ಕ್ರೈಂ

ಕುಂದಾಪುರ: ಕಾರು ಢಿಕ್ಕಿ ಹೊಡೆದು ಸೈಕಲ್ ಸವಾರ ಮೃತ್ಯು

ಕುಂದಾಪುರ: ಕಾರು ಡಿಕ್ಕಿ ಹೊಡೆದು ಸೈಕಲ್ ಸವಾರರೊಬ್ಬರು ಮೃತಪಟ್ಟ ಘಟನೆ ಹೆಮ್ಮಾಡಿ ಹಾಗೂ ತಲ್ಲೂರು ನಡುವಿನ ಜಾಲಾಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಸ್ಥಳೀಯ ಸಂತೋಷ್ ನಗರದ ನಿವಾಸಿ ರಾಮ ಕುಲಾಲ್(೫೨) ಮೃತಪಟ್ಟವರು. ಅಪಘಾತದಲ್ಲಿ ಗಂಭೀರ ಗಾಯಗೊಂಡ ರಾಮ ಕುಲಾಲ್ ಅವರನ್ನು ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಅವರು ಮೃತಪಟ್ಟಿದ್ದಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂದಾಪುರ: ಕಾರು ಢಿಕ್ಕಿ ಹೊಡೆದು ಸೈಕಲ್ ಸವಾರ ಮೃತ್ಯು Read More »

ಮಂಗಳೂರು: ಬಾಲಕಿಯೊಂದಿಗೆ ಅನುಚಿತ ವರ್ತಣೆ ಪೊಲೀಸ್ ಸಿಬ್ಬಂದಿ ಬಂಧನ

ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿ ಜತೆ ಮೊಬೈಲ್ ಫೋನ್ ಮೂಲಕ ಅನುಚಿತವಾಗಿ ವರ್ತಿಸಿರುವ ಪ್ರಕರಣಕ್ಕೆ ಸಂಬಂಧಿಸಿ ಮಂಗಳೂರು ನಗರ ಪೊಲೀಸ್ ಠಾಣೆಯೊಂದರ ಸಿಬ್ಬಂದಿಯನ್ನು ಬಂಧಿಸಲಾಗಿದೆ. ಸುದ್ದಿಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಅಪ್ರಾಪ್ತ ಬಾಲಕಿಗೆ ಆಟೋ ರಿಕ್ಷಾ ಚಾಲಕ ಕಿರುಕುಳ ನೀಡಿದ ಬಗ್ಗೆ ಪೊಕ್ಸೊ ಪ್ರಕರಣವನ್ನು ಜನವರಿಯಲ್ಲಿ ದಾಖಲಿಸಲಾಗಿತ್ತು. ಆದರೆ ಈ ವೇಳೆ ಬಾಲಕಿಯ ಮೊಬೈಲ್ ಸಂಖ್ಯೆಯನ್ನು ಪಡೆದ ಠಾಣೆಯ ಹೆಡ್‌ಕಾನ್‌ಸ್ಟೇಬಲ್ ದರ್ಜೆಯ ಸಿಬ್ಬಂದಿ ಆಕೆಗೆ ಕರೆ ಮಾಡಿ, ಸಂದೇಶ ಕಳುಹಿಸಿ ಅನುಚಿತವಾಗಿ

ಮಂಗಳೂರು: ಬಾಲಕಿಯೊಂದಿಗೆ ಅನುಚಿತ ವರ್ತಣೆ ಪೊಲೀಸ್ ಸಿಬ್ಬಂದಿ ಬಂಧನ Read More »

ಮಂಗಳೂರು: ಪ್ರಜ್ಞೆ ತಪ್ಪಿಸಿ ನಗ-ನಗದು ದೋಚುತಿದ್ದ ಯುವಕ ಯುವತಿಯ ಬಂಧನ

ಮಂಗಳೂರು: ಪಾರ್ಟಿ ಮಾಡುವ ನೆಪದಲ್ಲಿ ವ್ಯಕ್ತಿಯೋರ್ವರ ಪ್ರಜ್ಞೆ ತಪ್ಪಿಸಿ, ನಗ-ನಗದು ದೋಚಿ ಬಳಿಕ ಬ್ಲ್ಯಾಕ್ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನಗರದ ಇನ್ ಲ್ಯಾಂಡ್ ಇಂಪಾಲ ಆಪಾರ್ಟ್‌ಮೆಂಟ್ ನ ಅಝ್ವೀನ್ ಸಿ.ಎಂ (೨೪) ಹಾಗೂ ಬೈಕಂಪಾಡಿ, ಕೆಬಿಎಸ್ ಬೊಟ್ಟು ಹೌಸ್ ಹತೀಜಮ್ಮಯಾನೆ ಸಫ್ನಾ(೨೩) ಬಂಧಿತ ಆರೋಪಿಗಳು ಘಟನೆಯ ವಿವರ: ದೂರುದಾರರ ಪರಿಚಯಸ್ಥರಾದ ಅಝ್ವೀನ್, ಹಾಗೂ ಹತೀಜಮ್ಮ ಇಬ್ಬರು ಜು.೧೯ ರ ರಾತ್ರಿ ಮನೆಗೆ ಬಂದು ಪಾರ್ಟಿ ಮಾಡುವ ಆಹ್ವಾನ

ಮಂಗಳೂರು: ಪ್ರಜ್ಞೆ ತಪ್ಪಿಸಿ ನಗ-ನಗದು ದೋಚುತಿದ್ದ ಯುವಕ ಯುವತಿಯ ಬಂಧನ Read More »

ಬಂಟ್ವಾಳ: ಆಟೋ ರಿಕ್ಷಾ ಪಲ್ಟಿ ಓರ್ವ ಸಾವು, 7 ಮಂದಿಗೆ ಗಾಯ

ಬಂಟ್ವಾಳ: ಮಣಿಹಳ್ಳ ಸರಪಾಡಿ ರಸ್ತೆಯ ಪೆರಿಯಪಾದೆ ಎಂಬಲ್ಲಿ ಆಟೋರಿಕ್ಷಾವೊಂದು ಪಲ್ಟಿಯಾಗಿ ಓರ್ವ ಮೃತಪಟ್ಟು 7 ಮಂದಿ ಗಾಯಗೊಂಡ ಘಟನೆ ಇಂದು ನಡೆದಿದೆ. ವಲೆಂಗೂರು ನಿವಾಸಿ ಫ್ರಾನ್ಸಿಸ್ ಸುವಾರಿಸ್ (85)ಮೃತಪಟ್ಟವರು. ಆಟೋರಿಕ್ಷಾ ಸರಪಾಡಿಯಿಂದ ಬಂಟ್ವಾಳ ಕಡೆಗೆ ಹಲವು ಮಂದಿ ಪ್ರಯಾಣಿಕರನ್ನು ಕೂರಿಸಿಕೊಂಡು ಬಂಟ್ವಾಳ ಕಡೆಗೆ ಆಗಮಿಸುವ ವೇಳೆ ಪರಿಯಪಾದೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಘಟನೆಯಲ್ಲಿ ಇಬ್ಬರು ಗಂಭೀರ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆ ಗೆ ದಾಖಲಾಗಿದ್ದಾರೆ. ಇನ್ನೂ ಅಲ್ಪಸ್ವಲ್ಪ ಗಾಯಗೊಂಡವರು ಬಂಟ್ವಾಳ ಖಾಸಗಿ ಆಸ್ಪತ್ರೆಗೆ ದಾಖಲಾಗಿ

ಬಂಟ್ವಾಳ: ಆಟೋ ರಿಕ್ಷಾ ಪಲ್ಟಿ ಓರ್ವ ಸಾವು, 7 ಮಂದಿಗೆ ಗಾಯ Read More »

ಅಪಘಾತಕ್ಕೊಳಗಾದ ಕಾಮಿಡಿ ಕಿಲಾಡಿ ಖ್ಯಾತಿಯ ನಟ ಗೋವಿಂದೇ ಗೌಡ

ಬೆಂಗಳೂರು: ಕಾಮಿಡಿ ಕಿಲಾಡಿಗಳು ರಿಯಾಲಿಟಿ ಶೋ ಖ್ಯಾತಿಯ ನಟ ಗೋವಿಂದೇಗೌಡ ನಿನ್ನೆ ಸಂಜೆ ಚಿತ್ರೀಕರಣದ ವೇಳೆ ಅಪಘಾತಕ್ಕೀಡಾಗಿದ್ದಾರೆ. ನಿನ್ನೆ ಕಾಮಿಡಿ ಕಿಲಾಡಿ ಖ್ಯಾತಿಯ ನಟ ಗೋವಿಂದೇಗೌಡ ಅವರು, ಯೋಗರಾಜ್ ಭಟ್ ಅವರ ಸಿನಿಮಾದ ಚಿತ್ರದ ಚಿತ್ರೀಕರಣದಲ್ಲಿ ಭಾಗವಹಿಸಿದ್ದು, ಈ ಸಂದರ್ಭದಲ್ಲಿ ನಟ ಗೋವಿಂದೇಗೌಡ ಅವರಿಗೆ ಅಪಘಾತ ಉಂಟಾಗಿತ್ತು. ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಮೂಲಗಳ ಪ್ರಕಾರ ನಟ ಗೋವಿಂದೇಗೌಡ ಅವರಿಗೆ ಚಿತ್ರೀಕರಣದ ಸಂದರ್ಭದಲ್ಲಿ ಕಾರಿನ ಸಾಹಸ ದೃಶ್ಯದ ಶೂಟಿಂಗ್ ವೇಳೆಯಲ್ಲಿ ಹೊಟ್ಟೆಗೆ ಪೆಟ್ಟು

ಅಪಘಾತಕ್ಕೊಳಗಾದ ಕಾಮಿಡಿ ಕಿಲಾಡಿ ಖ್ಯಾತಿಯ ನಟ ಗೋವಿಂದೇ ಗೌಡ Read More »

ಪತ್ನಿ ಅಕ್ರಮ ಸಂಬಂಧಕ್ಕೆ ಬಲಿಯಾದ ಬಾಯ್‌ ಫ್ರೆಂಡ್ ಖಾಸಗಿ ಪಾರ್ಟ್| ಕೋಪೋದ್ರಿಕ್ತ ಪತಿಯಿಂದ ಗುಂಡು..!

ಪತ್ನಿಯ ಅಕ್ರಮ ಸಂಬಂಧದಿಂದ ಬೇಸತ್ತ ವ್ಯಕ್ತಿಯೊಬ್ಬ ತನ್ನ ಪತ್ನಿಯ ಪ್ರೇಮಿಯ ಮೇಲೆ ಗುಂಡು ಹಾರಿಸಿದ್ದಾನೆ. ಯುವಕನ ಖಾಸಗಿ ಭಾಗಕ್ಕೆ ಗುಂಡು ಹಾರಿಸಿದ್ದು, ಗಾಯಗೊಂಡ ವ್ಯಕ್ತಿಯನ್ನು ತಿರುವಲ್ಲಾದ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಪತ್ನಿ, ಬಾಯ್ ಫ್ರೆಂಡ್ ಮನೆಯಲ್ಲಿ ವಾಸಿಸುತ್ತಿದ್ದಳು. ಪತಿ – ಪತ್ನಿ ಸಂಬಂಧ ಕೋರ್ಟ್ ಮೆಟ್ಟಿಲೇರಿತ್ತು. ಕೋರ್ಟ್ ನಲ್ಲಿ ವಿಚ್ಛೇದನ ವಿಚಾರಣೆ ನಡೆಯುತ್ತಿದೆ. ಈ ಮಧ್ಯೆ ಪ್ರೇಮಿ ಮನೆಗೆ ಬಂದ ಪತಿ, ಆತನ ಖಾಸಗಿ ಅಂಗಕ್ಕೆ ಗುಂಡು ಹಾರಿಸಿದ್ದಾನೆ. ಏರ್ ಪಿಸ್ತೂಲ್ ನಲ್ಲಿ ಗುಂಡು ಹಾರಿಸಿದ್ದಾನೆ. ಗಾಯಗೊಂಡ

ಪತ್ನಿ ಅಕ್ರಮ ಸಂಬಂಧಕ್ಕೆ ಬಲಿಯಾದ ಬಾಯ್‌ ಫ್ರೆಂಡ್ ಖಾಸಗಿ ಪಾರ್ಟ್| ಕೋಪೋದ್ರಿಕ್ತ ಪತಿಯಿಂದ ಗುಂಡು..! Read More »

ಕುಂದಾಪುರ: ನದಿಗೆ ಬಿದ್ದ ಮಗು ಮೃತ್ಯು

ಕುಂದಾಪುರ: ಮನೆಯಲ್ಲಿ ಯಾರೂ ಇಲ್ಲದ ವೇಳೆ ಎರಡು ವರ್ಷದ ಮಗು ಮನೆ ಸಮೀಪದ ನದಿ ದಡದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಆಯಾತಪ್ಪಿ ನೀರಿಗೆ ಬಿದ್ದು ಮೃತ ಪಟ್ಟ ಘಟನೆ ಉಪ್ಪುಂದ ಗ್ರಾಮದ ಕರ್ಕಿಕಳಿ ಎಂಬಲ್ಲಿ ನಡೆದಿದೆ.ಮೃತಪಟ್ಟ ಮಗುವನ್ನು ಉಪ್ಪುಂದ ಗ್ರಾಮದ ಕರ್ಕಿಕಳಿ ಚೌಕಿಮನೆ ವಿಶ್ವನಾಥ ಖಾರ್ವಿ ಅವರ ಮಗ ಸರ್ವದ (೨) ಎಂದು ಗುರುತಿಸಲಾಗಿದೆ. ಈ ಮಗುವನ್ನು ಮನೆಯ ಕೋಣೆಯಲ್ಲಿ ಮಲಗಿಸಿ ಉಪ್ಪುಂದ ಪೇಟೆಗೆ ಹೋಗಿದ್ದರು. ಇದೇ ವೇಳೆ ಮನೆಯ ಕೋಣೆಯಲ್ಲಿ ಮಲಗಿದ್ದ ಮಗು ಎದ್ದು ಮನೆಯಿಂದ ಹೊರಗೆ

ಕುಂದಾಪುರ: ನದಿಗೆ ಬಿದ್ದ ಮಗು ಮೃತ್ಯು Read More »

ಜೈಲಿನಿಂದ ಹೊರ ಬಂದಿದ್ದ ಮನೆಗಳ್ಳನ ಬರ್ಬರ ಹತ್ಯೆ

ಕಲಬುರಗಿ: ಹಳೆ ದ್ವೇಶದ ಹಿನ್ನಲೆ ಮನೆಗಳ್ಳನನ್ನ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಮಹೇಶ್ ಚಿಡರಗುಂಪಿ (38) ಕೊಲೆಯಾದ ದುರ್ದೈವಿಯಾಗಿದ್ದಾನೆ. ಕಳೆದ ರಾತ್ರಿ ನಗರದ ಹೊರವಲಯದ ಕೆರೆ ಭೋಸಗಾ ಕ್ರಾಸ್ ಬಳಿ ಶವ ಪತ್ತೆಯಾಗಿದೆ. ಹಳೆ ದ್ವೇಷ ಹಿನ್ನಲೆ ಯಾರೋ ದುಷ್ಕರ್ಮಿಗಳು ಆತನನ್ನು ಮನಬಂದಂತೆ ಥಳಿಸಿ ನಂತರ ಚಾಕುವಿನಿಂದ ಇರಿದು ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ ಪರಾರಿಯಾಗಿದ್ದಾರೆ. ಈತ ನಗರದಲ್ಲಿ ಹಾಡುಹಗಲೇ ಮನೆಗಳ್ಳತನ ಮಾಡುವುದರಲ್ಲಿ ನಿಸ್ಸೀಮನಾಗಿದ್ದನು ಅಲ್ಲದೆ ಈತನಿಗೆ ಜೈಲೇ

ಜೈಲಿನಿಂದ ಹೊರ ಬಂದಿದ್ದ ಮನೆಗಳ್ಳನ ಬರ್ಬರ ಹತ್ಯೆ Read More »

ಮನೆ ಬಿಟ್ಟು ಹೋದ ಪತ್ನಿ- ಜೀವ ಬಿಟ್ಟ ಪತಿ ಎರಡು ದಿನದ ಬಳಿಕ ಶವ ಪತ್ತೆ

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ಪತ್ನಿ ಮನೆ ಬಿಟ್ಟು ಹೋದ ವಿಚಾರವಾಗಿ ಮನನೊಂದ ಪತಿ ನೇಣು ಬಿಗಿದು ಆತ್ಮ ಹತ್ಯೆ ಮಾಡಿಕೊಂಡ ಘಟನೆ ನೆಲಮಂಗಲ ತಾಲೂಕಿನ ಡಾಬಸ್‍ಪೇಟೆಯ ಶಿವಗಂಗಾ ವೃತ್ತದಲ್ಲಿ ನಡೆದಿದೆ. ಶಿವರಾಮ್ (42) ನೇಣಿಗೆ ಶರಣಾದ ದುರ್ದೈವಿ. ಕೌಟುಂಬಿಕ ಕಲಹ ಹಿನ್ನೆಲೆ ಹೆಂಡತಿ ಮನೆ ಬಿಟ್ಟು ಹೋಗಿದ್ದಾಳೆ. ಈ ಕುರಿತಾಗಿ ಮನನೊಂದ ಗಂಡ ತಾನು ವಾಸವಾಗಿದ್ದ ಮನೆಯಲ್ಲಿ ನೇಣಿಗೆ ಶರಣಾಗಿದ್ದಾನೆ. ಕಳೆದ ಮೂರು ದಿನಗಳಿಂದ ಮನೆಯ ಬಾಗಿಲು ತೆರೆಯದ ಹಿನ್ನೆಲೆ ಸ್ಥಳೀಯ ನೋಡಿದ್ದಾರೆ. ಎರಡು ದಿನಗಳ ಹಿಂದೆ

ಮನೆ ಬಿಟ್ಟು ಹೋದ ಪತ್ನಿ- ಜೀವ ಬಿಟ್ಟ ಪತಿ ಎರಡು ದಿನದ ಬಳಿಕ ಶವ ಪತ್ತೆ Read More »

ಬಿಎಸ್‌ವೈ ರಾಜೀನಾಮೆ: ನೇಣಿಗೆ ಶರಣಾದ ಅಭಿಮಾನಿ

ಚಾಮರಾಜನಗರ: ಬಿ.ಎಸ್.ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಮನನೊಂದ ಅಭಿಮಾನಿ ಓರ್ವ ನೇಣಿಗೆ ಶರಣಾಗಿರುವ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ. ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದ ನಿವಾಸಿಯಾದ ರವಿ (೩೫) ನೇಣಿಗೆ ಶರಣಾಗಿರುವ ವ್ಯಕ್ತಿ. ಹೋಟೆಲ್ ನಲ್ಲಿ ಕೆಲಸ ಮಾಡಿಕೊಂಡಿದ್ದ ರವಿ ಯಡಿಯೂರಪ್ಪನವರ ಅಪ್ಪಟ ಅಭಿಮಾನಿಯಾಗಿದ್ದನು. ನಿನ್ನೆ ಬಿಎಸ್‌ವೈ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟ ಕ್ಷಣದಿಂದ ಸಾಕಷ್ಟು ನೊಂದಿದ್ದ. ನಿನ್ನೆ ಹೋಟೆಲಿನಲ್ಲೇ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಬಿಎಸ್‌ವೈ ರಾಜೀನಾಮೆ: ನೇಣಿಗೆ ಶರಣಾದ ಅಭಿಮಾನಿ Read More »