ಬ್ರೇಕಿಂಗ್ ಸಮಾಚಾರ ಮಂಗಳೂರಲ್ಲಿ ಮತ್ತೊಮ್ಮೆ ಅಮಾನವೀಯ ಕೃತ್ಯ! ನಾಯಿಯನ್ನು ಬೈಕಿಗೆ ಕಟ್ಟಿ ಎಳೆದೊಯ್ದ ವಿಕೃತರು ಅಂದರ್.!
ಮಂಗಳೂರು. ಮೇ.22: ನಗರದ ಪದವಿನಂಗಡಿಯ ಮೇರಿಹಿಲ್ ಹೆಲಿಪ್ಯಾಡ್ ಬಳಿ ವಿಕೃತ ವ್ಯಕ್ತಿಗಳು ನಾಯಿಯನ್ನು ಬೈಕ್ ಗೆ ಕಟ್ಟಿ ಎಳೆದೊಯ್ದು ಅಮಾನವೀಯ ಕೃತ್ಯ ನಡೆಸಿದ್ದು, ಕಿಡಿಗೇಡಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಇಂದು ಸಂಜೆ ನಡೆದಿದೆ. ಮಧ್ಯಾಹ್ನ ವೇಳೆಗೆ ಘಟನೆ ನಡೆದಿದ್ದು, ಇದರ ವಿಡಿಯೊ ಸ್ಥಳೀಯ ಅಪಾರ್ಟ್ಮೆಂಟ್ ಒಂದರ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಘಟನೆ ಕುರಿತು ಸ್ಥಳಿಯರು ಕಾವೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರೂ ಪೊಲೀಸರು ನಿರ್ಲಕ್ಷ್ಯ ವಹಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ಆ ಬಳಿಕ ಪ್ರಾಣಿದಯಾ ಸಂಘದ ಸದಸ್ಯರು […]