ರಾಷ್ಟ್ರೀಯ

ತನ್ನ ಕ್ಯಾಬಿನ್ ಸಿಬ್ಬಂದಿಗೆ ಹೊಸ ನಿಯಮವನ್ನು ಜಾರಿ ಮಾಡಿದ ಏರ್ ಇಂಡಿಯಾ

ನವದೆಹಲಿ: ಟಾಟಾ ಒಡೆತನದ ಏರ್ ಇಂಡಿಯಾ ತನ್ನ ಕ್ಯಾಬಿನ್ ಸಿಬ್ಬಂದಿಗೆ ಹೊಸ ನಿಯಮವನ್ನು ಜಾರಿ ಮಾಡಿದೆ. ಹೊಸ ನಿಯಮದ ಪ್ರಕಾರ ಕೂದಲು ಉದುರಿರುವ ಪುರುಷ ಸಿಬ್ಬಂದಿ ಸಂಪೂರ್ಣವಾಗಿ ತಲೆ ಕೂದಲನ್ನು ತೆಗೆಸಿಕೊಂಡು ಕೆಲಸಕ್ಕೆ ಬರುವಂತೆ ಸೂಚಿಸಿದೆ. ಇನ್ನೂ ಮಹಿಳೆಯರು ಅರಳು ಇರುವ ಕಿವಿ ಓಲೆಗಳನ್ನು ಧರಿಸದಂತೆ ಸೂಚಿಸಿದೆ. ದಶಕಗಳ ಕಾಲದಿಂದ ವಿಮಾನ ಸೇವೆ ಒದಗಿಸುತ್ತಿರುವ ಏರ್ ಇಂಡಿಯಾ ತನ್ನ ಸಿಬ್ಬಂದಿ ವಸ್ತ್ರಸಂಹಿತೆ ಅಂತಾರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿಲ್ಲ ಎಂಬ ಕಾರಣಕ್ಕೆ ಅದನ್ನು ಬದಲಾಯಿಸಲು ತೀರ್ಮಾನಿಸಿದೆ. ತಲೆಯಲ್ಲಿ ಹೆಚ್ಚು ಕೂದಲು […]

ತನ್ನ ಕ್ಯಾಬಿನ್ ಸಿಬ್ಬಂದಿಗೆ ಹೊಸ ನಿಯಮವನ್ನು ಜಾರಿ ಮಾಡಿದ ಏರ್ ಇಂಡಿಯಾ Read More »

ಟಾಟಾ ತೆಕ್ಕೆಗೆ ಸೇರಿದ ಬಿಸ್ಲೇರಿ

ಸಮಗ್ರ ನ್ಯೂಸ್: ದೇಶದ ಹೆಮ್ಮೆಯ ಟಾಟಾ ಗ್ರೂಪ್ ರಮೇಶ್ ಜೆ ಚೌಹಾನ್ ಮಾಲೀಕತ್ವದ ಬಿಸ್ಲೇರಿ ಇಂಟರ್‌ನ್ಯಾಶನಲ್‌ ಕಂಪನಿಯನ್ನು ಖರೀದಿಸುವ ಪ್ರಕ್ರಿಯೆಯಲ್ಲಿದ್ಧು ಒಟ್ಟು 7,000 ಕೋಟಿ ರೂ.ಗೆ ಈ ವಹಿವಾಟು ನಡೆದಿದೆ ಎನ್ನಲಾಗಿದೆ.ಒಪ್ಪಂದದ ಭಾಗವಾಗಿ ಈಗಿನ ಆಡಳಿತ ಮಂಡಳಿಯು ಮುಂದಿನ ಎರಡು ವರ್ಷಗಳ ಕಾಲ ಮುಂದುವರಿಯಲಿದೆ. ಟಾಟಾ ಸಮೂಹವು ತನ್ನ ಟಾಟಾ ಕನ್‌ಸ್ಯೂಮರ್‌ ಪ್ರಾಡಕ್ಟ್ಸ್‌ (TCPL) ಕಂಪನಿಯ ಅಡಿಯಲ್ಲಿ ತನ್ನ ಪ್ಯಾಕೇಜ್ಡ್‌ ಮಿನರಲ್‌ ವಾಟರ್‌ ಮಾರಾಟವನ್ನು ನಡೆಸುತ್ತಿದೆ. ಹಿಮಾಲಯನ್‌ ಮತ್ತು ಟಾಟಾ ಕಾಪ್ಪರ್‌ ಪ್ಲಸ್‌ ವಾಟರ್‌, ಟಾಟಾ ಗ್ಲೊಕೊ+

ಟಾಟಾ ತೆಕ್ಕೆಗೆ ಸೇರಿದ ಬಿಸ್ಲೇರಿ Read More »

ಶಬರಿಮಲೆ ಯಾತಾರ್ಥಿಗಳಿಗೆ ವಿಮಾನದಲ್ಲಿ ಇರುಮುಡಿ ಕೊಂಡೊಯ್ಯಲು ಅನುಮತಿ….!!

ಸಮಗ್ರ ನ್ಯೂಸ್ : ಶಬರಿಮಲೆಗೆ ಭೇಟಿ ಕೊಡುವ ಯಾತ್ರಾರ್ಥಿಗಳಿಗೆ ಸೀಮಿತ ಅವಧಿಯ ಸಂದರ್ಭ ತಮ್ಮ ಬ್ಯಾಗೇಜ್ ಜೊತೆ ತೆಂಗಿನಕಾಯಿ ಕೊಂಡೊಯ್ಯಲು ಬ್ಯುರೊ ಆಫ್‌ ಸಿವಿಲ್‌ ಏವಿಯೇಷನ್‌ ಸೆಕ್ಯುರಿಟಿ (ಬಿಸಿಎಎಸ್‌) ಅನುಮತಿ ನೀಡಿದೆ. ಶಬರಿಮಲೆ ಋುತು ಪ್ರಾರಂಭವಾಗಿರುವ ಹಿನ್ನಲೆ ಶಬರಿಮಲೆಗೆ ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ಭೇಟಿ ನೀಡಲಿದ್ದು, ‘ಇರುಮುಡಿ’ ಹೊತ್ತು ಸಾಗುವ ಭಕ್ತರಿಗೆ ಈ ನಿಯಮದಿಂದ ಅನುಕೂಲವಾಗಲಿದೆ. ‘ಫೈರ್‌ ಸೇಫ್ಟಿ’ ಅಡಿಯಲ್ಲಿ ಕ್ಯಾಬಿನ್‌ ಬ್ಯಾಗ್‌ ಜತೆ ತೆಂಗಿನಕಾಯಿ ಒಯ್ಯಲು ಅವಕಾಶ ಇಲ್ಲ. ತಾತ್ಕಾಲಿಕವಾಗಿ ಈ ನಿಯಮದಲ್ಲಿ

ಶಬರಿಮಲೆ ಯಾತಾರ್ಥಿಗಳಿಗೆ ವಿಮಾನದಲ್ಲಿ ಇರುಮುಡಿ ಕೊಂಡೊಯ್ಯಲು ಅನುಮತಿ….!! Read More »

10 ಸಾವಿರ ಮಂದಿ ಗೂಗಲ್ ನಿಂದ ಹೊರಕ್ಕೆ| ಉದ್ಯೋಗಿಗಳ ವಜಾಕ್ಕೆ ಚಿಂತನೆ

ಸಮಗ್ರ ನ್ಯೂಸ್: ದೈತ್ಯ ಐಟಿ ಕಂಪೆನಿಗಳಲ್ಲಿ ಉದ್ಯೋಗಿಗಳ ವಜಾ ಪರ್ವ ಮುಂ‌ದುವರಿದಿದ್ದು ಇದೀಗ ಗೂಗಲ್‌ ಕಂಪೆನಿಯಿಂದ 10ಸಾವಿರ ಮಂದಿಯನ್ನು ಶೀಘ್ರವೇ ಕೆಲಸದಿಂದ ಕೈಬಿಡಲಾಗುತ್ತಿದೆ ಎಂದು ತಿಳಿದು ಬಂದಿದೆ. ಹೆಡ್ಜ್ ಫಂಡ್ ಬಿಲಿಯನೇರ್ ಕ್ರಿಸ್ಟೋಫರ್ ಹೊಹ್ನ್, ಗೂಗಲ್ ಮಾತೃಸಂಸ್ಥೆಯಾದ ಆಲ್ಫಾಬೆಟ್‌ಗೆ ಈ ಸಂಬಂಧ ಪತ್ರ ಬರೆದಿದ್ದು, ಉದ್ಯೋಗಿಗಳ ಸಂಖ್ಯೆ ಕಡಿತಗೊಳಿಸಲು ಸಲಹೆ ನೀಡಲಾಗಿದೆ. ಟೆಕ್ ಬೆಹೆಮೊತ್ ಗೂಗಲ್ ಕಾರ್ಯಕ್ಷಮತೆಯ ಸುಧಾರಣೆ ಸಂಬಂಧ ಯೋಜನೆಯೊಂದನ್ನು ಜಾರಿಗೊಳಿಸಲು ಮುಂದಾಗಿದ್ದು, ಇದರ ಫಲಿತಾಂಶವಾಗಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳಬೆಕಾಗುತ್ತದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

10 ಸಾವಿರ ಮಂದಿ ಗೂಗಲ್ ನಿಂದ ಹೊರಕ್ಕೆ| ಉದ್ಯೋಗಿಗಳ ವಜಾಕ್ಕೆ ಚಿಂತನೆ Read More »

ಶಾಸಕರನ್ನು ಅಪಹರಣಗೈದ ಪ್ರಕರಣ| ಬಿ.ಎಲ್.ಸಂತೋಷ್ ಗೆ ಲುಕ್‌ಔಟ್ ನೋಟಿಸ್

ಸಮಗ್ರ ನ್ಯೂಸ್: ಶಾಸಕರನ್ನು ಅಪಹರಿಸಿ ಅವರನ್ನು ಕೋಟಿ ಕೋಟಿ ಹಣಕ್ಕೆ ಖರೀದಿ ಮಾಡಲು ಪ್ರಯತ್ನಿಸಿದ್ದರು ಎಂಬ ಆರೋಪದಡಿ ತನಿಖೆ ನಡೆಸುತ್ತಿರುವ ತೆಲಂಗಾಣ ವಿಶೇಷ ತನಿಖಾ ತಂಡ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಸೇರಿದಂತೆ ಮತ್ತಿಬ್ಬರ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಿದೆ. ತೆಲಂಗಾಣದ ಆಡಳಿತಾರೂಢ ಟಿಆರ್‌‌ಎಸ್ ಶಾಸಕರನ್ನು ಅಪಹರಿಸಿ ಅವರನ್ನು ಕೋಟಿ ಕೋಟಿ ಹಣಕ್ಕೆ ಖರೀದಿ ಮಾಡಲು ಪ್ರಯತ್ನಿಸಿದ್ದರು ಎಂಬ ಆರೋಪದ ತನಿಖೆ ನಡೆಸುತ್ತಿರುವ ತೆಲಂಗಾಣ ವಿಶೇಷ ತನಿಖಾ ತಂಡ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ

ಶಾಸಕರನ್ನು ಅಪಹರಣಗೈದ ಪ್ರಕರಣ| ಬಿ.ಎಲ್.ಸಂತೋಷ್ ಗೆ ಲುಕ್‌ಔಟ್ ನೋಟಿಸ್ Read More »

ಏರ್ ಟೆಲ್ ಗ್ರಾಹಕರಿಗೆ ದರ‌ಏರಿಕೆ ಬಿಸಿ? ಇತರೆ ಕಂಪೆನಿಗಳು ದರ ಹೆಚ್ಚಿಸುವ ಸಾಧ್ಯತೆ

ಸಮಗ್ರ ನ್ಯೂಸ್: ಏರ್ ಟೆಲ್ ಬಳಕೆದಾರರಿಗೆ ದರ ಏರಿಕೆಯ ಆತಂಕ ಶುರುವಾಗಿದೆ. ಕಂಪೆನಿಯು ಈಗಾಗಲೇ ತನ್ನ ಎರಡು ಸರ್ಕಲ್‌ನಲ್ಲಿ ಶೇ.57ರಷ್ಟು ದರವನ್ನು ಏರಿಸಿದ್ದು ಉಳಿದ ಕಂಪನಿಗಳು ಏರ್‌ಟೆಲ್‌ ಕ್ರಮವನ್ನು ಅನುಸರಿಸುವ ಸಾಧ್ಯತೆಯಿದೆ. ಹರ್ಯಾಣ ಮತ್ತು ಒಡಿಶಾ ಸರ್ಕಲ್‌ನಲ್ಲಿ ಏರ್‌ಟೆಲ್‌ ಕನಿಷ್ಟ ರಿಚಾರ್ಚ್‌ ದರವನ್ನು ಶೇ.57ರಷ್ಟು ಏರಿಕೆ ಮಾಡಿದೆ. ಈ ಮೊದಲು 99 ರೂ. ರಿಚಾರ್ಜ್‌ ಮಾಡಿದರೆ 28 ದಿನಗಳ ವ್ಯಾಲಿಡಿಟಿ, 99 ರೂ. ಟಾಕ್‌ ಟೈಂ ಮತ್ತು 200 ಎಂಬಿ ಡೇಟಾ ಸಿಗುತ್ತಿತ್ತು. ಈಗ ಈ ಪ್ಯಾಕ್‌

ಏರ್ ಟೆಲ್ ಗ್ರಾಹಕರಿಗೆ ದರ‌ಏರಿಕೆ ಬಿಸಿ? ಇತರೆ ಕಂಪೆನಿಗಳು ದರ ಹೆಚ್ಚಿಸುವ ಸಾಧ್ಯತೆ Read More »

ಲಘು ವಿಮಾನ ಪತನ; 8 ಮಂದಿ ಸಾವು

ಸಮಗ್ರ ನ್ಯೂಸ್: ಲಘು ವಿಮಾನವೊಂದು ವಸತಿ ಪ್ರದೇಶದಲ್ಲಿ ಪತನಗೊಂಡು ಎಂಟು ಮಂದಿ ಮೃತಪಟ್ಟ ಘಟನೆ ಕೊಲಂಬಿಯಾದಲ್ಲಿ ನಡೆದಿದೆ. ಇಲ್ಲಿನ ಮೆಡೆಲಿನ್​​ನ ಒಲಯಾ ಹೆರೆರಾ ವಿಮಾನ ನಿಲ್ದಾಣದಿಂದ ಟೇಕ್​ಆಫ್​ ಆಗಿದ್ದ ಈ ವಿಮಾನದಲ್ಲಿ ಇಬ್ಬರು ಪೈಲೆಟ್​ಗಳು ಮತ್ತು ಆರು ಮಂದಿ ಪ್ರಯಾಣಿಕರು ಇದ್ದರು. ಏರ್​ಪೋರ್ಟ್​ನಿಂದ ಹೊರಟ ಕೆಲವೇ ಹೊತ್ತಲ್ಲಿ, ಸಮೀಪದ ವಸತಿ ಪ್ರದೇಶದಲ್ಲಿದ್ದ ಮನೆಯೊಂದಕ್ಕೆ ಡಿಕ್ಕಿ ಹೊಡೆದು ಪತನಗೊಂಡಿದೆ. ಆ ಮನೆಯ ಕೊನೇ ಫ್ಲೋರ್​ ಧ್ವಂಸಗೊಂಡಿದೆ. ಅದೃಷ್ಟಕ್ಕೆ ಮನೆಯಲ್ಲಿ ಇದ್ದವರಿಗಾಗಲೀ, ಪತನಗೊಂಡ ಸ್ಥಳದಲ್ಲಿ ಇದ್ದ ಇನ್ನಿತರರಿಗಾಗಲೀ ಯಾವುದೇ ತೊಂದರೆಯಾಗಿಲ್ಲ

ಲಘು ವಿಮಾನ ಪತನ; 8 ಮಂದಿ ಸಾವು Read More »

ರಸ್ನಾ ಗ್ರೂಪ್ ಸಂಸ್ಥಾಪಕ ಅಝೀಜ್ ಫಿರೋಜ್ಶಾ ವಿಧಿವಶ

ಸಮಗ್ರ ನ್ಯೂಸ್: ವಿಶ್ವದ ಅತಿದೊಡ್ಡ ತಂಪು ಪಾನೀಯವನ್ನು ಜನರಿಗೆ ಪರಿಚಯಿಸಿದ್ದ ರಸ್ನಾ ಗ್ರೂಪ್‌‌ನ ಸ್ಥಾಪಕ ಆರೀಝ್ ಪಿರೋಜ್ಶಾ ಖಂಬಟ್ಟಾ(85) ಅವರು ಇಂದು ವಿಧಿವಶರಾಗಿದ್ದಾರೆ. ಆರೀಝ್ ಅವರು ಭಾರತೀಯ ಕೈಗಾರಿಕೆ, ವ್ಯಾಪಾರ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಸಾಮಾಜಿಕ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರು ವಾಪಿಝ್ (ವರ್ಲ್ಡ್ ಅಲೈಯನ್ಸ್ ಆಫ್ ಪಾರ್ಸಿ ಇರಾನಿ ಜರ್ತೋಸ್ಟಿಸ್) ನ ಮಾಜಿ ಅಧ್ಯಕ್ಷರಾಗಿ ಮತ್ತು ಅಹಮದಾಬಾದ್ ಪಾರ್ಸಿ ಪಂಚಾಯತ್ ನ ಹಿಂದಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ತಂಪು ಪಾನೀಯಗಳಲ್ಲಿ ಆರೀಝ್ ಅವರ ಬ್ರಾಂಡ್ ರಸ್ನಾ

ರಸ್ನಾ ಗ್ರೂಪ್ ಸಂಸ್ಥಾಪಕ ಅಝೀಜ್ ಫಿರೋಜ್ಶಾ ವಿಧಿವಶ Read More »

ಇಂಡೋನೇಷ್ಯಾದಲ್ಲಿ ಪ್ರಬಲ‌ ಭೂಕಂಪ| 44 ಜನ ಸಾವು, 300ಕ್ಕೂ ಹೆಚ್ಚು ಮಂದಿ ಗಂಭೀರ

ಸಮಗ್ರ ನ್ಯೂಸ್: ಇಂಡೋನೇಷ್ಯಾದ ಪಶ್ಚಿಮ ಜಾವಾ ದ್ವೀಪದಲ್ಲಿ ಭಾರೀ ಭೂಕಂಪ ಸಂಭವಿಸಿದೆ. ಇಲ್ಲಿನ ಸಾಸಿಯಾಜೂರ್ ಪ್ರದೇಶದಲ್ಲಿ 49 ಸೆಕೆಂಡುಗಳ ಕಾಲ ಭೂಮಿ ಕಂಪಿಸಿದ್ದು, ಈ ಭೂಕಂಪದಲ್ಲಿ ಕನಿಷ್ಠ 44 ಜನರು ಸಾವನ್ನಪ್ಪಿದ್ದಾರೆ ಮತ್ತು ಸುಮಾರು 300 ಜನರು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯಲ್ಲಿ ಹಲವು ಆಸ್ತಿಪಾಸ್ತಿ‌ ನಷ್ಟ ಉಂಟಾಗಿರುವ ಸಾಧ್ಯತೆ‌ ಇದ್ದು ಗಾಯಾಳುಗಳನ್ನ ಆಸ್ಪತ್ರೆಗೆ ಸ್ಥಳಾಂತರಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಭೂಕಂಪದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 6.9 ರಿಂದ 5.6 ರ ನಡುವೆ ಇತ್ತು. ಭೂಕಂಪದಿಂದಾಗಿ ಸಾವಿರಾರು ಮನೆಗಳು

ಇಂಡೋನೇಷ್ಯಾದಲ್ಲಿ ಪ್ರಬಲ‌ ಭೂಕಂಪ| 44 ಜನ ಸಾವು, 300ಕ್ಕೂ ಹೆಚ್ಚು ಮಂದಿ ಗಂಭೀರ Read More »

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ| ನ.22ರಿಂದ ಮಳೆ‌ ಸಾಧ್ಯತೆ

ಸಮಗ್ರ ನ್ಯೂಸ್: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಈ ಹಿನ್ನೆಲೆ ನ.22 ರಿಂದ ರಾಜ್ಯದಲ್ಲಿ ಮತ್ತೆ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಬೆಂಗಳೂರು, ಬೆಂ,ಗ್ರಾಮಾಂತರ, ಮಂಡ್ಯ, ರಾಮನಗರ, ಮೈಸೂರು , ತುಮಕೂರು, ವಿಜಯಪುರ ಹಾಗೂ ಹಾವೇರಿ ಸೇರಿ ಇತರ ಜಿಲ್ಲೆಗಳಲ್ಲಿ ನ.22 ರಿಂದ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದಲ್ಲಿ ಚಳಿ ಕೂಡ ಏರಿಕೆಯಾಗಿದ್ದು, ಬೆಂಗಳೂರು

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ| ನ.22ರಿಂದ ಮಳೆ‌ ಸಾಧ್ಯತೆ Read More »