ರ ನ್ಯೂಸ್: ಹೆದ್ದೆರೆಗಳ ಹೊಡೆತಕ್ಕೆ ಕೇರಳದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾಗಿರುವ ತಿರುವನಂತಪುರಂನ ಐತಿಹಾಸಿಕ ವಲಿಯತುರಾ ಸಮುದ್ರ ಸೇತುವೆ ನಲುಗಿ ಇಬ್ಬಾಗವಾಗಿದೆ. 2017ರಲ್ಲಿ ಅಪ್ಪಳಿಸಿದ್ದ ಓಖಿ ಚಂಡಮಾರುತ, 2021ರಲ್ಲಿ ಕಾಣಿಸಿಕೊಂಡಿದ್ದ ಟೌಕ್ಷೆ ಚಂಡಮಾರುತದ ಸಂದರ್ಭವೂ ಈ ಸೇತುವೆ ಹಾನಿಗೊಳಗಾಗಿತ್ತು. ಇದೀಗ ಸೇತುವೆಯ ಒಂದು ಭಾಗ ಸಂಪೂರ್ಣ ಕುಸಿದಿದೆ ಎಂದು ಆಡಳಿತ ಮೂಲಗಳು ತಿಳಿಸಿವೆ. 1825 ರಲ್ಲಿ ಮೊದಲು ಉಕ್ಕಿನಲ್ಲಿ ನಿರ್ಮಾಣವಾಗಿದ್ದ ಈ ಸೇತುವೆ 1987ರಲ್ಲಿ ಎಂ.ವಿ. ಪಂಡಿತ್ ಹೆಸರಿನ ಹಡಗು ಡಿಕ್ಕಿಯಾಗಿ ಹಾನಿಗೊಳಗಾಗಿತ್ತು. ಬಳಿಕ 1957ರಲ್ಲಿ ಪುನರ್ ನಿರ್ಮಾಣಗೊಂಡು

ಹೆದ್ದೆರೆಗಳ ಹೊಡೆತಕ್ಕೆ ಇಬ್ಬಾಗವಾದ ಐತಿಹಾಸಿಕ ವಲಿಯತುರಾ ಸಮುದ್ರ ಸೇತುವೆ Read More »

ಚುನಾವಣಾ ಬಾಂಡ್ ವಹಿವಾಟು/ ಸುಪ್ರೀಂ ಕೋರ್ಟ್‍ನಲ್ಲಿ ಮಾ.11ಕ್ಕೆ ಎಸ್‍ಬಿಐ ಮನವಿಯ ವಿಚಾರಣೆ

ಸಮಗ್ರ ನ್ಯೂಸ್: ಚುನಾವಣಾ ಬಾಂಡ್‍ಗಳಲ್ಲಿ ನಡೆಸಿದ ವಹಿವಾಟುಗಳನ್ನು ಬಹಿರಂಗಗೊಳಿಸುವ ಕುರಿತು ಮತ್ತಷ್ಟು ಕಾಲಾವಕೋಶ ಕೋರಿದ್ದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‍ಬಿಐ) ಮನವಿಯನ್ನು ಸುಪ್ರೀಂ ಕೋರ್ಟ್ ಮಾ.11ಕ್ಕೆ ವಿಚಾರಣೆ ನಡೆಸಲಿದೆ. ಜೊತೆಗೆ ಸುಪ್ರೀಂ ಕೋರ್ಟ್ ಆದೇಶದಂತೆ ಮಾ.6ರೊಳಗೆ ಎಸ್‍ಬಿಐ ಚುನಾವಣಾ ಬಾಂಡ್ ಕುರಿತ ವಹಿವಾಟುಗಳನ್ನು ಬಹಿರಂಗ ಮಾಡಿಲ್ಲ ಎಂದು ಎಡಿಆರ್ ಎಂಬ ಎನ್‍ಜಿಒ ಸಲ್ಲಿಸಿರುವ ನ್ಯಾಯಾಂಗ ನಿಂದನಾ ಅರ್ಜಿಯನ್ನೂ ಆಲಿಸಲಿದೆ. ಸುಪ್ರೀಂ ಕೋರ್ಟ್ ನೀಡಿದ ಆದೇಶದಲ್ಲಿ ಎಸ್‍ಬಿಐ ಮಾ.6ರೊಳಗೆ ಚುನಾವಣಾ ಬಾಂಡ್‍ಗೆ ಸಂಬಂಧಿಸಿದ ಎಲ್ಲ ವಿವರಗಳನ್ನು ಬಹಿರಂಗ ಮಾಡಬೇಕು

ಚುನಾವಣಾ ಬಾಂಡ್ ವಹಿವಾಟು/ ಸುಪ್ರೀಂ ಕೋರ್ಟ್‍ನಲ್ಲಿ ಮಾ.11ಕ್ಕೆ ಎಸ್‍ಬಿಐ ಮನವಿಯ ವಿಚಾರಣೆ Read More »

ಒಂದು ದೇಶ ಒಂದು ಚುನಾವಣೆ/ ಶೀಘ್ರದಲ್ಲಿ ವರದಿ ಸಲ್ಲಿಸಲಿರುವ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿ

ಸಮಗ್ರ ನ್ಯೂಸ್: ಮಾಜಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿ ಒಂದು ದೇಶ ಒಂದು ಚುನಾವಣೆ ಯೋಜನೆ ಜಾರಿಗೆ ಸಂಬಂಧಿಸಿದಂತೆ ತನ್ನ ವರದಿಯನ್ನು ತಯಾರಿಸಿದ್ದು, ಶೀಘ್ರದಲ್ಲೇ ಸರ್ಕಾರಕ್ಕೆ ಸಲ್ಲಿಸಲಿದೆ ಎಂಬ ಮಾಹಿತಿ ಲಭ್ಯವಿದೆ. ಪ್ರಮುಖವಾಗಿ ಲೋಕಸಭೆ, ವಿಧಾನಸಭೆ ಮತ್ತು ಸ್ಥಳೀಯ ಚುನಾವಣೆಗಳಿಗೆ ಒಂದೇ ಮತದಾರರ ಪಟ್ಟಿಯನ್ನು ತಯಾರಿಸುವುದು, ಸರ್ಕಾರ ಅಲ್ಪಮತಕ್ಕೆ ಕುಸಿದಾಗ ಏಕತಾ ಸರ್ಕಾರವನ್ನು ರಚಿಸುವುದು, ರಾಷ್ಟ್ರಪತಿ ಆಡಳಿತಕ್ಕೆ ಸಂಬಂಧಿಸಿದಂತೆ ಸಂವಿಧಾನದ ಐದು ವಿಧಿಗಳನ್ನು ತಿದ್ದುಪಡಿ ಮಾಡಬೇಕೆಂದು ವರದಿಯಲ್ಲಿ ಉಲ್ಲೇಖಿಸಿದೆ ಎಂಬುದಾಗಿ ತಿಳಿದುಬಂದಿದೆ. ಕೇಂದ್ರ ಕಾನೂನು ಆಯೋಗ

ಒಂದು ದೇಶ ಒಂದು ಚುನಾವಣೆ/ ಶೀಘ್ರದಲ್ಲಿ ವರದಿ ಸಲ್ಲಿಸಲಿರುವ ರಾಮನಾಥ್ ಕೋವಿಂದ್ ನೇತೃತ್ವದ ಸಮಿತಿ Read More »

ಲೋಕಸಭಾ ಚುನಾವಣೆಗೆ ಗ್ಯಾರಂಟಿ ಘೋಷಿಸಿದ ರಾಹುಲ್

ಸಮಗ್ರ ನ್ಯೂಸ್ : ಲೋಕಸಭಾ ಚುನಾವಣೆಗೆ ತಯಾರಿ ನಡೆಯುತ್ತಿದ್ದು, ಈಗಾಗಲೇ ಕೆಲವು ಪಕ್ಷಗಳು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಸಮೀಕ್ಷೆಗಳೂ ಬಿಡುಗಡೆಯಾಗುತ್ತಿವೆ. ಈ ನಡುವೆ ಸಿಎಂ ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ ಅವರು 5 ಹೊಸ ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದಾರೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ 30 ಲಕ್ಷ ಹುದ್ದೆಗಳ ಭರ್ತಿ, ಪ್ರಶ್ನೆಪತ್ರಿಕೆ ಸೋರಿಕೆ ತಡೆಗೆ ಕಾನೂನು, ಡಿಪ್ಲೊಮಾ ಪದವೀಧರರಿಗೆ ಶಿಷ್ಯವೇತನ ಗಿಗ್ ಕಾರ್ಮಿಕರ ಭದ್ರತೆಗೆ ಕಾನೂನು ಸೇರಿದಂತೆ ವಿವಿಧ ಗ್ಯಾರಂಟಿಗಳನ್ನು ನೀಡುವುದಾಗಿ ಕಾಂಗ್ರೆಸ್ ನಾಯಕ ರಾಹುಲ್

ಲೋಕಸಭಾ ಚುನಾವಣೆಗೆ ಗ್ಯಾರಂಟಿ ಘೋಷಿಸಿದ ರಾಹುಲ್ Read More »

ಭಕ್ತಾಧಿಗಳಿಗೆ ಸಿಹಿ ಸುದ್ದಿ/ ಮೇ 10 ರಂದು ಯಾತ್ರಾರ್ಥಿಗಳಿಗಾಗಿ ತೆರೆಯಲಿದೆ ಬದರಿನಾಥ್-ಕೇದಾರನಾಥ ದೇವಾಲಯ

ಸಮಗ್ರ ನ್ಯೂಸ್: ಹನ್ನೊಂದನೇ ಜ್ಯೋತಿಲಿರ್ಂಗ ಶ್ರೀ ಕೇದಾರನಾಥ ಧಾಮದ ಬಾಗಿಲು ಈ ವರ್ಷ ಮೇ 10 ರಂದು ಬೆಳಗ್ಗೆ 7 ಗಂಟೆಗೆ ಯಾತ್ರಾರ್ಥಿಗಳಿಗಾಗಿ ತೆರೆಯಲಿದೆ ಎಂದು ಬದರಿನಾಥ್-ಕೇದಾರನಾಥ ದೇವಾಲಯ ಸಮಿತಿ ಪ್ರಕಟಿಸಿದೆ. ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿರುವ ಬದರಿನಾಥ ಧಾಮದ ಬಾಗಿಲು 6 ತಿಂಗಳ ಕಾಲ ಮುಚ್ಚಿರುತ್ತದೆ ಮತ್ತು 6 ತಿಂಗಳ ನಂತರ ತೆಪ್ರಿ ರಾಜ್ ದರ್ಬಾರ್‍ನಲ್ಲಿ ಬಾಗಿಲು ತೆರೆಯುವ ದಿನಾಂಕವನ್ನು ಘೋಷಿಸಲಾಗುತ್ತದೆ. ಇದಕ್ಕಾಗಿ ಮೊದಲಿಗೆ ಡಿಮ್ಮಿ ಧಾರ್ಮಿಕ ಕೇಂದ್ರ ಪಂಚಾಯತ್ ವತಿಯಿಂದ ಶ್ರೀ ಲಕ್ಷ್ಮೀನಾರಾಯಣ ದೇವಸ್ಥಾನದಿಂದ ಗಾನುಘಡ

ಭಕ್ತಾಧಿಗಳಿಗೆ ಸಿಹಿ ಸುದ್ದಿ/ ಮೇ 10 ರಂದು ಯಾತ್ರಾರ್ಥಿಗಳಿಗಾಗಿ ತೆರೆಯಲಿದೆ ಬದರಿನಾಥ್-ಕೇದಾರನಾಥ ದೇವಾಲಯ Read More »

ಸಂಕರ್ಷಣ ಶಾಲಗ್ರಾಮವು ಅಯೋಧ್ಯೆಯಿಂದ ಮಲ್ಪೆಯ ವಡಭಾಂಡೇಶ್ವರಕ್ಕೆ

ಸಮಗ್ರ ನ್ಯೂಸ್: ಅಯೋಧ್ಯೆಯಲ್ಲಿ ಬಾಲರಾಮನ ಪ್ರತಿಷ್ಠೆಯಾಗಿ ಕೆಲವೇ ದಿನಗಳಲ್ಲಿ ಉಡುಪಿಯ ಮಲ್ಪೆ ವಡಭಾಂಡೇಶ್ವರದ ಇತಿಹಾಸ ಪ್ರಸಿದ್ಧ ಬಲರಾಮನ ಸನ್ನಿಧಿಯೂ ನವೀಕರಣಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಉಭಯ ಸನ್ನಿಧಿಗಳ ಬಾಂಧವ್ಯದ ದ್ಯೋತಕವಾಗಿ ಶ್ರೀ ಪೇಜಾವರ ಶ್ರೀಗಳು ಶುಕ್ರವಾರದಂದು ಅಯೋಧ್ಯೆಯ ರಾಮನ ಪಾದದಲ್ಲಿ ಸಂಕರ್ಷಣ ಶಾಲಗ್ರಾಮವೊಂದನ್ನಿಟ್ಟು ಪವಿತ್ರ ಕಲಶೋದಕದಿಂದ ಅಭಿಷೇಕ ಸಹಿತ ಪೂಜೆ ಮಾಡಿ ವಡಭಾಂಡೇಶ್ವರದ ಬಲರಾಮನ ದಿವ್ಯ ಸನ್ನಿಧಿಗೆ ಕಳುಹಿಸಿಕೊಟ್ಟರು.

ಸಂಕರ್ಷಣ ಶಾಲಗ್ರಾಮವು ಅಯೋಧ್ಯೆಯಿಂದ ಮಲ್ಪೆಯ ವಡಭಾಂಡೇಶ್ವರಕ್ಕೆ Read More »