ತಂತ್ರಜ್ಞಾನ

ವಾಟ್ಸಾಪ್ ಇಂಡಿಯಾ ಮುಖ್ಯಸ್ಥ ಅಭಿಜಿತ್ ಬೋಸ್ ರಾಜೀನಾಮೆ

ಸಮಗ್ರ ನ್ಯೂಸ್: ವಾಟ್ಸಾಪ್ ನ ಭಾರತದ ಮುಖ್ಯಸ್ಥ ಅಭಿಜಿತ್ ಬೋಸ್ ಮತ್ತು ಸಾರ್ವಜನಿಕ ನೀತಿ ಮೆಟಾ ಇಂಡಿಯಾದ ನಿರ್ದೇಶಕ ರಾಜೀವ್ ಅಗರ್ವಾಲ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ. ಭಾರತದಲ್ಲಿ ವಾಟ್ಸಾಪ್ ಸಾರ್ವಜನಿಕ ನೀತಿಯ ನಿರ್ದೇಶಕ ಶಿವನಾಥ್ ತುಕ್ರಾಲ್ ಅವರನ್ನು ಈಗ ಭಾರತದ ಎಲ್ಲಾ ಮೆಟಾ ಬ್ರಾಂಡ್ ಗಳ ಸಾರ್ವಜನಿಕ ನೀತಿಯ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ವಿಶ್ವದಾದ್ಯಂತ ಸುಮಾರು 11,000 ಉದ್ಯೋಗಗಳನ್ನು ಕಡಿತಗೊಳಿಸುವ ಮೂಲಕ ಮೆಟಾ ತನ್ನ ಅತಿದೊಡ್ಡ ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿದ ಒಂದು ವಾರದೊಳಗೆ ಇದು ಬಂದಿದೆ. ಈ […]

ವಾಟ್ಸಾಪ್ ಇಂಡಿಯಾ ಮುಖ್ಯಸ್ಥ ಅಭಿಜಿತ್ ಬೋಸ್ ರಾಜೀನಾಮೆ Read More »

ನಾಳೆ(ನ.8) ಈ ವರ್ಷದ ಕೊನೆಯ ಚಂದ್ರಗ್ರಹಣ| ಎಲ್ಲೆಲ್ಲಿ ಕಂಡುಬರುತ್ತೆ ಗೊತ್ತಾ‌ ನೆರಳು ಬೆಳಕಿನಾಟ!?

ಸಮಗ್ರ ನ್ಯೂಸ್: ಈ ವರ್ಷದ ಕೊನೆಯ ʻಸಂಪೂರ್ಣ ಚಂದ್ರಗ್ರಹಣʼವು ನಾಳೆ(ನವೆಂಬರ್ 8) ರಂದು ಸಂಭವಿಸಲಿದೆ. ನಾಸಾ ಪ್ರಕಾರ, ಮುಂದಿನ ಸಂಪೂರ್ಣ ಚಂದ್ರಗ್ರಹಣವು ಮೂರು ವರ್ಷಗಳವರೆಗೆ ಸಂಭವಿಸುವುದಿಲ್ಲ. ಈ ಬಗ್ಗೆ ನಾಸಾ ಟ್ವೀಟ್ ಮಾಡಿದ್ದು, ‘ನವೆಂಬರ್ 8, 2022 ರಂದು ಚಂದ್ರನು ಭೂಮಿಯ ನೆರಳಿನಲ್ಲಿ ಹಾದುಹೋಗುತ್ತಾನೆ ಮತ್ತು ಕೆಂಪು ಬಣ್ಣಕ್ಕೆ ತಿರುಗುತ್ತಾನೆ. ಇದು ಮತ್ತೆ 3 ವರ್ಷಗಳ ನಂತರ ಸಂಭವಿಸುತ್ತದೆ. ಆದ್ದರಿಂದ ಇದು ನಿಮ್ಮ ಪ್ರದೇಶದಲ್ಲಿ ಗೋಚರಿಸುತ್ತದೆಯೇ ಎಂದು ಪರೀಕ್ಷಿಸಲು ಮರೆಯದಿರಿ’ ಎಂದು ಹೇಳಿದೆ. ನಾಸಾ ಪ್ರಕಾರ ಮುಂದಿನ

ನಾಳೆ(ನ.8) ಈ ವರ್ಷದ ಕೊನೆಯ ಚಂದ್ರಗ್ರಹಣ| ಎಲ್ಲೆಲ್ಲಿ ಕಂಡುಬರುತ್ತೆ ಗೊತ್ತಾ‌ ನೆರಳು ಬೆಳಕಿನಾಟ!? Read More »

ನಾಳೆ(ನ.1) ದೇಶದಲ್ಲಿ ಮೊದಲ ಡಿಜಿಟಲ್ ರೂಪಾಯಿ ಬಿಡುಗಡೆ| 9 ಬ್ಯಾಂಕ್ ಗಳಿಗೆ ಮಾನ್ಯತೆ

ಸಮಗ್ರ ನ್ಯೂಸ್: ಕೇಂದ್ರೀಯ ಬ್ಯಾಂಕ್ ಡಿಜಿಟಲ್ ಕರೆನ್ಸಿಯ ಮೊದಲ ಪೈಲಟ್ ಡಿಜಿಟಲ್ ರೂಪಾಯಿ (ಸಗಟು ವಿಭಾಗ) ಅನ್ನು ಸರ್ಕಾರಿ ಸೆಕ್ಯುರಿಟಿಗಳಲ್ಲಿನ ವಹಿವಾಟುಗಳಿಗಾಗಿ ಮಂಗಳವಾರ ಬಿಡುಗಡೆ ಮಾಡಲಾಗುವುದು ಎಂದು ರಿಸರ್ವ್ ಬ್ಯಾಂಕ್ ತಿಳಿಸಿದೆ. ಸರ್ಕಾರಿ ಸೆಕ್ಯುರಿಟಿಗಳಲ್ಲಿ ದ್ವಿತೀಯ ಮಾರುಕಟ್ಟೆ ವಹಿವಾಟುಗಳನ್ನು ಇತ್ಯರ್ಥಪಡಿಸುವುದು ಪೈಲಟ್ಗೆ ಬಳಕೆಯಾಗಿದೆ ಎಂದು ಆರ್ಬಿಐ ಸೋಮವಾರ ಹೇಳಿಕೆಯಲ್ಲಿ ತಿಳಿಸಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ಬಿಐ), ಬ್ಯಾಂಕ್ ಆಫ್ ಬರೋಡಾ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಎಚ್ಡಿಎಫ್ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್,

ನಾಳೆ(ನ.1) ದೇಶದಲ್ಲಿ ಮೊದಲ ಡಿಜಿಟಲ್ ರೂಪಾಯಿ ಬಿಡುಗಡೆ| 9 ಬ್ಯಾಂಕ್ ಗಳಿಗೆ ಮಾನ್ಯತೆ Read More »

‘ಟ್ವಿಟರ್’ ಅನ್ನು ಸುಪರ್ದಿಗೆ ಪಡೆದುಕೊಂಡ ಎಲಾಮ್ ಮಸ್ಕ್| ಸಿಇಒ ಪರಾಗ್ ಅಗರ್ ವಾಲ್ ಸೇರಿ‌ ಹಲವರಿಗೆ ಗೇಟ್ ಪಾಸ್

ಸಮಗ್ರ ನ್ಯೂಸ್: ಟೆಸ್ಲಾ ಸಿಇಒ ಎಲಾನ್ ಮಸ್ಕ್() ಅವರು ಟ್ವಿಟರ್‌ ಅನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದು ಅದರ ಉನ್ನತ ಕಾರ್ಯನಿರ್ವಾಹಕರನ್ನು ವಜಾಗೊಳಿಸಿದ್ದಾರೆ ಎಂದು ಯುಎಸ್ ಮಾಧ್ಯಮ ಗುರುವಾರ ತಡವಾಗಿ ವರದಿ ಮಾಡಿದೆ. ಮಸ್ಕ್ ಅವರು ಟ್ವಿಟರ್ ಸಿಇಒ ಪರಾಗ್ ಅಗರವಾಲ್ ಮತ್ತು ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ಮತ್ತು ಕಾನೂನು ನೀತಿ, ಟ್ರಸ್ಟ್ ಮತ್ತು ಸುರಕ್ಷತೆಯ ಮುಖ್ಯಸ್ಥರನ್ನು ವಜಾಗೊಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಮೂಲಗಳ ಪ್ರಕಾರ, ಮಸ್ಕ್‌ ಅವರೇ ರಾಜೀನಾಮೆ ನೀಡುವಂತೆ ಸೂಚಿಸಿದ್ದಾರೆ ಎನ್ನಲಾಗುತ್ತಿದೆ. ಟ್ವಿಟ್ಟರ್‌

‘ಟ್ವಿಟರ್’ ಅನ್ನು ಸುಪರ್ದಿಗೆ ಪಡೆದುಕೊಂಡ ಎಲಾಮ್ ಮಸ್ಕ್| ಸಿಇಒ ಪರಾಗ್ ಅಗರ್ ವಾಲ್ ಸೇರಿ‌ ಹಲವರಿಗೆ ಗೇಟ್ ಪಾಸ್ Read More »

ನಾವು ಸತ್ತ ಮೇಲೆ ನಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ಗಳು ಏನಾಗುತ್ತೆ ಗೊತ್ತಾ? ಇಲ್ಲಿದೆ ಉತ್ತರ…

ಸಮಗ್ರ ನ್ಯೂಸ್: ನಾವು ಸತ್ತ ಮೇಲೆ ನಮ್ಮ ಫೇಸ್‌ಬುಕ್ , ಇನ್​​ಸ್ಟಾಗ್ರಾಮ್ ಅಥವಾ ಟ್ವಿಟರ್ ಖಾತೆ ಏನಾಗುತ್ತದೆ?. ಈ ರೀತಿಯ ಅನೇಕ ಪ್ರಶ್ನೆಗಳು ಬಹುತೇಕರಲ್ಲಿ ಕಾಡುತ್ತಿರುತ್ತದೆ. ಇದಕ್ಕೆ ಉತ್ತರ ಇಲ್ಲಿದೆ ನೋಡಿ. ಇಂದಿನ ಆಧುನಿಕ ಯುಗದಲ್ಲಿ ಸಾಮಾಜಿಕ ಜಾಲತಾಣಗಳು ತುಂಬಾ ಪರಿಣಾಮ ಬೀರಿರುವುದು ನಿಜ. ಹೆಚ್ಚಿನ ಜನರಲ್ಲಿ ಕನಿಷ್ಠ ಯಾವುದಾದರೂ ಒಂದು ರೀತಿಯ ಸಾಮಾಜಿಕ ಜಾಲತಾಣದ ಖಾತೆ ಇದ್ದೇ ಇರುತ್ತದೆ. ಆದರೆ ನಿಮ್ಮ ಸಾವಿನ ಬಳಿಕ ಈ ಖಾತೆ ಏನಾಗುವುದು ಎಂದು ನಿಮಗೆ ತಿಳಿದಿದೆಯಾ?. ಸತ್ತ ಮೇಲೆ

ನಾವು ಸತ್ತ ಮೇಲೆ ನಮ್ಮ ಸೋಶಿಯಲ್ ಮೀಡಿಯಾ ಅಕೌಂಟ್ ಗಳು ಏನಾಗುತ್ತೆ ಗೊತ್ತಾ? ಇಲ್ಲಿದೆ ಉತ್ತರ… Read More »

ಆನ್ ಲೈನ್ ಮೂಲಕ ವಂಚನೆ| 1.71 ಲಕ್ಷ ಪಂಗನಾಮ ಹಾಕಿದ ಖದೀಮ

ಸಮಗ್ರ ನ್ಯೂಸ್: ಪಿಎಂ ಜನಧನ ಯೋಜನೆ ಹೆಸರಿನಲ್ಲಿ ವ್ಯಕ್ತಿಗೆ ಆನ್ ಲೈನ್ ಮೂಲಕ ಲಕ್ಷಾಂತರ ನಗದು ವಂಚನೆ ಮಾಡಿರುವ ಘಟನೆ ವಿಜಯಪುರ ಜಿಲ್ಲೆಯ ಕೊಲ್ಲಾರ ಪಟ್ಟಣದ ತಳೇವಾಡ ಗ್ರಾಮದಲ್ಲಿ ನಡೆದಿದೆ. ತಳೇವಾಡ ನಿವಾಸಿ ಹಣಮಂತ ಜೆಟ್ಟೆಪ್ಪಗೊಳ ಮೋಸ ಹೋದವರು. ಇನ್ನು ವಾಟ್ಸ್‌ಆಫ್ ಮೂಲಕ ಜನಧನ ಯೋಜನೆಯಡಿಯಲ್ಲಿ ಲೋನ್ ನೀಡುವ ಭರವಸೆ ನೀಡಿ ಎಂಟು ಬಾರಿ ಹಣ ಪಡೆದುಕೊಂಡು ಸುಮಾರು 1.71 ಲಕ್ಷ ಪಂಗನಾಮ ಹಾಕಿದ್ದಾರೆ. ತಾನು ಮೋಸ ಹೋಗಿರುವ ಬಗ್ಗೆ‌ ಕೊಲ್ಹಾರ ಠಾಣೆಯಲ್ಲಿ ಹಣಮಂತರವರು ದೂರು ನೀಡಿದ್ದಾರೆ.

ಆನ್ ಲೈನ್ ಮೂಲಕ ವಂಚನೆ| 1.71 ಲಕ್ಷ ಪಂಗನಾಮ ಹಾಕಿದ ಖದೀಮ Read More »

ವಾಟ್ಸಪ್ ಸರ್ವರ್ ಗೂ ಗ್ರಹಣದೋಷ| ಮೆಸೇಜ್ ಕಳಿಸಲಾಗದೆ ಪರದಾಡಿದ ಗ್ರಾಹಕರು

ಸಮಗ್ರ ನ್ಯೂಸ್: ತಾಂತ್ರಿಕ ಸಮಸ್ಯೆಯ ಹಿನ್ನೆಲೆಯಲ್ಲಿ ವಾಟ್ಸಪ್ ಅಪ್ಲಿಕೇಶನ್ ಕೈಕೊಟ್ಟಿದ್ದು, ಗ್ರಾಹಕರು ಮೆಸೇಜ್ ಕಳುಹಿಸಲಾಗದೆ ಪರದಾಡಿದರು. ಗ್ರಹಣದ ದಿನ್ನ ಇನ್ನೊಮ್ಮೆ ಕೈಕೊಟ್ಟಿದ್ದು, ಬಳಕೆದಾರರರು ಪರದಾಡುವಂತೆ ಮಾಡಿದೆ. ವಾಟ್ಸ್‌ಆ್ಯಪ್ ನಲ್ಲಿ ಸಮಸ್ಯೆಯಾಗಿದ್ದನ್ನು ನೋಡಿ ನಮಗೊಬ್ಬರಿಗೇ ಇರಬಹುದು ಎಂದು ಹಲವರು ಭಾವಿಸಿದ್ದು, ಬಳಿಕ ಇತರರಿಗೂ ಹಾಗೆ ಆಗುತ್ತಿರುವುದು ಗಮನಕ್ಕೆ ಬಂದಿದೆ. ಕೆಲವೇ ಹೊತ್ತಿನಲ್ಲಿ ಟ್ವಿಟರ್​ನಲ್ಲಿ ವಾಟ್ಸ್​ಆ್ಯಪ್ ಡೌನ್ ಎಂಬುದು ಟ್ರೆಂಡಿಂಗ್ ಆಗುತ್ತಿದ್ದಂತೆ ವಾಟ್ಸ್​ಆ್ಯಪ್​ನಲ್ಲೇ ಸಮಸ್ಯೆ ಎನ್ನುವುದು ಖಚಿತಗೊಂಡಿದೆ.

ವಾಟ್ಸಪ್ ಸರ್ವರ್ ಗೂ ಗ್ರಹಣದೋಷ| ಮೆಸೇಜ್ ಕಳಿಸಲಾಗದೆ ಪರದಾಡಿದ ಗ್ರಾಹಕರು Read More »

ವಾಟ್ಸಾಪ್ ನಲ್ಲೂ ಬರಲಿದೆ ಎಡಿಟ್ ಆಪ್ಷನ್

ಸಮಗ್ರ ಡಿಜಿಟಲ್ ಡೆಸ್ಕ್: ವಾಟ್ಸ್‌ ಆ್ಯಪ್‌ನಲ್ಲಿ ಹೊಸ ಅಪ್‌ಡೇಟ್‌ ಬರಲು ಸಿದ್ಧವಾಗಿದೆ. ಈ ಅಪ್‌ಡೇಟ್‌ನಲ್ಲಿ ನೀವು ಕಳುಹಿಸಿದ ಸಂದೇಶವನ್ನು ಎಡಿಟ್‌ ಮಾಡುವುದಕ್ಕೆ ಆಯ್ಕೆಯಿರಲಿದೆ. ಟ್ವಿಟರ್‌ ಮೂರು ದೇಶಗಳಲ್ಲಿ ಈ ಸೌಲಭ್ಯವನ್ನು ಪರಿಚಯಿಸಿರುವ ಬೆನ್ನಲ್ಲೇ ವಾಟ್ಸ್‌ಆ್ಯಪ್‌ ಕೂಡ ಇಂತಹ ಸೌಲಭ್ಯ ನೀಡಲು ಮುಂದಾಗಿದೆ. ಯಾವುದೇ ಸಂದೇಶವನ್ನು ಕಳುಹಿಸಿ 15 ನಿಮಿಷಗಳೊಳಗೆ ಅದನ್ನು ಎಡಿಟ್‌ ಮಾಡಬಹುದು. ಎಡಿಟ್‌ ಮಾಡಿದಂತಹ ಸಂದೇಶದ ಟಿಕ್‌ ಮಾರ್ಕ್‌ ಪಕ್ಕದಲ್ಲಿ “edited’ ಎಂದು ನಮೂದಾಗುತ್ತದೆ. ಈ ಅಪ್‌ಡೇಟ್‌ ಸದ್ಯ ಅಭಿವೃದ್ಧಿ ಹಂತದಲ್ಲಿದ್ದು, ಶೀಘ್ರವೇ ಮೊಬೈಲ್‌ಗ‌ಳಿಗೆ ಬರಲಿದೆ

ವಾಟ್ಸಾಪ್ ನಲ್ಲೂ ಬರಲಿದೆ ಎಡಿಟ್ ಆಪ್ಷನ್ Read More »

ಬೆಂಗಳೂರಿನಲ್ಲಿ ಬಂದಿಳಿದ ವಿಶ್ವದ ಅತಿ‌ದೊಡ್ಡ ವಿಮಾನ| ಇದರ ವಿಶೇಷತೆಗಳೇನು ಗೊತ್ತಾ?

ಸಮಗ್ರ ನ್ಯೂಸ್: ವಿಶ್ವದ ಅತಿದೊಡ್ಡ ವಿಮಾನವನ್ನು ನೀವು ಯಾವತ್ತೂ ನೋಡಿರಲು ಸಾಧ್ಯವಿಲ್ಲ ಆದರೆ ನಮ್ಮ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಇದಕ್ಕೆ ನಿನ್ನೆ (ಅ.14) ಸಾಕ್ಷಿಯಾಗಿದೆ. ಏರ್‌ಬಸ್ A380, ಬೆಂಗಳೂರಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (KIA) ನಿಗದಿತ ಸಮಯಕ್ಕಿಂತ ಎರಡು ವಾರಗಳ ಮುಂಚಿತವಾಗಿ ಬಂದಿಳಿದಿದೆ. ಎಮಿರೇಟ್ಸ್ ಏರ್‌ಲೈನ್ಸ್​ನ ಡಬಲ್ ಡೆಕ್ಕರ್ ವಿಮಾನ ದುಬೈನಿಂದ ಕರ್ನಾಟಕದ ರಾಜಧಾನಿಗೆ ಬಂದಿದೆ. ಎಮಿರೇಟ್ಸ್ ‌ವಿಮಾನಯಾನ ಕಂಪನಿಯ ದೊಡ್ಡ ವಿಮಾನ ಇದಾಗಿದ್ದು, 500ಕ್ಕೂ ಹೆಚ್ಚು ಸೀಟ್​ಗಳು ಸೇರಿ, ಹಲವು‌ ವಿಶೇಷತೆಗಳನ್ನು ಹೊಂದಿದೆ.

ಬೆಂಗಳೂರಿನಲ್ಲಿ ಬಂದಿಳಿದ ವಿಶ್ವದ ಅತಿ‌ದೊಡ್ಡ ವಿಮಾನ| ಇದರ ವಿಶೇಷತೆಗಳೇನು ಗೊತ್ತಾ? Read More »

ಮಧ್ಯರಾತ್ರಿಯೂ ನೀವು ಬಿಸಿಬಿಸಿ ಇಡ್ಲಿ ತಿನ್ಬಹುದು| ಹೊಸದಾಗಿ ಶುರುವಾಗಿದೆ 24×7 ಇಡ್ಲಿ ವೆಂಡಿಂಗ್ ಮೆಷಿನ್!!

ಸಮಗ್ರ ನ್ಯೂಸ್: ನಿಮಗೇನಾದರೂ ಮಧ್ಯರಾತ್ರಿ ಇಡ್ಲಿ ತಿನ್ನುವ ಆಸೆಯೇ ಇದೆಯೇ? ಇದೆ ಎಂದಾದರೆ ಸ್ಟಾರ್ಟಪ್‌ವೊಂದು ಬೆಂಗಳೂರಿನಲ್ಲಿ ಇಡ್ಲಿಯನ್ನು ಎಟಿಎಂನಂತೆ ತ್ವರಿತವಾಗಿ ಹಾಗೂ ತಾಜಾವಾಗಿ ತಯಾರಿಸಿ ಪ್ಯಾಕೇಜ್ ಮಾಡಿ ವಿತರಿಸಲು ಆರಂಭಿಸಲಾಗಿದೆ. ಬೆಂಗಳೂರು ಮೂಲದ ಉದ್ಯಮಿಗಳಾದ ಶರಣ್ ಹಿರೇಮಠ್ ಮತ್ತು ಸುರೇಶ್ ಚಂದ್ರಶೇಖರನ್ ಅವರು ಸ್ಥಾಪಿಸಿದ ಸ್ಟಾರ್ಟ್‌ಅಪ್ ಫ್ರೆಶಾಟ್ ರೊಬೊಟಿಕ್ಸ್‌ನ ಉತ್ಪನ್ನವಾಗಿದೆ ಎಂದು ವರದಿಯೊಂದು ಹೇಳಿದೆ. ಟ್ವಿಟ್ಟರ್‌ನಲ್ಲಿ ಈ ವೀಡಿಯೊ ವೈರಲ್‌ ಆಗಿದ್ದು, ಸಂಪೂರ್ಣ ಸ್ವಯಂಚಾಲಿತ ಮತ್ತು ಮಾನವ ಸಂಪರ್ಕರಹಿತ ಪ್ರಕ್ರಿಯೆಯ ಮೂಲಕ ಅಚ್ಚುಕಟ್ಟಾಗಿ ಪ್ಯಾಕ್ ಮಾಡಲಾದ ಮತ್ತು

ಮಧ್ಯರಾತ್ರಿಯೂ ನೀವು ಬಿಸಿಬಿಸಿ ಇಡ್ಲಿ ತಿನ್ಬಹುದು| ಹೊಸದಾಗಿ ಶುರುವಾಗಿದೆ 24×7 ಇಡ್ಲಿ ವೆಂಡಿಂಗ್ ಮೆಷಿನ್!! Read More »