ರಾಷ್ಟ್ರೀಯ

ಗುಜರಾತ್‍ನ ಅತೀ ಉದ್ದದ ಸುದರ್ಶನ್ ಕೇಬಲ್ ಸೇತುವೆ ಉದ್ಘಾಟಿಸಿದ ಮೋದಿ

ಸಮಗ್ರ ನ್ಯೂಸ್: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಗುಜರಾತ್ ಪ್ರವಾಸದಲ್ಲಿದ್ದು, ಈ ಸಂದರ್ಭದಲ್ಲಿ ಗುಜರಾತ್‍ನ ಅತಿ ಉದ್ದದ ಸುದರ್ಶನ್ ಕೇಬಲ್ ಸೇತುವೆಯನ್ನು ಉದ್ಘಾಟಿಸಿದ್ದಾರೆ. ಈ 2.5 ಕಿಮೀ ಉದ್ದದ ಸೇತುವೆಯು ಭಾರತದಲ್ಲಿಯೇ ಅತಿ ಉದ್ದದ ಕೇಬಲ್ ಸೇತುವೆಯಾಗಿದೆ. ಸುದರ್ಶನ್ ಸೇತು ಸೇತುವೆಯನ್ನು ಓಖಾ-ಬೆಟ್ ದ್ವಾರಕಾ ಸಿಗ್ರೇಚರ್ ಸೇತುವೆ ಎಂದೂ ಕರೆಯಲಾಗುತ್ತದ್ದು, ಸುಮಾರು 980 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ. ದ್ವಾರಕಾದೀಶ ದೇವಸ್ಥಾನಕ್ಕೆ ಭೇಟಿ ನೀಡುವವರಿಗೆ ಈ ಸೇತುವೆ ಬಹಳ ಮುಖ್ಯ. ಈ ಅವಧಿಯಲ್ಲಿ ಪ್ರಧಾನಿಯವರು […]

ಗುಜರಾತ್‍ನ ಅತೀ ಉದ್ದದ ಸುದರ್ಶನ್ ಕೇಬಲ್ ಸೇತುವೆ ಉದ್ಘಾಟಿಸಿದ ಮೋದಿ Read More »

ಅನಪೇಕ್ಷಿತ ಕರೆಗಳ ಹಾವಳಿ/ ಕೇಂದ್ರದಿಂದ ಕಾಲಿಂಗ್ ನೇಮ್ ಪ್ರೆಸೆಂಟೇಷನ್ ವ್ಯವಸ್ಥೆ ಜಾರಿಗೆ

ಸಮಗ್ರ ನ್ಯೂಸ್: ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್)ವು, ಅನಪೇಕ್ಷಿತ (ಸ್ಪ್ಯಾಮ್) ಕರೆಗಳ ಹಾವಳಿಯನ್ನು ಹತ್ತಿಕ್ಕುವ ಉದ್ದೇಶದಿಂದ, ಅಪರಿಚಿತರು ಕರೆ ಮಾಡಿದಾಗ ಅವರ ಹೆಸರು ಮೊಬೈಲ್ ಸ್ಕ್ರೀನ್‍ಗಳಲ್ಲಿ ಬಿತ್ತರಗೊಳ್ಳುವಂತೆ ಮಾಡುವ ವ್ಯವಸ್ಥೆ ಜಾರಿಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಈಗಾಗಲೇ ಖಾಸಗಿಯಾಗಿ ಟ್ರೂ ಕಾಲರ್‍ನಂತಹುಗಳು ಇಂತಹ ಸೇವೆಯನ್ನು ಒದಗಿಸುತ್ತಿವೆ. ಕಾಲಿಂಗ್ ನೇಮ್ ಪ್ರೆಸೆಂಟೇಷನ್ (ಕರೆ ಮಾಡುವವರ ಹೆಸರು ಪ್ರಸ್ತುತಿ) ಎಂಬ ಸೌಲಭ್ಯ ಇದಾಗಿದೆ. ದೇಶದ ಎಲ್ಲ ಮೊಬೈಲ್ ನೆಟ್‍ವರ್ಕ್‍ಗಳಲ್ಲೂ ಇದನ್ನು ಜಾರಿಗೆ ತರಲು ಟ್ರಾಯ್ ಸಲಹೆ ಮಾಡಿದೆ.

ಅನಪೇಕ್ಷಿತ ಕರೆಗಳ ಹಾವಳಿ/ ಕೇಂದ್ರದಿಂದ ಕಾಲಿಂಗ್ ನೇಮ್ ಪ್ರೆಸೆಂಟೇಷನ್ ವ್ಯವಸ್ಥೆ ಜಾರಿಗೆ Read More »

ಕಾಸ್‌ಗಂಜ್‌ನಲ್ಲಿ ಭೀಕರ ಅಪಘಾತ|ಟ್ರ್ಯಾಕ್ಟರ್ ಟ್ರಾಲಿಯಲ್ಲಿದ್ದ 22 ಜನ ದುರ್ಮರಣ

ಸಮಗ್ರ ನ್ಯೂಸ್: ಉತ್ತರ ಪ್ರದೇಶದ ಕಾಸ್‌ಗಂಜ್‌ನಲ್ಲಿ ಅತಿವೇಗದ ಟ್ರ್ಯಾಕ್ಟರ್ ಟ್ರಾಲಿಯು ನಿಯಂತ್ರಣ ಕಳೆದುಕೊಂಡು ಕೊಳಕ್ಕೆ ಉರುಳಿ ಬಿದ್ದು ಏಳು ಮಕ್ಕಳು ಮತ್ತು ಎಂಟು ಮಹಿಳೆಯರು ಸೇರಿದಂತೆ ಕನಿಷ್ಠ 22 ಜನರು ಸಾವಿಗೀಡಾಗಿದ್ದಾರೆ. ಗಂಗಾ ನದಿಯಲ್ಲಿ ಪುಣ್ಯಸ್ನಾನ ಮಾಡಲು ಭಕ್ತರನ್ನು ಕದರಗಂಜ್ ಘಾಟ್‌ಗೆ ಕರೆದೊಯ್ಯುತ್ತಿದ್ದ ವಾಹನ ಅಪಘಾತಕ್ಕೀಡಾಗಿದೆ. ಈ ಘಟನೆಯು ಪಟಿಯಾಲಿ ಕೊಟ್ವಾಲಿ ಪ್ರದೇಶದ ದರಿಯಾವ್‌ಗಂಜ್ ನಲ್ಲಿ ನಡೆದಿದೆ. ಈ ಘಟನೆಯಲ್ಲಿ ಸುಮಾರು 20 ಮಂದಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಘಟನೆಯ ಬಗ್ಗೆ ನಮಗೆ

ಕಾಸ್‌ಗಂಜ್‌ನಲ್ಲಿ ಭೀಕರ ಅಪಘಾತ|ಟ್ರ್ಯಾಕ್ಟರ್ ಟ್ರಾಲಿಯಲ್ಲಿದ್ದ 22 ಜನ ದುರ್ಮರಣ Read More »

ಮಳೆ ಬರಬಹುದು, ಬೇಗ ಮನೆ ಸೇರಿಕೊಳ್ಳಿ! ಇಲ್ಲಿದೆ ವೆದರ್ ಅಪ್ಡೇಟ್

ಸಮಗ್ರ ನ್ಯೂಸ್: ಇಂದು ದೇಶದ ಹಲವು ರಾಜ್ಯಗಳಲ್ಲಿ ಮಳೆ ಮತ್ತು ಆಲಿಕಲ್ಲು ಬೀಳಲಿದೆ. ಭಾರತೀಯ ಹವಾಮಾನ ಇಲಾಖೆ (IMD) ಪ್ರಕಾರ ದೆಹಲಿ, ಹರಿಯಾಣ ಮತ್ತು ಪಂಜಾಬ್ ಸೇರಿದಂತೆ ಉತ್ತರ ಭಾರತದ ವಿವಿಧ ಭಾಗಗಳಲ್ಲಿ ಮುಂದಿನ ಒಂದು ವಾರ ಹವಾಮಾನ ವೈಪರೀತ್ಯದ ಪ್ರಭಾವ ಕಾಣಿಸಿಕೊಳ್ಳಲಿದೆ. ಹವಾಮಾನ ಇಲಾಖೆ ಪ್ರಕಾರ, ಫೆಬ್ರವರಿ 26 ಮತ್ತು 27 ರಂದು ಮಧ್ಯ ಭಾರತ ಮತ್ತು ಪಶ್ಚಿಮ ಹಿಮಾಲಯ ಪ್ರದೇಶಗಳಲ್ಲಿ ಭಾರೀ ಮಳೆ ಮತ್ತು ಆಲಿಕಲ್ಲು ಚಟುವಟಿಕೆಗಳು ಕಂಡುಬರುತ್ತವೆ. ಅಲ್ಲದೆ, ಹವಾಮಾನ ವೈಪರೀತ್ಯದ ಪರಿಣಾಮದಿಂದಾಗಿ,

ಮಳೆ ಬರಬಹುದು, ಬೇಗ ಮನೆ ಸೇರಿಕೊಳ್ಳಿ! ಇಲ್ಲಿದೆ ವೆದರ್ ಅಪ್ಡೇಟ್ Read More »

ಕಾಂಗ್ರೆಸ್ ಗ್ಯಾರಂಟಿ/ 27ಕ್ಕೆ ತೆಲಂಗಾಣದಲ್ಲಿ ಎರಡು ಗ್ಯಾರಂಟಿ ಜಾರಿ

ಸಮಗ್ರ ನ್ಯೂಸ್: ತೆಲಂಗಾಣ ಕಾಂಗ್ರೆಸ್ ಚುನಾವಣೆ ಪೂರ್ವದಲ್ಲಿ ಭರವಸೆ ನೀಡಿದ್ದ ಗ್ಯಾರಂಟಿಗಳ ಪೈಕಿ ಎರಡನ್ನು ಫೆ.27ರ ಶುಕ್ರವಾರ ಜಾರಿಗೊಳಿಸಲಿದೆ. 500 ರು.ಗೆ ಅಡುಗೆ ಅನಿಲ ಹಾಗೂ 200 ಯುನಿಟ್ ಉಚಿತ ವಿದ್ಯುತ್ ಯೋಜನೆಗಳನ್ನು ಜಾರಿ ಮಾಡಲಾಗುತ್ತಿದ್ದು, ಇದರ ಉದ್ಘಾಟನೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಬರಲಿದ್ದಾರೆ ಎಂದು ಮುಖ್ಯಮಂತ್ರಿ ರೇವಂತ ರೆಡ್ಡಿ ಹೇಳಿದ್ದಾರೆ. ಈಗಾಗಲೇ ಕರ್ನಾಟಕದ ರೀತಿ ತೆಲಂಗಾಣದಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಜಾರಿ ಮಾಡಲಾಗಿದೆ.

ಕಾಂಗ್ರೆಸ್ ಗ್ಯಾರಂಟಿ/ 27ಕ್ಕೆ ತೆಲಂಗಾಣದಲ್ಲಿ ಎರಡು ಗ್ಯಾರಂಟಿ ಜಾರಿ Read More »

ಇಸ್ರೋದ 2ನೇ ಸ್ಪೇಸ್‍ಪೋರ್ಟ್/ ಫೆ.28ರಂದು ಪ್ರಧಾನಿ ಮೋದಿಯಿಂದ ಶಿಲಾನ್ಯಾಸ

ಸಮಗ್ರ ನ್ಯೂಸ್: ತಮಿಳುನಾಡಿನ ತೂತ್ತುಕುಡಿ ಜಿಲ್ಲೆಯ ಕುಲಶೇಖರಪಟ್ಟಿಣಂನಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ)ಯ 2ನೇ ಸ್ಪೇಸ್‍ಪೋರ್ಟನ್ನು ನಿರ್ಮಾಣ ಮಾಡಲು ಯೋಜಿಸಲಾಗಿದ್ದು, ಫೆ.28ರಂದು ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಲಿದ್ದಾರೆ. ಸಣ್ಣಗಾತ್ರದ ಉಪಗ್ರಹ ಉಡಾವಣಾ ವಾಹಕಗಳನ್ನು ಉಡಾವಣೆ ಮಾಡುವುದಕ್ಕಾಗಿ ಈ ಹೊಸ ಸ್ಪೇಸ್‍ಪೋರ್ಟನ್ನು ಬಳಕೆ ಮಾಡಲಾಗುತ್ತದ್ದು, ಇದು ಮುಂದಿನ 2 ವರ್ಷದಲ್ಲಿ ನಿರ್ಮಾಣವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತೂತ್ತುಕುಡಿ ಜಿಲ್ಲೆಯ ಕುಲಶೇಖರಪಟ್ಟಿಣಂ ಮತ್ತು ಸಥಾನುಕುಲಂ ತಾಲೂಕುಗಳ ಪಡುಕಪಟ್ಟು, ಪಲ್ಲಕುರಿಚಿ ಮತ್ತು ಮಾತವಾನ್ ಕುರಿಚಿ ಗ್ರಾಮಗಳಿಗೆ ಸೇರಿದ 2,233

ಇಸ್ರೋದ 2ನೇ ಸ್ಪೇಸ್‍ಪೋರ್ಟ್/ ಫೆ.28ರಂದು ಪ್ರಧಾನಿ ಮೋದಿಯಿಂದ ಶಿಲಾನ್ಯಾಸ Read More »

ಬೈಕ್ ಟ್ಯಾಕ್ಸಿಗೆ ಕೇಂದ್ರ ಅಸ್ತು/ ಆಟೋ ಚಾಲಕರ ಉಗ್ರ ಹೋರಾಟದ ಎಚ್ಚರಿಕೆ

ಸಮಗ್ರ ನ್ಯೂಸ್: ಬೈಕ್ ಟ್ಯಾಕ್ಸಿ ವಿರುದ್ಧ ಆಟೋ ಟ್ಯಾಕ್ಸಿ ಚಾಲಕರು ಜಗಳ ಮುಂದುವರಿದಿದ್ದು ಈ ಹಂತದಲ್ಲಿ ಕೆಲವು ಅಗ್ರಿಗೇಟರ್ ಕಂಪನಿಗಳು ಕೇಂದ್ರ ಸರ್ಕಾರದ ಮೊರೆ ಹೋಗಿದ್ದು, ಇದೀಗ ಕೇಂದ್ರ ಸರ್ಕಾರ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ನಡೆಸಲು ಒಪ್ಪಿಗೆ ನೀಡಿದೆ. ವೈಟ್ ಬೋಡ್‍ರ್ನಲ್ಲಿ ಬೈಸಿಕಲ್ ಟ್ಯಾಕ್ಸಿ ನಡೆಸಬಹುದು. ರಾಜ್ಯ ಸಾರಿಗೆ ಇಲಾಖೆ ಅನುಮತಿ ನೀಡಬಹುದು ಎಂದು ಕೇಂದ್ರ ಸಾರಿಗೆ ಇಲಾಖೆ ರಾಜ್ಯ ಸಾರಿಗೆ ಇಲಾಖೆಗೆ ತಿಳಿಸಿದೆ.ಇದು ಆಟೋ ಕ್ಯಾಬ್ ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ರಾಜ್ಯ ಸಾರಿಗೆ ಇಲಾಖೆ ಯಾವುದೇ

ಬೈಕ್ ಟ್ಯಾಕ್ಸಿಗೆ ಕೇಂದ್ರ ಅಸ್ತು/ ಆಟೋ ಚಾಲಕರ ಉಗ್ರ ಹೋರಾಟದ ಎಚ್ಚರಿಕೆ Read More »

ಏಕರೂಪ ನಾಗರಿಕ ಸಂಹಿತೆ/ ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯಿದೆ ರದ್ದುಗೊಳಿಸಿದ ಅಸ್ಸಾಂ

ಸಮಗ್ರ ನ್ಯೂಸ್: ಅಸ್ಸಾಂ ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯಿದೆ, 1935 ಅನ್ನು ಅಸ್ಸಾಂ ಕ್ಯಾಬಿನೆಟ್ ರದ್ದುಗೊಳಿಸುವ ಮೂಲಕ ಏಕರೂಪ ನಾಗರಿಕ ಸಂಹಿತೆಯ ಅನುಷ್ಠಾನದಲ್ಲಿ ಪ್ರಮುಖ ಹೆಜ್ಜೆಯನ್ನು ಇಟ್ಟಿದೆ, ಮುಸ್ಲಿಂ ವಿವಾಹಗಳು ಮತ್ತು ವಿಚ್ಛೇದನಗಳಿಗೆ ಸಂಬಂಧಿಸಿದ ಎಲ್ಲಾ ಅಂಶಗಳು ಈಗ ವಿಶೇಷ ವಿವಾಹ ಕಾನೂನಿಗೆ ಒಳಪಟ್ಟಿವೆ ಎನ್ನಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಅಸ್ಸಾಂ ಸಚಿವ ಜಯಂತ ಮಲ್ಲಾ ಬರುವಾ, ಅಸ್ಸಾಂ ಕ್ಯಾಬಿನೆಟ್ ಈ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದ್ದಾರೆ. ಅಸ್ಸಾಂ ವಿಧಾನಸಭೆ ಅಧಿವೇಶನ ಫೆ.28ರವರೆಗೆ

ಏಕರೂಪ ನಾಗರಿಕ ಸಂಹಿತೆ/ ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ನೋಂದಣಿ ಕಾಯಿದೆ ರದ್ದುಗೊಳಿಸಿದ ಅಸ್ಸಾಂ Read More »

ಬಿಜೆಪಿ ಸರ್ಕಾರದ ವಿರುದ್ಧದ ಅಪಪ್ರಚಾರ/ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್‍ಗೆ ಕೋರ್ಟ್ ಸಮನ್ಸ್

ಸಮಗ್ರ ನ್ಯೂಸ್: ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ವಿಧಾನಸಭೆಯ ಚುನಾವಣೆಯ ವೇಳೆ ಅಪಪ್ರಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಸಿಎಂ ಡಿಕೆ ಶಿವಕುಮಾರ್‍ಗೆ ಕೋರ್ಟ್ ಸಮನ್ಸ್ ಜಾರಿ ಮಾಡಿದೆ. ಸರ್ಕಾರದ ವಿರುದ್ಧ ಅಪಪ್ರಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ವಿರುದ್ಧ ಬಿಜೆಪಿ ಖಾಸಗಿ ದೂರು ನೀಡಿತ್ತು. ಈ ದೂರಿನ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಮಾರ್ಚ್ 28ಕ್ಕೆ ಖುದ್ದು ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿದೆ. ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ ವಿರುದ್ಧ ಕಾಂಗ್ರೆಸ್ 40%

ಬಿಜೆಪಿ ಸರ್ಕಾರದ ವಿರುದ್ಧದ ಅಪಪ್ರಚಾರ/ ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್‍ಗೆ ಕೋರ್ಟ್ ಸಮನ್ಸ್ Read More »

ಭಾರತೀಯ ನೌಕಾಪಡೆಯ ಬಲ ಹೆಚ್ಚಳ/ 200 ಬ್ರಹ್ಮೋಸ್ ಕ್ಷಿಪಣಿಗಳ ಖರೀದಿಗೆ ಭದ್ರತೆ ಕುರಿತ ಸಂಪುಟ ಸಮಿತಿ ಅನುಮೋದನೆ

ಸಮಗ್ರ ನ್ಯೂಸ್: ಕೇಂದ್ರ ಸರ್ಕಾರವು ಭಾರತೀಯ ನೌಕಾಪಡೆಯ ಬಲ ಹೆಚ್ಚಿಸಲು ಮಹತ್ವದ ನಿರ್ಧಾರ ಕೈಗೊಂಡಿದ್ದು, 19,000 ಕೋಟಿ ವೆಚ್ಚದಲ್ಲಿ 200 ಬ್ರಹ್ಮಸ್ ಕ್ಷಿಪಣಿಗಳ ಖರೀದಿಗೆ ಭದ್ರತೆ ಕುರಿತ ಸಂಪುಟ ಸಮಿತಿ ಅನುಮೋದನೆ ನೀಡಿದೆ. ಸಮುದ್ರ ಪ್ರದೇಶವನ್ನು ಉತ್ತಮವಾಗಿ ನಿಯಂತ್ರಿಸಲು ಮತ್ತು ಯಾವುದೇ ಕಾರ್ಯಾಚರಣೆಗೆ ಸಿದ್ಧವಾಗಿರಲು ಭಾರತೀಯ ನೌಕಾಪಡೆಗೆ ಇದು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ. ಮಾರ್ಚ್ ಕೊನೆಯ ವಾರದಲ್ಲಿ ಬ್ರಹ್ಮಸ್ ಏರೋಸ್ಪೇಸ್ ಮತ್ತು ಕೇಂದ್ರ ಸರ್ಕಾರವು ಕ್ಷಿಪಣಿಗಳ ಖರೀದಿಗೆ ಒಪ್ಪಂದಕ್ಕೆ ಸಹಿ ಹಾಕಲಿದೆ ಎಂದು ಉನ್ನತ ಮೂಲಗಳು

ಭಾರತೀಯ ನೌಕಾಪಡೆಯ ಬಲ ಹೆಚ್ಚಳ/ 200 ಬ್ರಹ್ಮೋಸ್ ಕ್ಷಿಪಣಿಗಳ ಖರೀದಿಗೆ ಭದ್ರತೆ ಕುರಿತ ಸಂಪುಟ ಸಮಿತಿ ಅನುಮೋದನೆ Read More »