ಬೆಳ್ತಂಗಡಿ:ವಿದ್ಯುತ್ ಶಾಕ್ ಗೆ ತಾಯಿ ಮಗು ಬಲಿ
ಬೆಳ್ತಂಗಡಿ: ಪಂಪ್ ಸ್ವಿಚ್ ಆನ್ ಮಾಡಲು ತೆರಳಿದ ತಾಯಿ-ಮಗು ಇಬ್ಬರು ವಿದ್ಯುತ್ ಶಾಕ್ ಗೆ ಒಳಗಾಗಿ ಮೃತಪಟ್ಟ ಘಟನೆ ಇಂದು ತಾಲೂಕಿನ ಪಟ್ರಮೆ ಯಿಂದ ವರದಿಯಾಗಿದೆ. ಪಟ್ರಮೆ ಗ್ರಾಮದ ಕೋಡಂದೂರು ನಿವಾಸಿ ಹರೀಶ್ ಗೌಡ ಎಂಬವರ ಪತ್ನಿ 30 ವರ್ಷದ ಗೀತಾ ಮತ್ತು 4.5 ವರ್ಷದ ಮಗು ಭವಿಷ್ ಮೃತಪಟ್ಟ ದುರ್ದೈವಿಗಳು. ತಾಯಿ ಗೀತಾ ಮಗುವನ್ನು ಎತ್ತಿಕೊಂಡು, ಹೊಸದಾಗಿ ಕರಿಸಿ ಖರೀದಿಸಿದ ಜಾಗದಲ್ಲಿ ಬೋರ್ವೆಲ್ ಗೆ ಅಳವಡಿಸಿದ ಪಂಪ್ ಸ್ವಿಚ್ ಆನ್ ಮಾಡುವಾಗ ದುರ್ಘಟನೆ ಸಂಭವಿಸಿದೆ.
ಬೆಳ್ತಂಗಡಿ:ವಿದ್ಯುತ್ ಶಾಕ್ ಗೆ ತಾಯಿ ಮಗು ಬಲಿ Read More »