ಕರಾವಳಿ

ಸುಳ್ಯ: ಕಾರು ಡಿಕ್ಕಿ ಹೊಡೆದು ಪಾದಚಾರಿ ಸಾವು

ಸಮಗ್ರ ನ್ಯೂಸ್: ಕಾರೊಂದು ಡಿಕ್ಕಿ ಹೊಡೆದು ಪಾದಚಾರಿ ಸಾವನ್ನಪ್ಪಿದ ಘಟನೆ ಸುಳ್ಯದಲ್ಲಿ ಎ.17ರ ಮುಂಜಾನೆ ಸಂಭವಿಸಿದೆ. ಇಲ್ಲಿನ ಸರಕಾರಿ ಬಸ್ಸು ನಿಲ್ದಾಣದ ಬಳಿಯಲ್ಲಿ ಘಟನೆ ನಡೆದಿದ್ದು, ನಗರದ ಜಟ್ಟಿಪಳ್ಳ ಎಂಬಲ್ಲಿನ ಗೋಪಾಲ ಎಂಬುವರು ಮೃತಪಟ್ಟಿದ್ದಾಗಿ‌ ತಿಳಿದುಬಂದಿದೆ. ಅಪಘಾತಕ್ಕೆ ಕಾರಣವಾದ ಕಾರು ಕೇರಳ ಮೂಲದ್ದು‌ ಎನ್ನಲಾಗಿದ್ದು, ಸ್ಥಳಕ್ಕೆ ಪೊಲೀಸರು ಆಗಮಿಸಿ‌ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಸುಳ್ಯ: ಕಾರು ಡಿಕ್ಕಿ ಹೊಡೆದು ಪಾದಚಾರಿ ಸಾವು Read More »

ಉಡುಪಿ : ಏ. 17ರಿಂದ ಉಡುಪಿ ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ ಅಂಡರ್ ಪಾಸ್ ಸಂಚಾರಕ್ಕೆ ಮುಕ್ತ -ಯಶ್ ಪಾಲ್ ಸುವರ್ಣ

ಸಮಗ್ರ ನ್ಯೂಸ್‌ : ರಾಷ್ಟೀಯ ಹೆದ್ದಾರಿ 66 ಉಡುಪಿ ಸಂತೆಕಟ್ಟೆ ಅಂಡರ್ ಪಾಸ್ ಕಾಮಗಾರಿಯ ಒಂದು ಭಾಗ ಪೂರ್ಣಗೊಂಡಿದ್ದು ಏಪ್ರಿಲ್ 17 ರಿಂದ ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ತಿಳಿಸಿದ್ದಾರೆ. ಈ ಹಿಂದಿನ ರಾಷ್ಟೀಯ ಹೆದ್ದಾರಿಯ ಅವೈಜ್ಞಾನಿಕ ಕಾಮಗಾರಿಯಿಂದ ಸಂತೆಕಟ್ಟೆಯಲ್ಲಿ ನಿತ್ಯ ವಾಹನ ದಟ್ಟಣೆಯಿಂದ ನಿತ್ಯ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದ್ದು, ಸಂಸದೆ ಶೋಭಾ ಕರಂದ್ಲಾಜೆಯವರು ಆದ್ಯತೆಯ ಮೇರೆಗೆ ಅಂಡರ್ ಪಾಸ್ ಕಾಮಗಾರಿ ಮಂಜೂರು ಮಾಡಿ ಇದೀಗ ಸುಗಮ ಸಂಚಾರಕ್ಕೆ ಅವಕಾಶ

ಉಡುಪಿ : ಏ. 17ರಿಂದ ಉಡುಪಿ ಸಂತೆಕಟ್ಟೆ ರಾಷ್ಟ್ರೀಯ ಹೆದ್ದಾರಿ ಅಂಡರ್ ಪಾಸ್ ಸಂಚಾರಕ್ಕೆ ಮುಕ್ತ -ಯಶ್ ಪಾಲ್ ಸುವರ್ಣ Read More »

ಮಂಗಳೂರಿನಲ್ಲಿ ಮೋದಿಯವರು ನಾರಾಯಣ ಗುರುಗಳ ಮೂರ್ತಿಗೆ ಮಾಲಾರ್ಪಣೆ ಮಾಡಿರುವುದು ಬಿಜೆಪಿಯ ಗಿಮಿಕ್: ಸೊರಕೆ

ಸಮಗ್ರ ನ್ಯೂಸ್‌ : ಗಣರಾಜ್ಯೋತ್ಸವ ಪರೇಡ್‌ನಲ್ಲಿ ಬ್ರಹ್ಮಶ್ರೀ ನಾರಾಯಣಗುರುಗಳ ಸ್ತಬ್ಧಚಿತ್ರಕ್ಕೆ ಅವಕಾಶ ನೀಡದೆ, ಮಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ನಾರಾಯಣ ಗುರುಗಳ ಮೂರ್ತಿಗೆ ಹಾರಾರ್ಪಣೆ ಮಾಡಿರುವುದು ಬಿಜೆಪಿಯ ಚುನಾವಣಾ ಗಿಮಿಕ್ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ. ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಪ್ರಶ್ನೆಯೊಂದಕ್ಕೆ ಈ ಪ್ರತಿಕ್ರಿಯೆ ನೀಡಿದ ಅವರು, 2013ರಲ್ಲಿ ಚುನಾವಣಾ ಪೂರ್ವದಲ್ಲಿ ವಿದೇಶದಲ್ಲಿರುವ ಕಪ್ಪು ಹಣ ತರುವುದಾಗಿ ಸುಳ್ಳು ಭರವಸೆ ನೀಡಿದಂತೆ, ನಾರಾಯಣ ಗುರುಗಳ ಮೂರ್ತಿಗೆ

ಮಂಗಳೂರಿನಲ್ಲಿ ಮೋದಿಯವರು ನಾರಾಯಣ ಗುರುಗಳ ಮೂರ್ತಿಗೆ ಮಾಲಾರ್ಪಣೆ ಮಾಡಿರುವುದು ಬಿಜೆಪಿಯ ಗಿಮಿಕ್: ಸೊರಕೆ Read More »

ಉಡುಪಿ: ಎ.21ರಂದು ಇನ್ಫೋಸಿಸ್ ಯಕ್ಷಗಾನ ಕೇಂದ್ರ ಲೋಕಾರ್ಪಣೆ

ಸಮಗ್ರ ನ್ಯೂಸ್‌ : ಬೆಂಗಳೂರಿನ ಇನ್ಫೋಸಿಸ್ ಫೌಂಡೇಷನ್ ಉಡುಪಿಯ ಯಕ್ಷಗಾನ ಕಲಾರಂಗದ ಮೂಲಕ ನಿರ್ಮಿಸಿದ ಇನ್ಫೋಸಿಸ್ ಫೌಂಡೇಷನ್ ಯಕ್ಷಗಾನ ಡೆವಲಪ್‌ಮೆಂಟ್, ಟ್ರೈನಿಂಗ್ ಆ್ಯಂಡ್ ರಿಸರ್ಚ್ ಸೆಂಟ್ (ಐವೈಸಿ)ಯ ನೂತನ ಕಟ್ಟಡದ ಲೋಕಾರ್ಪಣೆ ಇದೇ ಬರುವ ಎ.21ರಂದು ನಡೆಯಲಿದೆ ಎಂದು ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ.ಗಂಗಾಧರ ರಾವ್ ತಿಳಿಸಿದ್ದಾರೆ. ಇನ್ಫೋಸಿಸ್ ಯಕ್ಷಗಾನ ಕೇಂದ್ರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ಫೋಸಿಸ್ ಫೌಂಡೇಷನ್ 15.8 ಕೋಟಿ ರೂ. ವೆಚ್ಚದಲ್ಲಿ ಈ ಕಟ್ಟಡವನ್ನು ನಿರ್ಮಿಸಿದೆ. ಕಟ್ಟಡದಲ್ಲಿ 380 ಮಂದಿ ಕುಳಿತು ವೀಕ್ಷಿಸಬಹುದಾದ

ಉಡುಪಿ: ಎ.21ರಂದು ಇನ್ಫೋಸಿಸ್ ಯಕ್ಷಗಾನ ಕೇಂದ್ರ ಲೋಕಾರ್ಪಣೆ Read More »

ದಿ. ಪ್ರವೀಣ್ ನೆಟ್ಟಾರು ತಾಯಿಗೆ ಸಿಕ್ಕ ಮೋದಿ ಭೇಟಿ ಅವಕಾಶ ದಿ.ಸೌಜನ್ಯಳ ತಾಯಿಗೆ ಯಾಕಿಲ್ಲ? ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆ

ಸಮಗ್ರ ನ್ಯೂಸ್: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಎ.14 ಸಂಜೆ ಮಂಗಳೂರಿನಲ್ಲಿ ರೋಡ್ ಶೋ ನಡೆಸಿದ್ದು, ಏರ್ ಪೋರ್ಟ್ ನಲ್ಲಿ ಭಾರತೀಯ ಜನತಾ ಪಾರ್ಟಿಯ ಮುಖಂಡರೊಂದಿಗೆ ಸ್ವಾಗತಿಸುವ ಸಾಲಿನಲ್ಲಿ ಹುತಾತ್ಮ ಬಿಜೆಪಿ ಕಾರ್ಯಕರ್ತ ದಿ.ಪ್ರವೀಣ್ ನೆಟ್ಟಾರ್ ರವರ ತಾಯಿಗೆ ಅವಕಾಶವನ್ನು ನೀಡಲಾಗಿತ್ತು. ಈ ಭೇಟಿಯ ಅವಕಾಶ ಓರ್ವ ಸಾಮಾನ್ಯ ಕಾರ್ಯಕರ್ತನಿಗೆ ಸಿಕ್ಕ ಗೌರವವಾಗಿದ್ದು, ತಾಯಿಗೆ ಪ್ರಧಾನಿಯವರನ್ನು ಭೇಟಿಯಾಗಿಸಲು ಅವಕಾಶ ದೊರಕಿದ್ದು ವ್ಯಾಪಕ ಪ್ರಶಂಸೆಗೆ ಕಾರಣವಾಯಿತು. ಆದರೆ ಸದ್ಯ ಇದೇ ವಿಚಾರ ಸಾಮಾಜಿಕ ಜಾಲತಾಣದಲ್ಲಿ

ದಿ. ಪ್ರವೀಣ್ ನೆಟ್ಟಾರು ತಾಯಿಗೆ ಸಿಕ್ಕ ಮೋದಿ ಭೇಟಿ ಅವಕಾಶ ದಿ.ಸೌಜನ್ಯಳ ತಾಯಿಗೆ ಯಾಕಿಲ್ಲ? ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕ ಚರ್ಚೆ Read More »

ಪದ್ಮರಾಜ್ ಎದುರು ಮಂಕಾದ್ರಾ ಕ್ಯಾಪ್ಟನ್ ಚೌಟ| ದ.ಕ ದಲ್ಲಿ ಮೋದಿ V/s ಪದ್ಮರಾಜ್ ವಾತಾವರಣ!!

ಸಮಗ್ರ ನ್ಯೂಸ್: ದಕ್ಷಿಣ ಕನ್ನಡ ಕಾಂಗ್ರೆಸ್ ಅಭ್ಯರ್ಥಿ ಎದುರು ಬಿಜೆಪಿ ಅಭ್ಯರ್ಥಿ ಠುಸ್ ಆಗಿದೆ. ಪದ್ಮರಾಜ್ ಅಬ್ಬರದ ಎದುರು ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಂಕಾಗಿದ್ದಾರೆ. ಇದೆ ಕಾರಣಕ್ಕೆ ಬಿಜೆಪಿ ಮೋದಿಯವರನ್ನು‌‌ ಕರೆತಂದು ರೋಡ್ ಶೋ ನಡೆಸಿದ್ದಾರೆ ಎನ್ನಲಾಗಿದೆ. ರಾಜಕೀಯ ನಿಷ್ಣಾತರ ಪ್ರಕಾರ ಮಂಗಳೂರಿನಲ್ಲಿ ಪದ್ಮ ರಾಜ್ V/S ಬ್ರಿಜೇಶ್ ಬದಲು ಪದ್ಮರಾಜ್ ಪೂಜಾರಿ V/S ನರೇಂದ್ರ ಮೋದಿ ಅನ್ನೋ ವಾತಾವರಣ ನಿರ್ಮಾಣವಾಗಿದೆ. ಇನ್ನೂ ಮೋದಿ ಬಂದ ಮೇಲೆಯೇ ಬಿಜೆಪಿ ಅಭ್ಯರ್ಥಿಯ ಭವಿಷ್ಯ ಬದಲಾಗಬಹುದು ಅನ್ನೋ

ಪದ್ಮರಾಜ್ ಎದುರು ಮಂಕಾದ್ರಾ ಕ್ಯಾಪ್ಟನ್ ಚೌಟ| ದ.ಕ ದಲ್ಲಿ ಮೋದಿ V/s ಪದ್ಮರಾಜ್ ವಾತಾವರಣ!! Read More »

ಪುತ್ತೂರು: ನಿರ್ಮಾಣ ಹಂತದ ಸೇತುವೆ ಕುಸಿದು, 7 ಮಂದಿಗೆ ಗಾಯ, ಓರ್ವನ ಸ್ಥಿತಿ ಗಂಭೀರ

ಸಮಗ್ರ ನ್ಯೂಸ್: ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುಣಚ ಗ್ರಾಮದ ಮಲ್ಲಿಪ್ಪಾಡಿಯಲ್ಲಿ ರಸ್ತೆ ನಿರ್ಮಾಣ ಹಂತದ ಸೇತುವೆ ಕುಸಿದುಬಿದ್ದ ಪರಿಣಾಮ ಏಳು ಜನರಿಗೆ ಗಾಯವಾಗಿ ಓರ್ವ ಬ್ರಿಡ್ಜ್ ಕಾಮಗಾರಿ ಸಾಮಗ್ರಿಗಳ ಮಧ್ಯೆ ಸಿಲುಕಿ ಗಂಭೀರ ಗಾಯವಾದ ಘಟನೆ ನಡೆದಿದೆ. ಬರೆಂಜ-ಕುರುಡಕಟ್ಟೆ ಸಂಪರ್ಕ ರಸ್ತೆಯ ಮಲ್ಲಿಪ್ಪಾಡಿಯ ನಿರ್ಮಾಣ ಹಂತದಲ್ಲಿದ್ದ ಸೇತುವೆ ಇದಾಗಿದ್ದು, ತಳಭಾಗದ ರಾಡ್ ಜಾರಿ ಮೇಲ್ಭಾಗದ ಸಂಪೂರ್ಣ ಕಾಂಕ್ರೀಟ್ ಸ್ಲ್ಯಾಬ್ ಕುಸಿದಿದೆ. ಸೇತುವೆಯ ಕೊನೆಯ ಹಂತದ ಕಾಂಕ್ರೀಟ್ ಮಿಕ್ಸ್ ಹಾಕುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಉಳಿದ ಆರು

ಪುತ್ತೂರು: ನಿರ್ಮಾಣ ಹಂತದ ಸೇತುವೆ ಕುಸಿದು, 7 ಮಂದಿಗೆ ಗಾಯ, ಓರ್ವನ ಸ್ಥಿತಿ ಗಂಭೀರ Read More »

ಜಾಲ್ಸೂರು: ನಿಯಂತ್ರಣ ತಪ್ಪಿ ಎರಡು ಬೈಕ್ ಗಳಿಗೆ ಗುದ್ದಿದ ಕಾರು|

ಸಮಗ್ರ ನ್ಯೂಸ್: ಸುಳ್ಯ ಕಡೆಯಿಂದ ಜಾಲ್ಲೂರು ಕಡೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಎರಡು ಬೈಕ್ ಗಳಿಗೆ ಗುದ್ದಿದ ಘಟನೆ ಜಾಲ್ಸೂರಿನಲ್ಲಿ ಇಂದು (ಎ.15) ನಡೆದಿದೆ. ಅಪಘಾತದಲ್ಲಿ ಬೈಕ್ ಸವಾರರಿಗೆ ಗಾಯಗಳಾಗಿದ್ದು, ಕಾರು ಬೈಕ್ ಜಖಂಗೊಂಡಿದೆ.

ಜಾಲ್ಸೂರು: ನಿಯಂತ್ರಣ ತಪ್ಪಿ ಎರಡು ಬೈಕ್ ಗಳಿಗೆ ಗುದ್ದಿದ ಕಾರು| Read More »

ಡಾ. ಅನುರಾಧಾ ಕುರುಂಜಿಯವರಿಗೆ “ಶತಶೃಂಗ” ಪ್ರಶಸ್ತಿ ಪ್ರದಾನ|ಅಂತಾರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಸ್ವರಚಿತ ಕವನ ವಾಚನ

ಸಮಗ್ರ ನ್ಯೂಸ್: ಉಪನ್ಯಾಸಕಿ, ವ್ಯಕ್ತಿತ್ವ ವಿಕಸನ ತರಬೇತುದಾರರು ಆದ ಸುಳ್ಯದ ಡಾ. ಅನುರಾಧಾ ಕುರುಂಜಿಯವರಿಗೆ ಸ್ವರ್ಣಭೂಮಿ ಫೌಂಡೇಶನ್ ಕೋಲಾರದವರು ಕೊಡಮಾಡಿದ ಪ್ರತಿಷ್ಠಿತ “ಶತ ಶೃಂಗ” ಪ್ರಶಸ್ತಿಯನ್ನು ಎ. 11ರಂದು ಪ್ರದಾನ ಮಾಡಲಾಯಿತು. ಕಾಸರಗೋಡು ನುಲ್ಲಿಪ್ಪಾಡಿಯ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.)ಕನ್ನಡ ಭವನ ಪ್ರಕಾಶನ ಹಾಗೂ ಕೋಲಾರದ ಸ್ವರ್ಣಭೂಮಿ ಫೌಂಡೇಶನ್ ಜಂಟಿಯಾಗಿ ಆಯೋಜಿಸಿದ “ಕೇರಳ -ಕರ್ನಾಟಕ ಗಡಿನಾಡು ಕನ್ನಡ ಸಾಂಸ್ಕೃತಿಕ ಉತ್ಸವ 2024 ರಲ್ಲಿ ಗಣ್ಯ ಅತಿಥಿಗಳ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪುರಾಣ ಪ್ರಸಿದ್ಧ ಶತಶೃಂಗ

ಡಾ. ಅನುರಾಧಾ ಕುರುಂಜಿಯವರಿಗೆ “ಶತಶೃಂಗ” ಪ್ರಶಸ್ತಿ ಪ್ರದಾನ|ಅಂತಾರಾಜ್ಯ ಮಟ್ಟದ ಕವಿಗೋಷ್ಠಿಯಲ್ಲಿ ಸ್ವರಚಿತ ಕವನ ವಾಚನ Read More »

ಮಂಗಳೂರು: ಬಾವುಟಗುಡ್ಡೆಯಲ್ಲಿ ಕಾರ್ಮಿಕ ಸಂಘಟನೆಯ ಜಿಲ್ಲಾ ಮಟ್ಟದ ಸಮಾವೇಶ

ಸಮಗ್ರ ನ್ಯೂಸ್‌ : ದಕ್ಷಿಣ ಕನ್ನಡ ಜಿಲ್ಲಾ ಇಂಟಕ್ ಕಾರ್ಮಿಕ ಸಂಘಟನೆಯ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಸಮಾವೇಶ ಮಂಗಳೂರಿನ ಬಾವುಟಗುಡ್ಡೆಯಲ್ಲಿರುವ ಕೇಂದ್ರ ಕಚೇರಿಯಲ್ಲಿ ಜರಗಿತು. ಮಾಜಿ ಶಾಸಕರಾದ ಜೆಆರ್ ಲೋಬೋವ ಅವರು ದೇಶದ ಬೃಹತ್ ಕಾರ್ಮಿಕ ಸಂಘಟನೆಯಾದ ಇಂಟಕ್ ಸಂಘಟನೆಯು ಕಾಂಗ್ರೆಸ್ಸಿನ ಅವಿಭಾಜ್ಯ ಅಂಗವಾಗಿದೆ. ಕಾರ್ಮಿಕರು ತಮ್ಮ ಪ್ರಜಾಪ್ರಭುತ್ವದ ಹಕ್ಕನ್ನ ತಮಗೆ ಒಳಿತಾಗುವಂತೆ ಚಲಾಯಿಸುವ ಮೂಲಕ ಕಾರ್ಮಿಕ ಶಕ್ತಿಯನ್ನು ಬಲಪಡಿಸಬೇಕು ಎಂದು ಒತ್ತಾಯಿಸಿದರು. ದಕ್ಷಿಣ ಕನ್ನಡ ಜಿಲ್ಲೆ ಅಧ್ಯಕ್ಷರಾದ ಮನೋಹರ್ ಶೆಟ್ಟಿ ಅವರು ಮಾತನಾಡಿ, ಕಾರ್ಮಿಕರಿಗೆ

ಮಂಗಳೂರು: ಬಾವುಟಗುಡ್ಡೆಯಲ್ಲಿ ಕಾರ್ಮಿಕ ಸಂಘಟನೆಯ ಜಿಲ್ಲಾ ಮಟ್ಟದ ಸಮಾವೇಶ Read More »