ರಾಷ್ಟ್ರೀಯ

ನಿಮ್ಮ ಮೊಬೈಲ್ ತುಂಬಾ ಬಿಸಿ ಆಗ್ತಾ ಇದ್ಯ? ಯೋಚ್ನೆ ಬೇಡ, ಇಲ್ಲಿದೆ ಟಿಪ್ಸ್

ಸಮಗ್ರ ನ್ಯೂಸ್: ಬೇಸಿಗೆಯಲ್ಲಿ ಫೋನ್ ಬಿಸಿಯಾಗಿದ್ದರೆ, ಅದು ಸೂರ್ಯನ ಶಾಖದ ಕಾರಣದಿಂದಾಗಿರಬಹುದು ಎಂದು ನಾವು ಅಂದುಕೊಳ್ಳುತ್ತೇವೆ. ಆದರೆ ಕೆಲವೊಮ್ಮೆ ಬ್ಯಾಟರಿ ಸೋರಿಕೆಯಾದರೂ ಫೋನ್ ಬಿಸಿಯಾಗಬಹುದು. ಕೆಲವೊಮ್ಮೆ ಇದು ವಿಕಿರಣದ ಕಾರಣದಿಂದಾಗಿರಬಹುದು. ಹಾಗಾದರೆ ಅದು ಏಕೆ ಬಿಸಿಯಾಗುತ್ತಿದೆ ಎಂಬುದನ್ನು ಮೊದಲು ತಿಳಿಯೋಣ. ಸ್ಮಾರ್ಟ್‌ಫೋನ್‌ ನ್ನು ನೇರ ಸೂರ್ಯನ ಬೆಳಕನ್ನು ತಪ್ಪಿಸಿ. ಫೋನ್ ನಲ್ಲಿ ಮಾತನಾಡದಿದ್ದರೂ ಬಿಸಿಲು ಬಿದ್ದರೆ ಬಿಸಿಯಾಗುತ್ತದೆ. ಅಂತಹ ಫೋನ್ ಸರಿಯಾಗಿ ಕೆಲಸ ಮಾಡದಿರಬಹುದು. ಆದ್ದರಿಂದ, ಸೂರ್ಯನ ಬೆಳಕನ್ನು ತಪ್ಪಿಸುವುದು ಅವಶ್ಯಕ. ಹೆಚ್ಚು ಹೊತ್ತು ಫೋನ್ ಬಳಸಿದರೆ […]

ನಿಮ್ಮ ಮೊಬೈಲ್ ತುಂಬಾ ಬಿಸಿ ಆಗ್ತಾ ಇದ್ಯ? ಯೋಚ್ನೆ ಬೇಡ, ಇಲ್ಲಿದೆ ಟಿಪ್ಸ್ Read More »

ಗ್ಯಾನವಾಪಿಯ ನೆಲಮಹಡಿಯಲ್ಲಿ ಹಿಂದುಗಳ ಪೂಜೆ/ ತಡೆ ನೀಡಲು ಸುಪ್ರೀಂ ನಿರಾಕರಣೆ

ಸಮಗ್ರ ನ್ಯೂಸ್: ಮಸೀದಿಯ ನೆಲಮಹಡಿಯಲ್ಲಿರುವ ವ್ಯಾಸ್ ಠಿಖಾನಾ ಎಂದೂ ಕರೆಯಲಾಗುವ ಜ್ಞಾನವಾಪಿ ಮಸೀದಿಯ ದಕ್ಷಿಣದ ಭಾಗದ ನೆಲಮಹಡಿಯಲ್ಲಿನ ಮೂರ್ತಿಗಳಿಗೆ ಹಿಂದುಗಳ ಪೂಜೆ ನಿಲ್ಲಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಇದರಿಂದ ಹಿಂದುಗಳ ಪೂಜೆಗೆ ಅವಕಾಶ ನೀಡಿರುವ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದು, ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದ ಸಮಿತಿಗೆ ಹಿನ್ನಡೆಯಾಗಿದೆ. ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಗ್ಯಾನವಾಪಿ ಮಸೀದಿ ಉಸ್ತುವಾರಿ ವಹಿಸಿರುವ ಅಂಜುಮನ್ ಇಂತೇಝಾಮಿಯಾ ಮಸೀದಿ ಸಮಿತಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಅಲಹಾಬಾದ್ ಹೈಕೋರ್ಟ್ ಆದೇಶ ಎತ್ತಿ ಹಿಡಿದ

ಗ್ಯಾನವಾಪಿಯ ನೆಲಮಹಡಿಯಲ್ಲಿ ಹಿಂದುಗಳ ಪೂಜೆ/ ತಡೆ ನೀಡಲು ಸುಪ್ರೀಂ ನಿರಾಕರಣೆ Read More »

ಬದಲಾಗಿದೆ ಕಾಶ್ಮೀರ/ ಕೇಳುತ್ತಿದೆ ಪ್ರವಾಸಿಗರ ಕಲರವ

ಸಮಗ್ರ ನ್ಯೂಸ್: ಭೂ ಲೋಕದ ಸ್ವರ್ಗ ಎಂದು ಹೆಸರಾಗಿರುವ ಕಾಶ್ಮೀರದಲ್ಲಿ ಕೆಲವು ವರ್ಷಗಳ ಹಿಂದೆ ಗುಂಡಿನ ಸದ್ದು ಮಾತ್ರ ಕೇಳಿಸುತ್ತಿದ್ದು, ಇದೀಗ ಈಗ ಅತಿಥಿಗಳ ಕಲರವ ಕೇಳಿಬರುತ್ತಿದೆ. ಕಣಿವೆ ರಾಜ್ಯಕ್ಕೆ ಈಗ ದಾಖಲೆಯ ಸಂಖ್ಯೆಯಲ್ಲಿ ಪ್ರವಾಸಿಗರ ಆಗಮನವಾಗುತ್ತಿದ್ದು, ಪ್ರವಾಸೋದ್ಯಮದ ಚಿತ್ರಣವೇ ಬದಲಾಗುತ್ತಿದೆ. ಕಾಶ್ಮೀರ ಪ್ರವಾಸೋದ್ಯಮ ಇಲಾಖೆಯಲ್ಲಿ ಬರೋಬ್ಬರಿ 12,000 ಹೋಮ್‍ಸ್ಟೇಗಳು ಬುಕ್ಕಿಂಗ್ ಆಗಿವೆ ಎಂಬುದೇ ಇಲ್ಲಿಗೆ ಪ್ರವಾಸಿಗರು ಎಷ್ಟು ಆಕರ್ಷಿತರಾಗುತ್ತಿದ್ದಾರೆ ಎಂಬುದಕ್ಕೆ ಸಾಕ್ಷಿ. ಇದಲ್ಲದೆ ಇಲ್ಲಿನ ಸ್ಥಳೀಯರೂ ಪ್ರವಾಸಿಗರನ್ನು ಆಕರ್ಷಿಸಲು ತಮ್ಮ ವಸತಿ ಸ್ಥಳಗಳಲ್ಲಿಯೇ ಹೋಮ್ ಸ್ಟೇ

ಬದಲಾಗಿದೆ ಕಾಶ್ಮೀರ/ ಕೇಳುತ್ತಿದೆ ಪ್ರವಾಸಿಗರ ಕಲರವ Read More »

ಭಾರತೀಯ ರಿಸರ್ವ್ ಬ್ಯಾಂಕಿನ 90ನೇ ಸಂಸ್ಥಾಪನಾ ದಿನ/ ವಿಶೇಷ ನಾಣ್ಯ ಬಿಡುಗಡೆ

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ, ಭಾರತೀಯ ರಿಸರ್ವ್ ಬ್ಯಾಂಕಿನ (ಆರ್ ಬಿಐ) 90ನೇ ಸಂಸ್ಥಾಪನಾ ದಿನದ ಅಂಗವಾಗಿ ವಿಶೇಷ ನಾಣ್ಯವನ್ನು ಬಿಡುಗಡೆಗೊಳಿಸಿದರು.ಈ ನಾಣ್ಯವು ಶೇ.99.99ರಷ್ಟು ಶುದ್ಧವಾದ ಬೆಳ್ಳಿಯಿಂದ ಮಾಡಲ್ಪಟ್ಟಿದ್ದು, ಅಂದಾಜು 40 ಗ್ರಾಂ ತೂಕ ಹೊಂದಿದೆ. ಇದು ಆರ್‍ಬಿಐನ ಶ್ರೀಮಂತ ಇತಿಹಾಸ ಹಾಗೂ 9 ದಶಕಗಳ ಸಾಧನೆಯನ್ನು ಪ್ರತಿಬಿಂಬಿಸುತ್ತದೆ. ಕಳೆದ ಒಂದು ದಶಕದಲ್ಲಿ RBI ಹಾಗೂ ತಮ್ಮ ಸರ್ಕಾರ ಕೈಗೊಂಡ ಕ್ರಮಗಳ ಫಲವಾಗಿ ಬ್ಯಾಂಕಿಂಗ್ ವಲಯ ಉತ್ತಮ ರೀತಿಯಲ್ಲಿ ಮುಂದಿನ ಹತ್ತು ವರ್ಷಗಳಲ್ಲಿ ಕೇಂದ್ರೀಯ ಬ್ಯಾಂಕ್

ಭಾರತೀಯ ರಿಸರ್ವ್ ಬ್ಯಾಂಕಿನ 90ನೇ ಸಂಸ್ಥಾಪನಾ ದಿನ/ ವಿಶೇಷ ನಾಣ್ಯ ಬಿಡುಗಡೆ Read More »

ಕೇಜ್ರಿವಾಲ್‍ಗೆ ಎಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನ/ ತಿಹಾರ್ ಜೈಲಿಗೆ ಶಿಫ್ಟ್

ಸಮಗ್ರ ನ್ಯೂಸ್: ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯ, ಅರವಿಂದ್ ಕೇಜ್ರಿವಾಲ್‍ಗೆ ಎಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಿ ಆದೇಶ ಹೊರಡಿಸಿದ್ದು, ಇದರ ಜೊತೆಗೆ ಬಿಗಿ ಭದ್ರತೆಯ ಮಧ್ಯೆ ತಿಹಾರ್ ಜೈಲಿಗೆ ಕರೆತರಲಾಗಿದೆ. ಬಂಧನದ ಸಮಯದಲ್ಲಿ ಓದುವ ಸಾಮಗ್ರಿಗಳಿಗಾಗಿ ವಿಶೇಷ ವಿನಂತಿ ಮಾಡಿದ್ದಾರೆ. ಭಗವದ್ಗೀತೆ, ರಾಮಾಯಣ ಮತ್ತು ನೀರಜಾ ಚೌಧರಿ ಅವರ “ಹೌ ಪ್ರೈಮ್ ಮಿನಿಸ್ಟರ್ ಡಿಸೈಡ್ಸ್” ಎಂಬ ಮೂರು ಪುಸ್ತಕಗಳನ್ನು ತಮ್ಮೊಂದಿಗೆ ಇಟ್ಟುಕೊಳ್ಳಲು ಅವರ ವಕೀಲರು ನ್ಯಾಯಾಲಯದಿಂದ ಅನುಮತಿ ಕೋರಿದ್ದಾರೆ. ಅವರು ಜೈಲಿನಲ್ಲಿದ್ದಾಗ ಅಗತ್ಯ ಔಷಧಿಗಳನ್ನು

ಕೇಜ್ರಿವಾಲ್‍ಗೆ ಎಪ್ರಿಲ್ 15 ರವರೆಗೆ ನ್ಯಾಯಾಂಗ ಬಂಧನ/ ತಿಹಾರ್ ಜೈಲಿಗೆ ಶಿಫ್ಟ್ Read More »

ಪ್ರೆಗ್ನೆನ್ಸಿ ವಿಚಾರದಲ್ಲಿ ನೆಟ್ಟಿಗರ ಪ್ರಶ್ನೆಗೆ ಉತ್ತರ ಕೊಟ್ಟ ಪರಿಣಿತಿ ಚೋಪ್ರಾ

ಸಮಗ್ರ ನ್ಯೂಸ್:‌ ಬಾಲಿವುಡ್ ನಟಿ ಪರಿಣಿತಿ ಚೋಪ್ರಾ ರವರು ‘ಅಮರ್ ಸಿಂಗ್ ಚಮ್ಕಿಲಾ’ ಸಿನಿಮಾದ ಪ್ರಚಾರ ಕಾರ್ಯಕ್ರಮದಲ್ಲಿ ತೊಡಗಿದ್ದು, ಇದರ ನಡುವೆ ಪರಿಣಿತಿ ಚೋಪ್ರಾ ಪ್ರೆಗ್ನೆನ್ಸಿ ಎಂಬ ಸುದ್ದಿ ಎಲ್ಲಾ ಕಡೆ ಹಬ್ಬಿದ್ದು, ಈ ವದಂತಿಗೆ ನಟಿ ಸ್ಪಷ್ಟನೆ ನೀಡಿದ್ದಾರೆ. ನಟಿ ಪರಿಣಿತಿ ಚೋಪ್ರಾ ‘ಅಮರ್ ಸಿಂಗ್ ಚಮ್ಕಿಲಾ’ ಚಿತ್ರದ ಸಂದರ್ಶನಕ್ಕೆ ಬರುವಾಗ ನಟಿ ಫಿಟೆಡ್ ಬಟ್ಟೆಯನ್ನು ಧರಿಸಿದ್ದರು. ಇದನ್ನು ನೋಡಿ ಚೋಪ್ರಾ ರವರು ಪ್ರೆಗ್ನೆನ್ಸಿ ಎಂಬ ಸುದ್ದಿ ಎಲ್ಲಾ ಕಡೆ ಹರಡಿತ್ತು. ಈ ವಿಷಯ ಅವರಿಗೆ

ಪ್ರೆಗ್ನೆನ್ಸಿ ವಿಚಾರದಲ್ಲಿ ನೆಟ್ಟಿಗರ ಪ್ರಶ್ನೆಗೆ ಉತ್ತರ ಕೊಟ್ಟ ಪರಿಣಿತಿ ಚೋಪ್ರಾ Read More »

ನವದೆಹಲಿ:ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಿಜೆಪಿ

ಸಮಗ್ರ ನ್ಯೂಸ್‌ : ರಾಹುಲ್ ಗಾಂಧಿ ವಿರುದ್ಧ ಬಿಜೆಪಿಯು ಚುನಾವಣಾ ಆಯೋಗಕ್ಕೆ ದೂರು ನೀಡಿರುವ ಘಟನೆ ನಡೆದಿದೆ. ಕೇಂದ್ರ ಚುನಾವಣಾ ಆಯೋಗದಲ್ಲಿ ಸರ್ಕಾರವು ತನ್ನದೇ ಆದ ಜನರನ್ನು ಹೊಂದಿದೆ ಮತ್ತು ಇವಿಎಂ ಇಲ್ಲದೆ ಚುನಾವಣೆಯನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಭಾಷಣ ಮಾಡಿದ್ದು,. ಇದರ ಜೊತೆಗೆ ಬಿಜೆಪಿ ಹಿರಿಯ ನಾಯಕ ಹರ್ದೀಪ್ ಸಿಂಗ್ ಪುರಿ ನೇತೃತ್ವದ ನಿಯೋಗ ದೇಶ ವಿರೋಧಿ ಹೇಳಿಕೆ ಎಂದು ವ್ಯಾಖ್ಯಾನಿಸಿ ದೂರು ನೀಡಿದೆ. ಕೇಜ್ರಿವಾಲ್ ಇಡಿ ಬಂಧನ ಖಂಡಿಸಿ ಭಾನುವಾರ ಇಂಡಿಯಾ ಒಕ್ಕೂಟ ದೆಹಲಿಯ

ನವದೆಹಲಿ:ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಿಜೆಪಿ Read More »

ದೆಹಲಿ: ದಲಿತ ಬಾಲಕ ಮೇಲ್ಜಾತಿ ವ್ಯಕ್ತಿಯ ನೀರಿನ ಬಕೆಟ್ ಮುಟ್ಟಿದ್ದಕ್ಕೆ ಹಲ್ಲೆ

ಸಮಗ್ರ ನ್ಯೂಸ್ : ಶಾಲೆಯಲ್ಲಿ ಹ್ಯಾಂಡ್ ಪಂಪ್ ಬಳಿ ಇರಿಸಲಾಗಿದ್ದ ಮೇಲ್ಜಾತಿ ವ್ಯಕ್ತಿಯ ನೀರಿನ ಬಕೆಟ್ ಅನ್ನು ಎಂಟು ವರ್ಷದ ದಲಿತ ಬಾಲಕ ಮುಟ್ಟಿದನು ಎಂಬ ಕಾರಣಕ್ಕೆ ಬಾಲಕನಿಗೆ ಥಳಿಸಿರುವ ಘಟನೆ ರಾಜಸ್ಥಾನದ ಅಲ್ವಾರ್‌ನ ಮಂಗಳೇಶಪುರ ಗ್ರಾಮದಲ್ಲಿ ನಡೆದಿದೆ. ನಾಲ್ಕನೇ ತರಗತಿ ಬಾಲಕ ಚಿರಾಗ್ ಎಂದು ಗುರುತಿಸಲಾಗಿದೆ. ರತಿರಾಮ್ ಠಾಕೂರ್ ಎಂಬ ಮೇಲ್ಜಾತಿಯ ವ್ಯಕ್ತಿ ಹ್ಯಾಂಡ್ ಪಂಪ್‌ನಿಂದ ಬಕೆಟ್‌ನಲ್ಲಿ ನೀರು ತುಂಬಿಸುತ್ತಿದ್ದನು. ಚಿರಾಗ್ ನೀರು ಕುಡಿಯಲು ಬಕೆಟ್ ಅನ್ನು ಸರಿಸಿದ್ದ. ಆತ ಮುಟ್ಟಿದ್ದಕ್ಕೆ ಕೋಪಗೊಂಡ ಠಾಕೂರ್, ಚಿರಾಗ್

ದೆಹಲಿ: ದಲಿತ ಬಾಲಕ ಮೇಲ್ಜಾತಿ ವ್ಯಕ್ತಿಯ ನೀರಿನ ಬಕೆಟ್ ಮುಟ್ಟಿದ್ದಕ್ಕೆ ಹಲ್ಲೆ Read More »

ಕಾಂಗ್ರೆಸ್ ಗೆ ರಿಲೀಫ್ ಕೊಟ್ಟ ಸುಪ್ರೀಂ/ ತೆರಿಗೆ ವಸೂಲಿಗೆ‌ ತಡೆ

ಸಮಗ್ರ ನ್ಯೂಸ್: ಆದಾಯ ತೆರಿಗೆ ಇಲಾಖೆ ನೀಡಿರುವ ನೋಟಿಸ್‌ ವಿಚಾರದಲ್ಲಿ ಕಾಂಗ್ರೆಸ್‌ಗೆ ಸುಪ್ರೀಂಕೋರ್ಟ್‌ನಿಂದ ಬಿಗ್ ರಿಲೀಫ್ ಸಿಕ್ಕಿದೆ ಕಾಂಗ್ರೆಸ್‌ ಪಕ್ಷದ ವಿರುದ್ಧ ಪ್ರತಿಕೂಲ ಕ್ರಮ ಕೈಗೊಳ್ಳದಂತೆ ಸುಪ್ರೀಂಕೋರ್ಟ್ ಮಹತ್ವದ ಸೂಚನೆ ನೀಡಿದೆ. ಲೋಕಸಭಾ ಎಲೆಕ್ಷನ್ ಹೊತ್ತಿನಲ್ಲಿ ಬಾಕಿ ಇರುವ ಕೋಟ್ಯಾಂತರ ರೂಪಾಯಿ ತೆರಿಗೆ ಪಾವತಿಸಲು IT ಇಲಾಖೆ ನೋಟಿಸ್‌ ನೀಡಿದ್ದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತ್ತು. ಕಾಂಗ್ರೆಸ್ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಚುನಾವಣೆಯ ಸಮಯದಲ್ಲಿ ಪಕ್ಷದ ವಿರುದ್ಧ ಪ್ರತಿಕೂಲ ಕ್ರಮ ಕೈಗೊಳ್ಳದಂತೆ ಹೇಳಿದೆ. ಸುಪ್ರೀಂಕೋರ್ಟ್ ಮಹತ್ವದ

ಕಾಂಗ್ರೆಸ್ ಗೆ ರಿಲೀಫ್ ಕೊಟ್ಟ ಸುಪ್ರೀಂ/ ತೆರಿಗೆ ವಸೂಲಿಗೆ‌ ತಡೆ Read More »

ನವದೆಹಲಿ: ಚುನಾವಣೆ ಮುಗಿಯುವರೆಗೆ ಕಾಂಗ್ರೆಸ್‌ ಪಕ್ಷದ ತೆರಿಗೆ ವಸೂಲಿ ಇಲ್ಲ| ಕೇಂದ್ರ ಭರವಸೆ

ಸಮಗ್ರ ನ್ಯೂಸ್: ಲೋಕಸಭಾ ಚುನಾವಣೆ ಮುಗಿಯುವರೆಗೂ ಕಾಂಗ್ರೆಸ್‌ ಪಕ್ಷ ಬಾಕಿ ಉಳಿಸಿಕೊಂಡಿರುವ ಸುಮಾರು 3,500 ಕೋಟಿ ರೂ. ತೆರಿಗೆ ವಸೂಲಿ ಮಾಡಲು ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಭರವಸೆ ನೀಡಿದೆ.‌ ಆದಾಯ ತೆರಿಗೆ ಇಲಾಖೆ ಒಟ್ಟು 3,567 ಕೋಟಿ ರೂ. ಬಾಕಿ ತೆರಿಗೆ ಪಾವತಿಸುವಂತೆ ನೀಡಿದ ನೋಟಿಸ್‌ ಪ್ರಶ್ನಿಸಿ ಕಾಂಗ್ರೆಸ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಇಂದು ನ್ಯಾ. ಬಿ.ವಿ.ನಾಗರತ್ನ ನೇತೃತ್ವದ ಪೀಠದ ಮುಂದೆ ವಿಚಾರಣೆಗೆ ಬಂದಿತು. ಈ ವೇಳೆ ಸಾಲಿಸಿಟರ್‌ ಜನರಲ್‌

ನವದೆಹಲಿ: ಚುನಾವಣೆ ಮುಗಿಯುವರೆಗೆ ಕಾಂಗ್ರೆಸ್‌ ಪಕ್ಷದ ತೆರಿಗೆ ವಸೂಲಿ ಇಲ್ಲ| ಕೇಂದ್ರ ಭರವಸೆ Read More »