ಸುಳ್ಯ: ಅಪಘಾತಕ್ಕೀಡಾದ ಮಹಿಳೆ ಮೃತ್ಯು
ಸುಳ್ಯ: ಇಲ್ಲಿನ ಐವರ್ನಾಡು ಹೈಸ್ಕೂಲು ಸಮೀಪ ಬೈಕಿನಿಂದ ಬಿದ್ದ ಮಹಿಳೆಯೋರ್ವರು ಮೃತಪಟ್ಟ ಘಟನೆ ಆ.16ರಂದು ನಡೆದಿದೆ.ಮೃತರನ್ನು ಎಡಮಂಗಲದ ದೇವಸ್ಯ ವಿನೋದ ಶಶಿಧರ್(47) ಎಂದು ಗುರುತಿಸಲಾಗಿದೆ. ಇವರ ಮಗನಾದ ನಿಖಿಲ್ ಜೊತೆ ವಿನೋದರ ತಾಯಿಮನೆಗೆ ಹೋಗುತ್ತಿದ್ದರು. ಐವರ್ನಾಡು ಹೈಸ್ಕೂಲು ಸಮೀಪ ತಲುಪಿದಾಗ ಮಳೆ ಬಂದ ಕಾರಣ ವಿನೋದೆವರು ಕೊಡೆ ಬಿಡಿಸಲೆತ್ನಿಸಿದ್ದಾರೆ. ಈ ವೇಳೆ ಗಾಳಿಯ ರಭಸಕ್ಕೆ ಅವರು ನಿಯಂತ್ರಣ ಕಳೆದುಕೊಂಡು ರಸ್ತೆಗೆಸೆಯಲ್ಪಟ್ಟಿದ್ದಾರೆ. ಘಟನೆ ನಡೆದ ತಕ್ಷಣ ಸ್ಥಳೀಯರು ಸುಳ್ಯ ಕೆವಿಜಿ ಆಸ್ಪತ್ರೆಗೆ ದಾಖಲಿಸಿ, ಬಳಿಕ ತಲೆಗೆ ತೀವ್ರ ತರಹದ […]
ಸುಳ್ಯ: ಅಪಘಾತಕ್ಕೀಡಾದ ಮಹಿಳೆ ಮೃತ್ಯು Read More »








