ಕ್ರೈಂ

ಸುಳ್ಯ: ಗೆಲ್ಲು ಕಡಿಯುತ್ತಿದ್ದ ವೇಳೆ ಬಳ್ಳಿ ಸಿಲುಕಿ ಮೃತ್ಯು

ಸುಳ್ಯ: ಮರದ ಗೆಲ್ಲು ಕಡಿಯುತ್ತಿದ್ದ ವೇಳೆ ಮರದಲ್ಲಿ ಇದ್ದ ಬಳ್ಳಿಯೊಂದು ಸಿಲುಕಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಸುಳ್ಯ ತಾಲೂಕಿನ ಮಡಪ್ಪಾಡಿ ಗ್ರಾಮದ ಕೇವಳದಲ್ಲಿ ನಡೆದಿದೆ. ಮೃತಪಟ್ಟವರನ್ನು ಕೇವಳದ ಹೂವಪ್ಪ ಗೌಡ ಎಂದು ಗುರುತಿಸಲಾಗಿದೆ. ಹೂವಪ್ಪ ಗೌಡರವರು ಮಧ್ಯಾಹ್ನ ಒಂದೂವರೆ ಗಂಟೆಯ ಸಮಯದಲ್ಲಿ ತನ್ನ ಮನೆಯ ಎದುರಿನ ಸಣ್ಣ ಗಾತ್ರದ ಮರದ ಗೆಲ್ಲು ಕಡಿಯಲು ಹತ್ತಿದ್ದರು. ಗೆಲ್ಲು ಬೀಳುವ ಸಂದರ್ಭದಲ್ಲಿ ಮರದಲ್ಲಿದ್ದ ಬಿಳಲು ಬಳ್ಳಿಗೆ ಅವರು ಸಿಲುಕಿದರೆನ್ನಲಾಗಿದೆ. ಬಳ್ಳಿ ಅವರ ದೇಹಕ್ಕೆ ಸಿಲುಕಿ ಬಿಗಿದಿದ್ದು ಇದನ್ನು ಕಂಡ ಮನೆಯವರು […]

ಸುಳ್ಯ: ಗೆಲ್ಲು ಕಡಿಯುತ್ತಿದ್ದ ವೇಳೆ ಬಳ್ಳಿ ಸಿಲುಕಿ ಮೃತ್ಯು Read More »

ಶಾಸಕ ಎಂ.ಪಿ ಕುಮಾರಸ್ವಾಮಿ ಕಾರು ಅಪಘಾತ, ಮಹಿಳೆ ಸಾವು

ಹಾಸನ: ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರಿಗೆ ಸೇರಿದ ಕಾರು ಡಿಕ್ಕಿಯಾಗಿ ಮಹಿಳೆ ಸಾವನ್ನಪ್ಪಿದ ಘಟನೆ ಜಿಲ್ಲೆಯ ಬೇಲೂರು ತಾಲ್ಲೂಕಿನ ಹನುಮಂತ ನಗರದಲ್ಲಿ ನಡೆದಿದೆ. ಬೇಲೂರಿನತ್ತ ಬರುತ್ತಿದ್ದ ಶಾಸಕರ ಕಾರು ಚಾಲಕ ಅಪಘಾತವೆಸಗಿದ್ದು, 55 ವರ್ಷದ ಮಹಿಳೆ ಮೃತಪಟ್ಟಿದ್ದಾರೆ. ಚಾಲಕನ ಪಾನಮತ್ತನಾಗಿ ಕಾರು ಚಾಲನೆ ಮಾಡುತ್ತಿದ್ದ ಆರೋಪ ಕೇಳಿಬಂದಿದೆ. ಕಾರು ರಿಪೇರಿಗೆಂದು ಬೆಂಗಳೂರಿಗೆ ಹೊರಟಿದ್ದ ಎನ್ನಲಾಗಿದ್ದು, ಬೇಲೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಶಾಸಕ ಎಂ.ಪಿ ಕುಮಾರಸ್ವಾಮಿ ಕಾರು ಅಪಘಾತ, ಮಹಿಳೆ ಸಾವು Read More »

ಹಿಂದೂ ಯುವತಿಯರ ಜೊತೆ ಮುಸ್ಲಿಂ ಯುವಕ ಹಾಗೂ ಮತ್ತೊಬ್ಬ| ಜೋಡಿಗಳು ಪೊಲೀಸ್ ವಶಕ್ಕೆ|

ಮಂಗಳೂರು: ನಗರದ ಹೊರವಲಯದ ಗುರುಪುರ ಬಳಿಯ ಚಿಲಿಂಬಿ ಗುಡ್ಡೆ ಎಂಬಲ್ಲಿ ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿಯರು ಪತ್ತೆಯಾಗಿದ್ದು, ಹಿಂದೂ ಸಂಘಟನೆಗಳ ಕಾರ್ಯಕರ್ತರು ದಾಳಿ ನಡೆಸಿದ್ದಾರೆ. ಈ ಕಾರ್ಯಾಚರಣೆ ವೇಳೆ ಕೃತ್ಯ ಬೆಳಕಿಗೆ ಬಂದಿದ್ದು, ಗಾಂಜಾ ಮಾಫಿಯಾ ಶಂಕೆ ವ್ಯಕ್ತವಾಗಿದೆ. ಗುರುಪುರದ ಚಿಲಿಂಬಿ ಗುಡ್ಡೆ ಎಂಬಲ್ಲಿ ಒಬ್ಬ ಹಿಂದೂ ಯುವಕ ಹಾಗೂ ಮುಸ್ಲಿಂ ಯುವಕನೊಂದಿಗೆ ಇಬ್ಬರು ಹಿಂದೂ ಯುವತಿಯರು ಪತ್ತೆಯಾಗಿದ್ದು, ಇವರು ಬಳಸಿದ್ದ ಕಾರ್ ಗೆ ನಂಬರ್ ಪ್ಲೇಟ್ ಇಲ್ಲದಿರುವುದು ಅನುಮಾನ ಮೂಡಿಸಿದೆ. ಪತ್ತೆಯಾದ ನಾಲ್ವರನ್ನೂ ಬಜ್ಪೆ ಪೋಲಿಸ್

ಹಿಂದೂ ಯುವತಿಯರ ಜೊತೆ ಮುಸ್ಲಿಂ ಯುವಕ ಹಾಗೂ ಮತ್ತೊಬ್ಬ| ಜೋಡಿಗಳು ಪೊಲೀಸ್ ವಶಕ್ಕೆ| Read More »

ಹಡಗಿನಲ್ಲಿ ಡ್ರಗ್ಸ್ ಪಾರ್ಟಿ| ಬಾಲಿವುಡ್ ನಟ ಶಾರೂಕ್ ಖಾನ್ ಪುತ್ರ ಸೇರಿ ಹಲವರ ಬಂಧನ|

ಮುಂಬೈ: ಪಾರ್ಟಿಯೊಂದರಲ್ಲಿ ಡ್ರಗ್ಸ್‌ ಬಳಕೆ ಮಾಡುತ್ತಿರುವ ಮಾಹಿತಿಯನ್ನು ಆಧರಿಸಿ ಶನಿವಾರ ರಾತ್ರಿ ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕದ (ಎನ್‌ಸಿಬಿ) ಅಧಿಕಾರಿಗಳು ಪ್ರಯಾಣಿಕರ ಕ್ರೂಸ್‌ ಹಡಗಿನ ಮೇಲೆ ದಾಳಿ ನಡೆಸಿದ್ದಾರೆ. ನೂರಾರು ಮಂದಿ ಪ್ರಯಾಣಿಕರಿದ್ದ ಹಡಗು ಗೋವಾ ಕಡೆಗೆ ಸಾಗುವುದಿತ್ತು. ಹಡಗಿನಲ್ಲಿ ಪಾರ್ಟಿ ನಡೆಯುತ್ತಿರುವ ಮಾಹಿತಿಯನ್ನು ಆಧರಿಸಿ ಸಮೀರ್‌ ವಾಂಖೆಡೆ ನೇತೃತ್ವದ ಎನ್‌ಸಿಬಿಯ ತಂಡವು ಹಡಗಿನಲ್ಲಿ ಶೋಧ ಕಾರ್ಯ ನಡೆಸಿರುವುದಾಗಿ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಬಾಲಿವುಡ್‌ ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ ಸೇರಿ‌ ಹಲವರನ್ನು

ಹಡಗಿನಲ್ಲಿ ಡ್ರಗ್ಸ್ ಪಾರ್ಟಿ| ಬಾಲಿವುಡ್ ನಟ ಶಾರೂಕ್ ಖಾನ್ ಪುತ್ರ ಸೇರಿ ಹಲವರ ಬಂಧನ| Read More »

ಈಕೆ ಅದೊಂದು ಕಾರಣಕ್ಕೆ ಕನ್ಯತ್ವವನ್ನೇ ಮಾರಾಟ ಮಾಡಲು ತಯಾರಾದಳು..! ಅಷ್ಟಕ್ಕೂ ಆ ಬಾಲಕಿಗೆ ಇದ್ದ ಆ ಸಮಸ್ಯೆ ಏನು ಗೊತ್ತೆ..?

ಮುಂಬೈ:ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯಲ್ಲಿ ಆಘಾತಕಾರಿ ಘಟನೆ ವರದಿಯಾಗಿದ್ದು, 11 ವರ್ಷದ ಬಾಲಕಿಯೊಬ್ಬಳು ತನ್ನ ತಾಯಿಯ ಕ್ಯಾನ್ಸರ್ ಚಿಕಿತ್ಸೆಗಾಗಿ ಹಣ ಗಳಿಸಲು ತನ್ನ ಕನ್ಯತ್ವವನ್ನು ಮಾರಾಟ ಮಾಡಲು ತಯಾರಾಗಿದ್ದಾಳೆ. ಸಂತ್ರಸ್ತೆಯನ್ನು ಪೊಲೀಸರು ರಕ್ಷಿಸಿದ್ದಾರೆ. ಈ ಪ್ರಕರಣದಲ್ಲಿಮೂವರು ಮಹಿಳೆಯರನ್ನು ಕೂಡ ಪೊಲೀಸರು ಬಂಧಿಸಿದ್ದಾರೆ. ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಮೂವರು ಆರೋಪಿ ಮಹಿಳೆಯರು ರೂ. 40,000 ಕ್ಕೆ ‘ಗ್ರಾಹಕ’ ವ್ಯವಸ್ಥೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಪ್ರಾಪ್ತ ಬಾಲಕಿಯ ಕುಟುಂಬಕ್ಕೆ ಆಕೆಯ ತಾಯಿ ಕ್ಯಾನ್ಸರ್ ನಿಂದ ಬಳಲುತ್ತಿರುವುದರಿಂದ ಆಕೆಯ ತಾಯಿಗೆ

ಈಕೆ ಅದೊಂದು ಕಾರಣಕ್ಕೆ ಕನ್ಯತ್ವವನ್ನೇ ಮಾರಾಟ ಮಾಡಲು ತಯಾರಾದಳು..! ಅಷ್ಟಕ್ಕೂ ಆ ಬಾಲಕಿಗೆ ಇದ್ದ ಆ ಸಮಸ್ಯೆ ಏನು ಗೊತ್ತೆ..? Read More »

ಪ್ರೀತಿಗಾಗಿ ಗೂಡು ತೊರೆದ ಹಕ್ಕಿ| ಮುಸ್ಲಿಂ ಯುವಕನ ಜೊತೆ ಬಾಳ ಹೊರಟ ಹಿಂದೂ ಯುವತಿ|

ಪುತ್ತೂರು: ಇಲ್ಲಿನ ಕೊಳ್ತಿಗೆ ಗ್ರಾಮದ ಕುಂಟಿಕಾನದಲ್ಲಿ ಮುಸ್ಲಿಂ ಯುವಕನ ಮನೆಯಲ್ಲಿದ್ದ ಹಿಂದು ಯುವತಿಯು ಇದೀಗ ಆಕೆಯ ಇಚ್ಛೆಯಂತೆ ಆತನ ಜೊತೆಗೆ ಹೊಸಬಾಳಿಗೆ ತುದಿಗಾಲಲ್ಲಿ ನಿಂತಿರುವುದಾಗಿ ವರದಿಯಾಗಿದೆ. ಆಕೆಯನ್ನು ಸ್ವಧರ್ಮದಲ್ಲಿ ಉಳಿಸಿಕೊಳ್ಳಲು ಹಿಂದೂ ಸಂಘಟನೆಗಳ ಕಾರ್ಯಕರ್ತರು ಅವಿರತ ಶ್ರಮ ವಹಿಸುತ್ತಿದ್ದಾರೆ ಕೇರಳದ ಆದೂರು ಪೊಲೀಸ್ ಠಾಣಾ ವ್ಯಾಪ್ತಿಯ ದೇಲಂಪಾಡಿ ಕಲ್ಲಡ್ಕ ದಿಂದ ನಾಪತ್ತೆಯಾದ ಯುವತಿಯನ್ನು ನಿನ್ನೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಪ್ರಬುದ್ದಳಾದ ಆಕೆಗೆ ಅವಳ ಇಚ್ಛೆಯಂತೆ ನಡೆಯಲು ಅವಕಾಶ ಕೊಡಲಾಗಿತ್ತು. ದೇಲಂಪಾಡಿ ಕಲ್ಲಡ್ಕ ನಿವಾಸಿ ಭವ್ಯಶ್ರೀ ಬುಧವಾರ ಸೆ.29 ರಂದು

ಪ್ರೀತಿಗಾಗಿ ಗೂಡು ತೊರೆದ ಹಕ್ಕಿ| ಮುಸ್ಲಿಂ ಯುವಕನ ಜೊತೆ ಬಾಳ ಹೊರಟ ಹಿಂದೂ ಯುವತಿ| Read More »

11ನೇ‌ ಮಹಡಿಯಿಂದ ಬಿದ್ದ ಮಗು ದಾರುಣ ಸಾವು, ಪೋಷಕರ ಆಕ್ರಂದನ

ಬೆಂಗಳೂರು: ಪೋಷಕರು ಹೊರಗೆ ಹೋಗಿದ್ದ ಸಮಯದಲ್ಲಿ 11ನೇ ಮಹಡಿಯಲ್ಲಿ ಆಟವಾಡುತ್ತಿದ್ದ ಹನ್ನೊಂದು ವರ್ಷದ ಬಾಲಕ ಆಯ ತಪ್ಪಿ ಪಕ್ಕದ ಕ್ಲಬ್ ಹೌಸ್‍ನ 5ನೇ ಮಹಡಿಗೆ ಬಿದ್ದು ಮೃತಪಟ್ಟಿರುವ ಘಟನೆ ಆರ್‍ಆರ್ ನಗರ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸಾಫ್ಟ್‌ವೇರ್ ಇಂಜಿನಿಯರ್ ಪುತ್ರ ಗಗನ್ ಮೃತಪಟ್ಟ ಬಾಲಕ. ಬನಶಂಕರಿ 3ನೇ ಹಂತದಲ್ಲಿರುವ ಶೋಭಾ ವ್ಯಾಲಿ ವ್ಯೂ ಅಪಾರ್ಟ್‍ಮೆಂಟ್‍ನಲ್ಲಿ ಈ ದುರ್ಘಟನೆ ಸಂಭವಿಸಿದೆ. ಗಗನ್ ನಿನ್ನೆ ಸ್ನೇಹಿತರ ಜೊತೆ ಆಟವಾಡುತ್ತಿದ್ದುದನ್ನು ಗಮನಿಸಿದ ಪೋಷಕರು, ಮನೆ ಬಳಿಯೇ ಬಿಟ್ಟು ಕಾರ್ಯನಿಮಿತ್ತ ಹೊರಗೆ

11ನೇ‌ ಮಹಡಿಯಿಂದ ಬಿದ್ದ ಮಗು ದಾರುಣ ಸಾವು, ಪೋಷಕರ ಆಕ್ರಂದನ Read More »

ಪ್ರೀತಿಸಲು ಒಲ್ಲೆ ಎಂದವಳ ಇರಿದು ಕೊಂದ ಪಾಗಲ್ ಪ್ರೇಮಿ|

ಕೊಚ್ಚಿ: ಕೇರಳದ ಕೊಟ್ಟಾಯಂ ಜಿಲ್ಲೆಯ ಪಾಲಾದ ಸೇಂಟ್ ಥಾಮಸ್ ಕಾಲೇಜಿನ ಆವರಣದಲ್ಲಿ ಕಾಲೇಜು ವಿದ್ಯಾರ್ಥಿನಿಯನ್ನು ಆಕೆಯ ಕ್ಲಾಸ್ ಮೇಟ್ ಹುಡುಗನೊಬ್ಬ ಇರಿದು ಕೊಲೆ ಮಾಡಿರುವ ಘಟನೆ ‌ನಡೆದಿದೆ. ಶುಕ್ರವಾರ ಬೆಳಿಗ್ಗೆ ಕಾಲೇಜಿನಲ್ಲಿ ನಡೆದ ಪೂರಕ ಪರೀಕ್ಷೆಯ ನಂತರ ಆರೋಪಿ ಅಭಿಷೇಕ್ ಬೈಜು ಎಂಬಾತ ತನ್ನ ಬ್ಯಾಚ್‌ಮೇಟ್ ನಿತಿನಮೋಲ್(22) ಮೇಲೆ ಬ್ಲೇಡ್‌ನಿಂದ ಹಲ್ಲೆ ಮಾಡಿದ್ದ ಹಾಗೂ ಆಕೆಯ ಗಂಟಲನ್ನು ಕತ್ತರಿಸಿದ್ದ ಎಂದು ಪಾಲಾ ಸಬ್ ಇನ್ಸ್‌ಪೆಕ್ಟರ್ ಅಭಿಲಾಷ್ ಹೇಳಿದ್ದಾರೆ. ದಾಳಿಯ ಪ್ರತ್ಯಕ್ಷದರ್ಶಿಯಾಗಿದ್ದ ಕಾಲೇಜಿನ ಸೆಕ್ಯುರಿಟಿ-ಗಾರ್ಡ್ ಸುದ್ದಿಗಾರರೊಂದಿಗೆ ಮಾತನಾಡುತ್ತಾ, “ಆರೋಪಿ

ಪ್ರೀತಿಸಲು ಒಲ್ಲೆ ಎಂದವಳ ಇರಿದು ಕೊಂದ ಪಾಗಲ್ ಪ್ರೇಮಿ| Read More »

ಅಪ್ರಾಪ್ತೆಯ ಗರ್ಭಿಣಿಯನ್ನಾಗಿಸಿದ ಇಬ್ಬರು ಅಂದರ್

ಬೆಳ್ತಂಗಡಿ: 10ನೇ ತರಗತಿ ವಿಧ್ಯಾರ್ಥಿನಿ ಮೇಲೆ ಅತ್ಯಾಚಾರ ವೆಸಗಿ ಆಕೆಯ ಗರ್ಭಿಣಿಯನ್ನಾಗಿಸಿದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಜೆಸಿಬಿ ಚಾಲಕನಾಗಿದ್ದ ಕಾರ್ಕಳ ತಾಲೂಕಿನ ರವೀಂದ್ರ ಹಾಗೂ ಬೆಳ್ತಂಗಡಿ ತಾಲೂಕಿನ ಕೊಕ್ರಾಡಿ ನಿವಾಸಿ ಯೋಗೀಶ ಎಂದು ತಿಳಿದುಬಂದಿದೆ. ಆರೋಪಿಗಳು ಬೆಳ್ತಂಗಡಿ ಸವಣಾಲುವಿನ ಕಾಡು ಪ್ರದೇಶವೊಂದರಲ್ಲಿ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ನಡೆಸಿ ಆಕೆಯನ್ನು ಗರ್ಭಿಣಿಯಾಗಿಸಿದ್ದರು, ಅಲ್ಲದೆ ಈ ವಿಚಾರವನ್ನು ಯಾರಿಗೂ ಹೇಳದಂತೆ ಬೆದರಿಕೆ ಹಾಕಿದ್ದರು. ಲೌಕ್ ಡೌನ್ ಬಳಿಕ ಶಾಲೆಗೆ ತೆರಳಿದ ವೇಳೆ ಲಸಿಕೆ ನೀಡುವ ಸಲುವಾಗಿ

ಅಪ್ರಾಪ್ತೆಯ ಗರ್ಭಿಣಿಯನ್ನಾಗಿಸಿದ ಇಬ್ಬರು ಅಂದರ್ Read More »

ಮುಸ್ಲಿಂ ಹುಡುಗನೊಂದಿಗೆ ಒಂಟಿ ಮನೆಯಲ್ಲಿದ್ದ ಹಿಂದೂ ಹುಡುಗಿ| ಕಾಸರಗೋಡು ನ್ಯಾಯಾಲಯದಲ್ಲಿ ನಡೆಯಿತು ಮಹತ್ವದ ‌ತಿರುವು| ನಿನ್ನಿಚ್ಛೆಯಂತೆ ಮಾಡು‌ ಎಂದು ಕೋರ್ಟ್ ಯುವತಿಗೆ‌ ಹೇಳಿದ್ಯಾಕೆ? ಅವಳು ಅವನನ್ನು ವರಿಸುತ್ತಾಳಂತೆ…!?

ಮಂಗಳೂರು: ಹಿಂದೂ ಹುಡುಗಿಯನ್ನು ಮುಸ್ಲಿಂ ಯುವಕನೊಬ್ಬ ಮನೆಯಲ್ಲಿರಿಸಿದ್ದಾನೆಂದು ಆರೋಪಿಸಿ ಹಿಂದೂ ಪರ ಸಂಘಟನೆಯ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಆತನ ಮನೆ ಮುಂದೆ ಸೆ. 29ರಂದು ಕೊಳ್ತಿಗೆಯಲ್ಲಿ ಜಮಾಯಿಸಿದ ಘಟನೆಗೆ ಸಂಬಂಧಿಸಿದಂತೆ ಕಾಸರಗೋಡು ನ್ಯಾಯಾಲಯವು ಮಹತ್ವದ ಆದೇಶ ನೀಡಿದೆ. ದ.ಕ ಜಿಲ್ಲೆಯ ಪುತ್ತೂರು ತಾಲೂಕಿನ ಕೊಳ್ತಿಗೆ ಗ್ರಾಮದ ಕುಂಟಿಕಾನದ ಸಿದ್ದಿಕ್ ಎಂಬಾತನ ಮನೆಯಲ್ಲಿದ್ದಳು ಎಂದು ಹೇಳಲಾದ ಯುವತಿ ಅಪ್ರಾಪ್ತೆ ಎಂದು ಈ ಹಿಂದೆ ವರದಿಯಾಗಿತ್ತು. ಆತ ಆಕೆಯನ್ನು ಅಪಹರಿಸಿ ಮನೆಯಲ್ಲಿ ತಂದು ಕೂಡಿಹಾಕಿದ್ದಾಗಿ ಕೇರಳದ ಅದೂರು ಠಾಣೆಯಲ್ಲಿ ಯುವತಿ

ಮುಸ್ಲಿಂ ಹುಡುಗನೊಂದಿಗೆ ಒಂಟಿ ಮನೆಯಲ್ಲಿದ್ದ ಹಿಂದೂ ಹುಡುಗಿ| ಕಾಸರಗೋಡು ನ್ಯಾಯಾಲಯದಲ್ಲಿ ನಡೆಯಿತು ಮಹತ್ವದ ‌ತಿರುವು| ನಿನ್ನಿಚ್ಛೆಯಂತೆ ಮಾಡು‌ ಎಂದು ಕೋರ್ಟ್ ಯುವತಿಗೆ‌ ಹೇಳಿದ್ಯಾಕೆ? ಅವಳು ಅವನನ್ನು ವರಿಸುತ್ತಾಳಂತೆ…!? Read More »