ರಾಷ್ಟ್ರೀಯ

ಕಾರಿನ ಚಕ್ರದಂತೆ ರೈಲಿನ ಟೈಯರ್ ಅನ್ನೂ ಬದಲಾಯಿಸ್ತಾರಂತೆ! ಹೇಗೆ ಗೊತ್ತಾ?

ಸಮಗ್ರ ನ್ಯೂಸ್: ನಾವೆಲ್ಲಾ ಸಾಮನ್ಯವಾಗಿ ಬೈಕ್, ಕಾರಿನ ಚಕ್ರಗಳು ಹಾನಿಯಾದಾಗ ಅದನ್ನು ಬದಲಾಯಿಸಲಾಗುತ್ತದೆ ಎಂಬುದನ್ನು ಕೇಳಿರುತ್ತೇವೆ, ಮತ್ತು ನೋಡಿರುತ್ತೇವೆ. ಆದ್ರೆ ರೈಲಿನ ಚಕ್ರವನ್ನು ಸಹ ಚೇಂಜ್ ಮಾಡ್ತಾರೆ ಅನ್ನೋದು ನಿಮಗೆ ಗೊತ್ತಾ? ಹಾಗಿದ್ರೆ ಯಾವರೀತಿ ಚೇಂಜ್ ಮಾಡ್ತಾರೆ ಅನ್ನೋದನ್ನು ತಿಳಿದುಕೊಳ್ಳಬೇಕಾ? ಹಾಗಾದ್ರೆ ಈ ಕೆಳಗಿನ ಮಾಹಿತಿಯನ್ನು ಓದಿ. ಕಾರುಗಳು ಮತ್ತು ಬಸ್‌ಗಳಂತೆ ರೈಲುಗಳಲ್ಲಿ ಸಹ ಕಾಲಕಾಲಕ್ಕೆ ಅಧಿಕಾರಿಗಳು ಸೇವೆ ಸಲ್ಲಿಸುತ್ತಾರೆ. ಅಂದರೆ ಕಂಟೇನರ್‌ನ ಹಾನಿಗೊಳಗಾದ ಭಾಗವನ್ನು ಸರಿಪಡಿಸುತ್ತಾರೆ. ಅದೇ ರೀತಿ ರೈಲಿನ ಚಕ್ರಗಳನ್ನು ಸಹ ಬದಲಾಯಿಸಲಾಗುತ್ತದೆ. ರೈಲುಗಳಲ್ಲಿ […]

ಕಾರಿನ ಚಕ್ರದಂತೆ ರೈಲಿನ ಟೈಯರ್ ಅನ್ನೂ ಬದಲಾಯಿಸ್ತಾರಂತೆ! ಹೇಗೆ ಗೊತ್ತಾ? Read More »

ಒಡಿಶಾ: ರಾಶಿರಾಶಿ ಹೆಣಗಳ ನಡುವೆ ಉಸಿರು ಹಿಡಿದು‌ ಬಿದ್ದಿದ್ದ ಮಗನಿಗೆ ಪುನರ್ಜನ್ಮ ನೀಡಿದ ತಂದೆ!! ತಂದೆಯ ಆ ನಂಬಿಕೆ ಸುಳ್ಳಾಗಲಿಲ್ಲ! ಇಲ್ಲಿದೆ ಕಣ್ಣೀರು ತರಿಸುವ ಕಂಪ್ಲೀಟ್ ಸ್ಟೋರಿ…

ಸಮಗ್ರ ನ್ಯೂಸ್: ಒಡಿಶಾ ರೈಲು ದುರಂತದ ನೋವಿನ ಕತೆಗಳು ಒಂದೊಂದಾಗಿ ತೆರೆದುಕೊಳ್ಳುತ್ತಿದೆ. ಇದರ ನಡುವೆ ಕೆಲವು ಭಯಾನಕ ಘಟನೆಗಳೂ ನಡೆದಿದೆ. ಮಗನ ಬದುಕಿಸಲು ತಂದೆ ಬರೋಬ್ಬರಿ 230 ಕಿಲೋಮೀಟರ್ ಆಂಬ್ಯುಲೆನ್ಸ್ ಮೂಲಕ ತೆರಳಿ, ಕೊನೆಗೆ ಶವಗಾರದಲ್ಲಿಟ್ಟಿದ್ದ ಶವಗಳ ರಾಶಿಯಿಂದ ಮಗನ ಜೀವಂತವಾಗಿ ಹೊರತೆಗೆದು ಆಸ್ಪತ್ರೆ ದಾಖಲಿಸಿದ ಘಟನೆಯೂ ನಡೆದಿದೆ. ಎರಡು ದಿನದ ಸತತ ಹುಡುಕಾಟ ಹಾಗೂ ಪರಿಶ್ರಮದಿಂದ ಮಗನ ಜೀವವನ್ನು ಉಳಿಸಿದ ತಂದೆಗೆ ಎಲ್ಲರು ಶಹಬ್ಬಾಷ್ ಎಂದಿದ್ದಾರೆ. ಹೌರಾದ ಅಂಗಡಿ ಮಾಲೀಕ ಹೆಲರಾಮ್ ತನ್ನ 24 ವರ್ಷದ

ಒಡಿಶಾ: ರಾಶಿರಾಶಿ ಹೆಣಗಳ ನಡುವೆ ಉಸಿರು ಹಿಡಿದು‌ ಬಿದ್ದಿದ್ದ ಮಗನಿಗೆ ಪುನರ್ಜನ್ಮ ನೀಡಿದ ತಂದೆ!! ತಂದೆಯ ಆ ನಂಬಿಕೆ ಸುಳ್ಳಾಗಲಿಲ್ಲ! ಇಲ್ಲಿದೆ ಕಣ್ಣೀರು ತರಿಸುವ ಕಂಪ್ಲೀಟ್ ಸ್ಟೋರಿ… Read More »

ಬಾಲಸೋರ್ ರೈಲು ದುರಂತದ ಬೆನ್ನಲ್ಲೇ, ಒಡಿಶಾದಲ್ಲಿ ಮತ್ತೊಂದು ದುರಂತ

ಸಮಗ್ರ ನ್ಯೂಸ್: ಇಡೀ ಜಗತ್ತನ್ನು ಬೆಚ್ಚಿಬೀಳಿಸಿದ ಬಾಲಸೋರ್ ರೈಲು ದುರಂತದ ಬೆನ್ನಲ್ಲೇ, ಒಡಿಶಾದಲ್ಲಿ ಮತ್ತೊಂದು ರೈಲು ಹಳಿ ತಪ್ಪಿದೆ ಎಂದು ವರದಿಯಾಗಿದೆ. ಬರ್ಗರ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಒಡಿಶಾದ ಬಾಲಸೋರ್‌ನಲ್ಲಿ ಮೂರು ದಿನಗಳ ಹಿಂದಷ್ಟೇ ತ್ರಿವಳಿ ರೈಲು ಅಪಘಾತ ಸಂಭವಿಸಿ 275 ಮಂದಿ ಮೃತಪಟ್ಟಿದ್ದರು. ಈ ಕಹಿ ಘಟನೆ ಜನಮಾನಸದಿಂದ ಮಾಸುವ ಮೊದಲೇ ಒಡಿಶಾದಲ್ಲಿ ಮತ್ತೊಂದು ರೈಲು ಹಳ್ಳಿ ತಪ್ಪಿದ್ದು ಒಡಿಶಾದ ಬರಘಢ ಜಿಲ್ಲೆಯಲ್ಲಿ ಸುಣ್ಣದ ಕಲ್ಲು ಹೊತ್ತು ಸಾಗುತ್ತಿದ್ದ ಸರಕು ಸಾಗಣೆ ರೈಲಿನ 5

ಬಾಲಸೋರ್ ರೈಲು ದುರಂತದ ಬೆನ್ನಲ್ಲೇ, ಒಡಿಶಾದಲ್ಲಿ ಮತ್ತೊಂದು ದುರಂತ Read More »

ಒಡಿಶಾ ತ್ರಿವಳಿ ರೈಲು ದುರಂತ| ಮೂರೂ ರೈಲುಗಳು ಒಂದೇ ಕಡೆ ಹಳಿ ತಪ್ಪಿದ್ದು ಹೇಗೆ?

ಸಮಗ್ರ ನ್ಯೂಸ್: ದಶಕಗಳಿಂದ ಈಚೆಗೆ ಅತ್ಯಂತ ಭೀಕರ ಎನಿಸಿದ ತ್ರಿವಳಿ ರೈಲು ದುರಂತ 233 ಮಂದಿಯ ಜೀವ ಬಲಿ ಪಡೆದಿದೆ. ಪರಿಹಾರ ಕಾರ್ಯ ಸಮರೋಪಾದಿಯಲ್ಲಿ ನಡೆದಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಮೂರು ರೈಲುಗಳು ಒಂದೇ ಕಡೆ ಹಳಿ ತಪ್ಪಿರುವ ಬಗ್ಗೆ ಒಡಿಶಾ ಸರ್ಕಾರ ತಡರಾತ್ರಿ ಸ್ಪಷ್ಟನೆ ನೀಡಿದೆ. ಮೊದಲು ಬೆಂಗಳೂರಿನಿಂದ ಹೌರಾಗೆ ತೆರಳುತ್ತಿದ್ದ ಸೂಪರ್‍ಫಾಸ್ಟ್ ರೈಲು ಹಳಿ ತಪ್ಪಿ ಪಕ್ಕದ ಹಳಿಗೆ ಬೋಗಿಗಳು ಬಿದ್ದಿವೆ. ಚೆನ್ನೈಗೆ ಬರುತ್ತಿದ್ದ ಶಾಲಿಮರ್-ಚೆನ್ನೈ ಸೆಂಟ್ರಲ್ ಕೋರಮಂಡಲ ಎಕ್ಸ್‍ಪ್ರೆಸ್

ಒಡಿಶಾ ತ್ರಿವಳಿ ರೈಲು ದುರಂತ| ಮೂರೂ ರೈಲುಗಳು ಒಂದೇ ಕಡೆ ಹಳಿ ತಪ್ಪಿದ್ದು ಹೇಗೆ? Read More »

ಶವಸಂಭೋಗ ಅತ್ಯಾಚಾರವೆಂದು ಪರಿಗಣಿಸಲಾಗದು – ಕರ್ನಾಟಕ ಹೈಕೋರ್ಟ್

ಸಮಗ್ರ ನ್ಯೂಸ್: ಮೃತ ಮಹಿಳೆಯ ಮೇಲಿನ ಅತ್ಯಾಚಾರವು ಐಪಿಸಿ ಸೆಕ್ಷನ್ 376 ರ ನಿಬಂಧನೆಗಳ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗುವುದಿಲ್ಲ ಎಂದು ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್, ‘ಡೆಡ್ ಬಾಡಿ’ ಎಂಬ ಪದವನ್ನು ಪರಿಚಯಿಸಲು ಈ ಸೆಕ್ಷನ್ ಗೆ ತಿದ್ದುಪಡಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಮೃತದೇಹಗಳ ಜೊತೆ ಸಂಭೋಗ ನಡೆಸುವವರಿಗೆ ಅತ್ಯಾಚಾರ ಅಪರಾಧದ ಅಡಿಯಲ್ಲಿ ಶಿಕ್ಷೆ ವಿಧಿಸುವ ಅವಕಾಶ ಇಲ್ಲದಿರುವ ಕಾರಣ, ಭಾರತೀಯ ದಂಡ ಸಂಹಿತೆ-1860ರ (ಐಪಿಸಿ) ಕಲಂ 377ಕ್ಕೆ (ಅಸ್ವಾಭಾವಿಕ ಲೈಂಗಿಕ ಅಪರಾಧಗಳು) ತಿದ್ದುಪಡಿ ತರಬೇಕು

ಶವಸಂಭೋಗ ಅತ್ಯಾಚಾರವೆಂದು ಪರಿಗಣಿಸಲಾಗದು – ಕರ್ನಾಟಕ ಹೈಕೋರ್ಟ್ Read More »

360° ಕೋನದಲ್ಲಿ ನಿಮ್ಮ ಏರಿಯಾನ ವೀಕ್ಷಿಸಬಹುದು| ಗೂಗಲ್ ಮ್ಯಾಪ್ ನ ಹೊಸ ಪೀಚರ್ ‘ಸ್ಟ್ರೀಟ್ ವ್ಯೂ’ನಲ್ಲಿ

ಸಮಗ್ರ ನ್ಯೂಸ್: ಗೂಗಲ್ ಮ್ಯಾಪ್ ನ ಅತ್ಯಂತ ಉಪಯುಕ್ತವಾಗಿರೋ ಸ್ಟ್ರೀಟ್ ವ್ಯೂ ಫೀಚರ್ ಇದೀಗ ಇಡೀ ಭಾರತದಲ್ಲಿ ಲಭ್ಯವಾಗಿದೆ. ಈ ಫೀಚರ್ ಬಳಸಿ ಬಳಕೆದಾರರು ಕುಳಿತಲ್ಲೇ ತಮ್ಮ ನಗರ, ಹಳ್ಳಿ, ಶಾಲೆ, ಪಟ್ಟಣದ ಚಿತ್ರವನ್ನು 360 ಡಿಗ್ರಿ ಆ್ಯಂಗಲ್ನಲ್ಲಿ ವೀಕ್ಷಿಸಬಹುದು. 2016ರಲ್ಲಿ ಭಾರತದಲ್ಲಿ ಪ್ರಾರಂಭವಾಗಬೇಕಿದ್ದ ಈ ಫೀಚರ್ ಭದ್ರತಾ ಕಾರಣಗಳಿಂದಾಗಿ ತಡವಾಗಿ ಕಳೆದ ವರ್ಷ ದೇಶಕ್ಕೆ ಲಗ್ಗೆಯಿಟ್ಟಿತು. ಆದರೆ ಆರಂಭದಲ್ಲಿ ಬೆಂಗಳೂರು ಸೇರಿದಂತೆ ಭಾರತದ 10 ನಗರಗಳಲ್ಲಿ ಮಾತ್ರವೇ ಈ ಫೀಚರ್ ಲಭ್ಯವಾಗಿತ್ತು. ಇದೀಗ ಗೂಗಲ್ ಸ್ಟ್ರೀಟ್

360° ಕೋನದಲ್ಲಿ ನಿಮ್ಮ ಏರಿಯಾನ ವೀಕ್ಷಿಸಬಹುದು| ಗೂಗಲ್ ಮ್ಯಾಪ್ ನ ಹೊಸ ಪೀಚರ್ ‘ಸ್ಟ್ರೀಟ್ ವ್ಯೂ’ನಲ್ಲಿ Read More »

ಗುಡ್ ನ್ಯೂಸ್; ಸಿಲಿಂಡರ್ ಬೆಲೆಯಲ್ಲಿ ₹ 83.50 ಇಳಿಕೆ

ಸಮಗ್ರ ನ್ಯೂಸ್: ಕೇಂದ್ರ ಸರ್ಕಾರವು ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿ ನೀಡಿದ್ದು, 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 83.50 ರೂ.ಗೆ ಇಳಿಕೆಯಾಗಿದ್ದು, ಈ ಮೂಲಕ 19 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ 1,773 ರೂ.ಗೆ ತಲುಪಿದೆ. ಜೂನ್ 1 ರ ಇಂದು 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 83.50 ರೂ.ಗೆ ಇಳಿಸಲಾಗಿದೆ. ಈ ಮೂಲಕ ದೆಹಲಿಯಲ್ಲಿ 19 ಕೆಜಿ ವಾಣಿಜ್ಯ ಸಿಲಿಂಡರ್ ಬೆಲೆ 1,773 ರೂ.ಇದೆ. ಆದಾಗ್ಯೂ, ದರಗಳ ಕಡಿತವು ವಾಣಿಜ್ಯ

ಗುಡ್ ನ್ಯೂಸ್; ಸಿಲಿಂಡರ್ ಬೆಲೆಯಲ್ಲಿ ₹ 83.50 ಇಳಿಕೆ Read More »

ಪ್ರಧಾ‌ನಿ ಮೋದಿ ಮೇಲೆ ದಾಳಿ ಸಂಚು| ದ.ಕ ಜಿಲ್ಲೆ 16 ಕಡೆಗಳಲ್ಲಿ ಎನ್ಐಎ ಮಿಂಚಿನ ದಾಳಿ

ಸಮಗ್ರ ನ್ಯೂಸ್: ಬಿಹಾರದಲ್ಲಿ ಪ್ರಧಾನಿ ಮೋದಿ ಮೇಲೆ ದಾಳಿಗೆ ಸಂಚು ಪ್ರಕರಣ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆಳ್ಳಂಬೆಳಗ್ಗೆ 16 ಕಡೆ ಎನ್ ಐಎ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಬೆಳ್ತಂಗಡಿ, ಉಪ್ಪಿಂನಗಡಿ, ವೇಣೂರು ಸೇರಿದಂತೆ 16 ಕಡೆ ಎನ್ ಐಎ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹಲವರ ಮನೆ, ಕಚೇರಿ, ಆಸ್ಪತ್ರೆಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿರುವ ಎನ್ ಐಎ ಅಧಿಕಾರಿಗಳ ತಂಡ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ. ಇದೇ

ಪ್ರಧಾ‌ನಿ ಮೋದಿ ಮೇಲೆ ದಾಳಿ ಸಂಚು| ದ.ಕ ಜಿಲ್ಲೆ 16 ಕಡೆಗಳಲ್ಲಿ ಎನ್ಐಎ ಮಿಂಚಿನ ದಾಳಿ Read More »

ಆರೋಪ‌ ಸಾಬೀತಾದರೆ ಗಲ್ಲುಶಿಕ್ಷೆಗೆ ಸಿದ್ಧ| ಕುಸ್ತಿಪಟುಗಳ ಆಕ್ರೋಶದ ನಡುವೆ ಬ್ರಿಜ್ ಭೂಷಣ್ ಸಿಂಗ್ ಹೇಳಿಕೆ

ಸಮಗ್ರ ನ್ಯೂಸ್: ಲೈಂಗಿಕ ಕಿರುಕುಳದ ಆರೋಪದ ಮೇಲೆ WFI ಮುಖ್ಯಸ್ಥ ಬ್ರಿಜ್ ಭೂಷಣ್ ನನ್ನು ಬಂಧಿಸುವಂತೆ ಒತ್ತಾಯಿಸಿ ಕುಸ್ತಿಪಟುಗಳು ನಡೆಸುತ್ತಿರುವ ಪ್ರತಿಭಟನಾ ಕಾವು ಜೋರಾಗಿದೆ. ಭಾರತೀಯ ಜನತಾ ಪಕ್ಷದ (ಬಿಜೆಪಿ) ಸಂಸದ (ಎಂಪಿ) ಮತ್ತು ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (ಡಬ್ಲ್ಯುಎಫ್‌ಐ) ಅಧ್ಯಕ್ಷ ಬ್ರಿಜ್ ಭೂಷಣ್ ಸರಣ್ ಸಿಂಗ್ ಈ ಹೇಳಿಕೆಗಳಿಂದ ವಿಚಲಿತರಾಗಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಬ್ರಿಜ್ ಭೂಷಣ್, ‘ನಾನು ತಪ್ಪಿತಸ್ಥನಲ್ಲ. ನನ್ನ ಯಾವುದೇ ಸಣ್ಣ ಆರೋಪ ಸಾಬೀತಾದರೆ ಗಲ್ಲಿಗೇರಿಸಿ’ ಎಂದು ಹೇಳಿದರು. ಏತನ್ಮಧ್ಯೆ, ಕ್ರೀಡೆಯ ಅಂತರಾಷ್ಟ್ರೀಯ

ಆರೋಪ‌ ಸಾಬೀತಾದರೆ ಗಲ್ಲುಶಿಕ್ಷೆಗೆ ಸಿದ್ಧ| ಕುಸ್ತಿಪಟುಗಳ ಆಕ್ರೋಶದ ನಡುವೆ ಬ್ರಿಜ್ ಭೂಷಣ್ ಸಿಂಗ್ ಹೇಳಿಕೆ Read More »

ಪತನಗೊಂಡ ವಿಮಾನದಿಂದ ಕಾಣೆಯಾದ ಮಕ್ಕಳಿಗಾಗಿ ಮುಂದುವರಿದ ಶೋಧ| ತಿಂಗಳು ಕಳೆದರೂ ನಾಲ್ಕು ಮಕ್ಕಳು ಬದುಕಿ ಸಿಗುವರೆಂಬ ನಿರೀಕ್ಷೆ

ಸಮಗ್ರ ನ್ಯೂಸ್: ಸುಮಾರು ಒಂದು ತಿಂಗಳ ಹಿಂದೆ ಕೊಲಂಬಿಯಾದ ಅಮೆಜಾನ್ ಕಾಡಿನಲ್ಲಿ ವಿಮಾನವೊಂದು ಅಪಘಾತಕ್ಕೀಡಾಗಿತ್ತು. ಘಟನೆಯಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ನಾಲ್ಕು ಮಕ್ಕಳ ಶವ ದೊರೆತಿರಲಿಲ್ಲ. ಅವರ ಜತೆ 11 ತಿಂಗಳ ಮಗು ಕೂಡ ಇತ್ತು ಎನ್ನಲಾಗಿದೆ. ಅರ್ಧ ತಿಂದಿರುವ ಹಣ್ಣು, ಮಗುವಿನ ಡೈಪರ್, ಒಂದು ಜತೆ ಶೂ ಪತ್ತೆಯಾಗಿದೆ. ಹಾಗಾಗಿ ಒಂದು ತಿಂಗಳಾದರೂ ಮಕ್ಕಳು ಬದುಕಿರಬಹುದು ಎನ್ನುವ ಭರವಸೆ ಒಂದೆಡೆ ಇದೆ. ಒಂದೊಮ್ಮೆ ಮೃತಪಟ್ಟಿದ್ದರೆ ಶ್ವಾನಗಳು ಅವರನ್ನು ಪತ್ತೆಹಚ್ಚುತ್ತವೆ. ಮೇ 1 ರಂದು ಕೊಲಂಬಿಯಾದ ಆಗ್ನೇಯದಲ್ಲಿ

ಪತನಗೊಂಡ ವಿಮಾನದಿಂದ ಕಾಣೆಯಾದ ಮಕ್ಕಳಿಗಾಗಿ ಮುಂದುವರಿದ ಶೋಧ| ತಿಂಗಳು ಕಳೆದರೂ ನಾಲ್ಕು ಮಕ್ಕಳು ಬದುಕಿ ಸಿಗುವರೆಂಬ ನಿರೀಕ್ಷೆ Read More »