ಸುಳ್ಯ | ಹಿಂದೂ ಯುವತಿಯರ ಜೊತೆ ಮುಸ್ಲಿಂ ಯುವಕನ ಪ್ರಯಾಣ…!? ತಪ್ಪು ಮಾಹಿತಿಯಿಂದ ಬಸ್ ಅಡ್ಡಗಟ್ಟಿ ಪೇಚಿಗೆ ಸಿಲುಕಿದ ಹಿಂಜಾವೇ | ಇತ್ಯರ್ಥ ಬಳಿಕವೂ ನಿಲ್ಲದ ಆವೇಶ, ಪೊಲೀಸರಿಗೇ ಧಮ್ಕಿ….!
ಸುಳ್ಯ: ರಾತ್ರಿ ಬಸ್ಸಿನಲ್ಲಿ ಹಿಂದೂ ಯುವತಿಯರ ಜೊತೆ ಮುಸ್ಲಿಂ ಯುವಕನೊಬ್ಬ ಪ್ರಯಾಣಿಸುತ್ತಿರುವುದಾಗಿ ತಪ್ಪು ಮಾಹಿತಿ ಪಡೆದ ಹಿಂಜಾವೇ ಕಾರ್ಯಕರ್ತರು ಬಸ್ಸನ್ನು ತಡೆದು ಬಳಿಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ಇತ್ಯರ್ಥವಾದ ನಂತರವೂ ಪೊಲೀಸರ ಮೇಲೆಯೇ ಧಮ್ಕಿ ಹಾಕಿದ ಘಟನೆ ನಿನ್ನೆ ರಾತ್ರಿ ಸುಳ್ಯದಲ್ಲಿ ನಡೆದಿದೆ. ಪುತ್ತೂರಿನಿಂದ ನಿನ್ನೆ ರಾತ್ರಿ ಬೆಂಗಳೂರಿಗೆ ಹೊರಟಿದ್ದ ಸಾರಿಗೆ ಬಸ್ಸಿನಲ್ಲಿ ಬೆಂಗಳೂರಿನ ಇಬ್ಬರು ಯುವತಿಯರು ಪ್ರಯಾಣಿಸುತ್ತಿದ್ದರು. ಈ ವೇಳೆ ಪುತ್ತೂರಿನಿಂದ ಕುಂಬ್ರಕ್ಕೆ ಟಿಕೆಟ್ ಮಾಡಿದ್ದ ಮುಸ್ಲಿಮ್ ಯುವಕನೋರ್ವನೂ ಪ್ರಯಾಣಿಸುತ್ತಿದ್ದ. ಬಸ್ ಕುಂಬ್ರ ತಲುಪುತ್ತಿದ್ದಂತೆ ಬೆಂಗಳೂರಿನಿಂದ […]