ಕುಕ್ಕೆ ಕ್ಷೇತ್ರದಲ್ಲಿನ್ನು ಬ್ಯಾಂಕ್ ಸೇವಾ ಕೌಂಟರ್ | ರಾಷ್ಟ್ರೀಕೃತ ಬ್ಯಾಂಕ್’ಗಳ ಬದಲು HDFC ಯನ್ನು ಆಯ್ಕೆ ಮಾಡಿದ್ದೇಕೆ….!?
ಸುಬ್ರಹ್ಮಣ್ಯ: ರಾಜ್ಯ ಸರಕಾರಕ್ಕೆ ಬಹುಕೋಟಿ ಆದಾಯ ತಂದುಕೊಡುವ ಶ್ರೀ ಕ್ಷೇತ್ರ ಸುಬ್ರಹ್ಮಣ್ಯದಲ್ಲಿ ಬ್ಯಾಂಕ್ ಸೇವಾ ಕೌಂಟರ್ ತೆರೆಯಲು ನಿರ್ಧರಿಸಲಾಗಿದೆ. ಇನ್ನು ಈ ಕಂಟ್ರಾಕ್ಟ್’ನ್ನು ರಾಷ್ಟ್ರೀಕೃತ ಬ್ಯಾಂಕ್’ಗಳ ಬದಲು ಖಾಸಗಿ HDFC ಬ್ಯಾಂಕ್ ಗೆ ನೀಡಿರುವುದು ಭಕ್ತರಲ್ಲಿ ಅನುಮಾನ ಹುಟ್ಟುಹಾಕಿದೆ. ಧಾರ್ಮಿಕ ಮತ್ತು ದತ್ತಿ ಇಲಾಖೆ ದೇವಾಲಯದ ಸೇವೆಗಳಲ್ಲಿ ಪಾದರ್ಶಕತೆ ಗಟ್ಟಿಗೊಳಿಸಲು ಈ ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ. ಈ ಮೂಲಕ ಭಕ್ತರು ಮಾಡಿಸುವ ಸೇವೆಯ ಹಣ ತಕ್ಷಣ ನೇರವಾಗಿ ದೇವಾಲಯದ ಖಾತೆಗೆ ಜಮೆಯಾಗಲಿದೆ. ಕುಕ್ಕೆ ದೇವಾಲಯ ಸೇರಿದಂತೆ, ಘಾಟಿ […]